ಪ್ರಚಲಿತ

ಸಿದ್ದರಾಮಯ್ಯನವರಿಗೆ ನಡುಕ ಹುಟ್ಟಿಸಿದೆ ಮೋದಿ ಮೋಡಿ!! ಗುಪ್ತಚರ ಇಲಾಖೆಗೆ ಮೊರೆ ಹೋದ ಸಿಎಂ ಸಿದ್ದು!! ಅಷ್ಟಕ್ಕೂ ಸಿಎಂ ಬೆಚ್ಚಿ ಬಿದ್ದೀರೋದ್ಯಾಕೆ ಗೊತ್ತಾ ?!!

ಕೇವಲ ನರೇಂದ್ರ ಮೋದಿಯವರ ಮೋಡಿಗೆ ನಡುಗಿ ಹೋಗಿರುವ ಸಿ ಎಂ ಸಿದ್ದರಾಮಯ್ಯನವರು ಗುಪ್ತಚರ ಇಲಾಖೆಗೆ ಮತ್ತೊಮ್ಮೆ ಮೊರೆ ಹೋಗಿರುವುದು ನಿಜಕ್ಕೂ ಕೂಡ ಆಶ್ಚರ್ಯಕರ ಸಂಗತಿ. ಯಾಕೆಂದರೆ ಈಗಾಗಲೇ ರಾಜ್ಯ ಸರ್ಕಾರವು ಗುಪ್ತಚರ ಇಲಾಖೆಯ ಆಂತರಿಕ ವರದಿಯನ್ನು ತರಿಸಿಕೊಂಡಿದ್ದು, ತೀವ್ರ ಕುತೂಹಲವನ್ನು ಸೃಷ್ಟಿಸಿತ್ತು. ಆದರೆ ಇದೀಗ ನರೇಂದ್ರ ಮೋದಿಯವರ ಸಿಂಹದ ನಡಿಗೆಗೆ ಭಯಭೀತರಾಗಿ ಗುಪ್ತಚರ ಇಲಾಖೆಗೆ ಮೊರೆ ಹೋಗಿದ್ದಾರೆ ಎನ್ನುವ ಸ್ಫೋಟಕ ಸುದ್ದಿ ಹೊರಬಿದ್ದಿದೆ.

ಈಗಾಗಲೇ ರಾಜ್ಯ ಸರ್ಕಾರವು ತರಿಸಿಕೊಂಡ ಗುಪ್ತಚರ ಇಲಾಖೆಯಿಂದಲೇ ಬಿಡುಗಡೆ ಮಾಡಿರುವ ಮಾಹಿತಿಯಿಂದಾಗಿ ಸಿದ್ದರಾಮಯ್ಯ ಸರ್ಕಾರವೇ ಗಡಗಡ ನಲುಗಿ ಹೋಗಿದ್ದು, ಉನ್ನತ ಮೂಲಗಳ ಪ್ರಕಾರ, ಸದ್ಯದ ಮಟ್ಟಿಗೆ ಕಾಂಗ್ರೆಸ್ ಬಿಜೆಪಿಗಿಂತ ಒಂದು ಕೈ ಮೇಲಿದ್ದರೂ ಕೂಡ ಬಿಜೆಪಿ ಪುಟಿದೇಳುವ ಸಾಧ್ಯತೆ ಇರುವ ಬಗ್ಗೆ ಆ ವರದಿ ತಿಳಿಸಿತ್ತು!!

Image result for siddaramaiah shocks

ಆದರೆ ಇದೀಗ ಮತ್ತೊಮ್ಮೆ ನರೇಂದ್ರ ಮೋದಿಯವರ ಸಿಂಹದ ನಡಿಗೆಗೆ ಭಯಭೀತರಾಗಿರುವ ಸಿದ್ದರಾಮಯ್ಯನವರು ಗುಪ್ತಚರ ಇಲಾಖೆಯ ಮೊರೆ ಹೋಗಿದ್ದಲ್ಲದೇ ಮೋದಿ ಮೋಡಿಯಿಂದಾಗಿ ಸಿದ್ದರಾಮಯ್ಯನವರು ನಲುಗಿ ಹೋಗಿರುವುದಾದರೂ ಯಾಕೆ ಎನ್ನುವ ಪ್ರಶ್ನೆ ಇದೀಗ ಮೂಡಿದೆ!! ಹೌದು…. ಕಳೆದ ನವೆಂಬರ್ 2ರಂದು ಬೆಂಗಳೂರಿನಲ್ಲಿ ಆರಂಭವಾದ ಪರಿವರ್ತನಾ ಯಾತ್ರೆ ಬುಧವಾರದ ವೇಳೆಗೆ 220 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದ್ದು, ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಮಾವೇಶದೊಂದಿಗೆ ಮುಕ್ತಾಯಗೊಳ್ಳುತ್ತದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಬೇಕು ಎಂಬ ಉದ್ದೇಶದಿಂದ ಯಾತ್ರೆಯ ಅಧಿಕೃತ ಸಮಾರೋಪವನ್ನು ಫೆಬ್ರವರಿ 4ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗುತ್ತದೆ.

ಆದರೆ ಫೆಬ್ರವರಿ 4 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶದ ಬಗ್ಗೆ ರಾಜ್ಯ ಸರ್ಕಾರಕ್ಕೆ ಆತಂಕ ಎದುರಾಗಿದೆ. ಅಷ್ಟೇ ಅಲ್ಲದೇ, ಸಮಾವೇಶದ ಕುರಿತು ಸಮಗ್ರ ಮಾಹಿತಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಗುಪ್ತಚರ ಇಲಾಖೆಗೆ ಸೂಚನೆ ನೀಡಿದ್ದಾರೆ.

ಇನ್ನು, ಫೆ. 4ರಂದು ಮಹದಾಯಿ ನದಿನೀರು ಹಂಚಿಕೆ ವಿವಾದ ಮುಂದಿಟ್ಟುಕೊಂಡು, ಕನ್ನಡಪರ ಸಂಘಟನೆಗಳು ಅಂದು ಬೆಂಗಳೂರು ಬಂದ್‍ಗೆ ಕರೆ ನೀಡಿವೆ. ಹೀಗಾಗಿ ಖುದ್ದು ಪ್ರಧಾನಿಯೇ ಬರುತ್ತಿರುವುದರಿಂದ ಕಾರ್ಯಕ್ರಮಕ್ಕೆ ಯಾವುದೇ ರೀತಿ ತೊಂದರೆಯಾಗದಂತೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಬಿಜೆಪಿ ಹರಸಾಹಸ ಪಟ್ಟಿದೆ. ಇದಕ್ಕಾಗಿ ವಿಶೇಷ ತಂಡಗಳನ್ನು ರಚಿಸಿದ್ದು , ಅಂದು ಕಾರ್ಯಕ್ರಮಕ್ಕೆ ಪ್ರತಿ ಜಿಲ್ಲೆಯಿಂದ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಕರೆತರಲು ಜಿಲ್ಲಾ ಮುಖಂಡರಿಗೆ ಸೂಚಿಸಲಾಗಿದೆ. ಬಿಜೆಪಿಯ ಶಕ್ತಿ ಪ್ರದರ್ಶನವೆಂದೇ ಹೇಳಲಾಗುತ್ತಿರುವ ಪರಿವರ್ತನಾ ಯಾತ್ರೆಗೆ ಸುಮಾರು ಐದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಸೇರುವ ಸಂಭವವಿದೆ.

Image result for BJP on mahadayi

ಹಾಗಾಗಿ, ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶದ ಬಗ್ಗೆ ಸರ್ಕಾರಕ್ಕೆ ಆತಂಕ ಎದುರಾಗಿದ್ದು, ಸಮಾವೇಶದ ಕುರಿತು ಸಮಗ್ರ ಮಾಹಿತಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಗುಪ್ತಚರ ಇಲಾಖೆಗೆ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೇ, ಪ್ರಧಾನಿ ಮೋದಿ ಅವರು ಭಾನುವಾರ ಅರಮನೆ ಮೈದಾನದಲ್ಲಿ ನಡೆಯುವ ಪರಿವರ್ತನಾ ಯಾತ್ರೆಯ ಸಮಾರೋಪ ಹಾಗೂ ಚುನಾವಣಾ ಪ್ರಚಾರದ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ಈ ಸಮಾವೇಶದಲ್ಲಿ 4 ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಿದ್ದು, ಸಮಾವೇಶನದಲ್ಲಿ 2 ಲಕ್ಷ ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ.

ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಗುಪ್ತಚರ ಇಲಾಖೆಗೆ ಫೆ. 1 ರಂದು ವರದಿ ನೀಡುವಂತೆ ಸೂಚಿಸಿದ್ದಾರೆ. ಗುಪ್ತಚರ ಇಲಾಖೆ 30 ಜಿಲ್ಲೆಗಳಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದು, ವರದಿ ಸಿದ್ಧಪಡಿಸುತ್ತಿದೆ ಎಂದು ತಿಳಿದು ಬಂದಿದೆ. ಇನ್ನು ಸಮಾವೇಶಕ್ಕೆ ಜನರನ್ನು ಕರೆತರಲು ಬಿಜೆಪಿ ಬೆಂಗಳೂರು ಒಂದರಲ್ಲೇ 17 ಡಿಪೆÇೀಗಳಲ್ಲಿ ತಲಾ 200 ಬಸ್ ಗಳಂತೆ ಒಟ್ಟು 3400 ಬಸ್ ಗಳನ್ನು ಬುಕ್ ಮಾಡಿದೆ. ಬಿಎಂಟಿಸಿ ಬಸ್ ಗಳಲ್ಲದೆ ಕೆ.ಎಸ್.ಆರ್.ಟಿ.ಸಿಯ 4 ವಿಭಾಗಗಳಲ್ಲೂ ಬಿಜೆಪಿ ಬಸ್ ಬುಕ್ ಮಾಡಿದ್ದು, ಸಮಾವೇಶಕ್ಕೆ ಭರ್ಜರಿ ಸಿದ್ಧತೆ ನಡೆಸಿದೆ.

Image result for narendra modi

ಈ ಕುರಿತ ಮಾಹಿತಿ ಕಲೆ ಹಾಕಿರುವ ಸಿ ಎಂ ಸಿದ್ದರಾಮಯ್ಯನವರಿಗೆ, ಪ್ರಧಾನಿ ನರೇಂದ್ರ ಮೋದಿ ಅವರ ಈ ಸಮಾವೇಶದಿಂದ ಆತಂಕ ಎದುರಾಗಿರುವುದಂತೂ ಅಕ್ಷರಶಃ ನಿಜ. ಅಷ್ಟೇ ಅಲ್ಲದೇ, ಹೆಚ್ಚಿನ ಮಾಹಿತಿಗಾಗಿ ಗುಪ್ತಚರ ಇಲಾಖೆಯ ಮೊರೆ ಹೋಗಿರುವುದನ್ನು ಕಂಡರೆ ಕರ್ನಾಟಕದಲ್ಲಿ ಮೋದಿ ಹವಾ ಸಿದ್ದರಾಮಯ್ಯನವರನ್ನೂ ಕೂಡ ನಡುಕ ಹುಟ್ಟಿಸಿರುವುದಂತೂ ಖಂಡಿತಾ!!

– ಅಲೋಖಾ

Tags

Related Articles

Close