ಅಂಕಣಪ್ರಚಲಿತರಾಜ್ಯ

ಕಾಂಗ್ರೆಸ್ ಗೆ ಭಾರೀ ಮುಜುಗರ! ಸ್ಮೃತಿ ಇರಾನಿ ಹಾಗೂ ವಿಶ್ವ ವಿದ್ಯಾನಿಲಯಕ್ಕೆ ಕ್ಲೀನ್ ಚಿಟ್! ರೋಹಿತ್ ವೆಮುಲಾನ ಸಾವಿಗೆ ಕಾರಣ ಏನು ಗೊತ್ತೇ?

ಆತನ ಆತ್ಮಹತ್ಯೆಗೆ ವಿಶ್ವ ವಿದ್ಯಾನಿಲಯ ಕಾರಣವಲ್ಲ, ಬದಲಾಗಿ ವೈಯುಕ್ತಿಕ ಸಮಸ್ಯೆಗಳೆಂದು ವರದಿ ಕಾಡಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಹಾಗೂ ಆತನ ಪಡೆಯನ್ನು ಕೋಮಾಕ್ಕೀಡು ಮಾಡಿದೆ. ಹೌದು!
ಹೈದರಾಬಾದ್ ನ ರೋಹಿತ್ ವೆಮುಲಾನ ಆತ್ಮಹತ್ಯೆಯ ವರದಿಯೊಂದು ಸತ್ಯವನ್ನು ಬಯಲು ಮಾಡಿದೆ!

‘ರೋಹಿತ್ ವೆಮುಲಾನ ಆತ್ಮಹತ್ಯೆಗೆ ತನ್ನದೇ ಆದ ವೈಯುಕ್ತಿಕ ಕಾರಣಗಳಿದ್ದವೇ ಹೊರತು, ಯಾವ ವಿದ್ಯಾನಿಲಯವೂ ಆತನನ್ನು ಶಿಕ್ಷೆಗೊಳಪಡಿಸಿರಲಿಲ್ಲ. ಅಲ್ಲದೇ, ಯಾವ ಬಿಜೆಪಿಯ ನಾಯಕರೂ ಕೂಡ ಈ ಆತ್ಮಹತ್ಯೆಯ ಹಿಂದಿನ ಕಾರಣವಾಗಿರಲಿಲ್ಲ.’ ಎಂದು ತನಿಖಾ ವರದಿ ಹೇಳಿದೆ.

ಈಗಾಗಲೇ ಸಾವಿಗೂ ರಾಜಕೀಯ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷ ಸಾಲದೆಂಬಂತೆ ಎಡ- ಪಂಥೀಯ ತಲೆಗಳು, ರೋಹಿತ್ ವೆಮುಲಾನ ಆತ್ಮಯತ್ಯೆಗೆ ರೆಕ್ಕೆ ಹಚ್ಚಿ ಹೊಸ ವಿವಾದ ಸೃಷ್ಟಿಸಿದ್ದರು.

‘ತನಿಖಾ ವರದಿ ಸತ್ಯಕ್ಕೆ ಬಹಳ ದೂರವಾಗಿದೆ’ ಎಂದು ಹೊಸ ಕ್ಯಾತೆ ಪ್ರಾರಂಭಿಸಿರುವ ಕಾಂಗ್ರೆಸ್ ಪಕ್ಷದಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯವಿದೆ?

ರೋಹಿತ್ ವೆಮುಲಾ ಹಾಗೂ ಆತನ ನಾಲ್ಕು ಸಹಚರರನ್ನು ವಿದ್ಯಾನಿಲಯದಿಂದ ಶಿಷ್ಟಾಚಾರ ಮೀರಿದ್ದಕ್ಕಾಗಿ ಗಡೀಪಾರು ಮಾಡಲಾಗಿತ್ತು. ಸ್ವಲ್ಪ ದಿನದ ನಂತರ, ರೋಹಿತ್ ವೆಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದ. ಇಷ್ಟೇ ಆಗಿದ್ದರೆ ಕಾಂಗ್ರೆಸ್ ಅಥವಾ ಯಾವುದೇ ಪ್ರಗತಿಪರರೂ ಕೂಡ ಅವನ ಸಾವಿಗೆ ಕರುಣೆಯೂ ತೋರುತ್ತಿರಲಿಲ್ಲವೇನೋ, ಆದರೆ ‘ದಲಿತ’ನೆಂಬ ಪದ ಅವನ ಸಾವಿಗಂಟಿದ್ದೇ ಬಿಜೆಪಿಯ ವಿರುದ್ಧ ಉಳಿದ ಪಕ್ಷಗಳೆಲ್ಲ ತಿರುಗಿ ಬಿದ್ದು ‘ಶೋಷಣೆ’ಯೆಂದು ಬಾಯಿ ಬಡಿದುಕೊಂಡಿದ್ದವು.

ವೆಮುಲಾ ದಲಿತನಾಗಿರಲಿಲ್ಲವೇ?

ಜಸ್ಟೀಸ್ ರೂಪನ್ ವಾಲ್ ಆಯೋಗದ ತನಿಖೆ ‘ವೆಮುಲಾನ ತಾಯಿ ರಾಧಿಕಾ ದಲಿತ ಪಂಗಡದ ಭಾಗವಾದ ‘ಮಾಲಾ’ ಎಂಬ ಜಾತಿಗೆ ಸೇರಿದವರೆಂಬ ಯಾವ ಸಾಕ್ಷ್ಯಾಧಾರಗಳೂ ಇಲ್ಲ’ ಎಂದು ವರದಿಯಲ್ಲಿ ಧೃಢೀಕರಿಸಿದೆ.

ರೋಹಿತ್ ವೆಮುಲಾನ ಸಾವಿನ ನಂತರ ಉಳಿದ ವಿದ್ಯಾರ್ಥಿಗಳು ಒಕ್ಕೂಟ ಸಚಿವೆಯಾಗಿದ್ದ ಸ್ಮೃತಿ ಇರಾನಿ ಹಾಗೂ ಬಿಜೆಪಿಯ ಬಂಡಾರು ದತ್ತಾತ್ರೇಯವರನ್ನು ಗುರಿಯಾಗಿಸಿ ವಿಶ್ವವಿದ್ಯಾನಿಲಯಕ್ಕೆ ಆ 5 ಜನರನ್ನು ಶಿಕ್ಷಿಸುವಂತೆ ಒತ್ತಡ ಹೇರಿದ್ದರು ಎಂದು ಆರೋಪಿಸಿದ್ದರು.

” ರೋಹಿತ್ ವೆಮುಲಾ ವಿಶ್ವ ವಿದ್ಯಾನಿಲಯದ ನಿರ್ಧಾರಕ್ಕೆ ಕೋಪಗೊಂಡಿದ್ದಿದ್ದರೆ ಅಥವಾ ಖಿನ್ನತೆಗೊಳಗಾಗಿದ್ದರೆ ವಿಶ್ವ ವಿದ್ಯಾನಿಲಯಕ್ಕೆ ತಪ್ಪು ಮನ್ನಿಸುವಂತೆ ಅಥವಾ ಪತ್ರ ಬರೆದು ಮನ್ನಿಸುವಂತೆಯೋ, ಇನ್ನೇನೋ ಪ್ರಯತ್ನಿಸಬಹುದಿತ್ತು. ಆದರೆ, ಅದಾವುದನ್ನೂ ಮಾಡದ ರೋಹಿತ್ ವೆಮುಲಾನ ಸಾವಿಗೆ ವಿಶ್ವ ವಿದ್ಯಾನಿಲಯದ ನಿರ್ಧಾರವೇ ಕಾರಣ ಎಂದು ಹೇಳಲಾಗುವುದಿಲ್ಲ. ಆ ಸಮಯಕ್ಕಾದ ಕಾಕತಾಳೀಯವಿದಷ್ಟೇ.’ ಎಂದು ತನಿಖಾ ವರದಿಯಲ್ಲಿ ಹೇಳಿದೆ.

ಅಲ್ಲದೆಯೇ, ‘ಆತ ಅವನ ವೈಯುಕ್ತಿಕ ಸಮಸ್ಯೆಗಳಿಗೆ ಖಿನ್ನತೆಗೊಳಗಾಗಿದ್ದನೇ ಹೊರತು, ಆತ ಯಾರನ್ನೂ ಕಾರಣೀಭೂತರನ್ನಾಗಿಸಿರಲಿಲ್ಲ.’ ಎಂದೂ ಹೇಳಿದೆ.

ಈ ತನಿಖಾ ವರದಿಯಿಂದ ಕಾಂಗ್ರೆಸ್ ಹಾಗೂ ಉಳಿದ ಪ್ರಗತಿಪರರಿಗೆ ಭಾರೀ ಮುಜುಗರವಾಗಿರುವುದಂತೂ ಸತ್ಯ.

– ಪೃಥ ಅಗ್ನಿಹೋತ್ರಿ

Tags

Related Articles

Close