ಇತಿಹಾಸ

ದೆಹಲಿಯ ಕೆಂಪು ಕೋಟೆಯನ್ನು ನಿಜವಾಗಿಯೂ ಕಟ್ಟಿಸಿದವರಾರು ಗೊತ್ತೇ?! ಇತಿಹಾಸದ ಪುಟಗಳು ಮರೆತ ಸತ್ಯಕಥೆ!

ಸುಮಾರು ವರ್ಷಗಳ ಹಿಂದೆ ಭರತಖಂಡದಲ್ಲಿ ಬ್ರಿಟಿಷರು ಮತ್ತು ಮೊಘಲ್ ಸಾಮ್ರಾಜ್ಯಗಳು ಅಧಿಪತ್ಯವನ್ನು ಸ್ಥಾಪಿಸಿದ್ದವು. ಇದರ ಪರಿಣಾಮವಾಗಿ, ನಿಜಾಂಶಗಳು ಮಣ್ಣಿನ ಅಡಿಯಲ್ಲಿ ಸಿಲುಕಿ ಭಾರತದ ಇತಿಹಾಸವನ್ನೇ ಬದಲಾಯಿಸಿ ಬಿಟ್ಟಿತು. ಮೊಘಲರು ಹಿಂದೂಸ್ತಾನದಲ್ಲಿರುವ ಅನೇಕ ಹಿಂದೂ ದೇವಾಲಯಗಳನ್ನು ಕೆಡವಿದ್ದಲ್ಲದೇ ದೇವಾಲಯಗಳಿದ್ದ ಜಾಗದಲ್ಲಿ ಮಸೀದಿಗಳನ್ನು ಕಟ್ಟಿದರು. ಅಷ್ಟೇ ಅಲ್ಲದೇ ಭಾರತದದಲ್ಲಿದ್ದ ಹಿಂದೂ ಸಂಸ್ಕøತಿಯನ್ನು ನಾಶಮಾಡಿ, ಇಸ್ಲಾಂನ್ನು ಬೆಳೆಸಲು ಹರಸಾಹಸಪಟ್ಟಿದ್ದರೂ ಕೂಡ!!!

ಸಾವಿರಾರು ದೇವಸ್ಥಾನಗಳನ್ನು ಮೊಘಲರು ಕೆಡವಿದ್ದಾರೆ!! ಅದರಲ್ಲಿ ರಾಮನಜನ್ಮಭೂಮಿ ಅಯೋಧ್ಯೆ, ಕಾಶಿ ವಿಶ್ವನಾಥ ದೇವಾಸ್ಥಾನ ಹಾಗು ಇನ್ನಿತರ ಹಲವಾರು ದೇವಾಲಯಗಳನ್ನು ಕೆಡವಿದರು ಆ ದುಷ್ಟ ಮೊಘಲರು!!! ಅಷ್ಟು ಮಾತ್ರವಲ್ಲದೇ, ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಜನರನ್ನು ಹಿಂಸಿಸಿ,
ಮತಾಂತರಗೊಳ್ಳಲು ಒಪ್ಪದಿದ್ದವರನ್ನು ನಿಷ್ಠುರವಾಗಿ ಸಾವಿರಾರು ಜನರನ್ನು ಕೊಂದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕನಂತರದಲ್ಲಿ ಕಾಂಗ್ರೆಸ್ ಸರಕಾರ ಮುಂದಿನ ಪೀಳಿಗೆಗೆ ಸುಳ್ಳು ಮಾಹಿತಿಗಳನ್ನು ನೀಡಿತು. ಮುಸ್ಲಿಂ ಓಟಿಗೋಸ್ಕರ ಅದೆಷ್ಟೋ ಇತಿಹಾಸ ಪ್ರಸಿದ್ಧ ಕಟ್ಟಡಗಳನ್ನು ಮೊಘಲರು ಕಟ್ಟಿದರು ಎಂದು ಪಠ್ಯಪುಸ್ತಕಗಳಲ್ಲಿ ಬಿತ್ತರಿಸಲಾಯಿತು.

ಅದರಲ್ಲಿ ದೆಹಲಿಯ ಕೆಂಪುಕೋಟೆಯು ಒಂದು!! ಇವತ್ತು ಜನ ಏನು ತಿಳಿದುಕೊಂಡಿದ್ದಾರೆ ಎಂದರೆ ಶಹಜಹಾನ್ ಕ್ರಿ.ಶ1639 ರಿಂದ 1648ರಲ್ಲಿ ಕಟ್ಟಿದನು ಎಂದು
ಹೇಳಲಾಗುತ್ತೆ. ಅಲ್ಲದೇ, ಇದನ್ನು ಉಸ್ತಾದ್ ಹಮೀದ್ ಮತ್ತು ಉಸ್ತಾದ್ ಅಹ್ಮದ್ ಎನ್ನುವ ಇಬ್ಬರು ವಾಸ್ತುಶಿಲ್ಪಿಗಳು ವಿನ್ಯಾಸಗೊಳಿಸಿದ್ದಾರೆ. ನಿಜಾಂಶವೆಂದರೆ ಈ ಇಬ್ಬರು ವಾಸ್ತುಶಿಲ್ಪಿಗಳು ಮೊಘಲರ ಶೈಲಿಗೆ ಅಲ್ಲಿದ್ದ ವಿನ್ಯಾಸ ಬದಲಾವಣೆಯನ್ನು ಮಾಡಿದ್ದಾರಷ್ಟೇ!!!

ಆಕ್ಸ್‍ಫರ್ಡ್‍ನ ಬೋಡ್ಲಿಯನ್ ಗ್ರಂಥಾಲಯದಲ್ಲಿ ಈ ಕೆಳಗೆ ತೋರಿಸುವ ಚಿತ್ರ ಕಂಡು ಬಂದಿದೆ. ಇದರ ಪ್ರಕಾರ ಕ್ರಿ.ಶ 1628ರಲ್ಲಿ ಶಹಜಹಾನ್ ಪರ್ಷಿಯನ್
ರಾಯಭಾರಿಯಿಂದ ಕೆಂಪುಕೋಟೆಯನ್ನು ಪಡೆದುಕೊಂಡನು ಎಂದು ಹೇಳಲಾಗಿದೆ. ಆದರೆ ಸಾಹಿತ್ಯದ ಪ್ರಕಾರ, ಕೆಂಪುಕೋಟೆಯು ಕ್ರಿ.ಶ 1639ರಲ್ಲಿ ಆರಂಭವಾಯಿತು ಎಂದು ಹೇಳಿದೆ. ಹಾಗಾದರೆ ಹತ್ತುವರ್ಷದ ಮೊದಲೇ ಕೆಂಪುಕೋಟೆಯನ್ನು ಕಟ್ಟಲಾಗಿತ್ತು ಎನ್ನುವುದು ಹೇಗೆ ಸಾಧ್ಯ?? ಇತಿಹಾಸಕಾರರು ಕೆಂಪುಕೋಟೆಯನ್ನು ಕಟ್ಟಿದ್ದು ಯಾರು ಎಂದು ಕೇಳಿದರೆ ಶಹಜಹಾನ್ ಎನ್ನುತ್ತಾರೆ ಆದರೆ ಈ ಪ್ರಶ್ನೆಗೆ ಮಾತ್ರ ಯಾರೂ ಉತ್ತರ ಹೇಳುವುದೇ ಇಲ್ಲ!

ಕೆಳಗಿರುವ ಎರಡನೇ ಚಿತ್ರವನ್ನು ನೋಡಿ, ಇಲ್ಲಿ ಎರಡು ಕತ್ತಿಗಳು ಮೇಲೆಕ್ಕೆತ್ತಿರುವ ಸಂಕೇತವನ್ನು ತೋರಿಸಿರುವ ಮತ್ತು ಹಿಂದೂ ಸಂಪ್ರದಾಯದ ಪ್ರಮುಖ
ಅಂಗವಾಗಿರುವ ಕಳಶವು, ಕಮಲಗಳ ಮೊಗ್ಗಿನಲ್ಲಿ ಇರಿಸಿದ್ದು ಮತ್ತು ಜೋಡಿ ತೂಗುಮಾಪನಗಳು ಇಲ್ಲಿ ಕಾಣುತ್ತದೆ. ಅಲ್ಲದೇ ಇದರ ಹಿಂದೆ ಸೂರ್ಯ ದೇವರ
ಕೆತ್ತನೆಯನ್ನು ನಾವು ಗಮನಿಸಬಹುದು. ಶಹಜಹಾನ್ ಸೂರ್ಯ ದೇವರನ್ನು ಒಳಗೊಂಡ ಚಿತ್ರವನ್ನು ಚಿತ್ರಿಸಿದ್ದಾದರೂ ಯಾಕೆ ಎಂದು ಯಾರಿಗಾಗರೂ ತಿಳಿದಿದೆಯಾ?


ಇದರ ನಿಜವಾದ ಕಾರಣವೆಂದರೆ, ರಾಜ ಅನಾಂಗ್ಪಾಲ್ನನ ಅಧಿಕೃತವಾದ ರಾಜಮನೆತನದ ಲಾಂಛನವೇ ಇದಾಗಿದೆ!!!! ಹಾಗಾದರೆ ಶಹಜಹಾನ್ ಕ್ರಿ.ಶ 1060ರಲ್ಲಿ ಕಟ್ಟಿದ ಕೆಂಪುಕೋಟೆಯನ್ನು, ಶಹಜಹಾನ್ ಅಸ್ತಿತ್ವದ ಸುಮಾರು 1500 ವರ್ಷಗಳ ಹಿಂದೆಯೇ ನಿರ್ಮಿಸಿದ ವ್ಯಕ್ತಿಯಾದರು ಯಾರು??

ಸೂರ್ಯ ದೇವನ ಲಾಂಛನವನ್ನು ನಾವು ಇಲ್ಲಿ ಕಾಣಬಹುದು, ಆದರೆ ಸೂರ್ಯದೇವನ ಲಾಂಛನವನ್ನು ಹೊಂದಿರುವವರು ಸೂರ್ಯವಂಶಸ್ಥರು!! ಇದನ್ನು ನಾವು
ಈಗಲೂ ಕಾಶ್ ಮಹಲ್‍ನ ರಾಜನ ಕೋಣೆಯಲ್ಲಿ ನೋಡಬಹುದಾಗಿದೆ.

ಹೌದು, ಆದರೆ ಕೆಲವು ಅಧ್ಯಯನಗಳ ಪ್ರಕಾರ ಕೆಂಪುಕೋಟೆಯನ್ನು ಶಹಜಹಾನ್ ಕಟ್ಟಿದ್ದಲ್ಲ!!!!

ಇಲ್ಲಿ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಕಲಶ ಮತ್ತು ಕಮಲದ ಎಲೆಗಳನ್ನು ಬಳಸಿಕೊಂಡು ಮಾಡಲಾದ ಸಂಕೇತವಿದೆ. ಚಿತ್ರದಲ್ಲಿ ಬೃಹದಾಕಾರವಾದ ಸೂರ್ಯನನ್ನು ಹಾಗೂ ಕಮಾನುಗಳಲ್ಲಿ ‘ಓಂ’ ಎಂದು ಬರೆಯಲಾದ ಸಂಕೇತಗಳನ್ನು ನೋಡಬಹುದು. ಹಾಗಾದರೆ ಇಸ್ಲಾಂಮಿಕ್‍ನಲ್ಲಿ ಸೂರ್ಯನನ್ನು ಪೂಜಿಸುತ್ತಾರೆಯೇ? ಅಲ್ಲದೇ ‘ಓಂ’ ಎನ್ನುವುದು ಪವಿತ್ರ ಸಂಕೇತವೆಂದು ಅವರು ಪರಿಗಣಿಸುತ್ತಾರೆಯೇ?

ಉರ್ದು ಭಾಷೆಯಲ್ಲಿ ಕೆಲವು ಕೆತ್ತನೆಗಳನ್ನು ಶಾಸನಗಳಲ್ಲಿ ಬರೆಯಲಾಗಿದೆ. ಆದರೆ ಬರೆದ ಜಾಗವು ಪದಗಳಿಗೆ ಸರಿಯಾಗಿ ಹೊಂದಿಕೊಳ್ಳುವುದಿಲ್ಲ.

ಪ್ರವೇಶ ದ್ವಾರವನ್ನು ನೋಡುವುದಾದರೆ, ಯಾವ ಮುಸಲ್ಮಾನ್ ವಾಸ್ತುಶಿಲ್ಪಕಾರರು ಆನೆಗಳನ್ನು ತಮ್ಮ ಸಂಪದ್ರಾಯಗಳಲ್ಲಿ ಬಳಸಿಕೊಂಡಿದ್ದಾರೆ? ಆದರೆ ಹಿಂದೂ ಸಂಪ್ರದಾಯದ ಪ್ರಕಾರ ಆನೆಯನ್ನು ಸಂಪತ್ತಿನ ಅಧಿದೇವತೆ ಲಕ್ಷ್ಮೀಯ ಸಂಕೇತ ಎಂದು ಕರೆಯುತ್ತೇವೆ. ಅಲ್ಲದೇ ಸಾಕಷ್ಟು ದೇವಸ್ಥಾನಗಳಲ್ಲಿ ಆನೆಗಳನ್ನು ಪ್ರವೇಶ ದ್ವಾರದ ಮುಂಭಾಗದಲ್ಲಿರುವುದನ್ನು ಗಮನಿಸಿರುತ್ತೇವೆ,

ಕೆಳಗಿನ ಚಿತ್ರವನ್ನು ಗಮನಿಸುವುದಾದರೆ ಮಾವುತ ಆನೆಯ ಮೇಲೆ ಕುಳಿತು ಸವಾರಿ ನಡೆಸುವಂತಹದ್ದು. ಇದನ್ನು ನಾವು ಹಲವು ದೇವಸ್ಥಾನಗಳಲ್ಲಿ ನೋಡಿದ್ದೇವೆ. ಅಲ್ಲದೇ ಈ ಚಿತ್ರವನ್ನು ಸರಿಯಾಗಿ ಗಮನಿಸುವುದಾದರೆ ಇಲ್ಲಿ ಬಳಸಿರುವ ಉಡುಗೆ ಹಿಂದೂ ಸಂಪ್ರದಾಯದಲ್ಲಿರುವಂತೆ ಗೊಚರಿಸುತ್ತೆ. ಇದು ಖಾಸ್‍ಮಹಲ್‍ನ ಪ್ರವೇಶ ದ್ವಾರ!! ಆದರೆ ಇಲ್ಲಿರುವ ಇನ್ನೊಂದು ದೊಡ್ಡ ಸಂಕೇತವನ್ನು ಗಮನಿಸಬಹುದಾಗಿದೆ ಅದು ನಾಕ್ಕರ್ ಖಾನ್(ಸಂಗೀತದ ಮನೆ), ಇಲ್ಲಿ ಹಿಂದೂ ಸಂಪ್ರದಾಯವನ್ನು ಸ್ಪಷ್ಟವಾಗಿ ಚಿತ್ರಿಸಲಾಗಿದ್ದು, ಅದನ್ನು ಶಹಜಹಾನ್ ನಾಶ ಮಾಡಿದ. ಈ ಸಂಗೀತ ಮನೆಯನ್ನು ನಾಶ ಮಾಡಿರುವುದರ ಮುರಿದ ತುಣುಕುಗಳನ್ನು ಅರಮನೆಯ ನೆಲಮಾಳಿಗೆಯಲ್ಲಿ ಸಂಗ್ರಹಿಸಲಾಗಿದೆ ಎಂದು ಹೇಳಲಾಗುತ್ತದೆ.

ಮೇಲಿರುವ ಚಿತ್ರ ತೋರಿಸಿರುವ ಪ್ರಕಾರ ಇದನ್ನು ಮೋತಿ ಮಜ್ಜೀದ್ ಎಂದು ಕರೆಯಲಾಗುತ್ತೆ. ಈ ಮಸೀದಿಯನ್ನು ಜೌರಂಗಜೇಬ್, ಮಗ ಹಾಗೂ ಶಹಜಹಾನ್
ನಿರ್ಮಿಸಿದರು ಎಂದು ಹೇಳಲಾಗುತ್ತೆ. ಅಲ್ಲದೇ ಇದರ ಪ್ರವೇಶ ದ್ವಾರದಲ್ಲಿ ಬಾಳೆಹಣ್ಣಿನ ಗೊಂಚಲುಗಳಿರುವ ಚಿತ್ರವನ್ನು ಕಾಣಬಹುದಾಗಿದೆ. ಅಲ್ಲದೇ ಕೆತ್ತನೆಯ
ಸ್ಥಳಗಳಲ್ಲಿ 5 ಹಣ್ಣುಗಳ ಚಿತ್ರವನ್ನು ಕೆತ್ತಲಾಗಿದ್ದು, ಅದು ಹಿಂದೂ ಸಂಪ್ರದಾಯವನ್ನು ಬಿಂಬಿಸುವಂತಹದೇ ಆಗಿದೆ. ಆಶ್ಚರ್ಯಕರ ಸಂಗತಿ ಎಂದರೆ, ಔರಂಗಜೇಬ್
ಮಸೀದಿಯಲ್ಲಿ ಈ ಹಣ್ಣುಗಳ ಚಿತ್ರವನ್ನು ಯಾಕೆ ಕೆತ್ತಿದ?

ಹಿಂದೂ ಸಂಪ್ರದಾಯದಲ್ಲಿ ಬಳಸಲಾಗುತ್ತಿದ್ದ ವಿನ್ಯಾಸಗಳನ್ನು ನಾವು ಸುಲಭವಾಗಿ ಗುರುತಿಸಬಹುದಾಗಿದೆ.

ಮೇಲೆ ತೋರಿಸಿದ ಚಿತ್ರದ ಪ್ರಕಾರ ಇದು ರಂಗ್ ಮಹಲ್‍ನ ಒಂದು ನೋಟ. ಇದು ನದಿಯಕಡೆ ಹೋಗಿರುವ ದಾರಿಯನ್ನು ಸುತ್ತುವರೆದ ಮೇಲಾವರಣ. ಕೋಟೆಗೆ ನೀರು ಸರಬರಾಜು ಮಾಡಲು ಅನುಕೂಲವಾಗುವಂತೆ ಇದನ್ನು ಯುಮುನಾ ನದಿಯ ಪಕ್ಕದಲ್ಲಿ ನಿರ್ಮಿಸಲಾಗಿದೆ(ಬಹಳ ಹಿಂದೆ ಇದು ಕೊಠಡಿಯಾಗಿತ್ತು).

ತಾಜ್‍ಮಹಲ್ ಬಗೆಗೆ ಸರಿಯಾದ ಇತಿಹಾಸ ಓದಿದರೆ, ಹಿಂದೂ ಸಂಪ್ರದಾಯಕ್ಕೆ ಹೋಲುವ ಸಾಕಷ್ಟು ಮಾಹಿತಿಗಳು ಸಿಗುತ್ತೆ. ಕೆಲ ಸಂಶೋಧಕರ ಪ್ರಕಾರ
ತಾಜ್‍ಮಹಲ್ ಹಿಂದೆ ಶಿವನ ದೇವಾಲಯವಾಗಿತ್ತಂತೆ ಅದಕ್ಕಾಗಿ ಅದು ನೀರಿನ ಸಮೀಪ ಇದೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೇ ತಾಜ್‍ಮಹಲ್‍ನಲ್ಲಿ ಅನೇಕ
ಕೋಣೆಗಳಿವೆ ಅದರಲ್ಲಿ ಹಿಂದೆ ಸಾಧು, ಸಂತರು ಹಾಗೂ ಅವರ ಕುಟುಂಬದವರು ವಾಸಿಸಲು ನಿರ್ಮಾನ ಮಾಡಿದ ಕೋಣೆಗಳಂತೆ. ಅದು ಶಹಜಹಾನ್ ತನ್ನ
ಪತ್ನಿಗಾಗಿಯೇ ಕಟ್ಟಿದ ತಾಜ್‍ಮಹಲ್ ಆಗಿದ್ದರೆ, ಅದರಲ್ಲಿ ಕೋಣೆಗಳು ಯಾಕೆ ಬೇಕು? ಅಷ್ಟೇ ಅಲ್ಲದೇ ಮುಮ್ತಾಜ್ ಬೇಗಾಮ್‍ನ ಸಮಾಧಿ ಇದ್ದಲ್ಲಿ ನೀರಿನ ಸೌಲಭ್ಯಗಳು ಯಾಕೆ?.

ಶಹಜಹಾನ್‍ನ ಆಡಳಿತಕ್ಕಿಂತಲೂ 1500 ವರ್ಷಗಳ ಹಿಂದೆಯೇ ತೋಮರ್ ಸಾಮ್ರಾಜ್ಯವು ದೆಹಲಿಯಲ್ಲಿ ಆಡಳಿತ ನಡೆಸಿತ್ತು. ಆಡಳಿತದ ಸಂದರ್ಭದಲ್ಲಿ 736ರಲ್ಲಿ ‘ಲೋಕ್‍ಕೋಟ್’ನ್ನು ನಿರ್ಮಿಸಲಾಯಿತು. ಲೋಕ್‍ಕೋಟ್ ಅಂದರೆ ಕೆಂಪುಕೋಟೆ ಎಂದರ್ಥ!! ಪೃಥ್ವಿರಾಜ್ ರಾಸೋ ಸಾಹಿತ್ಯದಲ್ಲಿ, ರಾಜ ತೋಮರ್ ಅನಂಗ್ಪಾಲ್ ಎನ್ನುವಾತ ನಿರ್ಮಿಸಿದ ಎಂದು ಹೇಳಲಾಗುತ್ತೆ. ಇದನ್ನು ದೆಹಲಿಯ ಕುತ್ಬ್ ಸಂಕೀರ್ಣದಲ್ಲಿ ಕಬ್ಬಿಣದ ಕಂಬದ ಮೇಲೆ ಕೆತ್ತಲಾಗಿದೆ. ಇದರ ಪ್ರಕಾರ ತೋಮರ ಸಾಮ್ರಾಜ್ಯವು ಹಲವು ಕಟ್ಟಡಗಳನ್ನು ಕೆಂಪು ಕಲ್ಲಿನಿಂದಲೇ ಮಾಡಲಾಗಿದೆ ಎಂದು ಹೇಳಿದೆ. ಹಾಗಾಗಿ ದೆಹಲಿಯಲ್ಲಿ ಕೆಂಪು ಬಣ್ಣದ ಕಲ್ಲಿನ ಕಟ್ಟಡಗಳನ್ನು ಇಂದಿಗೂ ನೋಡಬಹುದಾಗಿದೆ.

ಕಳೆದ 500 ವರ್ಷಗಳಿಂದ ಮೊಘಲರು ಮತ್ತು ಕಾಂಗ್ರೆಸ್ ಸರಕಾರವು ಬಿಲಿಯನ್‍ಗಟ್ಟಲೆ ಭಾರತೀಯರನ್ನು ಮೋಸಮಾಡಿ, ನಕಲಿ ಕಥೆಗಳನ್ನು ಸೃಷ್ಟಿಸಿ ಅದನ್ನು
ನಂಬುವ ಹಾಗೆ ಮಾಡಿದೆ. ಅಲ್ಲದೇ, ಮೊಘಲರನ್ನು ಅಲ್ಪಸಂಖ್ಯಾತ ವಿರೋಧಿಗಳು ಮತ್ತು ಕೊಮುವಾದಿಗಳೆಂದು ಯಾರೂ ಹೇಳುವುದಿಲ್ಲ!! ಆದರೆ ಕಟ್ಟಡಗಳು ಮತ್ತು ಇತಿಹಾಸದ ಹಿಂದಿನ ನೈಜತೆಯನ್ನು ತಿಳಿದುಕೊಳ್ಳಲು ಕಾರ್ಬನ್ ಡೇಟಿಂಗ್ ಆದೇಶ ಮಾಡಬೇಕಷ್ಟೇ.

ಈ ಬಗೆಗೆ ಮಾಡಿರುವ ಹಲವು ಸಂಶೋಧನೆಗಳ್ನು ಪ್ರಕಟಿಸಲು ಯಾವುದೇ ರೀತಿಯ ಅನುಮತಿಯನ್ನು ಸರಕಾರ ನೀಡಿಲ್ಲ, ಹಾಗೂ ವಿಚಾರಣೆಗೆ ಒತ್ತಾಯಿಸಿದ
ಜನರನ್ನು ಆಕ್ಷೇಪಿಸಿ ಬೆದರಿಕೆಯನ್ನು ಒಡ್ಡಿದ್ದಾರೆ ಎನ್ನುವುದೇ ದುರಾದುಷ್ಟಕರ ಸಂಗತಿ!!!

ಮೂಲ: History of Delhi between 8th – 16th century AD

– ಅಲೋಖಾ

 

Tags

Related Articles

Close