ಅಂಕಣ

ಭಾರತಕ್ಕೆ ನಿಜಕ್ಕೂ ಬುಲೆಟ್ ಟ್ರೈನ್ ಅನಿವಾರ್ಯವಿತ್ತೇ? ಹೀಗೊಂದು ಅದ್ಭುತ ವಿಶ್ಲೇಷಣೆ.

ಭಾರತೀಯ ರೈಲು ಮತ್ತು ಜಪಾನ್ ಮೂಲದ ಕಂಪನಿ ಶಿಂಕಾನ್‍ಸೇನ್ ಟೆಕ್ನಾಲಜಿ ಜಂಟಿಯಾಗಿ ಕೈಗೆತ್ತಿಕೊಂಡಿರುವ ಈ ಯೋಜನೆಯು ಭಾರತೀಯ ರೈಲು ಸಾರಿಗೆ ವ್ಯವಸ್ಥೆಯಲ್ಲಿ ಮೈಲಿಗಲ್ಲಾಗಿದೆ.!! ಭಾರತ ಮತ್ತು ಜಪಾನ್ ನಡುವಿನ ಸ್ನೇಹದ ಹೆಗ್ಗುರುತಾಗಿ ಪ್ರಧಾನಿ ಮೋದಿ ಅವರ ಕನಸಿನ ಕೂಸಾಗಿರುವ ಬುಲೆಟ್ ಟ್ರೈನ್ ಯೋಜನೆ ಆರಂಭವಾಗಿದ್ದು ಇದರಿಂದಾಗಿ ಭಾರತಕ್ಕೆ ಯಾವ ರೀತಿಯಾಗಿದೆ ಪ್ರಯೋಜನವಾಗಲಿದೆ ಎಂದು ಗಮನಿಸಬಹುದು.

ಕಡಿಮೆ ಯೋಜನೆಯ ವೆಚ್ಚ
ಬುಲೆಟ್ ರೈಲು ಯೋಜನೆಯು 1.10 ಲಕ್ಷ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈ ಯೋಜನೆಗೆ ಜಪಾನ್ ಶೇಕಡಾ 81 ರಷ್ಟು ಹಣವನ್ನು ಮೃದು ಸಾಲ ನೀತಿ ಮೂಲಕ ನೀಡಿದೆ. ಈ ಬುಲೆಟ್ ರೈಲು ಯೋಜನೆಯ ಪ್ರಮುಖ ಕಾರ್ಯದ ಒಪ್ಪಂದಗಳು ಜಪಾನ್ ಪ್ರಮುಖ ಕಂಪನಿಗಳಾದ ಕಾವಾಸಾಕಿ ಹೆವಿ ಇಂಡಸ್ಟ್ರಿಯಸ್ ಲಿಮಿಟೆಡ್, ಹಿಟಾಚಿ ಲಿಮಿಟೆಡ್ ಮತ್ತು ಈಸ್ಟ್ ಜಪಾನ್ ರೈಲ್ವೆ ಕಂಪನಿಗೆ ನೀಡಲಾಗಿದ್ದು ಇದು ಜಪಾನ್‍ಗೆ ಲಾಭವಾಗಿ ಪರಿಣಮಿಸಿವೆ. ಈ ಸಾಲವನ್ನು ತೀರಿಸಲು ಭಾರತಕ್ಕೆ 50 ವರ್ಷ ಕಾಲಾವಕಾಶವಿದ್ದು ಕೇವಲ ಶೇಕಡಾ 0.1 ಬಡ್ಡಿದರ ಜಪಾನ್ ವಿಧಿಸಿದೆ.

ಬುಲೆಟ್ ರೈಲು ಯೋಜನೆಯ ಮೂಲಕ ಪ್ರಧಾನಿ ಮೋದಿಯವರು ಉದ್ಯೋಗ ಸೃಷ್ಟಿಯತ್ತ ಕೂಡಾ ಗಮನವಿಟ್ಟಿದ್ದಾರೆ. ಅಂದಾಜು 4000 ನೇರ ಉದ್ಯೋಗಗಳು ಮತ್ತು 20,000 ಉದ್ಯೋಗಗಳು ಪರೋಕ್ಷವಾಗಿ ಸೃಷ್ಠಿಯಾಗಲಿವೆ ಎಂದು ಅಂದಾಜಿಸಲಾಗಿದೆ. ನಾವು ಬುಲೆಟ್ ರೈಲಿನ ತಂತ್ರಜ್ಞಾವನ್ನು ಜಪಾನ್ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದರೂ, ಯೋನಜನೆಗೆ ಬೇಕಾಗುವ ಹೆಚ್ಚಿನ ಸಾಮಗ್ರಿಗಳನ್ನು ಭಾರತದಲ್ಲಿಯೇ ಉತ್ಪಾದಿಸಿ ಬಳಸುತ್ತಿದ್ದೇವೆ. ಆದ್ದರಿಂದ ವಿಶ್ವ ದರ್ಜೆಯ ಉತ್ಪನ್ನವನ್ನು ಸಮಯಕ್ಕೆ ಸರಿಯಾಗಿ ಒದಗಿಸುವ ಅವಶ್ಯಕತೆ ಇದೆ. ಎಂದು ಬುಲೆಟ್ ರೈಲು ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ವಡೋದರಾ ಎಲ್ಲಾ ಹೈಸ್ಪೀಡ್ ಕಾರ್ಯ ಯೋಜನೆಯನ್ನು ನೋಡಿಕೊಳ್ಳುತ್ತಿದೆ. 2020ರ ವೇಳೆಗೆ ಇದರ ಕಾರ್ಯಾಚರಣೆಯನ್ನು ನಡೆಸಲು ಜಪಾನ್‍ನಲ್ಲಿರುವ ಇನ್ಸ್‍ಸ್ಟಿಟ್ಯೂಟ್‍ನ ಜೊತೆ ಉಪಕರಣ ಮತ್ತು ಸೌಲಭ್ಯಗಳನ್ನು ಹೆಚ್ಚಿಸುವಂತೆ ಜಪಾನ್‍ಗೆ ಕೇಳಿದೆ. ಹೆಚ್ಚಿನ ವೇಗದ ರೈಲು ಯೋಜನೆಯನ್ನು ಕಾರ್ಯಗತಗೊಳಿಸಲು ಮತ್ತು ನಿರ್ವಹಿಸಲು ಇನ್ಸ್ಟಿಟ್ಯೂಟ್‍ಗೆ ಮುಂದಿನ ಮೂರು ವರ್ಷಗಳಲ್ಲಿ 4,000 ಸಿಬ್ಬಂದಿಗಳನ್ನು ತರಬೇತಿ ಮಾಡುತ್ತದೆ. ಇದೀಗ ಉನ್ನತ ವೇಗದ ಟ್ರ್ಯಾಕ್ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಲು 300 ರೈಲ್ವೆ ಅಧಿಕಾರಿಗಳಿಗೆ ಜಪಾನ್‍ನಲ್ಲಿ ತರಬೇತಿಯನ್ನು ನೀಡಲಾಗುತ್ತದೆ.

ಹೈಸ್ಪೀಡ್ ರೈಲು(ಎಚ್‍ಎಸ್‍ಆರ್) 250 ಕಿ.ಮೀಗಿಂತ ಹೆಚ್ಚಿಗೆ ರೈಲುಗಳನ್ನು ಓಡಿಸುವ ಎಲ್ಲಾ ರೈಲ್ವೆ ವ್ಯವಸ್ಥೆಗಳನ್ನು ಸೂಚಿಸುತ್ತದೆ. ಇಲ್ಲಿಯವರೆ ಇದು 15 ದೇಶಗಳಲ್ಲಿ ಲಭ್ಯವಿದೆ. ಜಪಾನ್‍ನ ನೆರೆಯ ರಾಷ್ಟ್ರ ತೈವಾನ್ ನಂತರ ಪ್ರತಿಷ್ಠಿತ ಶಿನಕಾನಸೈನ್ ಬುಲೆಟ್ ರೈಲು ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರ ಭಾರತವಾಗಿದೆ. ಸಾಕಷ್ಟು ಪ್ರಯತ್ನಪಟ್ಟರೂ ಅಮೇರಿಕಾ ಜಪಾನ್‍ನಿಂದ ಬುಲೆಟ್ ರೈಲಿನ ತಂತ್ರಜ್ಞಾನವನ್ನು ಖರೀದಿಸರಿರಲಿಲ್ಲ. ಅಮೇರಿಕಾದ ಅಧ್ಯಕ್ಷೀಯ ಚುನಾವಣೆ ವೇಳೆ ಮೂಲ ಸೌಕರ್ಯದ ಅಭಿವೃದ್ಧಿ ಕುರಿತು ಮಾತನಾಡಿದ್ದ ಡೋನಾಲ್ಡ್ ಟ್ರಂಪ್ ಅವರು ಚೀನಾ ಮತ್ತು ಜಪಾನ್‍ನಲ್ಲಿ ಉತ್ತಮವಾದ ಬುಲೆಟ್ ರೈಲು ವ್ಯವಸ್ಥೆ ಇದೆ ಎಂದು ಹೇಳಿದ್ದರು. ಈ ಮಧ್ಯೆ ವ್ಯಾಪಾರದಲ್ಲಿ ತೀವ್ರ ಸ್ಪರ್ದೆಯಲ್ಲಿರುವ ಜಪಾನ್ ಮತ್ತು ಚೀನಾ ಅಂತರಾಷ್ಟ್ರೀಯ ಮಟ್ಟದ ಯೋಜನೆಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಪೈಪೋಟಿಗೆ ಇಳಿದಿರುತ್ತವೆ. ಅಂತಹುದರಲ್ಲಿ ಇದೀಗ ಭಾರತ ಜಪಾನಿಗೆ ಮಣೆಹಾಕಿರುವುದು ಚೀನಾದ ಸೋಲು ಎಂದು ಕೂಡಾ ಹೇಳಬಹುದು.

ಎಮ್‍ಎಹೆಚ್‍ಎಸ್‍ಆರ್ ಯೋಜನೆಯ ಪ್ರಮುಖ ತಾಂತ್ರಿಕ ವೈಶಿಷ್ಟ್ಯಗಳನ್ನು ಮತ್ತು ಅದರ ಪ್ರಮುಖ ಆರ್ಥಿಕ ಪ್ರಯೋಜನಗಳನ್ನು ಸಂಕ್ಷಿಪ್ತವಾಗಿ ನೋಡೋಣ.

ಬುಲೆಟ್ ರೈಲು 750 ಜನ ಪ್ರಯಾಣಿಕರನ್ನು ಕರೆದೊಯ್ಯುವ ಸಾಮಥ್ರ್ಯ ಹೊಂದಿದ್ದು, ಪ್ರಧಾನಿ ಮೋದಿಯವರ ತಾಯ್ನಾಡು ಗುಜರಾತ್‍ನ ಅಹಮದಾಬಾದ್‍ನಿಂದ ಮುಂಬೈಗೆ ಸಂಚರಿಸಲಿದೆ.

ಬುಲೆಟ್ ವೇಗದ ರೈಲು ವೇಗವಾಗಿದ್ದು ತನ್ನ ವೇಗದಿಂದಲೇ ಎಲ್ಲರ ಗಮನ ಸೆಳೆಯಲಿದೆ. ಈ ರೈಲು ಒಂದು ದಿನದಲ್ಲಿ ಮುಂಬೈ- ಅಹಮದಾಬಾದ್ ಮಧ್ಯೆ 70 ಬಾರಿ ಸಂಚರಿಸಬಲ್ಲದು ಎಂದು ನಿರೀಕ್ಷಿಸಲಾಗಿದೆ.

ಈ ಬುಲೆಟ್ ರೈಲು ಗಂಟೆಗೆ 250 ಕಿ.ಮೀ ಓಡುವ ನಿರೀಕ್ಷೆ ಹೊಂದಿದ್ದು ಗರಿಷ್ಠ 320 ಕಿ.ಮೀ ವೇಗದಲ್ಲಿ ಸಂಚರಿಸಬಲ್ಲದು. ಇದರ ವೇಗ ಈಗ ಸದ್ಯ ಭಾರತದಲ್ಲಿರುವ ಅತ್ಯಂತ ವೇಗದ ರೈಲಿಗಿಂತ ಎರಡು ಪಟ್ಟು ಹೆಚ್ಚು ಇರಲಿದೆ.

ಒಟ್ಟು 508 ಕಿ.ಮೀ ಮಾರ್ಗದ ಈ ಯೋಜನೆಯಲ್ಲಿ 460 ಕಿ. ಮೀ ಮಾರ್ಗವು ಎತ್ತರಿಸಿದ ಮಾರ್ಗದಲ್ಲಿ (ಎಲಿವೇಟೆಡ್)ನಿರ್ಮಿಸಲಾಗುತ್ತದೆ.

460 ಕಿ.ಮೀ ಮಾರ್ಗದ ಜತೆಗೆ ಒಟ್ಟು 27 ಕಿ.ಮೀ ಸುರಂಗ ಮಾರ್ಗದಲ್ಲಿಯೂ ಬುಲೆಟ್ ರೈಲು ಸಾಗಲಿದೆ.

ಭಾರತವು ತನ್ನ 75 ನೇ ವರ್ಷದ ಸ್ವಾತಂತ್ರ್ಯ ಸಂಭ್ರಮಾಚರಣೆ ನಡೆಸುವ ಸಂದರ್ಭದಲ್ಲಿ ಅಂದರೆ ಆಗಸ್ಟ್ 15 2022ರಂದು ಮುಂಬೈ-ಅಹಮದಾಬಾದ್ ನಡುವೆ ಪ್ರಥಮ ಬುಲೆಟ್ ರೈಲು ಸಂಚಾರ ಪ್ರಾರಂಭಿಸಲಿದೆ ಎಂದು ನೂತನ ರೈಲ್ವೆ ಮಂತ್ರಿ ಪಿಯೂಷ್ ಹೇಳಿದ್ದಾರೆ.

ಮುಂಬೈ-ಅಹಮದಾಬಾದ್ ನಡುವೆ ಬುಲೆಟ್ ರೈಲು ಸಂಚಾರದಲ್ಲಿ ಒಟ್ಟು 12 ನಿಲ್ದಾಣಗಳು ಇರುತ್ತವೆ. ಬುಲೆಟ್ ರೈಲು ಸಂಚಾರದಲ್ಲಿ ನಿಲುಗಡೆಗೊಂಡು ಸಂಚರಿಸಿದರೆ ಮೂರು ಗಂಟೆ ವೇಳೆಯಲ್ಲಿ ಮುಂಬೈ ಅಹಮದಾಬಾದ್ ನಡುವೆ ಸಂಚಾರ ಪೂರ್ಣಗೊಳ್ಳಲಿದೆ.

ಕೇವಲ ನಾಲ್ಕು ನಿಲ್ದಾಣದಲ್ಲಿ ನಿಲುಗಡೆ ಹೊಂದಿ ಸಂಚರಿಸಿದರೆ ಎರಡು ಗಂಟೆಗಳಲ್ಲಿ ಸಂಚಾರವನ್ನು ಪೂರೈಸಲಿದೆ.

508 ಕಿಮೀ ಉದ್ದದ ಮಾರ್ಗದಲ್ಲಿ 351 ಕಿ.ಮೀ ಗುಜರಾತಿನಲ್ಲಿ ನಿರ್ಮಾಣವಾಗಲಿದೆ. ಇನ್ನುಳಿದ, 156 ಕಿ.ಮೀ ಮಹರಾಷ್ಟ್ರದಲ್ಲಿ ನಿರ್ಮಾಣವಾಗಲಿದೆ.

ಪ್ರಮುಖ ಆರ್ಥಿಕ ಪ್ರಯೋಜನಗಳು

20,000 ಉದ್ಯೋಗ ನಿರ್ಮಾಣ
4000 ನೇರ ಕಾರ್ಯಾಚರಣೆ ಉದ್ಯೋಗಗಳು ಮತ್ತು 20,000 ಪರೋಕ್ಷ ಉದ್ಯೋಗಗಳು
ಸ್ಥಳಿಯ ಕಂಪನಿಗಳಿಗೆ ಲಾಭ
ರೈತರುಗಳಿಗೆ ಕೃಷಿ ಉತ್ಪನ್ನಗಳನ್ನು ಅತೀ ವೇಗದಲ್ಲಿ ಚಲಿಸಬಹುದು. ಇದರಿಂದಾಗಿ ವೇಗವಾಗಿ ವ್ಯಾಪಾರದ ಪ್ರಯಾಣ ಆರ್ಥಿಕತೆಯಲ್ಲಿ ಹರಡುವ ಪ್ರಯೋಜಗಳನ್ನು ಹೊಂದಬಹುದು.

ಮೇಲಿನ ಎಲ್ಲಾ ವಿವರಗಳನ್ನು ಗಮನಿಸಿದಾಗ ಈ ಪ್ರಮಾಣದ ತಂತ್ರಜ್ಞಾನದಲ್ಲಿ ಇಡೀ ದೇಶ ಪ್ರಯೋಜವನ್ನು ಹೊಂದಲು ಸಾಧ್ಯವಿದೆ. ಬುಲೆಟ್ ಟ್ರೈನ್ ಲಾಭದಾಯಕವಾಗಲಿದೆ ಎಂದು ಹೇಳಬಹುದು.

ಭಾರತಕ್ಕೆ ಬುಲೆಟ್ ಟ್ರೈನ್ ಅಗತ್ಯವಿಲ್ಲ ಎಂದು ಬೊಬ್ಬೆ ಇಡುತ್ತಿದ್ದ ಕೆಲವರಿಗೆ ಯಾಕೆ ಪ್ರಧಾನಿ ಮೋದಿ ಬುಲೆಟ್‍ಟ್ರೈನ್ ಎಂಬ ಯೋಜನೆಯನ್ನು ಮಾಡಿದ್ದಾರೆ ಎಂದು ಈಗಲಾದರೂ ಅರ್ಥವಾಗಿರಬಹುದಲ್ಲವೇ? ಈ ಯೋಜನೆಯಿಂದ ಭಾರತಕ್ಕೆ ಆದ ಪ್ರಯೋಜನವಾದರೂ ಏನು ಎಂಬುವುದು ಈ ವಿಶ್ಲೇಷಣೆಯಿಂದ ತಿಳಿದಿರಬಹುದು. ಉದ್ಯೋಗವಿಲ್ಲದೆ ಅಲೆಯುತ್ತಿದ್ದ ಅದೆಷ್ಟೋ ಜನಗಳಿಗೆ ಮೋದಿಯ ಬುಲೆಟ್‍ಟ್ರೈನ್ ಯೋಜನೆ ಎಷ್ಟು ಪ್ರಯೋಜನಕಾರಿಯಾಗಿದೆ ಎಂಬುವುದನ್ನು ನಾವು ಅರಿತುಕೊಳ್ಳ ಬೇಕಾಗಿದೆ.

 

source:http://thetruepicture.in/what-the-bullet-train-brings-to-india-and-where-it-plans-to-take-india/

-ಸಂಜನಾ ದೇಶ್‍ಪಾಂಡೆ

Tags

Related Articles

Close