ಅಂಕಣ

ಉದ್ಯಮಶೀಲರಿಗೆ ಹಣಕಾಸಿನ ನೆರವು ಒದಗಿಸಲು ಸಹಕಾರಿಯಾದ ಕೇಂದ್ರ ಸರಕಾರದ ಮುದ್ರಾ ಯೋಜನೆ !!!

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಜಾರಿಗೆ ತಂದಂತಹ ಮುದ್ರಾ ಯೋಜನೆ, ದೇಶದ ಯುವ ಸಮುದಾಯದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ಈಗಾಗಲೇ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳನ್ನು ನಡೆಸುತ್ತಿರುವ ಉದ್ಯಮಶೀಲರಿಗೆ ಹಣಕಾಸಿನ ನೆರವು ಒದಗಿಸುವ ಸಲುವಾಗಿ ಕೇಂದ್ರ ಸರಕಾರ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಜಾರಿ ಗೊಳಿಸಿದೆ.

ಸೂಕ್ಷ್ಮ ಉದ್ದಿಮೆಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಉತ್ತೇಜನ ನೀಡುವುದೇ ಮುದ್ರಾ ಯೋಜನೆಯ ಮುಖ್ಯ ಉದ್ದೇಶವಾಗಿದೆ!! ಭಾರತದ ಯುವಜನತೆ ಉದ್ಯೋಗ ಸೃಷ್ಟಿಕರ್ತರಾಗಬೇಕೇ ಹೊರತು ಉದ್ಯೋಗ ಅರಸಿ ಅಲೆಯುವರಾಗಬಾರದು ಎನ್ನುವ ಧ್ಯೇಯದೊಂದಿಗೆ ಈ ಯೋಜನೆ ಆರಂಭಿಸಿರುವ ನರೇಂದ್ರಮೋದಿ ಯುವಜನತೆ ಇದರ ಸದುಪಯೋಗ ಪಡೆದುಕೊಂಡು ದೇಶದ ಭವಿಷ್ಯವನ್ನು ಇನ್ನು ಎತ್ತರಕ್ಕೆ ಕೊಂಡೊಯ್ಯಬೇಕು ಎನ್ನುವ ಸ್ಪಷ್ಟ ನಿಲುವನ್ನು ಹೊಂದಿದ್ದಾರೆ!!

ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿ.ಎಮ್.ಎಮ್.ವೈ) ಭಾರತ ಸರ್ಕಾರದ ಒಂದು ಪ್ರಮುಖ ಯೋಜನೆಯಾಗಿದ್ದು, “ಅನಿಧಿತೆರಿಗೆ ನಿಧಿ” ಒದಗಿಸುವುದರ ಮೂಲಕ ಉದ್ಯಮಗಳು, ಔಪಚಾರಿಕ ಆರ್ಥಿಕ ವ್ಯವಸ್ಥೆಗೆ ಉತ್ತಮ ಮುನ್ನುಡಿಯಾಗಿದೆ. ಅಷ್ಟೇ ಅಲ್ಲದೇ, ಇದು ಸಣ್ಣ ಮತ್ತು ಅತಿಸಣ್ಣ ಉದ್ಯಮದಾರರಿಗೆ ಕೃಷಿಯೇತರ ಆದಾಯದ ಚಟುವಟಿಕೆಗಳಿಗೆ ಪಿಎಸ್ಯು ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕ್, ವಿದೇಶಿ ಬ್ಯಾಂಕುಗಳು, ಕಿರು ಹಣಕಾಸು ಸಂಸ್ಥೆಗಳು (ಎಮ್.ಎಫ್.ಐ) ಮತ್ತು ನಾನ್ ಬ್ಯಾಂಕಿಂಗ್ ಹಣಕಾಸು ಕಂಪನಿಗಳು (ಎನ್.ಬಿ.ಎಫ್.ಸಿ) ಇವುಗಳ ಮೂಲಕ ಹತ್ತು ಲಕ್ಷ ರೂಪಾಯಿಯವರಿಗೆ ಸಾಲಪಡೆಯಲು ಎಡೆಮಾಡಿಕೊಡುತ್ತದೆ. ಈ ಯೋಜನೆಯನ್ನು ಮಾನ್ಯ ಪ್ರಧಾನ ಮಂತ್ರಿಗಳು 8 ನೇ ಏಪ್ರಿಲ್, 2015 ರಂದು ಜಾರಿಗೆ ತಂದಿದ್ದಾರೆ!!

ಏನಿದು ಮುದ್ರಾ ಯೋಜನೆ??

ಮುದ್ರಾ(ಮೈಕ್ರೊ ಯುನಿಟ್ಸ್ ಡೆವೆಲಪ್‍ಮೆಂಟ್ ರೀಫೈನಾನ್ಸ್ ಏಜೆನ್ಸಿ) ಎಂದರೆ ಅತಿಸಣ್ಣ ಘಟಕಗಳ ಅಭಿವೃದ್ಧಿ ಮರುಹಣಕಾಸು ಏಜೆನ್ಸಿ ಎಂದು ವ್ಯಾಖ್ಯಾನಿಸಲಾಗುತ್ತಿದೆ!!! ಹಿಂದಿ ಭಾಷೆಯಲ್ಲಿ ಮುದ್ರಾ ಎಂದರೆ ಕರೆನ್ಸಿ ಎಂದರ್ಥ!! ದೇಶದಲ್ಲಿರುವ ಸುಮಾರು 5.77 ಕೋಟಿಯಷ್ಟು ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳಿದ್ದು, ಇವು ವೈಯಕ್ತಿಕ ಮಾಲಿಕತ್ವದ ಸ್ವರೂಪದಲ್ಲಿವೆ. ಹಾಗಾಗಿ ಈ ಉದ್ದಿಮೆಗಳು ತಯಾರಿಕೆ, ವ್ಯಾಪಾರ ಮತ್ತು ಸೇವಾ ವ್ಯಾಪಾರ, ವಹಿವಾಟು ನಡೆಸುತ್ತಿದ್ದು, ತಮ್ಮ ಉದ್ಯಮ ಬೆಳೆಸಲು ಬ್ಯಾಂಕ್‍ಗಳಿಂದಾಗಲಿ, ಬ್ಯಾಂಕಿಂಗ್‍ಯೇತರ ಹಣಕಾಸು ಸಂಸ್ಥೆಗಳಿಂದಾಗಲಿ ಹಣಕಾಸು ನೆರವು ಪಡೆಯಲು ವಿಫಲವಾಗುತ್ತಿವೆಯಲ್ಲದೇ, ತೀರಾ ಸಂಕಷ್ಟ ಎದುರಿಸುತ್ತಿವೆ!! ಹಾಗಾಗಿ ಇದಕ್ಕೆಲ್ಲಾ ಹಣಕಾಸಿನ ನೆರವು ಒದಗಿಸಬೇಕೆಂಬ ಉದಾತ್ತವಾದ ಚಿಂತನೆ ಮತ್ತು ಪರಿಕಲ್ಪನೆಯೊಂದಿಗೆ ಆರಂಭವಾದ ಯೋಜನೆಯೇ ‘ಮುದ್ರಾ’!!

ಸ್ವ ಉದ್ಯೋಗ ಮಾಡ್ಬೇಕು ಅಂತ ಆಸಕ್ತಿ ಹೊಂದಿರೋರಿಗೆ ಈ ಯೋಜನೆ ಅಡಿಯಲ್ಲಿ ಸಾಲ ನೀಡಲಾಗುತ್ತದೆ. ಈ ಯೋಜನೆಯ ಫಲಾನುಭವಿಗಳು ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಆರ್ಥಿಕ ಚಟುವಟಿಕೆಗಳಿಗೆ ಅಥವಾ ಕಿರು ಉದ್ಯಮಕ್ಕೆ ಸಾಲ ನೀಡಲಾಗುತ್ತೆ. ಇದಕ್ಕಾಗಿಯೇ ಕೇಂದ್ರ ಸರ್ಕಾರ ಮುದ್ರಾ ಬ್ಯಾಂಕ್ ಸ್ಥಾಪಿಸಿ, ದೇಶದ ಪ್ರತಿಯೊಂದು ವಾಣಿಜ್ಯ ಬ್ಯಾಂಕ್ ಮತ್ತು ಗ್ರಾಮೀಣ ಬ್ಯಾಂಕ್ ಗಳ ಮೂಲಕ ಸಣ್ಣ ಉದ್ಯಮದಾರರಿಗೆ ಸಾಲವನ್ನು ನೀಡುತ್ತಿದೆ. ಮುದ್ರಾ ಯೋಜನೆಯು ದೇಶದ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳಿಗೆ 10 ಲಕ್ಷ ರೂ.ವರೆಗೆ ಹಣಕಾಸಿನ ನೆರವು ಒದಗಿಸಲಿದ್ದು, ಇದರ ಜತೆಗೆ, ಸಣ್ಣ ಹಣಕಾಸು ಸಂಸ್ಥೆಗಳಿಗೆ ಮರುಹಣಕಾಸು ಸೌಲಭ್ಯ ಒದಗಿಸುವ ಗುರಿ ಇಟ್ಟುಕೊಂಡಿದೆ!!

ದೇಶದಲ್ಲಿ ಸೊರಗಿರುವ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳನ್ನು ಪೆÇ್ರೀತ್ಸಾಹಿಸಿ, ಅವುಗಳ ಸಾಮರ್ಥ್ಯ ಮತ್ತು ದಕ್ಷತೆ ಹೆಚ್ಚಿಸಲು, ಸಾಲದ ಸುಳಿಗೆ ಸಿಲುಕಿರುವ ಸಣ್ಣ ಉದ್ಯಮಶೀಲರಿಗೆ ಔಪಚಾರಿಕೆ ವ್ಯವಸ್ಥೆಯ ಮೂಲಕ ಹಣಕಾಸು ನೆರವು ಒದಗಿಸುವುದು ಇದರ ಉದ್ದೇಶ. ದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿ ಮತ್ತು ಸ್ವ-ಉದ್ಯೋಗ ಪ್ರಮಾಣ ಹೆಚ್ಚಳಕ್ಕೆ ಮುದ್ರಾ ಆದ್ಯತೆಯ ಗಮನ ನೀಡಿದೆ. ಅಷ್ಟೇ ಅಲ್ಲದೇ, ಈ ಸೂಕ್ಷ್ಮ ಉದ್ದಿಮೆಗಳನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಆರಂಭವಾಗಿರುವ ಮುದ್ರಾ ಯೋಜನೆಯನ್ನು ಕೊಡುವ ಸಾಲದ ಪ್ರಮಾಣದ ಆಧಾರದ ಮೇಲೆ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಅವು,

* ಶಿಶು ಸಾಲ ಯೋಜನೆ – ಐವತ್ತು ಸಾವಿರ ರೂಪಾಯಿಗಳವರೆಗೆ ಸಾಲ
* ಕಿಶೋರ ಸಾಲ ಯೋಜನೆ – ಐವತ್ತು ಸಾವಿರ ರೂಪಾಯಿ ಮೇಲ್ಪಟ್ಟು ಹಾಗು ಐದು ಲಕ್ಷಕ್ಕಿಂತ ಕಡಿಮೆ ಸಾಲ
* ತರುಣ ಸಾಲ ಯೋಜನೆ – ಐದು ಲಕ್ಷಕ್ಕೆ ಮೇಲ್ಪಟ್ಟು ಹಾಗು ಹತ್ತು ಲಕ್ಷ ರೂಪಾಯಿಗಳವರೆಗೆ ಸಾಲ

Image result for mudra yojna

ಮುದ್ರಾ ಯೋಜನೆಯಡಿಯಲ್ಲಿ ಸಾಲ ಪಡೆಯುವುದಾದರೂ ಹೇಗೆ??

ಇಲ್ಲಿ, ಶಿಶು ಸಾಲವೇ ಅಥವಾ ಕಿಶೋರ್ ಸಾಲವೇ ಅಥವಾ ತರುಣ್ ಸಾಲವೇ ಎಂದು ಮೊದಲು ನೋಡಲಾಗುತ್ತದೆ. ಅಂದರೆ ಫಲಾನುಭವಿಗೆ ಎಷ್ಟು ಸಾಲಬೇಕು..? ಅವನು ಮಾಡಹೊರಟಿರುವ ಉದ್ಯೋಗವೇನು ಅಂತ ತಿಳಿದು ಅದಕ್ಕನುಗುಣವಾಗಿ ಸಾಲವನ್ನು ನೀಡುವ ಪ್ರಕ್ರಿಯೆ ಶುರುವಾಗುತ್ತೆ. ಫಲಾನುಭವಿಯು ತನ್ನ ಹತ್ತಿರದ ಬ್ಯಾಂಕ್ ಅನ್ನು ಸಂಪರ್ಕಿಸಿ ಅಲ್ಲಿಂದ ಮುದ್ರಾ ಸಾಲಯೋಜನೆಯ ಅಡಿಯಲ್ಲಿ ಸಾಲ ಪಡೆಯ ತಕ್ಕದ್ದು.

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ನೆರವು ಪಡೆಯಲು ಬಯಸುವವರು, ತಮ್ಮ ಪ್ರದೇಶದಲ್ಲಿರುವ ಪಿಎಸ್ಯು ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕ್ಗಳ ವಿದೇಶಿ ಬ್ಯಾಂಕುಗಳು, ಮೈಕ್ರೋ ಫೈನಾನ್ಸ್ – ಹಣಕಾಸು ಸಂಸ್ಥೆಗಳಾಗಲಿ ಅಥವಾ ಯಾವುದೇ ಸ್ಥಳೀಯ ಶಾಖೆಗಳಿಗೆ ಸಂಪರ್ಕಿಸಬೇಕು. ಆಯಾ ಸಾಲ ಸಂಸ್ಥೆಯಲ್ಲಿ ಅರ್ಹತಾ ರೂಢಿಗಳನ್ನು ಪ್ರಕಾರಗಳ ವಿವರಣೆ ಯನ್ನು ನೀಡಲಾಗುವದು!!

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು:

* ಗುರುತಿನ ಪ್ರಮಾಣ -ಸ್ವಯಂ ದೃಢೀಕರಿಸಿದ ಮತದಾರರ ಐಡಿ ಕಾರ್ಡ್ ಅಥವಾ ಚಾಲಕ ಪರವಾನಗಿಯ ಅಥವಾ ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಅಥವಾ ಪಾಸ್ಪೋರ್ಟ್ ಅಥವಾ ಯಾವುದಾದರೂ ಸರ್ಕಾರ ನೀಡಿದ ಗುರುತಿನ ಚೀಟಿ ಆಗಬಹುದು.
* ವಾಸಸ್ಥಳ ಪುರಾವೆಗಾಗಿ: ಇತ್ತೀಚಿನ ದೂರವಾಣಿ ಬಿಲ್ ಅಥವಾ ವಿದ್ಯುತ್ ಬಿಲ್ ಅಥವಾ ಆಸ್ತಿ ತೆರಿಗೆ ಸ್ವೀಕೃತಿ (ಹಳೆಯಎರಡು ತಿಂಗಳಿಗಿಂತ ದಾಗಿರಬಾರದು) ಅಥವಾ ಬ್ಯಾಂಕ್ ಠೇವಣಿ ಪುಸ್ತಕ ಅಥವಾ ಪಾಸ್ ಪೆÇೀರ್ಟ್ ಅಥವಾ ವಸತಿ ಪ್ರಮಾಣ ಪತ್ರ ಅಥವಾ ಸ್ಥಳೀಯ ಅಧಿಕಾರಿಯಿಂದ ಕೊಡಲಾದ ಯಾವುದೇ ಗುರುತಿನ ಪತ್ರ ಇತ್ಯಾದಿ
* ಅರ್ಜಿದಾರರ ಇತ್ತೀಚಿನ ಭಾವಚಿತ್ರ (2 ಪ್ರತಿಗಳು)
* ಯಂತ್ರೋಪಕರಣಗಳನ್ನು ಮತ್ತು ಇತರ ವಸ್ತುಗಳನ್ನು ಖರೀದಿಸುವ ಉದ್ಧರಣ (ಕೊಟೇಶನ್)
* ಯಂತ್ರೋಪಕರಣಗಳು ಮತ್ತು ವಸ್ತುಗಳ ಸರಬರಾಜುದಾರ ಹೆಸರು ಮತ್ತು ವಿವರ
* ಮಾಲೀಕತ್ವಕ್ಕೆ ಸಂಬಂಧಿಸಿದ ನೋಂದಣಿ ಪ್ರಮಾಣಪತ್ರಗಳು ಅಥವಾ ಇತರೆ ದಾಖಲೆಗಳ ಪ್ರತಿಗಳು
* ಎಸ್ಸಿ, ಎಸ್ಟಿ, ಒಬಿಸಿ ಅಥವಾ ಹಿಂದುಳಿದ ವರ್ಗದ ಬಗ್ಗೆ ಪುರಾವೆಗಳನ್ನು ಸಲ್ಲಿಸಬೇಕಾಗುತ್ತದೆ.

Related image

ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಮಂಜೂರಾದ ನಂತರ ಅಭ್ಯರ್ಥಿ `ಮುದ್ರಾ ಕಾರ್ಡ್” ಅನ್ನು ಪಡೆಯುತ್ತಾರೆ. ಈ ಕಾರ್ಡ್ ಕ್ರೆಡಿಟ್ ಕಾರ್ಡ್ ರೀತಿಯದ್ದಾಗಿದ್ದು, ಈ ಕಾರ್ಡ್ ಮೂಲಕ ಅಭ್ಯರ್ಥಿ ತನ್ನ ವ್ಯವಹಾರಕ್ಕೆ ಸಂಬಂಧಿಸಿದಂತ ಕಚ್ಚಾ ಸಾಮಗ್ರಿಗಳನ್ನು ಪಡೆಬಹುದು. ಆದರೆ ಇದರ ಮಿತಿ ಸಾಲದ ಶೇಕಡ 10ರಷ್ಟು..! ಅಂದರೆ ಹೆಚ್ಚೆಂದರೆ 10000 ಮಾತ್ರ ಆಗಿರುತ್ತದೆ!!

ಮುದ್ರಾ ಯೋಜನೆಯಿಂದಾಗಿ ಯಾವ ಯಾವ ಉದ್ದಿಮೆಗಳಿಗೆ ನೆರವು ಸಿಗಲಿದೆ ಗೊತ್ತೇ??

ನಿರ್ದಿಷ್ಟ ವ್ಯಾಪಾರ ಚಟುವಟಿಕೆಗಳು, ನಿರ್ದಿಷ್ಟ ಕ್ಷೇತ್ರದಲ್ಲಿ ಚಟುವಟಿಕೆ ಅಗತ್ಯಗಳನ್ನು ಪೂರೈಸಲು ಫಲಾನುಭವಿಗಳಿಗೆ ಬೇಕಾದ ಅಗತ್ಯತೆ ಕಡೆಗೆ ಗಮನ ಹರಿಸಲಾಗುತ್ತದೆ. ಮೊದಲಿಗೆ ಹೆಚ್ಚಿನ ಸಾಂದ್ರತೆಯ ಆಧಾರದ ಮೇಲೆ ಕೆಲವು ಚಟುವಟಿಕೆಗಳು / ಕ್ಷೇತ್ರಗಳಲ್ಲಿ ವ್ಯವಹಾರಗಳಿಗೆ, ಯೋಜನೆಗಳನ್ನು ಸೂಚಿಸಲಾಗುತ್ತದೆ. ಅಲ್ಲದೇ, ಸಾರಿಗೆ ವಲಯ / ಚಟುವಟಿಕೆ – ಇದು ಆಟೋ ರಿಕ್ಷಾ, ಸಣ್ಣ ಸರಕುಗಳು ಸಾರಿಗೆ ವಾಹನ, 3 ಚಕ್ರ ವಾಹನ, ಇ-ರಿಕ್ಷಾ, ಕಾರು, ಟ್ಯಾಕ್ಸಿ, ಇತ್ಯಾದಿ ಸರಕು ಮತ್ತು ಸಾರಿಗೆ ವಾಹನಗಳ ಖರೀದಿಯನ್ನು ಬೆಂಬಲಿಸುತ್ತದೆ.

ಅಷ್ಟೇ ಅಲ್ಲದೇ, ಇದು ಮಾಲಿಕತ್ವ, ಪಾಲುದಾರಿಕೆ ಹೊಂದಿರುವ ವ್ಯಾಪಾರಗಳು, ಉದ್ಯಮಶೀಲರು ಅಥವಾ ಘಟಕಗಳು ಮುದ್ರಾ ಯೋಜನೆಗೆ ಒಳಪಡುತ್ತವೆ. ಸಣ್ಣ ತಯಾರಿಕಾ ಘಟಕಗಳು, ಅಂಗಡಿಗಳು, ತರಕಾರಿ, ಹಣ್ಣು ಮಾರಾಟಗಾರರು, ಕ್ಷೌರಿಕ ಅಂಗಡಿಗಳು, ಬ್ಯೂಟಿ ಪಾರ್ಲರ್‍ಗಳು, ಸಾಗಣೆದಾರರು, ಟ್ರಕ್ ಆಪರೇಟರ್‍ಗಳು, ಸಂಚಾರಿ ವ್ಯಾಪಾರಿಗಳು, ಸಹಕಾರಿ ಸಂಸ್ಥೆಗಳು, ಆಹಾರ ಸೇವಾ ಘಟಕಗಳು, ರಿಪೇರಿ ಅಂಗಡಿಗಳು, ಮೆಷಿನ್ ಆಪರೇಟರ್‍ಗಳು, ಸಣ್ಣ ಕೈಗಾರಿಕೆಗಳು, ಕುಶಲಕರ್ಮಿಗಳು, ಆಹಾರ ಸಂಸ್ಕರಣೆಗಾರರು, ಸ್ವಸಹಾಯ ಗುಂಪುಗಳು, ವೃತ್ತಿಪರರು ಮತ್ತು ಸೇವಾ ಘಟಕಗಳು ಮತ್ತು ಉದ್ಯಮಶೀಲರಿಗೆ ಮುದ್ರಾದ ಹಣಕಾಸಿನ ನೆರವು ಸಿಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ, ನಗರ ಹಾಗೂ ಗ್ರಾಮೀಣ ಭಾಗಗಳೆರಡಕ್ಕೂ ಸಾಲ ಸೌಲಭ್ಯ ಲಭ್ಯವಾಗಲಿದೆ.
ಸಾಲ ಸೌಲಭ್ಯಕ್ಕೆ ವಿಧಿಸುವ ಬಡ್ಡಿದರ ಎಷ್ಟು ಗೊತ್ತೇ??

ಸಣ್ಣ ಉದ್ದಿಮೆಗಳಿಗೆ ಮುದ್ರಾ ಒದಗಿಸುವ ಕನಿಷ್ಠ 50 ಸಾವಿರ ರೂ.ನಿಂದ ಗರಿಷ್ಠ 10 ಲಕ್ಷ ರೂ. ಸಾಲಕ್ಕೆ ಶೇ.10 ಅಥವಾ ಅದಕ್ಕಿಂತ ಕಡಿಮೆ ಬಡ್ಡಿ ದರ ವಿಧಿಸಲಾಗುತ್ತದೆ. ನಿಖರ ಬಡ್ಡಿದರ ಇನ್ನೂ ಪ್ರಕಟವಾಗಬೇಕಿದೆ. ಆದರೆ ಅದು ಬ್ಯಾಂಕ್‍ಗಳು ಮತ್ತು ಸಣ್ಣ ಹಣಕಾಸು ಸಂಸ್ಥೆಗಳಿಗೆ ಶೇ.7 ಬಡ್ಡಿದರದಲ್ಲಿ ಸಾಲ ನೀಡುತ್ತದೆ. ಅಷ್ಟೇ ಅಲ್ಲದೇ, ಸಾಲದ ಮರುಪಾವತಿಯ ಕಾಲ 5 ವರ್ಷಗಳ ವರೆಗೆ ವಿಸ್ತರಿಸಲಾಗಿದೆ.

ಒಟ್ಟಾರೆಯಾಗಿ, ಸ್ವ-ಉದ್ಯೋಗ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಲು ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಉದ್ಯಮಶೀಲರನ್ನು ಪೆÇ್ರೀತ್ಸಾಹಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಅನಾವರಣಗೊಳಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಯುವ ಸಮುದಾಯ ಹೆಚ್ಚೆಚ್ಚು ಸಂಖ್ಯೆಯಲ್ಲಿ ಸ್ವಂತ ಉದ್ಯಮ ನಡೆಸಬೇಕು ಎಂಬುದು ಸರಕಾರದ ಬಯಕೆಯಾಗಿದ್ದು, ಮುದ್ರಾ ಯೋಜನೆಯಲ್ಲಿ ಈ ವರ್ಗದ ಜನರಿಗೂ ಕೂಡ ಆದ್ಯತೆಯನ್ನು ನೀಡಿ ಸಾಲ ಸೌಲಭ್ಯ ಒದಗಿಸುವ ಉದ್ದೇಶ ಇದರದ್ದಾಗಿದೆ!!
-ಅಲೋಖಾ

Tags

Related Articles

Close