ಪ್ರಚಲಿತ

ಪ್ರಕಾಶ್ ರೈ ಆ ಊರಿಗೆ ಹೋದದ್ದೇ ತಪ್ಪಾಯ್ತಾ?! ಆ ಊರಿನ ಜನತೆ ಮಾಡಿದ್ದೇನು ಗೊತ್ತಾ?!

ಕರ್ನಾಟಕ ಎಂದರೆ ಸಾಕು ಇತ್ತೀಚೆಗೆ ಕೊಚ್ಚೆಯಲ್ಲಿ ಹುಡುಕಿ ತಿನ್ನುವ ನಾಯಿಯೂ ಇಲ್ಲಿ ಬಂದು ಬೊಗಳುತ್ತದೆ…! ಹೌದು ಕರ್ನಾಟಕದಲ್ಲಿ ಈಗ ಏನಾಗುತ್ತಿದೆ ಎಂಬೂದೇ ಪ್ರಶ್ನೆ…? ಯಾಕೆಂದರೆ ಶಾಂತಿಯ ತವರಾಗಿದ್ದ ಕರ್ನಾಟಕವನ್ನು ಆಶಾಂತಿಯ ಬೀಡಾನ್ನಾಗಿ ನಮ್ಮ ಎ(ಹೆ)ಮ್ಮೆ ಯ ಮುಖ್ಯಮಂತ್ರಿಗಳು.

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಏನು ಬೇಕಾದರೂ ಮಾತನಾಡಬಹುದು ಎಂದು ಪದೇ ಪದೇ ಅಸಂಬದ್ಧ ವಿವಾದಾತ್ಮಕ ಹೇಳಿಕೆಯನ್ನು ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಿಂದೂ ಧರ್ಮದ ವಿರುದ್ಧ ಹಿಂದೂಗಳ ಆಚಾರ ವಿಚಾರಗಳನ್ನು ಟೀಕಿಸದರೆ ಸಾಕು ರಾಜ್ಯ ಕಾಂಗ್ರೆಸ್ ಸರಕಾರ ಅಂತವರಿಗೆ ಬೆಂಗಾವಲಾಗಿ ನಿಲ್ಲುತ್ತಿದೆ.!

ಅಧಿಕಾರ ಹಿಡಿದ ದಿನದಿಂದಲೇ ಹಿಂದೂ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಾ ಬಂದ ಮಾನ್ಯ ಮುಖ್ಯಮಂತ್ರಿಗಳು ಹಿಂದೂ ಧರ್ಮದ ವಿರುದ್ಧ ಯಾರೇ ಬೊಗಳಿದರು ಅವರನ್ನು ಗೌರವಿಸತೊಡಗಿತ್ತು. ಈ ರೀತಿ ಬೊಗಳೆ ಬಿಟ್ಟವರ ಪೈಕಿ ಸದ್ಯ ಸುದ್ದಿಯಲ್ಲಿರುವುದು ಪ್ರಕಾಶ್ ರೈ.

ಪ್ರಕಾಶ್ ರೈ, ಬಹುಭಾಷಾ ನಟನಾಗಿ ಅಭಿನಯಿಸಿ ಅನೇಕ ಅಭಿಮಾನಿಗಳನ್ನು ಹೊಂದಿರುವವರು.
ನಟನೆಯಲ್ಲೇ ನಾನಾ ರಾಜ್ಯಗಳಲ್ಲಿ ಅದೆಷ್ಟೋ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಅಭಿಮಾನಿಗಳು ಇಟ್ಟ ಗೌರವವನ್ನು ಉಳಿಸಿಕೊಳ್ಳಲಿಲ್ಲ ಈತ. ಬದುಕಲು ಕರ್ನಾಟಕ, ಹೆಸರುಗಳಿಸಲು ಕರ್ನಾಟಕ, ಅನ್ನ ನೀರು ಗಾಳಿ ಎಲ್ಲವೂ ಕರ್ನಾಟಕದ್ದೇ ಬೇಕು. ಆದರೆ ಇತ್ತೀಚೆಗೆ ಹಿಂದೂಗಳ ಭಾವನೆಗಳಿಗೆ ಮಾತ್ರ ಬೆಲೆ ಕೊಡುವುದಿಲ್ಲ‌ ಎಂಬಂತೆ ನಡೆದುಕೊಳ್ಳುತ್ತಾ ಇದ್ದಾರೆ.

ಕರ್ನಾಟಕದಲ್ಲಿ ನಡೆಯುವ ಘಟನೆಗಳಿಗೆ ನೇರವಾಗಿ ಪ್ರಧಾನಿ ಮೋದಿಯವರನ್ನು ಪ್ರಶ್ನಿಸುವ ಪ್ರಕಾಶ್ ರೈ ರಾಜ್ಯ ಸರ್ಕಾರದ ಚೇಳನಂತೆ ವರ್ತಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಮುಚ್ಚಿಹಾಕುವ ಪ್ರಯತ್ನವನ್ನು ಪ್ರಕಾಶ್ ರೈ ಮಾಡುತ್ತಿದ್ದಾರೆ…!

ರಾಜ್ಯದಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶ ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನ್ನು ಪ್ರಶ್ನಿಸುವ ಪ್ರಕಾಶ್ ರೈ ರಾಜ್ಯ ಸರ್ಕಾರದ ಕಳಪೆ ಆಡಳಿತವನ್ನು ಜನರ ಕಣ್ಣಿಂದ ತಪ್ಪಿಸುವಂತೆ ಮಾಡುತ್ತಿದ್ದಾರೆ…!

ರಾಜ್ಯದಲ್ಲಿ ಸಾಲು ಸಾಲು ಬಿಜೆಪಿ ಹಾಗೂ ಹಿಂದು ಸಂಘಪರಿವಾರದ ಕಾರ್ಯಕರ್ತರ ಮೇಲೆ ಹಲ್ಲೆ ಕೊಲೆಗಳು ನಡೆಯುತ್ತಲೇ ಇದೆ. ಆದರೆ ಇದ್ಯಾವುದಕ್ಕೂ ತುಟಿ ಪಿಟಿಕ್ ಎನ್ನದ ಪ್ರಕಾಶ್ ರೈ ಬುದ್ದಿಜೀವಿಗಳ ಹಾಗೆ ವರ್ತಿಸುತ್ತಿದ್ದಾರೆ.

ಮೂರು ದಿನಗಳ ಹಿಂದೆ ಯಾವುದೋ ಕಾರ್ಯಕ್ರಮದ ನಿಮಿತ್ತ ಶಿರಸಿಯ ಶ್ರೀ ಗುರು ರಾಘವೇಂದ್ರ ಮಠದ ಸಭಾ ಮಂಟಪಕ್ಕೆ‌ ಬಂದಿದ್ದರು. ಆದರೆ ಇದೀಗ ಅಲ್ಲಿ‌ ಕೆಲ‌ ಕಾರ್ಯಕರ್ತರು ಪ್ರಕಾಶ್ ರೈ ಬಂದು ಹೋಗಿದ್ದ ಮಂಟಪಕ್ಕೆ‌ “ಗೋಮೂತ್ರ ಪ್ರೋಕ್ಷಣೆ” ಮಾಡುವ ಮೂಲಕ ಪ್ರಕಾಶ್ ರೈ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕಾಶ್ ರೈ ಹಿಂದೂ ವಿರೋಧಿ.ಆದ್ದರಿಂದ ಮಠದ ಸಭಾ ಮಂಟಪಕ್ಕೆ ಬಂದಿರುವುದರಿಂದ ಮಂಟಪ ಅಶುದ್ಧವಾಗಿದೆ.ಅದಕ್ಕಾಗಿಯೇ ಗೋಮೂತ್ರ ಪ್ರೋಕ್ಷಣೆ ಮಾಡುವ ಮೂಲಕ ಶುದ್ಧಗೊಳಿಸಲಾಗಿದೆ ಎಂದು ಪ್ರಕಾಶ್ ರೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕಾಶ್ ರೈ ಮಂಟಪದೊಳಗೆ ಪ್ರವೇಶಿಸಿದ್ದರಿಂದ ಮಂಟಪ ಅಪವಿತ್ರವಾಗಿದೆ.ಆದ್ದರಿಂದ ನಾವೆಲ್ಲರೂ ಸೇರಿ ಶುದ್ಧಿಗೊಳಿಸಿದ್ದೇವೆ ಎಂದು ಅಲ್ಲಿದ್ದ ಕಾರ್ಯಕರ್ತರು ಹೇಳಿದ್ದಾರೆ.

ಈ ಹಿಂದೆಯೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಗ್ಗೆ ಕೀಳಾಗಿ ಮಾತನಾಡಿದ್ದ ಪ್ರಕಾಶ್ ರೈ “ಯೋಗಿ ಆದಿತ್ಯನಾಥ್ ವೇಷಭೂಷಣ ನೋಡಿದರೆ ಯಾವುದೋ ದೇವಸ್ಥಾನದ ಪೂಜಾರಿಯಂತೆ ಕಾಣುತ್ತಾರೆ” ಎಂದು ಹೇಳುವ ಮೂಲಕ ಸಾಧು ಸಂತರುಗಳ ವೇಷಭೂಷಣದ ಬಗ್ಗೆ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದರು.
ಈ ಮೂಲಕ ಹಿಂದೂಗಳ ಆಚಾರ ವಿಚಾರಗಳ ಬಗ್ಗೆ ಕೀಳಾಗಿ ಮಾತನಾಡಿದ್ದರು.

ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿ ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿರುವ ಪ್ರಕಾಶ್ ರೈ ಗೆ ರಾಜ್ಯ ಸರಕಾರ ಪ್ರಶಸ್ತಿಗಳನ್ನು ನೀಡುತ್ತಿದೆ.
ಪ್ರಕಾಶ್ ರೈ ಹೋದಲ್ಲೆಲ್ಲಾ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ…!

–ಅರ್ಜುನ್

Tags

Related Articles

Close