ಅಂಕಣಪ್ರಚಲಿತರಾಜ್ಯ

ಕೈ ಮುಟ್ಟಿ ಮರ್ಯಾದೆ ಬಿಟ್ಟ ‘ಕೈ’ ನಾಯಕ!!!!

ಮಾತೆತ್ತಿದರೆ ‘ಸತ್ಯ, ಮರ್ಯಾದೆ, ಸ್ವಾಭಿಮಾನ’ ಎಂದು ಬಡಾಯಿ ಕೊಚ್ಚುವ ಕಾಂಗ್ರೆಸ್ ನಾಯಕರಿಗೆ ‘ಕೈ’ ಮುಟ್ಟಿವುದೇ ಕೆಲಸವಾಗೋಗಿದೆ! ಪಾಪ!

ವೇದಿಕೆ ಮೇಲೆಯೇ ಅಸಭ್ಯವಾಗಿ ವರ್ತಿಸುವುದಕ್ಕೆ ಯಾವ ಹಿಂಜರಿಕೆಯೂ ಇಲ್ಲ, ಯಾರ ಹಂಗೂ ಇಲ್ಲ ಎಂದುಕೊಂಡು ಎಮ್ ಎಲ್ ಸಿ ಯಾದ ರಮೇಶ್ ಪಕ್ಕದಲ್ಲೇ ಕೂತಿದ್ದ ‘ವೀಣಾ ಅಚ್ಚಯ್ಯ’ನವರ ಕೈ ಹಿಡಿದಿದ್ದಾರೆ! ‘ಕೈ’ ಎತ್ತಲೇ ತಮ್ಮ ಎಂದುಕೊಂಡು ನಯವಾಗಿ ಕೈ ತೆಗೆದು ಬದಿಗಿರಿಸಿದ ವೀಣಾ ಅಚ್ಚಯ್ಯನವರು ವೇದಿಕೆಯಲ್ಲಿಯೇ ಅವಮಾನಕ್ಕೀಡಾಗಿದ್ದಾರೆ!

ಮಡಿಕೇರಿಯ ಜಿಲ್ಲಾ ಉಸ್ತುವಾರಿ ವತಿಯಿಂದ ಸಾರ್ವಜನಿಕ ಸಭೆಯನ್ನೇರ್ಪಡಿಸಲಾಗಿತ್ತು! ವೇದಿಕೆಯ ಮೇಲೆಯೇ ಅಸಭ್ಯವಾಗಿ ವರ್ತಿಸಿದ ಎಮ್ ಎಲ್ ಸಿ ರಮೇಶರ ಬಗ್ಗೆ ವ್ಯಾಪ ವಿರೋಧ ವ್ಯಕ್ತವಾಗಿದೆ!

ಏನ್ ಸ್ವಾಮಿ ಈ ‘ಕೈ’ ಮಹಿಮೆ?

ನೆಹರೂವಿಂದ ಹಿಡಿದು, ಇವತ್ತಿನ ರಾಹುಲ್ ಗಾಂಧಿಯ ತನಕವೂ ಬಿಡದ ‘ಕೈ’ ಯ ಮಹಿಮೆಯೊಂದು ಶಾಸಕಾದಿಯನ್ನೂ ಬಿಡಲಿಲ್ಲವೇ?!
ಒಬ್ಬ ಕಾಂಗ್ರೆಸ್ ನ ಜವಾಬ್ದಾರಿಯುತ ನಾಯಕನಾಗಿ ಹೆಣ್ಣು ಮಕ್ಕಳ ಮೈ ಮುಟ್ಟುವ ಇಂತಹವರು ನಿಜಕ್ಕೂ ಸಭ್ಯಸ್ಥರೇ?!

ಭಾಗ್ಯಗಳ ಮೇಲೆ ಭಾಗ್ಯ ಕೊಟ್ಟ ಸಿದ್ಧರಾಮಯ್ಯ ಶಾಸಕರಿಗೆ ‘ಸಂಸ್ಕಾರ’ ಹೇಳಿಕೊಡುವಷ್ಟು ಪುರುಸೊತ್ತಿಲ್ಲದ ಮುಖ್ಯ ಮಂತ್ರಿಯಾಗಿದ್ದಾರೆ ಬಿಡಿ!
ಸಭ್ಯತೆ ಗೊತ್ತಿಲ್ಲದ ಅನಾಗರಿಕ ಶಾಸಕರನ್ನೇ ಕಾಂಗ್ರೆಸ್ ಮೇಲಿಂದ ಮೇಲೆ ಪಕ್ಷದಲ್ಲಿರಿಸುತ್ತಿರುವದನ್ನು ನೋಡಿದರೆ, ಮುದೊಂದು ದಿನ ಕಾಂಗ್ರೆಸ್ ಹೆಣ್ಣು ಮಕ್ಕಳ ‘ಕೈ’ ನು ಬೇರೆಯಾಗಿಯೇ ಹಿಡಿಯುತ್ತದೆ ಬಿಡಿ!

ಮಡಿಕೇರಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ರ ನಡವಳಿಕೆ ‘ಕೈ’ ಗೆ ಹಿಡಿದ ಕನ್ನಡಿಯಷ್ಟೇ! ಬಹುಷಃ ಸ್ವಾತಂತ್ರ್ಯ ದಿನವಾದ್ದರಿಂದ ಸಭ್ಯತೆ ಮೀರಲೂ ಸ್ವತಂತ್ರ್ಯವೆನ್ನುವ ಆಲೋಚನೆಯಿಂದ ‘ಕೈ’ ಹಿಡಿದ ನಾಯಕನೊಬ್ಬ ಸಾರ್ವಜನಿಕರ ಆಹಾರವಾಗಿರುವುದು ಕಾಂಗ್ರೆಸ್ ನ ದುರಾದೃಷ್ಟ!!!

https://www.facebook.com/NaMoFansKarunadu/videos/1555473857842241/

ಈ ಘಟನೆಗೆ ಪ್ರತಿಕ್ರಿಯಿಸಿರುವ ಟಿ.ಪಿ.ರಮೇಶ್, “ನಾನು ಹಾಗೂ ವೀಣಾ ಅಚ್ಚಯ್ಯ ಬಲ್ಯಾದ ಸ್ನೇಹಿತರು! ಧರ್ಮಸ್ಥಳದಲ್ಲಿ ಅವರು ತೂಕ ಇಳಿಸಲು ಚಿಕಿತ್ಸೆ ಪಡೆಯುತ್ತಿದ್ದರು! ಅದಕ್ಕಾಗಿ, ಏನು ತೆಳ್ಳಗಾಗಿದ್ದೀರಲ್ಲ ಎಂದು ಕೈ ಹಿಡಿದು ಪ್ರಶ್ನಿಸಿದೆ ಅಷ್ಟೇ !ಬೇರಾವ ಉದ್ದೇಶದಿಂದಲೂ ಅಲ್ಲ.’ ಎಂದಿದ್ದಾರೆ!
ಅಲ್ಲಾ ಸ್ವಾಮಿ! ಬಾಲ್ಯದ ಸ್ನೇಹಿತರಾದ ತಕ್ಷಣ ವೇದಿಕೆಯ ಮೇಲೆ ಸಮಾರಂಭ ನಡೆಯುವ ವೇಳೆಯೇ ಕಷ್ಟ ಸುಖ ಮಾತನಾಡಬೇಕೇ ?!

ಬಾಲ್ಯದ ಸ್ನೇಹಿತರಾದರೂ ಸಹ ವೇದಿಕೆಯ ಮೇಲಿನ ಘನತೆ ಗೌರವ ಸಭ್ಯತೆಯ ಪ್ರಶ್ನೆಯೇ ಇಲ್ಲದೆ ವರ್ತಿಸುವುದು ‘ಜವಾಬ್ದಾರಿಯುತ’ ನಾಯಕನ ಲಕ್ಷಣವೇ?

– ಪೃಥು

Tags

Related Articles

Close