ಪ್ರಚಲಿತ

ಮತ್ತೆ ಶುರುವಾದ ಸಿದ್ಧರಾಮಯ್ಯನವರ ನಾಟಕಕ್ಕೆ ತಿರುಗಿಬಿದ್ದ ಕಾಂಗ್ರೆಸ್ ಮುಖಂಡ! ಸಂತೋಷನ ಹತ್ಯೆಗೆ ಭುಗಿಲೆದ್ದ ಕಾಂಗ್ರೆಸ್ ಹಿರಿಯ ನಾಯಕ ಹೇಳಿದ್ದೇನು ಗೊತ್ತಾ?

ಸಿದ್ಧರಾಮಯ್ಯನ ಸ್ಥಿತಿ ನೋಡಿ! ಅತಿರೇಕವೆನ್ನುವಷ್ಟಾಗಿರುವ ಅಲ್ಪಸಂಖ್ಯಾತರ ತುಷ್ಟೀಕರಣವೊಂದು ಹಿಂದೂ ಕಾರ್ಯಕರ್ತರ ಸಾಲು ಸಾಲು ಹೆಣಗಳನ್ನು
ಬೀಳಿಸಿದೆ.. ಅಷ್ಟಾದರೂ ಗದ್ದುಗೆಯ ಮೇಲೆ ಕುಂತ ಸಿದ್ಧರಾಮಯ್ಯನವರು ಚುನಾವಣೆಗೆ ಕರ್ನಾಟಕದಿಂದ ಹೆಲಿಕ್ಯಾಪ್ಟರ್ ಗಳಲ್ಲಿ ಹಣವನ್ನು ಕಳುಹಿಸುವುದರಲ್ಲಿ ಸಖತ್ ಬ್ಯುಸಿಯಾಗವ್ರೆ! ವ್ಹಾ! ಎಂತಹ ಸರಕಾರ ಗೊತ್ತಾ ಕರ್ನಾಟಕದ್ದು;? ಸ್ವತಃ ಮುಖ್ಯಮಂತ್ರಿಯವರೇ ಕೊಲೆ ಪ್ರಕರಣದಲ್ಲಿ ಮುಖ್ಯ ಆರೋಪಿಗಳನ್ನು ಕಂಕುಳಲ್ಲಿಟ್ಟು ರಕ್ಷಿಸುತ್ತಾರೆ! ಅದೇ, ಹಿಂದೂ ಕಾರ್ಯಕರ್ತನೋ, ಆತ ಎರಡೇ ಕ್ಷಣಗಳಲ್ಲಿ ಕೆಂಗಣ್ಣಿಗೆ ಗುರಿಯಾಗಿರುತ್ತಾನೆ.

ಎಂತಹ ಸರಕಾರವೆನ್ನುತ್ತೀರಿ ಸ್ವಾಮಿ?! ಮೈ ಕೈ ಎಲ್ಲಾ ಬಿಸಿ ತೈಲದಿಂದ ಎರೆಸಿಕೊಂಡು ಸುಟ್ಟು ಕರಕಲಾಗಿದ್ದರೂ ಸಹ, ಈ ರಾಜ್ಯ ಸರಕಾರಕ್ಕೆ ಅದು ನೀರಿನಿಂದ ಕೊಳೆತು ಆದ ಸ್ಥಿತಿ! ಮೈ ಮೇಲೆಲ್ಲ ಅಮಾನುಷವಾಗಿ ತರಿದು ಚುಚ್ಚಿದ ಗಾಯಗಳಿದ್ದರೂ ಆಕಸ್ಮಿಕವಾಗಿ ಬಿದ್ದದ್ದರಿಂದ ಆದ ಗಾಯಗಳು! ಕೊನೆಗೂ, ತಮ್ಮದೇ ಸರಕಾರದಿಂದ ನಿಯೋಜಿತಗೊಂಡ ವೈದ್ಯನಿಗೆ ಜೇಬು ಬಿಸಿ ಮಾಡಿಸಿ ಶವಪರೀಕ್ಷೆಯ ವರದಿಯನ್ನು ಆಕಸ್ಮಿಕ ಸಾವು ಎಂದು ಬರೆದು ಬಿಡಿ ಎನ್ನುವಾಗ ಅಲ್ಲಿ ಕೊಲೆ ಮಾಡಿರುವವರು ಹಾಡಹಗಲೇ ಎದೆಯುಬ್ಬಿಸಿ ತಿರುಗುತ್ತಾರೆ!

Image result for ramalinga reddy with siddaramaiah

ಸಾಲು ಸಾಲು ಹೆಣಗಳು! ಇನ್ನೂ ಕಡಿಮೆಯಾಗಿಲ್ಲವೇ ರಕ್ತದಾಹ?!

ಇದು ಸಿದ್ಧರಾಮಯ್ಯನವರ ಹಣೆಬರಹವೋ ಅಥವಾ ಹಿಂದೂಗಳದ್ದೋ? ಒಟ್ಟಾರೆಯಾಗಿ ಇಂತಹ ರಾಜ್ಯ ಸರಕಾರದಿಂದ ಹಿಂದೂಗಳಿಗೆ ಉಳಿಗಾಲವಿಲ್ಲವೆನ್ನುವುದು ಅಷ್ಟೇ ಸತ್ಯ ಬಿಡಿ! ಕಳೆದ ತಿಂಗಳಷ್ಟೇ ಸುರತ್ಕಲ್ ನ ದೀಪಕ್ ರಾವ್ ಎಂಬುವವರ ಹತ್ಯೆಯಾಗಿದೆ! ಕೇವಲ ಬಿಜೆಪಿ ಕಾರ್ಯಕರ್ತನೆಂಬ ಕಾರಣಕ್ಕೆ ಇದೇ ಮುಸಲ್ಮಾನ ಮತಾಂಧರು ತಮ್ಮ ಅಟ್ಟಹಾಸ ಮುಂದುವರೆಸಿದ್ದರು. ‌ಅಲ್ಲಿಯೂ ಸಹ, ಪ್ರಕರಣವನ್ನು ಎನ್ ಐ ಎ ಗೆ
ಕೊಡಬೇಕೆಂದು ಆಗ್ರಹಿಸಿದಾಗ ಹೂಂ ಎಂದ ಸರಕಾರ ಇವತ್ತಿನವರೆಗೂ ಯಾವುದೇ ವಿಚಾರಗಳನ್ನೂ ಬಹಿರಂಗ ಪಡಿಸಿಲ್ಲ.

ಅವತ್ತು ದೀಪಕ್ ರಾವ್ ಕೊಲೆಗೆ ಇಡೀ ಕರ್ನಾಟಕ ಬೆಚ್ಚಿ ಬಿದ್ದಾಗ, ” ಆರೋಪಿ ಯಾರೇ ಆಗಿರಲಿ, ಅಪರಾಧಿಗೆ ಶಿಕ್ಷೇ ಆಗಲೇ ಬೇಕು ಅದನ್ನು ನಾವು ಮಾಡೇ ಮಾಡುತ್ತೇವೆ ಎಂದು ಮಾಧ್ಯಮದೆದುರಿಗೆ ಫೋಸು ಕೊಟ್ಟ ಸಿದ್ಧರಾಮಯ್ಯ ಮಾತ್ರ ಕೊಟ್ಟ ಮಾತಿಗೆ ತಪ್ಪಿದ್ದಾರೆ ಅಷ್ಟೇ.. ಅವರೊಬ್ಬರೇ ಅಲ್ಲ., ಪ್ರತೀ ಬಾರಿಗೂ ಕೂಡ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ, ಹೆಸರಿಗಷ್ಟೇ ಭರವಸೆ ನೀಡಿ ಕೊನೆಗೆ ಹಿಂದಿನಿಂದ ಉಗ್ರ ಸಂಘಟನೆಗಳ ಜೊತೆ ರಾಜಕೀಯ ಚರ್ಚೆ ಮಾಡುವ ಸಿದ್ಧರಾಮಯ್ಯನವರಿಗೆ ತಕ್ಕನಾಗಿ ಅವರ ಸಂಪುಟವೂ ಸಿದ್ಧರಾಮಯ್ಯನವರ ತುಕ್ಕು ಹಿಡಿದ ಮನಃಸ್ಥಿತಿಯನ್ನು ವೈಭವೀಕರಿಸುವಲ್ಲಿ ಸಹಕರಿಸುತ್ತದೆ.

Related image

ಆದರೆ, ದಿನೇ ದಿನೇ ಸಿದ್ಧರಾಮಯ್ಯನವರ ಮುಸಲ್ಮಾನ ತುಷ್ಟೀಕರಣದ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆಯೇ ಕಾಂಗ್ರೆಸ್ಸಿನ ಹಿರಿಯ ಮುಖಂಡ ತಿರುಗಿ ಬಿದ್ದಿದ್ದಾರೆ!!ಹಾ!! ಅವರೇ ಶಂಕರ್ ಮುನವಳ್ಳಿ!! ಕಾಂಗ್ರೆಸ್ ನ ಹಿರಿಯ ನಾಯಕರು!! ಈ ಹಿಂದೆ ಸಾಕಷ್ಟು ಬಾರಿ ಸಿದ್ಧರಾಮಯ್ಯನವರ ಇಬ್ಬಗೆ ನೀತಿಯನ್ನು ಪ್ರಶ್ನಿಸಿ ತಿದ್ದುಕೊಳ್ಳಿ ಎಂದು ಎಚ್ಚರಿಸುತ್ತಲೇ ಬಂದಿದ್ದ ಶಂಕರ್ ಮುನವಳ್ಳಿ ಈ ಸಲ ರಾಜ್ಯ ಸರಕಾರದ ಮನಃಸ್ಥಿತಿಯ ಬಗ್ಗೆ ತಾವೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ,.

ಅಷ್ಟಕ್ಕೂ., ಶಂಕರ್ ಮುನವಳ್ಳಿ ಸಿಟ್ಟಿಗೆದ್ದಿದ್ಯಾಕೆ?!

ಬೆಂಗಳೂರಿನ ಜೆ.ಸಿ.ನಗರದಲ್ಲಿ ವಾಸಿಂ ಮತ್ತವನ ಗ್ಯಾಂಗ್ ನ ಗಾಂಜಾ ಪ್ರಕರಣ ಬಯಲು ಮಾಡಿದ್ದ ಹಿಂದೂ ಯುವಕ ಸಂತೋಷ್ ನನ್ನು ಚಾಕುವಿನಿಂದ ಇರಿದು ಹತ್ಯೆಗೈಯ್ಯಲಾಗಿದೆ! ಜೆ.ಸಿ‌ನಗರ ಗೃಹ ಸಚಿವ ರಾಮಲಿಂಗಾರೆಡ್ಡಿಯ ಸ್ವಕ್ಷೇತ್ರ! ಅಷ್ಟಾದರೂ ಸಹ, ಅಪರಾಧವನ್ನು ಖಂಡಿಸುವುದು ಬಿಟ್ಟು ಮತ್ತದೇ ಬಿಜೆಪಿ ಯ ಗ್ಗೆ ಸಂಘದ ಬಗ್ಗೆ ಆರೋಪಗೈದಿರುವುದು ರಾಮ ಲಿಂಗಾರೆಡ್ಡಿಯಾದರೆ ಹಿಂದಿನಿಂದ ಸಿದ್ಧರಾಮಯ್ಯನವರ ಮೌನ ಎಂತಹವರನ್ನೂ ಕೆಣಕುವಂತಹದ್ದೇ!!

ಸಿದ್ದರಾಮಯ್ಯನವರ ಸರಕಾರ ಹಿಂದೂ ಕಾರ್ಯಕರ್ತರ ಕೊಲೆಗೆ ಪ್ರೇರಣೆ ನೀಡುತ್ತಿದೆಯಾ?!

ಕಳೆದ ನಾಲ್ಕು ವರ್ಷಗಳಲ್ಲಾದ ೨೩ ಹಿಂದೂ ಕಾರ್ಯಕರ್ತರ ಹತ್ತೆ ನೋಡಿದರೆ ಇದು ಸಾಬೀತಾಗುತ್ತಿದೆ. ಬರಿ ಇಷ್ಟೇ ಅಲ್ಲ, ಕಾಂಗ್ರೆಸ್ ನ
ಹಿರಿಯ ನಾಯಕರಾದ ಶಂಕರ್ ಮುವಳ್ಳಿಯೂ ಸಹ ತಮ್ಮದೇ ಪಕ್ಷದ ಪ್ರಸ್ತುತ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ!

Related image

“ಕಾಂಗ್ರೆಸ್ ಮುಂಚೆ ಇಂದಲೂ ಭಾರತದ ರಾಜಕೀಯ ಕ್ಷೇತ್ರದಲ್ಲಿದೆ. ದೇಶಕ್ಕೋಸ್ಕರ ಹೋರಾಡಿದೆ. ಆದರೆ‌, ಸಿದ್ಧರಾಮಯ್ಯನವರ ಸರಕಾರ ಸಿದ್ಧಾಂತವನ್ನು ಮರೆತಂತಿದೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಆದರೆ, ಸರಕಾರ ಮೊನ್ನೆ ಅಲ್ಪಸಂಖ್ಯಾತರ ಮೇಲಿದ್ದ ಪ್ರತಿ ಮೊಕದ್ದಮೆಗಳನ್ನೂ ಖುಲಾಸೆ ಮಾಡುವಂತೆ ಆಜ್ಞೆ ಹೊರಡಿಸಿದೆ. ಇದು, ಇನ್ನಷ್ಟು ಹತ್ಯೆ ಮಾಡಲಿಕ್ಕೆ ಸ್ವತಃ ಸಿದ್ಧರಾಮಯ್ಯನವರು ಪ್ರೇರಣೆ ನೀಡುತ್ತಿದ್ದಾರೆ. ಇದು ನಮ್ಮ ಪ್ರಸಕ್ತ ರಾಜ್ಯ ಸರಕಾರದ ಸ್ಥಿತಿ! ಇರುವ ಪಕ್ಷವನ್ನು ಪ್ರಾಮಾಣಿಕವಾಗಿ ನಡೆಸಿಕೊಂಡು ಹೋಗಲಿಕ್ಕಾಗದೆಯೇ ಈ ರೀತಿ ಮಾಡುತ್ತಿರುವುದು ಘೋರ ಅಪರಾಧ. ಇದು ನಮ್ಮ ದುರಂತ.” ಎಂದು ಚೆನ್ನಾಗಿಯೇ ಸಿದ್ಧರಾಮಯ್ಯನವರ ಚಳಿ ಬಿಡಿಸಿರುವ ಶಂಕರ್ ಮುನವಳ್ಳಿ ಪಕ್ಷದ ಸಚಿವರ ಬೇಜವಾಬ್ಧಾರಿತನಕ್ಕೂ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಸ್ವ ಪಕ್ಷದವರಿಂದಲೇ ಬೆತ್ತಲೆಯಾಗುತ್ತಿರುವ ಸಿದ್ಧರಾಮಯ್ಯನವರ ತುಷ್ಟೀಕರಣದ ಆಡಳಿತ!!

Image result for shankar munavalli

ಅಷ್ಟೇ ಅಲ್ಲವೇ?! ರಾಜ್ಯದ ಜನತೆ ಕಾಂಗ್ರೆಸ್ಸಿನ ಮೇಲೆ ಭರವಸೆ ಕಳೆದುಕೊಂಡಿದೆ. ಅದರಲ್ಲಿಯೂ,ಹಿಂದೂಗಳು ಮತ್ತೆ ಬಿಜೆಪಿಯೆಡೆಗೆ ಬರುತ್ತಿದ್ದಾರೆ. ಕಳೆದ ವರ್ಷ ಮಾಡಿದ ತಪ್ಪಿಗೆ ಈ ಸಲದ ಚುನಾವಣೆಯಲ್ಲಿ ಅನುಭವಿಸಲೇ ಬೇಕಿದೆ ಸಿದ್ಧರಾಮಯ್ಯ ಬಹುದೊಡ್ಡ ಸೋಲೊಂದನ್ನು! ಚುನಾವಣೆಗೋಸ್ಕರ ಮತಬ್ಯಾಂಕುಗಳಿಗೋಸ್ಕರ ಹಿಂದುಗಳ ಹೆಣ ಬಿದ್ದರೂ ಪರವಾಗಿಲ್ಲ, ಮುಸಲ್ಮಾನ ಮತಗಳನ್ನು ಕಳೆದುಕೊಳ್ಳಲಾರೆ ಎಂದು ಹಠ ತೊಟ್ಟಿರುವ ಸಿದ್ಧರಾಮಯ್ಯನ ಸರಕಾರಕ್ಕೆ ಕನ್ನಡ ನಾಡಿನ ಜನತೆ ಸದ್ಯದರಲ್ಲಿಯೇ ಪಾಠ ಕಲಿಸಲಿದೆ.

– ಪೃಥು ಅಗ್ನಿಹೋತ್ರಿ

Tags

Related Articles

Close