ಅಂಕಣ

ಪದ್ಮಾವತಿ !!!

ಇತ್ತೀಚೆಗೆ ಹಿಂದೂ – ವಿರೋಧಿ ಹಾಗೂ ಇಸ್ಲಾಂ ಒಲವಿನ ಸಿದ್ಧಾಂತವೊಂದು ಸಿನಿಮಾರಂಗಕ್ಕೂ ಕಾಲಿಟ್ಟಿದೆ ಬಿಡಿ! ಕಂಡ ಕಂಡ ಕಥೆಗಳನ್ನೆಲ್ಲ ಡಿ – ಗ್ರೇಡ್
ಮಸಾಲೆಯಲ್ಲಿ ಹುರಿದು ಅದಕ್ಕೊಂದು ಇತಿಹಾಸವನ್ನು ಸೃಷ್ಟಿಸಿ ಭಾರತದ ಭವ್ಯ ಇತಿಹಾಸವನ್ನೇ ಛೀ ಥೂ ಎನ್ನುವ ಹಾಗೆ ಮಾಡಿಬಿಡುವ ಇಂತಹ ನಿರ್ದೇಶಕರಿಗೆ, ಹಣ ಕೊಟ್ಟು ರಂಜಿಸುವ ನಿರ್ಮಾಪಕರಿಗೆ ನಾವೂ ಕೂಡ ಹೊಸಾ ಪ್ಯಾರಗಾನ್ ಚಪ್ಪಲಿಗಳಲ್ಲಿಯೇ ಹೊಡೆದು ರಂಜಿಸಬೇಕನ್ನಿಸುತ್ತದೆ!

ಮೊದಲು ಬಾಕ್ಸ್ ಆಫೀಸುಗಳನ್ನು ಸರಿಯಾಗಿ ದೋಚಿದ್ದ ಎರಡು ತಾರೆಗಳನ್ನು ಆರಿಸಿದರು! ಅದಕ್ಕೆ ಸರಿಯಾಗಿ ‘ಪದ್ಮಾವತಿ’ ಎಂಬ ಕಥೆಯೂ ಸಿಕ್ಕಿತು! ಬೇರೇನೂ ಬೇಕಿರಲಿಲ್ಲ, ನಾಯಕ ನಾಯಕಿಯ ಕೆಮಿಸ್ಟ್ರಿಯೊಂದು ಚೆನ್ನಾಗಿ ಕೆಲಸ ಮಾಡಬೇಕಿತ್ತು, ವೀಕ್ಷಕರೆದೆಯಲ್ಲಿ ಬೆಂಕಿ ಹಚ್ಚಬೇಕಿತ್ತು! ಸರಿಯಾಗಿಯೇ ರೊಮ್ಯಾನ್ಸ್ ನ ಡೈಲಾಗುಗಳೂ ಸಿಕ್ಕಿದವು! ಇನ್ನೇನು ಬೇಕು ಹೇಳಿ?!

ಈ ಹಿಂದೆಯೂ ಜೋಧಾ – ಅಕ್ಬರ್ ಎಂಬ ಕಥೆಯನ್ನು ಶುರು ಹಚ್ಚಿದರು! ಹಿಂದೂವಾದದ ಇತಿಹಾಸಕ್ಕೆ ಇಸ್ಲಾಂ ನ ಬಣ್ಣವೊಂದನ್ನು ಬಳಿದರು! ಜೋಧಾ
ಬಾಯಿಯ ಹಾಗೂ ಅಕ್ಬರನ ಸೌಂದರ್ಯವೇ ಹೆಚ್ಚು ಪ್ರಾಧಾನ್ಯವಾಯಿತು! ವೀಕ್ಷಕರು ನೋಡು ನೋಡುತ್ತಲೇ ‘ಅಕ್ಬರ್’ ಎಷ್ಟು ಒಳ್ಳೆಯವನು ಎಂಬ ನಿರ್ಧಾರಕ್ಕೆ
ಬಂದರು! ಪೂರ್ತಿ ಸಿನಿಮಾವನ್ನು ನೋಡಿ ಬರುವಷ್ಟರಲ್ಲಿ ‘ವ್ಹಾ! ಅಕ್ಬರ್ ಎಷ್ಟು ಸಹೃದಯಿ!? ಹಿಂದೂ ಧರ್ಮವನ್ನದೆಷ್ಟು ಪ್ರೀತಿಸುತ್ತಿದ್ದ!” ಎಂಬ ತೀರ್ಪೊಂದು
ಎಂತಹವರ ಮನದಲ್ಲಿಯೂ ಮೂಡುವಷ್ಟು ಕಾಲ್ಪನಿಕ ಸಿನಿಮಾವೊಂದು ಕೆಲಸ ಮಾಡಿತ್ತು!

ಮಜಾ ಅದೇ! ಚೆಂಗಿಜ್ ಖಾನ್ ನ ವಂಶಸ್ಥನಾದ ಅಕ್ಬರನ ಮೂಲಕ ಮೊಘಲ್ ತಾಕತ್ತು ಅರ್ಧ ಭಾರತವನ್ನು ಗೆದ್ದರು! ತದನಂತರ ಇತಿಹಾಸಪೂರ್ವದಿಂದಲೂ ಶತ್ರುವಾಗಿದ್ದ ಹಿಂದೂ ರಾಜನಾಗಿದ್ದವನ ಮಗಳಬ್ಬೊಳನ್ನು ಮದುವೆಯಾದ! ಅವನ 500 ಜನಕ್ಕೂ ಮಿಕ್ಕಿದ್ದ ಜನಾನಾದಲ್ಲಿ ಜೋಧಾ ಬಾಯಿಗೆ ತನ್ನ ವಿಶೇಷವಾದ ಕಾಳಜಿ ತೋರಿಸಿದ ಎಂಬುದಕ್ಕಷ್ಟೇ ತೃಪ್ತಿ ಪಟ್ಟು ಅಯ್ಯೊ! ಅಕ್ಬರ ಸಹಿಷ್ಣು! ಅಕ್ಬರ ಸಹೃದಯಿ ಎಂದು ಹೇಳಬೇಕೇ?!

ಇಲ್ಲಿಂದಲೇ ಶುರುವಾಯಿತು ದುಡ್ಡಿಗೋಸ್ಕರ ಇತಿಹಾಸ ಮಾರುವ ದಂಧೆ!

ತದನಂತರ ಬಂದಿದ್ದೇ ರಾಮನ ಹೆಸರಿನ ಲೀಲೆ! ಬಿಡಿ! ಅದರಲ್ಕಿ ರಣವೀರ್ ಸಿಂಗ್ ನ ಮೀಸ, ಗಡ್ಡ, ದೇಹದ ಬಗ್ಗೆಯೇ ಅದೆಷ್ಟು ಹೊಗಳಿದರೋ,. ಅದೇ ರೀತಿ ದೀಪಿಕಾಳ ತುಟಿಗಳನ್ನು ನೋಡ್ರೋ ಎಂದು ಪಡ್ಡೆ ಹುಡುಗರು ಹೊಗಳಿದ್ದೇ ಸಾಕಾಗಿತ್ತು ನಿರ್ದೇಶಕರಿಗೆಲ್ಲ! ಆ ಸಿನಿಮಾದಲ್ಲಿದ್ದದ್ದು ಬೇರೇನೂ ಅಲ್ಲ, ಬ್ರಾಹ್ಮಣತ್ವದ ಅಪ್ಪಟ ವಿರೋಧಿ ಸಿದ್ಧಾಂತಗಳನ್ನು ಬಿತ್ತುವಲ್ಲಿ ಯಶಸ್ವಿಯಾಗಿದ್ದ ಸಿನಿಮಾದಿಂದ ಎಡಪಂಥೀಯರಿಗೊಂದು ತಲೆ ಬುಡವಿಲ್ಲದ ಲಾಜಿಕ್ಕುಗಳೂ ಸಿಕ್ಕು ಒಂದಷ್ಟು ದಿನ ಬ್ರಾಹ್ಮಣರೆಂದರೆ ಮುಖ ತಿರುಗಿಸಿಕೊಳ್ಳುವಷ್ಟಾಗಿತ್ತು.

ಹಿಂದೂ ಹಾಗೂ ಮುಸಲ್ಮಾನರು ಪ್ರೀತಿಯನ್ನು ಸಾರುವುದಕ್ಕೋಸ್ಕರ ನಡೆಯುತ್ತಿರುವ ರಕ್ತಪಾತದಲ್ಲಿಯೂ ಮದುವೆಯಾಗುತ್ತಾರೆ ಎನ್ನುವುದನ್ನು ಇತಿಹಾಸ ಹೇಳಿದೆಯೋ ಇಲ್ಲವೋ, ಆದರೆ ಸಿನಿಮಾ ಕಥೆಗಾರರು ನಿರ್ಧರಿಸಿಬಿಟ್ಟಿದ್ದಾರೆ ಬಿಡಿ!

ತೀರಾ ಹುಚ್ಚುತನವೆನ್ನಿಸುವುದು ಇವತ್ತು ರಜಪೂತರು ಸಂಗ್ರಾಮ ಸಿಂಗಾಗಿಯೂ, ಮಹಾರಾಣಾ ಪ್ರತಾಪನಾಗಿಯೂ ಉಳಿದಿಲ್ಲ, ಅವರೆಲ್ಲ ಇವತ್ತು ಮೊಘಲರ ವಿರುದ್ಧ ಬಂಡಾಯವೆದ್ದವರು ಅಷ್ಟೇ! ಆಕ್ರಮಣಕಾರರು ಇವತ್ತು ಕ್ರೂರಿಗಳಾಗಿ ಉಳಿದಿಲ್ಲ, ಬದಲಾಗಿ ತಮ್ಮ ದೇಶಕ್ಕೋಸ್ಕರ, ಜನಗಳಿಗೋಸ್ಕರ, ಹಿಂದುತ್ವಕ್ಕೋಸ್ಕರ ಹೋರಾಡಿದವರು ಹಾಗೂ ತಾವೇ ರಕ್ತಪಾತಕ್ಕಾಹುತಿಯಾದವರು ಇವತ್ತು ಕ್ರೂರಿಗಳಾಗಿ ಬಿಂಬಿಸಲ್ಪಟ್ಟಿದ್ದಾರೆ! ಇನ್ಯಾವ ದುರಂತ ಬಾಕಿಯಿದೆ ಹೇಳಿ?!

ಒಮ್ಮೆ ಸಿಕ್ಕಿತು ನೋಡಿ ಸೂಪರ್ ಕೆಮಿಸ್ಟ್ರಿ! ನಿರ್ದೇಶಕರು ಅದೇ ಮಾಮೂಲು ಜೋಡಿಯನ್ನೆಳೆದು ತಂದರು! ತಂದದ್ದೇ ಶಿವಾಜಿಯ ಅನುಯಾಯಿಯಾಗಿದ್ದ ಬಾಜೀರಾವ್ ನ ಜಾತಕವನ್ನೇ ತಂದು ಮಸಾಲೆ ಅರೆದು ಕುಡಿದರು! ಬಿಡಿ! ಅದ್ಯಾವುದೋ ಮತ್ತಿನಲ್ಲಿ ಕಥೆ ಬರೆದದ್ದೇ ಮುಂದೆ ಬಾಜೀರಾವ್ – ಮಸ್ತಾನಿ ಯೆಂದು ಹೆಸರು ಪಡೆದು ಬಾಕ್ಸ್ ಆಫೀಸ್ ದೋಚಿದ್ದಲ್ಲದೇ, ಅಯ್ಯೋ! ಎಂತಹವರಿಗೂ ಬಾಜೀರಾವ್ ಮಸ್ತಾನಿಗೋಸ್ಕರ ತನ್ನ ಮೊದಲನೇ ಹೆಂಡತಿಯ ನೋವನ್ನು ನೋಡಲಾರದೇ ಹೋದನೆ ಎಂದು ಅನ್ನಿಸದಿರುವುದು ಸಾಧ್ಯವೇ ಇಲ್ಲದಂತಹ ಸಂಚಲನ ಮೂಡಿಸಿದ ಸಿನಿಮಾಕ್ಕೆ ಇತಿಹಾಸ ತಿಳಿದವರು ಬನ್ಸಾಲಿಗೆ ಸರಿಯಾಗಿಯೇ ಪ್ರತ್ಯುತ್ತರ ಕೊಟ್ಟಿದ್ದರು! ‘ಬನ್ಸಾಲಿಗೇನು ಗೊತ್ತು ಬಾಜೀರಾವನ ಗತ್ತು?!’ ಎಂಬುದಕ್ಕೆ ‘ನಾನೊಬ್ಬ ನಿರ್ದೇಶಕ! ನಾನು ಕಥೆಗಳನ್ನು ಸೃಷ್ಟಿಸುವವ’ ಎಂದೆಲ್ಲ ಪೋಸು ಕೊಟ್ಟ ಬನ್ಸಾಲಿ ಯ ಮೇಲಿದ್ದ ಅಭಿಮಾನವೊಂದು ಕಡಿಮೆಯಾಗಿದ್ದಂತೂ ಸತ್ಯವೇ!

ಈಗ ಇನ್ನೊಂದು ತಿಕ್ಕಲು ಸಿನಿಮಾವೊಂದು ತಯಾರಾಗುತ್ತಿದೆ! ಮತ್ತದೇ ರಣವೀರ್ ಹಾಗೂ ದೀಪಿಕಾಳನ್ನಿಟ್ಟು ಹೆಣೆದ ಕಥೆಗಳು ಮತ್ತೆ ಸದ್ದು ಮಾಡುತ್ತಿದೆ! ರತನ್ ಸಿಂಗ್ ಹಾಗೂ ಆತನ ಪತ್ನಿಯಾದ ಪದ್ಮಿನಿ ಪಾತ್ರಗಳನ್ನಿಟ್ಟು ಮಲಿಕ್ ಮಹಮ್ಮದ್ ಜಯೇಸಿ ಎಂಬ ತುರುಕ ಬರೆದ ಪದ್ಮಾವತ್ ಎಂಬ ಪದ್ಯದ ಮೇಲೆ ಕಥೆ ಹೆಣೆದು ಸಿನಿಮಾ ಮಾಡುತ್ತಿರುವವರು ಹೀರೋನನ್ನಾಗಿ ಮಾಡಿದ್ದು ಚಿತ್ತೂರು ಸಂಸ್ಥಾನದ ಮೇಲೆ ದಾಳಿ ನಡೆಸಿ ಸಹಸ್ರ ಹಿಂದೂಗಳ ರಕ್ತಪಾತ ಸೃಷ್ಟಿಸಿದ ಅಲ್ಲಾವುದ್ದೀನ್ ಖಿಲ್ಜಿ! ತಂಗಿಯೆಂದು ಕರೆದು ಕೊನೆಗೆ ದೇಹಕ್ಕೆ ಹಪಹಪಿಸಿದ್ದ ಖಿಲ್ಜಿಯನ್ನ ವೈಭವಯುತವಾಗಿ ವರ್ಣಿಸಿದ ಯಶೋಗಾಥೆಯದು!

ರತನ್ ಸಿಂಗ್ ಜೀವವಿರುವೆಗೂ ಹೋರಾಡುತ್ತೇನೆಂದು ಕೇಸರೀ ಕಂಕಣ ಕಟ್ಟುತ್ತಾನೆ! ದಂಡೆತ್ತಿ ಬಂದ ರಕ್ಕಸ ಖಿಲ್ಜಿಯ ಮುಂದೆ ಸೋತ ರತನ್ ಸಿಂಗ್ ಪ್ರಾಣ ಬಿಟ್ಟರೂ, ಪಟ್ಟದ ರಾಣಿಯಾದ ಪದ್ಮಾವತಿ ಕೋಟೆಯೊಳಗಿನ ಪ್ರತಿ ಹೆಂಗಸರನ್ನೂ ಸೇರಿಸಿ ಚಿತೆ ಏರ್ಪಡಿಸಿ, ಈ ಮುಸಲ್ಮಾನ ದೊರೆಯ ಜನಾನಾದಲ್ಲಿ ಗುಲಾಮರಾಗಿ ಬಿದ್ದಿರುವುದಕ್ಕಿಂತ ಜೌಹರ್ ಮಾಡಿಕೊಳ್ಳುವುದು ಲೇಸೆಂದರಿತ ಪ್ರತಿ ಸ್ವಾಭಿಮಾನಿ ಮಹಿಳೆಯೂ ಧಗಧಗಿಸುತ್ತಿದ್ದ ಬೆಂಕಿಗಾಹುತಿಯಾಗುತ್ತಾರೆ!

ಪದ್ಮಾವತಿಯಾಸೆಗೆ ದಂಡೆತ್ತಿ ಬಂದ ಖಿಲ್ಜಿಗೆ ತಕ್ಕ ಉತ್ತರ ಕೊಟ್ಟ ಒಬ್ಬ ಸ್ವಾಭಿಮಾನಿ ಹೆಣ್ಣು ಪದ್ಮಾವತಿ! ಅಂತಹುದ್ದೇ ಪರಿಸ್ಥಿತಿ ಇವತ್ತು ಯಾಜಿದಿ ಮಹಿಳೆಯರಲ್ಲಿದೆ! ISIS ನ ಉಗ್ರ ಶಿಬಿರಗಳಲ್ಲಿ ಗುಲಾಮರಾಗಿ ಮೈ ಒಡ್ಡುತ್ತಿರುವವರ ಪರಿಸ್ಥಿತಿ ಹಾಗೂ ಮುಸಲ್ಮಾನರ ಜನಾನಾ! ಎರಡೂ ಒಂದೇ!

ಬಿಂಗೋ!!! ನಿರ್ದೇಶಕ ಯೋಚಿಸುತ್ತಾನೆ! ವ್ಹಾ! ಇವೆರಡನ್ನೂ ಸೇರಿಸಿ ಮಸಾಲೆ ಅರೆದು ಸ್ವಲ್ಪ ರೋಮ್ಯಾನ್ಸು ಸೃಷ್ಟಿಸಿಬಿಟ್ಟು, ಜೊತೆಗೆ ಉರ್ದು ಘಜಲುಗಳ ಹಾಡುಗಳನ್ನು ಹಾಕಿ ಕುಣಿಸಿಬಿಟ್ಟರೆ ಮುಗಿಯಿತು! ಎಂತಹ ಯಶಸ್ಸು?! ಸ್ವಾಭಿಮಾನವಿಲ್ಲದ ಗರಿಷ್ಟ 78% ಇರುವ ಹಿಂದೂಗಳು ನಾಚಿಕೆ ಬಿಟ್ಟು ಸಿನಿಮಾ ನೋಡುತ್ತಾರೆ! ಸಾಕಲ್ಲ?!

ಹಿಂದೂ ಮಹಿಳೆಯೊಬ್ಬಳು ಸ್ವ ಇಚ್ಛೆಯಿಂದಲೇ ಪರರ ಸ್ವತ್ತಾಗಿ ಬಾಳುವುದು ಬೇಡವೆಂಬ ಕಾರಣಕ್ಕೆ ಬೆಂಕಿಗಾಹುತಿಯಾದರೆ, ಅದನ್ನಿಟ್ಟುಕೊಂಡು ಹಿಂದೂ ವಿರೋಧಿ ಸಿನಿಮಾಗಳನ್ನು ಮಾಡುವ ಬಾಲಿವುಡ್ ಬನ್ಸಾಲಿಗೆ, ಅದೇ ಮುಸಲ್ಮಾನರು ಅಲ್ಲಾಹನ ಹೆಸರಿನಲ್ಲಿ ಕೊಲ್ಲುವುದಕ್ಕೂ ಕೊಲ್ಲಲ್ಪಡುವುದಕ್ಕೂ ಹೇಸದಿದ್ಧುದರ ಬಗ್ಗೆ ಯಾವ ಕಥೆಯೂ ಸಿಗುವುದಿಲ್ಲ.!

ವಿಷಯ ಇಷ್ಟೇ! ಈ ಎಲ್ಲಾ ಸಿನಿಮಾಗಳಲ್ಲಿಯೂ ಸಹ ಹಿಂದೂ ಮುಸಲ್ಮಾನರು ಸೌಹಾರ್ದದಿಂದ ಬಾಳುವುದಕ್ಕೆ ದೇಹವನ್ನಡವಿಟ್ಟರೆ ಮಾತ್ರ ಸಾಧ್ಯ ಎಂಬ ನಿಲುವು ಹಿಂದೂ ಧರ್ಮಕ್ಕದೆಷ್ಟು ಹೊಡೆತ ಕೊಡಬಹುದು?! ಯೋಚಿಸಿದ್ದೀರಾ?! ನಿಮ್ಮದೇ ಪೀಳಿಗೆ ಮುಂದೊಂದು ದಿನ ನಿಮ್ಮ ವಿರುದ್ಧವೇ ತುರುಕರ ಸಿದ್ಧಾಂತಗಳನ್ನು ಹಿಡಿದು ಎದುರು ನಿಂತಾಗ ನಮ್ಮ ದೌರ್ಬಲ್ಯತೆಯೊಂದು ಅರಿವಾಗುತ್ತದೆ! ಆದರೆ, ಪಶ್ಚಾತ್ತಾಪವೊಂದನ್ನು ಬಿಟ್ಟು ಬೇರೇನೂ ಇರುವುದಿಲ್ಲವಷ್ಟೇ!

ನಮ್ಮ ಭವ್ಯ ಭಾರತದ ದುರಂತವದೇ! ನಮ್ಮ ಭಾರತದ ಮೇಲೆ ದಾಳಿ ನಡೆಸಿ, ಪೂರ್ವಜರ ರಕ್ತ ಹರಿಸಿ, ನಮ್ಮ ಅಕ್ಕ ತಂಗಿ ಮಾತೆಯರನ್ನು ಲೈಂಗಿಕ ಗುಲಾಮರನ್ನಾಗಿಸಿ, ಭಗವಾಧ್ವಜದ ಮೇಲೆ ಕಾಲಿಟ್ಟು ಅಲ್ಲಾಹು ಅಕ್ಬರ್ ಎಂದು ಹೂಂಕರಿಸಿದ ರಕ್ತಪಿಪಾಸುಗಳ ಕಥೆಯಾಧಾರಿತ ಸಿನಿಮಾಗನ್ನು ನಾವು ನಾಚಿಕೆಯಿಲ್ಲದೇ ನೋಡಿ ಎಂಜಾಯ್ ಮಾಡುತ್ತೇವಲ್ಲ?! ಒಂದು ಕ್ಷಣ ಯೋಚಿಸಿ!

ನಂತರ ಬಾಜ್ ಬಹದ್ದೂರ್ ಹಾಗೂ ರೂಪಮತಿಯದೊಂದು ಸಿನಿಮಾ! ಅದನ್ನೂ ಮರ್ಯಾದೆ ಬಿಟ್ಟು ನೋಡಿ ಎಂಜಾಯ್ ಮಾಡಿ ಬೆನ್ನು ತಟ್ಟಿಕೊಳ್ಳಿ!

– ತಪಸ್ವಿ

Tags

Related Articles

Close