ಪ್ರಚಲಿತ

ವಿವೇಕಾನಂದರು ಚಿಕಾಗೋ ಪ್ರವಾಸಕ್ಕೂ ಮುಂಚೆ ಕರ್ನಾಟಕದ ಯಾವ ಪ್ರದೇಶಕ್ಕೆ ಭೇಟಿ ನೀಡಿದ್ದರು ಗೊತ್ತಾ? ಧನ್ಯವಾಯಿತು ಕರ್ನಾಟಕ!!

ನಿನ್ನೆ‌ ಕರ್ನಾಟಕದ ಬೆಳಗಾವಿಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ಸಿದ್ದರಾಮೇಶ್ವರ ಸಂಕಲ್ಪ ಯಾತ್ರೆಗೆ ದೆಹಲಿಯಿಂದಲೇ ಚಾಲನೆ ನೀಡಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು “ನವಭಾರತ ಕಟ್ಟುವುದಕ್ಕೆ ಇಂದೇ ಸಂಕಲ್ಪ ಮಾಡುವಂತೆ ದೇಶದ ಯುವಜನತೆಗೆ ಕರೆಕೊಟ್ಟರು.

ಕಳೆದ ಬಾರಿ ಬೆಳಗಾವಿಯಲ್ಲಿ ಅನುಭವ ಮಂಟಪ ಲೋಕಾರ್ಪಣೆ ಸಂದರ್ಭದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಮತ್ತು ಬಸವಣ್ಣನವರ ಹೆಸರು ಉಚ್ಚರಿಸುವ ಮೂಲಕ ನೆರೆದಿದ್ದ ಸಾವಿರಾರು ಜನರಲ್ಲಿ ಸಂಚಲನ ಮೂಡಿಸಿದ್ದರು.
ಇದೀಗ ನಿನ್ನೆ ಪುನಃ ರಾಣಿ ಚೆನ್ನಮ್ಮ ,ಸಂಗೊಳ್ಳಿ ರಾಯಣ್ಣ ಮತ್ತು ಬಸವಣ್ಣರಿಗೆ ” ನಮೋ” ಎಂದ ಪ್ರಧಾನಿ ಮೋದಿಯವರು ಮತ್ತೊಮ್ಮೆ ಕರ್ನಾಟಕದ ಇತಿಹಾಸದ ಮಹಾನುಭಾವರನ್ನು ನೆನೆದರು.

“ಕರ್ನಾಟಕದ ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ನಿಗೆ ಜನ್ಮ‌ ನೀಡಿದ ವೀರ ನೆಲ.ಸ್ವಾಮಿ ವಿವೇಕಾನಂದರು ಚಿಕಾಗೋಗೆ ಹೋಗುವ ಮೊದಲು ಇದೇ ಬೆಳಗಾವಿಗೆ ಬಂದು ಹೋಗಿದ್ದರು” ಎಂದಾಗ ನೆರೆದಿದ್ದ ಸಾವಿರಾರು ಜನರ ಹರ್ಷೋಧ್ಘಾರ ಮುಗಿಲು ಮುಟ್ಟಿತ್ತು.

“ಶ್ರೀ ಮಠದ ಆವರಣದಲ್ಲಿ ಈಗ ಹತ್ತು ಸಾವಿರ ಸ್ವಾಮಿ ವಿವೇಕಾನಂದರ ವೇಷಧಾರಿಗಳು ಇದ್ದಾರೆ.
ಆದರೆ ಮುಂದೆ ಇದು ಲಕ್ಷಕ್ಕೆ ಏರಲಿದೆ.ಇಷ್ಟು ಪ್ರಮಾಣದಲ್ಲಿ ಸ್ವಾಮಿ ವಿವೇಕಾನಂದರ ವೇಷಧಾರಿಗಳನ್ನು ನೋಡಿ ರೋಮಾಂಚನವಾಗುತ್ತಿದೆ, ಇದೇ ರೀತಿ ವಿವೇಕಾನಂದರ ಆದರ್ಶವೂ ದೇಶದ ಯುವಕರಲ್ಲಿ ಬೆಳೆಯಲಿ” ಎಂದು ನೆರೆದಿದ್ದ ಸಾವಿರಾರು ಸಂಖ್ಯೆಯ ಜನರಿಗೆ ಶುಭಹಾರೈಸಿದರು.

“ಸಮಾನತೆಯ ದ್ರಷ್ಠಿಯಿಂದ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಎಲ್ಲಾ ವರ್ಗದ ಜನರಿಗೂ ಅಭಿಪ್ರಾಯ ಮಂಡಿಸಲು ಅವಕಾಶ ಇತ್ತು. ಸಮಾಜ ಬಹಿಷ್ಕರಿಸಿದ ಮಹಿಳೆಯರಿಗೂ ಮಾತನಾಡಲು ಇಲ್ಲಿ ವೇದಿಕೆ ಇತ್ತು.ಈಗ ಸಿದ್ಧೇಶ್ವರ ಸ್ವಾಮಿಜಿ ಕನಸಿನ ಈ ಅನುಭವ ಮಂಟಪದಲ್ಲಿ ಮಹಿಳೆಯರಿಗೂ ಸಮಾನ ಅವಕಾಶ ಸಿಗಬೇಕು.ಇದು ದೇಶಕ್ಕೆ ಕೊಡುಗೆಯಾಗಿ ನೀಡಲಿ” ಎಂದು ಬಸವಣ್ಣನ ಅನುಭವ ಮಂಟಪದ ಕಲ್ಪನೆಯಲ್ಲಿ ನಿರ್ಮಿಸಿದ ದೇಶದ ಮೊದಲ ಅನುಭವ ಮಂಟಪಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶುಭ ಹಾರೈಸಿದರು.

ಇದೇ ವೇಳೆ ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯುವವರ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿಯವರು ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಲಿಂಗಾಯತ ಧರ್ಮ ಮಾನ್ಯತೆ ಹೋರಾಟ ಮತ್ತು ರಾಜ್ಯ ಸರಕಾರದ ಜಾತಿ ಆಧಾರಿತ ನಡೆಯನ್ನು ಪರೋಕ್ಷವಾಗಿ ವಿರೋಧಿಸಿದರು.

“2022ರ ವೇಳೆಗೆ ಜಾತಿ ವ್ಯವಸ್ಥೆ ಇಲ್ಲದ ನವ ಭಾರತ ನಿರ್ಮಾಣಕ್ಕೆ ದೇಶದ ಪ್ರತಿಯೊಬ್ಬರು ಕೈಜೋಡಿಸಬೇಕು.ಮತ್ತು ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿರುವವರ ವಿರುದ್ಧ ಹೋರಾಡಬೇಕು” ಎಂದು ಕರೆಕೊಟ್ಟರು.

“ಶ್ರೀ ಮಠದ ಆವರಣದಲ್ಲಿ ನಡೆದ ಸಹಸ್ರ-ಸಹಸ್ರ ವಿವೇಕ ಆವಾಹನ ಕಾರ್ಯಕ್ರಮವು ಮೂರು ವಿಶ್ವ ದಾಖಲೆಗಳನ್ನು ನಿರ್ಮಾಣ ಮಾಡಿದೆ…!”

೧. ಈ ಕಾರ್ಯಕ್ರಮದಲ್ಲಿ ಮಕ್ಕಳು ಯುವಕರು ಸೇರಿದಂತೆ 10,054 ವಿವೇಕ ವೇಷದಾರಿಗಳು ವಿಶ್ವದಾಖಲೆ ನಿರ್ಮಿಸಿದರು.
೨.ಅದೇ ಯುವಕರು 880 ಭಾರತೀಯ ಜಾನಪದ ಕಲಾವಿದರ ಜೊತೆ ವಿವೇಕವಾಣಿಗೆ ಧ್ವನಿಗೂಡಿಸಿದರು.ಅದೂ ಕೂಡ ದಾಖಲೆ ನಿರ್ಮಿಸಿತು.
೩.ಇದೇ ಕಾರ್ಯಕ್ರಮದಲ್ಲಿ 700 ಸ್ವಾಮೀಜಿಗಳೀಗೆ ಏಕಕಾಲದಲ್ಲಿ ಪಾದಪೂಜೆ ನಡೆಸಿದ್ದು ಇದೂ ಕೂಡ ದಾಖಲೆ ಪುಟ ಸೇರುವ ನಿರೀಕ್ಷೆಯಿದೆ.

–ಅರ್ಜುನ್

Tags

Related Articles

Close