ಪ್ರಚಲಿತ

ಮಾನ್ಯ ಮುಖ್ಯಮಂತ್ರಿಗಳೇ ಕೊಲೆಗಟುಕ ಸಚಿವರ ರಾಜೀನಾಮೆ ಯಾವಾಗ?

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕೊಲೆಗಟುಕ ಸಚಿವರ ರಾಜೀನಾಮೆಯನ್ನು ಯಾವಾಗ ಪಡೆದುಕೊಳ್ಳುತ್ತೀರಿ? ಅಥವಾ ಈ ಸಚಿವರು ಇನ್ಯಾರನ್ನಾದರೂ ಕೊಲೆ ಮಾಡಲು ಸ್ಕೆಚ್ ಹಾಕಿದ್ದಾರಾ? ಇಂಥಾ ಸಚಿವರ ರೌಡಿಸಂನಿಂದಾಗಿ ಕರ್ನಾಕಟದ ಪ್ರಜೆಗಳ ಜೀವಕ್ಕೆ ಅಪಾಯವಿಲ್ಲ ಎಂದು ಹೇಳಲು ಏನು ಗ್ಯಾರಂಟಿ ಇದೆ? ಸರಕಾರದ ವಿರುದ್ಧ ಮಾತಾಡುವವರನ್ನು ಹೇಳಹೆಸರಿಲ್ಲದಂತೆ ಮುಗಿಸಿಬಿಡುವ ನಿಮ್ಮ ಸಚಿವರ ಗೂಂಡಾಗಿರಿಗೆ ಕೊನೆ ಎಂದು? ಇನ್ನೆಷ್ಟು ಮಂದಿಯನ್ನು ಮುಗಿಸಲು ಮಹೂರ್ತ ಫಿಕ್ಸ್ ಮಾಡಿದ್ದೀರಿ?

ಬಿಜೆಪಿ ಮುಖಂಡನನ್ನು ಮುಗಿಸಿದ ವಿನಯ ಕುಲಕರ್ಣಿ, ಡಿವೈಎಸ್‍ಪಿ ಗಣಪತಿಯನ್ನು ಮಟಾಶ್ ಮಾಡಿದ ಕೆ.ಜೆ. ಜಾರ್ಜ್ ಪಕ್ಕಾ ಕಂಟ್ರಿರೌಡಿಗಳಂತೆ ಮುಗಿಸಿದ ಈ ಇಬ್ಬರು ಹಂತಕ ಸಚಿವರಿಂದ ಯಾವಾಗ ರಾಜೀನಾಮೆ ಪಡೆಯುತ್ತೀರಿ ಸ್ವಾಮಿ? ಸಚಿವ ವಿನಯ ಕುಲಕರ್ಣಿ ಮೇಲೆ ಯೋಗೀಶ್ ಗೌಡನ ಕೊಲೆಯಲ್ಲಿ ಕೈವಾಡ ಇದೆ ಎಂದು ಆರೋಪ ಕೇಳಿಬಂದಿದೆ. ಅದೇ ರೀತಿ ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ. ಜಾರ್ಜ್ ಅವರ ಹೆಸರಿದೆ ಎಂದು ಸಿಬಿಐ ತನಿಖೆಗೆ ಮುಂದಾಗಿದೆ. ಸಿದ್ದರಾಮಯ್ಯನವರೇ ಇವರನ್ನು ಸಚಿವಗಿರಿಯಿಂದ ಕಿತ್ತುಬಿಟ್ಟು ಜೈಲಿಗೆ ಅಟ್ಟುವುದನ್ನು ಬಿಟ್ಟು ತನಿಖಾ ವರದಿ ಬರುವ ಮುಂಚೆಯೇ ಅವರಿಬ್ಬರೂ ಸೊಬಗರು ಎಂದು ಹೇಳುತ್ತೀರಲ್ವಾ? ನಾಚಿಕೆಯಾಗೋದಿಲ್ವೇ ಸ್ವಾಮಿ?

ಇಷ್ಟಾದರೂ ನೀವು ಕೊಲೆಗಟುಕರನ್ನು ನೀವು ಸಮರ್ಥನೆ ಮಾಡ್ತೀರಲ್ವಾ ಸ್ವಾಮೀ? ಕ್ರಿಮಿನಲ್‍ಗಳು, ಲೋಕಲ್ ರೌಡಿಗಳು, ಗೂಂಡಾಗಳು ಮುಂತಾದವರೆಲ್ಲಾ ನಿಮ್ಮ ಸರಕಾರದಲ್ಲಿ ಸಚಿವರಾಗಿದ್ದಾರೆ. ತನ್ನ ರೌಡಿಸಂ ಅನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು ಒಬ್ಬೊಬ್ಬರನ್ನೇ ಮುಗಿಸಿ ಹಾಕಲಾಕುತ್ತಿದೆ. ಇನ್ನು ಪ್ರಜೆಗಳ ಜೀವಕ್ಕೆ ಏನು ಗ್ಯಾರಂಟಿ ಇದೆ ಸ್ವಾಮಿ?

ಪ್ರತ್ಯೇಕ ಧರ್ಮಕ್ಕಾಗಿ ಹೋರಾಡೋ ಈ ವಿನಯ ಕುಲಕರ್ಣಿ ಇಂದು ತನ್ನ ಕೈಗಳಲ್ಲಿ ರಕ್ತ ಮೆತ್ತಿಸಿಕೊಂಡಿದ್ದಾನೆ. ಈಗ ಯೋಗೀಶ್ ಗೌಡರ ಕೊಲೆಯಲ್ಲಿ ತನ್ನ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಪಕ್ಕಾ ಲೋಕಲ್ ರೌಡಿಯಂತೆ ಲೋಕಲ್ ಭಾಷೆಯಲ್ಲಿ ಅವಾಜ್ ಹಾಕುತ್ತಾ ತಾನೊಬ್ಬ ಭಲೇರೌಡಿ ಎನ್ನುವುದನ್ನು ತೋರಿಸಿಕೊಟ್ಟಿದ್ದಾನೆ. ಅದು ಕೂಡಾ ಮೀಡಿಯಾದ ಮುಂದೆಯೇ ನಿಂತುಕೊಂಡು ಅವಾಜ್ ಹಾಕುತ್ತಾ ತಾನೊಬ್ಬ ನಟೋರಿಯಸ್ ರೌಡಿಯಂತೆ ಪೋಸ್ ಕೊಡುತ್ತಿದ್ದಾನೆ ಅಂದರೆ ಸರಕಾರ ಯಾವ ನೀಚ ಮಟ್ಟಕ್ಕೆ ಇಳಿದಿದೆ ಎಂದು ಅರ್ಥಮಾಡಬಹುದಲ್ವೇ? ಇಂಥವರನ್ನೆಲ್ಲಾ ಸಚಿವರನ್ನಾಗಿಸುವ ಮೂಲಕ ಸಿಎಂ ಸಿದ್ದು ಅವರು ರೌಡಿಗಳಿಗೆ ಮಣೆ ಹಾಕಿದ್ದಾರೆ.

ಈ ವಿನಯ ಕುಲಕರ್ಣಿ ಸ್ವತಃ ಮೀಡಿಯಾದ ಮುಂದೆ ನಿಂತು ರೌದ್ರಾವತಾರ ತೋರಿಕೊಂಡು ತಾನು ಯಾವುದಕ್ಕೂ ಡೋಂಟ್‍ಕ್ಯಾರ್ ಎನ್ನುತ್ತಿದ್ದಾನೆ.

ಸುದ್ದಿವಾಹಿನಿಯ ವರದಿಗಾರ ಕೊಲೆ ಆರೋಪದ ಬಗ್ಗೆ ಪ್ರಶ್ನಿಸಿದಾಗ ತಾನು ಹೇಳಿದ್ದನ್ನೆಲ್ಲಾ ಕಟ್ ಮಾಡದೆ ತೋರಿಸಿ ಎಂದು ಅವಾಜ್ ಹಾಕಿದ್ದಾನೆ. ಅದರಂತೆ ವಾಹಿನಿಯವರು ಈತನ ಅವಾಜನ್ನು ಕಟ್ ಮಾಡದೆ ತೋರಿಸಿರುವುದರಿಂದ ವಿನಯ ಕುಲಕರ್ಣಿಯ ಅಸಲಿಯತ್ ಬಯಲಾಗಿದೆ. ಯೋಗೀಶ್ ಗೌಡರ ಕೊಲೆಯಾಗುವ ಮುಂಚೆ ವಿನಯ್ ಕುಲಕರ್ಣಿಯ ಬಗ್ಗೆ ಎಚ್ಚರವಹಿಸುವಂತೆ ಪತ್ರ ಬಂದಿದ್ದರೂ, ಯೋಗೀಶ್ ಗೌಡರ ಪರ ವಕೀಲರಿಗೆ ಬೆದರಿಕೆಯೊಡ್ಡಿರುವುದು ಬೆಳಕಿಗೆ ಬಂದಿದ್ದರೂ ಇದರಲ್ಲಿ ತನ್ನ ಕೈವಾಡ ಇಲ್ಲ ಎಂದು ಪಕ್ಕಾ ಲೋಕಲ್ ಗೂಂಡಾನಂತೆ ಏರುಸ್ವರದಲ್ಲಿ ಮಾತಾಡಿದ್ದಾನೆ.

ಅಲ್ಲಾ ಸ್ವಾಮೀ ಸಿದ್ದರಾಮಯ್ಯನವರೇ ಕಾನೂನಿಗಿಂತಲೂ ಈ ಸಚಿವರು ದೊಡ್ಡವರೇ? ಇವರ ಮೇಲೆ ಆರೋಪ ಇದ್ದರೂ ಮಾತಾಡಬಾರದೆಂದು ಕಟ್ಟಪ್ಪಣೆ ವಿಧಿಸುವ ನೀವು ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ? ಕೊಲೆ ಆರೋಪವೇ ಬಂದಿದ್ದರೂ ಆ ಇಬ್ಬರು ಸಚಿವರನ್ನು ಸಂಪುಟದಿಂದ ಕಿತ್ತುಹಾಕುವುದನ್ನು ಬಿಟ್ಟು ಅದ್ಯಾಕೆ ಅವರ ಪರವಾಗಿ ವಕಾಲತ್ತು ನಡೆಸುತ್ತಿದ್ದೀರಿ? ರಾಜ್ಯದಲ್ಲಿ ಅಡ್ಜಸ್ಟ್‍ಮೆಂಟ್ ರಾಜಕಾರಣ ನಡಿತಿದಿಯಾ? ಆರೋಪ ಬಂದಾಗ ಜನರ ಬಾಯಿಯನ್ನೇ ಮುಚ್ಚಿಸುವ ಮಟ್ಟಕ್ಕೆ ಹೋದಿರಾ ಸ್ವಾಮೀ? ಒಬ್ಬರು ಕೊಲೆ ಮಾಡಿದ್ರೆ ಅವರನ್ನು ಸಮರ್ಥಿಸುವುದು, ಅವರ ಮೇಲಿನ ಆರೋಪವನ್ನು ಸುಳ್ಳೆಂದು ವಾದಿಸುವುದು… ಛೇ ಛೇ.. ತನಿಖಾ ವರದಿ ಬರುವ ಮುಂಚೆಯೇ ಆರೋಪಿ ಸಚಿವರ ಪರವಾಗಿ ಬ್ಯಾಟಿಂಗ್ ಮಾಡುವ ಸಿಎಂ ಸಿದ್ದು ಅವರು ಕಾನೂನಿಗೆ ಕೊಡುವ ಮರ್ಯಾದೆ ಇದೇನಾ?

ಕೆ.ಜೆ. ಜಾರ್ಜ್ ಹಾಗೂ ವಿನಯ ಕುಲಕರ್ಣಿ ಮೇಲೆ ಬಂದಿರುವ ಆರೋಪಗಳು ಸಾಮಾನ್ಯವಾದುದಲ್ಲ.. ಕೊಲೆ ಆರೋಪ ಎಂದ್ರೆ ಸುಮ್ನೆನಾ? ಸಚಿವರಾಗಿದ್ದುಕೊಂಡು ಜನಸಾಮಾನ್ಯರ, ಅಧಿಕಾರಿಗಳ ರಕ್ಷಣೆ ಮಾಡಬೇಕಾದ ಸಚಿವರೇ ಕೊಲೆಕೃತ್ಯದಲ್ಲಿ ತೊಡಗಿದರೆ ಇನ್ನು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಾಧ್ಯವೇ? ತನಗೆ ಅಧಿಕಾರವಿದೆ, ಜನಬಲ ಇದೆ ಎಂದು ತನ್ನ ಹಾದಿಗೆ ಮುಳ್ಳಾಗುವವರನ್ನು ಮುಗಿಸಿಬಿಡುವ ಈ ಹಂತಕ ಸಚಿವರನ್ನು ಕೈಬಿಟ್ಟು ಪಕ್ಷದಿಂದಲೇ ಗೇಟ್‍ಪಾಸ್ ಕೊಡಬೇಕಿತ್ತು. ಆದರೆ ಅದೇನು ಮಾಡಿದ್ರೂ ಜಪ್ಪಯ್ಯ ಅನ್ನದ ಸಿಎಂ ಸಿದ್ದು ತನ್ನ ಕುಂಭಕರ್ಣ ನಿದ್ರೆಯಲ್ಲೇ ಮುಳುಗಿದ್ದಾರೆ.

ಇನ್ನು ಈ ಸಿಎಂ ಸಿದ್ದರಾಮಯ್ಯನೂ ಸಾಚಾ ಅಲ್ಲ. ಯಾಕೆಂದ್ರೆ ನಿಗೂಢವಾಗಿ ಕೊಲೆಯಾದ ದಕ್ಷ ಅಧಿಕಾರಿ ಡಿ.ಕೆ ರವಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಾಗ ಶವಾಗಾರದ ಹಿಂಬಾಗಿಲಿನಿಂದ ಪ್ರವೇಶಿಸಿ ಏನೋ ಮಸಲತ್ತು ಮಾಡಿದ್ದಾರೆ ಎಂದು ಅವರ ತಾಯಿ ಗೌರಮ್ಮ ಅವರೇ ಗಂಭೀರ ಆರೋಪ ಮಾಡುತ್ತಾರೆ. ತನ್ನ ಬಂಡವಾಳ ಬಯಲಾಗಬಾರದೆಂದು ತನ್ನ ಸಚಿವರನ್ನೂ ರಕ್ಷಿಸಿ ಅಮಿಕ್ಕೇಬಲ್ ಪೊಲಿಟಿಕ್ಸ್ ಮಾಡುವ ಮೂಲಕ ಸಿದ್ದು ತಾನೂ ಕೂಡಾ ಕೊಲೆಗಟುಕರ ಪರ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಇಂಥವರು ರಾಜೀನಾಮೆ ಪಡೆಯಲು ಸಾಧ್ಯವೇ?

ಇಂಥಾ ಕೊಲೆಗಟುಕ ಸರಕಾರದ ಅವಧಿ ಇನ್ನೋ ಕೊಂಚ ತಿಂಗಳುಗಳ ಕಾಲ ಇದೆ. ಇಷ್ಟು ಮಂದಿಯನ್ನು ಭುಂಜಿಸಿದ ಈ ಸರಕಾರ ಇನ್ನೆಷ್ಟು ಮಂದಿಯ ಕೊಲೆಗೆ ಮಹೂರ್ತ ಫಿಕ್ಸ್ ಮಾಡಿದ್ದಾರೋ ಯಾರಿಗೆ ಗೊತ್ತು? ಆದರೆ ಅನ್ಯಾಯವಾಗಿ ಯಾರ ಜೀವವೂ ಹೋಗದಿದ್ದರೆ ಸಾಕು. ಪಾಪಿಗಳ ಪಾಪದ ಕೊಡ ತುಳುಕುತ್ತ ಬಂದಿದ್ದು, ಒಂದಲ್ಲಾ ಒಂದು ದಿನ ಖಂಡಿತಾ ಪಾಪಿಗಳು ಜೈಲು ಸೇರಿ ಮುದ್ದೆ ಮುರಿಯುವ ಕಾಲ ಬಂದೇ ಬರಬಹುದು. ಅದಕ್ಕಿಂತ ಮುಂಚೆ ಈ ಸರಕಾರದಿಂದ ಬೇಸತ್ತ ರಾಜ್ಯದ ಪ್ರಜೆಗಳು ಈ ಸರಕಾರವನ್ನು ಸಂಪೂರ್ಣವಾಗಿ ಮನೆಗೆ ಕಳಿಸುವ ಕೆಲಸವನ್ನು ಮಾಡಲಿದ್ದಾರೆ. ಅಲ್ಲಿಯವರೆಗೆ ಹಾರಾಟ ನಡೆಸುತ್ತಾ ಇರಿ… ಕೊನೆಗೆ ರೆಕ್ಕೆ ಮುರಿಯುವ ಕಾಲ ಬಂದೇ ಬರುತ್ತದೆ ಎಚ್ಚರ…

source:http://kannada.asianetnews.com/news/minister-vinay-kulkarni-open-challenge-to-suvarna-news

ಚೇಕಿತಾನ

Tags

Related Articles

Close