ಪ್ರಚಲಿತ

ಬ್ರೇಕಿಂಗ್: ಮತ್ತೊಮ್ಮೆ ಮೋದಿಯನ್ನು ನಿಂದಿಸಲು ಸಜ್ಜಾಗಿದ್ದಾರೆ ಈ ದೇಶದ್ರೋಹಿಗಳು!! ಗೌರಿ ಲಂಕೇಶ್ ಹತ್ಯೆಗೂ ಮೋದಿಗೂ ಏನು ಸಂಬಂಧ?!

33ಗೌರಿ ಲಂಕೇಶ್ ಹತ್ಯೆ ನಡೆದು ಸುಮಾರು 4 ತಿಂಗಳುಗಳೇ ಕಳೆದು ಹೋಯಿತು. ಆದರೂ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಸರ್ಕಾರ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿತ್ತು. ನಿನ್ನೆ ತಾನೇ ಇಬ್ಬರು ಆರೋಪಿಗಳನ್ನು ಬಂಧಿಸಿ ಕಾಲರ್ ಟೈಟ್ ಮಾಡಿಕೊಂಡಿದ್ದರು. ಪ್ರಕರಣವನ್ನು ಸಿಬಿಐ ಗೆ ವರ್ಗಾಯಿಸಿ ಎಂದು ಬೊಬ್ಬೆ ಬಿಟ್ಟರೂ ರಾಜ್ಯ ಕಾಂಗ್ರೆಸ್ ಸರ್ಕಾರ ಮಾತ್ರ ತೆಪ್ಪಗೆ ಮಲಗಿತ್ತು. ಬಲಪಂಥೀಯರು, ಹಿಂದೂ ಸಂಘಟನೆಯ ಕಾರ್ಯಕರ್ತರು ಎಂಬಂತೆ ಒಬ್ಬೊಬ್ಬರನ್ನೇ ಬಂಧಿಸಿ ವಿಚಾರಣೆಗೊಳಪಡಿಸಿದರೂ ಏನೂ ಪ್ರಯೋಜನವೇ ಆಗಿಲ್ಲ. ಬರೋಬ್ಬರಿ 4 ತಿಂಗಳ ನಂತರ ಈಗ ಇಬ್ಬರು ಆರೋಪಿಗಳನ್ನು ಬಂಧಿಸಿ ಸೈ ಎನಿಸಿಕೊಂಡಿದ್ದಾರೆ.

ಬೀದಿಗಿಳಿದಿದ್ದ ಗೌರಿಗಳು..!

ಪತ್ರಕರ್ತೆ ಹಾಗೂ ಎಡಪಂಥೀಯರ ನಾಯಕಿ ಗೌರಿ ಲಂಕೇಶ್ ಹತ್ಯೆಯ ಬೆನ್ನಲ್ಲೇ ಬೆಂಗಳೂರಿನಲ್ಲಿ ಹಲವಾರು ಗೌರಿಗಳು ಬೀದಿಗಿಳಿದಿದ್ದರು. ಉಮರ್ ಖಾಲಿದ್, ಜಿಗ್ನೇಶ್ ಮೇವಾನಿ, ಪ್ರಕಾಶ್ ರೈ, ಚಂಪಾ ಸಹಿತ ಅನೇಕ ಜಾತ್ಯಾತೀತ ಎಂಬ ನಾಮದೇಯವನ್ನು ಇಟ್ಟುಕೊಂಡಿರುವ ನಾಯಕರು ಅಂದು ಬೀದಿಗಿಳಿಯುತ್ತಾರೆ. “ನಾನು ಗೌರಿ” ಎಂಬ ಹೆಸರನ್ನು ಇಟ್ಟುಕೊಂಡು ಬೀದಿಗೆ ಬಂದು ಪ್ರತಿಭಟನೆ ಮಾಡುತ್ತಾರೆ. ಗೌರಿ ಲಂಕೇಶ್ ಹಂತಕರನ್ನು ಬಂಧಿಸಿ ಎಂದು ಆಕ್ರೋಷವನ್ನು ವ್ಯಕ್ತಪಡಿಸುತ್ತಾರೆ.

ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ “ನಾನು ಗೌರಿ”ಗಳು!!!

ಗೌರಿ ಲಂಕೇಶ್ ಹತ್ಯೆ ನಡೆದಿದ್ದು ಕರ್ನಾಟಕದಲ್ಲಿ, ಸಾಹಿತಿ ಕಲಬುರ್ಗಿಯ ಹತ್ಯೆಯಾಗಿದ್ದು ಕೂಡಾ ಕರ್ನಾಟಕದಲ್ಲಿಯೇ… ಈ ಎರಡೂ ಹತ್ಯೆಯ ಪ್ರಕರಣವನ್ನೂ ತನಿಖೆ ನಡೆಸುತ್ತಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರ. ಆದರೆ ಜಾತ್ಯಾತೀತ ನಾಯಕರು ಮಾತ್ರ ಬೊಬ್ಬಿರುವುದು ಮೋದಿಯ ವಿರುದ್ದ. “ಭಾರತೀಯ ಜನತಾ ಪಕ್ಷ ಹಾಗೂ ಪ್ರಧಾನಿ ಮೋದಿಯವರು ಗೌರಿ ಲಂಕೇಶ್ ಹಾಗೂ ಕಲಬುರ್ಗಿ ಹತ್ಯೆಗೆ ಕಾರಣವಾಗಿದ್ದಾರೆ. ಮಾತ್ರವಲ್ಲದೆ ಮೋದಿಯವರು ಈ ಹತ್ಯೆಗಳನ್ನು ಕಡೆಗಣಿಸಿದ್ದಾರೆ” ಎಂದು ಬೀದಿಯಲ್ಲಿ ನಿಂತು ಕಿರುಚಾಡಿದ್ದಾರೆ. ಈ ಎಲ್ಲಾ ಹತ್ಯೆಗಳು ನಡೆದಿದ್ದು ಕರ್ನಾಟಕದಲ್ಲಿ. ಇಲ್ಲಿರುವುದು ಕಾಂಗ್ರೆಸ್ ಸರ್ಕಾರ. ಪ್ರಕರಣದ ತನಿಖೆ ನಡೆಸುತ್ತಿರುವುದೂ ಕಾಂಗ್ರೆಸ್ ಸರ್ಕಾರ. ಆದರೆ ಆರೋಪದ ಸುರಿಮಳೆ ಮಾತ್ರ ಮೋದಿ ಹಾಗೂ ಮೋದಿ ಸರ್ಕಾರಕ್ಕೆ.

ಮತ್ತೆ ಬೀದಿಗಿಳಿಯಲಿದ್ದಾರಂತೆ “ನಾನು ಗೌರಿ”ಗಳು…

ಮತ್ತೆ ದೇಶದ್ರೋಹಿಗಳು ಒಂದಾಗುವ ಕಾಲ ಬಂದಿದೆ. ನಾನು ಗೌರಿ ಎಂದು ಕಿರುಚಾಡಿಕೊಂಡು ಮತ್ತೆ ಮೋದಿಯ ವಿರುದ್ಧ ಬೀದಿಗಿಳಿಯಲು ಗಂಜಿ ಗಿರಾಕಿಗಳು ಸಜ್ಜಾಗಿ ನಿಂತಿದ್ದಾರೆ. ನಾನು ಗೌರಿ ನಾನು ಗೌರಿ ಎಂದು ಎದೆ ಬಡಿದುಕೊಳ್ಳಲು ಮತ್ತೊಮ್ಮೆ ವೇಷ ತೊಡಲು ಸಿದ್ದರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷವನ್ನು ಬಾಯಿಗೆ ಬಂದ ಹಾಗೆ ನಿಂದಿಸಲು ಈ ನಕಲಿ ಜಾತ್ಯಾತೀತವಾದಿಗಳು ಮತ್ತೊಮ್ಮೆ ಟೊಂಕ ಕಟ್ಟಿ ನಿಂತಿದ್ದಾರೆ.

ಜನವರಿ 29 ಮಧ್ಯಾಹ್ನ 2:30ರಿಂದ 8:30ರವರೆಗೆ ಬೆಂಗಳೂರಿನ ಟೌನ್ ಹಾಲ್‍ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. “ಗೌರಿ ದಿನ” ಎಂಬ ಹೆಸರಿನೊಂದಿಗೆ ನಡೆಯುವ ಈ ಕಾರ್ಯಕ್ರಮಕ್ಕೆ ಒಂದಲ್ಲ ಒಂದು ರೀತಿಯಲ್ಲಿ ದೇಶದ್ರೋಹದ ಆರೋಪದ ಮೇಲೆ ಗುರಿಯಾಗಿರುವ ಸೋಗಲಾಡಿ ಸ್ವಯಂ ಘೋಷಿತ ನಾಯಕರೆಲ್ಲರೂ ಭಾಗವಹಿಸಲಿದ್ದಾರೆ.

ಒಂದೇ ವೇದಿಕೆಯಲ್ಲಿ ದೇಶದ್ರೋಹಿಗಳು..!!

ನಮ್ಮೊಳಗಿನೆ ದೇಶದ್ರೋಹಿಗಳು ಯಾರು ಎಂದರೆ ಪಕ್ಕ ನೆನಪಾಗುವುದು ಇದೇ ಸೋಕಾಲ್ಡ್ ಸ್ವಯಂ ಘೋಷಿತ ನಾಯಕರು. ಈ ನಾಯಕರು ಈಗ ಮತ್ತೆ ಗೌರಿಯ ನೆಪವೊಡ್ಡಿ ಬೀದಿಗಿಳಿಯಲಿದ್ದಾರೆ. ಉಮರ್ ಖಾಲಿದ್, ಕನ್ಹಯ್ಯಾ ಕುಮಾರ್, ಸ್ನೇಹ್ಲಾ ರಶೀದ್, ಟೀಸ್ತಾ ಸೆಟಲ್ವಾಡ್, ಜಿಗ್ನೇಶ್ ಮೇವಾನಿ, ಪ್ರಕಾಶ್ ರೈ, ಅಮೀನ್ ಮಟ್ಟು ಸಹಿತ ಎಲ್ಲಾ ನಾಸ್ತಿಕ ವಾದದ ಹಾಗೂ ಒಂದಲ್ಲಾ ಒಂದು ರೀತಿಯಲ್ಲಿ ದೇಶವಿರೋಧಿ ಹೇಳಿಕೆಗಳನ್ನು ನೀಡುತ್ತಾ ಬಂದಿರುವ ನಾಯಕರು. ಇವರೆಲ್ಲರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಓರ್ವ ಸ್ವಯಂ ಘೋಷಿತ ನಾಯಕ ನಾನು ಭಾರತವನ್ನು ತುಂಡು ತುಂಡು ಮಾಡುತ್ತೇನೆ ಎಂದು ಹೇಳಿದರೆ, ಮತ್ತೊಬ್ಬ ನಾಯಕ ದಲಿತರನ್ನು ಎತ್ತಿಕಟ್ಟಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಬಂದವ. ಇನ್ನೂ ಕೆಲವರು ಎಷ್ಟು ಸಾಧ್ಯವೋ ಅಷ್ಟೂ ಸಾಮಥ್ರ್ಯವನ್ನು ಬಳಸಿ ಹಿಂದೂ ಧರ್ಮವನ್ನು ವಾಚಾಮಗೋಚರವಾಗಿ ನಿಂದಿಸಿದವರು. ಹೀಗೆ ಇಂತಹ ನಾಸ್ತಿಕ ಹಾಗೂ ದೇಶದ್ರೋಹಿಗಳು ಮತ್ತೆ ನಾನು ಗೌರಿ ಎಂದು ಕಿರುಚಾಡಿ ಆಸ್ತಿಕರ ಮೇಲೆ ಪ್ರಹಾರ ಮಾಡಲು ಸಜ್ಜಾಗಿ ನಿಂತಿದ್ದಾರೆ.

ಒಂದಂತು ಸತ್ಯ. ಈ ಸೋಗಲಾಡಿ ನಾಯಕರು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ತುಟಿ ಬಿಚ್ಚೋದಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯನ್ನು ನಿಂದಿಸುವ ಬೃಹತ್ ಕಾರ್ಯವನ್ನು ಮಾತ್ರ ಒಂಚೂರೂ ಮರೆಯೋದಿಲ್ಲ ಅನ್ನೋದು ಅಷ್ಟೇ ಸತ್ಯ. ಗೌರಿ ಲಂಕೇಶ್ ಹಾಗೂ ಸಾಹಿತಿ ಕಲಬುರ್ಗಿಯ ಹತ್ಯೆಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲೇ ನಡೆದಿದ್ದರೂ ಆ ಬಗ್ಗೆ ತುಟಿ ಬಿಚ್ಚದ ಈ ಕಾಂಗ್ರೆಸ್ ಪ್ರೇರಿತ ನಕಲಿ ಹೋರಾಟಗಾರರು, ಪಕ್ಕಾ ಆಸ್ತಿಕನಾಗಿರುವ ನಮ್ಮ ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿಯನ್ನು ನಿಂದಿಸಲು ಮಾತ್ರ ಮರೆಯೋದಿಲ್ಲ. ಯಾಕೆಂದರೆ ಅದು ಅವರ ಜನ್ಮಸಿದ್ಧ ಹಕ್ಕಲ್ಲವೇ..?

-ಸುನಿಲ್ ಪಣಪಿಲ

Tags

Related Articles

Close