ಅಂಕಣದೇಶಪ್ರಚಲಿತ

“ಓ ಹಿಂದುಗಳೇ! ಎಲ್ಲಾ ಧರ್ಮಗಳೂ ಒಂದೇ ಎಂದು ಇಂದಿನಿಂದ ದಯವಿಟ್ಟು ಹೇಳದಿರಿ” – ಖ್ಯಾತ ಜರ್ಮನ್ ಚಿಂತಕಿ ಮರಿಯಾ ವ್ರಿತ್! ⁠⁠

ತೀರಾ ಸಂಪ್ರದಾಯಬದ್ಧವಾದ ಕ್ರೈಸ್ತ ಸಮುದಾಯದಲ್ಲಿ ಬೆಳೆದ ಆಕೆ ಹಿಂದೂ ಧರ್ಮದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುತ್ತಾಳೆ! ಅದೂ ಅಲ್ಲದೇ, ಹಿಂದೂಗಳು ತಮ್ಮ ಧರ್ಮದ ಬಗ್ಗೆ ಹೆಮ್ಮೆ ಪಡದೇ, ‘ಎಲ್ಲಾ ಧರ್ಮವೂ ಒಂದೇ’ ಎಂದು ಹೇಳುವ ಅಭ್ಯಾಸವನ್ನೇಕಿರಿಸಿದ್ದಾರೆ?! ಎಂದು ಪ್ರಶ್ನೆ ಮಾಡಿದ ಈಕೆಯ ಒಂದಷ್ಟು ಆಲೋಚನಾ ಲಹರಿಗಳು ಜಗತ್ತನ್ನೇ ನಿಬ್ಬೆರಗಾಗಿಸಿದ್ದು ಸುಳ್ಳಲ್ಲ!

” ಹಿಂದೂಗಳೆಲ್ಲರೂ ಎಲ್ಲಾ ಧರ್ಮವೂ ಒಂದೇ ಎನ್ನುವ ಮುಟ್ಠಾಳತನವೊಂದು ಇನ್ನೊಂದಿಲ್ಲ! ಹಾಗೆ ಹೇಳುವವರು, ಒಂದು ದಿನವೂ ಕ್ರೈಸ್ತ ಅಥವಾ ಮುಸ್ಲಿಂ ಸಮುದಾಯದವರು ‘ಎಲ್ಲಾ ಧರ್ಮವೂ ಒಂದೇ’ ಎಂದು ಹೇಳುವುದೇ ಇಲ್ಲ! ಎಲ್ಲ ಧರ್ಮವೂ ಒಂದು ಹಕ್ಕನ್ನು ಚಲಾಯಿಸುತ್ತದೆ! “ನಾವೊಬ್ಬರೇ ಸತ್ಯ ಧರ್ಮಕ್ಕೆ ಸೇರಿದವರು! ನಮ್ಮ ದೇವ ಮಾತ್ರ ಸತ್ಯ!” ಎಂಬುದೊಂದು ಹಕ್ಕನ್ನೇ ಚಲಾಯಿಸುತ್ತ ಬದುಕುತ್ತಾರೆ! ಹಿಂದೂಗಳು ಹೇಳುವ ‘ಎಲ್ಲಾ ಧರ್ಮವೂ ಒಂದೇ’ ಎನ್ನುವ ಹೇಳಿಕೆಗಳಿಗೆ ಅವರು ಪಶ್ಚಾತ್ತಾಪಿಸುತ್ತಾರೆ! ಹಿಂದೂ ಧರ್ಮ ಅದೆಷ್ಟೇ ಔನ್ನತ್ಯದಲ್ಲಿದ್ದರೂ, ಒಂದು ಅಂಶವನ್ನು ಮರೆತುಬಿಟ್ಟಿತು! ‘ಸತ್ಯಧರ್ಮ ಯಾವುದೇ ಕಾರಣಕ್ಕೂ ಈ ಹೇಳಿಕೆಗಳನ್ನು ಒಪ್ಪುವುದಿಲ್ಲ’ ಎಂಬುದು!

ಹಿಂದೂಗಳ ಈ ‘ಮಾನವತಾವಾದದ’ ಧೋರಣೆಯೇ ವಿಚಿತ್ರ!

” ನಾವು ಎಲ್ಲಾ ಧರ್ಮಗಳನ್ನೂ ಗೌರವಿಸುತ್ತೇವೆ! ನಾವದನ್ನು ಮಕ್ಕಳಿಗೆ ಕಲಿಸುತ್ತೇವೆ! ನಮ್ಮ ಮಕ್ಕಳು ಕ್ರೈಸ್ತ ಹಾಗೂ ಇಸ್ಲಾಂ ಮತದ ಬಗ್ಗೆ ಬಹಳ ಕುತೂಹಲದಿಂದ ಕೇಳುತ್ತಾರೆ! ಅದರ ರೀತಿ ನೀತಿಗಳನ್ನರಿಯುತ್ತಾರೆ! ಇದರಿಂದ, ಅವರು ತಾನು ‘ಹಿಂದೂ’ ಮಾತ್ರ ಎಂಬ ಸಂಕುಚಿತ ಮನೋಭಾವದಿಂದ ಹೊರಬರುವಂತಾಗುತ್ತದೆ! ನಾವು ಯಾರನ್ನೂ ದ್ವೇಷಿಸಲು ಹೇಳಿಕೊಡುವುದಿಲ್ಲ, ಆದ್ದರಿಂದ ನಾವು ನಮ್ಮ ಧರ್ಮದ ಬಗ್ಗೆ ಹೇಳಿಕೊಡುವುದು ಬಹಳ ಕಡಿಮೆ! ಹಬ್ಬ ಹರಿದಿನಗಳ ಪರಿಚಯವನ್ನಷ್ಟೇ ಮಾಡಿಸುತ್ತೇವೆ ಹೊರತು ತೀರಾ ಆಳವಾಗಿ ನಾವು ಹಿಂದೂ ಧರ್ಮದ ತತ್ವ ಸಿದ್ಧಾಂತಗಳ ಪರಿಚಯ ಮಾಡಿಸುವುದಿಲ್ಲ! ಅದು, ಇನ್ನೊಂದು ಧರ್ಮದ ಬಗ್ಗೆ ಕೀಳಾದ ಭಾವನೆಯನ್ನು ಉಂಟು ಮಾಡುವುದಿಲ್ಲ.”

“ಬಿಡಿ! ಮತ್ತೆ ಮತ್ತೆ ಹಿಂದೂ ಎನ್ನುವವನೊಬ್ಬ ಕ್ರೈಸ್ತ ಹಾಗೂ ಮುಸಲ್ಮಾನ ಮತಗಳು ಹಿಂದೂ ಧರ್ಮವನ್ನು ಕೀಳಾಗಿ ನೋಡುತ್ತಿರುವುದರ ಬಗ್ಗೆ ಯೋಚಿಸುವುದೇ ಇಲ್ಲ! ಆ ಧರ್ಮಗಳ ಪಾದ್ರಿಗಳೆಲ್ಲ ಮುಖಾಮುಖಿಯಾಗಿ ಹೇಳದಿದ್ದರೂ ಸಹ, ಇಡೀ ಧರ್ಮ ಶಿಕ್ಷಣದಲ್ಲಿಯೇ ಪಸರಿಸಿರುತ್ತಾನೆ! “ಹಿಂದೂಗಳು ಸತ್ಯ ಧರ್ಮಕ್ಕೆ ಮತಾಂತರವಾಗದಿದ್ದರೆ ನರಕಕ್ಕೆ ಹೋಗುತ್ತಾರೆ! ಅದವರ ಸ್ವಂತ ಅಪರಾಧ! ನಾವು, ಅವರಿಗೆ ಏಸುವಿನ ಬಗ್ಗೆ, ಕ್ರೈಸ್ತ ಧರ್ಮದ ಬಗ್ಗೆ, ಅಲ್ಲಾಹುವಿನ ಬಗ್ಗೆ ತಿಳಿ ಹೇಳಬೇಕು! ಹಿಂದೆಯೂ, ನಾವು ಅವರನ್ನು ಅದೆಷ್ಟೋ ಬಾರಿ ಸಂಪರ್ಕಿಸಿ ಸತ್ಯಧರ್ಮದ ಬಗ್ಗೆ ಹೇಳಿದ್ದೆವು! ಆದರೆ, ಅವರು ಅಹಂಕಾರಿಗಳು! ಇನ್ನೂ ಅವರ ಮಿಥ್ಯೆಯಾದ ದೇವರುಗಳನ್ನೇ ಹಿಡಿದುಕೊಂಡಿದ್ದಾರೆ! ಆದರೆ, ನಮ್ಮ ದೇವನು ಶ್ರೇಷ್ಠನು! ಅವನು ಅವರನ್ನೆಲ್ಲ ನರಕದ ಬೆಂಕಿಯಲ್ಲಿ ಬೇಯಿಸುತ್ತಾನೆ.”

ಇನ್ನೂ ಆಶ್ಚರ್ಯವಾಗುವುದದೇ! ಹಿಂದೂಗಳು ‘ ಎಲ್ಲಾ ಧರ್ಮವೂ ಶಾಂತಿಯನ್ನೇ ಪಸರಿಸುವುದು ಎನ್ನುತ್ತಾರೆ! ಬೇರೆ ಧರ್ಮದವರ ಹಬ್ಬಕ್ಕೂ ಆಚರಣೆಗಳನ್ನೂ ಮಾಡುವುದಲ್ಲದೇ, ಒಬ್ಬರಿಗೊಬ್ಬರು ಶುಭಾಶಯಗಳನ್ನೂ ತಿಳಿಸುತ್ತಾರೆ! ಎಲ್ಲಾ ಧರ್ಮವೂ ಒಳ್ಳೆಯದನ್ನೇ ಹೇಳುತ್ತದೆ, ಎಲ್ಲ ಧರ್ಮದಲ್ಲಿಯೂ ಒಳ್ಳೆಯವರಿದ್ದಾರೆ ಎಂದು ಹೇಳುವ ಹಿಂದೂಗಳು ಅಕ್ಷರಶಃ ಕುರುಡರಾಗಿದ್ದಾರೆ! ಪ್ರತಿ ಹಿಂದೂಗಳಿಗೂ ಉಳಿದ ಧರ್ಮದ ಬಗ್ಗೆ ಗೊತ್ತಿಲ್ಲ ಎಂದು ಹೇಳುವ ಹಾಗಿಲ್ಲ. ಪ್ರತಿಯೊಂದು ಗೊತ್ತಿದ್ದರೂ, ಉಳಿದ ಧರ್ಮದ ಕ್ರೂರತೆ ಗೊತ್ತಿದ್ದರೂ ಕೂಡ, ಪದೇ ಪದೇ ಎಲ್ಲಾ ಧರ್ಮವೂ ಒಂದೇ ಎಂದು ಹೇಳುವುದು ಯಾಕೆ? ಬಿಡಿ! ಹಿಂದೂ ಧರ್ಮದ ಗ್ರಂಥಗಳಲ್ಲೆಲ್ಲ ಬರೆದಿರುವುದು ಶಾಂತಿ ಹಾಗೂ ನೆಮ್ಮದಿಯ ಭಗವಂತನ ಸಾಕ್ಷಾತ್ಕಾರದ ಬಗೆಗೆ! ಆದರೆ, ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳು ಕ್ರೂರತೆಯನ್ನು, ಹಿಂಸೆಯನ್ನು ಹೇಳುತ್ತದೆ, ಭೋಧಿಸುತ್ತವಾದರೂ ತಮ್ಮ ಧರ್ಮದ ಬಗೆಗೆ ಯಾವ ಒಲವನ್ನೂ ಹೊಂದದ ಹಿಂದೂಗಳು, ಗೊತ್ತಿಲ್ಲದೆಯೇ ‘ಎಲ್ಲವೂ ಒಂದೇ’ ಎಂದು ಹೇಳುವುದು ಯಾಕೆ?”

“ಕ್ರೈಸ್ತ ಹಾಗೂ ಇಸ್ಲಾಂ ಮತಗಳೆರಡು ಮತಾಂತರಗಳನ್ನು ಪ್ರಚೋದಿಸುವುದಲ್ಲದೇ, ತಾವೇ ಸೃಷ್ಟಿಸಿದ ಭಗವಂತನ ಸಲುವಾಗಿ ಕಚ್ಚಾಡುವಂತೆ ಮಾಡುತ್ತವೆ. ಅವರ ಭಗವಂತನು, ತನ್ನನು ನಂಬದಿದ್ದರೆ ದ್ವೇಷಿಸೆಂದು ಹೇಳಿಕೊಡುವಾಗ ಯಾವುದು ಸುಳ್ಳು ದೇವರು? ! ಇದೇ ಜೀಸಸ್ ಹಾಗೂ ಅಲ್ಲಾಹ್ ನ ಹೆಸರಿನಲ್ಲಿ, ರಕ್ತಪಾತ ಸೃಷ್ಟಿಸಿದ್ದಾರೆ! ಆದರೆ, ಹಿಂದೂಗಳು ಅದನ್ನೆಲ್ಲ ಮರೆಯುವ ಅವಕಾಶಕ್ಕಾಗಿ ಕಾಯುತ್ತಾರೆ! ಸುಮ್ಮನೆ ಪ್ರಚೋದಿಸುವುದು ಯಾಕೆ ಎಂಬ ಧೋರಣೆಯದು! ಸಾವಿರ ವರ್ಷಗಳಿಂದಲೂ ನಡೆಯುತ್ತ ಬಂದ ಹತ್ಯಾಕಾಂಡಕ್ಕೆ ಅವರು ಪಟ್ಟಿ ಕಟ್ಟಿ ಮರೆಮಾಚುತ್ತಾರೆ!”

“ಇದು ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕಾದ ಸಮಯವಲ್ಲವೇ?! ಸ್ವಾಮಿ ವಿವೇಕಾನಂದರು ಹೇಳುವಂತೆ, ‘ಯಾವ ಹಿಂದು ತನ್ನ ಧರ್ಮದಲ್ಲಿ ನಂಬಿಕೆ ಹಾಗೂ ಶ್ರದ್ಧೆಯನ್ನು ಕಳೆದುಕೊಳ್ಳುತ್ತಾನೋ ಆತ ಕೇವಲ ‘ಹಿಂದೂ’ ಎಂಬ ನಾಮವೊಂದನ್ನೇ ಅಳಿಸಿಕೊಳ್ಳುವುದಿಲ್ಲ, ಬದಲಾಗಿ ಧರ್ಮಕ್ಕೊಬ್ಬ ಶತ್ರುವಾಗುತ್ತಾನೆ!” ಯಾವಾಗ ಬ್ರಿಟಿಷ್ ಈ ಭಾರತವನ್ನಾಳುತ್ತಿದ್ದರೋ ಆಗ ಪ್ರತಿ ಮುಸಲ್ಮಾನ ಹಾಗೂ ಕ್ರೈಸ್ತನನ್ನೂ ‘ಉಚ್ಛ’ ನಾಗಿ ಭಾವಿಸಲು ಕಲಿಸಲಾಗುತ್ತಿತ್ತು. ಹಿಂದೂಗಳ ಮೂರ್ತಿ ಪೂಜೆಯ ವಿರುದ್ಧವಾಗಿ ಅವರನ್ನೆಲ್ಲ ಎತ್ತಿ ಕಟ್ಟಲಾಯ್ತು! ಬ್ರಿಟಿಷ್ ನ ಎಜುಕೇಶನಲ್ ಪಾಲಿಸಿಗಳು, ಹಿಂದುತ್ವದ ಬೇರನ್ನೇ ಗಟ್ಟಿಯಾಗಿ ಅಲ್ಲಾಡಿಸುತ್ತ ಬಂದರೂ ಇವತ್ತು ಹಿಂದು ಸುಮ್ಮನೆ ಕುಳಿತು ಶಾಂತಿಯ ಪಾಠ ಮಾಡುತ್ತಾನೇಕೆ?! ಇವತ್ತು, ಜಗತ್ತಿಗೆ ಹಿಂದೂ ಹೇಳಬೇಕಾಗಿದೆ, ಅವನು ಯಾರು ಹಾಗೂ ಅವನ ಧರ್ಮ ಎಂಥದ್ದೆಂದು!!!”

“ಇದು ಜಗತ್ತನ್ನಾಳುವುದಕ್ಕಲ್ಲ! ಅಥವಾ ದ್ವಂದ್ವದಲ್ಲಿ ಬದುಕಲಿಕ್ಕಾಗಿಯೂ ಅಲ್ಲ! ಅಥಚಾ ರಕ್ತಪಾತ ಸೃಷ್ಟಿಸುವುದಕ್ಕಾಗಿಯೂ ಅಲ್ಲ! ತಮ್ಮ ನಂಬಿಕೆಗಳನ್ನು ಮಾತ್ರ ಹೇರುವುದೂ ಅಲ್ಲ! ಆದರೆ, ಇದು ‘ನಿಜವಾಗಲೂ ನಾವು ಯಾರು?!’ ಎಂಬುದನ್ನು ಕಂಡುಕೊಳ್ಳುವ ಪ್ರಕ್ರಿಯೆ ಅಷ್ಟೇ! ಪಾಶ್ಚಿಮಾತ್ಯ ವಿಜ್ಞಾನಿಗಳಿಗಿಂತಲೂ ಅದೆಷ್ಟೋ ಸಾವಿರ ವರ್ಷಗಳ ಮುಂಚೆ ಭಾರತೀಯ ಋಷಿಗಳು ಇಡೀ ವಿಜ್ಞಾನವನ್ನೇ ಜಗತ್ತಿನೆದುರಿಗೆ ತೆಗೆದಿಟ್ಟಿದ್ದರು! ಈ ಆತ್ಮದ ಹಾಗೂ ದೇಹದ ಆಲೋಚನೆಗಳನ್ನು ಅವರವರೇ ಅನುಭವಿಸಬೇಕು ಹಾಗೂ ಆ ಘಮಲುಗಳು ಧರ್ಮವನ್ನೇ ಭೋಧಿಸುತ್ತವೆ! ನಾವೆಲ್ಲರೂ ಕೂಡ, ಭಾರತದ ಸತ್ಯ ಧರ್ಮಕ್ಕೆ ಸೇರಿದ್ದೇವೆ! ಯಾವ ಧರ್ಮ ‘ವಸುಧೈವ ಕುಟುಂಬಕಮ್’ ಎಂಬ ಶಾಂತಿವಾಕ್ಯವನ್ನು ಜಗತ್ತಿಗೆ ಪರಿಚಯಿಸಿತೋ, ಅಂತಹ ಧರ್ಮದ ಮಕ್ಕಳು ನಾವಷ್ಟೇ! ಈ ಸತ್ಯ ಇಡೀ ಜಗತ್ತನ್ನು ಒಂದು ಮಾಡಿ, ಆತ್ಮದ ಪ್ರಜ್ಞೆಯನ್ನೂ ಮೂಡಿಸುತ್ತದೆ ಅಲ್ಲವೇ?!”

Please Hindus, don’t say: “All Religions are the Same”

ಮೂಲ: ಮಾರಿಯಾ ವ್ರಿತ್

– ಪೃಥು ಅಗ್ನಿಹೋತ್ರಿ

Tags

Related Articles

Close