ಪ್ರಚಲಿತ

ನನ್ನ ಮಗನ ಅವನತಿಗೆ ಸಿದ್ದರಾಮಯ್ಯನೇ ಕಾರಣ – ಡಿಕೆಶಿ ತಾಯಿ

ಡಿಕೆಶಿ ಮನೆಯ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಅನೇಕ ಅಕ್ರಮಗಳನ್ನು ಬಯಲಿಗೆಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಇದೇ ಪ್ರಥಮ ಬಾರಿಗೆ ಡಿಕೆಶಿ ಅವರ ತಾಯಿ ಗೌರಮ್ಮನವರು ಈ ದಾಳಿಯ ಕುರಿತು ಮಾತನಾಡಿದ್ದಾರೆ.

ತಮ್ಮ ಮಕ್ಕಳು ನಿಷ್ಕಳಂಕರೆಂದು ಅವರು ಹೇಳಿದರು. ” ಮನೆಗೆ ತೆರಿಗೆ ಅಧಿಕಾರಿಗಳು ದಾಳಿ ಮಾಡಿದರು. ಮನೆಯ ಗೇಟ್ ನ ಬೀಗ ಹಾಕಿದರು. ಅವರು ಒಳಗಡೆ ಬಂದು ತಮ್ಮ ಕೆಲಸವನ್ನು ಮಾಡುತ್ತಿದ್ದರು. ಇದಾವುದಕ್ಕೂ ನಮಗೆ ಬೇಸರವಿಲ್ಲ. ನನ್ನಿಂದ ಅವರ ಕೆಲಸಕ್ಕೆ ಯಾವುದೇ ತೊಂದರೆಯಾಗಿಲ್ಲ. ನನ್ನ ಮಕ್ಕಳು ಎಂದೂ ತಪ್ಪು ಮಾಡಿಲ್ಲ. ಹಾಗಾಗಿ ನಾನು ಭಯಗೊಂಡಿಲ್ಲ.” ಎಂದು ಗೌರಮ್ಮ ಹೇಳಿದರು.

ನನ್ನ ಮಕ್ಕಳು ಸದಾ ಜನಸೇವೆಯನ್ನು ಮಾಡುತ್ತಿರುವವರು. ಅವರು ಯಾರಿಗೂ ಮೋಸ ಮಾಡಿಲ್ಲ. ನಮ್ಮ ಮನೆ ಮೇಲೆ ಹಾಗೂ ಮಕ್ಕಳ ಮೇಲೆ ದಾಳಿ ಮಾಡುವಂತಹದ್ದು ಏನೂ ಇರಲಿಲ್ಲ ಎಂದೂ ಅವರು ಹೇಳಿದರು.

ಇದೇ ವೇಳೆ ಗೌರಮ್ಮನವರು ಸಿಎಂ ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದರು. “ಸಿಎಂ ಸಿದ್ದರಾಮಯ್ಯ ಮುಂದೆ ಬರಲು ನನ್ನ ಮಗನೇ ಕಾರಣ. ಅವರ ಎಲ್ಲಾ ಕೆಲಸಕ್ಕೂ ನನ್ನ ಮಗನೇ ಬೇಕು. ಈಗ ನಂಬಿಸಿ ಕುತ್ತಿಗೆ ಕುಯ್ಯುವ ಕೆಲಸ ಮಾಡುತ್ತಿದ್ದಾರೆ. ನನ್ನ ಮಕ್ಕಳನ್ನು ಕಂಡ್ರೆ ಅವರಿಗೆ ಆಗೋದಿಲ್ಲ. ಅಕ್ಕಿ ಕೊಟ್ಟೆ, ಅದು ಕೊಟ್ಟೆ ಅಂತೆಲ್ಲಾ ಹೇಳ್ತಾರೆ. ಆದ್ರೆ ಅದೆಲ್ಲಾ ಅವರ ಮನೆಯಿಂದ ಕೊಟ್ಟದ್ದಲ್ಲ. ರೈತರು ಬೆಳೆದಿದ್ದ ಅಕ್ಕಿಯನ್ನು ಕೊಟ್ಟಿದ್ದಾರೆ. ಸಿದ್ದರಾಮಯ್ಯನವರಿಗೆ ಅಷ್ಟೂ ಕಾಳಜಿ ಇದ್ದಿದ್ರೆ, ನನ್ನ ಮಕ್ಕಳ ಮೇಲೆ ದಾಳಿ ಆದಾಗ ಪ್ರಶ್ನಿಸಬಹುದಿತ್ತು. ಯಾಕೆ ಸುಮ್ಮನಿದ್ದಾರೆ? ನನ್ನ ಮಕ್ಕಳ ಮೇಲೆ ಕತ್ತಿ ಮಸಿಯುತ್ತಿದ್ದಾರೆ. ಅವರಿಗೆ ಅಧಿಕಾರಿಗಳನ್ನು ಪ್ರಶ್ನಿಸಪವ ಅಧಿಕಾರವಿದ್ದರೂ ಸುಮ್ಮನಿದ್ದಾರೆ ನನ್ನ ಮಕ್ಕಳ ಈ ಪರಿಸ್ಥಿತಿಗೆ ಅವರೇ ನೇರ ಕಾರಣ” ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.

ರಾಜಿಕೀಯ ಸ್ವ-ಹಿತಾಸಕ್ತಿಯಿಂದ ದಾಳಿ ಮಾಡಿಸಲಾಗಿದೆ ಅನ್ನುವ ಆರೋಪವನ್ನೂ ಗೌರಮ್ಮನವರು ಮಾಡಿದರು. ” ಇದೆಲ್ಲಾ ರಾಜಕೀಯ ಪ್ರೇರಿತ ದಾಳಿ. ನನ್ನ ಮಕ್ಕಳು ಮುಂದೆ ಬರುವುದನ್ನು ಕಂಡು ಅಸೂಯೆಯಿಂದ ಇಂತಹ ದಾಳಿ ಮಾಡಿಸಿದ್ದಾರೆ. ಹಿಂದೊಂದು ಮುoದೊಂದು ಕಾರ್ಯ ಮಾಡುವ ಮಕ್ಕಳು ಅಲ್ಲ ಅವರು. ಏನಿದ್ರು ನೇರ ನುಡಿಯವರದ್ದು ” ಎಂದ ಅವರು ನನ್ನ ಮಕ್ಕಳ ಹಾಗೆ ಅವರು ದೇಶ ಸೇವೆ ಮಾಡಿದ್ದಿದ್ರೆ ದೇಶ ಅದೆಷ್ಟೋ ಮುಂದುವರಿತಿತ್ತು ಎಂದು ಅಭಿಪ್ರಾಯಪಟ್ಟರು.

ಅವರು ಮಾತನ್ನು ಮುಂದುವರಿಸಿ, ” ಯಾರೆಲ್ಲಾ ಈ ದಾಳಿ ಮಾಡಿಸಲು ಸಹಾಯ ಮಾಡಿದ್ದಾರೋ ಅವರು ಇದರ ಪ್ರತಿಫಲವನ್ನು ಮುಂದೊಂದು ದಿವಸ ಅನುಭವಿಸುತ್ತಾರೆ. ರಾಷ್ಟ್ರೀಯ‌ ಬಿಜೆಪಿ ನಾಯಕರೂ ಇದರಲ್ಲಿ ಶಾಮೀಲಾಗಿದ್ದಾರೆ. ಈ ರೀತಿಯ ದ್ವೇಷ ‌ಮಾಡುವವರು ಹುಚ್ಚರು ” ಎಂದು ಕಿಡಿಕಾರಿದರು.

ಅಂತಿಮವಾಗಿ ತಮ್ಮ ಮಕ್ಕಳ ಪರವಾಗಿ ನಿಂತ‌ ರಾಜ್ಯ ಜನರಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಇದರಿಂದ ತಿಳಿಯುವ ಒಂದು ವಿಷಯವೇನೆಂದರೆ ಡಿಕೆಶಿ ತನ್ನ ಮನೆಯಲ್ಲಿ ಮೊದಲೆ ಸಿದ್ದರಾಮಯ್ಯನ ಬಗ್ಗೆ ಯಾವ ರೀತಿ ಅಭಿಪ್ರಾಯ ಕೊಡುತ್ತಿದ್ದರೆಂದು ನಾವು ಸುಲಭವಾಗಿ ಅರ್ಥೈಸಿಕೊಳ್ಳಬಹದು

 

Tags

Related Articles

Close