ಪ್ರಚಲಿತ

ಮೂರು ತಿಂಗಳ ಹಿಂದೆ ಕೇರಳದ ಕಾಡಿನಲ್ಲಿ ನಕ್ಸಲರಿಗೆ ಕೊಟ್ಟ ಮಾತು ತಪ್ಪಿಬಿಟ್ಟಳೇ ಗೌರಿ?!! ತಿಂದಳಾ ನಕ್ಸಲರ ಹಣ?!

ಈ ಗೌರೀ ಲಂಕೇಶಳ ಸಾವಿನ ಸತ್ಯವೊಂದು ಪ್ರತಿರೋಧ ಸಮಾವೇಶದಲ್ಲಿಯೇ ನೆಗೆದು ಬಿದ್ದಿದ್ದು ನಿಜವಾದರೂ, ತಿರುಪೆ ಎತ್ತಿದವರೆಲ್ಲ ಬಂದ ದಾರಿಗೆ ಇಷ್ಟಾದರೂ ಸಿಗ್ತಲ್ಲ ಎಂದು ಚಿಲ್ಲರೆಗಳನ್ನು ಬರಗಿದ್ದು ಮೊನ್ನೆ ಮೊನ್ನೆಯಷ್ಟೇ ಸುದ್ದಿಯಾಗಿತ್ತು!!!

ಆದರೆ, ಆಕೆಯ ನಕ್ಸಲ್ ಸಮಾಜಸೇವೆ ಹಳ್ಳ ಹಿಡಿದಿದ್ದರ ಬಗ್ಗೆ ದಿನೇ ದಿನೇ ಸಾಕ್ಷಿ ಸಿಗುತ್ತಿರುವಾಗ ನಕ್ಸಲರೇ ಪೋಲಿಸರಿಗೆ ಶರಣು ಬಂದು ಹಿಡಿ ಶಾಪ ಹಾಕುತ್ತಿದ್ದಾರೆ!! ಹಾ! ಗೌರೀ ಲಂಕೇಶಳ ಈ ನಕ್ಸಲ್ ಸಮಾಜಸೇವೆ ಸ್ವತಃ ನಕ್ಸಲರಿಗೇ ಕಷ್ಟವಾಗಿತ್ತೆಂದರೆ ಹಾಸ್ಯಾಸ್ಪದವಲ್ಲದೇ ಮತ್ತೇನು?!

ಗೌರೀ ಲಂಕೇಶಳ ಸೀಕ್ರೆಟ್ ಮೀಟ್!!

ಹಾ! ಒಂದು ಕಡೆ ಪತ್ರಕರ್ತೆ!ಇನ್ನೊಂದು ಕಡೆ ಸಮಾಜಸೇವಕಿ ಎಂದು ಬಿಂಬಿಸಿಕೊಂಡಿದ್ದ ಗೌರಿ ಲಂಕೇಶ್ ಹತ್ಯೆಯಾಗುವ ಸ್ವಲ್ಪ ದಿನಗಳ ಮುನ್ನ ಕೇರಳದಲ್ಲಿ ನಕ್ಸಲರನ್ನು ಭೇಟಿಯಾಗಿದ್ದಳೆಂಬ ಸುದ್ದಿ ಹೊರಬರುತ್ತಿದ್ದಂತೆಯೇ, ಅದನ್ನೂ ಸುಳ್ಳೆಂದು ವಾದಿಸಿದ್ದ ಉಗ್ರ ಹಿತೈಷಿಗಳು ವಿಶೇಷ ತನಿಖಾ ದಳವನ್ನೂ ದೂಷಿಸಿದ್ದಾರಲ್ಲ, ಸತ್ಯ ಒಪ್ಪಿದರೆಲ್ಲಿ ಗಂಜಿ ತಪ್ಪೀತೋ ಎಂಬ ಭಯವೇ?!

ಬಿ.ಜಿ.ಕೃಷ್ಣಮೂರ್ತಿ, ಹೊಸಗದ್ದೆ ಪ್ರಭಾ ಹಾಗೂ ಮುಂಡಾಗೀರು ಲತಾ ಎಂಬ ಮೂವರನ್ನು ಗೌರಿ ಲಂಕೇಶ್ ಮುಖ್ಯವಾಹಿನಿಗೆ ತರಲು ಸಾಕಷ್ಟು ಪ್ರಯತ್ನ ಮಾಡಿದ್ದರೂ ಫಲಿಸದೇ ಹೋಗಿದ್ದು, ಇವರ ಟಾಬ್ಲೋಯ್ಡ್ ಪತ್ರಿಕೆಗೇ ಸಾಕಾಗದ ಹಣವನ್ನು ನಕ್ಸಲರಿಗೆ ಕೊಡುತ್ತೇನೆಂದು ಒಪ್ಪಿಕೊಂಡಿದ್ದು, ಕರ್ನಾಟಕದ ಸರಕಾರದಿಂದ ನಕ್ಸಲಿಸಂ ನನ್ನು ತೊರೆಯುವುದಕ್ಕೆ ನೀಡುವ ಆಮಿಷಗಳು, ತಲೆ ಬುಡವಿಲ್ಲದ ಎಡಥೀಯ ವಿಚಾರಗಳು, ಸಿದ್ಧಾಂತಗಳು,. ಇವೆಲ್ಲವೂ ಗೌರೀ ಲಂಕೇಶ್ ರನ್ನು ಸಾವಿನ ಬಾಗಿಲಿಗೆ ತಂದು ನಿಲ್ಲಿಸಿದ್ದು ಸುಳ್ಳಲ್ಲ.

ಸರಕಾರದ ಹಣವೂ ನಕ್ಸಲರ ಕೈ ಸೇರಿರಲಿಲ್ಲ!!

ಒಂದಷ್ಟನ್ನು ಅವಲೋಕಿಸಿದಾಗ ನಿಜಕ್ಕೂ ತಪ್ಪೆನ್ನಿಸುತ್ತದೆ! ಕೇಳಬೇಕಿರುವುದನ್ನೆಲ್ಲ, ಪದೇ ಪದೇ ಕೇಳಿಯಾಗಿದೆ! ಹೇಳಿಯಾಗಿದೆ! ಆದರೆ, ಈ ನಕ್ಸಲ್ ಬೆಂಬಲಿತ ಸರಕಾರವಾಗಲಿ, ಸಮಾಜ ಸೇವಕರಾಗಲಿ ಭಾರತೀಯ ಸಮಾಜದ ಹಿತ ಬಯಸಿ ಮಾಡುವ ಕೆಲಸವೇ?!

ಒಂದು ಸಲ ಹಾಳಾಗಿ ಹೋಗುತ್ತೇವೆಂದು ತೀರ್ಮಾನ ಮಾಡಿದವರಿಗೆ ಅದೆಷ್ಟು ಸಲ ಬುದ್ಧಿ ಹೇಳಬಲ್ಲಿರಿ?! ದುಡ್ಡಿನ ಆಮಿಷ ತೋರಿಸಿ ಒಬ್ಬರ ಸಿದ್ಧಾಂತವನ್ನು ಅದರಲ್ಲೂ ನಕ್ಸಲರ ಈ ಬಂಡಾಯವೆದ್ದು ಸಮಾಜದಲ್ಲಿ ಭೀತಿ ಸೃಷ್ಟಿಸುವ ತತ್ವಗಳನ್ನು ಹೇಗೆ ಬದಲಾಯಿಸಬಲ್ಲಿರಿ?! ಬದಲಾಯಿಸಲು ಸಾಧ್ಯವಿಲ್ಲವೆಂಬುದಕ್ಕೆ ತೀರಾ ಇತ್ತೀಚೆಗರ ಜೂನ್ ನಲ್ಲಿ ಶರಣಾದ ಜ್ಞಾನದೇವ ಅಲಿಯಾಸ್ ಶಿವ ಹಾಗೂ ಕನ್ಯಾಕುಮಾರಿ ಅಲಿಯಾಸ್ ಸುವರ್ಣಾ ಉದಾಹರಣೆಗಳೇ!

ಪ್ರತೀ ಬಾರಿಯೂ ನಮಗೆ ಸಿಗಬೇಕಾಗಿದ್ದ ಹಣ ಸಿಗುತ್ತಲಿರಲಿಲ್ಲ. ನಮ್ಮನ್ನು ನಡೆಸಿಕೊಳ್ಳುವ ರೀತಿಯೂ ಸರಿಯಿರಲಿಲ್ಲ. ಯಾವುದೇ ಸೌಲಭ್ಯಗಳಿಲ್ಲದೇ ಬದುಕುವ ನಮಗೆ ಸಮಾಜಮುಖಿ ಎಂದೆಲ್ಲ ನಮ್ಮೊಳಗೆ ಬಿರುಕು ಮೂಡಿಸಿ, ನಮ್ಮ ಆರ್ಥಿಕ ದೌರ್ಬಲ್ಯವನ್ನೇ ಬಳಸಿಕೊಂಡ ಗೌರೀ ಲಂಕೇಶ್ ಳ ಬಗೆಗೆ ನಮಗೆ ಕೋಪವಿದ್ದದ್ದು ಸತ್ಯ. ಕೊಟ್ಟ ಮಾತು ತಪ್ಪಿ ನಮ್ಮನ್ನು ದುರುಪಯೋಗಿಸಿಕೊಂಡು ಮೋಸ ಮಾಡಿದ ಗೌರೀ ಲಂಕೇಶಳನ್ನು ಆ ದೇವರೇ ನೋಡಿಕೊಳ್ಳುತ್ತಾನೆ ಸಾಹೇಬರೇ.” ಇದು ನಕ್ಸಲ್ ಶರಣಾರ್ಥಿ ಸುವರ್ಣಾಳ ಹೇಳಿಕೆಗಳು!!!!⁠⁠⁠⁠

ಹಾ! ಸಮಾಜಮುಖಿ ಎಂಬ ಅರ್ಥವೇ ಗೊತ್ತಿಲ್ಲದ, ದೇಶಕ್ಕೆ ಮಾರಕವಾದ ಇದೇ ನಕ್ಸಲರನ್ನು ಗೌರಿ ಸಂದರ್ಶಿಸಿದ‌್ದಳು! ಮಾತನಾಡಿದ್ದಳು! ಸಮಾಜಮುಖಿ(?) ಕೆಲಸಕ್ಕೆ ಪ್ರೇರೇಪಿಸಿದ್ದಳು! ನಕ್ಸಲರ ಸಹವಾಸ ಬಿಟ್ಟಿದ್ದರು ಎಂದೆಲ್ಲ ಬೆನ್ನು ತಟ್ಟಿಕೊಂಡ ಎಡಪಂಥೀಯರಿಗಿರಬಹುದು, ಅಥವಾ ಸರಕಾರಕ್ಕಿರಬಹುದು, ನಾನು ಕೇಳುವುದು ಒಂದೇ ಪ್ರಶ್ನೆ!

“ಬಂಡಾಯವೇಳುವುದನ್ನೇ ಬದುಕಾಗಿಸಿಕೊಂಡವರಿಗೆ, ಅಶಾಂತಿ ಸೃಷ್ಟಿಸುವುದನ್ನೇ ಸಿದ್ಧಾಂತವೆಂದುಕೊಂಡವರಿಗೆ, ಸಮಾಜಮುಖಿಯಾಗುವುದನ್ನೇ ಅಪರಾಧ ಎಂದುಕೊಂಡವರಿಗೆ, ಬಿಡಿ! ಯಾವುದೂ ಬೇಡ! ತೀರಾ ಎನ್ನುವಷ್ಟು ದೇಶದ್ರೋಹಿ ತತ್ವಗಳನ್ನೇ ಹಿಡಿದು ಜೈಕಾರ ಹಾಕಿ ದರೋಡೆ, ಸುಲಿಗೆ, ಭಯೋತ್ಪಾದನೆಯ ಮೂಲಕ್ಕೂ ಕೈ ಹಾಕುವವರನ್ನು ಯಾವ ಆಧಾರದ ಮೇಲೆ ಸಮಾಜಮುಖಿಯಾಗಿಸಬೇಕೆಂದು ಪಣ ತೊಟ್ಟಿರಿ?!’

ಆಕೆ ಪತ್ರಕರ್ತೆ ಸರಿ! ಅವಳಿಗೆ ಯಾರನ್ನು ಯಾವ ಸಮಯದಲ್ಲಿಯಾದರೂ ಎಲ್ಲಿ ಬೇಕಾದರೂ ಭೇಟಿ ಮಾಡುವಂತಹ ಹಕ್ಕಿದೆ ಎಂದೇ ತಿಳಿದುಕೊಂಡರೂ ಎಲ್ಲಾ ಹಕ್ಕುಗಳಿಗೂ ಅದರದೇ ಆದ ಮಿತಿಯಿರುತ್ತದೆ ಎಂಬುದು ಅರಿವಿರದೇ ಆಮಿಷಕ್ಕೊಳಪಡಿಸಿ ನಕ್ಸಲರನ್ನು ಬದಲಿಸುತ್ತೇನೆ ಎಂದು ಹೊರಟ ಗೌರಿ ಲಂಕೇಶ್ ರ ತೀವ್ರತರವಾದ ನಯವಂಚಕತೆ ನಕ್ಸಲರನ್ನು ದಿಕ್ಕುಗೆಡಿಸಿತ್ತಷ್ಟೇ!!!

ಕರ್ನಾಟಕ ಸರಕಾರದ ಹುಚ್ಚು ಯೋಜನೆ ಹೆಚ್ಚಾಗಿತ್ತು!

ಈ Karnataka Left Wing Extremism Surrender and Rehabilitation Project ಎಂಬ ತಿಕ್ಕಲು ಯೋಜನೆಯಡಿಯಲ್ಲಿ ಗೌರಿ ಲಂಕೇಶ್, ಎ.ಕೆ.ಸುಬ್ಬಯ್ಯ ಹಾಗೂ ದೊರೆಸ್ವಾಮಿಯನ್ನು ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವಂತೆ ಸೂಚಿಸಲಾಗಿತ್ತು. ಈ ಯೋಜನೆ ಗೌರಿಗಾಗಿಯೇ ಹೇಳಿ ಮಾಡಿಸಿದ್ದಂತಹ ಯೋಜನೆಯಾಗಿತ್ತು ಎಂದು ಹೇಳಿದರೆ ಸರಿಯಾದೀತೇನೋ! ಕನಿಷ್ಟ ಏಳು ನಕ್ಸಲರನ್ನು ಆಕೆ ಸಮಾಜಮುಖಿಯನ್ನಾಗಿಸಿದ್ದಳು!

ಗೌರೀ ಲಂಕೇಶಳ ಈ ಸಿದ್ಧಾಂತವಾಗಿರಲಿ, ಅಥವಾ ನಕ್ಸಲರ ಮೇಲಿನ ಕಾಳಜಿಯಾಗಿರಬಹುದು, ಅವೆಲ್ಲವೂ ನಕ್ಸಲರಲ್ಲಿಯೇ ಒಡಕು ಮೂಡಿಸಿದ್ದಲ್ಲದೇ, ಗೌರಿಯ
ನಿಲುವುಗಳ ಜೊತೆ ಸಾಕಷ್ಟು ಭಿನ್ನಾಭಿಪ್ರಾಯ ಹೊಂದಿದ್ದ ಯಾವುದೇ ನಕ್ಸಲರಿಗೂ ಕೂಡ ಹಿಡಿಸಿರಲಿಲ್ಲ. ಅದಲ್ಲದೇ, ಸರಕಾರದಿಂದ ನಕ್ಸಲರಿಗೆ ಹಣ
ಸಂದಾಯವಾಗುವ ವಿಷಯದಲ್ಲಿ ಎಡವಟ್ಟಾಗಿದ್ದಕ್ಕೆ ಗೌರಿ ಧೈರ್ಯ ಮಾಡಿ ಕೇರಳದ ಕಾಡಿನಲ್ಲಿ ಇದೇ ಮೂರು ತಿಂಗಳ ಹಿಂದೆ ನಕ್ಸಲ್ ಮುಖಂಡರನ್ನು
ಭೇಟಿಯಾಗಿದ್ದಳು. ಸರಕಾರ ನೀಡಿದ್ದ ಸವಲತ್ತುಗಳು ನಕ್ಸಲರ ಘನತೆಗೆ ತಕ್ಕುದಾದುದಲ್ಲ ಎಂಬ ನಕ್ಸಲರ ಕ್ಯಾತೆಗೆ ಗೌರಿ ಸಮಾಧಾನಗೊಳಿಸಲು ಯತ್ನಿಸಿದ್ದಳು
ಎಂಬುದನ್ನು ಸ್ವತಃ ಗೌರಿಯ ಆಪ್ತರು ಹಾಗೂ ನಕ್ಸಲ ಮುಖಂಡರೇ ಒಪ್ಪಿಕೊಂಡು ಬಿಟ್ಟಿದ್ದರು!

ಇಷ್ಟೇ ಆಗಿದ್ದರೆ ಗೌರಿ ಉಳಿಯುತ್ತಿದ್ದಳು! ಆದರೆ. . .

“ಈ ನಕ್ಸಲ್ ಪ್ಯಾಕೇಜುಗಳು ಒಂದು ಬಲೆಯಷ್ಟೇ!!! ಯಾರು ಸ್ವತಃ ಬಂದೂಕು ತೊರೆಯಲು ಸಿದ್ಧರಾಗಿ ನಿಂತಿದ್ದಾರೋ ಅಂತಹವರನ್ನ ಬಲೆಗೆ ಕೆಡವಲಾಗುತ್ತದೆ. ಯಾರ್ಯಾರು ಸಮಾಜಮುಖಿಯಾಗುತ್ತೇನೆಂದು ಹೊರಟರೋ, ಅದರಲ್ಲಿ ರಮೇಶ್ ಹಾಗೂ ಕನ್ಯಾಕುಮಾರಿಯೂ ಇಬ್ಬರು. . ಆದರೆ, ಅವರಿನ್ನೂ ಬಂಧನದಲ್ಲಿಯೇ ಇದ್ದಾರೆ. ಸರಕಾರದ ಮಾತು ಕಾಗದದ ಮೇಲೆ ಮಾತ್ರ ಉಳಿಯಿತಷ್ಟೇ! ಇದು, ನಕ್ಸಲರ ಮೇಲಿನ ಕಾಳಜಿಯಲ್ಲ, ಬದಲಿಗೆ ನಕ್ಸಲ್ ಸಿದ್ಧಾಂತವನ್ನು ಹಾಗೂ ನಮ್ಮನ್ನು ನಾಶ ಮಾಡುವ ಯತ್ನವಷ್ಟೇ” ಎಂದು ಹೇಳಿಕೆ ನೀಡಿದ್ದ ನಕ್ಸಲ್ ಮುಖಂಡರು ಆಕೆಗೆ ಮುಂದುವರೆಯದಂತೆ ಬೆದರಿಕೆಯನ್ನೇ ಒಡ್ಡಿದ್ದರೂ ಕೇಳದ ಗೌರಿ ಲಂಕೇಶ್ ಮತ್ತದೇ ಕೇರಳಕ್ಕೆ ಹೋಗಿ ಸಮಾಜಮುಖಿ ಸೇವೆ ಆರಂಭಿಸಿದ್ದಕ್ಕೆ ಸರಿಯಾಗಿ ನಕ್ಸಲರು ಪಟಾಕಿ ಸಿಡಿಸಿದ್ದರು!!!!

ದುಡ್ಡೇ ಮುಖ್ಯವಾಗಿತ್ತು!!!!

ಅದೆಷ್ಟೋ ಎನ್ ಜಿ ಓ ಗಳು ಈ ನಕ್ಸಲ್ ರ ಹಿತ ಕಾಪಾಡುವುದಕ್ಕೆಂದೇ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುತ್ತಿರುವುದು ಸತ್ಯವಾದರೂ ಯಾರೂ ಅದರ ಬಗೆಗೆ ಮಾತೇ ಆಡುವುದಿಲ್ಲ ಬಿಡಿ! ಗೌರೀ ಲಂಕೇಶ್ ಮೂಲಕ ವರ್ಗಾವಣೆಯಾಗುತ್ತಿದ್ದ ಹಣದ ರುಚಿ ನೋಡಿದ್ದ ನಕ್ಸಲರಿಗೆ ಕಾಕತಾಳೀಯವೋ ಎಂಬಂತೆ ಈಕೆ ಇನ್ನೇನೋ ಮಾಡಲು ಹೋಗಿ ನಕ್ಸಲರ ಕೋಪಕ್ಕೆ ಗುರಿಯಾಗಿದ್ದೂ ಅಲ್ಲದೇ, ಆಕೆಯ ಯೋಜನೆಯೊಂದು ಹಳ್ಳ ಹಿಡಿದಿತ್ತು.

ವಿಶೇಷ ತನಿಖಾ ದಳವೊಂದು ತಲೆ ಕೆಳಗಾಗಿ ನಿಂತರೂ ಸಹ ಗೌರಿಯ ಹತ್ಯೆಗೆ ಇನ್ನೂ ಸುಳಿವು ಸಿಗದಿರುವ ಸ್ಥಿತಿ ನೋಡಿದರೆ ಕಲಬುರ್ಗಿ ಹತ್ಯೆಯ ತರಹ ಇದೂ ಹಳ್ಳ ಹಿಡಿಯುವುದರಲ್ಲಿ ಆಶ್ಚರ್ಯವಿಲ್ಲ ಬಿಡಿ! ಸಿದ್ಧರಾಮಯ್ಯನ ಸರಕಾರದ ಅಡ್ಡಕಸುಬಿಯ ಯೋಜನೆಗಳ ಫಲವಿದು! ಮಾಡಿದವರ್ಯಾರೋ! ತಿನ್ನುವರ್ಯಾರೋ!

– ಪೃಥ ಅಗ್ನಿಹೋತ್ರಿ

Tags

Related Articles

Close