ಅಂಕಣ

ಭಾರತದ ಸಾರಿಗೆ ಇತಿಹಾಸವನ್ನೇ ಬದಲಿಸುವ ನಿರೀಕ್ಷೆಯ ಟ್ರೈನ್ ಯೋಜನೆ!!

ಈ ಯೋಜನೆ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಲ್ಲ!!

ಇತ್ತೀಚಿನ ದಿನಗಳಲ್ಲಿ ರೈಲ್ವೇ ಅಪಘಾತ ಹಾಗೂ ಹಳಿತಪ್ಪಿದ ಪ್ರಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಅತ್ಯುನ್ನತ ಹಾಗೂ ಹೆಚ್ಚು ಭದ್ರತೆಯ ಸಲುವಾಗಿ
ನಿರ್ಮಾಣವಾಗುತ್ತಿರುವ ಪ್ರಧಾನಿ ನರೆಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಹಾಗೂ ಮಹತ್ತರವಾದ ಯೋಜನೆಯೇ ಈ ಬುಲೆಟ್ ರೈಲು ಯೋಜನೆ!

ದೇಶದಲ್ಲಿ ಉದ್ಯೋಗ ಸೃಷ್ಟಿಸುವುದರ ಜೊತೆಗೆ ಹಲವಾರು ಕ್ಷೇತ್ರಗಳಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಭಾರತದಲ್ಲಿ ಆರಂಭವಾಗಲಿದ್ದು, ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ಮೋದಿ ಅವರು ಅಹಮದಾಬಾದ್‍ನಲ್ಲಿ ಅಡಿಗಲ್ಲು ಹಾಕುವ ಮೂಲಕ ಯೋಜನೆಗೆ ಸೆಪ್ಟೆಂಬರ್ 14ರಂದು ಚಾಲನೆ ನೀಡಿದ್ದಾರೆ!! ಕಳೆದ ಕೆಲವರ್ಷಗಳಿಂದ ನೋಡುತ್ತಿದ್ದರೆ, ಸಂಭವಿಸುತ್ತಿರುವ ರೈಲು ಅಪಘಾತಗಳಿಂದಲೇ ಹಲವಾರು ರೈಲು ಸಚಿವರು ತಮ್ಮ ಖಾತೆ ಕಳೆದುಕೊಂಡಿದ್ದಾರೆ ಅಥವಾ ಅವರಾಗಿಯೇ ರಾಜೀನಾಮೆ ನೀಡಿ ಹಿಂದೆ ಸರಿದಿದ್ದಾರೆ. ಅಷ್ಟೇ ಅಲ್ಲದೇ, ಇತ್ತೀಚಿನ ದಿನಗಳಲ್ಲಿ ರೈಲ್ವೇ ಅಪಘಾತ ಹಾಗೂ ಹಳಿತಪ್ಪಿದ ಪ್ರಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಅತ್ಯುನ್ನತ ಹಾಗೂ ಹೆಚ್ಚು ಭದ್ರತೆ ಇರುವ ಬುಲೆಟ್ ರೈಲು ಯೋಜನೆ ಆರಂಭವಾಗುತ್ತಿದೆ.

ಈ ಯೋಜನೆಯಿಂದ ಪ್ರಯಾಣಿಕರ ಸುರಕ್ಷತೆ, ಸಂಚಾರದ ವೇಗ, ಗ್ರಾಹಕರಿಗೆ ಅತ್ಯುತ್ತಮ ಸೇವೆ ಹಾಗೂ ತಂತ್ರಜ್ಞಾನ, ಕೌಶಲ್ಯ ಹಾಗೂ ಮಾನದಂಡಗಳ ವಿಚಾರದಲ್ಲಿ ಭಾರತೀಯ ರೈಲ್ವೆ ವಿಶ್ವದ ಪ್ರಮುಖ ರೈಲ್ವೆಗಳ ಪೈಕಿ ಒಂದಾಗಲು ಸಹಾಯಕಾರಿಯಾಗಲಿದೆ. ಹೀಗಾಗಿ ಈ ಯೋಜನೆ ಭಾರತದ ಸಾರಿಗೆ ಇತಿಹಾಸವನ್ನೇ ಬದಲಿಸುವ ನಿರೀಕ್ಷೆಯೂ ಇದೆ.

ಈ ಯೋಜನೆ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವೇ ಹೊರತು ಜನಸಾಮಾನ್ಯನಿಗೆ ಅಲ್ಲ ಎಂಬ ವಾದಗಳು ಕೇಳಿಬರುತ್ತಿದ್ದು, ಸಾಕಷ್ಟು ವಿಶೇಷತೆಗಳನ್ನು ಹೊಂದಿರುವ ಈ ರೈಲ್ವೇ ಯೋಜನೆ ಪ್ರಗತಿಯತ್ತ ಸಾಗುತ್ತಿರುವ ಭಾರತಕ್ಕೆ ಅವಶ್ಯಕವಾಗಿದೆ. ಆದರೆ 1969ರ ಮಾರ್ಚ್ 1ರಂದು ಮೊದಲ ಬಾರಿಗೆ ರಾಜಧಾನಿ ಎಕ್ಸ್ ಪ್ರೆಸ್ ರೈಲು ಸೇವೆ ಆರಂಭಿಸುವಾಗಲು ಇಂತಹುದೇ ವಾದ ಮಂಡನೆಯಾಗಿತ್ತು. ದೆಹಲಿಯಿಂದ ಹೌವ್ರಾ ಕಡೆಗೆ ಪ್ರಯಾಣ ಬೆಳೆಸಿದ ಈ ರೈಲಿನಲ್ಲಿ ಪ್ರಥಮ ದರ್ಜೆ ಎಸಿ ಬೋಗಿಗಳ ಪ್ರಯಾಣಕ್ಕೆ “280 ಹಾಗೂ ಎಸಿ ಚೇರ್ ವ್ಯವಸ್ಥೆ ಪ್ರಯಾಣಕ್ಕೆ” 90 ಟಿಕೆಟ್ ದರ ನಿಗದಿಪಡಿಸಲಾಗಿತ್ತು. ಕೆಂಪು ಮತ್ತು ಬಿಳಿ ಬಣ್ಣದ ಐಶಾರಾಮಿ ರೈಲು ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ 120 ಕಿ.ಮೀ ದೂರದವರೆಗೂ ಯಾವುದೇ ನಿಲುಗಡೆ ಇಲ್ಲದೇ ಸಾಗುತಿತ್ತು. ಆಗ ಅನೇಕ ಪತ್ರಿಕೆಗಳಲ್ಲಿ ‘ಬಡತನದಲ್ಲಿ ನರಳುತ್ತಿರುವ ಭಾರತಕ್ಕೆ ಅತ್ಯುನ್ನತ ಹಾಗೂ ಐಶಾರಾಮಿ ರೈಲು ಸೇವೆ’ ಎಂದು ಲೇವಡಿ ಮಾಡಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಈ ರೈಲು ಸೇವೆಯನ್ನು ಜನರು ಅತ್ಯುತ್ತಮವಾಗಿ ಬಳಸಿಕೊಂಡಿರುವುದನ್ನು ನಾವು ನೋಡುತ್ತಿದ್ದೇವೆ ಮತ್ತು ನೋಡುತ್ತಿದ್ದೇವೆ!!

ಬುಲೆಟ್ ರೈಲು ಪ್ರಪ್ರಥಮ ಬಾರಿಗೆ ಸಂಚಾರ ಮಾಡಲಿರುವುದು ಎಲ್ಲಿಂದ ಗೊತ್ತೇ?? ಯೋಜನೆಗೆ ತಗಲಿದೆ ಬರೋಬ್ಬರಿ 108 ಲಕ್ಷ!!

ಗುಜರಾತ್ ನ ಅಹ್ಮದಾಬಾದ್ ನಿಂದ ಮುಂಬೈಗೆ ಪ್ರಪ್ರಥಮ ಬುಲೆಟ್ ರೈಲು ಸಂಚಾರ ಮಾಡಲಿದ್ದು, ಈ ಯೋಜನೆ ಪೂರ್ಣಗೊಳ್ಳಲು 2022ರವರೆಗೂ ಕಾಲಮಿತಿ ವಿಧಿಸಲಾಗಿದೆ. ಎರಡು ಪ್ರಮುಖ ನಗರಗಳ ನಡುವಿನ ಸುಮಾರು 500 ಕಿ.ಮೀ ದೂರದ ಬುಲೆಟ್ ರೈಲು ಯೋಜನೆಗೆ ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ಮೋದಿ ಅಡಿಗಲ್ಲು ಹಾಕುವ ಮೂಲಕ ಚಾಲನೆ ನೀಡಲಿದ್ದಾರೆ. ತಜ್ಞರು ಅಭಿಪ್ರಾಯಪಟ್ಟಿರುವಂತೆ ಈ ಯೋಜನೆ ಪೂರ್ಣಗೊಂಡ ಬಳಿಕ ಕೇವಲ 2 ಗಂಟೆಗಳಲ್ಲಿ ಅಹ್ಮದಾಬಾದ್ ನಿಂದ ಮುಂಬೈ ಸಂಚರಿಸಬಹುದಾಗಿದೆ.

ಈ ಬೃಹತ್ ಯೋಜನೆ ಒಟ್ಟು 108 ಲಕ್ಷ ಕೋಟಿ ಹಣ ಖರ್ಚಾಗಲಿದ್ದು, ಜಪಾನ್ ಸರ್ಕಾರ ಈ ಯೋಜನೆಗಾಗಿ ಶೇ.81 ರಷ್ಟು ಅಂದರೆ ಸುಮಾರು 88 ಸಾವಿರ ಕೋಟಿ ಹಣ ಸಾಲ ನೀಡಲು ಸಿದ್ಧವಾಗಿದೆ. ಇಂತಹ ಸಾಲಗಳಿಗೆ ವಿಶ್ವಬ್ಯಾಂಕ್ ವಾರ್ಷಿಕ ಶೇ.5 ರಿಂದ 7ರವರೆಗೂ ಬಡ್ಡಿ ವಿಧಿಸುತ್ತದೆ. ಆದರೆ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಹಾಲಿ ಬುಲೆಟ್ ರೈಲು ಯೋಜನೆ ಭಾರತ-ಜಪಾನ್ ಸ್ನೇಹದ ದ್ಯೋತಕವಾಗಿರುವುದರಿಂದ ಶೇ.0.1ರಷ್ಟು ಬಡ್ಡಿದರಕ್ಕೆ ಸಾಲ ನೀಡಿದ್ದಾರೆ. ವಿಶ್ವ ಬ್ಯಾಂಕ್ ಸಾಲದ ಗಡುವು 25-35 ವರ್ಷಗಳಾಗಿದೆ, ಜಪಾನ್ ಸರ್ಕಾರ ಭಾರತಕ್ಕೆ 15 ವರ್ಷಗಳ ಹೆಚ್ಚುವರಿ ಕಾಲ ಮಿತಿಯನ್ನೂ ನೀಡಿದ್ದು, ಅದರಂತೆ ಭಾರತ ಸರ್ಕಾರ 50 ವರ್ಷಗಳಲ್ಲಿ ಈ ಸಾಲವನ್ನು ಜಪಾನ್ ಸರ್ಕಾರಕ್ಕೆ ವಾಪಸ್ ಮಾಡಬೇಕಿದೆ.

ಯೋಜನೆಯ ಹೈಲೈಟ್ಸ್:

* ಜಪಾನ್-ಭಾರತ ಸಹಯೋಗದ ಯೋಜನೆ
* ಅಹಮದಾಬಾದ್ – ಮುಂಬೈ ನಡುವೆ ದೇಶದ ಮೊದಲು ಬುಲೆಟ್ ರೈಲು
* ಮಾರ್ಗ ಮಧ್ಯೆ 12 ಕಡೆ ನಿಲ್ದಾಣ
* 1 ಲಕ್ಷ ಕೋಟಿ ರೂ. ಯೋಜನೆಯ ವೆಚ್ಚ
* 850 ಹೆಕ್ಟೇರ್ ಭೂಮಿ ಅಗತ್ಯ

ಭಾರತದಲ್ಲಿ ಅತ್ಯುನ್ನತ ಭಾಗಗಳ ಉತ್ಪನ್ನ ಹಾಗೂ ನಿರ್ಮಾಣ:

ಈ ಯೋಜನೆಯ ಮತ್ತೊಂದು ಪ್ರಮುಖ ಅಂಶ, ಈ ಯೋಜನೆಗೆ ಅಗತ್ಯವಿರುವ ಎಲ್ಲಾ ಭಾಗಗಳ ನಿರ್ಮಾಣ ಭಾರತದಲ್ಲೇ ಆಗಲಿದೆ. ಎರಡು ದೇಶಗಳ ನಡುವಣ ಒಪ್ಪಂದದಲ್ಲಿ ‘ಸ್ಥಳೀಯವಾಗಿ ನಿರ್ಮಾಣ’ ಹಾಗೂ ‘ತಂತ್ರಜ್ಞಾನ ವಿನಿಮಯ’ ಎಂಬ ಉದ್ದೇಶಗಳನ್ನು ಸೇರಿಸಲಾಗಿದ್ದು, ಈ ನಿಯಮಾವಳಿಯ ಪ್ರಕಾರ ಈ ಯೋಜನೆಯನ್ನು ಜಾರಿಗೆ ತರಲು ಕಾರ್ಯಯೋಜನಾ ತಂಡ ರಚಿಸಲಾಗಿದೆ. ಇದರಲ್ಲಿ ಕೈಗಾರಿಕಾ ಯೋಜನೆ ಮತ್ತು ಉತ್ತೇಜನ ವಿಭಾಗ (ಡಿ.ಐ.ಪಿ.ಪಿ) ಮತ್ತು ಜಪಾನ್ ವಿದೇಶ ವ್ಯಾಪಾರ ಸಂಸ್ಥೆ (ಜೆ.ಇ.ಟಿ.ಆರ್.ಒ) ಅನ್ನು ನೇಮಿಸಲಾಗಿದೆ.

ಈ ತಂಡದಲ್ಲಿ ಭಾರತೀಯ ಕೈಗಾರಿಕೆ, ಜಪಾನ್ ಕೈಗಾರಿಕೆ, ಡಿ.ಐ.ಪಿ.ಪಿ ಮತ್ತು ಜೆ.ಇ.ಟಿ.ಆರ್.ಒ ಎಂಬ ನಾಲ್ಕು ಉಪ ವಿಭಾಗಗಳು ಭಾರತದಲ್ಲಿ
ನಿರ್ಮಾಣವಾಗಲಿರುವ ಉಪಕರಣಗಳ ಕ್ಷಮತೆಯನ್ನು ಪರೀಕ್ಷಿಸಲಿವೆ. ಅಷ್ಟೇ ಅಲ್ಲದೇ, ಈ ಮಹತ್ವದ ಯೋಜನೆಯ ಹೈಸ್ಪೀಡ್ ರೈಲಿನ ತರಬೇತಿ ಕೇಂದ್ರವನ್ನು ವಡೋದರಾದಲ್ಲಿ ಸ್ಥಾಪಿಸಲಾಗಿದ್ದು, ಇದು ಸುಸಜ್ಜಿತ ಕೇಂದ್ರವಾಗಿದೆ. ಜಪಾನ್ ನಲ್ಲಿರುವ ತರಬೇತಿ ಕೇಂದ್ರದಂತೆ ಇಲ್ಲೂ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. 2020ರ ವೇಳೆಗೆ ಈ ಕೇಂದ್ರ ತನ್ನ ಕಾರ್ಯ ಆರಂಭಿಸಲಿದ್ದು, ಮುಂದಿನ ಮೂರು ವರ್ಷಗಳಲ್ಲಿ 4 ಸಾವಿರ ಸಿಬ್ಬಂದಿಗೆ ತರಬೇತಿ ನೀಡಲಿದೆ. ಇಲ್ಲಿ ತರಬೇತಿ ಪಡೆದವರು ನಂತರ ಈ ಯೋಜನೆಯ ಕಾರ್ಯಾಚರಣೆಯನ್ನು ನಿಭಾಯಿಸಲಿದ್ದಾರೆ. ಇದರ ಜತೆಗೆ ಭಾರತೀಯ ರೈಲ್ವೆಯ 300 ಯುವ ಅಧಿಕಾರಿಗಳಿಗೆ ಜಪಾನಿನಲ್ಲಿ ಹೈಸ್ಪೀಡ್ ರೈಲಿನ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನದ ವಿನಿಮಯದ ಕುರಿತಂತೆ ಭಾರತ ಮತ್ತು ಜಪಾನ್ ನಡುವೆ ಹಲವಾರು ಮಾತುಕತೆಗಳಾಗಿವೆ. 50 ವರ್ಷ ಹಳೆಯದಾದ ಶಿಂಕನ್‍ಸೆನ್ ತಂತ್ರಜ್ಞಾನದ ಬಳಕೆಯಿಂದ ರೈಲು ತಡವಾಗುವುದಿಲ್ಲ, ಅಪಘಾತಗಳಾಗುವುದಿಲ್ಲ, ಸುರಕ್ಷತೆಯ ಗುಣಮಟ್ಟವನ್ನು ಕಾಪಾಡಲಾಗುವುದು. ಅಪಘಾತ ಮುನ್ಸೂಚನೆ ಮತ್ತು ತಡೆಗಟ್ಟುವ ತಂತ್ರಜ್ಞಾನವೂ ಇದರಲ್ಲಿ ಇರಲಿದೆ. 7ರಿಂದ 8 ಗಂಟೆ ತಗಲುತ್ತಿದ್ದ ಸಮಯ ಬುಲೆಟ್ ರೈಲಿನಿಂದ 2 ಗಂಟೆಗೆ ಇಳಿಯಲಿದೆ.

ಇನ್ನು ಈ ಬುಲೆಟ್ ರೈಲಿನಿಂದ ಭಾರತದ ಅಭಿವೃದ್ಧಿ ಕೂಡ ಅಷ್ಟೇ ವೇಗದಲ್ಲಿ ಮುಂದೆ ಸಾಗಲಿದ್ದು, ಭಾರತದಲ್ಲೇ ನಿರ್ಮಾಣವಾಗುತ್ತಿರುವುದರಿಂದ ಭಾರತದ ಜನತೆಗೆ ಉದ್ಯೋಗ ಸಿಗಲಿದೆ. ನಿರ್ಮಾಣ ಸಮಯದಲ್ಲಿಯೇ 20 ಸಾವಿರ ಜನರಿಗೆ ಉದ್ಯೋಗ ಸಿಗಲಿದ್ದು, ಮಹಾರಾಷ್ಟ್ರದಲ್ಲಿ 4 ಮತ್ತು ಗುಜರಾತ್ ನಲ್ಲಿ 8 ಸ್ಟೇಷನ್ ಗಳು ಆರ್ಥಿಕ ಪವರ್ ಹೌಸ್ ಆಗಿ ಬದಲಾಗಲಿವೆ. 2022ರೊಳಗೆ ನಿರ್ಮಾಣವಾಗಲಿರುವ ಬುಲೆಟ್ ಟ್ರೈನ್ ಭಾರತದ ಅಭಿವೃದ್ಧಿಯ ನಕ್ಷೆಯನ್ನೇ ಬದಲಿಸಲಿದ್ದು, ಇದನ್ನೇ ಪ್ರಧಾನಿ ನರೇಂದ್ರ ಮೋದಿ ಕೂಡ ಹೇಳಿದ್ದಾರೆ. ಬರೋಡಾದಲ್ಲಿ ತರಬೇತಿ ಕೇಂದ್ರದಲ್ಲಿ 4 ಸಾವಿರ ಉದ್ಯೋಗಿಗಳಿಗೆ ತರಬೇತಿ ನೀಡಲಾಗುತ್ತದೆ. ಈ ತಂತ್ರಜ್ಞಾನ ಅರಿಯಲು ಭಾರತದ 300 ಯುವ ಅಧಿಕಾರಿಗಳನ್ನು ಜಪಾನ್ ಗೆ ಕಳುಹಿಸಲಾಗುತ್ತಿದೆ.

ಪ್ರಯಾಣ ದರ ಮತ್ತು ರೈಲು ಸಾಮರ್ಥ್ಯ!!

ಬುಲೆಟ್ ರೈಲು ಪ್ರತಿ ಗಂಟೆಗೆ 320-350 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿದೆ. ಅಲ್ಲದೇ, ಎರಡು ನಗರಗಳ ನಡುವಿನ ಸಮಯ ಉಳಿತಾಯವಾಗಲಿದ್ದು, 7-8 ಗಂಟೆಗಳ ಪ್ರಯಾಣವನ್ನು 2 ಗಂಟೆಗಳಲ್ಲಿ ತಲುಪಬಹುದಾಗಿದೆ. ಇನ್ನು ಪ್ರಯಾಣ ದರದ ವಿಚಾರಕ್ಕೆ ಬಂದರೆ, ರೂ. 3000-5000 ನಡುವೆ ಇರಲಿದೆ ಎನ್ನಲಾಗಿದೆ. ತಜ್ಞರು ಹೇಳಿರುವಂತೆ ಪ್ರತೀ 300 ಕಿ.ಮೀ ಪ್ರಯಾಣಕ್ಕೆ ಸುಮಾರು ರೂ. 1500 ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಸಾಮಾನ್ಯವಾಗಿ, ಹೈ ಸ್ಪೀಡ್ ರೈಲಿನ 10 ಬೋಗಿಗಳು 750 ಜನರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿರುತ್ತದೆ. ಅದೇ ರೀತಿ 16 ಬೋಗಿಗಳು 1,200 ಜನರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿರುತ್ತದೆ. ವಾರ್ಷಿಕವಾಗಿ 1.6 ಕೋಟಿ ಜನ ಬುಲೆಟ್ ರೈಲು ಮೂಲಕ ಪ್ರಯಾಣಿಸುವ ನಿರೀಕ್ಷೆಯಿದೆ. 2050 ರ ಹೊತ್ತಿಗೆ ಪ್ರತಿದಿನ 1.6 ಲಕ್ಷ ಪ್ರಯಾಣಿಕರು ಹೈ ಸ್ಪೀಡ್ ರೈಲು ಮೂಲಕ ಪ್ರಯಾಣಿಸಲಿದ್ದಾರೆ.

ಬುಲೆಟ್ ರೈಲು ಯೋಜನೆ ಭಾರತ ಮತ್ತು ಜಪಾನ್ ಸ್ನೇಹದ ಪ್ರತೀಕವಾಗಿದ್ದು, ಈ ಯೋಜನೆಯಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸುಮಾರು 40 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಸುಮಾರು 20,000, ನಿರ್ವಹಣಾ ಕ್ಷೇತ್ರದಲ್ಲಿ 4 ಸಾವಿರ ಹಾಗೂ ವಿವಿಧ ಕ್ಷೇತ್ರದಲ್ಲಿ 2 ಸಾವಿರ ಉದ್ಯೋಗ ಹಾಗೂ ಪರೋಕ್ಷ ಘಟಕಗಳಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಅಷ್ಟೇ ಅಲ್ಲದೇ, ಈ ಬುಲೆಟ್ ರೈಲು ಯೋಜನೆಯ ರೈಲ್ವೇ ಕಾರಿಡಾರ್ ಮುಂಬೈ ನಿಂದ ಅಹಮದಾಬಾದ್ ವರೆಗೆ ಒಟ್ಟು 508ಕಿಮಿ ಉದ್ದವಿದೆ. ಹಾಗಾಗಿ ಈ ಯೋಜನೆಗೆ ಕೇವಲ 825 ಹೆಕ್ಟೇರ್ ಭೂಮಿ ಮಾತ್ರ ಅಗತ್ಯವಿದ್ದು, ಶೇ. 92ರಷ್ಟು ಮಾರ್ಗ ಎತ್ತರದಲ್ಲಿರುತ್ತದೆ. ಶೇ. 6ರಷ್ಟು ಸುರಂಗಗಳ ಮೂಲಕ ಹಾದುಹೋಗುತ್ತದೆ. ಉಳಿದ ಶೇ. 2ರಷ್ಟು ಮಾತ್ರ ನೆಲದ ಮೇಲೆ ಇರುತ್ತದೆ. ಮುಂಬೈನ ಬೋಯಿಸರ್ ಮತ್ತು ಬಿಕೆಸಿ ನಡುವೆ ಸುಮಾರು 21 ಕಿಮೀ ಸುರಂಗ ಮಾರ್ಗ, ಥಾಣೆ ಮತ್ತು ವಸೈ ನಡುವೆ ಹೆಚ್ಚುಕಡಿಮೆ 40ಞm ಪ್ರದೇಶ ಸಮುದ್ರದೊಳಗೆ ಮತ್ತು ಮುಂಬೈ ನಲ್ಲಿ ಅಂಡರ್ ಗ್ರೌಂಡ್ ಮೂಲಕ ಈ ಯೋಜನೆಯ ಹಳಿಗಳು ಹಾದುಹೋಗಲಿವೆ.

20,000 ಉದ್ಯೋಗಗಳನ್ನು ಸೃಷ್ಟಿಯಾಗಲಿದೆ !!

ಈ ಯೋಜನೆಯ ಕಾರ್ಯಾಚರಣೆಯ ನಂತರ 4,000 ನೇರ ಉದ್ಯೋಗವನ್ನು ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ರಚಿಸಲಾಗುವುದಲ್ಲದೆ ಈ ಯೋಜನೆಯು ಸುಮಾರು 16,000 ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಎಸ್ಬಿಐ ವರದಿ ತಿಳಿಸಿದೆ. ಈ ಪ್ರಕಾರ ಬುಲೆಟ್ ರೈಲು ಯೋಜನೆ ಭಾರತದಲ್ಲಿ 20,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿದೆ. ಬುಲೆಟ್ ಟ್ರೈನ್ ಹೊಂದಲು ಭಾರತವು ಒಂದು ಬೃಹತ್ ಯೋಜನೆಯನ್ನು ಕೈಗೊಂಡ ನಂತರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಶೋಧನೆಯ ಪ್ರಕಾರ 20,000 ಉದ್ಯೋಗಗಳನ್ನು ಈ ಯೋಜನೆ ಸೃಷ್ಟಿಸುತ್ತದೆ ಎಂದು ಅಂದಾಜಿಸಲಾಗಿದೆ.

ಯೋಜನೆಯ ಪ್ರಮುಖ 12 ಅಂಶಗಳು

1) ಭಾರತದ ಬುಲೆಟ್ ಟ್ರೈನ್ ಯೋಜನೆಗೆ ಸುಮಾರು 1.10 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ. ಈ ಯೋಜನೆಯ ಒಟ್ಟು ವೆಚ್ಚದಲ್ಲಿ 88 ಸಾವಿರ ಕೋಟಿ(ಶೇ.81)ಹಣವನ್ನು ಜಪಾನ್ ಸಾಲ ರೂಪದಲ್ಲಿ ಭಾರತಕ್ಕೆ ಒದಗಿಸುತ್ತಿದೆ. ಜಪಾನ್ ಸಾಲವನ್ನು 50 ವರ್ಷದ ಒಳಗಡೆ ಮರು ಪಾವತಿ ಮಾಡಬೇಕಾಗಿದ್ದು, ಈ ಸಾಲಕ್ಕೆ ಶೇ.0.1 ರಷ್ಟು ಬಡ್ಡಿಯನ್ನು ವಿಧಿಸಿದೆ.
2) ಹೊಸ ಬುಲೆಟ್ ಟ್ರೈನ್ ಗುಜರಾತ್‍ನಿಂದ ಮುಂಬೈಗೆ ಸಂಚಾರವನ್ನು ನಡೆಸಲಿದ್ದು, ಒಮ್ಮೆ 750 ಪ್ರಯಾಣಿಕರನ್ನು ಹೊತ್ತು ಸಾಗಲಿದೆ. ಪ್ರತಿ ದಿನ 70 ಬಾರಿ ಅಹಮದಾಬಾದ್-ಮುಂಬೈ ನಡುವೆ ಈ ರೈಲು ಸಂಚರಿಸಲಿದೆ.
3) ಬುಲೆಟ್ ಟ್ರೈನ್ ಸರಾಸರಿ ಘಂಟೆಗೆ 320 ಕಿ.ಮೀ ವೇಗದಲ್ಲಿ ಸಂಚರಿಸಲಿದ್ದು, ಗರಿಷ್ಟ 350 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.
4) ಬುಲೆಟ್ ಟ್ರೈನ್ 508 ಕಿ.ಮೀ ಉದ್ದದ ಮಾರ್ಗವನ್ನು ಹೊಂದಿದ್ದು, ಶೇ.92 ರಷ್ಟು ಮೇಲ್ಸೇತುವೆ, ಶೇ.6 ರಷ್ಟು ಸುರಂಗ ಹಾಗೂ ಇನ್ನುಳಿದ ಶೇ.2 ರಷ್ಟು ನೆಲದಲ್ಲಿ ಹಾದು ಹೋಗಲಿದೆ. ಅಂದರೆ ಸುಮಾರು 460 ಕಿ.ಮೀ ಮೇಲ್ಸೇತುವೆ ಮಾರ್ಗದಲ್ಲೂ, 27 ಕಿಮೀ ಸುರಂಗ ಮಾರ್ಗದಲ್ಲೂ, ಉಳಿದ 13 ಕಿ.ಮೀ ನೆಲದಲ್ಲಿ ಸಂಚರಿಸಲಿದೆ.
5) ದೇಶದ ಅತೀ ದೊಡ್ಡ ಸುರಂಗ ಮಾರ್ಗವನ್ನು (21 ಕಿ.ಮೀ) ಹೊಂದಿರಲಿದ್ದು, 7 ಕಿ.ಮೀ ಸಮುದ್ರ ಅಡಿಯ ಸುರಂಗದಲ್ಲಿ ಸಂಚರಿಸುವುದು ವಿಶೇಷ. ಒಟ್ಟು 508 ಕಿ.ಮೀ ಮಾರ್ಗದಲ್ಲಿ 351 ಕಿ.ಮೀ ಗುಜರಾತ್ ರಾಜ್ಯದಲ್ಲಿ ಹಾಗೂ 156 ಕಿ.ಮೀ ಮಹಾರಾಷ್ಟ್ರ ರಾಜ್ಯದಲ್ಲಿ ಬುಲೆಟ್ ರೈಲು ಸಂಚರಿಸಲಿದೆ.
6) ದಿನದಲ್ಲಿ 20 ಗಂಟೆಗಳ ಕಾಲ ರೈಲು ಓಡಲಿದ್ದು, ನಾಲ್ಕು ಗಂಟೆಯಲ್ಲಿ ರೈಲನ್ನು ಸ್ವಚ್ಛಗೊಳಿಸಲಾಗುತ್ತದೆ. ಜಪಾನ್ ನಲ್ಲಿ ಕೇವಲ 7 ನಿಮಿಷದಲ್ಲಿ ರೈಲನ್ನು ಸ್ವಚ್ಛಗೊಳಿಸಲಾಗುತ್ತದೆ.
7) ಬುಲೆಟ್ ರೈಲು ಮೊದಲ ಸಂಚಾರವನ್ನು 2022ರ ಆಗಸ್ಟ್ 15 ರಂದು ಆರಂಭಿಸಬೇಕೆಂಬ ಗುರಿಯನ್ನು ರೈಲ್ವೇ ಸಚಿವಾಲಯ ಹಾಕಿಕೊಂಡಿದೆ. ಆರಂಭದಲ್ಲಿ 2023ಕ್ಕೆ ಈ ಯೋಜನೆ ಪೂರ್ಣಗೊಳಿಸಲು ಡೆಡ್‍ಲೈನ್ ನಿಗದಿಗೊಳಿಸಲಾಗಿತ್ತು. ಆದರೆ 2022ರಲ್ಲಿ ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಆಚರಿಸುವ ಕಾರಣ ಜನರಿಗೆ ಉಡುಗೊರೆ ಎಂಬಂತೆ ಅವಧಿಗೂ ಮುನ್ನವೇ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
8) ಮುಂಬೈ-ಅಹಮದಾಬಾದ್ ಮಾರ್ಗವು 12 ನಿಲ್ದಾಣಗಳನ್ನು ಹೊಂದಿರಲಿದೆ. ಎಲ್ಲಾ ನಿಲ್ದಾಣಗಳಲ್ಲಿಯೂ ರೈಲು ನಿಲ್ಲಿಸಿ ಪ್ರಯಾಣ ನಡೆಸಿದರೂ ಕೇವಲ 3 ಘಂಟೆಯಲ್ಲಿ ಕೊನೆಯ ನಿಲ್ದಾಣವನ್ನು ತಲುಪಲಿದೆ. ಸದ್ಯ ಈ ದೂರವನ್ನು ಕ್ರಮಿಸಲು ಸುಮಾರು 8 ಗಂಟೆಯ ಅವಧಿಯನ್ನು ರೈಲು ತೆಗೆದುಕೊಳ್ಳುತ್ತಿದೆ.
9) ಜಪಾನ್ ಸಾಲವನ್ನು ಮರುಪಾವತಿ ಮಾಡಬೇಕಾದರೆ ಪ್ರತಿ ದಿನ 100 ಟ್ರಿಪ್ ರೈಲು ಸಂಚರಿಸಬೇಕು ಅಥವಾ ದಿನಕ್ಕೆ 88 ಸಾವಿರದಿಂದ 1.18 ಲಕ್ಷ
ಪ್ರಯಾಣಿಕರು ಸಂಚರಿಸಬೇಕು ಎಂದು ಈ ಹಿಂದೆ ಈ ಯೋಜನೆ ಬಗ್ಗೆ ಅಧ್ಯಯನ ನಡೆಸಿದ್ದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಹಮದಾಬಾದ್ ರೈಲ್ವೇ ಇಲಾಖೆಗೆ ವರದಿ ನೀಡಿತ್ತು. ಅಷ್ಟೇ ಅಲ್ಲದೇ 300 ಕಿ.ಮೀ ಪ್ರಯಾಣಕ್ಕೆ ಒಂದು ಟಿಕೆಟ್‍ಗೆ 1500 ರೂ ದರವನ್ನು ನಿಗದಿ ಮಾಡಬೇಕೆಂಬ ಅಂಶವನ್ನು ವರದಿಯಲ್ಲಿ ತಿಳಿಸಿತ್ತು.
10) ಜಪಾನ್ ಶಿಕಾನ್‍ಸೆನ್ ಬುಲೆಟ್ ರೈಲು 1964ರಲ್ಲಿ ಆರಂಭವಾಗಿದ್ದು, ಈವರೆಗೂ ಒಂದೇ ಒಂದು ಅಪಘಾತವಾಗಿಲ್ಲ. ಈ ರೈಲಿನಲ್ಲಿ ಸೆನ್ಸರ್ ಅಳವಡಿಸಲಾಗಿದ್ದು ಹಳಿಯಲ್ಲಿ ಏನಾದರೂ ಇದ್ದರೆ ಅಥವಾ ಹಳಿ ತುಂಡಾಗಿದ್ದರೆ ಅದರ ಮಾಹಿತಿ ತಿಳಿದು ಸ್ವಯಂ ಚಾಲಿತವಾಗಿ ನಿಲ್ಲುವ ವ್ಯವಸ್ಥೆಯನ್ನು ರೈಲು ಹೊಂದಿದೆ.

ಬುಲೆಟ್ ರೈಲಿನಲ್ಲಿರುವ ಇನ್ನಿತರ ಫೀಚರ್ ಗಳು:

ಸ್ವಚ್ಛ ಭಾರತ ಅಭಿಯಾನದ ಮುಖಾಂತರ ಕೇವಲ 7 ನಿಮಿಷದಲ್ಲಿ ರೈಲನ್ನು ಸ್ವಚ್ಛ ಮಾಡಲಾಗುವುದು. ಇದು ಉಗುಳುವ ಇಂಗಾಲದ ಡೈಆಕ್ಸೈಡ್ ಕೂಡ ವಿಮಾನದ 1/4ರಷ್ಟು ಮತ್ತು ಕಾರಿನ 1/3ಕ್ಕಿಂತ ಕಡಿಮೆ ಇರಲಿದ್ದು, ಪರಿಸರ ಸ್ನೇಹಿಯಾಗಿರಲಿದೆ. ಬುಲೆಟ್ ರೈಲು ಪ್ರಯಾಣಿಕರ ಅನುಕೂಲಕ್ಕೆ ಮಾತ್ರವಲ್ಲ ಅಭಿವೃದ್ಧಿಯ ದೃಷ್ಟಿಯಿಂದಲೂ ಭಾರತಕ್ಕೆ ಬೇಕೇಬೇಕು.

ಮುಂಬೈನಿಂದ ಅಹ್ಮದಾಬಾದ್ ವರೆಗೂ ನಿರ್ಮಾಣವಾಗಲಿರುವ ಆ ಹೈಸ್ಪೀಡ್ ರೈಲಿನಲ್ಲಿ ಎರಡು ರೀತಿಯ ಸೇವೆಗಳಿವೆ. ಮೊದಲನೆಯದ್ದು ರಾಪಿಡ್ ಟ್ರೈನ್- ಇದರಲ್ಲಿ ಮುಂಬೈನಿಂದ ಅಹ್ಮದಾಬಾದ್ ವರೆಗಿನ ಪ್ರಯಾಣದಲ್ಲಿ ಕೇವಲ 2 ನಿಲ್ದಾಣಗಳಲ್ಲಿ ರೈಲನ್ನು ನಿಲ್ಲಿಸಲಾಗುತ್ತದೆ. ಮತ್ತೊಂದು ಸೇವೆಯಲ್ಲಿ ಒಟ್ಟು 10 ನಿಲ್ದಾಣಗಳನ್ನು ಹೊಂದಲಿದೆ. ರಾಪಿಡ್ ಟ್ರೈನ್ ನಲ್ಲಿ ಮುಂಬೈನಿಂದ ಅಹ್ಮದಾಬಾದಿಗೆ ಕೇವಲ 2 ಗಂಟೆ 7 ನಿಮಿಷದಲ್ಲಿ ತಲುಪಿದರೆ, ಮತ್ತೊಂದು ಸೇವೆಯಲ್ಲಿ 2 ಗಂಟೆ 58 ನಿಮಿಷದಲ್ಲಿ ತಲುಪಬಹುದು.

ಇನ್ನು ಪ್ರಮುಖ ಸಮಯದಲ್ಲಿ ಪ್ರತಿ ಗಂಟೆಗೆ 3 ಬಾರಿ ಹಾಗೂ ಇತರೆ ಸಮಯದಲ್ಲಿ ಪ್ರತಿ ಗಂಟೆಗೆ ಎರಡು ರೈಲುಗಳಂತೆ ಒಟ್ಟು ಪ್ರತಿನಿತ್ಯ 35 ಬಾರಿ ರೈಲುಗಳು ಸಂಚಾರ ಮಾಡಲಿವೆ. 2023ರ ವೇಳೆಗೆ ಈ ಬುಲೆಟ್ ರೈಲಿನಲ್ಲಿ ಸಂಚಾರ ಮಾಡುವವರ ಪ್ರಮಾಣ 36 ಸಾವಿರ ದಾಟಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಶ್ರೀಮಂತ ವರ್ಗ ಹಾಗೂ ತಂತ್ರಜ್ಞಾನ ಅಭಿವೃದ್ಧಿಯನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಸಮಂಜಸವಲ್ಲ. ಹೀಗಾಗಿ ಈ ಯೋಜನೆಯ ಬಗ್ಗೆ ತಾತ್ಸಾರ ಮಾಡುವ ಮುನ್ನ ಇದರ ಕುರಿತಾದ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳುವುದು ಉತ್ತಮವಾಗಿದೆ.

– ಅಲೋಖಾ

Tags

Related Articles

Close