ಪ್ರಚಲಿತರಾಜ್ಯ

ಬೆಳಗ್ಗೆ ಟ್ರಾಫಿಕ್ ಪೊಲೀಸ್ ಕೆಲಸ ನಿರ್ವಹಿಸಿದ ನಳಿನ್ ಕುಮಾರ್ ಕಟೀಲ್ ಸಂಜೆಯಾಗುತ್ತಿದ್ದಂತೆ ಪೊಲೀಸರ ಮೇಲೆ ಕೆಂಡಾಮಂಡಲವಾಗಿದ್ಯಾಕೆ?!

ಅಂತು ಇಂತು ವಿರೋಧಿಗಳ ಆಟ ನಡೆಯಲೇ ಇಲ್ಲ. ತುಘಲಕ್ ಸರ್ಕಾರದ ಆಟವನ್ನು ತಡೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಹಿಂದು ಹುಲಿಗಳು. ಸತ್ಯಕ್ಕೆ ಜಯವಾಗುತ್ತೆ ಅನ್ನೋ ಮಾತು ಸುಳ್ಳಾಗಲಿಲ್ಲ ಅದಕ್ಕೆ ಸಾಕ್ಷಿ ಎನ್ನುವಂತೆ ಇವತ್ತು ಮಂಗಳೂರು ಚಲೋ ಕಾರ್ಯಕ್ರಮ ಯಶಸ್ವಿಯಾಯಿತು.

ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಹಿಂದುಗಳ ಸರಣಿ ಹತ್ಯೆಗಳನ್ನು ಖಂಡಿಸಿ PFI ಮತ್ತು SDPI ಮುಸ್ಲಿಂ ಉಗ್ರ ಸಂಘಟನೆಗಳನ್ನು ನಿಷೇಧಿಸಬೇಕು
ಮತ್ತು ಈ ಹತ್ಯೆಯ ಪ್ರಕರಣಕ್ಕೆ ರಮಾನಾಥ ರೈ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಮಂಗಳೂರು ಚಲೋ ರ್ಯಾಲಿ ಹಮ್ಮಿಕೊಂಡಿತ್ತು.

ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಅಂತ ಎಲ್ಲರಿಗೂ ಗೊತ್ತಿರೋ ವಿಷಯವೇ. ಅದರಲ್ಲೂ ಸಿದ್ರಾಮಯ್ಯನವರು ತುಘಲಕ್ ಇದ್ದಂತೆ!!

ಬಿಜೆಪಿ ಯುವ ಮೋರ್ಚಾ ನಿರ್ಧರಿಸಿದ ಮಂಗಳೂರು ಚಲೋ ರ್ಯಾಲಿಯನ್ನು ಹಮ್ಮಿಕೊಳ್ಳಲು ಕಾಂಗ್ರೆಸ್ ಸರ್ಕಾರ ನಿರಾಕರಿಸಿತ್ತು. ಆಗ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ತಾಕತ್ತಿದರೆ ತಡೆಯಲಿ ಎಂದು ಗರ್ಜಿಸಿದ್ದರು. ಹಾಗೂ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿಯೇ ಬಿಟ್ಟರು.

ಮಂಗಳೂರಿನಲ್ಲಿ ನಡೆದ ರ್ಯಾಲಿಯಲ್ಲಿ ಕಾಂಗ್ರೆಸ್ ಸರ್ಕಾರದ ಆದೇಶದ ಮೇರೆಗೆ ಪೊಲೀಸ್ ಅಧಿಕಾರಿಗಳು ದರ್ಪ ತೋರಿಸಿದ್ದರು.

ಪ್ರತಿಭಟನೆಯಲ್ಲಿ ಕರ್ನಾಟಕದ ಎಲ್ಲಾ ಭಾಗದ ಬಿಜೆಪಿಯ ಕಾರ್ಯಕರ್ತರು,ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು. ಆ ಕಾರ್ಯಕ್ರಮ ಹಿಂದುಗಳ ಸ್ವಾಭಿಮಾನದ ಕಾರ್ಯಕ್ರಮವಾಗಿತ್ತು. ಆ ಕಾರ್ಯಕ್ರಮಕ್ಕೆ ಭಾಗವಹಿಸಿದ ಕಾರ್ಯಕರ್ತರಿಗೆ ಅಲ್ಲಿಯೇ ಇದ್ದ ಗೋರಕ್ಷಕನಾಥ ಸಭಾಭವನದಲ್ಲಿ ಊಟ ಏರ್ಪಡಿಸಿದ್ದರು.

ದಕ್ಷಿಣ ಕನ್ನಡ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ ಹಾಗೂ ಮಹಿಳಾ ಮೋರ್ಚಾ ಕಾರ್ಯದರ್ಶಿ ಮತ್ತು ಇತರ ಹಿಂದು ಮಹಿಳಾ ಕಾರ್ಯಕರ್ತರು ಊಟ ಮಾಡುತ್ತಿದ್ದಂತೆ ಪೊಲೀಸರು ಹೊರಗಿನಿಂದ ಬಾಗಿಲು ಮುಚ್ಚಿ ಲಾಕ್ ಮಾಡಿದ್ದಾರೆ. ನಾವು ಹೋಗಬೇಕು, ಬಾಗಿಲು ತೆರೆಯಿರಿ ಎಂದಾಗ ಪೊಲೀಸರು ಇನ್ನರ್ಧ ಗಂಟೆ ಇಲ್ಲಿಯೇ ನೀವು ಇರಬೇಕು ಎಂದಿದ್ದಾರೆ. ಇದರ ನಂತರ ಪೂಜಾ ಪೈ ಅವರು ಮನಪಾ ಸದಸ್ಯೆ ರೂಪಾ ಡಿ ಬಂಗೇರ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅವರು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ವಿಷಯ ತಿಳಿದುಕೊಂಡ ನಳಿನ್ ಕುಮಾರ್ ಕಟೀಲು ಅವರು ಸ್ಥಳಕ್ಕೆ ಧಾವಿಸಿದ್ದಾರೆ. ಗೋರಕ್ಷಕನಾಥ ಹಾಲ್ ಗೆ ಸಂಸದರು ಬಂದು ಒಳಗೆ ಹೋಗಿ ಪರಿಸ್ಥಿತಿ ಅವಲೋಕಿಸುತ್ತಿದ್ದಂತೆ ಮತ್ತೆ ಬಾಗಿಲು ಮುಚ್ಚಿ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ. ಅಷ್ಟೊತ್ತಿಗೆ ಗಂಟೆ ಮೂರು ಕಳೆದಿದೆ. ಹೀಗೆ ಏಕೆ ಮಾಡುತ್ತಿದ್ದಿರಿ, ಯಾಕೆ ಮಹಿಳೆಯರನ್ನು ಹಿಂಸಿಸುತ್ತಿದ್ದಿರಿ ಎಂದು ನಳಿನ್ ಅವರು ಮತ್ತೆ ಮತ್ತೆ ಪ್ರಶ್ನಿಸುತ್ತಿದ್ದರೂ ಪೊಲೀಸ್ ಅಧಿಕಾರಿ ಮಾರುತಿ ನಾಯಕ್ ಅಸಂಬದ್ಧವಾಗಿ ಉತ್ತರಿಸಲು ಪ್ರಯತ್ನಿಸಿದ್ದಾರೆ.

ನಿಮಗೆ ರಾಜ್ಯ ಸರಕಾರದಿಂದ ಏನು ಸೂಚನೆ ಬಂದಿದೆ, ಹೇಳಿ ಬಿಡಿ. ಅದು ಬಿಟ್ಟು ಸುಮ್ಮನೆ ಭಾರತೀಯ ಜನತಾ ಪಾರ್ಟಿಯ ಮಹಿಳೆಯರ ಮೇಲೆ ನಿಮ್ಮ ದರ್ಪ
ತೋರಿಸಲು ಹೋಗಬೇಡಿ.

ಈ ರೀತಿಯ ವರ್ತನೆಯನ್ನು ನೀವು ತೋರಿಸುವ ಮೂಲಕ ಯಾರ ತಾಳಕ್ಕೆ ಕುಣಿಯುತ್ತಿದ್ದಿರಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದೆಂತಹ ಪೊಲೀಸ್ ಗಿರಿ ಎಂದು ಸಂಸದರು ಪ್ರಶ್ನಿಸಿದ್ದಾರೆ.

ಒಂದು ವೇಳೆ ಮಂಗಳೂರು ಚಲೋಗೆ ಬಂದಿರುವ ಮಹಿಳಾ ಕಾರ್ಯಕರ್ತರನ್ನು ಮಾನಸಿಕವಾಗಿ ಹೆದರಿಸಲೇಬೇಕು ಎಂದು ನೀವು ನಿರ್ಧರಿಸಿದ್ದಲ್ಲಿ ಅದಕ್ಕೆ ಜವಾಬು ಕೊಡಲು ಭಾರತೀಯ ಜನತಾ ಪಾರ್ಟಿಯ ಸಂಸದರು, ಮುಖಂಡರು ಕೈಗೆ ಬಳೆ ತೊಟ್ಟು ಕುಳಿತಿಲ್ಲ ಎನ್ನುವುದು ನಿಮಗೆ ನೆನಪಿರಲಿ ಎಂದು ಹಿಂದುತ್ವವಾದಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಗರ್ಜಿಸಿದ್ದಾರೆ.

ಕಾರ್ಯಕರ್ತರ ರಕ್ಷಣೆಗೆ ಧಾವಿಸಿ ಗರ್ಜಿಸಿದ ಸಂಸದ ನಳಿನ್ ಕುಮಾರ ಅವರು ಕಾರ್ಯಕರ್ತರ ಮೇಲೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದಾರೆಂದು ಇದರಿಂದಲೇ
ತಿಳಿಯುತ್ತದೆ. ಹಿಂದು ಕಾರ್ಯಕರ್ತರು ದುಡ್ಡಿಗೆ ಆಸೆ ಪಡಲ್ಲ ನಾಯಕನ ಬೆಂಬಲಕ್ಕೆ ಆಸೆ ಪಡ್ತಾರೆ. ನಳಿನ್ ಕುಮಾರ್ ಕಟೀಲ್ ಅವರು ಕಾರ್ಯಕರ್ತರ ಬೆಂಗಾವಲಂತೆ ಆ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದ್ದರು.

ಮಂಗಳೂರು ಚಲೋ ಕಾರ್ಯಕ್ರಮದ ಹಿನ್ನಲೆಯಲ್ಲಿ ಮಂಗಳೂರಿನ ಜನ ನಿಬಿಡ ಪ್ರದೇಶವಾದ ಜ್ಯೋತಿ ಸರ್ಕಲ್ ನಲ್ಲಿ ತುಂಬಾ ಟ್ರಾಫಿಕ್ ಕಿರಿಕಿರಿ ಆಗಿತ್ತು. ಸಂಸದ ನಳಿನ್ ಕುಮಾರ್ ಕಟೀಲರೆ ಖುದ್ದಾಗಿ ರೋಡಿಗೆ ಇಳಿದು ಟ್ರಾಫಿಕ್ ನಿಯಂತ್ರಿಸಿದ್ದರು. ಇಂತಹ ಮಾದರಿಯ ನಾಯಕರನ್ನೇ ನಾವುಗಳು ಬಯಸೋದು.

ಮೇ 31 ರಂದು ಮಂಗಳೂರಿನ ಬೋಂದೆಲ್ ಬಳಿ 2 ಬೈಕಗಳ ಮಧ್ಯೆ ಡಿಕ್ಕಿಯಾಗಿ ಗಾಯಗೊಂಡ ಮಹಿಳೆಯನ್ನು ಅದೇ ದಾರಿಯಲ್ಲಿ ಹೋಗುತ್ತಿದ್ದ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದರು. ಕಂಡು ಕಾಣದಂತೆ ಹೋಗುವ ರಾಜಕಾರಣಿಗಳ ಮಧ್ಯೆ ಇಂತಹ ಶ್ರೇಷ್ಠ ರಾಜಕಾರಣಿಗಳೂ ಇರ್ತಾರೆ ಅನ್ನೋದಕ್ಕೆ ನಳಿನ್ ಕುಮಾರ್ ಕಟೀಲ್ ಅವರೇ ಸಾಕ್ಷಿ‌.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ ಮಳೆ ಹಾನಿಗಾಗಿ ಸಂಸದರ ವಿಶೇಷ ನಿಧಿಯಿಂದ 1.5 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿಸಿದ್ದು ಅದೇ ನಳಿನ್
ಕುಮಾರ್ ಕಟೀಲರು.

ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಶ್ರೀ ಜಯ ಪ್ರಭಾಕರ ಬಲ್ಲಾಳ್ ಇವರ ವೈಧ್ಯಕೀಯ ಚಿಕಿತ್ಸೆಗೆ ನಳಿನ್ ಕುಮಾರ್ ಕಟೀಲರು ಪ್ರಧಾನಿ ರಾಷ್ಟ್ರೀಯ
ನಿಧಿಯಿಂದ 3 ಲಕ್ಷ ಪರಿಹಾರ ಬಿಡುಗಡೆ ಮಾಡಿಸಿದ್ದರು.

ಇಂತಹ ಅನೇಕ ಕಾರ್ಯಗಳನ್ನು ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಅಚ್ಚುಮೆಚ್ಚಿನ ರಾಷ್ಟ್ರವಾದಿ,ಪ್ರಖರ ಹಿಂದುವಾದಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜನ ನೆಚ್ಚಿನ ಸಂಸದರೆನಿಸಿಕೊಂಡಿದ್ದಾರೆ.

ಇಂತಹ ಮಾದರಿಯ ನಾಯಕರು ಭಾರತದಲ್ಲೆಡೆ ಜಯಭೇರಿ ಭಾರಿಸಿ ಹಿಂದುಗಳನ್ನು ರಕ್ಷಿಸಲಿ ಅನ್ನೋದೆ ಹಿಂದುಗಳ ಕೋರಿಕೆ.

ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪೊಲೀಸರೊಂದಿಗೆ ಮಾತನಾಡಿದ ವಿಡಿಯೋ ವೈರಲ್ ಆಗಿದೆ.

 

-ಮಹೇಶ್

Tags

Related Articles

Close