ಇತಿಹಾಸ

ಮರಾಠರ ಜೊತೆ ಹೀನಾಯವಾಗಿ ‘ಗಜೇಂದ್ರಗಢ ಯುದ್ಧ’ ಸೋತ ಟಿಪ್ಪು 48 ಲಕ್ಷ ರೂಪಾಯಿ ಕಪ್ಪ ಕೊಟ್ಟು ಓಡಿ ಹೋಗಿದ್ದ ಕಥೆ ನಿಮಗೆ ಗೊತ್ತಿದೆಯಾ?

ಇತಿಹಾಸದುದ್ದಕ್ಕೂ ಟಿಪ್ಪು ಶೂರನಾಗಿದ್ದ ವೀರನಾಗಿದ್ದ ಅಂತ ಬೊಬ್ಬೆಯೊಡೋ ಇತಿಹಾಸಕಾರರು ಟಿಪ್ಪು ಮರಾಠರಿಂದ ಸೋತು ತನ್ನ ತಂದೆ ವಶಪಡಿಸಿಕೊಂಡಿದ್ದ ಗಜೇಂದ್ರಗಢ ಕೋಟೆಯನ್ನ 48 ಲಕ್ಷ ಕಪ್ಪ ಕೊಟ್ಟು ಬಿಟ್ಟು ಹೋಗಿದ್ದರ ಬಗ್ಗೆ ಎಲ್ಲಿಯೂ ಬಾಯಿತಪ್ಪಿಯೂ ಹೇಳುವ ಗೋಜಿಗೆ
ಹೋಗುವುದಿಲ್ಲ.

ಗಜೇಂದ್ರಗಢ ಪ್ರಸ್ತುತ ಕರ್ನಾಟಕದ ಗದಗ್ ಜಿಲ್ಲೆಯಲ್ಲಿದೆ. ಗಜೇಂದ್ರಗಢ ಕೋಟೆಯನ್ನ ಶಿವಾಜಿ ಮಹಾರಾಜರು ಆಳಿದ್ದರು ಎನ್ನುವ ಉಲ್ಲೇಖವೂ ನಮಗೆ
ಇತಿಹಾಸದಲ್ಲಿ ಕಾಣಸಿಗುತ್ತವೆ.

ಇಂತಹ ಐತಿಹಾಸಿಕ ಕೋಟೆ ಒಬ್ಬ ರಾಜನ ಕೈಲಿ ಆಡಳಿತಕ್ಕೊಳಪಡದೆ ತ್ರಿಪಕ್ಷೀಯ ಆಡಳಿತಕ್ಕೊಳಪಟ್ಟಿತ್ತು ಅನ್ನೋದೂ ಅಷ್ಟೇ ಸತ್ಯ.

ಮೊದಲು 10 ನೇ ಶತಮಾನದಲ್ಲಿ ಚೇರ, ಪಾಂಡ್ಯರು, ಚೋಳರ ಕೈಯಲ್ಲಿ ನಂತರ 18 ನೆ ಶತಮಾನದಲ್ಲಿ ನಿಜಾಮ, ಟಿಪ್ಪು ಮತ್ತು ಮರಾಠರಿಂದ ಈ ಕೋಟೆ
ಆಳಲ್ಪಟ್ಟಿತ್ತು. 1761 ರಲ್ಲಿ ಮೂರನೇ ಪಾಣಿಪಟ್ ಯುದ್ಧದಲ್ಲಿ ಮರಾಠರು ಬ್ರಿಟಿಷರ ವಿರುದ್ಧ ಸೋತ ನಂತರ ಗಜೇಂದ್ರಗಢ ಕೋಟೆ ಮರಾಠರಿಂದ ಕೆಲಕಾಲ ಕಡೆಗಣಿಸಲ್ಪಟ್ಟಿತ್ತು. ಕಾರಣ ಮರಾಠರು ಆರ್ಥಿಕವಾಗಿ ಕುಗ್ಗಿಹೋಗಿದ್ದರು. ಈ ಅವಧಿಯಲ್ಲಿ ಮೈಸೂರು ಸಂಸ್ಥಾನವನ್ನ ಅದಾಗಲೇ ಮೋಸದಿಂದ ಹೈದರ್ ಅಲಿ
ವಶಪಡಿಸಿಕೊಂಡಾಗಿತ್ತು. ಪಾಣಿಪಟ್ ಯುದ್ಧದ ನಂತರ ಅಂದರೆ 1764 – 1772 ರ ವೇಳೆಗೆ ಮುರ್ರಾರಾವ್ ಘೋರ್ಪಡೆ ನೇತೃತ್ವದಲ್ಲಿ ಮರಾಠ ಸೈನ್ಯವು ಹೈದರ್ ಆಲಿಯನ್ನ ಅದಾಗಲೇ ಹಲವು ಬಾರಿ ಮಣ್ಣುಮುಕ್ಕಿಸಿ ಹೈದರನ ಮೀಸೆ ಮಣ್ಣಾಗುವಂತೆ ಮಾಡಿದ್ದರು. ಇದರಿಂದ ಇಂಗು ತಿಂದ ಮಂಗನಾಗಿದ್ದ ಹೈದರಾಲಿ ಹೇಗಾದರೂ ಮಾಡಿ ಈ ಮರಾಠರನ್ನ ಸೋಲಿಸಿ ತನ್ನ ಸೇಡು ತೀರಿಸಿಕೊಳ್ಳೋಕೆ ಹವಣಿಸುತ್ತಿದ್ದ.

ಅದೇ ಸಮಯಕ್ಕೆ ಅಂದರೆ 1775 – 1782 ವೇಳೆಗೆ ಆಂಗ್ಲೋ-ಮರಾಠ ಯುದ್ಧ ನಡೆಯುತ್ತ ಮರಾಠರು ಬ್ರಿಟಿಷರ ವಿರುದ್ಧ ಸೆಣಸಾಡುತ್ತಿದ್ದ ವೇಳೆಯನ್ನು ನೋಡಿಕೊಂಡು ಹೈದರಾಲಿ 1776 ರಲ್ಲಿ ಮರಾಠರ ಆಡಳಿತದಲ್ಲಿದ್ದ ಗೂಟಿ ಯನ್ನ ವಶಪಡಿಸಿಕೊಂಡು ಮುರ್ರಾರಾವ್ ಘೋರ್ಪಡೆಯನ್ನ ಬಂಧಿಯಾಗಿ ಕರೆತರುತ್ತಾನೆ. ನಂತರ ಹೈದರಾಲಿಯ ಸೆರೆಮನೆಯಲ್ಲಿಯೇ ಕೈದಿಯಾಗಿ ಮುರ್ರಾರಾವ್ ಕೊನೆಯುಸಿರನ್ನು ಎಳೆಯುತ್ತಾನೆ. ಗೂಟಿಯನ್ನ ವಶಪಡಿಸಿಕೊಂಡ ನಂತರ ಹೈದರಾಲಿ ದತ್ತಾವಾಡ, ಗಜೇಂದ್ರಗಢವನ್ನ ವಶಪಡಿಸಿಕೊಂಡು ಅವುಗಳನ್ನ ಪ್ರತ್ಯೇಕ ಪ್ರಾಂತ್ಯಗಳನ್ನಾಗಿ ಘೋಷಿಸಿ ಅವುಗಳನ್ನ ಆಳುತ್ತಾನೆ.

ಬ್ರಿಟಿಷರ ಜೊತೆ ಯುದ್ಧ ಮುಗಿಸಿ ಆರ್ಥಿಕವಾಗಿ ಕುಸಿದಿದ್ದ ಮರಾಠರು ಹೈದರಾಲಿಯ ಮೇಲೆ ಸೇಡು ತೀರಿಸಿಕೊಳ್ಳಲು ಹಾತೊರೆಯುತ್ತಿದ್ದ ಸಂದರ್ಭವದು, ಆದರೆ ಅದಾಗಲೇ ಹೈದರಾಲಿ ನಿಧನವಾಗಿ ಟಿಪ್ಪು ಮೈಸೂರು ಸಂಸ್ಥಾನದ ರಾಜನಾಗಿರುತ್ತಾನೆ. ಬ್ರಿಟಿಷರ ಮೇಲಿನ ದ್ವೇಷ ಹಾಗು ಹೈದರಾಲಿಯ ಮೇಲಿನ ಕೋಪದಿಂದ ಹಸಿದ ಹೆಬ್ಬುಲಿಗಳಂತಾಗಿದ್ದ ಮರಾಠ ಸೈನ್ಯವು ಜನರಲ್ ನಾನಾ ಫಡ್ನವಿಸ್ ನೇತೃತ್ವದಲ್ಲಿ ಈಗ ಟಿಪ್ಪುವನ್ನ ಸೋಲಿಸುವ ಮೂಲಕ ತಮ್ಮ ಸೇಡನ್ನು ತೀರಿಸಿಕೊಳ್ಳೋಕೆ ಮುಂದಾಗುತ್ತಾರೆ.

ಯುದ್ಧದಲ್ಲಿ ಟುಕೋಜಿ ರಾವ್ ಹೋಳ್ಕರ್ ನ ಸೇನಾ ನೇತೃತ್ವದಲ್ಲಿ ಮರಾಠ ಸೈನ್ಯ ಟಿಪ್ಪು ಸೈನ್ಯಕ್ಕೆ ಎದುರಾಗುತ್ತೆ. ಟುಕೋಜಿರಾವನಿಗೆ ಹರಿಪಂತ ಫಡಕೆ ಹಾಗು ಮಾಲೋಜಿರಾವ್ ಘೋರ್ಪಡೆ ಸಾಥ್ ನೀಡಿರುತ್ತಾರೆ. ಇವರಷ್ಟೇ ಅಲ್ಲ ಟಿಪ್ಪುವಿನಿಂದ ಬೇಸತ್ತಿದ್ದ ಹೈದ್ರಾಬಾದಿನ ಆಗಿನ ನಿಜಾಮ ಆಸಫ್ ಜಾಹ್ ಕೂಡ ಟಿಪ್ಪುವಿನ ವಿರುದ್ಧದ ಯುದ್ಧಕ್ಕೆ ಮರಾಠರ ಕೈ ಜೋಡಿಸಿಬಿಟ್ಟಿದ್ದ.

ಯುದ್ಧ ಶುರುವಾಗಿತ್ತು, ಯುದ್ಧ ಶುರುವಾಗಿದೆ ಅನ್ನೋಷ್ಟೊತ್ತಿಗೆ ಯುದ್ಧ ಮುಗಿದಾಗಿತ್ತು ಟಿಪ್ಪು ಸೋಲನ್ನೊಪ್ಪಿಕೊಂಡಿದ್ದ, ಗಜೇಂದ್ರಗಢ ಕೋಟೆ ಮರಾಠರ ಮರು ವಶವಾಗಿತ್ತು. ಇದು ನಡೆದದ್ದು 1786 ರ ಜೂನ್ ತಿಂಗಳಿನಲ್ಲಿ.

ಟಿಪ್ಪುವಿನ ಕಾಲಾಳು ಸೇನೆ ಮರಾಠರ ಅಶ್ವದಳದೊಂದಿಗೆ ಸೆಣೆಸಲಾಗಲಿಲ್ಲ, ಮರಾಠರ ಇನ್ನೊಬ್ಬ ಜನರಲ್ ಆಗಿದ್ದ ಗಣೇಶ್ ವನ್ಯಾಕಾಜಿಯಂತೂ ಟಿಪ್ಪುವಿನ ಸೈನಿಕರನ್ನ ಮಣ್ಣುಮುಕ್ಕಿಸಿ ಒದ್ದೋಡಿಸಿದ್ದ.

ಮರಾಠ ಅಶ್ವಸೈನ್ಯವು ವೇಗವಾದ ಫಿರಂಗಿಗಳಿಂದ ಸಂಯೋಜಿಸಲ್ಪಟ್ಟಿತು. ಇದು ಟಿಪ್ಪುವಿಗೆ ಯುದ್ಧದಲ್ಲಿ ಇನ್ನಿಲ್ಲದ ಹೊಡೆತ ನೀಡಿದ್ದರ ಪರಿಣಾಮ ಟಿಪ್ಪು ಯುದ್ಧ ಸೋತು ಗಜೇಂದ್ರಗಡ ಕೋಟೆಯನ್ನು ಮರಾಠರಿಗೆ ವಾಪಸ್ ಮರಳಿಸಬೇಕಾಯಿತು.

ಯುದ್ಧ ಸೋತ ಟಿಪ್ಪು ಮರಾಠರಿಗೆ ಶರಣಾಗನಾದ, ಶರಣಾಗತನಾದ ಟಿಪ್ಪುಗೆ ಮರಾಠರು 48 ಲಕ್ಷ ದಂಡ ಕೂಡ ವಿಧಿಸಲಾಯಿತು ಮತ್ತು 12 ಲಕ್ಷ ರೂಪಾಯಿಗಳ ವಾರ್ಷಿಕ ಗೌರವವನ್ನು ಪಾವತಿಸಲು ಮರಾಠರು ಕೇಳಿದರು. ಇದರ ಜೊತೆಗೆ ಹೈದರಾಲಿ ಮರಾಠರಿಗೆ ನೀಡಬೇಕಾದ 4 ಗೌರವಧನದ ಬಾಕಿಗಳನ್ನೂ ಪಾವತಿಸಲು ಹೇಳಿದರು.

ಮರಾಠರೆದುರು ಸೋತು ಸುಣ್ಣವಾಗಿದ್ದ ಟಿಪ್ಪು ಮರಾಠರು ಹೇಳಿದ ಎಲ್ಲ ಷರತ್ತುಗಳಿಗೂ ಒಪ್ಪಿ 48 ಲಕ್ಷ ರೂಪಾಯಿ ದಂಡವನ್ನ ಕೊಟ್ಟು ಅಕ್ಷರಷಃ ಇಲಿಯಾಗಿ ಸೋ ಕಾಲ್ಡ್ ಮೈಸೂರು ಹುಲಿ ತನ್ನ ಮೈಸೂರಿನ ಬಿಲವನ್ನ ಸೇರಿಕೊಂಡಿತ್ತು.

ಈ ರೀತಿಯಲ್ಲಿ ಗಜೇಂದ್ರಗಢ ಯುದ್ಧವನ್ನ ಟಿಪ್ಪು ಹೀನಾಯವಾಗಿ ಸೋತಿದ್ದ. ಸೋತಿದ್ದಷ್ಟೇ ಅಲ್ಲದೆ ಆಗಿನ ಕಾಲದಲ್ಲೇ 48 ಲಕ್ಷ ದಂಡವನ್ನೂ ಮರಾಠರಿಗೆ ನೀಡಿ ಬಂದಿದ್ದ ಕೂಡ.

ಇಂತಹ ಪುಕ್ಕಲು ರಾಜ ಟಿಪ್ಪು ಇಂದು ಮೈಸೂರು ಹುಲಿಯಾಗಿ ನಮ್ಮ ಪಠ್ಯ ಪುಸ್ತಕಗಳಲ್ಲಿ ರಾರಾಜಿಸುತ್ತಿರೋದು ಹಾಗು ಆತನ ಜಯಂತಿಯನ್ನ ಖುದ್ದು ರಾಜ್ಯ ಸರ್ಕಾರವೇ ತಮ್ಮ ಮುಸ್ಲಿಂ ವೋಟ್ ಬ್ಯಾಂಕ್ ಗಾಗಿ ಆಚರಿಸುತ್ತಿರೋದು ನೋಡಿದರೆ ನಾಚಿಕೆಯಾಗುತ್ತದೆ.

– Vinod Hindu Nationalist

Tags

Related Articles

Close