ಇತಿಹಾಸ

ಭಾರತದ ಕ್ರಾಂತಿಕಾರಿಗಳಿಗೆ ದುರಾತ್ಮನಾಗಿದ್ದವನು ಭಾರತದ ‘ಮಹಾತ್ಮ’ನಾದ ಬಗೆ ಹೇಗೆ ಗೊತ್ತೇ?!

ಅಹಿಂಸೆ ಅಹಿಂಸೆ ಅಹಿಂಸೆ, ಅಹಿಂಸೆಯನ್ನೇ ಪ್ರತಿಪಾದಿಸುತ್ತ ಸ್ವಾತಂತ್ರ್ಯವನ್ನ ಪಡೆದೇ ತೀರುತ್ತೇನೆಂದು ಹಠಕ್ಕೆ ಬಿದ್ದ ಗಾಂಧಿ ಮಹಾತ್ಮನಾದದ್ದು ಹೇಗೆ?

ಮಹಾತ್ಮನನ್ನ ದುರಾತ್ಮನೆಂದು ಕ್ರಾಂತಿಕಾರಿಗಳನಿಸಿದ್ದಕ್ಕೂ ಹಲವಾರು ಕಾರಣಗಳಿವೆ, ಸುಖಾ ಸುಮ್ಮನೆ ಯಾರನ್ನೀ ವಿರೋಧಿಸಿ ಕ್ರಾಂತಿಕಾರಿಗಳಿಗೆ ಆಗಬೇಕಾದ್ದೇನೂ ಇರಲಿಲ್ಲ(ಈಗಲೂ ಇಲ್ಲ). ಈಗ ಗಾಂಧಿಯ ವಿಚಾರ ಪ್ರಸ್ತಾಪಿಸಿ ಏನು ಪ್ರಯೋಜನ? ಅವರ ಆದರ್ಶಗಳನ್ನ ಮೈಗೂಡಿಸಿಕೊಂಡು ಭಾರತವನ್ನ ಉದ್ಧಾರ ಮಾಡೋದನ್ನ ನೋಡಿ ಅಂತ ಹೇಳೋ ಜನರಿಗಾಗಿ ಈ ಅಂಕಣ ಸಮರ್ಪಣೆ

ಗಾಂಧಿಯ ಯಾವ ಆದರ್ಶಗಳನ್ನ ನಾವು ಮೈಗೂಡಿಸಿಕೊಳ್ಳಬೇಕು? “ಅಹಿಂಸಾ ಪರಮೋ ಧರ್ಮ” ಅನ್ನೋ ತತ್ವವನ್ನಾ?

ಭಗವದ್ಗೀತೆಯ ಶ್ಲೋಕವಾದ “ಅಹಿಂಸಾ ಪರಮೋ ಧರ್ಮ ಧರ್ಮ ಹಿಂಸಾ ತಥೈವಚಃ” ಎಂಬ ಶ್ಲೋಕದ ಅರ್ಥವಾದ “ಅಹಿಂಸೆಯನ್ನ ಪ್ರತಿಪಾದಿಸು ಆದರೆ ಧರ್ಮಕ್ಕೆ ಧಕ್ಕೆ ಬಂದಾಗ ಅಧರ್ಮವನ್ನ ಮೆಟ್ಟಲು ಹಿಂಸೆಯನ್ನ ಕೈಗೆತ್ತಿಕೊ” ಎಂದು ಹೇಳಿದ ಶ್ಲೋಕವನ್ನ ಕಟ್ ಮಾಡಿ ಕೇವಲ ಅಹಿಂಸಾ ಪರಮೋಧರ್ಮ ಎಂಬ ಶ್ಲೋಕವನ್ನ ತಲೆಗೆ ತುಂಬಿ ಲಕ್ಷಾಂತರ ಭಾರತೀಯ ಯುವಕರ ತಲೆಕೆಡಿಸಿದ ಗಾಂಧಿಯ ಬಗ್ಗೆ ಗೌರವ ಇಟ್ಟುಕೊಳ್ಳೋಕೆ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕ್ರಾಂತಿಕಾರಿಗಳಿಗೇನೂ ಹುಚ್ಚು ಹಿಡಿದಿರಲಿಲ್ಲ.

ಬರೀ “ಅಹಿಂಸಾ ಪರಮೋಧರ್ಮ” ಅಂತ ನಮ್ಮ ಆರೂವರೆ ಲಕ್ಷ ಕ್ರಾಂತಿಕಾರಿಗಳು ಸುಮ್ಮನೆ ಕೂತಿದ್ದರೆ ಇಂದು ಸ್ವಾತಂತ್ರ್ಯವಲ್ಲ ನಮ್ಮ ಕೈಗೆ ಚಿಪ್ಪು ಸಿಕ್ಕಿರ್ತಿತ್ತು. ಅದಿರಲಿ ಗಾಂಧಿಯೆಂಬ “ಮಹಾತ್ಮ” ಭಾರತದಲ್ಲಿ ಎಲ್ಲಿ ಎಡವಿದ ಅದರಿಂದ ಭಾರತಕ್ಕಾದ ನಷ್ಟವೇನು, ಆತ ಮಾಡಿದ ಕೆಲ ಘೋರ ತಪ್ಪುಗಳೇನು ಅನ್ನೋದನ್ನ ತಿಳಿಯೋಣ ಬನ್ನಿ

ಘಟನೆ 1: ಬ್ರಿಟಿಷರು ಒಂದು ಕಾಯಿದೆಯನ್ನು ಜಾರಿಗೆ ತಂದಿದ್ದರು, ಅದೇ ರೌಲಟ್ ಕಾಯಿದೆ. ಈ ಕಾಯಿದೆ ಪ್ರಕಾರ ಬ್ರಿಟಿಷರ ವಿರುದ್ಧ ದಂಗೆಯೇಳುವ ಜನರ ವಿರುದ್ಧ ವಾರೆಂಟ್ ಇರದೆಯೇ ಯಾವ ಟ್ರಾಯಲ್ ಇರದೆ ಬಂಧಿಸುವ ಕಾಯಿದೆ ಅದಾಗಿತ್ತು. ಇದರ ವಿರುದ್ಧ ಧ್ವನಿಯೆತ್ತಿದ ಗಾಂಧಿ ಅಹಿಂಸಾತ್ಮಕ ಹೋರಾಟ ನಡೆಸಲು ಮುಂದಾದ, ಇದಕ್ಕೆ ಜನಬೆಂಬಲವೂ ಅಭೂತಪೂರ್ವವಾಗೇ ಸಿಕ್ಕಿತು.

ಹೀಗೆ ಶಾಂತಿಯುತವಾಗಿ ದೇಶಾದ್ಯಂತ ನಡೆಯುತ್ತಿದ್ದ ಪ್ರತಿಭಟನೆಗೋಸ್ಕರ ಪಂಜಾಬಿನ ಅಮೃತಸರದಲ್ಲೂ ಸಾವಿರಾರು ಜನ ಜಲಿಯನ್ ವಾಲಾಬಾಗ್ ಅನ್ನೋ ಪ್ರದೇಶದಲ್ಲಿ ಸೇರಿದ್ದರು. ಶಾಂತಿಯುತವಾಗಿ ನಡೆದ ಪ್ರತಿಭಟನೆಗೆ ಏಕಾಏಕಿ ನುಗ್ಗಿದ ಜನರಲ್ ಡೈರ್ ನೇತೃತ್ವದ ಬ್ರಿಟಿಷ್ ಪೋಲಿಸರು ಮನಬಂದಂತೆ ಗುಂಡಿನ ದಾಳಿ ನಡೆಸಿ ಸಾವಿರಾರು ಪ್ರತಿಭಟನಾಕಾರರ ಹತ್ಯೆಗೈದರು.

ಗಾಂಧಿ ಈ ಘಟನೆಯ ವಿರುದ್ಧವಾಗಲಿ ಅಥವ ಜನರಲ್ ಡೈರ್ ವಿರುದ್ಧವಾಗಲಿ ಧ್ವನಿಯೆತ್ತಲಿಲ್ಲ. ಆದರೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಕ್ರೋಧಿತನಾದ ಕ್ರಾಂತಿಕಾರಿ ಸರ್ದಾರ್ ಉಧಮ್ ಸಿಂಗ್ ಜನರಲ್ ಡೈರ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮಾರ್ಚ್ 13, 1940 ರನ್ನ ಆತನನ್ನ ಗುಂಡಿಟ್ಟು ಹತ್ಯೆ ಮಾಡಿದ.

ಈ ಹತ್ಯೆ ಜಲಿಯನ್ ವಾಲಾಬಾಗ್ ನಲ್ಲಿ 1919 ರಲ್ಲಿ ನಡೆದ ಸಾವಿರಾರು ಅಮಾಯಕರ ಹತ್ಯೆಗೆ ಪ್ರತೀಕಾರವಾಗಿತ್ತು.

ಇದಕ್ಕೆ ಗಾಂಧಿಯ ಪ್ರತಿಕ್ರಿಯೆ ಏನಾಗಿತ್ತು? :

“ಈ ಘಟನೆಯಿಂದ ನನಗೆ ಅತೀವ ದುಖಃವಾಗಿದೆ, ಸರ್ದಾರ್ ಉಧಮ್ ಸಿಂಗರ ಕೃತ್ಯವೊಂದು ಹುಚ್ಚುತನದ ಪರಮಾವಧಿ, ಇಂತಹ ಕೃತ್ಯಗಳು ನಮ್ಮ ರಾಜಕೀಯ ಹೋರಾಟದ ಸ್ಪಷ್ಟ ಉಲ್ಲಂಘನೆ”. ಮುಂದೆ ಈ ಘಟನೆಯ ಸಂಬಂಧ ಬ್ರಿಟಿಷ್ ಸರ್ಕಾರ ಉಧಮ್ ಸಿಂಗರನ್ನ ಗಲ್ಲಿಗೇರಿಸಿದರು, ಇದನ್ನೂ ಗಾಂಧಿ ವಿರೋಧಿಸಲಿಲ್ಲ

ಘಟನೆ 2: ಅದು 1920, ಅಹಿಂಸೆಯಿಂದ, ಸತ್ಯಾಗ್ರಹದಿಂದ ಬ್ರಿಟಿಷರನ್ನ ಭಾರತ ಬಿಟ್ಟೋಡಿಸೋಣ, ಹಿಂಸೆಯನ್ನ ಸುತಾರಾಂ ಕೈಗೆತ್ತಿಕೊಳ್ಳಬಾರದಂತ ಕರೆ ನೀಡಿದ ಗಾಂಧಿ ಬ್ರಿಟಿಷರ ವಿರುದ್ಧ ಅಸಹಕಾರ ಚಳುವಳಿ ಆರಂಭಿಸಿದ.

ಅಸಹಕಾರ ಚಳುವಳಿಯೆಂದರೆ ಇಂದು ನಾವು ಹೇಗೆ ಚೀನಿ ವಸ್ತುಗಳ ಬಹಿಷ್ಕಾರಕ್ಕೆ ಮುಂದಾಗಿ ಚೀನಾಗೆ ಪಾಠ ಕಲಿಸಲು ಮುಂದಾಗಿದೀವೋ ಅದೇ ರೀತಿಯಲ್ಲಿ ಬ್ರಿಟಿಷರ ಉತ್ಪನ್ನಗಳನ್ನ ಖರೀದಿ ಮಾಡಬಾರದು, ಅವರ ಸರ್ಕಾರದಲ್ಲಿ ಕೆಲಸ ಮಾಡೋದನ್ನ ನಿಲ್ಲಿಸಿ ರಾಜೀನಾಮೆ ಕೊಟ್ಟು ಬರಬೇಕು, ಸ್ವದೇಶೀ ವಸ್ತುಗಳನ್ನ ಬಳಸಿ ಬ್ರಿಟಿಷ್ ವಸ್ತುಗಳನ್ನ, ಬಟ್ಟೆಗಳನ್ನ ಬೆಂಕಿಗಾಹುತಿ ಕೊಡುವುದು, ಹೀಗೆ ಅಸಹಕಾರ ಚಳುವಳಿಯನ್ನ ಗಾಂಧಿ ಆರಂಭಿಸಿದ. ಇದಕ್ಕೆ ಭಾರತದಾದ್ಯಂತ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಯಿತು.

ಲಕ್ಷಾಂತರ ಜನ ಬ್ರಿಟಿಷ್ ಬಟ್ಟೆಗಳನ್ನ ಬಹಿಷ್ಕರಿಸಿದರು, ಸಾವಿರಾರು ಜನ ಬ್ರಿಟಿಷರ ಸರ್ಕಾರಿ ನೌಕರಿ ತೊರೆದರು, ಅಸಂಖ್ಯ ಮಕ್ಕಳು ಬ್ರಿಟಿಷ್ ಶಾಲಾ ಕಾಲೇಜುಗಳನ್ನ ತೊರೆದು ಗಾಂಧಿಯ ಅಸಹಕಾರ ಚಳುವಳಿಯಲ್ಲಿ ಧುಮುಕಿದರು.

ಮೊದಲೇ ಜಲಿಯನ್ ವಾಲಾಬಾಗ್ ಹತ್ಯಾಕಾಂಡದಿಂದ ಘಾಸಿಗೊಂಡಿದ್ದ 13 ವರ್ಷದ ಪುಟ್ಟ ಬಾಲಕ ಭಗತ್ ಸಿಂಗ್ ಕೂಡ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದ.

1920 ರಿಂದ ಶುರುವಾದ ಅಸಹಕಾರ ಚಳುವಳಿ 1922 ರ ಫೆಬ್ರುವರಿ 4 ರವರೆಗೆ ಚೆನ್ನಾಗೇ ನಡೆದಿತ್ತು. ಆದರೆ ಉತ್ತರಪ್ರದೇಶದ ಚೌರಾಚೌರಿ ಎಂಬ ಊರಿನ ಜಾತ್ರೆಯ ಸಂದರ್ಭದಲ್ಲಿ ಬ್ರಿಟಿಷ ಪೋಲಿಸರ ದುರ್ವರ್ತನೆಯಿಂದ, ಹಿಂದೂ ವಿರೋಧಿ ಧೋರಣೆಯಿಂದ ರೊಚ್ಚಿಗೆದ್ದ ಜನ 22 ಜನ ಬ್ರಿಟಿಷ್ ಪೋಲೀಸರನ್ನ ಕೊಂದರು.

ಇದಕ್ಕೆ ಗಾಂಧಿ ಪ್ರತಿಕ್ರಿಯೆ ಏನಾಗಿತ್ತು?:

“ನಮ್ಮ ಭಾರತದ ಜನರಿಗೆ ಸ್ವಾತಂತ್ರ್ಯ ಪಡೆದುಕೊಳ್ಳುವಷ್ಟು ಪರಿಪಕ್ವತೆ ಇಲ್ಲ. ಹಿಂಸೆ ನಮ್ಮ ಮಾರ್ಗವಲ್ಲ, ಅಹಿಂಸೆಯಿಂದ ಮಾತ್ರ ನಾವು ಸ್ವಾತಂತ್ರ್ಯ ಪಡೆದುಕೊಳ್ಳಬೇಕು, ನಾನು ಈ ಅಸಹಕಾರ ಚಳುವಳಿಯನ್ನ ಇಲ್ಲಿಗೆ ನಿಲ್ಲಿಸುತ್ತೇನೆ”

ಅಸಹಕಾರ ಚಳುವಳಿ ಠುಸ್ ಆಯಿತು, ಅದೆಲ್ಲೋ ಉತ್ತರಪ್ರದೇಶದ ಹಳ್ಳಿಯಲ್ಲಿ ನಡೆದ ಒಂದು ಘಟನೆಯಿಂದ ಭಾರತದಾದ್ಯಂತ ಜ್ವಾಲೆಯ ರೀತಿಯಲ್ಲಿ
ಹರಡಿದ್ದ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೇಳ ಹೆಸರಿಲ್ಲದಂತೆ ಆರಿಹೋಗಿತ್ತು.

ಅಸಹಕಾರ ಚಳುವಳಿ ಮುಂದುವರೆದಿದ್ದರೆ ನಮಗೆ 1925 ರ ಒಳಗೇ ಸ್ವಾತಂತ್ರ್ಯ ಸಿಕ್ಕಿರುತ್ತಿತ್ತೇನೋ!!

ಘಟನೆ 3: ಗಾಂಧಿ ಅಸಹಕಾರ ಚಳುವಳಿ ಶುರು ಮಾಡಿದ್ದ ಸಂದರ್ಭದಲ್ಲಿ ಗಾಂಧಿ ಮುಸಲ್ಮಾನರ ಬೆಂಬಲ ಪಡೆಯಲು ಒಂದು ದೊಡ್ಡ ತಪ್ಪನ್ನೇ
ಮಾಡಿಬಿಟ್ಟಿದ್ದ. ಭಾರತದಲ್ಲಿ ಆಗ ಹಿಂದೂ ಮುಸ್ಲಿಮರ ಸಾಕಷ್ಟು ಗಲಭೆಗಳು ಸಂಭವಿಸಿ ಹಿಂದೂ ಮುಸ್ಲಿಮರು ಪರಸ್ಪರ ದ್ವೇಷಿಸುವಂಥ ಸನ್ನಿವೇಶವನ್ನ
ಸೃಷ್ಟಿಯಾಗಿಬಿಟ್ಟಿತ್ತು.

ಹಿಂದೂ ಮುಸ್ಲಿಂರು ಒಂದಾಗದಿದ್ದರೆ ಅಸಹಕಾರ ಚಳುವಳಿ ಅಸಾಧ್ಯವೆಂದೆನಿಸಿದ ಗಾಂಧಿ ಮುಸಲ್ಮಾನರಿಗೆ ಅವರ ಖಿಲಾಫತ್ ಚಳುವಳಿಗೆ
ಬೇಷರತ್ ಬೆಂಬಲ ನೀಡಿಯೇಬಿಟ್ಟ.

ಏನದು ಖಿಲಾಫತ್ ಚಳುವಳಿ?

ಅದು 1919, ಸಾವಿರಾರು ಕಿಲೋ ಮೀಟರ್ ದೂರದ ತುರ್ಕಿ(Turkey) ದೇಶದಲ್ಲಿನ ಖಲೀಫನನ್ನ ಖಲೀಫಾ ಸ್ಥಾನದಿಂದ ಒದ್ದಿಳಿಸಿದ ಬ್ರಿಟೀಷರು ಅಲ್ಲಿ ತಮ್ಮ ಸಮ್ರಾಜ್ಯಶಾಹಿ ಸ್ಥಾಪಿಸಿದ್ದರು.

ಖಲೀಫ ಅಂದ್ರೆ ಯಾರು? ಖಲೀಫ ಅನ್ನೋದು ಇಸ್ಲಾಮಿಗೇ ಆತ ಪ್ರಸ್ತುತ ಅಧಿಪತಿ ಅನ್ನೋ ನಂಬಿಕೆ ಮುಸಲ್ಮಾನರದ್ದಾಗಿತ್ತು, ಇಡೀ ಜಗತ್ತನ್ನೇ ಇಸ್ಲಾಮೀಕರಣ ಮಾಡಿ ಅದರ ಮೇಲೆ ಖಲೀಫನಾಗಿ ಮೆರೆಯುವುದೇ ಖಲೀಫಾ ಆಡಳಿತ.

ಟರ್ಕಿಯಲ್ಲಿ ಖಲೀಫನನನ್ನ ಅಧಿಕಾರದಿಂದ ಕೆಳಗಿಳಿಸಿದ್ದಕ್ಕೆ ಆತ ತನ್ನ ಅಧಿಕಾರದ ಗದ್ದುಗೆಗೆ ಮತ್ತೆ ಏರಲು ಹೂಡಿದ ಜಿಹಾದ್ ಎಂಬ ತಂತ್ರ. ಆತ ಜಗತ್ತಿನ ಎಲ್ಲ
ರಾಷ್ಟ್ರಗಳ ಮುಸಲ್ಮಾನರಿಗೂ ಖಲೀಫಾ ಚಳುವಳಿಯಲ್ಲಿ ಧುಮುಕಿ ಇಸ್ಲಾಂ ರಕ್ಷಿಸಬೇಕೆಂಬ ಕರೆ ನೀಡಿದ. ಜಗತ್ತಿನ ಅನೇಕ ರಾಷ್ಟ್ರಗಳಲ್ಲಿನ ಮುಸಲ್ಮಾನರು ಸಾಥ್
ನೀಡಲಿಲ್ಲ ಆದರೆ ಭಾರತದ ಮುಸಲ್ಮಾನರು ಮಾತ್ರ ಖಲೀಫನ ಬೆಂಬಲಕ್ಕೆ ನಿಂತರು.

ಅದೆಲ್ಲಿಯ ಟರ್ಕಿ ಎಲ್ಲಿಯ ಭಾರತ ಒಂದಕ್ಕೊಂದು ಸಂಬಂಧವೇ ಇಲ್ಲ. ಆದರೂ ಇಸ್ಲಾಂ ಎಂಬ ವಿಷ ಮೈ ತುಂಬಿಕೊಂಡಿದ್ದ ಭಾರತೀಯ ಮುಸಲ್ಮಾನರು ಖಲೀಫಾ ಚಳುವಳಿಯಲ್ಲಿ ಧುಮುಕೇ ಬಿಟ್ಟರು.

ಇದು ಹೇಗಂದ್ರೆ ಈಗ ಅದೆಲ್ಲೋ ದೂರದ ಮಯನ್ಮಾರನಲ್ಲಿ ಮುಸಲ್ಮಾನರಿಗೆ ತೊಂದರೆಯಾಗಿದೆಯಂತ ಇಲ್ಲಿ 2012 ರಲ್ಲಿ ಭಾರತದ ಮುಸಲ್ಮಾನರು ‘ಅಮರ್ ಜವಾನ್’ ಒಡೆದು ಹಾಕಿ ಮುಂಬೈನಲ್ಲಿ ದಂಗೆಯೆಬ್ಬಿಸಿದ್ದರಲ್ಲ, ಹೇಗೆ ಪ್ಯಾಲೇಸ್ತಿನಿನ ಮೇಲೆ ಇಸ್ರೇಲ್ ದಾಳಿ ಮಾಡಿ ಅಲ್ಲಿನ ಮುಸಲ್ಮಾನರನ್ನ ಕೊಂದರೆ ಇಲ್ಲಿ ಭಾರತದ ಮುಸಲ್ಮಾನರು ಇಸ್ರೇಲ್ ರಾಷ್ಟ್ರದ ವಿರುದ್ಧ “ಸೇವ್ ಗಾಜಾ” ಅಂತ ಇಲ್ಲಿ ಪ್ರತಿಭಟನೆ ನಡೆಸಿದ್ದರೋ ಹಾಗೆಯೇ

ಅಷ್ಟಕ್ಕೂ ಆ ಖಿಲಾಫತ್ ಚಳುವಳಿ ಆರಂಭವಾದದ್ದು ಬ್ರಿಟಿಷರ ವಿರುದ್ಧ. ಮುಸಲ್ಮಾನರು ಗಾಂಧಿಯ ಸಹಾಯ ಕೇಳದಿದ್ದರೂ ಸ್ವತಃ ಗಾಂಧಿ ಖಲೀಫಾ ಚಳುವಳಿಗೆ ತನ್ನ ಬೆಂಬಲ ಘೋಷಿಸಿಯೇಬಿಟ್ಟಿದ್ದ.

ಇದರ ಹಿಂದಿನ ಉದ್ದೇಶ:

ಮುಸಲ್ಮಾನರಿಗೆ ಖಲೀಫಾ ಚಳುವಳಿಯಲ್ಲಿ ನಾನು ಬೆಂಬಲ ಕೊಟ್ಟರೆ ಅವರು ಬ್ರಿಟಿಷರನ್ನ ಭಾರತದಿಂದೋಡಿಸಲು ಅಸಹಕಾರ ಚಳುವಳಿಯಲ್ಲಿ ನನಗೆ ಸಾಥ್ ನೀಡ್ತಾರೆ ಅನ್ನೋ ವಿಶ್ವಾಸ ಅಷ್ಟೇ. ಆದರೆ ಆದದ್ದೇನು? 1919 ರಲ್ಲಿ ಮೊದ ಮೊದಲು ಬ್ರಿಟಿಷರ ವಿರುದ್ಧ ಶುರುವಾದ ಖಲೀಫಾ ಚಳುಳಿ ನಂತರದಲ್ಲಿ ತಿರುಗಿದ್ದು ಮಾತ್ರ ಹಿಂದುಗಳ ವಿರುದ್ಧ. ಕೇರಳದ ಮಲಬಾರ್ ಪ್ರದೇಶದಲ್ಲಿರೋ ಮಾಪಿಳ್ಳೆ(ಮೋಪ್ಲಾ ಮುಸಲ್ಮಾನರು)ಗಳು ಅಸಂಖ್ಯ ಹಿಂದುಗಳ ಹತ್ಯೆ ಮಾಡಿ ಸಾವಿರಾರು ಹಿಂದೂ ಹೆಣ್ಣುಮಕ್ಕಳ ರೇಪ್ & ಮರ್ಡರ್ ಮಾಡಿದರು.

ಇದನ್ನೆಲ್ಲ ನೋಡಿಯೂ ಅಹಿಂಸೆ ಅಹಿಂಸೆಯಂತ ಬೊಬ್ಬೆಯಿಡ್ತಿದ್ದ ಗಾಂಧಿ ಮಾತ್ರ ಹಿಂಸೆಯನ್ನು ಕಣ್ಣಾರೆ ಕಂಡೂ ತೆಪ್ಪಗೆ ಬಾಯಿ ಮುಚ್ಚಿಕೊಂಡು ಕೂತಿದ್ದ.

ಆ ಕೇರಳದ ಹಿಂದೂ ಹತ್ಯಾಕಾಂಡವೇ ಇತಿಹಾಸದಲ್ಲಿ ಉಲ್ಲೇಖವಾಗಿರೋ ‘ಮೋಪ್ಲಾ ಕಾಂಡ’

ಕೊನೆಗೆ ಕೇರಳದ ಹಿಂದುಗಳ ರಕ್ಷಣೆಗೆ ಬಂದದ್ದು ಬ್ರಿಟೀಷರೇ, ಕೇರಳದ ಮೋಪ್ಲಾಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಹಲವು ಮೋಪ್ಲಾಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಸಾವಿರಾರು ಮೋಪ್ಲಾಗಳಿಗೆ ಜೈಲಿಗೆ ಅಟ್ಟಲಾಯಿತು.

ಜೀವಭಯದಿಂದ ಕಾಲ್ಕಿತ್ತ ಕೇರಳದ ಮೋಪ್ಲಾ ಮುಸಲ್ಮಾನರು ಹೊರಟಿದ್ದು ಪಕ್ಕದ ಮಂಗಳೂರು ಉಡುಪಿ, ಕೊಡಗು ಪ್ರದೇಶಕ್ಕೆ. ಅಲ್ಲಿನ ಮೋಪ್ಲಾಗಳು ಇಲ್ಲಿ ಮಾಪಿಳ್ಳೆಗಳಾಗಿ ಬ್ಯಾರಿಗಳಾಗಿ ದಕ್ಷಿಣ ಕನ್ನಡದಲ್ಲಿ, ಕೊಡಗಿನಲ್ಲಿ ಇಂದು ಕೋಮು ಗಲಭೆಗೆ ಕಾರಣೀಕರ್ತರಾಗುತ್ತಿರೋರು.

ಮೋಪ್ಲಾ ದಂಗೆಯ ಬಗ್ಗೆ ಗಾಂಧಿಯ ಪ್ರತಿಕ್ರಿಯೆ ಏನಾಗಿತ್ತು? :

ಮೋಪ್ಲಾ ಮುಸಲ್ಮಾನರು ಕೇರಳದಲ್ಲಿ ನಡೆಸಿದ ಹಿಂದೂಗಳ ಈ ಭೀಕರ ಮೋಪ್ಲಾ ಹತ್ಯಾಕಾಂಡದ ಬಗ್ಗೆ ಗಾಂಧಿ ತುಟಿಕ್ ಪಿಟಿಕ್ ಅನ್ನಲ್ಲಿಲ್ಲ, ಮುಸಲ್ಮಾನ ಬಂಧುಗಳೇ ನೀವ್ಯಾಕೆ ಹಿಂದುಗಳನ್ನ ವಿನಾಕಾರಣ ಕೊಲ್ಲುತ್ತಿದ್ದೀರ? ನೀವು ಇದನ್ನ ಹೀಗೇ ಮುಂದುವರೆದಿದರೆ ನಾನು ಉಪವಾಸ ಕೂರುತ್ತೇನೆ ಅಂಥ ಗಾಂಧಿ ಎಲ್ಲೂ ಹೇಳಲಿಲ್ಲ.

ಖಿಲಾಫತ್ ಚಳುವಳಿಯ ಹೋರಾಟ ಭಾರತದಕ್ಲಿ ಠುಸ್ಸಾಯ್ತು, ಈ ಚಳುವಳಿಯಿಂದ, ಗಾಂಧಿಯ ತಪ್ಪಿನಿಂದ ಆದದ್ದು ಮಾತ್ರ ಕೇರಳದಲ್ಲಿ ಲಕ್ಷಾಂತರ ಹಿಂದೂಗಳ ಮಾರಣಹೋಣ.

ಘಟನೆ 4: 1919 ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರ ಗಾಂಧಿಯ ಜೊತೆ ಯಾವ ನಾಯಕನೂ ಅಮೃತಸರ್ ಕಾಂಗ್ರೆಸ್ ಅಧಿವೇಶನಕ್ಕೆ ಮುಖ್ಯ
ಅತಿಥಿಯಾಗಿ ಬರಲೊಪ್ಪದಿದ್ದಾಗ ಸ್ವಾಮಿ ಶ್ರದ್ಧಾನಂದರು ಕಾಂಗ್ರೆಸ್ ಅಧಿವೇಶನಕ್ಕೆ ಮುಖ್ಯ ಅತಿಥಿಯಾಗಿ ಬಂದರು, ಮುಂದೆ ದೆಹಲಿಯ ಘಾಟನಗರ್ ಪ್ರದೇಶದಲ್ಲೂ ಗಾಂಧಿಯ ಸತ್ಯಾಗ್ರಹದ ಜೊತೆಗೆ ಶ್ರದ್ಧಾನಂದರು ನಿಂತರು.

ಬ್ರಿಟಿಷರು ಅಲ್ಲಿದ್ದ ಸತ್ಯಾಗ್ರಹಿಗಳ ಮೇಲೆ ಗುಂಡು ಹಾರಿಸಿ ಎಂಬ ಆದೇಶವಿತ್ತಿದ್ದರು. ಆದರೆ ಸ್ವಾಮಿ ಶ್ರದ್ಧಾನಂದರು “ಸತ್ಯಾಗ್ರಹಿಗಳ ಮೇಲೆ ಗುಂಡು ಹಾರಿಸುವುದಕ್ಕೂ ಮುನ್ನ ಮೊದಲು ನನ್ನ ಮೇಲೆ ಗುಂಡು ಹಾರಿಸಿ” ಎಂದು ತನ್ನ ಎದೆಯನ್ನೊಡ್ಡಿದ್ದರು. ಈತನ ಮೇಲೆ ಗುಂಡು ಹಾರಿಸಿದರೆ ಪರಿಸ್ಥಿತಿ ಕೈ ಮೀರಿ ಹೋಗುತ್ತಂತ ಅರಿತ ಪೋಲಿಸರು ಸುಮ್ಮನಾದರು.

ಯಾರೀ ಸ್ವಾಮಿ ಶ್ರದ್ಧಾನಂದರು?

ಸ್ವಾಮಿ ಶ್ರದ್ಧಾನಂದರು ಆರ್ಯ ಸಮಾಜದ ಪ್ರತಿಪಾದಕರಾಗಿದ್ದರು. ಬಲವಂತವಾಗಿ ಮತಾಂತರಣಗೊಂಡ ಹಲವಾರು ಮುಸಲ್ಮಾನರನ್ನು ‘ಶುದ್ಧೀಕರಣ’ ಮಾಡಿಸಿ ವಾಪಸ್ ಮರಳಿ ಮಾತೃ ಧರ್ಮಕ್ಕೆ ವಾಪಸ್ ತಂದಿದ್ದ ಮಹಾನ್ ವ್ಯಕ್ತಿಯಾಗಿದ್ದರು.

ಆದರೆ 1925 ರ ಡಿಸೆಂಬರ್ 23 ರಂದು ಗಾಂಧಿ ಅನುಯಾಯಿಯಾಗಿದ್ದ ಅಬ್ದುಲ್ ರಷೀದ್ ಎಂಬ ಮತಾಂಧ ಸ್ವಾಮಿ ಶ್ರದ್ಧಾನಂದರನ್ನ ಗುಂಡಿಕ್ಕಿ ಹತ್ಯೆ ಮಾಡಿದ. ಮುಸ್ಲಿಂ ಸಮುದಾಯಕ್ಕೆ ಈ ವಿಷಯ ಕೇಳಿ ಅತೀವ ಖುಷಿಯಾಗಿತ್ತು.

ಸ್ವಾಮಿ ಶ್ರದ್ಧಾನಂದರ ಕೊಲೆಯ ಬಗ್ಗೆ ಗಾಂಧಿಯ ಪ್ರತಿಕ್ರಿಯೆ ಏನಾಗಿತ್ತು? :

ಗಾಂಧಿ ಸ್ವಾಮಿ ಶ್ರದ್ಧಾನಂದರ ಹತ್ಯೆ ಬಗ್ಗೆ ತುಟಿಕ್ ಪಿಟಿಕ್ ಎನ್ನದೆ ಗುವಾಹಾಟಿ ಕಾಂಗ್ರೆಸ್ ಸಭೆಯಲ್ಲಿ ಸ್ವಾಮಿ ಶ್ರದ್ಧಾನಂದರ ಸಂತಾಪ ಸೂಚಿಸುತ್ತ “ಪ್ಯಾರೆ ಭಾಯಿ ರಶೀದ್(ಪ್ರೀತಿಯ ತಮ್ಮ ರಶೀದ್” ಅಂತ ಆ ಮತಾಂಧನನ್ನ ಸಂಬೋಧಿಸಿದ್ದ.ಇದರಿಂದ ಅರ್ಥವಾಗುತ್ತೆ ಗಾಂಧಿಗೆ ಕೊಲೆಗಡುಕ ಮುಸ್ಲಿಂ
ರಷೀದನ ಮೇಲೆ ಪ್ರೀತಿ ಎಷ್ಟಿತ್ತಂತ. ಆದರೆ ಬ್ರಿಟಿಷ್ ಕಾನೂನಿನ ಪ್ರಕಾರ ಬ್ರಿಟಿಷರು ಅಬ್ದುಲ್ ರಶೀದ್’ನನ್ನ ಬಂಧಿಸಿ ನೇಣುಗಂಬಕ್ಕೇರಿಸಿದರು.

ಘಟನೆ 5: ಮಹತ್ಮಾ ಎಂಬ ದುರಾತ್ಮ ತನ್ನ ಸಂಗಡಿಗರ ಜೊತೆ ಮಾತಿಗಂತ ಇಳಿದಾಗ ಭಾರತ ಕಂಡ ಶ್ರೇಷ್ಟ ಹಿಂದೂ ಧರ್ಮರಕ್ಷಕರಾದ ಶಿವಾಜಿ ಮಹಾರಾಜ್, ಗುರು ಗೋವಿಂದ ಸಿಂಗ್ ಹಾಗು ಮಹಾರಾಣಾ ಪ್ರತಾಪರ ಕುರಿತಾಗಿ ಏನು ಹೇಳಿದ್ದ ಗೊತ್ತಾ?

“ಗುರು ಗೋವಿಂದ ಸಿಂಗ್, ಶಿವಾಜಿ ಮಹಾರಾಜ್, ಮಹಾರಾಣಾ ಪ್ರತಾಪ್ ಸಿಂಗ್ ರೆಲ್ಲ ದಾರಿ ತಪ್ಪಿದ ದೇಶಭಕ್ತರಾಗಿದ್ದರು. ಅವರ ಆತ್ಮಕಥೆಗಳೂ ನನಗೆ ಸ್ಪೂರ್ತಿಯಾಗಿಲ್ಲ, ಅವರೆಲ್ಲ ದೈತ್ಯ ಡಕಾಯಿತರಾಗಿದ್ದರು”

(Ref: Desai: Day to Day With Gandhi, Vol.1 p.145 7, Hind Swaraj ಹಾಗು 1925 ರ ಏಪ್ರಿಲ್ ನಲ್ಲಿ ಯಂಗ್ ಇಂಡಿಯಾ ದಲ್ಲಿ ಬಿತ್ತರವಾದ ಅಂಕಣ)

ವ್ಹಾಹ್ ಗಾಂಧಿ ತಾತ ವ್ಹಾಹ್, ಇಡೀ ದೇಶದ ಅಸ್ಮಿತೆಯನ್ನ ಉಳಿಸುವುದಕ್ಕೆ ತಮ್ಮ ಪ್ರಾಣವನ್ನೇ ಬಲಿದಾನಗೈದವರು ನಿನಗೆ ದಾರಿ ತಪ್ಪಿದ ದೇಶಭಕ್ತರಾಗಿ ಕಂಡರಾ?

ಒಂದು ವೇಳೆ ಆ ‘ದಾರಿ ತಪ್ಪಿದ’ ಆ ಹಿಂದೂ ಧರ್ಮರಕ್ಷಕರಿಲ್ಲದೇ ಹೋಗಿದ್ದರೆ ನಿನ್ನ ಹೆಸರು ಮೋಹನದಾಸ್ ಗಾಂಧಿ ಅಲ್ಲ ಮೊಹಮ್ಮದ್ ಘಾಜಿ ಆಗಿರತಿತ್ತು ಅನ್ನೋದು ನಿನಗನ್ನಿಸಿರಲಿಲ್ಲವೇ?

ಗಾಂಧಿ ಮಾಡಿದ ತಪ್ಪುಗಳು ಒಂದಾ ಎರಡಾ, ಹೀಗೆ ಹೇಳುತ್ತ ಹೋದರೆ ಹನುಮಂತನ ಬಾಲದ ಹಾಗೆ ಬೆಳೆಯುತ್ತಲೇ ಹೋಗುತ್ತೆ.

ಈ ಎಲ್ಲಾ ಕಾರಣಗಳನ್ನ ವಿರೋಧಿಸಿದ್ದ ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಿಗೆ ಗಾಂಧಿ ‘ಮಹಾತ್ಮ’ ನಾಗಿ ಅಲ್ಲ ‘ದುರಾತ್ಮ’ನಾಗಿ ಕಂಡಿದ್ದ.

ಗಾಂಧಿ ಹೇಳಿದ್ದ “ಅಹಿಂಸಾ ಪರಮೋಧರ್ಮ” ಅನ್ನೋದನ್ನ ಬಿಟ್ಟು “ಅಹಿಂಸಾ ಪರಮೋಧರ್ಮ, ಧರ್ಮ ಹಿಂಸಾ ತಥೈವ ಚಃ” ಅನ್ನೋ ಭಗವದ್ಗೀತೆಯ ಶ್ಲೋಕವನ್ನು ಅನುಸರಿಸಿದರೆ ಮಾತ್ರ ನಮಗೆ ಉಳಿಗಾಲವಿದೆ. ಇಲ್ಲವಾದರೆ ಭಾರತವನ್ನ ಘಜವಾ-ಎ-ಹಿಂದ್ ಮಾಡಲು ಹಾತೊರೆಯುತ್ತಿರುವ ಜಿಹಾದಿಗಳ ಕುತಂತ್ರಕ್ಕೆ ನಾವೂ ಬಲಿಯಾಗಿ ಮತಾಂತರವಾಗಿಬಿಡುತ್ತೇವಷ್ಟೇ!!

– Vinod Hindu Nationalist

Tags

Related Articles

Close