ಅಂಕಣ

ಜಯಲಲಿತಾರನ್ನು ಯಥಾವತ್ತಾಗಿ ನಕಲು ಮಾಡಿದ ಸಿದ್ಧರಾಮಯ್ಯ ಇದೊಂದನ್ನು ನಕಲು ಮಾಡಬಾರದಿತ್ತು ನೋಡಿ!!!

ಕನ್ನಡ ಪರ ಹೋರಾಟಗಾರರು ಕನ್ನಡ ಕನ್ನಡ ಎಂದು ಹೋರಾಟ ಮಾಡಿದ್ದೇ ಬಂತು. ಈ ಕನ್ನಡಪರ ಸಂಘಟನೆಗಳಿಗೆ ಕರ್ನಾಟಕದ ಪರ ಇರುವ ಕಾಳಜಿ
ಒಂಚೂರಾದ್ರೂ ಸಿದ್ದರಾಮಯ್ಯನವರಿಗೆ ಇದ್ದಿದ್ರೆ ಕನ್ನಡಿಗರಿಗೆ ಇಂಥದೊಂದು ಅನ್ಯಾಯ ಆಗಲು ಸಾಧ್ಯವೇ ಇರ್ತಿರಲಿಲ್ಲ. ಕನ್ನಡದ ಹೆಸರಲ್ಲಿ ಜನರ ಭಾವನೆಗೆ ಬೆಂಕಿ ಇಟ್ಟು ಚೆಂದ ನೋಡುವುದನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಕಲಿಯಬೇಕು…

ಕರ್ನಾಟಕದ ಕಾವೇರಿ ನೀರು ತಮಿಳುನಾಡಿಗೆ, ಕರ್ನಾಟಕದ ಉದ್ಯೋಗ ತಮಿಳುನಾಡಿನ ಜನರಿಗೆ, ತಮಿಳುನಾಡಲ್ಲಿ ಕನ್ನಡ ಮಾತಾಡಿದ್ರೆ ಪಾಪ ಕನ್ನಡಿಗರು ಪೆಟ್ಟು ತಿನ್ನಬೇಕು. ಕರ್ನಾಟಕದಲ್ಲಿ ತಮಿಳು ಸಿನಿಮಾಕ್ಕೆ ಅವಕಾಶ, ಆದರೆ ಅದೇ ತಮಿಳುನಾಡಲ್ಲಿ ಕನ್ನಡ ಸಿನಿಮಾ ಮಂದಿರಾಗಳಿಗೆ ಬೆಂಕಿ… ಕರ್ನಾಟಕದ ಬಸ್‍ಗಳಿಗೆ ತಮಿಳುನಾಡಲ್ಲಿ ಕಲ್ಲು ತೂರಾಟ… ಅಯ್ಯಯ್ಯೋ… ಕರ್ನಾಟಕದ ಜನರು ಕನ್ನಡ ಭಾಷೆ, ನಾಡು, ನೆಲ, ಸಂಸ್ಕøತಿಗಾಗಿ ಹೋರಾಡಿದ್ದೇ ಹೋರಾಡಿದ್ದು… ಆದ್ರೆ ಸಿದ್ದರಾಮಯ್ಯ ಸರಕಾರ ಕರ್ನಾಟಕಕ್ಕೆ ಏನು ಕೊಟ್ಟಿದೆ? ನೀವು ತಮಿಳರೊಂದಿಗೆ ಬಡಿದಾಡುತ್ತಾ ಸಾಯ್ತಾ ಇರಿ… ನಾವು ಮಾತ್ರ ಕರ್ನಾಟಕದವರಿಗೆ ಏನನ್ನೂ ಕೊಡುವುದಿಲ್ಲ, ಏನಿದ್ರೂ ತಮಿಳರಿಗೇ ಕೊಟ್ಟುಬಿಡ್ತೀವಿ ಎಂಬ ನಿಲುವಿಗೆ ಅಂಟಿಬಿಟ್ಟಿದ್ದಾರೆ ಈ ಸಿದ್ದರಾಮಯ್ಯ…!!!

ಇಂದಿರಾ ಕ್ಯಾಂಟೀನ್……..!!!!

ಈ ಕ್ಯಾಂಟೀನ್ ಬಡವರ ಹಸಿವನ್ನು ನೀಗಿಸಲು ಮಾಡಿದ ಒಂದು ದೊಡ್ಡ ಉಪಕಾರ ಎಂದೇ ಬಣ್ಣಿಸಲಾಗಿತ್ತು. ಆದರೆ ಈ ಕ್ಯಾಂಟೀನ ಹೆಸರಲ್ಲಿ ಎಷ್ಟು ದೊಡ್ಡ
ಗೋಲ್‍ಮಾಲ್ ನಡೆದಿದೆ, ಕ್ಯಾಂಟೀನ್‍ನಲ್ಲಿ ಕನ್ನಡಿಗರಿಗೆ ಎಷ್ಟು ಅನ್ಯಾಯವಾಗಿದೆ ಎಂದರೆ ಕ್ಯಾಂಟೀನ್ ವಿರುದ್ಧ ಕನ್ನಡಿಗರು ಬೀದಿಗಿಳಿಯುವ ದಿನಗಳು ದೂರವಿಲ್ಲ ಎನಿಸುತ್ತದೆ.

ತಮಿಳುನಾಡಿನ ಮುಖ್ಯಮಂತ್ರಿ ದಿವಂಗತ ಜಯಲಲಿತಾರವರ ಐಡಿಯಾವನ್ನು ಯಥಾವತ್ತಾಗಿ ಕಾಪಿ ಮಾಡಿದ ಸಿದ್ದರಾಮಯ್ಯನವರು, ಜಯಲಲಿತಾರಂತೇ
ಸ್ಥಳೀಯರಿಗೆ(ಕನ್ನಡಿಗರಿಗೆ) ಆದ್ಯತೆ ಕೊಡುವುದನ್ನೇ ಮರೆತುಬಿಟ್ಟರು. ಜಯಲಲಿತಾರ ಅಮ್ಮ ಕ್ಯಾಂಟೀನಿನ ನಿರ್ಮಾಣದಿಂದ ಹಿಡಿದು ನಿರ್ವಹಣೆಯವರೆಗೆ ಪ್ರತಿ
ಹಂತದಲ್ಲೂ ತಮಿಳರಿಗೆ ಮಣೆ ಹಾಕಲಾಗಿತ್ತು. ಆದರೆ ಈ ಸಿದ್ದರಾಮಯ್ಯ ಮಾಡಿದ್ದೇನು?

ಕರ್ನಾಟಕದಲ್ಲಿ 8 ರಿಂದ 9 ಲಕ್ಷ ರೂ.ದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿಕೊಡುತ್ತೇವೆಯೆಂದು ಕನ್ನಡಿಗರು ಮುಂದೆ ಬಂದಿದ್ದರೂ, ಸುಮಾರು 28 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ತಮಿಳುನಾಡಿನ ಸಂಸ್ಥೆಗೆ ಸಿದ್ದರಾಮಯ್ಯ ಸರಕಾರ ಗುತ್ತಿಗೆ ಕೊಟ್ಟಿದಾದರೂ ಏಕೆ..?? ಒಂದು ಕ್ಯಾಂಟೀನ್‍ಗೆ ಬರೋಬ್ಬರಿ 20 ಲಕ್ಷ ರೂ. ಖರ್ಚು ಮಾಡಿದಾದ್ದರೂ ಏಕೆ? ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಕನ್ನಡಿಗರನ್ನು ಕಡೆಗಾಣಿಸಿದಾದರೂ ಏಕೆ? ಕರ್ನಾಟಕ ಸರ್ಕಾರಕ್ಕೆ ಕನ್ನಡಿಗರ ಹಿತಕ್ಕಿಂತ ತಮಿಳರ ಹಿತ ಮುಖ್ಯವಾದದ್ದು ಏಕೆ?

ಇಂತಹಾ ಗಂಭೀರ ಪ್ರಶ್ನೆಗಳು ಹುಟ್ಟಲಾರಂಭಿಸಿದ್ದು, ಕನ್ನಡಿಗರು ಈ ಪ್ರಶ್ನೆಗಳನ್ನು ಕೇಳಲು ಖಂಡಿತವಾಗಿಯೂ ಬೀದಿಗಿಳಿಯಬೇಕಾಗಿದೆ.

ಇಂದಿರಾ ಕ್ಯಾಂಟಿನ್ ಹಗರಣದಲ್ಲಿ ಸಿದ್ದರಾಮಯ್ಯ, ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ನೇರವಾಗಿ ಪಾಲ್ಗೊಂಡಿದ್ದಾರೆ. ಅವರಿಗೆ ಯೋಜನೆಯ ಹೊಣೆಗಾರಿಕೆ ಹೊತ್ತುಕೊಂಡಿರುವ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಮತ್ತು ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್ ರಾಜನ್ ನೆರವಾಗುತ್ತಿದ್ದಾರೆ. ಇವರ ವಿರುದ್ಧ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್ ದೂರು ದಾಖಲಿಸಲಾಗಿದೆ, ತನಿಖೆ ನಡೆಸಲು ಲೋಕಾಯುಕ್ತಕ್ಕೂ ದೂರು ಸಲ್ಲಿಸಲಾಗಿದೆ ಎಂದು ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ಕಳೆದ ಜುಲೈಯಲ್ಲೇ ಆರೋಪಿಸಿದ್ದರು.

ಈ ಯೋಜನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಕೆ.ಜೆ. ಜಾರ್ಜ್ ಹಣ ಮಾಡಲು ಹೊರಟಿದ್ದಾರೆ. ಯಾವುದೇ ಕಾಮಗಾರಿ ವಹಿಸುವುದಕ್ಕೂ ಮುನ್ನ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಆದರೆ, ನೇರವಾಗಿ ಕ್ಯಾಂಟೀನ್ ಕಟ್ಟಡ ನಿರ್ವಣೆಯನ್ನು ಕೆಇಎಫ್ ಇನ್ಪ್ರಾಸ್ಟ್ರಕ್ಚರ್ ಸಂಸ್ಥೆಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಅಲ್ಲದೆ, 9- 10 ಲಕ್ಷ ರೂ. ವೆಚ್ಚದಲ್ಲಿ ನಿರ್ವಿ?ಸಬಹುದಾದ ಕ್ಯಾಂಟೀನ್ ಕಟ್ಟಡಕ್ಕೆ 28.5 ಲಕ್ಷ ರೂ. ನೀಡಲಾಗುತ್ತಿದೆ. ಇದನ್ನು ಗಮನಿಸಿದರೆ ಕಟ್ಟಡ ನಿರ್ಮಾಣ ಕಾಮಗಾರಿ ವಹಿಸುವಲ್ಲಿ ಅಕ್ರಮ ನಡೆದಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ರಮೇಶ್ ಗಂಭೀರ ಆರೋಪ ಮಾಡಿದ್ದು, ಇದನ್ನು ನಿರಾಕರಿಸಿ ಸಿದ್ದು ಪ್ರತಿಕ್ರಿಯೆಯನ್ನೂ ನೀಡಿದ್ದರು. ಅಂದು ರಮೇಶ್ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿದ್ದರೆ ಇಂದು ಕನ್ನಡಿಗರಿಗೆ ಖಂಡಿತಾ ಅನ್ಯಾಯವಾಗುತ್ತಿರಲಿಲ್ಲ.

ಕರ್ನಾಟಕದಲ್ಲಿ ಕಡಿಮೆ ಖರ್ಚಿನಲ್ಲಿ ಇಂದಿರಾ ಕ್ಯಾಂಟೀನ್ ಘಟಕಗಳನ್ನು ನಿರ್ಮಿಸಲು ಸಾಧ್ಯವಿದ್ದರೂ ತಮಿಳುನಾಡಿನ ಕೃಷ್ಣಗಿರಿಯಲ್ಲಿರುವ ಕೆಇಎಫ್ ಇನ್‍ಫ್ರಾ ಸಂಸ್ಥೆಗೆ ಗುತ್ತಿಗೆ ನೀಡಿರುವುದು, ಕ್ಯಾಂಟೀನ್‍ನ ನಿರ್ವಹಣೆಯ ಹೊಣೆಯನ್ನು ತಮಿಳಿರಿಗೆ ನೀಡಿರುವುದು ಕನ್ನಡಿಗರಿಗೆ ಮಾಡಿದ ಮೋಸವಲ್ಲವೇ?

-ಚೇಕಿತಾನ

Tags

Related Articles

Close