ಪ್ರಚಲಿತ

ಜಿಎಸ್‍ಟಿಯನ್ನು ವಿರೋಧಿಸುವ ವಿರೋಧಿಗಳಿಗೆ ಮೋದಿ ದಾಖಲೆ ಸಮೇತ ಉತ್ತರ ಕೊಟ್ಟಿದ್ದು ಹೇಗೆ ಗೊತ್ತಾ?!

ಭಾರತದಂತಹ ದೊಡ್ಡ ದೇಶದಲ್ಲಿ ಸರಕಾರ ಯಾವುದೇ ಯೋಜನೆ ಅಥವಾ ನಿರ್ಧಾರಗಳನ್ನು ಜಾರಿಗೊಳಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ ಭಾರತದಲ್ಲಿ ನೂರಾ ಇಪ್ಪತ್ತ ಐದು ಕೋಟಿಗಿಂತಲೂ ಹೆಚ್ಚಿನ ಜನರು ವಾಸಿಸುತ್ತಾ ಇದ್ದಾರೆ.

ಸರಕಾರದ ಪ್ರತಿಯೊಂದು ನಿರ್ಧಾರಗಳು ಭಾರತದ ಏಳಿಗೆಗೆ ಸಹಾಯವಾಗಬೇಕು…! “ನಾನು ಪ್ರಧಾನ ಮಂತ್ರಿ ಅಲ್ಲ ,ಭಾರತೀಯರ ಪ್ರಧಾನ ಸೇವಕ” ಎಂದು ಆಡಳಿತ ಆರಂಭಿಸಿದ ಶ್ರೀ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಹೊಂದುತ್ತಿದೆ.

ಆದರೆ ವಿಪರ್ಯಾಸ ಎಂದರೆ ಮೋದಿಯವರ‌ ಪ್ರತಿಯೊಂದು ಯೋಜನೆಗಳನ್ನು ಅಥವಾ ನಿರ್ಧಾರಗಳನ್ನು ದೂರುವವರು ಮತ್ತು ತೆಗಳುವವರು ಇದ್ದಾರೆ. ಮೋದಿಯವರ ಯೋಜನೆಗಳನ್ನು ವಿರೋಧಿಸುವವರು ಭಾರತದ ಏಳಿಗೆಯನ್ನೂ ವಿರೋಧಿಸುತ್ತಾರೆ…!?

ನರೇಂದ್ರ ಮೋದಿಯವರು ನೋಟ್ ಬ್ಯಾನ್ ಮಾಡುವ ಮೂಲಕ ಇಡೀ ಜಗತ್ತನ್ನೇ ನಿಬ್ಬೆರಗಾಗಿಸುವಂತೆ ಮಾಡಿದ್ದರು.
ಯಾಕೆಂದರೆ 125ಕೋಟಿ ಜನರಿರುವ ಈ ದೇಶದಲ್ಲಿ ಇಂತಹ ನಿರ್ಧಾರವನ್ನು ಕೈಗೊಳ್ಳುವುದು ತಮಾಷೆಯ ಮಾತಲ್ಲ.
ಚಲಾವಣೆಯಲ್ಲಿರುವ ದೊಡ್ಡ ಮುಖಬೆಲೆಯ ನೋಟುಗಳಾದ 500 ಮತ್ತು 1000 ನ್ನು ರದ್ದುಗೊಳಿಸುವ ಮೂಲಕ ಲೆಕ್ಕವಿಲ್ಲದಷ್ಟು ಸಾವಿರಾರು ಕೋಟಿ ಕಪ್ಪು ಹಣ ಹೊಂದಿದ್ದ ಭ್ರಷ್ಟರ ಸೊಂಟ ಮುರಿದಿದ್ದರು.

ದೇಶವನ್ನೇ ಕೊಳ್ಳೆ ಹೊಡೆದು ಸಂಪಾದಿಸಿದ ಕಪ್ಪು ಹಣವನ್ನು ಏನೂ ಮಾಡಲಾಗದ ಸ್ಥಿತಿಗೆ ತಂದಿಟ್ಟರು ಮೋದಿಯವರು.
ಸರಕಾರಕ್ಕೆ ತೆರಿಗೆ ಕಟ್ಟದೆ ಸರಕಾರದ ಕಣ್ಣಿಗೆ ಮಣ್ಣೆರಚಿ ಸಂಪಾದಿಸಿದ ಎಲ್ಲಾ ಕಪ್ಪು ಹಣವನ್ನು ಕಾಳಧನಿಕರ ಖಜಾನೆಯಿಂದ ಹೊರಬರುವಂತೆ ಮಾಡಿಬಿಟ್ಟರು…!

ನೋಟ್ ಬ್ಯಾನ್ ಸಮಯದಲ್ಲೂ ಜನಸಾಮಾನ್ಯರು ಏನೂ ತೊಂದರೆ ಪಡದೆ ಎಂದಿನಂತೆ ತಮ್ಮ ದಿನನಿತ್ಯ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ವಿರೋಧಪಕ್ಷಗಳು ಇದೇ ವಿಚಾರವಾಗಿ ಪ್ರತಿಭಟನೆಗಳನ್ನು ಮಾಡಿದ್ದವು.ದೇಶದ ಅಭಿವೃದ್ಧಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಜಾರಿಗೆ ತಂದ ಮೋದಿ ಸರ್ಕಾರ ವಿರೋಧಿಗಳ ಯಾವ ಹೋರಾಟಕ್ಕೂ ಮಣಿಯಲಿಲ್ಲ…!

ಕಂತೆ ಕಂತೆ ಕಪ್ಪು ಹಣವನ್ನು ಕೂಡಿಟ್ಟವರು ಮೋದಿಯವರ ಈ ನಿರ್ಧಾರದಿಂದ ಕಂಗಾಲಾಗಿದ್ದರು.
ಅದಕ್ಕಾಗಿಯೇ ಬಡವರ ಹೆಸರೆತ್ತಿ ಮೋದಿಯವರ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಪ್ರಯತ್ನಿಸಿದ್ದರು…!

ನೋಟ್ ಬ್ಯಾನ್ ಆದ ಎರಡು ದಿನಗಳಲ್ಲಿ ಜನಸಾಮಾನ್ಯರು ಸ್ವಲ್ಪ ಬ್ಯಾಂಕ್ ಗಳಲ್ಲಿ ಪರದಾಡಿದರು.
ಆದರೆ ಭವಿಷ್ಯದ ಭಾರತ ಉತ್ತಮವಾಗಿರುತ್ತದೆ ಎಂದು ಅರಿತ ಎಲ್ಲಾ ಜನಸಾಮಾನ್ಯರು ಮೋದಿ ಸರ್ಕಾರದ ಈ ನಿರ್ಧಾರವನ್ನು ಬೆಂಬಲಿಸತೊಡಗಿದ್ದರು.

ಮೋದಿಯವರ ಎಲ್ಲಾ ನಿರ್ಧಾರಗಳು ಭಾರತದ ಭವಿಷ್ಯವನ್ನು ಉತ್ತಮವಾಗಿರುವಂತೆ ಮಾಡುತ್ತದೆ ಎಂದು ಜನಸಾಮಾನ್ಯನಿಗೂ ಗೊತ್ತಿರುವುದರಿಂದಲೇ ಮೋದಿಯವರನ್ನು ಬೆಂಬಲಿಸುತ್ತಿದ್ದಾರೆ…! ನೋಟ್ ಬ್ಯಾನ್ ಆದ ನಂತರವೂ ಭಾರತದಲ್ಲಿ ಆರ್ಥಿಕ ವ್ಯವಸ್ಥೆ ಅಭಿವೃದ್ಧಿ ಹೊಂದುತ್ತಿರುವುದರಿಂದ ವಿರೋಧಿಗಳು ಪೇಚೆಗೆ ಸಿಲುಕಿದ್ದಾರೆ.
ಅದೇ ರೀತಿ ದೇಶದ ತೆರಿಗೆ ಸುಧಾರಣೆಗಾಗಿ ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ) ಜಾರಿಗೊಳಿಸಿದಾಗಲೂ ಇದೇ ರೀತಿ ವಿರೋಧ ವ್ಯಕ್ತಪಡಿಸಿದ್ದರು ಕೆಲವರು. ದೇಶದ ವಿತ್ತೀಯ ವ್ಯವಸ್ಥೆ ಹಾಳಾಯಿತು,ಬಡವರಿಗೆ ಮತ್ತು ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ ಬಿತ್ತು ,ಉದ್ಯಮಿಗಳಿಗೆ ಎಂದು ಬೊಬ್ಬೆ ಇಡುತ್ತಲೇ ಬಂದಿದ್ದರು ಮೋದಿ ವಿರೋಧಿಗಳು.

ಜಿ ಎಸ್ ಟಿ ಯಿಂದಾಗಿ ಉತ್ಪಾದನಾ ವಲಯಕ್ಕೆ ಭಾರಿ ಹೊಡೆತ ಬೀಳುತ್ತದೆ ಎಂದು ಮೋದಿ ವಿರೋಧಿಗಳು ಜನಸಾಮಾನ್ಯರನ್ನು ಮೋಸಗೊಳಿಸಲು ಪ್ರಯತ್ನಿಸಿತ್ತು. ಆದರೆ ಇದೀಗ ಮೋದಿ ಸರಕಾರ ಜಿ ಎಸ್ ಟಿ ಜಾರಿಗೊಳಿಸಿದ ಮೇಲೂ ಭಾರತದ ಆರ್ಥಿಕ ವ್ಯವಸ್ಥೆಗೆ ಯಾವುದೇ ಧಕ್ಕೆ ಆಗಿಲ್ಲ ಎಂಬುದು ಮತ್ತೆ ಸಾಬೀತಾಗಿದೆ.

ಹೌದು, ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ನೀಡಿದ ವರದಿ ಪ್ರಕಾರ 2017ರ ನವೆಂಬರ್ ನಲ್ಲಿ ಭಾರತದಲ್ಲಿರುವ ಕೈಗಾರಿಕೆಗಳ ಉತ್ಪಾದನೆ ಪ್ರಮಾಣ ಶೇ.8.4 ರಷ್ಟು ಏರಿಕೆ ಕಂಡಿದೆ ಎಂದು ವರದಿ ಮಾಡಲಾಗಿದೆ.
ಈ ಬೆಳವಣಿಗೆ ಕಳೆದ ಎರಡು ವರ್ಷಗಳಲ್ಲೇ ಅಧಿಕ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಪಾರ ಮೊತ್ತದ ಬಂಡವಾಳ ಸರಕು,ಮಧ್ಯಮ ಪ್ರಮಾಣದ ಸರಕು ನಿರ್ಮಾಣ, ಗ್ರಾಹಕ ಸರಕುಗಳ ಉತ್ಪಾದನಾ ಪ್ರಮಾಣ ಹಿಂದಿನ ಸಾಲಿನಲ್ಲಿ ಕಡಿಮೆ ಇತ್ತು. ಆದರೆ ಈಗ ಈ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡಿದೆ. ಪ್ರಸ್ತುತ ಬಂಡವಾಳ ಸರಕುಗಳ ಉತ್ಪಾದನೆ ಪ್ರಮಾಣದಲ್ಲಿ ಶೇ.9.4 ಹಾಗೂ ನಿರ್ಮಾಣ ಸರಕುಗಳ ಉತ್ಪಾದನೆಯಲ್ಲಿ ಶೇ.13.5ರಷ್ಟು ಏರಿಕೆಯ ಸಹಕಾರದೊಂದಿಗೆ ಒಟ್ಟು ಏರಿಕೆ ಕಂಡುಬಂದಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.

ಜಿ ಎಸ್ ಟಿ ಜಾರಿಗೊಳಿಸಿದ ನಂತರ ಉತ್ಪಾದನಾ ಮಟ್ಟದಲ್ಲಿ ಹಿಂದೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ‌ ಕಂಡುಬಂದಿದೆ…! ಈ ಮೂಲಕ ಮತ್ತೆ ಮೋದಿಯವರ ವಿರೋಧಿಗಳ ಬಾಯಿಮುಚ್ಚುವಂತಾಗಿದೆ…!
–ಅರ್ಜುನ್

Tags

Related Articles

Close