ಅಂಕಣ

ಯಾಕೆ ಲಾಹೋರ್ ಯಾವತ್ತೂ ಭಾರತದ ಭಾಗವಾಗಲೇ ಇಲ್ಲ ಗೊತ್ತೇ?!

ಈಗ ಅಖಂಡ ಭಾರತದ ಪರಿಕಲ್ಪನೆ ಮಾತ್ರವೇ ಉಳಿದಿದೆ. ಭಾರತ ವಿಭಜನೆಯಾಗುವ ಮುನ್ನ ಪಾಕಿಸ್ಥಾನವು ಭಾರತದ ಒಂದು ಭಾಗವಾಗಿತ್ತು ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. 1947 ಆಗಸ್ಟ್ 14ರ ಮಧ್ಯರಾತ್ರಿ ಭಾರತ ಹೋಳಾಗುತ್ತದೆ. ಭಾರತ ಭಿಕ್ಷೆ ನೀಡಿದ ಪಾಕಿಸ್ಥಾನ ಎಂಬ ಧರಿದ್ರ ರಾಷ್ಟ್ರದಲ್ಲಿದ್ದ ಎಲ್ಲಾ ಹಿಂದೂಗಳನ್ನು ಭಾರತಕ್ಕೆ ಓಡಿಸಲಾಗುತ್ತದೆ. ಅವರಿಗೆ ಚಿತ್ರ ಹಿಂಸೆ ನೀಡಲಾಗುತ್ತೆ. ಅನೇಕ ಮಂದಿಯ ಜೀವ ಈ ಪರಿಯ ಕಿತ್ತಾಟಕ್ಕೆ ಬಲಿಯಾಗುತ್ತದೆ. ಆದರೆ ಭಾರತದಲ್ಲಿ ಮಾತ್ರ ದೇಶ ವಿಭಜನೆ ಮಾಡಿದ ಪಾಪಿಗಳ ಸಂಭ್ರಮ ಮುಗಿಲು ಮುಟ್ಟಿರುತ್ತೆ. ಭಾರತದ ಜಾತ್ಯಾತೀತವಾದದ ಮುಖವಾಡಗಳನ್ನು ಧರಿಸಿಕೊಂಡಿದ್ದ ಶಾಂತಿ ಧೂತರ ನಿರ್ಲಕ್ಷ್ಯದಿಂದ ಭಾರತದ ಹಲವಾರು ಭೂಭಾಗಗಳನ್ನು ಕಳೆದುಕೊಳ್ಳುವಂತಾಗುತ್ತದೆ. ಸರ್ಧಾರ್ ಪಟೇಲರ ಚಾಣಾಕ್ಷತೆಯಿಂದ ಹಲವಾರು ರಾಜ್ಯಗಳು ಭಾರತದ ವಶವಾಗುತ್ತದೆ. ಜಮ್ಮು ಕಾಶ್ಮೀರ ಮಾತ್ರ ಅಂದಿನ ನೆಹರೂರ ನಿರ್ಲಕ್ಷ್ಯದಿಂದ ಇಂದಿಗೂ ವಿವಾದದ ಕೇಂದ್ರಬಿಂದುವಾಗಿ ಬಿಡುತ್ತದೆ. ಹೀಗೆ ನಮ್ಮ ಸೆಕ್ಯುಲರ್ ನಾಯಕರ ನಿರುತ್ಸಾಹ ಹಾಗೂ ಕಡೆಗಣನೆಯಿಂದ ಲಾಹೋರ್ ಎಂಬ ಪ್ರದೇಶವನ್ನು ಕಳೆದುಕೊಳ್ಳುವಂತಾಗುತ್ತದೆ. ಇತ್ತ ಸ್ವತಂತ್ರ್ಯ ಪಡೆದ ಸಂಭ್ರಮಾಚರಣೆಯ ಮಧ್ಯೆ ಲಾಹೋರ್ ಪಾಕಿಸ್ಥಾನದ ವಶವಾಗುತ್ತೆ.

ವಿಭಜನೆಯ ಪೂರ್ವಭಾವಿ ಯುಗದಲ್ಲಿ ಲಾಹೋರ್‍ನ ಸಾಮಾಜಿಕ ಮತ್ತು ಸಾಂಸ್ಕøತಿಕ ಜೀವನಕ್ಕೆ ಒಬ್ಬರಿಗೆ ತೊಂದರೆ ಉಂಟುಮಾಡುವ ಯಾವುದೇ ಘಟನೆಗಳು ನಡೆದಿರಲಿಲ್ಲ. ಹಿಂದೂ ಮುಸ್ಮಿಮ್ ಸಿಖ್ ಎನ್ನುವ ಯಾವುದೇ ಬೇಧಭಾವವಿಲ್ಲದೇ ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದರು. ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರು ಸಾಮಾನ್ಯವಾದ ಪಂಜಾಬಿ ಸಂಸ್ಕøತಿಯನ್ನು ಹಂಚಿಕೊಂಡು ಪರಸ್ಪರ ಎಲ್ಲಾ ಸಮಾರಂಭಗಳಲ್ಲೂ ಪಾಲ್ಗೊಳ್ಳುತ್ತಿದ್ದರು.

ಮಾರ್ಚ್ 1947 ರಲ್ಲಿ ಹಿಂದೂ-ಸಿಖ್ ಮತ್ತು ಮುಸ್ಲಿಮ್ ಸಮುದಾಯಗಳ ನಡುವೆ ಯುದ್ಧವಾಗಿ ಲಾಹೋರ್ ವಿಭಜನೆ ಪ್ರಾರಂಭವಾಯಿತು. ಯಾವುದೇ ಸ್ಪಷ್ಟವಾದ ಯೋಜನೆಗಳಿಲ್ಲದೆ ಲಾಹೋರ್ ವಿಭಜನೆಯನ್ನು ಮಾಡಲು ಆರಂಭಿಸಿದ್ದರು. ಲಾಹೋರ್ ವಿಭಜನೆಯಾದರೆ ಮುಂದೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವ ಯಾವ ಆಲೋಚನೆಯೂ ಇಲ್ಲದೆ ಲಾಹೋರ್ ವಿಭಜನೆಯನ್ನು ಮಾಡಲು ತಯಾರಾಗುತ್ತಾರೆ. ಆದಾಗ್ಯೂ ಜೂನ್ ಆರಂಭದಲ್ಲಿ ಅನೇಕ ರಾಜಕೀಯ ಆಡಳಿತಾತ್ಮಕ ಮತ್ತು ಕಾನೂನು ನಿರ್ಧಾರಗಳು ಮುಸಲ್ಮಾನರ ಪರವಾಗಿ ಶಕ್ತಿಯನ್ನು ಸಮತೋಲನಗೊಳಿಸಿತು. ಪಾಕಿಸ್ತಾನದ ವಿಭಜನೆಯ ನಂತರ ಲಾಹೋರ್ ಎದುರಾದ ಕೆಲವು ವಿಮರ್ಶಾತ್ಮಕ ಸಮಸ್ಯೆಗಳು ಯಾವುದೆಂದರೆ

ಆರ್ಥಿಕ ರಚನೆ

20 ನೇ ಶತಮಾನದ ಆರಂಭದಲ್ಲಿ ಅನೇಕ ಆಧುನಿಕ ಸರಕಾರಿ ಕಚೇರಿಗಳು, ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‍ಗಳು ವಿಮೆ ಕಂಪನಿಗಳು ಗೋದಾಮುಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಲಾಹೋರ್‍ನಲ್ಲಿ ನಿರ್ಮಿಸಲಾಗಿತ್ತು. ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದ ಇವರು ಕ್ರಮೇಣ ದೂರ ಸರಿಯುವಂತಾಯಿತು. ಹಿಂದೂಗಳು ಮತ್ತು ಸಿಖ್ಖರು ಪರಸ್ಪರ ಒಗ್ಗಟ್ಟಿನಿಂದಲೇ ಬದುಕಲು ಪ್ರಾರಂಭಿಸಿದರು ಆದರೆ ಮುಸ್ಲಿರು ಮಾತ್ರ ಇವರ ಸಂಸ್ಕøತಿ ಮತ್ತು ಭಾವನೆಗಳಿಗೆ ಸ್ಪಂದಿಸಲು ತಯಾರಿರದೆ ದೂರ ಸರಿದರು. ಹಿಂದೂ-ಸಿಖ್ ಮತ್ತು ಮುಸ್ಲಿಮ್ ಗುಂಪುಗಳ ನಡುವಿನ ಆರ್ಥಿಕ ವಿರೋಧಾಭಾಸಗಳು ಮುಸ್ಲಿಮ್ ಲೀಗ್‍ಗಾಗಿ ರಾಜಕೀಯ ಕಾರ್ಯಕ್ರಮವನ್ನು ರಚಿಸಿದವು. ಜನಸಾಮಾನ್ಯರಿಗೆ ದಬ್ಬಾಳಿಕೆ ನಡೆಸಲು ಮತ್ತು ಮುಸ್ಲಿಮ್ ಸಮುದಾಯದ ಪ್ರಯೋಜನಕ್ಕಾಗಿ ಪಾಕಿಸ್ತಾನವು ರಚನೆಯಾಗುತ್ತದೆ.

ಕಮ್ಯುನಿಕಲ್ ಪಡೆಗಳ ಉದಯ

ಆರ್ಯ ಸಮಾಜ ಹಿಂದೂ ಮಹಾಸಭಾ ಆರ್‍ಎಸ್‍ಎಸ್ ಮತ್ತು ಇತರ ಹಿಂದೂ ಸಂಘಟನೆಗಳು ಲಾಹೋರ್‍ನಲ್ಲಿ ಸಕ್ರೀಯವಾಗಿದ್ದವು. ಮುಸ್ಲಿಮರಲ್ಲಿ ಅಹ್ರಾರ್ ಖಕ್ಸರ್ ಮತ್ತು ಇತರ ಇಸ್ಲಾಮಿ ಚಳುವಳಿಗಳು ಹೊರಬಂದವು. ಸಿಂಗ್ ಸಭಾ ಮತ್ತು ಅಕಾಲಿ ದಳ ಸಿಖ್ ಸಮುದಾಯದ ಆಕಾಂಕ್ಷೆಗಳನ್ನು ಪ್ರತಿಧ್ವನಿಸಿತು. ಈ ಎಲ್ಲಾ ಪಡೆಗಳು ಲಾಹೋರ್‍ನಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಠಿಸಿತ್ತು. 1944ರ ಹೊತ್ತಿಗೆ ಪಾಕಿಸ್ತಾನದ ಬಗ್ಗೆ ಮೊದಲ ಘೋಷಣೆಗಳನ್ನು ಲಾಹೋರ್‍ನಲ್ಲಿ ಘೋಷಿಸಲಾಯಿತು. ಇದರಿಂದಾಗಿ ಕೋಮುವಾದಿಗಳ ಅಸ್ತಿತ್ವವು ಬೆಂಕಿಗೆ ಇಂಧನವನ್ನು ಸೇರಿಸಿದ ರೀತಿ ಬದಲಾವಣೆಯಾಗಲು ಪ್ರಾರಂಭಿಸಿತು.

ಪಂಜಾಬ್‍ನಲ್ಲಿ ಮುಸ್ಲಿಮ್ ಲೀಗ್ ಸರಕಾರ
ಮಾರ್ಚ್ 1947ರಲ್ಲಿ ಖಿಝರ್ ಹಯಾತ್ ಸರಕಾರವು ಕುಸಿಯಿತು. ಸರಕಾರದಲ್ಲಿ ಮುಸ್ಲಿಮ್ ಪರವಾದ ಮುಸ್ಲಿ ಲೀಗ್ ಬದಲಾವಣೆಗಳನ್ನು ನಡೆಸಲಾಯಿತು. ಆರು ಅಥವಾ ಏಳು ತಿಂಗಳಲ್ಲಿ ಇದು ಬಹಳ ಜನಪ್ರಿಯವಾಗತೊಡಗಿತು. ಇದು ಸಾಮುದಾಯಿಕ ಪ್ರಚಾರವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿತು. ಇದರಿಂದಾಗಿ ಮುಸ್ಲಿಮರ ಜೀವನವು ಮುಸ್ಲಿಮ್ ಲೀಗ್ ಸರಕಾರದಲ್ಲಿ ಉತ್ತಮವಾದುದು ಎಂದು ನಂಬಬಹುದು ಮತ್ತು ಹೀಗಾಗಿ ಪಾಕಿಸ್ತಾನದಲ್ಲಿ ಲಾಹೋರ್ ಸೇರ್ಪಡಿಸುವ ಹೋರಾಟ ಆರಂಭವಾಯಿತು.

ಪೊಲೀಸ್ ಪಾತ್ರ

ವಿಭಜನೆಗೆ ಮುಂಚೆ ಲಾಹೋರ್‍ನಲ್ಲಿ ಪೊಲೀಸರು ಮುಸ್ಲಿಮರಾಗಿದ್ದರು. ಆ ಸಮಯದಲ್ಲಿ ಮುಸ್ಲಿಮ್ ಪೊಲೀಸರು ಅತ್ಯಂತ ಪಕ್ಷಪಾತ ಪಾತ್ರವನ್ನು ವಹಿಸಿದೆ. ಸಿಖ್ಖರು ಮತ್ತು ಹಿಂದೂಗಳು  ವಿಶ್ವಾಸ ಕಳೆದುಕೊಂಡರು ಮತ್ತು ಹಿಂದೂಗಳು ಭಾರತಕ್ಕೆ ವಲಸೆ ಹೋಗಲು ಆರಂಭಿಸಿದರು. ಇದರಿಂದ ಜನಸಂಖ್ಯೆಯು ಲಾಹೋರ್‍ನಲ್ಲಿ ಕಡಿಮೆಯಾಗಲು ಪ್ರಾರಂಭಿಸಿತು. ಪಾಕಿಸ್ತಾನದ ಒಂದು ಭಾಗವೆಂದು ಹೇಳಿಕೊಳ್ಳುವಲ್ಲಿ ಹೆಚ್ಚು ಪ್ರಬಲವಾದ ಮುಸ್ಲಿಮ್ ಮಹಾನಗರ ಪ್ರಾರಂಭವಾಯಿತು.

ಕೋಮು ಸಂಘರ್ಷಗಳು ಮತ್ತು ವಿಭಜನಾ ಗಲಭೆಗಳು

ಹಿಂದೂ, ಮುಸ್ಲಿಮ್ ಮತ್ತು ಸಿಖ್ ಈ ಮೂರು ಪಂಗಡಗಳ ನಡುವೆ ಕ್ರಮೇಣವಾಗಿ ಆರಂಭವಾದ ಯುದ್ಧ ಅದಾಗಲೇ ಜೋರಾಗಿಯೇ ಆಗಲು ಶುರುವಾಯಿತು. ಇಸ್ಲಾಮ್ ಧರ್ಮದ ಗುರುವಿನ ಚೆಲ್ಲಾಟದ ಬಗ್ಗೆ ಒಬ್ಬ ಪತ್ರಕರ್ತನ ವರದಿಯ ಪ್ರಸಾರ ಮಾಡಿದ್ದ. ಅದೇ ದ್ವೇಷಕ್ಕಾಗಿ ಆ ಪತ್ರಕರ್ತನ ಮೇಲೆ ಒಬ್ಬ ಮುಸ್ಲಿಮ್ ಚೂರಿಯನ್ನು ಚುಚ್ಚುತ್ತಾನೆ. ಆ ಕ್ಷಣದಿಂದ ಹಿಂದೂ ಮುಸ್ಲಿಮರ ಕದನ ಶುರುವಾಗುತ್ತದೆ. ಆ ಎರಡು ವರ್ಷಗಳಲ್ಲಿ ಹಿಂದೂ ಮುಸ್ಲಿಮರ ಪರಿಸ್ಥಿತಿ ಬಹಳ ಗಂಭೀರವಾಗಿತ್ತು. ಸ್ವಲ್ಪ ಸಮಯದ ನಂತರ ಸಿಖ್ ಮತ್ತು ಮುಸ್ಲಿಮರ ನಡುವೆ ಯುದ್ಧ ಆರಂಭವಾಗುತ್ತದೆ. ಈ ಘಟನೆ ಧಾರ್ಮಿಕ ರಚನೆಯನ್ನು ಕದಡಿದವು. ಇದರಿಂದಾಗಿ ಒಂದು ಅಗಾಧವಾದ ತೆರೆಯುವಿಕೆಗೆ ಕಾರಣವಾಯಿತು. ನಂತರ ಕೋಮು ಗಲಭೆಗಳು ಹೆಚ್ಚಾದವು. ಮುಸ್ಲಿಮರಿಲ್ಲದ ನಿವಾಸಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ತಯಾರಾದವು. ಇದರಿಂದಾಗಿ ಹಲವಾರು ಹಿಂದುಗಳು ಮತ್ತು ಸಿಖ್ಖರು ಭಾರತಕ್ಕೆ ವಲಸೆಹೋಗಲು
ಪ್ರಾರಂಭಿಸುತ್ತಾರೆ.

ಮುಸ್ಲಿಮರ ಕಲ್ಪನೆಗೆ ಪಾಕಿಸ್ತಾನದ ಒಂದು ಭಾಗವು ಆಕರ್ಷಿತವಾಯಿತು ಏಕೆಂದರೆ ಅದು ಒಂದು ಇಸ್ಲಾಮಿಕ್ ರಾಜ್ಯವಾಗಿತ್ತು. ಹಾಗಾಗಿ ಅವರು ಪಾಕಿಸ್ತಾನದಲ್ಲಿ ಲಾಹೋರ್ ಅನ್ನು ಇಸ್ಲಾಮ್ ರಾಷ್ಟ್ರವನ್ನಾಗಿ ಮಾಡಲು ಇಡೀ ಹಿಂದೂ ಮತ್ತು ಸಿಖ್ಖರನ್ನು ಲಾಹೋರ್‍ನಿಂದ ಹೊರಹಾಕಲು ಶತ ಪ್ರಯತ್ನ ಮಾಡಿದ್ದರು. ಮುಸ್ಲಿಮ್ ಮತ್ತು ಮುಸ್ಲಿಮರಲ್ಲದ ಬಹುಪಾಲು ಪ್ರದೇಶಗಳನ್ನು ವಿಭಜಿಸುವಾಗ ಲಾಹೋರ್ ಮತ್ತು ಅದರ ಉಪನಗರದ ಪ್ರದೇಶಗಳು ಪಾಕಿಸ್ತಾನದ ಭಾಗವಾಗಲು ಕಾರಣವಾಯಿತು. ಲಾಹೋರ್ ಬಹುತೇಕ ಮುಸ್ಲಿಮರ ಪ್ರಾಬಲ್ಯದ ಪ್ರದೇಶವಾಗಿತ್ತು. ಲಾಹೋರ್ ಭಾರತದ ಭಾಗವಾಗಬೇಕು ಎನ್ನುವ ಉದ್ಧೇಶದಿಂದ ಕಾಂಗ್ರೆಸ್ ಸಿಖ್ ನಾಮಿನಿಗಳು ಶಿಫಾರಸ್ಸು ಮಾಡುತ್ತಾರೆ. ಮುಸ್ಲಿಮ್ ಲೀಗ್‍ನ ನಾಮ ನಿರ್ದೇಶಕರು ಲಾಹೋರ್ ಪಾಕಿಸ್ತಾನಕ್ಕೆ ಹೋಗಬೇಕೆಂದು ಶಿಫಾರಸ್ಸು ಮಾಡುತ್ತಾರೆ. ಆದರೆ ಕೊನೆಗೂ ಲಾಹೋರ್ ಭಾರತದ ಪಾಲಾಗದೆ ಅನ್ಯಾಯವಾಗಿ ಪಾಕಿಸ್ತಾನದ ಪಾಲಾಗುತ್ತದೆ

ಸಿಖ್ಖರ ಪವಿತ್ರ ನಗರವಾದ ಅಮೃತಸರವು ಭಾರತದಲ್ಲಿಯೇ ಉಳಿಯಿತು. ಯಾಕೆಂದರೆ ಅಮೃತಸರ ಜಿಲ್ಲೆಯು ಮುಸ್ಲಿಮರಲ್ಲದ ಬಹುಮತವನ್ನು ಹೊಂದಿತ್ತು.

-ಪವಿತ್ರ

Tags

Related Articles

Close