ಅಂಕಣ

ಮೋದಿ ಕಾಸ್ಟ್ಲಿ ಬಟ್ಟೆಗಳನ್ನ ಧರಿಸುತ್ತಾರೆ, ಅವರದು ಸೂಟ್ ಬೂಟ್ ಕೀ ಸರಕಾರ್ ಅಂತಾರಲ್ಲ ಅದು ನಿಜವಾ?!

‘ಕೈ’ಯಿಂದ ಅಧಿಕಾರ ತಪ್ಪಿಹೋಗಿದೆ, ಚಡಪಡಿಕೆ ಶುರುವಾಗಿದೆ, ಲೂಟಿ ಹೊಡೆಯೋಕೆ ಏನೂ ಸಿಗದಂತಾಗಿದೆ, ಅಧಿಕಾರವಿರದೆ ಐಶಾರಾಮಿ ಜೀವನ ನಡೆಸೋಕೆ ತೊಂದರೆಯಾಗುತ್ತಿದೆ, ಕಂಡ ಕಂಡಲ್ಲಿ ಬರೀ ಸೋಲಿನಿಂದ ಕಂಗೆಟ್ಟಿದ್ದೇವೆ ಎಂಬ ಹತಾಶೆ ಕಾಂಗ್ರೆಸ್ ಗೆ ಈಗಲೂ ಕಾಡುತ್ತಿದೆ.

ಅಷ್ಟಕ್ಕೂ ಈ ದೇಶವನ್ನ ಸ್ವಾತಂತ್ರ್ಯ ಬಂದಾಗಿನಿಂದ ಆಳಿದ್ದು ಇದೇ ಕುಟುಂಬವೇ ತಾನೆ. ಹಾಗಾಗಿ ಅಧಿಕಾರ ಕಳೆದುಕೊಂಡ ನಂತರ ಹೀಗಾಗೋದು ಸಹಜವೇ!

ಒಂದು ಮೀನನ್ನ ನೀರಿನಿಂದ ತೆಗೆದು ಹೊರಹಾಕಿದರೆ ಹೇಗೆ ಚಡಪಡಿಸುತ್ತೋ ಅದೇ ಸ್ಥಿತಿ ಈಗ ಕಾಂಗ್ರೆಸ್ಸಿನದ್ದಾಗಿದೆ.

ಮೋದಿ ಸರ್ಕಾರವನ್ನ ಹೇಗಾದರೂ ಮಾಡಿ ಟಾರ್ಗೇಟ್ ಮಾಡಿ ಮತ್ತೆ ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ಕಾಂಗ್ರೆಸ್ಸಿಗೆ ಮೋದಿ ಸರ್ಕಾರದ ಯಾವುದೇ ಹಗರಣಗಳ ಸುಳಿವು ಸಿಗ್ತಿಲ್ಲ ಎಂದು ಹತಾಶರಾಗಿ ಮೋದಿ ಧರಿಸುವ ಬಟ್ಟೆಯಲ್ಲೂ ತಮ್ಮ ಆರೋಪಗಳನ್ನ ಮಾಡುವ ನೀಚ, ಕೀಳುಮಟ್ಟದ ರಾಜಕೀಯಕ್ಕೆ ಇಳಿದುಬಿಟ್ಟಿದ್ದಾರೆ.

ಅಷ್ಟಕ್ಕೂ ಮೋದಿ ಧರಿಸುವ ಬಟ್ಟೆಯ ಖರ್ಚು ಸರ್ಕಾರೀ ವೆಚ್ಚದಲ್ಲಿ ಮಾಡುತ್ತಾರೆಯೇ?? ಇಲ್ಲ ಎನ್ನುವುದಕ್ಕೆ ಹಲವು ಪುರಾವೆಗಳು ನಮಗೆ ಸಿಗುತ್ತವೆ.

ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ 2002 ರಿಂದ 2014 ರ ಸಮಯದವರೆಗೆ, ಮುಖ್ಯಮಂತ್ರಿಯಾಗಿ ಮಾಸಿಕ ಸಂಬಳ ₹1,10,000 ಆಗಿತ್ತು

ಅದರ ಪ್ರಕಾರ ಅವರ ವಾರ್ಷಿಕ ಸಂಬಳ ₹13,20,000 ಆಗುತ್ತೆ

12 ವರ್ಷಗಳೆಂದರೆ₹1,58,40,000 ಆಯ್ತು.

ಶಾಸಕನೆಂದು ಪ್ರತಿ ತಿಂಗಳು ₹65,000

ಇದು ವರ್ಷಕ್ಕೆ ₹7,80,000 ಆಯ್ತು, 12 ವರ್ಷದ ಲೆಕ್ಕ ಹಿಡಿದರೆ (2002-2014) = ₹93,60,000

ಎರಡೂ ಬಗೆಯಸಂಬಳದ ಮೊತ್ತ ₹2,52,00,000 ರೂ.

ಮುಖ್ಯಮಂತ್ರಿಯಾಗಿದ್ದ ಕಾರಣ ಅವರ ಪ್ರಯಾಣ, ಆಹಾರ ಮತ್ತು ವಸತಿ ವೆಚ್ಚಗಳನ್ನು ಸರ್ಕಾರದ ವ್ಯಾಪ್ತಿಗೆ ಒಳಪಡಿಸಲಾಗಿತ್ತು.

ಅಮಿತ್ ಷಾರವರು 17 – DEC – 2016 ರಲ್ಲಿ ರಜತ್ ಶರ್ಮಾ ನಡೆಸಿಕೊಡುವ ಆಪ್ ಕಿ ಅದಾಲತ್ ಸಂದರ್ಶನದಲ್ಲಿ ಮಾತನಾಡುವಾಗ ಪ್ರೇಕ್ಷಕನೊಬ್ಬ ಇದೆ ಪ್ರಶ್ನೆಯನ್ನ ಕೇಳಿದ್ದ;

ಪ್ರೇಕ್ಷಕ: “ಮೋದಿ ಅವರು ‘ಫಕೀರ್’ ಎಂದು ಕರೆದುಕೊಳ್ತಾರೆ ಆದರೆ ಅವರು ವಿವಿಧ ರೀತಿಯ ಬಗೆ ಬಗೆಯ ಬಟ್ಟೆಗಳನ್ನ ಧರಿಸುತ್ತಾರೆ, ಒಂದು ದಿನದಲ್ಲಿ ಅವರು ತಮ್ಮ ಬಟ್ಟೆಯನ್ನು ಮೂರು ಬಾರಿ ಬದಲಿಸುತ್ತಾರೆ. ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?

ಅಮಿತ್ ಷಾ: “ಈ ಎರಡೂವರೆ ವರ್ಷಗಳ ಅವಧಿಯಲ್ಲಿ, ನಮ್ಮ ಸರ್ಕಾರ ಅಥವಾ ಪ್ರಧಾನ ಮಂತ್ರಿಯ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲ. ಅದಕ್ಕೇ ವಿರೋಧ ಪಕ್ಷಗಳು ಯಾವುದಾದರೂ ಕಾರಣವಿಟ್ಟುಕೊಂಡು ಸುಳ್ಳು ಆರೋಪ ಮಾಡುತ್ತಿವೆ, ಅಷ್ಟಕ್ಕೂ ಒಬ್ಬ ವ್ಯಕ್ತಿಯು ಶುದ್ಧವಾಗಿದ್ದರೆ ಹಾಗು 35-40 ವಿಧದ ಉಡುಪುಗಳನ್ನ, ಬಟ್ಟೆಗಳನ್ನು ಹೊಂದಿದ್ದರೆ ನನ್ನ ಪ್ರಕಾರ ಅದು ತಪ್ಪಲ್ಲ”ಎಂದಿದ್ದರು.

ಇದು ತಾರ್ಕಿಕವಾಗಿ ಅವರು ಮೋದಿಯವರ ಬಟ್ಟೆಯ ಬಗ್ಗೆ ನೀಡಿದ್ದ ಉತ್ತರವಾಗಿತ್ತು.

ಭಾರತದ ಪ್ರಧಾನ ಮಂತ್ರಿಯ ಮಾಸಿಕ ಸಂಬಳ 1.6 ಲಕ್ಷ ರೂಪಾಯಿ ಇರುತ್ತೆ, ತಮಗಿಷ್ಟವಾದ ಉಡುಪನ್ನ ಧರಿಸುವುದು ಅದು ಅವರವರ ವೈಯಕ್ತಿವ ವಿಚಾರ & ಅದು ಅವರ ಹಕ್ಕು ಕೂಡ ಹೌದು.

ಅಷ್ಟಕ್ಕೂ ಮೋದಿಯವರನ್ನ ಸೂಟ್ ಬೂಟ್ ಕೀ ಸರ್ಕಾರ್ ಅಂತ ಕರೆಯೋಕೆ ಶುರು ಮಾಡಿದ್ದೆ ಕಾಂಗ್ರೆಸ್ಸಿನ ಕಾಮಿಡಿ ಖಿಲಾಡಿ ಪಪ್ಪು ರಾಹುಲ್ ಗಾಂಧಿ.

ಮೋದಿ ಬರಾಕ್ ಒಬಾಮಾರನ್ನ ಭೇಟಿಯಾದ ಸಂದರ್ಭದಲ್ಲಿ MODI MODI MODI ಅಂತ ಹೊಲಿಗೆಯಿದ್ದ ಸೂಟ್ ಒಂದನ್ನ ಧರಿಸಿದ್ದರು, ಆ ಸೂಟ್ ನ ಬಗ್ಗೆ ಚಕಾರವೆತ್ತಿದ್ದ ಪಪ್ಪು ಆ ಸೂಟ್ 10 ಲಕ್ಷದ್ದು ಅಂತ ಆರೋಪಿಸಿದ್ದ & ನ್ಯೂ’ಸೂಳೆ’ಯರೂ ಅದನ್ನ ನಿಜ ಅನ್ನುವ ರೀತಿಯಲ್ಲೇ ಸುದ್ದಿಯನ್ನ ಬಿತ್ತರಿಸಿದ್ದವು.

ಆದರೆ ಆ ಸೂಟ್ 10 ಲಕ್ಷ ಬೆಲೆ ಬಾಳೋದಲ್ಲ ಬದಲಾಗಿ 10 ಸಾವಿರದ್ದಾಗಿದ್ದು ಅದನ್ನ ಗುಜರಾತಿನ ಮೋದಿ ಅಭಿಮಾನಿಯೊಬ್ಬ ಕೈಯಾರೆ ತಾನೇ ತಯಾರಿಸಿ ಮೋದಿಯವರಿಗೆ ಉಡುಗೊರೆಯಾಗಿ ಕೊಟ್ಟಿದ್ದ ಸೂಟ್ ಆಗಿತ್ತು.

ಮೊದಲು ಮೋದಿ 10 ಲಕ್ಷದ ಸೂಟ್ ಧರಿಸಿದ್ದಾರೆ ಅಂತ ನ್ಯೂಸ್ ಬಿತ್ತರಿಸಿದ್ದ ಚಾನೆಲ್ ಗಳು ಕ್ಷಮೆಯನ್ನೂ ಯಾಚಿಸಿದ್ದದ್ದನ್ನ ಬಹುಶಃ ಪಪ್ಪು ಆಗಲಿ ಪಪ್ಪುವಿನ ಸಮರ್ಥಕರಾಗಲಿ ನೋಡಿಲ್ಲ ಅನ್ಸತ್ತೆ.

ಹಾಗಾಗಿ, ಒಬ್ಬ ವ್ಯಕ್ತಿಯು ಪ್ರಪಂಚದ ಪ್ರಬಲ ವ್ಯಕ್ತಿಯನ್ನು ಭೇಟಿ ಮಾಡುವಾಗ ಉತ್ತಮ ಬಟ್ಟೆ ಧರಿಸುದಕ್ಕೆ ತನ್ನ ಸ್ವಂತ ಹಣವನ್ನು ಖರ್ಚುಮಾಡದ್ರೆ ಅಥವ ತನ್ನ ಅಭುಮಾನಿಯೊಬ್ಬ ನೀಡಿದ ಉಡುಗೊರೆಯ ದಿರಿಸನ್ನ ತೊಟ್ಟರೆ ಕಾಂಗ್ರೆಸ್ ನ ಆದಿಯಾಗಿ ಎಲ್ಲ ವಿರೋಧಿಗಳೂ ಯಾಕ್ ಹಿಂಗೆ ಪ್ರಶ್ನೆ ಮಾಡ್ತಾವೆ?

ಹೀಗೆಲ್ಲ ಪ್ರಶ್ನೆ ಮಾಡುವ ಗಾಂಧಿ ಕುಟುಂಬಕ್ಕೆ Z+ ಸೆಕ್ಯೂರಿಟಿ ಗಂತ ಆಗುತ್ತಿರೋ ಖರ್ಚಿನ ಬಗ್ಗೆ ನಿಮಗೇನಾದರೂ ಗೊತ್ತಾ?

1. ರಾಹುಲ್ ಗಾಂಧಿ,
2. ಸೋನಿಯಾ ಗಾಂಧಿ,
3. ಪ್ರಿಯಾಂಕಾ ಗಾಂಧಿ
4. ರಾಬರ್ಟ್ ವಾದ್ರಾ

ಹೀಗೆ ಎಲರಿಗೂ Z+ ಸೆಕ್ಯೂರಿಟಿ ಕೊಡಲಾಗುತ್ತಿದೆ.(ಮೋದಿ ಸರ್ಕಾರ ಬಂದ ನಂತರ ರಾಬರ್ಟ್ ವಾದ್ರಾ ನ Z+ ಸೆಕ್ಯೂರಿಟಿಯನ್ನ ತೆಗೆದು ಹಾಕಿದೆ)

ಹೌದು ಹಲವಾರು ವರ್ಷಗಳಿಂದ ಗಾಂಧಿ ಕುಟುಂಬಕ್ಕೆ Z+ ಸೆಕ್ಯೂರಿಟಿ ಕೊಡಲಾಗುತ್ತಿದೆ ಅದಕ್ಕೆ ಖರ್ಚಾಗುತ್ತಿರವುದು ವರ್ಷಕ್ಕೆ ಹೆಚ್ಚು ಕಡಿಮೆ 250 ಕೋಟಿ. ಇದು ಬರೀ ಒಂದು ವರ್ಷದ ಕಥೆಯಾದರೆ ನೀವೇ ಲೆಕ್ಕ ಹಾಕಿ ಇಷ್ಟು ವರ್ಷಗಳವರೆಗೆ ಈ ನಕಲಿ ಗಾಂಧಿ ಕುಟುಂಬದ Z+ ಶ್ರೇಣಿಯ ಸೆಕ್ಯೂರಿಟಿಗೆ ಎಷ್ಟು ಖರ್ಚಾಗಿರಬಹುದಂತ?

 

ಯಾಕೆ ಇದರ ಬಗ್ಗೆ ಯಾರೂ ಚಕಾರವೆತ್ತಲ್ಲ??

ಮೋದಿಯವರ ಉಡುಪಿನ ಬಗ್ಗೆ ಬೊಬ್ಬೆಯಿಡುವ ಕಾಂಗ್ರೆಸ್ಸಿಗರು ಹಿಂದಿನ ಪ್ರಧಾನ ಮಂತ್ರಿಗಳಾದ ಶೋಕಿಲಾಲ ನೆಹರು, ಆತನ ಮಗಳು ಇಂದಿರಾ ಗಾಂಧಿ, ಆಕೆಯ ಮಗ ರಾಜೀವ್ ಗಾಂಧಿ ಇವರೆಲ್ಲಾ ತಮ್ಮ ತಮ್ಮ ಬಟ್ಟೆಗಳಿಗೆ ಅದೆಷ್ಟು ಖರ್ಚು ಮಾಡಿದ್ದರು ಅನ್ನೋ ಪ್ರಶ್ನೆಯನ್ಯಾಕೆ ಕೇಳಿಲ್ಲ/ಕೇಳಲ್ಲ?

ಹಾಗಾದರೆ ಪ್ರಧಾನಿ ಮೋದಿ ರಾಜತಾಂತ್ರಿಕ ಭೇಟಿಗಳನ್ನ, ಜಗತ್ತಿನ ದೊಡ್ಡಣ್ಣನನ್ನ, ಅನೇಕ ರಾಷ್ಟ್ರದ ಪ್ರಮುಖರನ್ನ ಭೇಟಿಯಾಗೋಕೆ ತೋರಿಕೆಗಾಗಿ ನಮ್ಮ ದೆಹಲಿ ಮುಖ್ಯಮಂತ್ರಿಯಾಗಿರುವ ಅರವಿಂದ ಕೇಜ್ರೀವಾಲನ ರೀತಿಯಲ್ಲಿ ಹವಾಯಿ ಚಪ್ಪಲಿ, ತಲೆಗೊಂದು ಮಫ್ಲರ್ ಸುತ್ತಿಕೊಂಡು ಹೋಗಬೇಕಾ? ವಿದೇಶದಲ್ಲಿ ಆ ರೀತಿ ಬಟ್ಟೆ ಧರಿಸಿದರೆ ನಮ್ಮ ಪ್ರಧಾನಮಂತ್ರಿಗಳಿಗೆ ಗೌರವ ಸಿಗುತ್ತದೆಯೇ?

ಒಬ್ಬ ವ್ಯಕ್ತಿಯು ಒಂದು ದೇಶವನ್ನು ಪ್ರತಿನಿಧಿಸುತ್ತಿದ್ದಾರೆ ಎಂದರೆ ಒಳ್ಳೆಯ ಬಟ್ಟೆ ಧರಿಸಿದರೆ ತಪ್ಪೇನು?, ನಾವು ಅದರ ಬಗ್ಗೆ ಹೆಮ್ಮೆ ಪಡಬೇಕು, ಬದಲಿಗೆ ಏನೋ ಒಂದು ಆರೋಪ ಮಾಡಲೇಬೇಕು ಅನ್ನೋ ಕಾರಣಕ್ಕೆ ಏನೇನೋ ಪ್ರಶ್ನೆ ಮಾಡಲು ಹೋದರೆ ನಗೆಪಾಟಲಾದೀತು.

ಇನಾದರೂ ಇಂತಹ ಕೀಳು ಮಟ್ಟದ ಆರೋಪ ಮಾಡೋದನ್ನ ಬಿಟ್ಟು ಮೋದಿ ದೇಶಕ್ಕಾಗಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಿದರೆ ಜನ ಮರ್ಯಾದೆ ಕೊಡ್ತಾರೆ ಇಲ್ಲವಾದರೆ 2014 ರಲ್ಲಿ ಕೊಟ್ಟ 44 ಸೀಟುಗಳನ್ನ ಕಿತ್ತು ಕೈಗೆ ಚಂಬು ಕೊಟ್ಟು ಕೂಡಿಸಿಯಾರು ಹುಷಾರು!!!!

– ಪ್ರಭಾಕರ್

Tags

Related Articles

Close