ಅಂಕಣ

ಸುಭಾಶ್ ಚಂದ್ರ ಬೋಸರ ಐಎನ್ ಎ ನಿಧಿಯನ್ನೇ ಕೊಳ್ಳೆ ಹೊಡೆದಿದ್ದವನಿಗೆ ನೆಹರೂ ಸನ್ಮಾನಿಸಿ ಗೌರವಿಸಿದ್ದ!!!

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಐಎನ್‍ಎ ಮೂಲಕ ಕ್ರಾಂತಿಯ ಕಿಡಿಯನ್ನು ಸೃಷ್ಟಿಸಿದ್ದು ಬ್ರಿಟಿಷರು ಭಾರತ ಬಿಟ್ಟು ತೊಲಗಲು ಕಾರಣವಾಯಿತು ಎಂದು ಭಾರತದ ಜೇಮ್ಸ್ ಬಾಂಡ್ ಎಂದೇ ಪ್ರಸಿದ್ಧಿ ಹೊಂದಿರುವ ಅಜಿತ್ ದೋವಲ್ ಹೇಳಿದ್ದಾರೆ.!!! ಭಾರತದ ಒಬ್ಬ ಪ್ರಬಲ ವ್ಯಕ್ತಿ, ಸ್ವಾತಂತ್ರ್ಯ ಹೋರಾಟಗಾರನನ್ನು ಭಾರತದ ಮೊದಲ ಪ್ರಧಾನ ಮಂತ್ರಿಯೇ ಅವಮಾನಿಸಿದರೆಂದು ನಿಮಗೆ ತಿಳಿದಿದೆಯೇ?

ಕಳೆದ ವರ್ಷ ಮೋದಿ ಸರಕಾರ ನೇತಾಜಿಯ ಹಲವಾರು ದಾಖಲೆಗಳನ್ನು ಬಹಿರಂಗ ಪಡಿಸಲು ಆರಂಭಿಸಿತ್ತು. ಇದರಿಂದಾಗಿ ಹಲವಾರು ಆಘಾತಕಾರಿ ಮಾಹಿತಿಗಳು ಬಹಿರಂಗವಾಯಿತು!!. ನೇತಾಜಿಯವರ ಭಾರತೀಯ ರಾಷ್ಟ್ರೀಯ ಸೇನೆಯ ನಿಧಿ ಕದ್ದ ವ್ಯಕ್ತಿಗೆ ನೆಹರೂ ಯಾವ ರೀತಿ ಸ್ಥಾನವನ್ನು ನೀಡಿ ಗೌರವಿಸಿದ್ದಾರೆ ಎಂಬ ಮಾಹಿತಿಯನ್ನು ಈ ದಾಖಲೆಗಳು ಸ್ಪಷ್ಟಪಡಿಸುತ್ತದೆ. ಇದು $700,000 ಮೌಲ್ಯದ್ದಾಗಿದ್ದು, ಇದನ್ನು ಲೇಖಕ ಅನುಜ್ ಧಾರ್ ಅವರ 2102 ರ “ಇಂಡಿಯಾಸ್ ಬಿಗ್ ಕವರ್ ಆಫ್” ನಲ್ಲಿ ಉಲ್ಲೇಖಿಸಲಾಗಿದೆ. ಐಎನ್‍ಎ ನಿಧಿಗಳ ದುರುಪಯೋಗದಲ್ಲಿ ಎಸ್ ಐಯ್ಯರ್ ಮತ್ತು ಮುಂಗಾ ರಾಮಮೂರ್ತಿ ತಮ್ಮನ್ನು ತೊಡಗಿಸಿಕೊಂಡಿದ್ದರು. ದು:ಖಕರ ವಿಷಯವೆಂದರೆ ಎಸ್ ಐಯ್ಯರ್ ನೆಹರುರ ಪ್ರಮುಖ ಐದು ವರ್ಷದ ಯೋಜನೆಗಳ ಪ್ರಚಾರ ಸಲಹೆಗಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ರಾಮುಮೂರ್ತಿ ಕುಟುಂಬ ಜಪಾನ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಅವರು ಅಂತಿಮವಾಗಿ ಚೆನೈನಲ್ಲಿ ನೆಲೆಸಿದ್ದರು.ರು. ಈ ಇಬ್ಬರೂ ವ್ಯಕ್ತಿಗಳು ನೇತಾಜಿ ಸುಭಾಶ್ ಚಂದ್ರ ಭೋಸರ ಐಎನ್‍ಎ ಖಜಾನೆಯನ್ನು ಲೂಟಿ ಮಾಡುವಲ್ಲಿ ಯಶಸ್ವಿಯಾಗಿದ್ದುರು.

ಅಷ್ಟಕ್ಕೂ ನೇತಾಜಿ ಸುಭಾಶ್ ಚಂದ್ರ ಭೋಸರನ್ನು ನೆಹರೂ ದ್ವೇಷಿಸಿದ್ದಾದರೂ ಏಕೆ?

ಯಾವಾಗ ನೇತಾಜಿ ಸುಭಾಶ್‍ಚಂದ್ರ ಭೋಸ್‍ರ ಭಾರತೀಯ ರಾಷ್ಟ್ರೀಯ ಸೇನೆ (ಐಎನ್‍ಎ) ಸ್ಥಾಪಿಸಿದರೋ ಆ ಸಮಯದಲ್ಲಿ ಬ್ರಿಟಿಷರಿಗೆ ಭಯ ಶುರುವಾಗಲು
ಪ್ರಾರಂಭವಾಯಿತು.!! ಆ ಸಮಯದಲ್ಲಿ ಇಡೀ ಭಾರತವೇ ಐಎನ್‍ಗೆ ಬೆಂಬಲವನ್ನು ನೀಡಿದರು!!.. ಇದರಿಂದಾಗಿ ಇಡೀ ಬ್ರಿಟಿಷರೇ ನಡುಗಿ ಹೋದರು. ಆ ಸಮಯದಲ್ಲಿ ಪ್ರತೀಯೊಬ್ಬ ಭಾರತೀಯನ ಹೃದಯದಲ್ಲಿ ಸುಭಾಸ್‍ಚಂದ್ರ ಭೋಸರ ಹೆಸರು ಕೆತ್ತಲಾಗಿತ್ತು. ಸ್ವಾತಂತ್ರ್ಯ ಸಿಗಬೇಕಾದರೆ ಅದೆಷ್ಟೋ ಪ್ರಯತ್ನವನ್ನು ನೇತಾಜಿ ಮಾಡಿದ್ದರು. ಹೀಗಾಗಿ ಸ್ವಾತಂತ್ರ್ಯ ಸಿಕ್ಕ ಬಳಿಕ , ಭಾರತದ ಮೊದಲ ಪ್ರಧಾನ ಮಂತ್ರಿಯಾಗಿ ನೇತಾಜಿಯವರು ಆಯ್ಕೆಯಾಗಬೇಕಿತ್ತು.!! ಈ ವಿಷಯ ತಿಳಿದ ನೆಹರು ಅಸೂಯೆ ಪಟ್ಟರು.!! ಅವರು ಬ್ರಿಟಿಷರ ಕೈಯಲ್ಲಿ ನೇತಾಜಿ ಸಾಯಬೇಕೆಂದು ಬಯಸಿದ್ದರು!!! ಹಾಗಾದರೆ ನೆಹರು ಒಬ್ಬ ಭಾರತೀಯ ಪ್ರಜೆಯಾಗಿ ಎಂಥಹ ಮನಸ್ಥಿತಿಯನ್ನು ಹೊಂದಿದ್ದರು ಎಂಬುವುದನ್ನು ನಾವು ಅರಿಯ ಬೇಕಾಗಿದೆ. ನೆಹರುವಿನ ಈ ಅಸೂಯೆಯೇ ನೇತಾಜಿ ಭಾರತಕ್ಕೆ ಹಿಂದಿರುಗದಂತೆ ಮಾಡಿತ್ತು.

ಎರಡನೇ ಜಾಗತಿಕ ಯುದ್ಧದಲ್ಲಿ ಭೋಸ್ ಬ್ರಿಟಿಷ್ ಮತ್ತು ಇತರ ಪ್ರಮುಖ ಶಕ್ತಿಗಳ ವಿರುದ್ಧ ಆಕ್ಸಿಸ್ ಶಕ್ತಿ ಸಾಧನೆಯಿಂದ ಐಎನ್‍ಎ ಸ್ಥಾಪನೆಯಾಯಿತು. ಯಾವಾಗ ಜಪಾನ್ ಶರಣಾಯಿತೋ ಇದರಿಂದ ತುಂಬಾ ಅಸಮಾಧಾನ ಪಡುವಂತಾಯಿತು.!! ತಮ್ಮ ಎಲ್ಲಾ ಭರವಸೆಗಳನ್ನೂ ಕಳೆದುಕೊಂಡರು! ನೇತಾಜಿ ಸುಭಾಸ್ ಚಂದ್ರ ಭೋಸರ ಬಾಡಿ ಗಾರ್ಡ್ ಆಗಿರುವಂತಹ ಉಸ್‍ಮಾನ್ ಎನ್ನುವವರು ಕೆಲವು ನಿಗೂಢ ಮಾಹಿತಿಯನ್ನು ಹೊರಹಾಕುತ್ತಾರೆ… ಗಾಂಧಿ ಮತ್ತು ನೆಹರು ಇಬ್ಬರೂ ಸೇರಿ ಸುಭಾಶ್ ಚಂದ್ರ ಭೋಸರನ್ನು ಬ್ರಿಟಿಷರಿಗೆ ಒಪ್ಪಿಸಲು ತಯಾರಾಗಿದ್ದರು ಎಂಬ ಆಘಾತಕಾರಿ ಮಾಹಿತಿಯನ್ನು ಬಿಡುಗಡೆಗೊಳಿಸಿದ್ದರು.!! ಅದಲ್ಲದೆ  ನೆಹರೂ, ಗಾಂಧಿ, ಮೌಲಾನಾ ಅಝಾದ್ ಮತ್ತು ಮಹಮ್ಮದ್ ಅಲಿ ಜಿನ್ನಾ ಇವರು ನಾಲ್ವರು ಸೇರಿ ಬ್ರಿಟಿಷ್ ನ್ಯಾಯಾಧೀಶನೊಂದಿಗೆ
ನೇತಾಜಿ ಸುಭಾಸ್ ಚಂದ್ರ ಭೋಸರು ಒಂದು ವೇಳೆ ಭಾರತಕ್ಕೆ ವಾಪಸ್ಸಾದರೇ ಬ್ರಿಷರಿಗೆ ಒಪ್ಪಿಸುವಂತೆ ಒಪ್ಪಂದ ಕೂಡಾ ಮಾಡಲಾಗುತ್ತದೆ.!! ಎಂತಹ ಕ್ರೂರಿಗಳು ಇವರೆಲ್ಲಾ?? ಇವರನ್ನೆಲ್ಲಾ ನಾವು ದೇಶಕ್ಕಾಗಿ ಹೋರಾಟ ಮಾಡಿದ್ದಾರೆ ಎಂಬರ್ಥದಲ್ಲಿ ಇವರಿಗೆ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಉನ್ನತ ಸ್ಥಾನವನ್ನು ನೀಡಿದ್ದೇವಲ್ಲವೇ?? ಆದರೆ ಇವರು ಮಾಡಿದ್ದಾರೂ ಏನು? ಸ್ವಾತಂತ್ರ ಪೂರ್ವದಲ್ಲೇ ಇವರು ಬ್ರಿಟಿಷರಿಗೆ ಸಹಾಯ ಮಾಡುತ್ತಿದ್ದರು ಎಂದರೆ ಅವರ
ಮನಸ್ಥಿತಿ ಯಾವ ರೀತಿಯಾಗಿ ಇತ್ತು ಎಂಬುವುದನ್ನು ನಾವು ಅರಿತು ಕೊಳ್ಳಬೇಕಾಗಿದೆ. ತಮ್ಮವರ ಬೆನ್ನಿಗೆ ಚೂರಿ ಹಾಕುವವರು ಇದ್ದಾರೆ ಎಂದು ಯಾರಾದರೂ
ನಂಬಲು ಸಾಧ್ಯವೇ? ಅದು ಕೂಡಾ ದೇಶದ ಮೊದಲ ಪ್ರಧಾನಿಯಾಗಿ ಆಯ್ಕೆಯಾದ ಈ ನೆಹರು? ದೇಶದ ಮೊದಲ ಪ್ರಧಾನಿಯಾಗಿ ಆಯ್ಕೆ ಮಾಡಿದ್ದೇ ಭಾರತೀಯರ ದೊಡ್ಡ ತಪ್ಪು ಎಂದು ಹೇಳಬಹುದು.

ತಪ್ಪು ಮಾಡಿದವನಿಗೆ ಯಾವತ್ತೂ ಭಯ ಅನ್ನುವಂತಹದ್ದು ಕಾಡುತ್ತಾ ಇರುತ್ತದೆ.. ಅವರು ಜನಗಳ ಕಣ್ಣಿಗೆ ಮಣ್ಣೆರಚಿರಬಹುದು ಆದರೆ ಅವರಿಗೆ ಮನಸಾಕ್ಷಿಯೊಂದು ಇದೆ ಅಲ್ಲವೇ? ಅದು ಯಾವತ್ತೂ ತಪ್ಪು ಮಾಡಿದವರನ್ನು ಕಾಡುತ್ತಾ ಇರುತ್ತದೆ! ನಾವು ಯಾವತ್ತು ಅದಕ್ಕೆ ವಿರೋಧವಾಗಿ ನಡೆಯಲು ಸಾಧ್ಯವಿಲ್ಲ! ಗಾಂಧಿ ಮತ್ತು ನೆಹರೂ ಇಬ್ಬರೂ ಇಡೀ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.!! ನೆಹರೂ ಕೇವಲ ನೇತಾಜಿ ಸುಭಾಶ್‍ಚಂದ್ರ ಭೋಸರಿಗೆ ಮಾತ್ರ ಮೋಸ ಮಾಡಿಲ್ಲ!!! ಇಡೀ ಭಾರತೀಯರಿಗೆ ಮೋಸ ಮಾಡಿದ್ದಾರೆ ಅಷ್ಟೇ!!! ಇಂತಹ ಹೇಯ ಕೃತ್ಯ ಮಾಡಿರುವಂತಹ ನೆಹರುವಿಗೆ ಯಾವತ್ತೂ ಕ್ಷಮೆ ಇಲ್ಲ!!! ಅಲ್ಲದೆ ನೆಹರು ಮತ್ತು ಗಾಂಧಿಗೆ ನೇತಾಜಿ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂಬ ಭಾವನೆ ಕೂಡಾ ಇದೆ!!.

ಸುಭಾಷ್ ಚಂದ್ರ ಭೋಸ್ ನಿಗೂಢವಾಗಿ ಸಾವನ್ನಪ್ಪಿರುವ ಘಟನೆಯ ನಂತರ 1948 ರಿಂದ 1968ರವರೆಗೆ ಸುಮಾರು 20 ವರ್ಷಗಳ ಕಾಲ ನೆಹರು
ಭೋಸ್ ಕುಟುಂಬದ ಮೇಲೆ ಗೂಢಾಚಾರಿಕೆ ನಡೆಸಿ ಮಾಹಿತಿ ಸಂಗ್ರಹಿಸಿದ್ದರು ಎಂಬ ಅಂಶ ಕೂಡಾ ಬಯಲಾಗಿದ್ದು, ಪ್ರತೀಯೊಂದು ವರದಿಗಳೂ ನೇರವಾಗಿ ನೆಹರೂ ಕೈಗೇ ತಲುಪುತ್ತಿತ್ತು ಎಂಬುವುದು ಗಮನಾರ್ಹ ಅಂಶ.. ನೇತಾಜಿಯ ಇಡೀ ಕುಟುಂಬ ಇದಕ್ಕೆ ಅಸಮಾದಾನ ವ್ಯಕ್ತಪಡಿಸಿದ್ದು ನೆಹರೂ ಸರಕಾರ ನೇತಾಜಿ ಕುಟುಂಬದ ಮೇಲೆ ಯಾವ ನಿಲುವು ಹೊಂದಿತ್ತು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.!!!

ನೆಹರು ಯಾವ ರೀತಿಯೂ ತನ್ನ ತಪ್ಪನ್ನು ಮುಚ್ಚಲು ಪ್ರಯತ್ನಿಸಿದರೂ ಭಾರತೀಯರಾದ ನಾವು ಯಾವತ್ತೂ ಅವರನ್ನು ಕ್ಷಮಿಸಲ್ಲ!!! ನೇತಾಜಿ ಸುಭಾಷ್ ಚಂದ್ರ
ಭೋಸರಿಗೆ ಯಾವತ್ತೂ ಭಾರತೀಯರ ಹೃದಯದಲ್ಲಿ ಅತ್ಯಂತ ಗೌರವದ ಸ್ಥಾನವಿದೆ!!.. ಇಲ್ಲಿ ಸತ್ಯಕ್ಕೆ ಯಾವತ್ತೂ ಗೌರವಿದೆ..!

-ಪವಿತ್ರ

Tags

Related Articles

Close