ಪ್ರಚಲಿತ

ಮೂರೇ ದಿನದಲ್ಲಿ 18 ರೋಗಿಗಳ ಸಾವು!!! ದೂರದ ಉತ್ತರಪ್ರದೇಶದಲ್ಲಿ ರೋಗಿಗಳು ಸತ್ತರೆ ಬಾಯಿ ಬಾಯಿ ಬಡಿದುಕೊಂಡಿದ್ದ ಬುದ್ಧಿಜೀವಿಗಳು, ಕಾಂಗ್ರೆಸ್ ಈಗೆಲ್ಲಿದ್ದಾರೆ? ಇದಕ್ಕೆ ಸರ್ಕಾರ ಜಾರಿಗೆ ತರಲು ಮುಂದಾಗಿರುವ KPME ಆ್ಯಕ್ಟ್ ಕಾರಣವಾ?!

ಓರಿಸ್ಸಾದಲ್ಲಿ ತನ್ನ ಹೆಂಡತಿಯ ಶವವನ್ನ ಸಾಗಿಸೋಕೆ ದುಡ್ಡಿರದ ಕಾರಣ ಶವವನ್ನ ಹೆಗಲ ಮೇಲೆತ್ತುಕೊಂಡು ಹೋಗಿದ್ದ ವ್ಯಕ್ತಿಯ ಚಿತ್ರವನ್ನ ಭಾರತ ಇಂಥಾ ಪರಿಸ್ಥಿಯಲ್ಲಿದೆ ನೋಡಿ ಅಂತ ಚಿತ್ರಿಸಿದ್ದ ಬುದ್ಧಿಜೀವಿಗಳು,

ದೂರದ ಉತ್ತರಪ್ರದೇಶದಲ್ಲಿ ಆಕ್ಸಿಜನ್ ಅಭಾವದ ಕಾರಣ ಮೃತಪಟ್ಟ ಮಕ್ಕಳ ಸಾವನ್ನ ತಮ್ಮ ರಾಜಕೀಯಕ್ಕೆ ಬಳಸಿಕೊಂಡ ಬುದ್ಧಿಜೀವಿ, ಕಾಂಗ್ರೆಸ್ ಆದಿಯಾಗಿ ಎಲ್ಲಾ ಸೋ ಕಾಲ್ಡ್ ಮಾನವತಾವಾದಿಗಳು ಈಗೆಲ್ಲಿದಾರೆ?

ದೂರದ ರಾಜ್ಯಗಳಲ್ಲಾದ ಪ್ರಕರಣಗಳನ್ನಿಟ್ಟುಕೊಂಡು ಇಲ್ಲಿ ಕರ್ನಾಟಕದಲ್ಲಿ ಟೌನ್ ಹಾಲ್ ಎದುರು ಬೊಬ್ಬೆ ಹಾಕಿದ್ದ ವಿಚಾರವಾದಿಗಳು, ಬುದ್ಧಿಜೀವಿಗಳು, ಕಾಂಗ್ರೆಸ್ ನವರು ಈಗ ನಮ್ಮ ರಾಜ್ಯದಲ್ಲೇ 3 ದಿನಗಳಲ್ಲಿ ಆದ 18 ರೋಗಿಗಳ ಸಾವನ್ನ ಕಂಡು ಮಂಗ ಮಾಯವಾಗಿದ್ದಾರೆ.

ಯಾವ ಟೌನ್ ಹಾಲ್ ಪ್ರತಿಭಟನೆಯೂ ನಡೆದಿಲ್ಲ, ಹಾಗಾದರೆ ಬೇರೆ ರಾಜ್ಯಗಳಲ್ಲಿ ನಡೆಯುವ ಸುದ್ದಿಗಳಷ್ಟೇ ಇವರಿಗೆ ಬೇಕಾ?

ಕರ್ನಾಟಕದ ಸಿದ್ದರಾಮಯ್ಯನವರ ಆಡಳಿತದ ರಾಜ್ಯದಲ್ಲಿ ಮೂರೇ ದಿನದಲ್ಲಿ 18 ಮಂದಿ ತಕ್ಷಣ ಸರಿಯಾದ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಂಡಿದ್ದಾರೆ.

ಅನ್ಯ ರಾಜ್ಯಗಳಲ್ಲಿ ಒಂದು ಹೆಣ ಬಿದ್ದರೆ ತಟ್ಟನೆ ಇಲ್ಲಿ ಹಾಜರಾಗುವ ಅಥವಾ ತಮ್ಮ ಪಾಳೆಯದ ಒಂದು ರಣಹದ್ದು ಗೊಟಕ್ ಎಂದರೆ ಕೂಡಲೇ ಅದರ ಪಾಪವನ್ನು ಮೋದಿಯವರ ತಲೆಗೆ ಕಟ್ಟಲು ತಯಾರಿರುವ ಯಾವ ಬುದ್ಧಿಜೀವಿಯಾದರೂ ಈಗ, ರಾಜ್ಯದಲ್ಲಿ ಶವವಾಗಿ ಮಲಗಿದ 18 ನತದೃಷ್ಟರ ಬಗ್ಗೆ ಮಾತಾಡಿದ್ದಾರಾ? ಅಥವಾ ಆ ಶವಗಳ ಜೊತೆಗೇ ಇವರ ಮನಸ್ಸಾಕ್ಷಿ, ಜೀವಪರತೆ, ಮಾನವೀಯತೆಗಳೂ ಸತ್ತು ಮಲಗಿವೆಯೇ?

ಅಷ್ಟಕ್ಕೂ ಈ ಸಾವುಗಳಿಗೆ ನಣೆರ ಹೊಣೆ ಸಿದ್ದರಾಮಯ್ಯ ಸರ್ಕಾರವೇ ಹೊರತು ಆಸ್ಪತ್ರೆಗಳಲ್ಲ, ಯಾಕೆ ಅಂತೀರಾ?

ಅದಕ್ಕೂ ಕಾರಣವಿದೆ, ಮೊನ್ನೆ ಮೊನ್ನೆಯಷ್ಟೇ ನಮ್ಮ ರಾಜ್ಯದ ಆರೋಗ್ಯ ಮಂತ್ರಿಯಾದ ರಮೇಶ ಕುಮಾರ ರವರು ಒಂದು ಕಾಯಿದೆಯನ್ನ ಜಾರಿಗೆ ತರುವುದರ ಬಗ್ಗೆ ಹೇಳಿದ್ದರು.

ಆ ಕಾಯಿದೆಯ ಹೆಸರೇ ಕೆ.ಪಿ.ಎಮ್.ಇ ಆ್ಯಕ್ಟ್!! ಈ ಆ್ಯಕ್ಟ್ ಕರ್ನಾಟಕದ ಖಾಸಗಿ ಆಸ್ಪತ್ರೆಗಳು ಹಾಗು ವೈದ್ಯರನ್ನ ತನ್ನ ಅಂಕುಶದಲ್ಲಿಟ್ಟುಕ್ಕೊಳ್ಳೋದು ಸರ್ಕಾರದ ಪ್ಲ್ಯಾನ್ ಆಗಿದೆ.

ಈ ಕಾಯಿದೆಯನ್ನ ಸರ್ಕಾರ ಈಗ್ಯಾಕೆ ಜಾರಿಗೊಳಿಸೋಕೆ ಮುಂದಾಗಿದೆ ಗೊತ್ತಾ?

ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಯಶಸ್ವಿನಿ ಹಾಗೂ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ನಿಯಮಗಳನ್ನೇ ಸರ್ಕಾರ ಮುಂದುವರೆಸಿದ್ದು, ಒಂದು ಶಸ್ತ್ರ ಚಿಕಿತ್ಸೆಗೆ 1.5 ಲಕ್ಷ ದಿಂದ ಗರಿಷ್ಠ 2 ಲಕ್ಷದವರೆಗೆ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸಬೇಕಾಗಿತ್ತು.

ಇದರ ಪ್ರಕಾರ ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ ಫಲಾನುಭವಿಗಳಿಗೆ ನೀಡಿದ ಚಿಕಿತ್ಸಗೆ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದ ವತಿಯಿಂದ ತಮಗೆ ಬರಬೇಕಾಗಿದ್ದ ನೂರಾರು ಕೋಟಿ ರೂಪಾಯಿ ಸಂದಾಯವಾಗೇ ಇಲ್ಲ.

ಈಗ ಆ ಖಾಸಗಿ ಆಸ್ಪತ್ರೆಗಳು ಸರ್ಕಾರದಿಂದ ತಮ್ಮ ಬಾಕಿ ಮೊತ್ತ ನೀಡಬೇಕಂತ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಈಗ ಖಾಸಗಿ ಆಸ್ಪತ್ರೆಗಳಿಗೆ ನೂರಾರು ಕೋಟಿ ಬಾಕಿ ಹಣ ಕೊಡೋದು ಹೇಗೆ?

ಈ ಖಾಸಗಿ ಆಸ್ಪತ್ರೆ, ವೈದ್ಯರುಗಳನ್ನೇ ಕಾನೂನೊಂದನ್ನ ತಂದು ಕಟ್ಟಿಹಾಕಿಬಿಟ್ಟರೆ ಇವರಿಗೆ ಕೊಡಬೇಕಾದ ಹಣ ಕೂಡ ಉಳಿಯುತ್ತೆ, ಮತ್ತು ಮುಂದೆ ಬರೋ ಚುನಾವಣೆಯಲ್ಲಿ ಇದೇ ಖಾಸಗಿ ಆಸ್ಪತ್ರೆಗಳಿಂದ ಕೋಟಿ ಕೋಟಿ ಹಣ ಆರಾಮಾಗಿ ಪೀಕಬಹುದು ಅನ್ನೋದು ಸರ್ಕಾರದ ಲೆಕ್ಕಾಚಾರವಾಗಿದೆ ಅಂತ ಹೆಸರು ಹೇಳಲಿಚ್ಛಿಸದ ವೈದ್ಯರೊಬ್ಬರು ಸರ್ಕಾರದ ಕರಾಳಮುಖವನ್ನ ಬಿಚ್ಚಿಟ್ಟಿದ್ದಾರೆ.

ತೆರಿಗೆ ರೂಪದಲ್ಲಿ ನಾವದೆಷ್ಟು ದುಡ್ಡನ್ನ ಸರ್ಕಾರಕ್ಕೆ ಕಟ್ಟುತ್ತೇವೆ ಆ ಎಲ್ಲಾ ಸಾವಿರಾರು ಲಕ್ಷಾಂತರ ಕೋಟಿ ತೆರಿಗೆ ಹಣವನ್ನ ಬಳಸಿಕೊಂಡು ಜಿಲ್ಲೆಗೊಂದರಂತೆ ಸರ್ಕಾರಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯನ್ನ್ಯಾಕೆ ಸರ್ಕಾರ ಮಾಡೋಕ್ಕಾಗಲ್ಲ?

ನೆಟ್ಟಗೆ ಸರ್ಕಾರಿ ಆಸ್ಪತ್ರೆಗಳನ್ನೇ ನೋಡಿಕೊಳ್ಳೋಕ್ಕಾಗದ ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಅಂಕುಶ ಹಾಕೋಕೆ ಹೊರಟಿರೋದು ಹಾಸ್ಯಾಸ್ಪದವೇ ಸರಿ.

ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರವನ್ನ ತಮ್ಮ ಆಸ್ಪತ್ರೆಗಳಲ್ಲಿ ಹಾಕಬೇಕು, ಹೀಗೀಗೇ ಕಾರ್ಯ ನಿರ್ವಹಿಸಬೇಕು, ಅದು ಇದು ಅಂತ ಅವರ ಮೇಲೆ ಕಾನೂನಿನ ಮೂಲಕ ಒತ್ತಡ ಹೇರುವ ಬದಲು ತನ್ನ ಅಡಿಯಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಅದನ್ನ ಇಂಪ್ಲಿಮೆಂಟ್ ಮಾಡಿದರೆ ಸಾಮಾನ್ಯ ಜನ ಯಾಕ್ರೀ ಖಾಸಗಿ ಆಸ್ಪತ್ರೆಗಳಿಗ್ ಹೋಗ್ತಾರೆ?

ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ, ಸೂಕ್ತ ಸೌಲಭ್ಯಗಳು, ವೈದ್ಯರುಗಳಿರದೆ ಇರೋ ಕಾರಣಕ್ಕೆ ತಾನೇ ಜನ ಖಾಸಗಿ ಆಸ್ಪತ್ರೆಗೆ ಹೋಗೋದು, ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿನ ಡಾಕ್ಟರ್ ಆಗಿಯೂ ಕೂಡ ಸರಿಯಾದ ಸಮಯಕ್ಕೆ ಬರದೆ ತನ್ನ ಪರ್ಸನಲ್ ಕ್ಲಿನಿಕ್‌ಗೆ ಹಾಜರಾಗುವ ಡಾಕ್ಟರುಗಳ ಮೇಲೆ ಮೊದಲು ಸರ್ಕಾರ ಕ್ರಮ ಕೈಗೊಳ್ಳಲಿ.

ಮೊದಲು ತನ್ನ ವ್ಯಾಪ್ತಿಯಲ್ಲಿರುವುದರ ಬಗ್ಗೆ ಯೋಚಿಸಿ ನಂತರ ಇವರ ವ್ಯಾಪ್ತಿಗೊಳಪಡದ ಖಾಸಗಿ ಆಸ್ಪತ್ರೆಗಳ ಬಗ್ಗೆ ಯೋಚಿಸಲಿ.

ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ KPME act ಗೆ ವಿರೋಧಿಸಿ ಈಗಾಗಲೇ ಖಾಸಗಿ ಆಸ್ಪತ್ರೆಗಳು ಅನಿರ್ದಿಷ್ಟಾವಧಿ ಮುಷ್ಕರ ಶುರು ಮಾಡಿದ ಕಾರಣಕ್ಕೇ 3 ದಿನದಲ್ಲಿ 18 ರೋಗಿಗಳು ಮೃತಪಟ್ಟಿದ್ದಾರೆ.

ಇದಕ್ಕೆ ಆ ವೈದ್ಯರಲ್ಲ ಬದಲಾಗಿ ರಾಜ್ಯ ಸರ್ಕಾರ ನೇರ ಹೊಣೆಯಾಗುತ್ತೆ.

ರಾಜ್ಯದಲ್ಲಿ ಇಷ್ಟು ಸಾವುಗಳಾದರೂ ಬುದ್ಧಿಜೀವಿಗಳು, ಮಾನವತಾವಾದಿಗಳು ಮಾತ್ರ ಇನ್ನೂ ಟೌನ್ ಹಾಲ್ ನ ಮುಂದೆ ಪ್ರತಿಭಟನೆಗೆ ಬಂದಿಲ್ಲ.

– Vinod Hindu Nationalist

Tags

Related Articles

Close