ಪ್ರಚಲಿತ

ಜಗತ್ತಿನ ಪಾಳುಬಿದ್ದ ವಿಮಾನ ನಿಲ್ದಾಣವೆಂದೇ ಖ್ಯಾತವಾದ, ಶ್ರೀಲಂಕಾದಲ್ಲಿರುವ ನಿಲ್ದಾಣವನ್ನು ಭಾರತ 300 ಮಿಲಿಯನ್ ಡಾಲರ್ ಗಳಿಗೆ ಖರೀದಿಸುತ್ತಿರುವುದು ಯಾಕೆ ಗೊತ್ತೇ?! ಇಲ್ಲಿದೆ ಮೋದಿಯ ಮಾಸ್ಟರ್ ಪ್ಲಾನ್!

ಸರ್ವಾಧಿಕಾರಿಗೆ ಸರ್ವಾಧಿಕಾರಿಯಾದ ಭಾರತದ ಪ್ರಧಾನಿ ಮೋದಿ!

ಒಂದಷ್ಟು ದಿನಗಳ ಹಿಂದೆ, The Interpreter ಎನ್ನುವ ವೆಬ್ ಸೈಟೊಂದು ಹೇಗೆ ಭಾರತ ಜಗತ್ತಿನ ಪ್ರಯಾಣಿಕರಿಲ್ಲದ ವಿಮಾನ ನಿಲ್ದಾಣವನ್ನು ಖರೀದಿಸುತ್ತಿದೆ ಎಂದು ವರದಿ ಮಾಡಿತ್ತು.ಜೊತೆಗೆ ಭಾರತೀಯರಿಗೂ ಸಹ, ದಿನಕ್ಕೆ 12 ಪ್ಯಾಸೆಂಜರ್ ಗಳಿದ್ದರೇ ಹೆಚ್ಚು ಎನ್ನುವಂತಹ ಶ್ರೀಲಂಕಾದ ವಿಮಾನ ನಿಲ್ದಾಣಗಳನ್ನು ಯಾಕೆ ಭಾರತ ಖರೀದಿಸಲು ಉತ್ಸುಕವಾಗಿದೆ ಎಂಬುದು ಬಹಳ ತಲೆಕೆಡಿಸಿತ್ತು ಕೂಡ!

ಆದರೆ, ಇದರ ಹಿಂದಿನ ಹಕೀಕತ್ತು ಬಹುಷಃ ಅಷ್ಟಾಗಿ ತಿಳಿದಿರಲಿಕ್ಕಿಲ್ಲ! ಭಾರತೀಯ ಸರಕಾರ, ಹಿಂದೂ ಮಹಾಸಾಗರದ ಮೇಲೆ ಹಿಡಿತ ಸಾಧಿಸಲು ಹೊರಟಿರುವ ಚೈನಾದ ಸರ್ವಾಧಿಕಾರತ್ವಕ್ಕೆ ತಿರುಗೇಟು ನೀಡುವ ಸಲುವಾಗಿ ಖಾಲಿಯಾಗಿರುವ ನಿಲ್ದಾಣಗಳನ್ನು ಖರೀದಿಸುತ್ತಿದೆ! ಹೌದು! ಕಳೆದ ಹತ್ತು ವರ್ಷಗಳಲ್ಲಿ ಶ್ರೀಲಂಕಾ ದಲ್ಲಿ ತನ್ನ ಪ್ರಾಬಲ್ಯವನ್ನು ವಿಸ್ತರಿಸುತ್ತಲೇ ಬಂದಿರುವ ಚೀನಾ, ಕೊನೆಗೆ ಸೌತ್ – ಈಸ್ಟ್ – ಇಂಡಿಯನ್ ಪ್ರದೇಶಗಳಮೇಲೆ ಪ್ರಾಬಲ್ಯ ಹೊಂದುವ ಸಲುವಾಗಿ ಇಂಡಿಯನ್ ಓಷನ್ ನನ್ನು ದಾಳವಾಗಿ ಉಪಯೋಗಿಸುತ್ತಿದೆ ಅಷ್ಟೇ! ಇದರ ಅರಿವಿಲ್ಲದ ಹಿಂದಿನ ಕಾಂಗ್ರೆಸ್ ಸರಕಾರ, ಚೀನಾ ನಮಗೆ ದ್ರೋಹ ಬಗೆಯುವುದಿಲ್ಲ ಎಂಬ ನೆಹರೂ ಸಿದ್ಧಾಂತವನ್ನೇ ನೆಚ್ಚಿಕೊಂಡು ಗಣನೆಗೆ ತೆಗೆದುಕೊಂಡಿರಲಿಲ್ಲ! ಚೀನಾವನ್ನು ತಡೆಯುವ
ಪ್ರಯತ್ನವನ್ನೂ ಮಾಡಲಿಲ್ಲ!

ಯಾವಾಗ 2014 ರಲ್ಲಿ ಮೋದಿಯ ಸರಕಾರ ಅಸ್ತಿತ್ವಕ್ಕೆ ಬಂದಿತೋ, ತಕ್ಷಣವೇ ಪ್ರತಿ ರಾಷ್ಟ್ರಗಳ ಜೊತೆ ರಾಜಕೀಯ ಸ್ನೇಹ ಸಂಬಂಧವನ್ನು ಬಲಪಡಿಸುವಲ್ಲಿ ನಿರತವಾಯಿತು. ಅಲ್ಲದೇ, ದೋಕ್ಲಾಂ ಗಡಿ ವಿವಾದ, ಅರುಣಾಚಲ ಪ್ರದೇಶದ ವಿವಾದಗಳಲ್ಲಿ ಹೇಗೆ ಚೀನಾ ಹಿಂದೆ ಸರಿಯಿತೆಂಬುದು
ಗೊತ್ತೇ ಇದೆ. ಅಲ್ಲದೇ, ಉಳಿದ ರಾಷ್ಟ್ರಗಳು ಚೀನಾಕೆ ಎಚ್ಚರಿಕೆ ನೀಡಿದ್ದವು. ಚೀನಾದ ರೆಡ್ ಕಾರಿಡಾರ್ ರಸ್ತೆಯ ನಿರ್ಮಾಣವನ್ನೂ ತಡೆ ಹಿಡಿದ ಭಾರತ, ಚೀನಾದ ಪ್ರತಿ ಯೋಜನೆಯನ್ನೂ ತಲೆ ಕೆಳಗು ಮಾಡಿದ್ದವು! ಮೋದಿಯ ಸರಕಾರವೊಂದು ಸಶಕ್ತವಾಗಿ, ಚೀನಾದ ಸೇನಾ ತಂಡಗಳನ್ನು ಹಿಂದಿರುಗುವಂತೆ ಮಾಡಿತ್ತು!

ಇದಲ್ಲದೇ, ಸೌತ್ ಈಸ್ಟ್ ಪ್ರದೇಶದ ಮೇಲೆ ಚೀನಾ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವುದನ್ನು ಹತ್ತಿಕ್ಕುತ್ತಿರುವ ಮೋದಿ ಸರಕಾರ, ಭಾರತವನ್ನು ಸಶಕ್ತ ರಾಷ್ಟ್ರವಾಗಿ ನಿರ್ಮಾಣ ಮಾಡಲು ಇನ್ನಿಲ್ಲದ ಹರಸಾಹಸ ಮಾಡುತ್ತಿದೆ! ಇದೇ ಉದ್ದೇಶದ ಮೇರೆಗೆ, ಶ್ರೀಲಂಕಾದ ಖಾಲಿಯಿರುವ ವಿಮಾನ ನಿಲ್ದಾಣಗಳನ್ನು 40 ವರ್ಷ ಲೀಸ್ ಗೆ ತೆಗೆದುಕೊಳ್ಳುತ್ತಿದೆ. ಬರೋಬ್ಬರಿ, 2000 ಎಕರೆ ಜಾಗದಲ್ಲಿ, ಉದ್ಯಮವನ್ನೂ ಆರಂಭಿಸಲಿರುವ ಭಾರತ ಸರಕಾರ, ಹಂಬನ್ ಟೋಟಾ ಶಿಪ್ಪಿಂಗ್ ಪೋರ್ಟ್ ಬಳಿಯಿರುವ ನಿಲ್ದಾಣವನ್ನು ಖರೀದಿಸಿದೆ. ಮಜಾ ಎಂದರೆ, ಇದೇ ಶಿಪ್ಪಿಂಗ್ ಪೋರ್ಟ್ ನನ್ನು ಇದೇ ವರ್ಷ ಚೀನಾ 1.1 ಬಿಲಿಯನ್ ಡಾಲರ್ ಹಣ ಕೊಟ್ಟು 99 ವರ್ಷಗಳ ಕಾಲ ಲೀಸ್ ಗೆ ತೆಗೆದುಕೊಂಡಿದೆ! ಚೀನಾದಿಂದ ಪೋರ್ಟ್ ನನ್ನು ಸಂಪರ್ಕಿಸಲು ಹಾಗೂ, ವಿವಿಧ ಖಂಡಗಳನ್ನು ಸಂಪರ್ಕಿಸಿ, ತನ್ಮೂಲಕ ತನ್ನ ಸೇನೆ ಹಾಗೂ ಆರ್ಥಿಕ ನೆಲೆಯನ್ನು ವಿಸ್ತರಿಸುವ ಉದ್ಧೇಶದಿಂದ, ಹಂಬ್ ಟೋಟಾದ ಪ್ರಾಮುಖ್ಯತೆ ಅರಿತ ಕೂಡಲೇ ಕಾರ್ಯಪೃವ್ರತ್ತವಾಗಿ., ಬಂದರನ್ನು ಖರೀದಿಸಿದೆ. ಅಲ್ಲದೇ, ಬೃಹತ್ ಬಂದರು, ಕ್ರೀಡಾಂಗಣ, ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡುವ ಆಫರ್ ಇಟ್ಟ ಚೀನಾ. ಮಲ್ಟಿಲೇನ್ ಗಳ ಮೂಲಕ ವಿವಿಧ ಭಾರತದ ಸುತ್ತಲಿರುವ ರಾಷ್ಟ್ರಗಳನ್ನು ಸಂಪರ್ಕಿಬಹುದಾಗಿದೆ.

Image result for hambantota port

ಉತ್ತರದ ಹಿಂದೂ ಮಹಾಸಾಗರದುದ್ದಕ್ಕೂ ಚೀನಾಕೆ ಟ್ರಾನ್ಸ್ ಶಿಪ್ ಮೆಂಟ್ ಮತ್ತು ಲಾಜಿಸ್ಟಿಕ್ಸ್ ಗಳಿಗೆ ಹೇರಳವಾಗಿ ಲಾಭವಾಗುತ್ತವೆ. ಭಾರತೀಯ ಗುಪ್ತಚರ ವರದಿಗಳ ಪ್ರಕಾರ, ‘ಚೀನಾ ಈ ಬಂದರನರನು ತನ್ನ ನೌಕಾ ನೆಲೆಯನ್ನಾಗಿ ಬಳಸಿಕೊಳ್ಳುವುಲ್ಲದೇ, ತನ್ಮೂಲಕ ತನ್ನ ಯೋಜನೆಯಾದ ‘ಸ್ಟ್ರಿಂಗ್ ಆಫ್ ಪರ್ಲ್ಸ್’ ನನ್ನು ಪ್ರಾರಂಭಿಸಿ,ಇಡೀ ಹಿಂದೂ ಮಹಾಸಾಗರದ ಮೇಲೆ ಪ್ರಾಬಲ್ಯ ಸಾಧಿಸಲಿದೆ. ಅಲ್ಲದೇ, ದಕ್ಷಿಣ ಭಾರತವನ್ನೂ ತನ್ನ ಹಿಡಿತಕ್ಕಿಟ್ಟುಕೊಳ್ಳುವ ಯೋಜನೆಯೂ ಇದೆ!’

ಆದರೆ, ಚೀನಾದ ಸರ್ವಾಧಿಕಾರತ್ವದ ಕನಸು ಮೋದಿ ಸರಕಾರ ವಿಮಾನ ನಿಲ್ದಾಣವನ್ನು ಖರೀದಿಸಿದ್ದರಿಂದ ಸಂಪೂರ್ಣ ತಲೆಕೆಳಗಾಗಿದೆ! ಚೀನಾಕೂ ಗೊತ್ತಿದೆ, ಯಾವುದೇ ವಿಮಾನ ನಿಲ್ದಾಣದ ಅವಶ್ಯಕತೆಯಿಲ್ಲದೇ, ಬಂದರನ್ನು ಯಾವ ಕಾರಣಕ್ಕೂ ತಲುಪಲು ಸಾಧ್ಯವಾಗದು ಎಂದು! ಅಲ್ಲದೇ, ನೌಕಾ ನೆಲೆಗೂ ಕೂಡ, ವಿಮಾನಗಳ ಅಗತ್ಯವಿದೆ. ಗಸ್ತು ತಿರುಗಲು ವಾಯು ಮಾರ್ಗದ ಅವಶ್ಯಕತೆ ಇದೆ! ಆದರೆ , ಈಗ ಭಾರತ ಚೀನಾದ ಹಾದಿಯನ್ನು
ಅಸಾಧ್ಯಗೊಳಿಸಿದೆ! ಜೊತೆಗೆ, ಶ್ರೀಲಂಕಾದ ವಿಮಾನ ನಿಲ್ದಾಣದ ಮೂಲಕ, ಸರಕು ಸಾಗಾಣಿಕೆಯನ್ನೂ ಅನಾಯಾಸವಾಗಿ ಮಾಡಲು ಸಾಧ್ಯವಾಗಿದೆ! ಅಲ್ಲದೇ, ಚೀನಾದ ನೌಕಾ ನೆಲೆಯ ಮೇಲೂ ಶಾಶ್ವತವಾಗಿ ಕಣ್ಣಿಡುವಂತಹ ಅವಕಾಶವೂ ಈ ಖರೀದಿಯಿಂದ ಸಾಧ್ಯವಾಗಿದೆ!

Image result for hambantota port

ಬಂದರನ್ನು ನೌಕಾ ನೆಲೆಯನ್ನಾಗಿ ಪರಿವರ್ತಿಸಲಿರುವ ಚೀನಾವನ್ನು ತಡೆಯಲು, ಭಾರತ ವಿಮಾನ ನಿಲ್ದಾಣಕ್ಕೆ ಬರೋಬ್ಬರಿ 300 ಬಿಲಿಯನ್ ಡಾಲರ್ ಗಳನ್ನು ಪಾವತಿಸುತ್ತಿದೆ. 2015 ರಲ್ಲಿ, ಅಮೇರಿಕಾದ ಡಿಫೆನ್ಸ್ ಇಲಾಖೆ ವರದಿಯೊಂದನ್ನು ನೀಡಿತ್ತು. ” ಚೀನಾದ ಸಬ್ ಮರೀನ್ ಗಳು ಹಿಂದೂ ಮಹಾಸಾಗರದಲ್ಲಿ ಕಾರ್ಯಪೃವ್ರತ್ತವಾಗಿವೆ. ಇದು ಮುಂದೆ ಭಾರತಕ್ಕೆ ಗಂಭೀರವಾದ ಸಮಸ್ಯೆಯಾಗಲಿದೆ” ಎಂದೂ ಧೃಢಪಡಿಸಿತ್ತು. ಅಲ್ಲದೇ, “ಎರಡು ಮೂರು ವರ್ಷಗಳಿಂದ ಹ್ಯಾಂಬನ್ ಟೋಟ್ ಬಂದರಿನಲ್ಲಿ ಅನೇಕ ಜಲಾಂತರ್ಗಾಮಿಗಳು ಹಾಗೂ ಯುದ್ಧ ನೌಕೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಇದೂ ಸಾಲದೇ, ಭಾರತ – ಶ್ರೀಲಂಕಾದ ಸರಕು ಸಾಗಾಣಿಕೆಗೆ ತಡೆಯೊಡ್ಡಬಲ್ಲಂತಹ ಬೃಹತ್ ಹಾಗೂ ದಟ್ಟಣೆಯಿರುವ ಸಾರಿಗೆ ಮಾರ್ಗಗಳನ್ನು ಖರೀದಿಸಿದೆ.” ಎಂದು ಹೇಳಿತ್ತು. ಭಾರತದಲ್ಲಿ ತಯಾರಾಗುವ ‘ಹುಂಡೈ’ ಕಾರುಗಳು ಈಗ ಶ್ರೀಲಂಕಾದ ಇದೇ ಬಂದರಿನಲ್ಲಿ ನಿಲ್ಲಿಸಲಾಗುತ್ತಿದ್ದು, ಭಾರತ ಸಾಕಷ್ಟು ತೆರಿಗೆಯನ್ನೂ ಪಾವತಿಸಬೇಕಾಗಿದೆ.

ಚೀನಾದ ಕಾರ್ಯತಂತ್ರವಿರುವುದೇ ಹೀಗೆ! ಈ ಶ್ರೀಲಂಕಾದ ಬಂದರಿನ ಮೂಲಕ, ಹಿಂದೂ ಮಹಾಸಾಗರದ ಮೇಲೆ ಪ್ರಾಬಲ್ಯ ಸಾಧಿಸಿ, ಕೊನೆಗೆ ಪಾಕಿಸ್ಥಾನದ ಸಹಕಾರದಿಂದ ಸೌಥ್ ಆಫ್ರಿಕಾದವರೆಗೂ ತನ್ನ ಸೇನಾ ನೆಲೆಯನ್ನು ವಿಸ್ತರಿಸುವ ಯೋಜನೆ ಹೊಂದಿದೆ ಚೀನಾ! ಚೀನಾದ ಮುಖ್ಯ ಉದ್ದೇಶವೆಂದರೆ, ಬಾಂಗ್ಲಾದೇಶ, ಮಯನ್ಮಾರ್, ಮಲೇಷಿಯಾ ಹಾಗೂ ಶ್ರೀಲಂಕಾವನ್ನು ಬಳಸಿ ಭಾರತವನ್ನು ಸುತ್ತುವರೆದು, ನಂತರ ಪಾಕಿಸ್ಥಾನದ ಸಹಾಯ ಪಡೆದು ಪಶ್ಚಿಮಕ್ಕೆ ಸಾಗ ಬಯಸಿದೆ ಡ್ರ್ಯಾಗನ್!

ಚೀನಾದ ಪ್ರಾಬಲ್ಯ ತಡೆಯಲು ಭಾರತಕ್ಕೆ ಅನಿವಾರ್ಯವಾದ್ದರಿಂದ ವಿಮಾನ ನಿಲ್ದಾಣವನ್ನು ಖರೀದಿಸಲೇ ಬೇಕಾಯಿತಷ್ಟೇ! ಇದರ ಜೊತೆಗೆ, ನರೇಂದ್ರ ಮೋದಿ ಸಹ ಪರಿಸ್ಥಿತಿಗೆ ತಕ್ಕ ಹಾಗೆ ಚಾಣಾಕ್ಷತೆಯಿಂದ, ಜಪಾನಿನ ಸಹಾಯದಿಂದ ಭಾರತದ ಆಡಳಿತದ ಅಡಿಯಲ್ಲಿರುವಂತಹ ಹೊಸದಾದ ಸಮುದ್ರ ಮಾರ್ಗವನ್ನೂ ನಿರ್ಮಿಸುವ ಯೋಜನೆಯನ್ನು ಮುಂದಿಟ್ಟಿದ್ದಾರೆ. ಪ್ರಧಾನಿಯ ನಿರ್ಧಾರವೊಂದು ಸಂಪೂರ್ಣವಾಗಿ ಹಿಂದೂ ಮಹಾಸಾಗರವನ್ನು ಹಿಡಿತದಲ್ಲಿಟ್ಟುಕೊಳ್ಳಲಿದೆ. ಇಷ್ಟು ವರ್ಷಗಳೂ ಕೂಡ, ಕಾಂಗ್ರೆಸ್ ನ ನಿರ್ಲಕ್ಷ್ಯದಿಂದ ಹಿಂದೂ ಮಹಾಸಾಗರದ ಮೇಲೆ ತನ್ನ ಹಿಡಿತವನ್ನೇ ಕಳೆದುಕೊಂಡಿದ್ದ ಭಾರತ, ಈಗ ಮತ್ತೆ ಮೋದಿ ಸರಕಾರದಿಂದ ಪ್ರಾಬಲ್ಯ ಸಾಧಿಸಲು ಅಣಿಯಾಗಿದೆ!

– ಅಜೇಯ ಶರ್ಮಾ

Tags

Related Articles

Close