ಪ್ರಚಲಿತ

ಪ್ರಸ್ತುತ ಸಮಯದಲ್ಲಿ ಮೋದಿಯಂತಹ ನಾಯಕ ಭಾರತಕ್ಕೆ ಬೇಕಿತ್ತಾ? ಪ್ರತೀಯೊಬ್ಬ ಭಾರತೀಯನೂ ನೋಡಲೇ ಬೇಕಾದ ಸ್ಟೋರಿ!!

ರಸ್ತೆ ಬದಿಗಳಲ್ಲಿ ಮುತ್ತುರತ್ನಗಳನ್ನು ಸೇರಿನಲ್ಲಿ‌‌ ಅಳೆದು ಮಾರುತ್ತಿದ್ದ ಜಗತ್ತಿನಲ್ಲೇ ಶ್ರೀಮಂತ ರಾಷ್ಟ್ರವಾಗಿದ್ದ ಭಾರತ ಬ್ರಿಟೀಷರ ಪ್ರಭಾವದಿಂದ ಕ್ರಮೇಣ ತನ್ನ ಶ್ರೀಮಂತಿಕೆಯನ್ನು ಕಳೆದುಕೊಳ್ಳುತ್ತಾ ಬಂತು.

ಸ್ವಾತಂತ್ರ್ಯ ದೊರೆತ ನಂತರದಲ್ಲಿ ಕಾಂಗ್ರೆಸ್ ಈ ಛಾಳಿ ಮುಂದುವರೆಸಿತು. ಹೆಸರಿಗೆ ಮಾತ್ರ ಭಾರತ ಬ್ರಿಟೀಷರಿಂದ ಸ್ವತಂತ್ರವಾಯಿತು. ಆದರೆ ಈ ಕಾಂಗ್ರೆಸ್ ನ ಅತಿರೇಕದ ಬೂಟಾಟಿಕೆಯಿಂದ ಭಾರತ ಜಗತ್ತಿನ ಎದುರು ಅದೆಷ್ಟೋ ಬಾರಿ ತಲೆಬಾಗುವಂತೆ ಮಾಡಿತ್ತು.

ಭಾರತದ ಅಭಿವೃದ್ಧಿಗೆ ಅಥವಾ ಭಾರತದ ಏಳಿಗೆಗಾಗಿ ಯಾರೇ ಶ್ರಮಿಸಿದರು ಅಂತವರನ್ನು ಕಾಂಗ್ರೆಸ್ ಮೇಲೇಳಲು ಬಿಡುತ್ತಿರಲಿಲ್ಲ. ಯಾಕೆಂದರೆ ಕಾಂಗ್ರೆಸ್ ಗೆ ಬೇಕಾಗಿರುವುದು ತಮ್ಮ ಅಭಿವೃದ್ಧಿಯೇ ಹೊರತು ದೇಶವಲ್ಲ. ಇದೇ ಕಾರಣಕ್ಕೆ ಅಪ್ಪ ,ಮಗಳು ,ಮಗ ,ಸೊಸೆ ಹೀಗೇ ತನ್ನ ಕುಟುಂಬದ ಸದಸ್ಯರನ್ನೇ ರಾಷ್ಟ್ರ ರಾಜಕಾರಣಕ್ಕೆ ತಂದು ಕೂರಿಸುತ್ತಿರುವುದು.

ಆದರೆ 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ದೇಶವೇ ಅಚ್ಚರಿ ಪಡುವಂತೆ ಗೆಲುವು ಸಾಧಿಸಿದ ‘ಶ್ರೀ ನರೇಂದ್ರ ಮೋದಿಯವರು’ ಭಾರತದ ಪ್ರಧಾನಮಂತ್ರಿ ಪಟ್ಟ ಅಲಂಕರಿಸಿದರು. ಅಧಿಕಾರಕ್ಕೆ ಏರುತ್ತಿದ್ದಂತೆ “ತಾನೊಬ್ಬ ದೇಶದ ಪ್ರಧಾನ ಸೇವಕ” ಎಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರು ಇಡೀ ದೇಶದ ಜನರ ಮನಸ್ಸನ್ನು ಗೆದ್ದುಬಿಟ್ಟರು.

ಪ್ರಮಾಣವಚನ ಸ್ವೀಕರಿಸಲು ಸಂಸತ್ ನ ಮೆಟ್ಟಿಲಲ್ಲಿ ಎದೆಯುಬ್ಬಿಸಿ ಜಂಬದಿಂದ ನಡೆದುಕೊಳ್ಳುವ ರಾಜಕಾರಣಿಗಳ ಮಧ್ಯೆ “ಸಂಸತ್ ಭವನದ ಮೆಟ್ಟಿಲುಗಳಿಗೆ ಮಂಡಿಯೂರಿ ನಮಸ್ಕರಿಸಿ” ನಂತರದಲ್ಲಿ ಪ್ರಮಾಣವಚನ ಸ್ವೀಕರಿಸಿದ ‘ಶ್ರೀ ನರೇಂದ್ರ ಮೋದಿ’ಯಂತಹ ವ್ಯಕ್ತಿತ್ವದ ನಾಯಕನಿಗೆ ಇಡೀ ದೇಶದ ಜನತೆ ತಲೆಬಾಗಿತ್ತು.

ಪ್ರಧಾನಮಂತ್ರಿ ಪಟ್ಟ ಅಲಂಕರಿಸಿದ ದಿನದಿಂದಲೇ ದೇಶದ ಅಭಿವೃದ್ಧಿಗೆ ಬೇಕಾದ ನಾನಾ ಯೋಜನೆಗಳನ್ನು ಜಾರಿಗೊಳಿಸಿ ದೇಶದ ಜನಸಾಮಾನ್ಯನೂ ಉತ್ತಮನಾಗಿ ಬದುಕುವ ಅವಕಾಶ ಕಲ್ಪಿಸುವಂತಹ ಯೋಜನೆಗಳನ್ನು ತಂದರು.

ಭಾರತದ ಪರಂಪರೆಯಾದ ‘ಯೋಗ’ವನ್ನು ಭಾರತ ಮಾತ್ರವಲ್ಲದೆ ಇಡೀ ಜಗತ್ತೇ ತಮ್ಮ ದೇಶದಲ್ಲಿ ಮಾಡುವಂತೆ ಈ ಪುಣ್ಯಾತ್ಮ ಮಾಡುತ್ತಾರೆ ಎಂದರೆ ಇವರ ಮಾತಿಗಿರುವ ಆ ಶಕ್ತಿಯನ್ನು ಕಾಣಬಹುದು.

ಮೋದಿಯವರ ಒಂದೇ ಒಂದು ಮಾತಿಗೆ ಇಡೀ ಜಗತ್ತೇ ತಲೆಬಾಗುತ್ತೆ ಎಂಬೂದಕ್ಕೆ ಇದೇ ಸಾಕ್ಷಿ. ಭಾರತದ ಮಾತಿಗೆ ಜಗತ್ತಿನಲ್ಲಿ ಮತ್ತೆ ಮನ್ನಣೆ ದೊರಕುತ್ತಿದೆ ಎಂದರೆ ಅದಕ್ಕೆ ‘ಮೋದಿ’ ಎಂಬ ಯುಗಾವತಾರಿಯೇ ಕಾರಣ.

ಯುಗಾವತಾರಿ ಎಂದಾಗ ಆಶ್ಚರ್ಯವಾಗಬಹುದು.ಆದರೆ ದೇಶದಲ್ಲಿ ‘ಮೋದಿಯವರು ನಡೆಸುತ್ತಿರುವ ಮೋಡಿ’ಗೆ ‘ಯುಗಾವತಾರಿ’ ಎಂದರೆ ತಪ್ಪಾಗದು. ಹೊದಲ್ಲೆಲ್ಲಾ ಬ್ರಹತ್ ಜನಸಾಗರವನ್ನೇ ಸೇರಿಸುತ್ತಿರುವ ‘ಮೋದಿ ಎಂಬ ಶಕ್ತಿಗೆ’ ಯಾರೂ ಸಾಟಿಯಿಲ್ಲ.

‘ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕು’ ಎಂಬ ಮಾತು ಮೋದಿಯವರನ್ನು ನೋಡಿದಾಗ ನೆನಪಾಗುತ್ತದೆ. ಯಾಕೆಂದರೆ ಮೋದಿಯವರ ಹೆಸರಿಗೇ ಆ ಶಕ್ತಿಯಿದೆ. ಮೋದಿಯವರು ಬರುತ್ತಾರೆ ಎಂದರೆ ಸಾಕು ಅಲ್ಲಿ ಜನಸಾಗರವೇ ಬಂದು ಸೇರುತ್ತದೆ.

ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲು ಹೋದರೆಂದರೆ ಸಾಕು ಅಲ್ಲಿಯೂ ಜನರ ದಂಡೇ ಸೇರುತ್ತದೆ.ಇದು ಭಾರತಕ್ಕೆ ಹೆಮ್ಮೆಯ ವಿಚಾರವೂ ಹೌದು.

ವಿದೇಶ ನೆಲದಲ್ಲಿ ನಿಂತು ಭಾರತವನ್ನು ಪ್ರತಿನಿಧಿಸುತ್ತಾ ಮಾತನಾಡುವುದನ್ನು ಕಂಡಾಗ ‘ವಿವೇಕಾನಂದರು ಅಮೇರಿಕಾದಲ್ಲಿ ನಿಂತು ಭಾರತವನ್ನು ಪ್ರತಿನಿಧಿಸುತ್ತಾ ಮಾತನಾಡಿದ್ದು’ ನೆನಪಾಗುತ್ತದೆ. ವಿವೇಕಾನಂದರ ಅಂದಿನ ಮಾತು ನೆನಪಾಗುತ್ತದೆ. ಯಾಕೆಂದರೆ ಭಾರತದ ಬಗ್ಗೆ ಕೆಟ್ಟ ಭಾವನೆ ಹೊಂದಿದ್ದ ವಿದೇಶಿಗರ ಆಲೋಚನೆಗಳನ್ನೇ ಬದಲಾಯಿಸುವಂತೆ ಮಾಡಿದರು ‘ಸ್ವಾಮಿ ವಿವೇಕಾನಂದರು’. ಸ್ವಾಮೀಜಿಯ ಮಾತಿನಿಂದಾಗಿ ಜಗತ್ತೇ ಭಾರತವನ್ನು ನೋಡುವ ದ್ರಷ್ಠಿ ಬದಲಾಯಿಸಿತು.

ಕಾಂಗ್ರೆಸ್ ಆಡಳಿತದ ಸಮಯದಲ್ಲಿ ಭಾರತ ಎಷ್ಟು ದುರ್ಬಲಗೊಂಡಿತ್ತು ಎಂದರೆ ಇಡೀ ಜಗತ್ತೇ ಭಾರತವನ್ನು ಮೂಲೆಗುಂಪು ಮಾಡಿದ ರೀತಿಯಲ್ಲಿ ವರ್ತಿಸುತ್ತಿತ್ತು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಮಯದಲ್ಲಿ ಹೆಸರಿಗೆ ಮಾತ್ರ ಪ್ರಧಾನಮಂತ್ರಿಯಾಗಿದ್ದರೇ ವಿನಃ ಭಾರತ ಗರ್ವದಿಂದ ಹೇಳುವಂತಹ ಯಾವುದೇ ಕ್ರಮಕೈಗೊಳ್ಳಲಿಲ್ಲ. ಕಾಂಗ್ರೆಸ್ ನ ಪಾಲಿಗೆ ‘ಭಾರತದಲ್ಲಿರುವ ಇಟಲಿಯ ಮಾತೆಯ’ ಕೈಗೊಂಬೆಯಂತೆ ಆಡುತ್ತಿದ್ದವರು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ರವರು.

ಭಾರತೀಯ ಸೈನಿಕರ ಮೇಲೆ ಪಾಕಿಸ್ತಾನ ಸೇನೆ ಅಥವಾ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲೂ ಈ ಕಾಂಗ್ರೆಸ್ ಸರಕಾರ ಕೈಕಟ್ಟಿ ಕೂತು ಷಂಡತನ ತೋರಿಸಿದ್ದರಿಂದಲೇ ನಮ್ಮ ಸೈನಿಕರ ಜೀವಕ್ಕೆ ಬೆಲೆ ಇಲ್ಲದಂತಾಗಿತ್ತು.
‘ಸೈನಿಕರ ಕೈಗೆ ಬಂದೂಕು ಕೊಟ್ಟು ಅವರ ಕೈಗಳನ್ನು ಕಟ್ಟಿಹಾಕಿದ್ದ ಕಾಂಗ್ರೆಸ್ ಸರಕಾರ ಭಾರತವನ್ನು ಜಗತ್ತಿನ ‌ಮುಂದೆ ತಲೆತಗ್ಗಿಸುವಂತೆ ಮಾಡಿತ್ತು.’

 

ಆದರೆ ಯಾವಾಗ ಶ್ರೀ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಸ್ಥಾನಕ್ಕೆ ಏರಿದರೋ ಅಂದಿನಿಂದಲೇ ಭಾರತ ಮತ್ತೆ ಜಗತ್ತಿನ ಮುಂದೆ ತಲೆ ಎತ್ತಿ ನಿಲ್ಲುವ ಹಾಗೆ ಮಾಡಿದ್ದಾರೆ. ಭಾರತೀಯ ಸೇನೆಯ ಬಗ್ಗೆ ಅತೀವವಾದ ಒಲವು ಹೊಂದಿರುವ ಮೋದಿಯವರು ಸೈನಿಕರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಜಾರಿಗೊಳಿಸುತ್ತಾ ಬಂದರು.

ಭಾರತೀಯ ಸೇನಾ ವಾಯುನೆಲೆಯ ಮೇಲೆ ಪಾಕಿಸ್ತಾನದ ಉಗ್ರರು ದಾಳಿ ನಡೆಸಿ ನಮ್ಮ ಸೈನಿಕರನ್ನು ಹತ್ಯೆ ಮಾಡಿದ ಕೆಲವೇ ದಿನಗಳಲ್ಲಿ ಪಾಕಿಸ್ತಾನದ ಗಡಿ ಪ್ರವೇಶಿಸಿ ಪಾಕಿಸ್ತಾನದ ಗಡಿಭಾಗದಲ್ಲಿ ನೆಲೆಸಿರುವ ಉಗ್ರರ ಅಡಗುತಾಣ ಮತ್ತು ಪಾಕಿಸ್ತಾನ ಸೈನಿಕರ ಮೇಲೆ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದ ಭಾರತೀಯ ಸೇನೆಗೆ ಬಗ್ಗೆ ಇಡೀ ಜಗತ್ತಿನಾದ್ಯಂತ ಪ್ರಶಂಸೆ ವ್ಯಕ್ತವಾಯಿತು.
ಈ ಪ್ರಶಂಸೆಯ ಗೌರವವೂ ‘ಮೋದಿ ಸರಕಾರಕ್ಕೆ’ ತಲುಪಬೇಕಾದದ್ದು.

 

ಚುನಾವಣಾ ದ್ರಷ್ಠಿಯಿಂದ ಯಾವುದೇ ಯೋಜನೆಗಳನ್ನು ಜಾರಿಗೊಳಿಸದೆ ದೇಶದ ಮತ್ತು ಜನರ ಹಿತದ್ರಷ್ಠಿಯಿಂದ ನಾನಾ ಯೋಜನೆಗಳನ್ನು ಜಾರಿಗೊಳಿಸುತ್ತಾ ಬಂದಿರುವ ಮೋದಿಯವರಿಗೆ ದೇಶದೆಲ್ಲೆಡೆ ಪ್ರಶಂಸೆ ವ್ಯಕ್ತವಾಯಿತು.

ದೇಶದ ಅಭಿವೃದ್ಧಿಯನ್ನು ಸಹಿಸದ ಎಲ್ಲರೂ ಮೋದಿಯವರ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸುತ್ತಾ ಬಂದರು.ಆದರೆ ದೇಶದ ಜನತೆ ಮಾತ್ರ ಮೋದಿಯವರ ಪರವಾಗಿ ನಿಂತಿತ್ತು ಎಂಬೂದಕ್ಕೆ ಇತ್ತೀಚೆಗೆ ನಡೆದ ಕೆಲವು ರಾಜ್ಯದ ಚುನಾವಣೆಗಳೇ ಸಾಕ್ಷಿ.

‘ನೋಟ್ ಬ್ಯಾನ್ , ಜಿ ಎಸ್ ಟಿ’ ಯಂತಹ ಬಹಳ ಗಂಭೀರವಾದ ನಿಯಮಗಳನ್ನು ಜಾರಿಗೊಳಿಸಿಯೂ ದೇಶದೆಲ್ಲೆಡೆ ಮೋದಿಗೆ ಸಿಗುತ್ತಿರುವ ಗೆಲುವು ಮೋದಿ ಎಂಬ ಶಕ್ತಿಯನ್ನು ಸಾರುತ್ತದೆ.

ಭಾರತವನ್ನು ಪದೇ ಪದೇ ಕೆಣಕುತ್ತಿರುವ ಪಾಕಿಸ್ತಾನವನ್ನು ಜಗತ್ತಿನ ಮುಂದೆ ಮೂಲೆಗುಂಪು ಮಾಡಿದ ಕೀರ್ತಿಯೂ ಮೋದಿಯವರಿಗೆ ಸಲ್ಲುತ್ತದೆ. ಏನೇ ಆಗಲಿ ಭಾರತದ ಪಾಲಿಗೆ ‘ಮೋದಿ’ ಎಂಬ ನಾಯಕನ ಅಗತ್ಯ ಇತ್ತು ಎಂಬೂದರಲ್ಲಿ ಎರಡು ಮಾತಿಲ್ಲ.

–ಅರ್ಜುನ್

Tags

Related Articles

Close