ಅಂಕಣ

ಸುನಿಲ್ ಗವಾಸ್ಕರ್ ಎಂಬ ಪ್ರಚಂಡ ಕ್ರಿಕೆಟಿಗನ ಸಾಧನೆಗೆ ಅಮೇರಿಕಾ ತಲೆಬಾಗಿದ್ದು ಹೇಗೆ ಗೊತ್ತೇ?

ಕ್ರೀಡೆ ಎಂದಾಕ್ಷಣ ನೆನಪಾಗುವುದೇ ಕ್ರಿಕೆಟ್!! ಅದರಲ್ಲೂ ಕ್ರಿಕೆಟ್ ದಿಗ್ಗಜರೆನಿಸಿದ ಅದೆಷ್ಟೋ ಕ್ರಿಕೆಟಿಗರು ತಮ್ಮ ಅಮೋಘ ಸಾಧನೆಯಿಂದ ವಿಶ್ವ ಪ್ರಸಿದ್ದಿಯನ್ನು
ಪಡೆದುಕೊಂಡಿದ್ದಾರೆ. ಅದೇ ರೀತಿ ಕ್ರಿಕೆಟ್ ದಂತಕಥೆ ಸುನೀಲ್‍ಗವಾಸ್ಕರ್ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಒಂದು ದೊಡ್ಡ ಹೆಸರು! ವೇಗದ ಬೌಲಿಂಗ್ ಎದುರಿಸುವ ನೈಪುಣ್ಯತೆಯಿಂದ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರಾದ ಹಿರಿಯ ಕ್ರಿಕೆಟಿಗ ಸುನೀಲ್ ಮನೋಹರ್ ಗವಾಸ್ಕರ್. ಹೌದು.. ಸುನೀಲ್ ಗವಾಸ್ಕರ್ ಕ್ರಿಕೆಟ್ ಲೋಕದಲ್ಲಿ ಮಾಡಿದ ಸಾಧನೆ ಕಂಡು ಅಮೇರಿಕಾ ಏನು ಮಾಡಿದೆ ಗೊತ್ತೇ? ಗೊತ್ತಾದರೇ ಒಂದು ಕ್ಷಣ ದಂಗಾಗುವುದಂತೂ ಖಚಿತ!!!

ಕ್ರಿಕೆಟ್ ಟೆಸ್ಟ್ ಪಂದ್ಯದ ಇತಿಹಾಸದಲ್ಲಿ ಅತ್ಯುತ್ತಮ ಆರಂಭಿಕ ಬ್ಯಾಟ್ಸ್‍ಮನ್‍ಗಳಲ್ಲಿ ಒಬ್ಬರೆಂದು ಪರಿಗಣಿತರಾದವರು ಸುನೀಲ್ ಗವಾಸ್ಕರ್!! ಕ್ರಿಕೆಟ್‍ಲೋಕದಲ್ಲಿ ಅತ್ಯಂತ ಹೆಚ್ಚು ರನ್‍ಗಳು ಮತ್ತು ಅತ್ಯಂತ ಹೆಚ್ಚು ಶತಕಗಳ ಗಳಿಕೆಯಲ್ಲಿ ಪ್ರಪಂಚದಾಖಲೆಗಳನ್ನು ತಮ್ಮ ಕಾಲದಲ್ಲಿ ಸೃಷ್ಟಿಸಿದ್ದ ಅದ್ಭುತ ಕ್ರಿಕೆಟಿಗರಾಗಿದ್ದರು. ಹಾಗಾಗಿ ಇವರ ಅಮೋಘವಾದ ಸಾಧನೆಯ ಫಲವಾಗಿ ಇಂದು ಇವರ ಹೆಸರು ಅಮೆರಿಕದಲ್ಲಿ ರಾರಾಜಿಸಲು ಸಿದ್ಧವಾಗಿದೆ ಎಂದರೆ ಅದು ಅದ್ಭುತವೇ ಸರಿ!! ಕ್ರಿಕೆಟ್ ದಂತಕಥೆಯಾಗಿದ್ದ ಸುನೀಲ್ ಗವಾಸ್ಕರ್‍ನ ಹೆಸರು ಅಮೆರಿಕದ ಕೆಂಟುಕಿಯ ಲೂಯಿಸ್ ವಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಕ್ರಿಕೆಟ್ ಕ್ರೀಡಾಂಗಣಕ್ಕೆ ಕ್ರಿಕೆಟ್ ದಿಗ್ಗಜನ ಹೆಸರನ್ನೇ ನಾಮಕರಣ ಮಾಡುತ್ತಾರೆ ಎಂದು ಮಂಡಳಿ ಈಗಾಗಲೇ ಹೇಳಿದೆ. ಇದರ ಕುರಿತಾಗಿ ಸುನೀಲ್ ಗವಾಸ್ಕರ್ ಅವರೇ ಕ್ರೀಡಾಂಗಣವನ್ನು ಮುಂದಿನ ತಿಂಗಳು ಉದ್ಘಾಟನೆ ಮಾಡಲಿದ್ದಾರೆ.

ಹೌದು… ಕ್ರಿಕೆಟ್ ಲೋಕದ ದಿಗ್ಗಜರೆನೆಸಿರುವ ಒಬ್ಬ ಭಾರತೀಯ ಕ್ರಿಕೆಟಿಗನ ಹೆಸರನ್ನು, ಅಮೇರಿಕಾದ ಕ್ರೀಡಾಂಗಣಕ್ಕೆ ನಾಮಕರಣ ಮಾಡುತ್ತಿದ್ದಾರೆ ಎಂದರೆ ಅದು ಭಾರತೀಯರಿಗೆ ಹೆಮ್ಮೆಯ ವಿಚಾರವಾಗಿದೆ!! ಅಮೇರಿಕಾ ಕ್ರಿಕೆಟ್ ಕ್ರೀಡೆಯಿಂದಲೇ ಬಹುದೂರ ಉಳಿದಿರುವ ರಾಷ್ಟ್ರ. ಹಾಗಾಗಿ ಭಾರತೀಯ ಕ್ರಿಕೆಟ್ ದಿಗ್ಗಜನ ಹೆಸರನ್ನು ಅಮೇರಿಕಾದ ಸ್ಟೇಡಿಯಂಗೆ ಇಟ್ಟಿರುವುದು ಬಲು ಆಶ್ಚರ್ಯದ ಸಂಗತಿ..!! ಅಷ್ಟೇ ಅಲ್ಲದೇ, ಜಗತ್ತಿನಲ್ಲಿ ಕೇವಲ ಇಬ್ಬರು ಕ್ರಿಕೆಟ್ ದಿಗ್ಗಜರ ಹೆಸರುಗಳಲ್ಲಿ ಮಾತ್ರ ಕ್ರಿಕೆಟ್ ಕ್ರೀಡಾಂಗಣಗಳು ಇವೆ. ಒಂದು ಕ್ರಿಕೆಟ್ ದಿಗ್ಗಜ ವಿವೀನ್ ರಿಚರ್ಡ್(ಸರ್ ವಿವೀನ್ ರಿಚರ್ಡ್ ಕ್ರೀಡಾಂಗಣ ಅನಿಟುಗಾ) ಮತ್ತು ಡೇರನ್ ಸಾಮಿ(ಡೇರನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಗ್ರೋಸ್ ಇಸ್ಲೆಟ್, ಸೆಂಟ್ ಲೂಸಿಯಾ). ತದನಂತರದ ಸ್ಥಾನವನ್ನು ಪಡೆದಿದ್ದಾರೆ ಸುನೀಲ್ ಗವಾಸ್ಕರ್!!!

ಆದರೆ ಭಾರತದ ಇತಿಹಾಸದ ಪುಟಗಳನ್ನು ಕೆದಕುತ್ತಾ ಹೋದರೆ ಭಾರತದಲ್ಲಿ ಕ್ರೀಡಾಪಟುಗಳ ಹೆಸರು ಎಲ್ಲಿಯಾದರೂ ಕಂಡಿದ್ದೀರಾ?? ಅಷ್ಟೇ ಅಲ್ಲದೇ,
ಯಾವುದಾದರೂ ರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಗಾಗಲಿ ಅಥವಾ ಕ್ರೀಡಾಂಗಣಕ್ಕಾಗಲಿ ಭಾರತದಲ್ಲಿ ನಾವು ಕಂಡಿದ್ದೇ ಇಲ್ಲ!! ಬದಲಿಗೆ ಭಾರತದಲ್ಲಿನ ಕ್ರೀಡಾಂಗಣಗಳಿಗೆ ಪ್ರಖ್ಯಾತ ರಾಜಕಾರಣಿಗಳು, ಗಣ್ಯರ ಹೆಸರನ್ನು ಇಟ್ಟಿರುವುದು ನಾವು ಈಗಾಗಲೇ ಕಂಡಿದ್ದೇವೆ. ಈ ಬಗ್ಗೆ ಹಲವು ಉದಾಹರಣೆಗಳ ಸಹಿತ ಹೇಳುವುದಾದರೆ ಅದೂ ಕೂಡ ನೆಹರೂವಂಶದ ರಾಜಕಾರಣವನ್ನು ಎತ್ತಿ ತೋರಿಸುತ್ತಿದೆ!! ಪ್ರತಿಯೊಂದು ಕ್ಷೇತ್ರಗಳನ್ನು ಗಮನಿಸುತ್ತಾ ಹೋದಾಗ ಅಲ್ಲಿ ಎದ್ದು ಕಾಣುವುದು, ರಾಜವಂಶದ ರಾಜಕಾರಣ.

ರಾಜಕಾರಣಿಗಳ ಹೆಸರಿನಲ್ಲಿರುವ ಸ್ಟೇಡಿಯಂಗಳನ್ನು ನೋಡುವುದಾದರೆ ಜವಹರಲಾಲ್ ನೆಹರೂ ಕ್ರಿಕೆಟ್ ಕ್ರೀಡಾಂಗಣ, ಜವಹರಲಾಲ್ ನೆಹರೂ ಫುಟ್‍ಬಾಲ್
ಕ್ರೀಡಾಂಗಣ ಹೀಗೆ ಇವರ ಹೆಸರಲ್ಲೇ ಅನೇಕ ಕ್ರೀಡಾಂಗಣಗಳು ದೇಶದಾದ್ಯಂತ ರಾರಾಜಿಸುತ್ತಿದೆ. ಅಷ್ಟೇ ಅಲ್ಲದೇ, ಇಂದಿರಾ ಗಾಂಧಿಯ ಹೆಸರಿನ ಕ್ರೀಡಾಂಗಣಗಳು, ರಾಜೀವ್ ಗಾಂಧಿ ಕ್ರೀಡಾಂಗಣ ಹೀಗೆ ತನ್ನ ಕುಟುಂಬಿಕರ ಹೆಸರನ್ನೇ ಭಾರತದಲ್ಲಿರುವ ಕ್ರೀಡಾಂಗಣಗಳಿಗೆ ಮಾತ್ರವಲ್ಲದೇ ಹಲವು ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತಮ್ಮದೇ ಹೆಸರನ್ನು ಇಡುತ್ತಿರುವುದು ಮಾತ್ರ ವಿಪರ್ಯಾಸ!!

ಆದರೆ ಭಾರತದಲ್ಲಿನ ಕ್ರೀಡಾಂಗಣಗಳಿಗೆ ಪ್ರಖ್ಯಾತ ರಾಜಕಾರಣಿಗಳು, ಗಣ್ಯರ ಹೆಸರುಗಳನ್ನು ಮಾತ್ರ ಇಡಲಾಗಿದೆ, ಅದರಲ್ಲಿ ಒಂದೆರಡು ಸ್ಟಾಂಡ್‍ಗೆ ಕ್ರಿಕೆಟ್ ದಿಗ್ಗಜರ ಹೆಸರನ್ನೂ ಕೂಡ ನಾಮಕರಣ ಮಾಡಲಾಗಿದೆ. ಅವುಗಳಲ್ಲಿ ಮುಂಬೈನಲ್ಲಿ ಸಚಿನ್ ಸ್ಟಾಂಡ್ ಹಾಗೂ ಕೋಲ್ಕತ್ತಾದಲ್ಲಿ ಸೌರವ್ ಗಂಗೂಲಿ ಸ್ಟಾಂಡ್!! ಆದರೆ ಇದೀಗ ಕ್ರಿಕೆಟ್ ದಿಗ್ಗಜ, ಟೀಂ ಇಂಡಿಯಾ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರನ್ನು ಹೆಸರನ್ನು ಅಮೆರಿಕದಲ್ಲಿ ನಿರ್ಮಾಣವಾಗಿರುವ ನೂತನ ಕ್ರೀಡಾಂಗಣಕ್ಕೆ ನಾಮಕರಣ ಮಾಡಲಾಗಿರುವುದು ಖುಷಿಯ ವಿಚಾರ!!

ಭಾರತದಲ್ಲಿ ರಾಜಕಾರಣಿಗಳ ಹೆಸರೇ ಎಲ್ಲೆಡೆ ಹಬ್ಬಿರುವಾಗ ಭಾರತೀಯನ ಹೆಸರು ಅಮೇರಿಕದಲ್ಲಿ ಪ್ರಸಿದ್ದಿಯನ್ನು ಪಡೆಯಲಿರುವುದು ಹೆಮ್ಮೆಯ ವಿಚಾರ. ಅಮೇರಿಕಾ ಯಾವತ್ತೂ ಕ್ರಿಕೆಟ್ ಬಗ್ಗೆ ಆಸಕ್ತಿಯನ್ನು ಹೊಂದಿಲ್ಲ, ಆದರೂ ಭಾರತದ ಕ್ರಿಕೆಟಿಗನ ಹೆಸರನ್ನೂ ಅಲ್ಲಿನ ಒಂದು ಕ್ರೀಡಾಂಗಣಕ್ಕೆ ನಾಮಕರಣ ಮಾಡಿದ್ದಾರೆ ಎಂದರೆ ಅದಕ್ಕಿಂತಲೂ ದೊಡ್ಡ ಆಶ್ಚರ್ಯ ಇನ್ನೇನಿಲ್ಲ!!

-ಅಲೋಖಾ

Tags

Related Articles

Close