ಅಂಕಣ

ತಾನು ಹುಲಿಯ ವಂಶದಲ್ಲಿ ಹುಟ್ಟಿದವನು ಎಂದು ಬೋಂಗು ಬಿಟ್ಟ ರಮಾನಾಥ ರೈಯವರೇ ನನ್ನ ಪ್ರಶ್ನೆಗಳಿಗೆ ಉತ್ತರಿಸಿ ನೀವು ಹುಲಿಯೋ ಇಲಿಯೋ ಎಂದು ಸಾಬೀತುಪಡಿಸಿ!

ನಾನು ಹುಲಿಯ ವಂಶದಲ್ಲಿ ಹುಟ್ಟಿದವನು ಎಂದು ಹೇಳುವ ರಾಜ್ಯ ಸಚಿವ ರಮಾನಾಥ ರೈ ನಿಜವಾಗಿಯೂ ಹುಲಿಯೋ ಅಥವಾ ಇನ್ಯಾವುದೋ ಪ್ರಾಣಿಯೋ
ಎನ್ನುವುದನ್ನು ಸ್ಪಷ್ಟಪಡಿಸಬೇಕು. ಯಾಕೆಂದರೆ ರಮಾನಾಥ ರೈ ಪ್ರತಿನಿಧಿಸುವ ಸ್ವಕ್ಷೇತ್ರದಲ್ಲಿಯೇ ಏನಾಗುತ್ತಿದೆ? ತನ್ನ ಮನೆಯ ಪರ್ಲಾಂಗು ದೂರದಲ್ಲಿ ರೌಡಿಗಳು ಪರಸ್ಪರ ಗ್ಯಾಂಗ್‍ವಾರ್ ನಡೆಸಿ ಹೆಣªಗಿ ಮಲಗುತ್ತಾರೆಂದರೆ ಜಿಲ್ಲೆಯ ಶಾಂತಿ ಸುವ್ಯವಸ್ಥೆ ಎಷ್ಟೊಂದು ಎಕ್ಕುಟ್ಟಿಹೋಗಿದೆ ಎನ್ನುವುದು ಸಾಬೀತಾಗಿದೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ರಮಾನಾಥ ರೈ ಅವರ ಬಂಟ್ವಾಳ ಕ್ಷೇತ್ರದಲ್ಲಿ ಕೊಲೆಗೋಡಾದವರ ಸಂಖ್ಯೆ ಬರೋಬ್ಬರಿ ನಾಲ್ಕು..!!! ತನಗೆ ರಾಜ್ಯದ ಗೃಹಮಂತ್ರಿ ಸ್ಥಾನ ಕೊಡಬೇಕೆಂದು ಅಂಗಲಾಚುವ ರೈಗೆ ತನ್ನ ಕ್ಷೇತ್ರದಲ್ಲಿಯೇ ಶಾಂತಿ ಕಾಪಾಡಲು ಸಾಧ್ಯವಾಗದೇ ಇರುವಾಗ ಇನ್ನು ರಾಜ್ಯದ ಗೃಹಮಂತ್ರಿಯಾದರೆ ಯಾವ ಮಣ್ಣಂಗಟ್ಟಿ ಮಾಡ್ತಾರೆ ಎಂದು ಸ್ವತಃ ರೈಗಳೇ ಸಾಬೀತುಪಡಿಸಬೇಕು…

ರೈಗಳೇ ಮೊನ್ನೆ ನಿಮ್ಮ ಕ್ಷೇತ್ರವಾದ ಬಂಟ್ವಾಳದ ಮನೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಏನಾಯಿತು ಗೊತ್ತೇ… ರೌಡಿಗಳು ಗ್ಯಾಂಗ್ ಮಚ್ಚು ಝಳಪಿಸಿ ಇಬ್ಬರು ರೌಡಿಗಳು ಬೀದಿಹೆಣವಾದರು. ಈ ಕೊಲೆ ನಡೆಯುವ ಮುಂಚೆ ನಿಮ್ಮದೇ ಕ್ಷೇತ್ರದಲ್ಲಿಯೇ ಎರಡು ಭೀಕರ ಕೊಲೆಗಳು ನಡೆದವು. ಈ ಕೊಲೆಯಿಂದ ಜಿಲ್ಲೆ ಯಾವ ರೀತಿ ಹೊತ್ತಿ ಉರಿದಿತ್ತು ಎಂದು ನಮಗಿಂತ ಚೆನ್ನಾಗಿ ನಿಮಗೆ ಗೊತ್ತಿದೆ. ಆ ಬಳಿಕವಾದ್ರೂ ನಿಮ್ಮ ಕ್ಷೇತ್ರದಲ್ಲಿ ಶಾಂತಿ ನೆಲೆಸಲು ರಮನಾಥ ರೈಗಳು ಮಾಡಿದ್ದು ಮಾತ್ರ ಶೂನ್ಯ…. ನಿಮ್ಮ ಕ್ಷೇತ್ರದಲ್ಲಿ ಇಬ್ಬರು ನಟೋರಿಯಸ್ ರೌಡಿಗಳು ರಸ್ತೆ ಬದಿಯಲ್ಲೇ ಕಚ್ಚಾಡಿ ಹೆಣವಾಗಿ ಮಲಗಿದರಲ್ಲ… ಈ ಒಂದು ಘಟನೆಯೇ ನಿಮ್ಮ ಕ್ಷೇತ್ರ ಯಾವ ರೀತಿ ಕೆಟ್ಟು ಕೆರಾ ಹಿಡಿದಿದೆ ಎನ್ನುವುದಕ್ಕೆ ಸಾಕ್ಷಿ. ಬಂಟ್ವಾಳದ ರಾಷ್ಟ್ರೀಯ ಹೆದ್ದಾರಿ 75ರ ಪ್ರದೇಶದ ಫರಂಗಿಪೇಟೆಯ ಬಳಿ ನಡೆದ ರೌಡಿಗಳ ಅಟ್ಟಹಾಸ ನೋಡಿದರೆ ಪೊಲೀಸ್ ಇಲಾಖೆ ಸಂಪೂರ್ಣವಾಗಿ ಕಂಬಳಿ ಹೊದ್ದು ಮಲಗಿದೆಯೋ ಅಥವಾ ರೈಗಳೇ ಪೊಲೀಸ್ ಇಲಾಖೆಯನ್ನು ಕಂಬಳಿ ಕೊಟ್ಟು ಮಲಗಿಸಿದ್ದಾರಾ ಎನ್ನುವ ಸಂಶಯ ಹುಟ್ಟುತ್ತದೆ.

ಕೊಲೆ, ಕೊಲೆಯತ್ನ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಟೋರಿಯಸ್ ರೌಡಿಶೀಟರ್‍ಗಳಿಬ್ಬರನ್ನು ವಿರೋಧಿ ತಂಡವೊಂದು ಮಾರಕಾಸ್ತ್ರಗಳಿಂದ ಕಡಿದು
ಕೊಲೆಗೈದಿರುವ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಪೆÇಲೀಸ್ ಹೊರಠಾಣೆ ಸಮೀಪವೇ ನಡೆದಿದೆ. ಅಡ್ಯಾರ್‍ಕಟ್ಟೆ ನಿವಾಸಿ ರಿಯಾಝ್ ಯಾನೆ ಝಿಯಾ(32) ಮತ್ತು ಅಡ್ಯಾರ್ ಬಿರ್ಪುಗುಡ್ಡೆ ನಿವಾಸಿ ಫಯಾಝ್ ಯಾನೆ ಪಯ್ಯ(27) ರಸ್ತೆಮಧ್ಯೆಯೇ ಹೆಣವಾಗಿ ಮಲಗಿದ್ದಾರೆ. ರೌಡಿ ಕಾಳಗದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅನೀಷ್, ಮುಸ್ತಾಕ್ ಹಾಗೂ ಅಜ್ಮಲ್ ಎಂಬವರು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆಗೀಡಾದವರ ವಿರೋಧಿ ಗ್ಯಾಂಗ್‍ನವರು ಈ ಕೊಲೆಯನ್ನು ಎಸಗಿದ್ದಾರೆ ಎನ್ನುವುದು ಪೊಲೀಸರ ಅಂಬೋಣ.

ಈಗ ನಾನು ಕೇಳುವ ರೈಯವರಿಗೆ ಕೇಳುವ ಪ್ರಶ್ನೆಗಳಿವು!!

ನಟೋರಿಯಸ್ ಗ್ಯಾಂಗ್ ಒಂದನ್ನು ವಿರೋಧಿ ಪಡೆ ಕಣ್ಣೂರಿನಿಂದಲೇ ಬೆನ್ನತ್ತಿಕೊಂಡು ಬಂದಿದೆ. ಕಣ್ಣೂರಿನಿಂದ ಫಂಗಿಪೇಟೆಯವರೆಗೂ ಬೆನ್ನತ್ತಿಕೊಂಡು ಬಂದಿರುವ ಮಾಹಿತಿ ಯಾವುದೇ ಗುಪ್ತಚರ ಇಲಾಖೆಗೆ ಸಿಕ್ಕಿಲ್ಲ, ಅಥವಾ ಖಬರಿಗಳಿಂದಲೂ ಪೊಲೀಸರಿಗೂ ಮಾಹಿತಿ ಸಿಕ್ಕಿಲ್ಲ ಅಂದ್ರೆ ಪೊಲೀಸ್ ಇಲಾಖೆ ಯಾವ ರೀತಿ ನಿದ್ದೆಯಿಂದ ಮಲಗಿದೆ ಎನ್ನುವುದಕ್ಕೆ ಸಾಕ್ಷಿ… ಸ್ವತಃ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ರೈಯವರು ಇದಕ್ಕೆ ಏನುತ್ತರಿಸುತ್ತೀರಿ?

ಫರಂಗಿಪೇಟೆಯ ಹೆದ್ದಾರಿಯಲ್ಲೇ ರೌಡಿಗಳು ಪರಸ್ಪರ ಕಾಳಗ ನಡೆಸಿ ಒಬ್ಬರು ಇನ್ನೊಬ್ಬರನ್ನು ಅಡ್ಡಅಡ್ಡ ಕಡಿದು ಹೆಣವಾಗಿ ಮಲಗಿಸುತ್ತಿದ್ದರೂ ಪೊಲೀಸರು ಸ್ಥಳಕ್ಕೆ ಬಂದಿರಲಿಲ್ಲ. ಅಲ್ಲದೆ ಜನರು ಮೂಖಪ್ರೇಕ್ಷಕರಂತೆ ನೋಡುವಂತಾಗಿತ್ತು. ರೌಡಿಗಳು ಇನ್ನೊಂದು ಬಣವನ್ನು ಯಾವುದೇ ಭಯವಿಲ್ಲದೆ ಸಿಗಿದು ಹಾಕುತ್ತಿದ್ದಾರೆಂದರೆ ಪೊಲೀಸ್ ಇಲಾಖೆಯನ್ನು ದೂರಬೇಕಾ ಅಥವಾ ಜಿಲ್ಲಾ ಉಸ್ತುವಾರಿ ಸಚಿವರಾದ ರೈಯವರನ್ನು ದೂರಬೇಕಾ…

ರೌಡಿಗಳು ಯಾವುದೇ ಭಯವಿಲ್ಲದೆ ಒಬ್ಬರು ಇನ್ನೊಬ್ಬರನ್ನು ಬಹಿರಂಗವಾಗಿ ಕತ್ತರಿಸುತ್ತಿರುವುದು ಯಾವುದನ್ನು ಸೂಚಿಸುತ್ತದೆ. ರೌಡಿಗಳಿಗೆ ಪೊಲೀಸ್ ಇಲಾಖೆಯ ಭಯವಿಲ್ಲ ಎನ್ನುವುದನ್ನು ಅಥವಾ ಜಿಲ್ಲೆಯ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎನ್ನುವುದನ್ನು ಸೂಚಿಸುತ್ತದಾ? ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಅಲ್ಲದೆ ತನ್ನದೇ ಕ್ಷೇತ್ರದ ಶಾಸಕ ರೈಗಳ ನಿರ್ಲಕ್ಷ್ಯ ಎನ್ನುವುದನ್ನು ಸೂಚಿಸುತ್ತದಾ?

ರೌಡಿಗಳು ದೂರದಿಂದಲೇ ಒಬ್ಬರನ್ನು ಇನ್ನೊಬ್ಬರು ಬೆನ್ನತ್ತಿಕೊಂಡು ಬರುತ್ತಿದ್ದರೂ ಚೆಕ್‍ಪೋಸ್ಟ್ ಬಳಿ ಪೊಲೀಸ್ ತನಿಖೆ ನಡೆಸಿಲ್ಲವೇ ಅಥವಾ ಚೆಕ್‍ಪೋಸ್ಟ್‍ನಲ್ಲಿ ಪೊಲೀಸ್ ಇರಲಿಲ್ಲವೇ? ಗಲಭೆ ಪೀಡಿತ ಪ್ರದೇಶವಾದ ಬಂಟ್ವಾಳದಲ್ಲಿ ಪೊಲೀಸ್ ನಾಕಾಬಂಧಿ ಇರಲಿಲ್ಲವೇ?

ಕಾಳಗ ನಡೆದ ಸ್ಥಳದಲ್ಲಿ ಗಾಂಜಾ ಪೀಡಿತ ಪ್ರದೇಶ ಅಲ್ಲಿ ಗ್ಯಾಂಗ್‍ವಾರ್ ಯಾವಾಗಲೂ ನಡೆಯುತ್ತದೆ ಎಂದು ಪೊಲೀಸ್ ಇಲಾಖೆಯ ಬಳಿ ಸದ್ಯಕ್ಕಿರುವ ಮಾಹಿತಿ. ಈ ಬಗ್ಗೆ ಪೊಲೀಸ್ ಇಲಾಖೆ ಯಾಕೆ ಮುಂಚೆಯೇ ಗಂಭೀರವಾಗಿ ಪರಿಗಣಿಸಿಲ್ಲ?

ಜಿಲ್ಲೆಯ ಪೊಲೀಸ್ ಇಲಾಖೆಯನ್ನು ಸದಾ ಸನ್ನದ್ಧವಾಗಿರುವಂತೆ ನೋಡಿಕೊಳ್ಳುವುದು ಜಿಲ್ಲೆಯ ಉಸ್ತುವಾರಿ ಸಚಿವನ ಜವಾಬ್ದಾರಿ. ಈಗ ದಕ್ಷಿಣ ಕನ್ನಡ ಜಿಲ್ಲೆಯ
ಉಸ್ತುವಾರಿ ರಮಾನಾಥ ರೈ. ಪೊಲೀಸ್ ಇಲಾಖೆಯ ಮಧ್ಯೆ ಹಸ್ತಕ್ಷೇಪ ನಡೆಸುವ ರೈಯವರು ಪೊಲೀಸ್ ಇಲಾಖೆಯನ್ನು ಸನ್ನದ್ಧವಾಗಿರಿಸುವಂತೆ ನೋಡಿಕೊಳ್ಳಿಲ್ಲ ಯಾಕೆ?

ಕೊಲೆಗೀಡಾದವರು ಸ್ವತಃ ಮುಸ್ಲಿಂ ಸಮುದಾಯದವರು. ಸ್ವತಃ ತನ್ನದೇ ಸಮುದಾಯದ ರೌಡಿಗಳಿಂದ ಕೊಲೆಗೀಡಾಗಿದ್ದಾರೆ ಎನ್ನವುದು ಪೊಲೀಸ್ ಇಲಾಖೆಗೂ
ಮಾಹಿತಿ ಇದೆ. ಕೊಲೆ ನಡೆದ ಬಳಿಕ ಯಾವುದೇ ಗಲಾಟೆ ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರವಹಿಸುತ್ತದೆ. ಆದರೆ ಕೊಲೆ ನಡೆದ ಮರುದಿನ ಎಲ್ಲೂ ಕೂಡಾ
ಪೊಲೀಸರು ಕಂಡುಬಂದೇ ಇಲ್ಲ. ರೈಗಳೇ ನಿಜವಾಗಿಯೂ ದಕ್ಷಿಣ ಕನ್ನಡದಲ್ಲಿ ಪೊಲೀಸ್ ಇಲಾಖೆ ಇದೆಯಾ? ಅಥವಾ ನೀವಾಗಿಯೇ ಕಟ್ಟಿಹಾಕಿದ್ದೀರಾ?

ಮುಂಚೆ ಎರಡು ಕೊಲೆ ನಡೆದಿದ್ದರೂ ಎಚ್ಚರಗೊಳ್ಳಲಿಲ್ಲ.. ಯಾಕೆ? ರೈಯವರೇ ನಿಮ್ಮದೇ ಉಸ್ತುವಾರಿ ಇರುವ ಜಿಲ್ಲೆಯಲ್ಲಿ ಸ್ವತಃ ನಿಮ್ಮದೇ ಕ್ಷೇತ್ರದಲ್ಲಿ ಎರಡು ತಿಂಗಳ ಮುಂಚೆ ಎರಡು ಕೊಲೆ ನಡೆದು ಇಡೀ ಜಿಲ್ಲೆಯೇ ಕೋಮುಗಲಭೆಯಲ್ಲಿ ಬೆಂದಿರುವುದು ಗೊತ್ತಿಲ್ಲವೇ? ಎಸ್‍ಡಿಪಿಐ ಕಾರ್ಯಕರ್ತ ಅಶ್ರಫ್ ಕಲ್ಲಾಡಿ ಮತ್ತೊಬ್ಬರು ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ. ಇವೆರಡು ಕೊಲೆ ನಡೆದಿದ್ದರೂ ಮತ್ತೆ ನಡೆದ ಕೊಲೆಯನ್ನು ನಿಮಗೆ ತಪ್ಪಿಸಲು ಸಾಧ್ಯವಿಲ್ಲ. ಕೋಮುಸೂಕ್ಷ್ಮ ಪ್ರದೇಶದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್, ಗುಪ್ತಚರ ಇಲಾಖೆಯನ್ನು ಬಲಪಡಿಸಿವುದು ನಿಮ್ಮ ಹೊಣೆ. ಆದರೆ ಅದನ್ನೆಲ್ಲಾ ಬಿಟ್ಟು ಜುಜುಬಿ ರಾಜಕೀಯ ಮಾಡುತ್ತಿರುವ ನೀವು ಸಚಿವರಾಗಲು ಯೋಗ್ಯತೆ ಇದೆಯೇ… ಎನ್ನುವುದನ್ನು ಉತ್ತರಿಸಿ…

ಆಶ್ರಫ್ ಕಲಾಯಿ ಹತ್ಯೆಯಾದ ಬಳಿಕ ಯಾವುದೇ ಕ್ರೈಂ ನಡೆಯಬಾರದಿತ್ತು. ಅಶ್ರಫ್ ಹತ್ಯೆಯಾದ ಬಳಿಕ ನೀವು ಮಸೀದಿ ಮುಂದೆ ಒಂದಷ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದಿರಿ. ಆದರೆ ಕೆಲವೇ ದಿನಗಳ ಅಂತರದಲ್ಲಿ ಶರತ್ ಮಡಿವಾಳ ಅವರ ಹತ್ಯೆಯಾಯಿತು. ಆದರೆ ಇದಾದ ಬಳಿಕ ಯಾವುದೇ ಕೊಲೆ, ಗಲಭೆ ನಡೆಯಬಾರದಿತ್ತು. ಆದರೆ ನಿಮ್ಮ ಕ್ಷೇತ್ರದಲ್ಲಿ ಏನಾಯಿತು? ರೌಡಿಗಳು ಬೀದಿಬದಿಯಲ್ಲೇ ಗ್ಯಾಂಗ್‍ವಾರ್ ನಡೆಸಿ ಮೃತಪಟ್ಟರು. ಇದು ನಿಮ್ಮ ಕ್ಷೇತ್ರದ ಸ್ಥಿತಿ ಯಾವ ರೀತಿ ತಲುಪಿ ಬಿಟ್ಟಿದೆ ಎನ್ನುವುದಕ್ಕೆ ಸಾಕ್ಷಿ… ರೌಡಿಗಳ ಗಲಾಟೆ ಎಷ್ಟು ಭೀಕರವಾಗಿತ್ತೆಂದು ನೀವು ಅಲ್ಲಿ ಯಾರಾದ್ರೂ ಸ್ಥಳೀಯರಲ್ಲಿ ಕೇಳಿನೋಡಿ…. ನಿಮ್ಮ ಕ್ಷೇತ್ರದಲ್ಲಿಯೇ ರೌಡಿಗಳು ಈತರ ಹೊಡೆದಾಡಿ ಸಾಯುತ್ತಾರೆಂದರೆ ಉಸ್ತುವಾರಿ ಸಚಿವರಾದ ನೀವು ಇದಕ್ಕೆ ಏನು ಉತ್ತರಿಸುತ್ತೀರಿ…?

ನಿಮ್ಮ ಹಗೆ ಏನಿದ್ದರೂ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮಾತ್ರನಾ!!

ನೀವು ಸಾಕಷ್ಟು ಬಾರಿ ಬಂಟ್ವಾಳ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದೀರಿ. ಆದರೆ ನೀವು ಬಂಟ್ವಾಳ ಕ್ಷೇತ್ರಕ್ಕೆ ಮಾಡಿದ ಒಂದಾದರೂ ಮರೆಯಲಾರದಂತ
ಕೊಡುಗೆ ಏನು ಎಂದು ವಿವರಿಸಿ…. ನೀವು ಅಭಿವೃದ್ಧಿ ಮಾಡುವುದನ್ನು ಬಿಟ್ಟು ಬರೀ ವೈಯಕ್ತಿಕ ರಾಜಕಾರಣ ಮಾತ್ರ ಮಾಡಿದ್ದು. ನಿಮ್ಮದೇನಿದ್ದರೂ ಮುಸ್ಲಿಂ ಓಲೈಕೆ ರಾಜಕಾರಣ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ವೈಯಕ್ತಿಕ ಟೀಕೆ ಮಾಡುತ್ತಾ ಕಾಲ ಕಳೆಯುವ ನೀವು ನಿಮ್ಮ ಸಮಯವನ್ನು ಅವರ ವಿರುದ್ಧ ಮಾತಾಡಲು ಮಾತ್ರ ಕಳೆದುಕೊಂಡಿದ್ದೀರಿ.

ಪ್ರಭಾಕರ ಭಟ್ ನಡೆಸುತ್ತಿರುವ ಶಾಲೆಯ ಅನ್ನವನ್ನು ಕಸಿದು ನೀವು ಮಾಡಿದ ಸಾಧನೆಯಾದ್ರೂ ಏನು…? ಇದರಿಂದ ನೀವು ಹಿಂದೂಗಳ ವಿರೋಧ ಕಟ್ಟಿದ್ದಷ್ಟೇ ಅಲ್ಲದೆ ಇದಕ್ಕೆ ಕೆಲವು ಮುಸ್ಲಿಮರೂ ಮುನಿದುಕೊಂಡಿದ್ದಾರೆ. ಯಾಕೆ ಗೊತ್ತೇ ಆ ಶಾಲೆಯಲ್ಲಿ ಕೆಲವು ಮುಸ್ಲಿಂ ಮಕ್ಕಳೂ ವ್ಯಾಸಂಗ ಮಾಡುತ್ತಿದ್ದಾರೆ. ನೀವೆಷ್ಟು ಭಟ್ಟರ ವಿರುದ್ಧ ಧ್ವೇಷ ಸಾಧಿಸಿದರೂ ಅವರ ಶಾಲೆಗೆ ಅನ್ನಕ್ಕೇನೂ ಕೊರತೆಯಾಗಲಿಲ್ಲ. ಯಾಕೆಂದರೆ ನೂರಾರು ಮಂದಿ ಅನ್ನಕ್ಕಾಗಿ ಸಹಾಯ ಮಾಡಿದ್ದಾರೆ. ಆದರೆ ನೀವು ಮಾತ್ರ ಇಡೀ ರಾಜ್ಯದಲ್ಲೇ ಸಣ್ಣವರಾಗಿಬಿಟ್ಟಿರಿ… ರೈಗಳೇ ನಿಮ್ಮದೂ ಒಂದು ಹೃದಯಾನಾ… ನೀವೂ ಒಬ್ರು ಮನುಷ್ಯನಾ…. ಈಗ ನೀವು ಭಟ್ಟರ ವಿರುದ್ಧ ವೈಯಕ್ತಿಕ ಟೀಕೆಗಳಿಗಷ್ಟೇ ನಿಮ್ಮ ಇಡೀ ರಾಜಕಾರಣ ಜೀವನವನ್ನು ಮುಡಿಪಾಗಿಟ್ಟುಕೊಂಡಿರಲ್ಲ. ಅಯ್ಯೋ ನಿಮ್ಮನ್ನು ನೋಡಿ ನಗ್ಬೇಕೋ ಅಳ್ಬೇಕೋ ಗೊತ್ತಾಗ್ತಿಲ್ಲ.

ಅಯ್ಯೋ ರೈಗಳೇ….

ರೈಗಳೇ ನಿಮಗೆ ಖಂಡಿತಾ ನಾಚಿಕೆಯಾಗಲೇಬೇಕು…. ಯಾಕೆ ಗೊತ್ತಾ ಪ್ರಭಾಕರ ಭಟ್ಟರನ್ನು ಬಂಧಿಸ್ಬೇಕು ಬಂಧಿಸ್ಬೇಕು ಸಿಕ್ಕಸಿಕ್ಕಲ್ಲಿ ಭಾಷಣ ಮಾಡುವ ನೀವು ನಿಮಗೆ ಬಂಧಿಸುವ ತಾಖತ್ ನಿಜವಾಗಿಯೂ ಇದೆಯಾ? ನೀವು ಅಂದಿನ ಜಿಲ್ಲಾ ಎಸ್‍ಪಿಯಾಗಿದ್ದ ಭೂಷಣ್ ಬೊರಸೆ ಅವರ ಕಚೇರಿಗೆ ತೆರಳಿ ಭಟ್ಟರನ್ನು ಏಕವಚನದಲ್ಲಿ ನಿಂದಿಸಿ ಅವನನ್ನು ಬಂಧಿಸಿ ಎಂದು ಒತ್ತಡ ಹೇರಿದಿರಿ. ಈ ವಿಡಿಯೋ ಸಾಕಷ್ಟು ವೈರಲ್ ಆಯಿತ್ತಲ್ಲದೆ ನಿಮ್ಮನ್ನು ನೀವು ಸಣ್ಣವರಾಗಿಸಿಕೊಂಡಿರಿ. ಭೂಷಣರಾವ್ ಅವರನ್ನು ಎತ್ತಂಗಡಿ ಮಾಡಿಸಿ ಅವರನ್ನು ಕೆಲಸ ಮಾಡದಂತೆ ಬಿಡುವ ನಿಮ್ಮಂಥಾ ರಾಜಕಾರಣಿಗಳು ಮೊದಲು ಪೊಲೀಸರಿಗೆ ಸರಿಯಾಗಿ ಕೆಲಸ ಮಾಡಲು ಬಿಡ್ತೀರಾ…

ಪ್ರತಿಯೊಂದು ಕೇಸ್ ಕುರಿತು ಠಾಣೆಗೆ ಕರೆ ಮಾಡಿ ಅವನು ನನ್ನ ಜನ ಬಿಟ್ಟು ಬಿಡಿ ಎಂದು ಒತ್ತಡ ಹಾಕಿದರೆ ಪೊಲೀಸರು ಹೇಗಾದ್ರೂ ಕೆಲಸ ಮಾಡ್ತಾರೆ ಸ್ವಾಮಿ? ಇಡೀ ಜಿಲ್ಲೆಯ ಪೊಲೀಸ್ ಇಲಾಖೆ ಕೆಟ್ಟುಕೆರ ಹಿಡಿದು ಹೋಗಿದೆ ಅಂದರೆ ಅದಕ್ಕೆ ಯಾರು ಕಾರಣ. ನಿಷ್ಠಾವಂತ ಪೊಲೀಸರನ್ನು ಎತ್ತಂಗಡಿ ಮಾಡಿ ನಿಮ್ಮ ಕೈಗೊಂಬೆಗಳನ್ನೇ ಆಯ್ಕೆ ಮಾಡುವ ನಿಮ್ಮಂಥ ರಾಜಕಾರಣಿಗಳಿಂದ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಸಾಧ್ಯವೇ?

ತುಳುನಾಡಿನ ಜನರ ವಿರೋಧ ಕಟ್ಟಿಕೊಂಡಿರಿ ರೈಗಳೇ…

ರಮಾನಾಥ ರೈಗಳೇ ನಿಮಗೆ ನಿಜವಾಗಿಯೂ ಏನಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ತುಳುನಾಡಿನ ಆರಾಧ್ಯದೇವರಾದ ದೇಯಿಬೈದೆದಿಗೆ ನೀವು ಹೇಳಿದ್ದೇನು… ದೇಯಿಬೈದೆದಿಯ ಅವಹೇಳನಕಾರಿ ಚಿತ್ರ ತೆಗೆದು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದರ ವಿರುದ್ಧ ಜನತೆ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದರು. ಮೂರ್ತಿಯನ್ನು ಬಿಜೆಪಿಗರು ಹಾಲೆರೆದು ಶುದ್ಧೀಕರಣ ಮಾಡಿಸಿದರು. ಆದರೆ ನೀವು ಇದೇ ಸಂದರ್ಭದಲ್ಲಿ ಮುಸ್ಲಿಮರನ್ನು ಓಲೈಕೆ ಮಾಡುವ ಭರದಲ್ಲಿ ಔಷಧ ವನದ ದೇಯಿಬೈದೆದಿ ಮೂರ್ತಿಗೆ ಹಾಲೆರೆದು ಶುದ್ದೀಕರಿಸಲು ಇದೇನು ವೈದಿಕ ವಿಧಾನಗಳಿಂದ ಪ್ರತಿಸ್ಟಾಪಿಸಲ್ಪಟ್ಟ ಮೂತಿಯಲ್ಲ, ಕಲಾವಿದನ ಪರಿಕಲ್ಪನೆಯಲ್ಲಿ ನಿರ್ಮಾಣವಾದ ಕೆತ್ತನೆ, ದೇಯಿ ಬೈದೆದಿಯ ಮೂಲ ರೂಪವನ್ನು ಯಾರೂ ನೋಡಿದವರಿಲ್ಲ. ಪುತ್ಥಳಿ ಅವಮಾನ ಪ್ರಕರಣದ ಬಳಿಕ ಕೆಲವರು ವನದ ದೇಯಿಬೈದೆದಿ ಮೂರ್ತಿಗೆ ಹಾಲೆರೆದು ಶುದ್ದೀಕರಿಸಿದ್ದು, ಇದರಿಂದ ಏನಾದರೂ ಪ್ರಯೋಜನವಿದೆಯೇ ಎಂದು ಪ್ರಶ್ನಿಸಿದ್ದೀರಿ. ಇದೆಲ್ಲಾ ಅಗತ್ಯವಿತ್ತಾ ರೈಗಳೇ….

ಸೂಲಿಬೆಲೆಯನ್ನು ಅವಹೇಳನ ಮಾಡಿ ನೀವು ಸಾಧಿಸಿದ್ದೇನು?

ಚಕ್ರವರ್ತಿಯನ್ನು ಅವಮಾನಕರ ಪದ ಬಳಕೆ ಮಾಡಿಕೊಂಡು ಹೋಲಿಕೆ ಮಾಡಿ ನೀವು ಗಳಿಸಿದ್ದೇನು. ರಾಜಕಾರಣಿಯಾಗಿ ನೀವು ಇಂಥಾ ಪದ ಬಳಕೆ
ಮಾಡಬಹುದಿತ್ತೇ? ಇಂಥಾ ಹೇಳಿಕೆಯಿಂದ ನೀವು ಎಂಥವರು ಎನ್ನುವುದನ್ನು ಸಮಾಜದ ಮುಂದೆ ತೋರಿಸಿಕೊಂಡಿದ್ದೀರಿ. ನೀವು ಇಂಥಾ ಹೇಳಿಕೆಯಿಂದ
ಸಾಧಿಸಿದ್ದೇನು…

ನಿಮ್ಮ ಪಕ್ಷದವರರಿಗೇ ನಿಮ್ಮನ್ನು ಸಹಿಸಲಾಗ್ತಾ ಇಲ್ಲ ನೀವು ಜನತೆಗೆ ಏನು ಮಾಡಿದ್ದೀರೋ ಬಿಟ್ಟಿದ್ದೀರೋ… ಆದರೆ ನಿಮ್ಮ ಬಗ್ಗೆ ನಿಮ್ಮದೇ ಪಕ್ಷದವರಿಗೇ ನಿಮ್ಮನ್ನು ಸಹಿಸಲಾಗ್ತಾ ಇಲ್ಲ. ಯಾಕೆಂದ್ರೆ ಇತ್ತೀಚೆಗೆ ನಿಮ್ಮ ಸರ್ವಾಧಿಕಾರಿ ಧೋರಣೆ ಮಿತಿಮೀರ್ತಾ ಇದೆ. ಹಿರಿಯ ರಾಜಕಾರಣಿಗಳಾದ ಜನಾರ್ದನ ಪೂಜಾರಿ ನಿಮ್ಮನ್ನು ಸಾಕಷ್ಟು ಬಾರಿ ಟೀಕಿಸಿ ಬುದ್ಧಿ ಹೇಳಿದ್ದಾರೆ. ಮೊನ್ನೆ ನೀವು ಮಕ್ಕಳ ಅನ್ನ ಕಸಿದಾಗ, `ಬಡ ಮಕ್ಕಳ ಕಣ್ಣೀರು ತಟ್ಟದೆ ಬಿಡುವುದಿಲ್ಲ, ಮುಂದಿನ ಬಾರಿ ಗೆಲ್ಬೇಕೂಂತ ಇಲ್ವಾ ನಿನಗೆ…. ತಕ್ಷಣ ಮಕ್ಕಳಿಗೆ ಅನ್ನದ ವ್ಯವಸ್ಥೆ ಮಾಡಿ…’ ಎಂದು ಬೆಂಡೆತ್ತಿದ್ದರು. ಇನ್ನು ನಿಮ್ಮದೇ ಪಕ್ಷದ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟರು ನಿಮ್ಮನ್ನು ಯಾವ ರೀತಿ ನಿಮಗೆ ಮಂಗಳಾರತಿ ಎತ್ತಿದ್ದರು ಎಂದು ನನಗಿಂತ ಚೆನ್ನಾಗಿ ನಿಮಗೆ ಗೊತ್ತಿದೆ. ಇನ್ನು ಕಾಂಗ್ರೆಸ್‍ನ ಹಿರಿಯ ಮುಖಂಡ ಹರಿಕೃಷ್ಣ ಬಂಟ್ವಾಳ್ ಅವರು ನಿಮ್ಮಿಂದಾಗಿ ಕಣ್ಣೀರು ಸುರಿಸಿದ್ದರು. ಹೀಗೆ ಹೇಳಿದರೆ ಸಾಕಷ್ಟು ಮಂದಿ ವಿರೋಧಿಗಳು ನಿಮ್ಮ ಪಕ್ಷದಲ್ಲೇ ಇದ್ದಾರೆ ಎಂದರೆ ಏನರ್ಥ ಸ್ವಾಮೀ…

ಅರವತ್ತರ ನಂತರ ಅರಳುಮರಳಂತೆ… ಅದೇ ರೀತಿ ವರ್ತಿಸುತ್ತಿರುವ ನೀವು ನಿಮ್ಮ ನಾಲಗೆ ನಿಮ್ಮ ಹಿಡಿತದಲ್ಲಿಲ್ಲ. ನಿಮ್ಮ ಕ್ಷೇತ್ರದಲ್ಲೇ ಸಾಲು ಸಾಲು ಕೊಲೆಗಳು
ನಡೆಯುತ್ತಿರುವಾಗ ನೀವು ಉಸ್ತುವಾರಿ ವಹಿಸಿಕೊಂಡ ನಿಮ್ಮ ಜಿಲ್ಲೆಯ ಶಾಂತಿ ಕಾಪಾಡುವುದು ಅಷ್ಟಕ್ಕೇ ಉಂಟು.

ಮುಂದಿನ ಬಾರಿ ನೀವು ಗೆಲ್ಲುವುದು ಅಷ್ಟಕ್ಕೇ ಇದೆ. ಇದರ ಹತಾಶೆಯಿಂದ ಬಾಯಿಗೆ ಬಂದಂತೆ ಹೇಳಿಕೆ ನೀಡುವ ನೀವು ತಾಖತ್ ಇದ್ದರೆ ಮುಂದಿನ ಚುನಾವಣೆಯಲ್ಲಿ ಗೆದ್ದು ತೋರಿಸಿ…

-ಚೇಕಿತಾನ

Tags

Related Articles

Close