ಪ್ರಚಲಿತ

ಸಾಯುವ ಮುಂಚೆ ನಿಜಕ್ಕೂ ಮಹಾತ್ಮ ಗಾಂಧಿ ‘ಹೇ ರಾಮ್” ಎಂದಿದ್ದರೇ?! ಯಾರೂ ಹೇಳದ ಸತ್ಯವಿಷಯವನ್ನು ಬಹಿರಂಗಪಡಿಸಿದ ಗೋಪಾಲ್ ಗೋಡ್ಸೆ!

TIME ಪತ್ರಕರ್ತನೊಬ್ಬ ಗೋಡ್ಸೆಯ ಜೊತೆಗೆ ಸಂದರ್ಶನಕ್ಕಿಳಿದಾಗ, ಇಡೀ ಭಾರತ ದಂಗು ಬಡಿದಿತ್ತು!

ಮಹಾತ್ಮಾ ಎಂದರೆ, ‘ಮಹಾನ್ ಆತ್ಮ!’ ಪರಿಶುದ್ಧ ಆತ್ಮ ಎಂದರ್ಥ!

ಆದರೆ, “ನಿಜಕ್ಕೂ ಮಹಾತ್ಮಾ ಗಾಂಧಿ ಈ ಹೆಸರು ಗಳಿಸಿಕೊಳ್ಳುವಷ್ಟು ಅರ್ಹತೆ ಇದ್ದವರಾ?! ನಿಜಕ್ಕೂ ಅಹಿಂಸೆಯ ಪ್ರತಿರೂಪವಾಗಿದ್ದರಾ?! ” ಎಂಬ ಪ್ರಶ್ನೆಗಳನ್ನು ಗೋಡ್ಸೆಯವರಿಗೆ ಕೇಳಿ ನೋಡಿ! ಅವರು ಸಾರಾಸಗಟಾಗಿ, ಯಾವುದೇ ಎರಡನೇ ಯೋಚನೆಯಿಲ್ಲದೇ, ತಿರಸ್ಕರಿಸಿ ನಿರಾಕರಿಸಿ ಬಿಡುತ್ತಾರೆ!

ಗಾಂಧೀ ಹತ್ಯೆಯ ಆರೋಪಿಯಾದ ನಾಥೂರಾಮ್ ಗೋಡ್ಸೆಯ ಸಹೋದರರಾದ ಗೋಪಾಲ್ ಗೋಡ್ಸೆಯನ್ನೂ ಸಹ, ಹತ್ಯೆಗೆ ಸಹಕಾರ ನೀಡಿದ್ದರೆಂಬ ಆಪಾದನೆ ಮೇರೆಗೆ ಬಂಧಿಸಲಾಗಿತ್ತು. ಅಲ್ಲದೇ, 18 ವರ್ಷಗಳ ಕಾಲ ಕಠಿಣ ಕಾರಾಗೃಹ ವಾಸವನ್ನೂ ಅನುಭವಿಸಿದರು. ತದನಂತರ, ಸಹೋದರನ ಬಗೆಗಿನ ನೆನಪುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ ಗೋಪಾಲ್ ಗೋಡ್ಸೆಯವರು, ಸಮಜದ ‘ಗಾಂಧೀ ಹಂತಕರು’ ಎಂಬ ಬಿರುದಿಗೆ ಒಳಪಟ್ಟರೂ, ಸಿದ್ಧಾಂತವನ್ನು ತ್ಯಜಿಸದಿದ್ದ ಗೋಡ್ಸೆಯವರು ಹೇಳಿದ್ದು ಒಂದೇ ಮಾತು! ‘ರಾಷ್ಟ್ರದ ವಿಚಾರವಾಗಿ ಮಹಾತ್ಮನ ಹತ್ತಿರವೂ ರಾಜಿಯ ಮಾತೇ ಇಲ್ಲ’ ಎಂದು!
TIME ಪತ್ರಕರ್ತನೊಬ್ಬ ಗೋಡ್ಸೆಯ ಜೊತೆಗೆ ಸಂದರ್ಶನಕ್ಕಿಳಿದಾಗ, ಇಡೀ ಭಾರತವೊಮ್ಮೆ ಗೋಪಾಲ ಗೋಡ್ಸೆಯವರ ವಿಚಾರಸರಣಿಗೆ ದಂಗು ಬಡಿದಿತ್ತು!

“ಗೋಡ್ಸೆಯವರ ಪ್ರಕಾರ, ಅವರು ತುಂಬಾ ಹೆಮ್ಮೆ ಪಟ್ಟ ದಿನ ಜನವರಿ 30, 1948!! ತಾನೇನು ಸಾಧಿಸಿದ್ದೇನೆ ಎಂಬಂತಹ ಮುಖಭಾವ ಅವರಲ್ಲಿ ಕಾಣುತ್ತಿತ್ತು. ಅವತ್ತು, ಗಾಂಧೀಯ ಪ್ರಾರ್ಥನಾ ಮಂದಿರದಲ್ಲಿ ಬಾಂಬು ಸ್ಫೋಟಿಸಿದ್ದ ಮದನ್ ಲಾಲ್ ಪಹ್ವಾ, ಗಾಂಧಿಗಿಂತ ಕೇವಲ 50 ಮೀಟರ್ ಗಳಷ್ಟೇ ದೂರದಲ್ಲಿದ್ದರು. ಸ್ಫೋಟಗೊಂಡ ನಂತರ ಅಲ್ಲಿಯೇ ಸಿಕ್ಕಿಬಿದ್ದರು ಮದನ್ ಲಾಲ್ ಪಹ್ವಾ! ನಾಥೂರಾಮ್ ಗೋಡ್ಸೆ ತಕ್ಷಣವೇ ಕಾರ್ಯಚರಣೆಯನ್ನು ಮುಂದುವರೆಸಿದರು. ಕೈಯ್ಯಲ್ಲಿ ಪಿಸ್ತೂಲು ಹಿಡಿದುಕೊಂಡು ಗಾಂಧಿಯ ಬಳಿ ಧಾವಿಸಿದರು. ಗಾಂಧಿಯನ್ನು ಸಮೀಪಿಸುವಗರೆಗೂ ಸಹ, ನಾಥೂರಾಮ್ ಹೇಗೆ ಸಮಾಜ ಗಾಂಧಿಯವರ ಮೂರ್ಖ ಸಿದ್ಧಾಂತಗಳನ್ನು ಅಂಧವಾಗಿ ಒಪ್ಪಿಕೊಂಡಿದೆ, ಗಾಂಧಿಯನ್ನು ಹತ್ಯೆಗೈದದ್ದೇ ಆದರೆ ಸಮಾಜ ಅವರನ್ನು ಯಾವ ರೀತಿ ನೋಡಬಹುದು, ಹೇಗೆ ಅವರನ್ನು ಬದುಕನ್ನೇ ಕಸಿಯಬಹುದು ಎಂಬೆಲ್ಲ ಯೋಚನೆಗಳಿಗೆ ಸರಿಯಾಗಿ ಉತ್ತರ ಕಂಡುಕೊಂಡೇ ಧೃಢ ಚಿತ್ತರಾಗಿದ್ದರು ಗೋಡ್ಸೆ ಸಹೋದರರು! ಸಮಾಜ ಮುಂದೇನು ಮಾಡಬಹುದು ಎಂಬ ಪ್ರಶ್ನೆ ಅವರಲ್ಲಿ ಕೊರೆಯುತ್ತಿರಲಿಲ್ಲ. ಬದಲಾಗಿ, ರಾಷ್ಟ್ರ ಹಿತಕ್ಕೋಸ್ಕರ ಯೋಜಿಸಿದ ಕಾರ್ಯ ತಂತ್ರವೇ ಅವರಲ್ಲಿ ಸುಳಿ ಸುಳಿಯಾಗಿ ತಿರುಗುತ್ತ ಗಮ್ಯ ಮುಟ್ಟಲು ಹವಣಿಸುತ್ತಿತ್ತು.”

“ಗೋಡ್ಸೆಯವರ ಪ್ರಕಾರ, ಗಾಂಧಿ ಒಬ್ಬ ಅಪ್ಪಟ ಪಕ್ಷಪಾತಿಯಾಗಿದ್ದ! ಹಿಂದೂ ವಿರೋಧಿಯಾಗಿದ್ದ! ಹಿಂದುಗಳ ಹೆಣ ಬಿದ್ದ ಹಾಗೆ, ಗಾಂಧಿಯ
ಜಾತ್ಯಾತೀತವಾದ ಸಿದ್ಧಾಂತದ ಬಾವುಟ ಪಟಪಟ ಹಾರುತ್ತಿತ್ತು ಆತನ ಅಹಿಂಸೆ ಹಾಗೂ ಶಾಂತಿಯ ಸಿದ್ಧಾಂತಗಳು ಸುಳ್ಳಾಗಿದ್ದವು. ತನ್ನ ವ್ಯಕ್ತಿತ್ವವನ್ನು
ಪತ್ರಿಕಾಗೋಷ್ಠಿಯನ್ನು ಕರೆ ಕರೆದು ಪಸರಿಸುತ್ತಿದ್ದ ಗಾಂಧಿ, ಕೇವಲ ಪತ್ರಿಕೆಯವರು ನೀಡಿದ ವರದಿಗೆ ಸೀಮಿತವಾಗಷ್ಟೇ ಸಮಾಜ ಆಕರ್ಷಿತವಾಗಿತ್ತು. ಸಂತನ ಹಾಗಿರುವ ತತ್ವವನ್ನು ಬಳಸಿದ ಗಾಂಧಿ ಕೇವಲ ಸಮಾಜದ ಆಕರ್ಷಣೆಯ ಬಿಂದುವಾಗ ಬೇಕೆಂದಷ್ಟೇ ಯೋಚಿಸುತ್ತಿದ್ದತಂಹ ವ್ಯಕ್ತಿ.!”

“ಅದರಲ್ಲಿಯೂ, ಗಾಂಧಿಯ ಬಗೆಗೆ ಹರಡಿದ ಅತ್ಯಂತ ಹೀನಾಯವಾದ ವೈಭೋಗತನದ ಪರಾಕಾಷ್ಠೆಯ ಸುಳ್ಖೆಂದರೆ, ಗಾಂಧಿಯ ಬದುಕಿನ ಕೊನೆಯ ಸಾಲುಗಳು ‘ಹೇ ರಾಮ್ ‘ ಎಂಬುದು.! ಯಾಕೆಂದರೆ, ನಾಥೂರಾಮ್ ಬಳಸಿದ್ದು ಸ್ವಯಂ ಚಾಲಿತವಾದ ಪಿಸ್ತೂಲು. ಒಂದು ಸಲ, ಟ್ರಿಗ್ಗರ್ ಒತ್ತಿದರೆ, ಕ್ಷಣಗಳಲ್ಲಿ ಅಷ್ಟೂ ಬುಲೆಟ್ ಗಳು ಹೊರ ಬಿದ್ದು ಗುರಿ ಸೇರುತ್ತದೆ. ಯಾವಾಗ, ಬುಲೆಟ್ ಹೃದಯದಂತಹ ಅತ್ಯಂತ ಸೂಕ್ಷ್ಮವಾದ ಭಾಗಕ್ಕೆ ತಗುಲಿದಾಗ ಮಿಲಿ ಸೆಕೆಂಡ್ ನಲ್ಲಿ ಆತ ಪ್ರಜ್ಞೆ ಕಳೆದುಕೊಳ್ಳುತ್ತಾನೆ. ಪದಗಳ ಉಚ್ಚರಿಸುವಷ್ಟೂ ಪ್ರಜ್ಞೆಯೇ ಆತನಿಗಿರುವುದಿಲ್ಲ. ಹಾಗಿದ್ದಾಗ, ಪ್ರಜ್ಞೆ ಕಳೆದುಕೊಂಡು ಸಾಯುತ್ತಿರುವ ವ್ಯಕ್ತಿ ‘ಹೇ ರಾಮ್’ ಎಂದು ಉಚ್ಛರಿಸಲು ಹೇಗೆ ಸಾಧ್ಯ?! ಗಾಂಧಿ ಸಾಯುವಾಗ ಹೇ ರಾಮ್ ಎಂದಿರಲೇ ಇಲ್ಲ! ನಾಥೂರಾಮ್ ಕೂಡಾ ಇದನ್ನು ಒಪ್ಪುವುದಿಲ್ಲ. ಹೇ ರಾಮ್ ಎಂಬುವುದು, ಈ ಪತ್ರಿಕೆಯವರು ಹಿಂದೂಗಳನ್ನು ಮರುಳು ಮಾಡಲು ಸತ್ತ ಗಾಂಧಿಯ ಬಾಯೊಳಗೆ ಒತ್ತಾಯ ಪೂರ್ವಕವಾಗಿ ತುರುಕಿಂದತಹ ಶಬ್ದವಷ್ಟೇ!!”

Related image

“ಯಾವಾಗ ನಾಥೂರಾಮ್, ಗಾಂಧಿಯ ಜೊತೆ ಒಬ್ಬಳು ಹುಡುಗಿಯ ಜೊತೆ ಬರುತ್ತಿರುವುದನ್ನು ಕಂಡರೋ, ಕ್ಷಣಕಾಲ ಹೆದರಿದರು. ಎಲ್ಲಿ ತಾನು ಮಾತೃ ಸ್ವರೂಪಳಿಗೆ ಗಾಯ ಮಾಡುತ್ತೇನೋ ಎಂಬ ಆತಂಕ ಒಡಮೂಡಿತು. ಅದಕ್ಕೇ, ಗಾಂಧಿಯ ತೀರಾ ಸಮೀಪಕ್ಕೆ ಹೋಗಿ, ಆಕೆಯನ್ನು ಪಕ್ಕಕ್ಕೆ ತಳ್ಳಿ ಗಾಂಧಿಗೆ ಗುರಿಯಿಟ್ಟರು! ಇದೊಂದೇ ಒಂದು ಸತ್ಯ ಸಾಕು, ನಾಥೂರಾಮ್ ಗೋಡ್ಸೆ ಎಂತಹ ಪರಿಶುದ್ಧ ವ್ಯಕ್ತಿಯಾಗಿದ್ದ ಎಂದು!”

” ದುರಂತವೆಂದರೆ, ಅವತ್ತಿದ್ದ ಆಡಳಿತ ಪಕ್ಷ ಗಾಂಧಿಯ ಸಾವನ್ನೇ ದೇಶಕ್ಕೆ ದೊಡ್ಡ ನಷ್ಟ ಎಂಬಂತೆ ಪ್ರತಿಬಿಂಬಿಸಿತು. ಆದರೆ, ಭಾರತ ವಿಭಜನೆಯಾಗಲು ಗಾಂಧಿಯೇ ಕಾರಣವಾಗಿದ್ದರೆಂಬ ಯಾವ ಸತ್ಯವೂ ಅವರಿಗೆ ಬೇಕಾಗಲಿಲ್ಲ. ಭಾರತಕ್ಕಾದ ಬಹುದೊಡ್ಡ ನಷ್ಟ ವಿಭಜನೆ ಎಂಬುದನ್ನು ಅರಿಯಲಿಲ್ಲ. ಇದೇ ಗಾಂಧಿ, ಮುಸ್ಲಿಮರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ, ಪ್ರಾಣಕ್ಕೆ ಸಂಚಕಾರ ತರುವಷ್ಟಿದ್ದ ಮಳೆ-ಚಳಿಗಾಳಿಯನ್ನು ಲೆಕ್ಕಿಸದೇ, ಜುಮ್ಮಾ ಮಸೀದಿಯಿಂದ ಹಿಂದೂಗಳನ್ನು ಹೊರಗಟ್ಟಿದ್ದ. ದಬ್ಬಿಸಿಕೊಂಡ ಹಿಂದೂಗಳು ದೆಹಲಿಯ ಬೀದಿಗಳಲ್ಲಿ, ಚಳಿ ಗಾಳಿಯ ಜೊತೆಗೆ ಆಗಸವನ್ನು ಸೂರು ಮಾಡಿಕೊಂಡು ಬದುಕಬೇಕಾಯಿತು. ಅದೆಲ್ಲ ಲೆಕ್ಕಕ್ಕೇ ಬರಲಿಲ್ಲ! ಆ ಸಂದರ್ಭದಲ್ಲಿ ಅದೆಷ್ಟೋ ಹಿಂದೂಗಳ ಸಾವು ನೋವಾಯಿತು! ಕ್ರೌರ್ಯ ನಡೆದು ಏಳು ದಶಕಗಳಾಯಿತಾದರೂ, ನಾವಿನ್ನೂ ಗಾಂಧಿಯಂತಹ ಒಬ್ಬ ವೇಷಧಾರಿ ನಡೆಸಿದ ಮಾರಣಹೋಮವನ್ನು ಬದಿಗಿಟ್ಟು, ಮಹಾತ್ಮಾ ಎಂದು ಕೊಂಡಾಡುತ್ತಲೇ ಬಂದೆವು!”

:: ಗೋಪಾಲ್ ಗೋಡ್ಸೆ

– ತಪಸ್ವಿ

Tags

Related Articles

Close