ಅಂಕಣ

ತಿರುಮಲದಲ್ಲಿದೆಯಂತೆ ಬಂಗಾರದ ಬಾವಿ! ಹಾಗಾದರೆ ವೆಂಕಟೇಶ್ವರನಿಗೂ ಈ ಬಾವಿಗೂ ಇರುವ ಸಂಬಂಧವಾದರೂ ಏನು?!

ಭಾರತದ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದಾದ ತಿರುಪತಿಯ ತಿರುಮಲ ದೇವಾಲಯವು ಅಸಂಖ್ಯಾತ ಭಕ್ತರ ಪುಣ್ಯಭೂಮಿಯಾಗಿ ರಾರಾಜಿಸುತ್ತಿರುವ ಕ್ಷೇತ್ರ!!! ಏಳು ಬೆಟ್ಟಗಳ ಒಡೆಯ, ಸಂಕಟ ಹರಣ ದೇವನಾದ ಶ್ರೀ ವೆಂಕಟೇಶ್ವರನು ನೆಲೆಸಿರುವ ತಿರುಪತಿ ತಿರುಮಲ ದೇವಸ್ಥಾನವು ಜಗದ್ವಿಖ್ಯಾತವಾದ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿದೆ. ಅಲ್ಲದೇ, ಈ ಕ್ಷೇತ್ರದ ಆರಾಧ್ಯ ದೈವ ಶ್ರೀ ವೆಂಕಟೇಶ್ವರನು ಶ್ರೀನಿವಾಸ, ಬಾಲಾಜಿ, ಗೋವಿಂದ ಹೀಗೆ ಹಲವು ನಾಮಗಳಿಂದ ಪೂಜಿಸಲ್ಪಡುತ್ತಿದ್ದಲ್ಲದೇ ಹಿಂದೂ ಶಾಸ್ತ್ರದ ಪ್ರಕಾರ, ವೆಂಕಟೇಶ್ವರನು ಭಗವಾನ್ ವಿಷ್ಣುವಿನ ಅವತಾರ ಎಂದು ಕರೆಯಲಾಗುತ್ತದೆ!! ಬಾಲಾಜಿಯ ಈ ಸನ್ನಿಧಾನವು ಶ್ರೀ ಸ್ವಾಮಿ ಪುಷ್ಕರಿಣಿ ಎಂಬ ಪವಿತ್ರವಾದ ನೀರಿನ ಕೊಳದ ದಕ್ಷಿಣ ತಟದಲ್ಲಿ ನೆಲೆಗೊಂಡಿದೆ. ಇಂತಹ ಪುಣ್ಯಕ್ಷೇತ್ರದಲ್ಲಿರುವ ಬಂಗಾರದ ಬಾವಿ ಇದೆ ಎನ್ನುವ ವಿಚಾರ ನಿಮಗೆ ಗೊತ್ತೇ??

ತಿರುಮಲ ಬೆಟ್ಟ ಸಮುದ್ರ ಮಟ್ಟದಿಂದ 853ಮೀ ಮತ್ತು ಪ್ರದೇಶದಿಂದ 10,33 ಚದರ ಮೈಲಿ ದೂರದಲ್ಲಿದ್ದು, ಈ ಬೆಟ್ಟವು ಏಳು ಶಿಖರಗಳನ್ನು ಒಳಗೊಂಡಿದೆ!! ಇದು ಆದಿಶೇಷನ ಏಳು ತಲೆಗಳನ್ನು ಪ್ರತಿನಿಧಿಸುವುದರಿಂದ ಶೇಷಾಚಲಂ ಎನ್ನುವ ಹೆಸರು ಗಳಿಸಿದೆ!! ಇಲ್ಲಿರುವ ಏಳು ಶಿಖರಗಳು ಶೇಷಾದ್ರಿ, ನೀಲಾದ್ರಿ , ಗರುಡಾದ್ರಿ , ಅಂಜನಾದ್ರಿ , ವೃಷಭಾದ್ರಿ , ನಾರಾಯಣಾದ್ರಿ ಮತ್ತು ವೆಂಕಟಾದ್ರಿ ಎಂದು ಕರೆಯಲಾಗುತ್ತದೆ. ಇನ್ನು ವೆಂಕಟಾದ್ರಿ (ಸಹ ವೆಂಕಟಾಚಲ ಅಥವಾ ವೆಂಕಟ ಹಿಲ್ ಎಂದು ಕರೆಯಲ್ಪಡುವ) , ಏಳನೇ ಬೆಟ್ಟದ ಮೇಲೆ ಇದ್ದು, ಅದನ್ನು “ಸೆವೆನ್ ಹಿಲ್ಸ್ ದೇವಾಲಯ” ಎಂದು ಕರೆಯಲಾಗುತ್ತದೆ !!

ಬಂಗಾರದ ಬಾವಿ

ಆದರೆ ತಿರುಪತಿ-ತಿರುಮಲದಲ್ಲಿ ಕೇವಲ ಶ್ರೀನಿವಾಸನ ದೇವಾಲಯ ಮಾತ್ರ ಇರುವುದಲ್ಲದೇ, ಇದರ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವಾರು ಪುರಾತನ ಇತಿಹಾಸದ ಹಿನ್ನೆಲೆಯುಳ್ಳ ದೇವಸ್ಥಾನಗಳೂ ಇವೆ. ತಿರುಪತಿಯ ಸುತ್ತಮುತ್ತಲಿನಲ್ಲಿ ಅಲಮೇಲಮ್ಮ ಅಥವಾ ಶ್ರೀ ಪದ್ಮಾವತಿ ದೇವಸ್ಥಾನ, ಶ್ರೀ ಕಪಿಲೇಶ್ವರ, ಇಸ್ಕಾನ್ ಸೇವಾಲಯ, ಶ್ರೀ ಗೋವಿಂದರಾಜ ಸ್ವಾಮಿ ದೇವಸ್ಥಾನ, ಮಂಗಪುರಂನಲ್ಲಿರುವ ಶ್ರೀ ಕಲ್ಯಾಣ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ನಾಗಲಪುರಂನಲ್ಲಿರುವ ವೇದನರಸಿಂಹಸ್ವಾಮಿ ದೇವಾಲಯ, ಅನ್ನಪೂರ್ಣ ಸಮೇತ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯಗಳಿವೆ!! ಅಷ್ಟೇ ಅಲ್ಲದೇ, ತಿರುಮಲ ಸುತ್ತಮುತ್ತ ಶ್ರೀನಿವಾಸ ದೇವಾಲಯ, ಶ್ರೀ ವರಾಹಸ್ವಾಮಿ, ಶ್ರೀ ಅಂಜನೇಯ ಸ್ವಾಮಿ, ಶ್ರೀ ಬೇಡಿ ಆಂಜನೇಯ ಸ್ವಾಮಿ, ತೀರ್ಥಂ ಕೂಡ ಈ ಪ್ರದೇಶದಲ್ಲಿ ಪುಣ್ಯಕ್ಷೇತ್ರಗಳಾಗಿ ವಿರಾಜಮಾನವಾಗಿ ರಾರಾಜಿಸುತ್ತಿದೆ!! ಇನ್ನು ತಿರುಮಲದಲ್ಲಿ ಬಂಗಾರದ ಬಾವಿ ಇರುವ ಪ್ರದೇಶವಾದರೂ ಎಲ್ಲಿದೆ ಎನ್ನುವುದು ಗೊತ್ತೆ??

ವಕುಳಮಾತ

ಹೌದು… ಶ್ರೀದೇವಿ, ಭೂದೇವಿ ಸಮೇತವಾಗಿ ಶ್ರೀ ವೆಂಕಟೇಶ್ವರ ಸ್ವಾಮಿಯು ಲೀಲಾ ಮಾನವ ರೂಪದಲ್ಲಿ ಶ್ರೀ ವೈಕುಂಠಾಧಿಪತಿ ಭೂಲೋಕದಲ್ಲಿ ನೆಲೆಸಿದ್ದಾನೆ. ಆ ಮಹಿಮಾನ್ವಿತವಾದ ಪವಿತ್ರವಾದ ಕ್ಷೇತ್ರವೇ ತಿರುಮಲ ದೇವಾಲಯ. ಶ್ರೀ ವೆಂಕಟಾಚಲ ಕ್ಷೇತ್ರದಲ್ಲಿ ಸಂಚಾರ ಮಾಡುವ ಸಮಯದಲ್ಲಿ ಸ್ವಾಮಿಯ ಅಡುಗೆಯ
ತಯಾರಿಗಾಗಿ ಶ್ರೀ ಮಹಾಲಕ್ಷ್ಮೀ ಒಂದು ತೀರ್ಥವನ್ನು ಏರ್ಪಾಟು ಮಾಡಿದಳು. ಅದನ್ನೇ ಶ್ರೀ ಲಕ್ಷ್ಮೀ ತೀರ್ಥ ಎಂದು ಕರೆಯಲಾಗುತ್ತದೆ!! ಹಾಗೆಯೇ ಭೂದೇವಿಯು ಕೂಡ ಒಂದು ತೀರ್ಥವನ್ನು ಏರ್ಪಾಟು ಮಾಡಿದಳು, ಅದನ್ನು ಭೂತೀರ್ಥ ಎನ್ನುವ ಹೆಸರಿನಿಂದ ಕರೆಯಲಾಗಿದೆ!! ಕಾಲಾಂತರದಲ್ಲಿ ಈ ತೀರ್ಥಗಳೆರಡು ಅದೃಶ್ಯ ನಿಕ್ಷೇಪವಾಯಿತಲ್ಲದೇ, ತದನಂತರದ ಕಾಲದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ವೈಖಾನಸಾಗಮನ ಎಂಬ ಶಾಸ್ತ್ರವನ್ನು ಮಾಡುವ ಸಲುವಾಗಿ ಪ್ರಧಾನ ಅರ್ಚಕನಾದ ಗೋಪಿನಾಥ ಹಾಗು ಆತನ ಸಹಾಯಕ ಆರ್ಚಕನಾದ ರಂಗದಾಸು ಎಂಬ ಸೇವಕ ತಿರುಮಲಕ್ಕೆ ಸೇರಿಕೊಂಡರು. ಆ ಸಂದರ್ಭದಲ್ಲಿ ಕೆಲವು ವಿಸ್ಮಯಕಾರಿ ಘಟನೆಗಳು ನಡೆದವು!!

ತೋಡಮಾನ್ ಚಕ್ರವರ್ತಿ

ಅದೇನೆಂದರೆ, ಶ್ರೀ ಸ್ವಾಮಿಯ ಆರಾಧನೆಗೆ ಅತ್ಯವಶ್ಯಕವಾದ ಪುಷ್ಪಗಳಿಗಾಗಿ ತೋಟವನ್ನು ಬೆಳಸಬೇಕು ಎಂದು ತೀರ್ಮಾನಿಸಿ 2 ಬಾವಿಗಳನ್ನು ನಿರ್ಮಾಣ
ಮಾಡಿದರು. ಆದರೆ ಅದೇ ಸ್ಥಳದಲ್ಲಿ ಪುರಾತನ ಕಾಲದಲ್ಲಿದ್ದ, ಶ್ರೀತೀರ್ಥ ಹಾಗೂ ಭೂ ತೀರ್ಥ ಆ ಸಮಯದಲ್ಲಿ ಬೆಳಕಿಗೆ ಬಂದಿದ್ದಲ್ಲದೇ, ಕೆಲವು ಸಮಯದ ನಂತರ ಆ ರಂಗದಾಸ ಮರಣ ಹೊಂದಿದನು!! ತದ ನಂತರದಲ್ಲಿ ಶ್ರೀತೀರ್ಥ ಹಾಗೂ ಭೂ ತೀರ್ಥ ಎನ್ನುವ 2 ಬಾವಿಗಳು ಶಿಥಿಲಗೊಂಡಿತು. ಆದರೆ, ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸಲು ತೋಟವನ್ನು ನಿರ್ಮಾಣ ಮಾಡಿ ಪುಷ್ಪಗಳನ್ನು ಸರ್ಮಪಿಸಿದ್ದರಿಂದ ಆ ರಂಗದಾಸುವಿಗೆ ಅನಂತರದ ಕಾಲದಲ್ಲಿ ಚಕ್ರವರ್ತಿಯಾಗಿ ಜನಿಸಿ, ಮತ್ತೇ ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಸೇರಿಕೊಂಡನು ಎನ್ನುವುದನ್ನು ಹೇಳಲಾಗಿದೆ!!

ಆದರೆ ಈ ರಂಗದಾಸು ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸಲು ತೋಟವನ್ನು ನಿರ್ಮಾಣ ಮಾಡಿ ಪುಷ್ಪಗಳನ್ನು ಸರ್ಮಪಿಸಿ, ಸ್ವಾಮಿಯನ್ನು ಆರಾಧಿಸುತ್ತಿದ್ದ. ತದನಂತರದ ಕಾಲದಲ್ಲಿ ಆತ ಮರಣವನ್ನು ಹೊಂದಿದ. ತದನಂತರದಲ್ಲಿ ಈತ ತೋಡಮಾನ್ ಚಕ್ರರ್ತಿಯಾಗಿ ಜನ್ಮ ಪಡೆಯುತ್ತಾನೆ!! ತೋಡಮಾನ್ ಚಕ್ರರ್ತಿಯಾಗಿ ಜನಿಸಿದ ರಂಗದಾಸು ಮಹಾನ್ ವೆಂಕಟೇಶ್ವರನ ಭಕ್ತನಾಗಿದ್ದ, ಹಾಗಾಗಿ ಈತನ ಜೀವನದಲ್ಲಿಯೂ ಹಲವಾರು ವಿಸ್ಮಯಗಳು ನಡೆದು ಹೋದವು!! ಹೌದು…. ಮತ್ತೆ ಈ ಜನ್ಮದಲ್ಲಿಯೂ ಕೂಡ ಸ್ವಾಮಿಯನ್ನು ಆರಾಧಿಸುತ್ತಿದ್ದ ಚಕ್ರವರ್ತಿಗೆ ಸ್ವಾಮಿಯು ಕನಸ್ಸಿನಲ್ಲಿ ಬಂದು ತನ್ನ ಪೂರ್ವ ಜನ್ಮದ ವೃತ್ತಾಂತವನ್ನೆಲ್ಲಾ ತಿಳಿಸಿದನು. ಹಾಗೆಯೇ ಸ್ವಾಮಿಯು ಒಂದು ದೇವಾಲಯವನ್ನು ನಿರ್ಮಾಣ ಮಾಡಿ ಅದರ ಮೇಲೆ ಬಂಗಾರದ ವಿಮಾನವನ್ನು ನಿರ್ಮಿಸಿ, ಪೂರ್ವ ಜನ್ಮದಲ್ಲಿ ನಿರ್ಮಾಣ ಮಾಡಿದ ಶ್ರೀ ತೀರ್ಥ ಹಾಗು ಭೂ ತೀರ್ಥವನ್ನು ಮತ್ತೆ ಪುನರ್ ಸ್ಥಾಪಿಸಬೇಕು ಎಂದು ಚಕ್ರವರ್ತಿಗೆ ಆಜ್ಞಾಪಿಸಿದ ಎಂದು ಹೇಳಲಾಗಿದೆ. ತೋಡಮಾನ್ ಚಕ್ರರ್ತಿ ತನ್ನ ಪೂರ್ವಜನ್ಮ ವೃತ್ತಾಂತವನ್ನು ತಿಳಿದ ಆತನು ಆಶ್ಚರ್ಯಚಕಿತನಾಗಿದ್ದಲ್ಲದೇ, ಚಕ್ರವರ್ತಿಯು ಶ್ರೀತೀರ್ಥವನ್ನು ಮತ್ತೆ ಪುನರ್ ಅಭಿವೃದ್ಧಿ ಮಾಡಿ ಅದಕ್ಕೆ ಬಂಗಾರದ ಲೇಪನ ಮಾಡಿಸಿದನು. ಆ ಕಾರಣದಿಂದಾಗಿ ಅಂದಿನಿಂದ ಆ ಕೆರೆಯು ಬಂಗಾರದ ಬಾವಿಯಾಗಿ ಪ್ರಸಿದ್ಧಿ ಪಡೆಯಿತು!!

ಹೂವಿನ ಬಾವಿ

ತನ್ನ ಪೂರ್ವಜನ್ಮ ವೃತ್ತಾಂತವನ್ನು ತಿಳಿದ ತೋಡಮಾನ್ ಚಕ್ರವರ್ತಿಯು ಬಂಗಾರದ ಕೆರೆಯನ್ನು ನಿರ್ಮಾಣ ಮಾಡಿದ. ಹಾಗೆಯೇ ಭೂತೀರ್ಥಕ್ಕೆ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿದ್ದು, ಇದು ಮೆಟ್ಟಿಲ ಬಾವಿ ಎನ್ನುವ ಹೆಸರಿನಿಂದ ಪ್ರಸಿದ್ಧಿ ಪಡೆಯಿತು!! ಆದರೆ ಇದೀಗ ಈ ಮೆಟ್ಟಿಲ ಬಾವಿಯೂ ಹೂವಿನ ಬಾವಿ ಎನ್ನುವ ಹೆಸರಿನಿಂದ ಪ್ರಖ್ಯಾತಿಯನ್ನು ಪಡೆದಿದೆ!! ಕಾಲಾಂತರದಲ್ಲಿ ಆ ಶ್ರೀ ತೀರ್ಥವು ಬಂಗಾರ ಬಾವಿಯಾಗಿ ಹೆಸರು ಪಡೆದಿದ್ದಲ್ಲದೇ, ಸ್ವಾಮಿಯ ಅಡುಗೆ ತಯಾರಿಗೆ, ಅರ್ಚನೆಗೆ ಈ ತೀರ್ಥ ಉಪಯೋಗಿಸುತ್ತಾ ಪ್ರಮುಖವಾದ ಸ್ಥಾನವನ್ನು ಪಡೆಯುತ್ತಿದೆ!!

ಇನ್ನು, ಈ ಬಂಗಾರದ ಬಾವಿ ಇರುವುದು ತಿರುಮಲದ ಯಾವ ಪ್ರದೇಶದಲ್ಲಿ ಎಂದರೆ ಒಂದು ಕ್ಷಣ ಅಚ್ಚರಿಯಾಗಬಹುದು!! ಹೌದು… ಸ್ವಾಮಿಯ ದರ್ಶನದ
ಸಮಯದಲ್ಲಿ ಬಂಗಾರದ ಬಾಗಿಲನ್ನು ತೆರೆಯಲಾಗುತ್ತದೆ!! ಅಲ್ಲಿಂದ ಹೊರಗೆ ಬಂದಾಗ, ಎದುರಿಗೆ ಇರುವ ಅಡುಗೆ ತಯಾರಿಯ ಕೊಠಡಿ ಇದ್ದು, ಅದರ ಎದುರಿಗೆ
ಇರುವ ಮಾರ್ಗದಲ್ಲಿ ಎಂದರೆ ವಕುಳಾದೇವಿಯನ್ನು ದರ್ಶನ ಮಾಡಿಕೊಳ್ಳುವುದಕ್ಕಾಗಿ ಹೋಗುವ ಮಾರ್ಗದಲ್ಲಿರುವುದೇ ಈ ಬಂಗಾರದ ಬಾವಿ!! ಇನ್ನು ಈ ಬಂಗಾರದ ಬಾವಿಯು ಭೂಮಿ ಮಟ್ಟದಿಂದ ಸ್ವಲ್ಪ ಎತ್ತರದಲ್ಲಿದ್ದು, ಇದನ್ನು ಶಿಲ್ಪ ಕೆತ್ತನೆಗೆ ಬಳಸುವ ಕಲ್ಲಿನಿಂದ ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಈ ಕಲ್ಲಿನ ಕಟ್ಟಡದ ಮೇಲೆ ಬಂಗಾರದ ಲೇಪನ ಮಾಡಿರುವ ಬಂಗಾರದ ಬಾವಿಯನ್ನು ಕಾಣಬಹುದಾಗಿದೆ. ಈ ಬಂಗಾರು ಬಾವಿಗೆ ಶ್ರೀ ತೀರ್ಥ, ಸುಂದರಸ್ವಾಮಿ ಬಾವಿ ಎನ್ನುವ ಹೆಸರು ಕೂಡ ಇದೆ.

ಈ ತೋಡಮಾನ್ ಚಕ್ರವರ್ತಿ ಇತಿಹಾಸ ಒಂದುಕಡೆಯಾದರೆ, ಇನ್ನು ತಿರುಮಲದಲ್ಲಿ ಶ್ರೀ ವೆಂಕಟೇಶ್ವರಸ್ವಾಮಿಯ ಮೂಲವಿರಾಟನ ಮೂರ್ತಿಗೆ ಪ್ರತಿ ಶುಕ್ರವಾರದ ದಿನ ಅಭಿಷೇಕ ನಡೆಯುತ್ತದೆ. ಈ ಅಭಿಷೇಕವನ್ನು ತಿರುಮಲನಂಬಿ ಎನ್ನುವ ವ್ಯಕ್ತಿಯು 11 ನೇ ಶತಮಾನದಲ್ಲಿ ಪಾಪವಿನಾಶ ತೀರ್ಥದಿಂದ ಪ್ರತಿನಿತ್ಯ ಈ ಪವಿತ್ರವಾದ ಜಲವನ್ನು ತೆಗೆದುಕೊಂಡು ಸ್ವಾಮಿಗೆ ಅರ್ಪಿಸುತ್ತಿದ್ದರಂತೆ!! ಈ ತಿರುಮಲನಂಬಿ ಎನ್ನುವ ಸ್ವಾಮಿಯ ಭಕ್ತನು, ಭಗವದಾಮಾನುಜಾಲ ಎಂಬುವವನಿಗೆ ಗುರು ಮಾತ್ರವಲ್ಲದೇ ಸ್ವಂತ ಮಾವ ಕೂಡ ಆಗಿದ್ದನು. ಹೀಗೆ ಪ್ರತಿನಿತ್ಯವು ಅಭಿಷೇಕ ಜಲವನ್ನು ಸರ್ಮಪಿಸುತ್ತಾ, ಸೇವಿಸುತ್ತಾ ಇರುವ ಕಾಲದಲ್ಲಿ ತಿರುಮಲದಿಂದ ಗುರುವಾಗಿದ್ದ ಯಾಮನಾಚಾರ್ಯರು ತಿರುಮಲಕ್ಕೆ ತೆರಳಿ ಶ್ರೀನಿವಾಸ ಪ್ರಭುವಿನ ದರ್ಶನ ಭಾಗ್ಯ ಪಡೆದರು ಎನ್ನುವ ಸಮಯದಲ್ಲಿ ಭೀಕರವಾದ ಮಳೆಯು ಸಂಭವಿಸಿತ್ತು!! ಆಗ ತಿರುಮಲದಿಂದ ಪಾಪವಿನಾಶದಿಂದ ಅಭಿಷೇಕ ಜಲವನ್ನು ತೆಗೆದುಕೊಂಡು ಬರಲು ಯಾವುದೇ ವಿಘ್ನ ನಡೆಯಬಾರದು ಎಂದು ಶ್ರೀ ಮಹಾಲಕ್ಷ್ಮೀಯನ್ನು ಪ್ರಾರ್ಥಿಸಿದರಂತೆ!!

ಪ್ರತಿ ಶುಕ್ರವಾರ

ಪ್ರಾರ್ಥಿಸಿದ ಸಂದರ್ಭದಲ್ಲಿ, “ಶ್ರೀನಿವಾಸನ ಅಭಿಷೇಕಕ್ಕೆ ಇತರ ತೀರ್ಥಗಳಿಗಿಂತ ನೀನು ನೆಲೆಸಿರುವ ಶ್ರೀ ತೀರ್ಥಜಲವು ಸರ್ವಶೇಷ್ಟವಾದುದು. ಹಾಗಾಗಿಯೇ ಈ ಜಲವನ್ನು ಇನ್ನು ಮುಂದೆ ಶ್ರೀ ವೆಂಕಟೇಶ್ವರ ಸ್ವಾಮಿಯ ಅಭಿಷೇಕಕ್ಕೆ ಯೋಗ್ಯವಾಗಿರು ತಾಯಿ” ಎಂದು ಯಾಮನಾಚಾರ್ಯರು ಕೇಳಿಕೊಂಡರು. ಹಾಗಾಗಿ ಈ ಬಂಗಾರು ಬಾವಿಯನ್ನು ಸುಂದರವಾದ ಭಗವಂತನ ರೂಪವೇ ಎಂದು ಅದನ್ನು ಸ್ವಾಮಿ ಕೂಪ ಎಂದು ಹೊಸ ನಾಮಕರಣವನ್ನೂ ಕೂಡ ಮಾಡಲಾಯಿತು.

ತಿರುಮಲದಲ್ಲಿ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಮೂರು ಬಾವಿಗಳು ಇವೆ. ಅವುಗಳು, ಸಂಪಂಗಿ ಪ್ರದಕ್ಷಣೆಯಲ್ಲಿ ರಾಮಾನುಜ ಕೂಟಂ, ಹೂವಿನ ಬಾವಿ ಮತ್ತು ಬಂಗಾರದ ಬಾವಿ!! ತಿರುಮಾಮಣಿ ಮಂಟಪದ ಎದುರಿಗೆ ಕಾಣಿಸುವ ಬಾವಿಯೇ ಬಂಗಾರದ ಬಾವಿಯಾಗಿದೆ!! ಇದು ಶ್ರೀ ವೆಂಕಟೇಶ್ವರ ಸ್ವಾಮಿಯ ಎದುರು ಬದಿಯಲ್ಲಿ ಕಾಣಿಸುವ ಈ ಬಾವಿ ಬಂಗಾರದ ಲೇಪನವಿರುವುದರಿಂದ ಇದಕ್ಕೆ ಬಂಗಾರದ ಬಾವಿ ಎಂದು ಖ್ಯಾತಿ ಪಡೆದಿದೆ!! ಹಾಗಾಗಿ ಪುರಾಣಗಳು ಹೇಳುವ ಪ್ರಕಾರ ವೈಕುಂಠದಿಂದ ಭೂಲೋಕಕ್ಕೆ ಬಂದ ಶ್ರೀಮನ್ನಾರಾಯಣನ ಅಡುಗೆಗಾಗಿ ಮಹಾಲಕ್ಷ್ಮೀಯು ಈ ತೀರ್ಥವನ್ನು ಏರ್ಪಾಟು ಮಾಡಿದಳು ಎನ್ನುವ ಈ ಬಾವಿಯು ಸ್ವಾಮಿಯ ಪೂಜೆಗೆ, ನೈವೇದ್ಯಕ್ಕೆ ಬೇಕಾದ ಜಲವನ್ನು ಈ ಬಾವಿಯ ನೀರನ್ನೇ ಉಪಯೋಗಿಸಲಾಗುತ್ತದೆ. ಅಲ್ಲದೇ ಈ ಬಾವಿಯ ಕೆಳಗೆ ವಿರಾಜನದಿ ಹರಿಯುತ್ತಿದೆ ಎಂಬುದು ಪಂಡಿತರ ನಂಬಿಕೆ!! ಈ ಬಾವಿಯಿಂದ ನೀರನ್ನು ಸೇದುವ ಪದ್ಧತಿಯು, ವಿಜಯನಗರದ ರಾಜರ ಕಾಲದಲ್ಲಿನ ಹಂಪಿಯಲ್ಲಿರುವ ಪದ್ಧತಿಯನ್ನು ಹೋಲುವಂತೆ ಇದೆ ಎಂದು ಚರಿತ್ರಕಾರರು ಭಾವಿಸುತ್ತಾರೆ. ಅಷ್ಟೇ ಅಲ್ಲದೇ, ಸ್ವಾಮಿಯ ಅಭಿಷೇಕಕ್ಕೆ ಬಂಗಾರ ಬಾವಿಯ ನೀರನ್ನೇ ಬಳಸುವುದು ಇಲ್ಲಿರುವ ವಿಶೇಷತೆಯನ್ನು ಹೇಳಿಕೊಡುವಂತಿದೆ!!

Source : https://kannada.nativeplanet.com/travel-guide/the-golden-well-tirumala-001793.html

-ಅಲೋಖಾ

Tags

Related Articles

Close