ಅಂಕಣ

ಚೀನಾ ಭಾರತದ ಮೇಲೆ ಯುದ್ಧ ಸಾರಲು ಬಂದಾಗ ಜಪಾನ್ ಭಾರತಕ್ಕೆ ಬೆಂಬಲ ಸೂಚಿಸಲು ಕಾರಣನಾದ ದೇವರು ಯಾರು? ಜಪಾನ್ ಮೂಲತಃ ಹಿಂದೂರಾಷ್ಟ್ರ ಎನ್ನಲು ಪುರಾವೆಯೇನು?

ನಿಮಗೆ ಈ ವಿಷಯವನ್ನು ಹೇಳಿದಾಗ ಖಂಡಿತಾ ಅಚ್ಚರಿಯಾಗಬಲ್ಲುದು… ಯಾಕೆ ಗೊತ್ತೆ ಭಾರತದ ಪರಮ ಮಿತ್ರ ರಾಷ್ಟ್ರ ಜಪಾನ್ ಒಂದು ಕಾಲದಲ್ಲಿ ಹಿಂದೂ ರಾಷ್ಟ್ರವಾಗಿತ್ತು. ಜಪಾನಿಗರ ಮೈಯ್ಯಲ್ಲಿ ಹರಿಯುತ್ತಿರುವುದು ಹಿಂದೂ ರಕ್ತ. ಭಾರತೀಯರಂತೆಯೇ ಭಾವನೆಗಳನ್ನು ಹೊಂದಿರುವ ಜಪಾನಿಗರಿಗೆ ಇಂದಿಗೂ ಭಾರತೀಯರೆಂದರೆ ಸಹೋದರ ಸಮಾನ ಭಾವನೆ ಇಟ್ಟುಕೊಂಡಿದ್ದಾರೆ. ಹಾಗಾದರೆ ಜಪಾನ್ ಹಿಂದೂ ರಾಷ್ಟ್ರವಾಗಿತ್ತು ಎನ್ನಲು ಇರುವ ಸಾಕ್ಷಿ ಏನು?

ಹಿಂದೂ ಸಾಮ್ರಾಜ್ಯ ಒಂದು ಕಾಲದಲ್ಲಿ ಎಷ್ಟು ವಿಸ್ತಾರವಾಗಿತ್ತೆಂದು ತಿಳಿದರೆ ಖಂಡಿತಾ ಅಚ್ಚರಿಯಾಗಬಲ್ಲುದು. ಹಿಂದೂ ಧರ್ಮ ಕೇವಲ ಭಾರತದಲ್ಲೇ ಇತ್ತು ಎನ್ನುವವರಿಗೆ ಜಪಾನ್ ದೇಶದಲ್ಲಿ ಸಿಕ್ಕ ಕುರುಹುಗಳು ಪ್ರಾಚೀನ ಕಾಲದಲ್ಲಿದ್ದ ಹಿಂದೂ ಧರ್ಮದ ವಿಸ್ತಾರವನ್ನು ತಿಳಿಸುತ್ತದೆ. ಭೂಕಂಪ, ಚಂಡಮಾರುತ ಮುಂತಾದ ಪ್ರಕೃತಿ ವಿಕೋಪಗಳಿಂದ ತತ್ತರಿಸಿದ ಆ ದೇಶ ಇಂದು ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸೇರಲು ಅವರು ಗುಟ್ಟಾಗಿ ನಂಬುವ ಹಿಂದೂ ದೇವರ ಶಕ್ತಿ ಎನ್ನುವುದನ್ನು ಅಲ್ಲಿನವರು ಇಂದಿಗೂ ನಂಬುತ್ತಾರೆ.

ಅಖಂಡ ಭಾರತವನ್ನು ಕಲ್ಪಿಸಿದರೆ ಚೀನಾ, ಪಾಕಿಸ್ತಾನ, ಅಫಘಾನಿಸ್ತಾನ, ಕೊರಿಯಾ, ರಷ್ಯಾ, ಜಪಾನ್ ಮುಂತಾದ ರಾಷ್ಟ್ರಗಳು ಭಾರತಕ್ಕೆ ಸೇರಿತ್ತು. ಇದಕ್ಕೆ ಹಿಂದೂ ಧರ್ಮದ ಧಾರ್ಮಿಕ ಗ್ರಂಥಗಳು, ಸಿಗುತ್ತಿರುವ ಪುರಾವೆಗಳು ಪುಷ್ಠಿ ನೀಡುತ್ತದೆ. ಇದರ ನಡುವೆ ಉದಿಸಿದ ಬೌದ್ಧ ಧರ್ಮ ಹಿಂದೂ ಧರ್ಮದ ಬೇರುಗಳನ್ನು ಜತನದಲ್ಲಿ ಉಳಿಸಿಕೊಂಡರೂ ಆಮೇಲೆ ಉದಿಸಿದ ಕ್ರೈಸ್ತ ಹಾಗೂ ಇಸ್ಲಾಂ ಮತಗಳು ಹಿಂದೂ ಧರ್ಮದ ಬೇರುಗಳನ್ನು ಅಲುಗಾಡಿಸತೊಡಗಿತು.

ಒಂದು ಕಾಲದಲ್ಲಿ ಇಡೀ ಪ್ರಪಂಚವೇ ಹಿಂದೂವಾಗಿದ್ದರೂ ಆಮೇಲೆ ಬಂದ ಕ್ರೈಸ್ತ ಹಾಗೂ ಇಸ್ಲಾಂ ಮತಗಳ ವಿಸ್ತರಣಾವಾದ, ಸಾಮ್ರಾಜ್ಯಶಾಹಿತನ, ಕೊಳ್ಳೆ ಹೊಡೆಯುವುದು, ದೇವಸ್ಥಾನಗಳ ಲೂಟಿ, ನರಮೇಧ, ಮತಾಂತರ ಇವೆಲ್ಲಾ ಪ್ರಾಚೀನ ಕಾಲದಿಂದ ಇದ್ದ ಧರ್ಮನಿಷ್ಠ ಹಿಂದೂ ಧರ್ಮದ ಮೇಲೆ ತೀವ್ರ ಹೊಡೆತ ಬಿದ್ದಿತು. ಪರಿಣಾಮವಾಗಿ ಹಿಂದೂ ಧರ್ಮವಿದ್ದ ಸ್ಥಳದಲ್ಲಿ ಕ್ರೈಸ್ತ, ಇಸ್ಲಾಂ ಮತಗಳು ಬೆಳೆದು ಪ್ರಾಚೀನ ಕಾಲದಲ್ಲಿದ್ದ ಹಿಂದೂ ಧರ್ಮ ಅವನತಿ ಹೊಂದಿತು. ದುರದೃಷ್ಟವೆಂದರೆ ಈ ಹಿಂದೂ ಧರ್ಮ ಭಾರತ, ನೇಪಾಳದಲ್ಲಿದ್ದರೆ ಉಳಿದ ನೆರೆರಾಷ್ಟ್ರಗಳಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ.

ಜಪಾನಿಗರು ಇಂದಿಗೂ ನಿರಂತರವಾಗಿ ಪೂಜಿಸಿಕೊಂಡು ಬರುತ್ತಿರುವ ಗಣಪತಿ ದೇವಸ್ಥಾನ….!

ಈ ಮಹಾಗಣಪತಿ ಎಷ್ಟು ಶಕ್ತಿಶಾಲಿ ಎಂದರೆ ಇಂದು ಜಪಾನ್ ಶರವೇಗದಲ್ಲಿ ಮುಂದುವರಿಯಲಿ ಇದೇ ಗಣಪತಿಯ ಕೃಪೆ ಎಂದುಕೊಂಡಿದ್ದಾರೆ ಜಪಾನಿಗರು. ದೇಶ ಚಂಡಮಾರುತ, ಭೂಕಂಪಕ್ಕೆ ತತ್ತರಿಸಿದಾಗ ಜಪಾನಿಗರು ಗಣಪತಿ ದೇವರ ಮೊರೆ ಹೋಗುತ್ತಾರೆ. ಗಣಪತಿ ಇವರ ಕಷ್ಟವನ್ನು ಶಮನಗೊಳಿಸುತ್ತಾನೆ ಎನ್ನುವ ನಂಬಿಕೆ ಅವರದ್ದು. ಇದಕ್ಕೆ ಒಂದು ಉದಾಹರಣೆ ನೀಡಬೇಕಾದರೆ, 1990ರಲ್ಲಿ ಜಪಾನಿನ ಆರ್ಥಿಕ ಶಕ್ತಿಗೆ ತೀವ್ರ ಹೊಡೆತ ಬಿದ್ದು ಜಪಾನ್ ಅಕ್ಷರಶಃ ತತ್ತರಿಸಿಹೋಗಿತ್ತು. ಈ ವೇಳೆ ಜಪಾನಿಗರು ಮೊರೆಹೋಗಿದ್ದು ಗಣೇಶನಿಗೆ….! ಗಣಪತಿ ದೇವರಿಗೆ ಮೂಲಂಗಿಯನ್ನು ಸಮರ್ಪಿಸಿ ತನ್ನ ಕಷ್ಟ ನಿವಾರಣೆಯಾಗುವಂತೆ ಪ್ರಾರ್ಥಿಸಿದರಂತೆ.. ಅಚ್ಚರಿಯೆಂಬಂತೆ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದ ಜಪಾನ್ ಮತ್ತೆ ಆರ್ಥಿಕ ಪುನಷ್ಚೇತನ ಪಡೆಯಿತಂತೆ. ಗಣಪತಿ ದೇವರ ಮಹಿಮೆಯನ್ನು ಅರಿತುಕೊಂಡ ಜಪಾನಿಗರು ಭಾರತಕ್ಕೆ ಬಂದಾಗ ಗಣಪತಿ ಸನ್ನಿಧಾನಕ್ಕೆ ತೆರಳಿ ದರುಶನ ನೀಡಿ ಬರುತ್ತಾರೆ.

ಹಾಗೆ ನೋಡಿದರೆ ಜಪಾನ್‍ನಲ್ಲಿರುವುದು ಬೌದ್ಧ ಧರ್ಮ. ಬೌದ್ಧ ಧರ್ಮ ಅಸ್ತಿತ್ವದಲ್ಲಿರುವ ಮುನ್ನ ಜಪಾನ್‍ನಲ್ಲಿದ್ದುದು ಹಿಂದೂ ಧರ್ಮ. ಬೌದ್ಧ ಭಿಕ್ಕುಗಳು ಭೌದ್ಧಧರ್ಮವನ್ನು ಪ್ರಚಾರ ಮಾಡಿದ ಸಲುವಾಗಿ ಚೀನಾ, ಜಪಾನ್ ಮುಂತಾದ ರಾಷ್ಟ್ರಗಳಲ್ಲಿ ಬೌದ್ಧಧರ್ಮ ಅಸ್ತಿತ್ವಕ್ಕೆ ಬಂದಿತು. ಅಂದಹಾಗೆ ಜಪಾನ್‍ನಲ್ಲಿ ಗಣಪತಿ ದೇವರಷ್ಟೇ ಅಲ್ಲ, ಇತರ ದೇವತೆಗಳೂ ಇದ್ದಾರೆ. ಆದರೆ ವಿಚಿತ್ರವೆಂದರೆ ಹಿಂದೂ ದೇವರೆಲ್ಲಾ ಹೆಸರು ಬದಲಿಸಿಕೊಂಡು ಬೌದ್ಧ ಹೆಸರುಗಳನ್ನು ಪಡೆದುಕೊಂಡಿದೆ.

ಜಪಾನಿನಲ್ಲಿರುವ ಗಣಪತಿಯ ಇಂದಿನ ಹೆಸರು ಕಂಗಿತೆನ್. ಇದರ ಜೊತೆಗೆ ವಿನಾಯಕ ತೆನ್, ಬಿನಾಯಕ ತೆನ್ ಹೆಸರಲ್ಲೂ ಗಣಪತಿ ಕರೆಸಿಕೊಳ್ಳುತ್ತಾನೆ. ನಮ್ಮ ಗಣಪತಿ ಮೋದಕಪ್ರಿಯನಾದರೆ ಕಂಗಿತೆನ್ ಮೂಲಂಗಿಪ್ರಿಯ. ಆರಂಭದಲ್ಲಿ ಮೋದಕಪ್ರಿಯನಾಗಿದ್ದ ಗಣಪತಿಯನ್ನು ಜಪಾನಿಗರು ಇಚ್ಛಾನುಸಾರ ಮೂಲಂಗಿಪ್ರಿಯನಾಗಿ ಮಾಡಿದರು. ಅದರಂತೆ ನಮ್ಮಲ್ಲಿ ದೇವಳದ ಎದುರು ಹಣ್ಣುಕಾಯಿ ಮಾರುವಂತೆ ಕಂಗಿತೆನ್ ದೇಗುಲದ ಮುಂದೆ ಮೂಲಂಗಿ ಮಾರುವುದನ್ನು ಕಾಣಬಹುದು.

ಗಣಪತಿ ದೇವರಂತೆ ಇತರ ಶಕ್ತಿದೇವತೆಗಳೂ ಇಲ್ಲಿವೆ. ಬೌದ್ಧ ಧರ್ಮದ ಅನುಸಾರ ತನ್ನ ಹೆಸರನ್ನು ಬದಲಿಸಿಕೊಂಡಿದ್ದಾರೆ ಉದಾರಣೆಗೆ ನಮ್ಮ ಶಿವ ದೇವರು ದೈಜೈತೆನ್ ಆಗಿ, ಬ್ರಹ್ಮ ದೇವರು ಬೊಂತೆನ್ ಆಗಿ, ಇಂದ್ರ ದೇವರು ತೈಶಾಕುತೆನ್ ಆಗಿ, ವರುಣ ದೇವರು ರೈಜಿನ್ ಆಗಿ, ಯಮ ದೇವರು ಎನ್ಮತೆನ್ ಆಗಿ, ಲಕ್ಷ್ಮೀ ದೇವರು ಕಿಚಿಜೊತೆನ್ ಆಗಿ, ಸರಸ್ವತಿ ದೇವರು ಬೆಂಜೈತೆನ್ ಆಗಿ ಹಸರು ಬದಲಿಸಿಕೊಂಡಿದ್ದಾರೆ. ವಿಚಿತ್ರವೆಂದರೆ ಭಾರತದಲ್ಲಿ ಹೆಚ್ಚಾಗಿ ಪೂಜಿಸದ ಇಂದ್ರ, ವರುಣ, ಬ್ರಹ್ಮ ದೇವರನ್ನು ಜಪಾನಿನಲ್ಲಿ ಪೂಜಿಸಲಾಗುತ್ತಿದೆ. ಇದರಿಂದಾಗಿ ಜಪಾನ್ ವೇದಕಾಲದಿಂದಲೂ ಅಸ್ತಿತ್ವದಲ್ಲಿತ್ತು ಎಂದು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಲಕ್ಷ್ಮಿ, ಗಣಪತಿ ಹಾಗೂ ಸರಸ್ವತಿಯ ವಿಗ್ರಹಗಳನ್ನು ಒಟ್ಟಾಗಿ ಕೆತ್ತಲಾಗಿದೆ.

ಟೊಕಿಯೊದಲ್ಲಿ ಮತ್ಸೊಚಿಯಾಮಾ ಎಂಬ ಗಣೇಶ ದೇವಾಲಯವಿದ್ದು ಇದು ಅತ್ಯಂತ ಪ್ರಾಚೀನ ದೇಗುಲ ಎಂದು ಹೆಸರು ಪಡೆದಿದೆ. ಇದು ಸುಮಾರು 1603-1867ರ ಸಂದರ್ಭದಲ್ಲಿ ನಿರ್ಮಾಣಗೊಂಡಿತೋ ಅಥವಾ ಅದಕ್ಕಿಂತ ಮುಂಚೆಯೇ ಇತ್ತು ಎನ್ನುವವರೂ ಇದ್ದಾರೆ. ಜಪಾನಿನಲ್ಲಿ ಹಿಂದೂ ಧರ್ಮ ಉಚ್ರಾಯ ಸ್ಥಿತಿಯಲ್ಲಿದ್ದಾಗ ಈ ಎಲ್ಲಾ ದೇಗುಲಗಳು ಆರಂಭಗೊಂಡಿರಬಹುದು. ಆ ಬಳಿಕ ಬೌದ್ಧ ಧರ್ಮ ವ್ಯಾಪಿಸಿದ ಬಳಿಕ ಬುದ್ಧನ ಬೃಹತ್ ಮೂರ್ತಿಗಳನ್ನೊಳಗೊಂಡ ದೇಗುಲಗಳು ಆರಂಭಗೊಂಡವು. ಅದರ ಜೊತೆಗೆ ಗಣಪತಿಗೆ ಪೂಜೆ ಸಲ್ಲಿಸುವುದನ್ನೂ ಜಪಾನಿಯರು ನಿಲ್ಲಿಸಲಿಲ್ಲ.

ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಜಪಾನ್ ಅಣುಬಾಂಬ್ ದಾಳಿ ಸೇರಿ ಅನೇಕ ಅವಘಡಗಳಿಗೆ ತುತ್ತಾಗಿತ್ತು. ಈ ವೇಳೆ ಕಂಗಿತನ್ ದೇವರನ್ನು ಜಪಾನಿಗರು ಮಣ್ಣಿನೊಳಗಡೆ ಹುದುಗಿಸಿಟ್ಟು ರಕ್ಷಿಸಿದ್ದರಂತೆ. ಯುದ್ಧ ಮುಗಿದ ಬಳಿಕ ದೇವರನ್ನು ಮತ್ತೊಮ್ಮೆ ಪ್ರತಿಷ್ಠಾಪಿಸಲಾಯಿತು. ಎಲ್ಲಾ ಆತಂಕಗಳು ನಿವಾರಣೆಯಾಗುವಂತೆ ಜಪಾನಿಗರು ಗಣಪತಿಯ ಮೊರೆ ಹೋಗಿದ್ದರು. ಕಾಕತಾಳಿಯವೋ ಎಂಬಂತೆ ಜಪಾನ್ ಇಂದು ಪವರ್‍ಫುಲ್ ರಾಷ್ಟ್ರವಾಗಿದೆ.

ಕಂಗಿತನ್ ದೇವರ ಶಕ್ತಿ ಅಪಾರವಾಗಿದೆ. ಈ ಶಕ್ತಿಯನ್ನು ಭಕ್ತರಿಗೆ ತಡೆದುಕೊಳ್ಳಲೂ ಸಾಧ್ಯವಾಗುವುದಿಲ್ಲ. ಆದ್ದರಿಂದ ಯಾರೂ ಕೂಡಾ ಇಂದಿಗೂ ಆ ದೇವರ ಮುಖವನ್ನು ನೋಡುವುದಿಲ್ಲ. ಯುದ್ಧಕಾಲದಲ್ಲಿ ಹುದುಗಿಸಿಟ್ಟ ದೇವರನ್ನು ಮತ್ತೆ ಮೇಲೆತ್ತಿ ಪ್ರತಿಷ್ಠಾಪಿಸಿದಾಗ ಅರ್ಚಕರು ದೇವರ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದು ಬಿಟ್ಟರೆ ಆ ಬಳಿಕ ಯಾರೂ ಕೂಡಾ ಆ ದೇವರ ಮುಖದರುಶನ ಮಾಡುವ ಧೈರ್ಯವನ್ನು ತೋರಲಿಲ್ಲ. ದೇವರನ್ನು ಪ್ರತಿಷ್ಠಾಪಿಸಿದ ಬಳಿಕ ಅದರ ಮುಖ ಕಾಣದಂತೆ ಗರ್ಭಗುಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಇಂದು ಲಕ್ಷಾಂತರ ಮಂದಿ ಕಂಗಿತನ್ ದೇಗುಲದ ದರುಶನ ಮಾಡಿಕೊಂಡು ಪುನೀತರಾಗುತ್ತಾರೆ. ಭಾರತಕ್ಕೆ ಬರುವ ಜಪಾನಿಗರು ಭಾರತದ ಗಣೇಶನನ್ನೂ ಕಂಗಿತನ್ ಎಂದೇ ಸಂಬೋಧಿಸುತ್ತಾರೆ. ಭಾರತೀಯರ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿರುವ ಜಪಾನಿಗರು ಅದಕ್ಕೆ ಕಾರಣ ಹಿಂದೂ ದೇವರೆಂದು ನಂಬಿದ್ದಾರೆ. ನಿಮಗೆ ನೆನಪಿದೆಯೋ ಇಲ್ಲವೋ ಮೊನ್ನೆ ಚೀನಾ ದೋಕಲಂ ವಿಚಾರದಲ್ಲಿ ಭಾರತದ ವಿರುದ್ಧ ಗುಟುರು ಹಾಕಿದಾಗ ಜಪಾನ್ ಭಾರತದ ಪರವಾಗಿ ಬೆಂಬಲ ಸೂಚಿಸಿತ್ತು. ಇದಕ್ಕೆ ಕಾರಣ ಯಾರು ಗೊತ್ತೇ? ಅದೇ ಗಣಪತಿದೇವರು ಅರ್ಥಾತ್ ಕಂಗಿತನ್…

ಜಪಾನ್‍ನಲ್ಲಿರುವ ಪ್ರಮುಖ ಹಿಂದೂ ದೇವರ ದೇವಸ್ಥಾನಗಳು ಎಲ್ಲೆಲ್ಲಿವೆ ಎಂದರೆ: ಟೋಕಿಯೋದಲ್ಲಿರುವ ಸರಸ್ವತಿ ಯೋಗೀಶ್ವರ ಜಿಂಜಾ, ಅಪ್ಸರಾ ಗೋಕುಲ್‍ಜೀ, ಒಸಕಾದ ಸರಸ್ವತಿ ದೇಗುಲ, ಕ್ಯೋಟೋದಲ್ಲಿರುವ ಭೂದೇವಿ, ಅಗ್ನಿ ದೇವಾಲಯ, ತಕಾಹತಾ ಫ್ಯೂಡೋ ದೇಗುಲ, ಗೋಕುಲ್‍ಜೀ ದೇಗುಲ ಇತ್ಯಾದಿಗಳಿವೆ. ಎಲ್ಲಾ ದೇಗುಲಗಳೂ ಭಾರತದ ದೇಗುಲಗಳಂತೆ ಇದ್ದು ಇಲ್ಲಿನ ರೀತಿಯೇ ಪೂಜೆ ನಡೆಯುತ್ತದೆ. ಇಲ್ಲಿ ಬೌದ್ಧ ಧರ್ಮ ನೆಲೆಗೊಳ್ಳುವ ಮುಂಚೆ ಹಿಂದೂ ಧರ್ಮ ವ್ಯಾಪಕವಾಗಿತ್ತು ಎನ್ನುವುದನ್ನು ಇದು ಸೂಚಿಸುತ್ತದೆ. ಅಲ್ಲದೆ ಪ್ರಪಂಚದಾದ್ಯಂತ ಒಂದಲ್ಲಾ ಒಂದು ಕಡೆಗಳಲ್ಲಿ ಹಿಂದೂ ಧರ್ಮದ ಕುರುಹುಗಳು ಸಿಗುತ್ತಲೇ ಹೋಗುತ್ತಿದೆ.

 

Tags

Related Articles

Close