ಅಂಕಣಇತಿಹಾಸ

ಹೀಗೆಲ್ಲ ಮಾಡಿದವರನ್ನು ನಾವು ಮಹಾತ್ಮ ಎಂದು ಕರೆಯಬೇಕೆ?! ನ್ಯಾಯಾಲಯದ ಕಟಕಟೆಯಲ್ಲಿ ನಿಂತಿದ್ದ ನಾಥೂರಾಮ್ ಗೋಡ್ಸೆ ಕೊನೆಯದಾಗಿ ಹೇಳಿದ್ದೇನು ಗೊತ್ತೇ?!

ನಾಥೂರಾಮ್ ಗೋಡ್ಸೆಯವರ ಹೇಳಿಕೆಗಳು ಎಷ್ಟು ಜನ ಭಾರತೀಯರಿಗೆ ಗೊತ್ತು?

ನಾಥೂರಾಮ್ ಗೋಡ್ಸೆಯವರು ನ್ಯಾಯಾಲಯದಲ್ಲಿ ಹೇಳಿದ ಹೇಳಿಕೆಗಳು ಎಷ್ಟು ಜನ ಭಾರತೀಯರಿಗೆ ಗೊತ್ತು? ಅದನ್ನು ಮುಚ್ಚಿಡಲು ವ್ಯವಸ್ಥಿತ ಹುನ್ನಾರ ಆವಾಗಿನಿಂದ ಇಂದಿನ ತನಕ ನಡೆದು ಬಂದಿದೆ. ಗೋಡ್ಸೆ ಜೀ ಬಗ್ಗೆ ಬರೆಯುವುದೇ ಮಹಾಪಾಪವೆಂದು ಕಾಂಗ್ರೆಸ್ಸನವರು ಬೊಗಳುತ್ತಲೇ ಬಂದಿದ್ದಾರೆ ಕಾರಣವಿಷ್ಟೇ!! ಗಾಂಧಿಜೀಯ ತಪ್ಪುಗಳು ಜನರಿಗೆ ತಿಳಿಯಬಹುದು ಎಂಬ ದುರಾಲೋಚನೆ.

ಜನವರಿ 30, 1948 ರಂದು ಪಿಸ್ತೂಲನ್ನು ಮೊಳಗಿಸಿ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಅವರನ್ನು ಬಂಧಿಸಲಾಯಿತು. ಆ ಹತ್ಯೆಯ ಅರೋಪದ ಮೇಲೆ ನವೆಂಬರ್15, 1949ರಂದು ದೇಶಭಕ್ತ ಗೋಡ್ಸೆ ಮತ್ತು ನಾರಾಯಣ ಆಪ್ಟೆಯವರನ್ನು ನೇಣಿಗೆ ಹಾಕಿದರು. ಗೋಡ್ಸೇ ಜೀ ಅವರನ್ನು ನಂತರ ನೇಣಿಗೆ ಹಾಕಿದ್ದಾಗ ದೇಶಭಕ್ತರು ಮನಸಾರೆ ಅಳಲು ಹೆದರುತ್ತಿದ್ದರು. ಅದಕ್ಕೆ ಕಾರಣ ಗಾಂಧೀ ಎಂಬ ಡೊಂಗಿ ರಾಷ್ಟ್ರದ ಪಿತನಾಗಿದ್ದ ಮತ್ತು ಅವರ ಚೇಲಾಗಳ ಕೈಯ್ಯಲ್ಲಿ ಈ ದೇಶ ಆಳಲ್ಪಟ್ಟಿತ್ತು.

ಬದುಕುವ ಪ್ರಯತ್ನ ಮಾಡು! ನಿನಗೆ ವಿಧಿಸಲಾದ ಮರಣದಂಡನೆ ವಿರುದ್ಧ ಮೇಲಿನ ನ್ಯಾಯಾಲಕ್ಕೆ ಮನವಿ ಮಾಡು. ಕಡೇಪಕ್ಷ ಜೀವಾವಧಿ ಶಿಕ್ಷೆಯಾಗುತ್ತದೆ. ಪ್ರಾಣ ಉಳಿಯುತ್ತದೆ. ಶಿಕ್ಷೆ ಕಡಿಮೆ ಮಾಡುವ ಪ್ರಯತ್ನವನ್ನು ನಾನು ಮಾಡುತ್ತೇನೆ. ಹೀಗೆ ಅಂದಿದ್ದರು ಅಂದಿನ ಒಬ್ಬ ಮಹಾನ್ ನಾಯಕರು. ಅದಕ್ಕೆ ಗೋಡ್ಸೆ ಕೊಟ್ಟ ಉತ್ತರ ಏನ್ ಗೊತ್ತಾ? “ನನಗೆ ಪ್ರಾಣಭಿಕ್ಷೆ ಸಿಗದಂತೆ ನೋಡಿಕೊಳ್ಳಿ. ನನ್ನನ್ನು ನೇಣುಹಾಕುವ ಮೂಲಕ ಗಾಂಧೀಜಿಯವರ ಅಹಿಂಸಾವಾದವನ್ನು ನೇಣು ಹಾಕಲಾಯಿತು ಎಂಬುದನ್ನು ಇಡೀ ಜಗತ್ತಿಗೆ ನಾನು ಸಾಬೀತುಪಡಿಸಿ ತೋರಿಸಬೇಕಾಗಿದೆ!

ದೇಶಭಕ್ತ ಗೋಡ್ಸೆ ಜೀ ಗಾಂಧೀಜಿಯವರನ್ನು ಯಾಕೆ ಕೊಂದರೆಂಬುದು ಗೋಡ್ಸೆಯವರು ಬಂಧನದ ನಂತರ ನ್ಯಾಯಾಲಯದಲ್ಲಿ ಸತತ 5 ತಾಸುಗಳು ತಮ್ಮ ಸಮರ್ಥನೆ ನೀಡಿದ್ದರು. ಅದನ್ನು ಸಂಕ್ಷಿಪ್ತ ರೂಪದಲ್ಲಿ ಮುಂದಿಡುವ ಪ್ರಯತ್ನ. ಇಲ್ಲಿರುವ ಪ್ರತಿಯೊಂದು ಅಂಶವೂ ಅಂತರ್ಜಾಲ ಮತ್ತು ರವಿ ಬೆಳಗೆರೆಯವರ “ಗಾಂಧೀ ಹತ್ಯೆ ಮತ್ತು ಗೋಡ್ಸೆ” ಪುಸ್ತಕವನ್ನು ಆಧರಿಸಿವೆ.

ದೇಶಭಕ್ತ ಪಂಡಿತ್ ಗೋಡ್ಸೆಯವರು ಗಾಂಧೀಜಿಯವರನ್ನು ಕೊಲ್ಲಲು ಅನೇಕ ಕಾರಣಗಳಿದ್ದವು.ಹಿಂದೂ ಧರ್ಮಕ್ಕೋಸ್ಕರ,ಹಿಂದೂ ದೇಶಕ್ಕೋಸ್ಕರ ಯಾವತ್ತಿಗೂ ಪ್ರಾಣ ಕೊಡಲಿಕ್ಕೆ ನಾನು ಸಿದ್ಧನಿದ್ದೇನೆ. ಈ ದೇಶ ನಮ್ಮದು. ಸಾವಿರಾರು ಮಂದಿ ಹಿಂದೂಗಳನ್ನು ಕೊಲ್ಲುತ್ತಾ ಇದ್ದಾರೆ. ನಾನೊಬ್ಬನು ಸಾಯುವ ಮೂಲಕ ಈ ಹಿಂದೂ ನರಮೇಧ ನಿಲ್ಲೋದಾದರೆ ಬಲಿಪೀಠ ಹತ್ತಲು ನಾನು ಸಿದ್ಧ ಎಂಬ ಸಂಕಲ್ಪದೊಂದಿಗೆ ಗೋಡ್ಸೆಯವರು ಗಾಂಧೀಜಿಯನ್ನು ಕೊಲ್ಲಲು ನಿರ್ಧರಿಸಿದ್ದರು. ಗಾಂಧೀಜಿಯವರನ್ನು ಕೊಲ್ಲುವ ಮುನ್ನ ಪ್ರಾಮಾಣಿಕವಾಗಿ ಅವರನ್ನು ನಮಸ್ಕರಿಸಿದ್ದರು.

ಗಾಂಧೀಜಿಯ ಬಗ್ಗೆ ಇಡೀ ದೇಶಕ್ಕಿದ್ದಷ್ಟೇ ಗೌರವ,ಅಭಿಮಾನ ಗೋಡ್ಸೆಯವರಿಗೂ ಇತ್ತು. ಆದರೆ ಅದನ್ನೆಲ್ಲಾ ಮುರಿದುಬೀಳುವಂತೆ ಅಖಂಡ ಭಾರತವನ್ನು ಭಗ್ನ ಮಾಡಿಬಿಟ್ಟರು. ಗಾಂಧೀಜಿಯವರು ಭಾರತಕ್ಕೆ ಬಂದು ನಾಯಕತ್ವ ವಹಿಸಿದ ಮೇಲೆಯೇ ಮುಸ್ಲೀಮರು ಪ್ರತ್ಯೇಕ ರಾಷ್ಟ್ರದ ಕೂಗು ಹಾಕಿದ್ದರು. ಯಾಕೆ ಗೊತ್ತಾ? ಗಾಂಧೀಜಿಯವರ ಮುಸ್ಲಿಂ ತುಷ್ಟೀಕರಣ. ಮುಸ್ಲಿಂ ತುಷ್ಟೀಕತಣ ಪಿತಾಮಹರೆಂದರೆ ಗಾಂಧೀಜಿ ಅಂತ ಗಂಟಾಘೋಷವಾಗಿ ಹೇಳಬಹುದು. ಗಾಂಧೀಜಿಯ ಮುಸ್ಲಿಂ ತುಷ್ಟೀಕರಣಕ್ಕೆ ಕಾರಣ ದುರಾಸೆ. ಭಾರತದ ಅತ್ಯಚ್ಚ ನಾಯಕನಾಗಬೇಕೆಂಬ ದುರಾಸೆ.

ಹಿಂದೂ-ಮುಸ್ಲಿಂ ಭಾಯಿ ಭಾಯಿ ಎಂದು ಇಬ್ಬರ ನಡುವೆ ಒಗ್ಗಟ್ಟನ್ನ ಹೆಚ್ಚಿಸುತ್ತೆನೆಂಬ ಹಟಕ್ಕೆ ಬಿದ್ದು ಖಿಲಾಪತ್ ಚಳುವಳಿಗೆ ಬೆಂಬಲ ನೀಡಿದರು. ಆ ಖಿಲಾಪತ್ ಚಳುವಳಿಯಿಂದ ಹಿಂದುಗಳ ಮಾರಣಹೋಮವೇ ನಡೆದು ಹೋಯಿತು. ಇಡೀ ದೇಶರಕ್ತಮಯವಾಯಿತು. ಕಂಡ ಕಂಡಲ್ಲಿ ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾದವು. ಗಾಂಧೀಜಿಯ ಮುಸ್ಲಿಂ ಮುದ್ದಿನಿಂದ ಆ ಮಾರಣಹೋಮದ ಬಗ್ಗೆ ತುಟಿ ಬಿಚ್ಚಲೇ ಇಲ್ಲ. ಆಗ ಗೋಡ್ಸೆಜೀಯವರ ರಕ್ತ ಕುದಿಯಲು ಶುರುವಾಯಿತು.

ಗಾಂಧೀಜಿಯವರ ಅಹಿಂಸೆಯ ಬೊಗಳೆಯಿಂದ ದೇಶಕ್ಕೆ ದೇಶವೇ ಇಬ್ಭಾಗವಾಯಿತು. ನಿನ್ನೆಯ ತನಕ ನಮ್ಮವರೇ ಆಗಿದ್ದ 5 ಕೋಟಿ ಭಾರತೀಯ ಮುಸಲ್ಮಾನರು ಪಾಕಿಸ್ತಾನಿಗಳಾದರು. ವಿಭಜನೆಯಿಂದ ಹೀನಾತೀತ ಘಟನೆಗಳು ನಡೆದುಹೋದವು. ಆ ಹಿಂಸಾಚಾರದ ನಂತರವೂ ಗಾಂಧೀಜಿಯವರು
ಮುಸಲ್ಮಾನರನ್ನು ಮುದ್ದಿಸುವುದು ನಿಲ್ಲಿಸಲಿಲ್ಲ ಆಗ ಗೋಡ್ಸೆಜೀಯವರ ತಾಳ್ಮೇಯ ಕಟ್ಟೆ ಒಡೆದಿತ್ತು.

ವಿಭಜನೆಯ ಕಾರಣದಿಂದಾಗಿ 2 ಮಿಲಿಯನ್ ಹಿಂದುಗಳ ಸಾಮೂಹಿಕ ನರಮೇಧ ನಡೆದು ಹೋದವು.30,000 ಹಿಂದೂ ಮಹಿಳೆಯರನ್ನ ಪಂಜಾಬಿನ ಮುಸಲ್ಮಾನರು ಅತ್ಯಾಚಾರ ಮಾಡಿದರು. ಬಂಗಾಳದಲ್ಲಿ ಸಾಮೂಹಿಕ ಹಿಂದೂಗಳ ನರಮೇಧಕ್ಕೆ ಕಾರಣವಾಗಿದ್ದ ಅಲ್ಲಿನ ಮುಖ್ಯಮಂತ್ರಿ ಸುಹಾವರ್ದಿಯನ್ನ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಿದ್ದರು. ಇದನ್ನ ಅಹಿಂಸೆ ಅಂತ ಕರೆಯಬಹುದಾ? ಗಾಂಧೀಜಿಗೆ ಆ ಮುಸ್ಲೀಮರ ಅಟ್ಟಹಾಸಗಳು ಅಪರಾಧ ಅಂತ ಅನಿಸಲೇ ಇಲ್ಲ. ಮುಸಲ್ಮಾನರು ನಿಮ್ಮ ಮೇಲೆ ದಾಳಿ ಮಾಡಿದರೆ ಅವರನ್ನು ಕ್ಷಮಿಸಿ. ಅವರಿಗೆ ನಿಮ್ಮ ಮನೆಯನ‌್ನು ಬಿಟ್ಟುಕೊಡಿ ಎಂದುಬಿಟ್ಟಿದ್ದರು.

ಯಾವನೋ ಒಬ್ಬ ಮುಸಲ್ಮಾನ ಹಿಂದಿ ಭಾಷೆ ನಮ್ಮ ರಾಷ್ಟ್ರಭಾಷೆ ಆಗಬಾರದು ಎಂದರೆ ಗಾಂಧೀಜಿ ಅವರ ಆಟಕ್ಕೆ ಕುಣಿತ್ತಿದ್ದರು ಅವರ ಪರವಾಗಿ ನಿಂತು ಉರ್ದು ಭಾಷೆಯನ್ನು ಬಳಕೆ ತರಲು ಯತ್ನಿಸಿದ್ದರು. ಸುಮಾರು 6 ಲಕ್ಷ ಜನ ವಂದೇ ಮಾತರಂ ಘೋಷಣೆಯೊಂದಿಗೆ ಬಲಿದಾನಗೈದಿದ್ದರು. ಆ ವಂದೇ ಮಾತರಂ ನಮ್ಮ ರಾಷ್ಟ್ರಗೀತೆ ಆಗಬೇಕು ಎಂಬುದು ದೇಶಪ್ರೇಮಿಗಳ ಆಸೆಯೂ ಆಗಿತ್ತು. ಆದರೆ ಯಾವನೋ ಒಬ್ಬ ಮುಸಲ್ಮಾನ ವಂದೇ ಮಾತರಂ ಒಪ್ಪಿಕೊಳ್ಳಲ್ಲ ಅಂದಿದ್ದಕ್ಕೆ ಗಾಂಧೀಜಿ ವಂದೇ ಮಾತರಂ ಬೇಡ ಎಂದು ಬಿಟ್ಟರು. ಗಾಂಧೀಜಿಯವರು ನಮ್ಮನ್ನು ಬಲಿಪಶು ಮಾಡಿ,ಆ ಬಲಿದಾನದ ಮೇಲೆ ತಮ್ಮ ಶೃಂಗಾರದ ಕೋಣೆ ಕಟ್ಟಿಕೊಂಡರು.

ಮುಸಲ್ಮಾನರು ಹಲ್ಲೆ,ಮಾನಭಂಗ ಮಾಡಿದಾಗ ಗಾಂಧೀಜಿಯವರು ಸುಮ್ಮನಿದ್ದರು. ಹಿಂದುಗಳು ತಿರುಗಿ ಬಿದ್ದರೆ ಅದನ್ನು ಖಂಡಿಸಿದರು. ಮುಸಲ್ಮಾನರ ಮೇಲೆ ಹಿಂದುಗಳು ತಿರುಗಿ ಬಿದ್ದರೆ ಗಾಂಧೀಜಿ ಉಪವಾಸಕ್ಕೆ ಕುಳಿತುಬಿಡುತ್ತಿದ್ದರು. ಪಾಕಿಸ್ತಾನ ಸೃಷ್ಟಿಯಾದಾಗ ಆದ ಹಿಂಸಾಚಾರವನ್ನು ತಡೆಗಟ್ಟಲು ಗಾಂಧೀಜಿ ಪ್ರಯತ್ನಿಸಲೇ ಇಲ್ಲ. ತನ್ನ ಚೇಲಾಗಳಾಗಿದ್ದ ಕಾಂಗ್ರೆಸ್ಸಿಗೂ ಹೇಳಲಿಲ್ಲ.ವಿಭಜನೆಯ ಸಂದರ್ಭ ಕಡು ಚಳಿಗಾಲದ ಸಂದರ್ಭ. ಅಂತಹ ಚಳಿಯಲ್ಲಿ ಪಾಕಿಸ್ತಾನದಿಂದ ಓಡಿಬಂದ ಹಿಂದುಗಳು ದೆಹಲಿಯ ಮಸೀದಿಯಲ್ಲಿ ಆಶ್ರಯ ಪಡೆದಿದ್ದರು. ಗಾಂಧೀಜಿ ಅದಕ್ಕೆ ಒಪ್ಪಲೇ ಇಲ್ಲ. ಉಪವಾಸ ಸತ್ಯಾಗ್ರಹ ಕುಳಿತು ಮಸೀದಿಯಿಂದ ಹೊರ ಹಾಕಿಬಿಟ್ಟರು.ಹೊರಬಿದ್ದ ಆ ನಿರ್ಗತಿಕ ಹಿಂದುಗಳಿಗೆ ಒಂದು ಆಶ್ರಯವನ್ನು ಕೊಡುವ ಸೌಜನ್ಯವೂ ತೋರಿಸಲಿಲ್ಲ. ತಾನು ಮಾತ್ರ ಬಿರ್ಲಾ ಬಂಗಲೆಯ ಆತಿಥ್ಯ ಸ್ವೀಕರಿಸಿ ಬೆಚ್ಚಗೆ ಮಲಗಿದ್ದರು. ಹೀಗೆಲ್ಲಾ ಮಾಡಿದವರನ್ನು ನಾವು ಮಹಾತ್ಮ ಅಂತ ಕರೆಯಬೇಕಾ?

ಇನ್ನೊಂದು ದೊಡ್ಡ ಆಘಾತಕಾರಿ ವಿಷಯವೆಂದರೆ, ಪಾಕಿಸ್ತಾನ ರಚನೆಯಾದಾಗ ಅವರಿಗೆ 55 ಕೋಟಿ ರೂಪಾಯಿ ಕೊಡಬೇಕೆಂದು ಹಟ ಹಿಡಿದ ಗಾಂಧೀಜಿ ಉಪವಾಸ ಕುಳಿತು ಆ ಹಣವನ್ನು ಕೊಡಿಸಿಯೇ ಬಿಟ್ಟರು. ಆ ಹಣದಿಂದಲೇ ಜಮ್ಮು-ಕಾಶ್ಮೀರದ ಮೇಲೆ ಪಾಕಿಗಳು ದಾಳಿ ಮಾಡಿದ್ದರು. ವಲ್ಲಾಭಾಯಿ ಪಟೇಲರು ದಾಳಿಯ ಮುನ್ಸೂಚನೆಯನ್ನು ಮೊದಲೇ ನೀಡಿದ್ದರು ಅದಕ್ಕಾಗಿಯೇ ಹಣ ಕೊಡಬಾರದು ಅಂತ ನಿರ್ಧಾರ ಮಾಡಿದ್ದರು ಆದರೆ ಗಾಂಧೀಜಿಯ ಕೆಟ್ಟ ಹಟಕ್ಕೆ ನಾವು ಬೆಲೆ ತೆರಲೇಬೇಕಾಯಿತು. ಗಾಂಧೀಜಿ ಭಾರತದ ರಾಷ್ಟ್ರಪಿತರಾಗಲಿಲ್ಲ ಬದಲಿಗೆ ಪಾಕಿಸ್ತಾನದ ರಾಷ್ಟ್ರಪಿತರಾದರು.

ಗಾಂಧೀಜಿಯನ್ನು ಬದುಕಲು ಬಿಟ್ಟಿದ್ದರೆ ಹೈದ್ರಾಬಾದ್ ಪ್ರಾಂತ್ಯವನ್ನು ಇನ್ನೊಂದು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡುತ್ತಿದ್ದರು ಹೀಗಾಗಿ ನಾನು ಕೊಲ್ಲಲೇಬೇಕಾಯಿತು ಎಂದು ಕೋರ್ಟಿನ ಕಟಕಟೆಯಲ್ಲಿ ನಿಂತು ಹೇಳಿದ್ದರು.

ಗಾಂಧೀಜಿಯವರು ತಮ್ಮ ಅಹಿಂಸಾ ಸಿದ್ಧಾಂತ ಸೋತಿದೆಯೆಂದು ಯಾವತ್ತೂ ಒಪ್ಪಿಕೊಳ್ಳಲೇ ಇಲ್ಲ. ಮಸಲ್ಮಾನರನ್ನು ಮುದ್ದಿಸಿ ಹಿಂದುಗಳ ನರಮೇಧಕ್ಕೆ ಕಾರಣರಾದಂತಹ ರಾಷ್ಟ್ರದ್ರೋಹದಂತಹ ಕೆಲಸ ಮಾಡಿದವರನ್ನು ಭಾರತದ ಒಬ್ಬ ದೇಶಪ್ರೇಮಿ ಹೊಡೆದುರುಳಿಸುತ್ತಾನೆ ಎಂಬುದು ಇಡೀ ಜಗತ್ತಿಗೆ ಗೊತ್ತಾಗಬೇಕು. ಗಾಂಧೀಜಿಯನ್ನು ಕೊಂದುದರ ಬಗ್ಗೆ ನನಗೆ ಪಾಶ್ಚಾತ್ತಾಪವಿಲ್ಲ. ಇವತ್ತಲ್ಲಾ ನಾಳೆ ಪ್ರಾಮಾಣಿಕ ಇತಿಹಾಸಕಾರರು ನಾನ ಮಾಡಿದ ಕೆಲಸವನ್ನು ಒಪ್ಪಿಕೊಳ್ಳುತ್ತಾರೆ. “ಅಖಂಡ ಭಾರತ ಅಮರ್ ರಹೇ” ಎಂದು ತಮ್ಮ 5 ಗಂಟೆಗಳ ಹೇಳಿಕೆಗಳನ್ನು ಮುಗಿಸಿದರು‌.

ಗಾಂದೀಜಿಯವರಿಗೂ ಮತ್ತು ದೇಶಭಕ್ತ ಗೋಡ್ಸೆಯವರಿಗೂ ಯಾವುದೇ ವಯಕ್ತಿಕ ದ್ವೇಷವಿರಲಿಲ್ಲ. ಮುಸಲ್ಮಾನರನ್ನು ಮುದ್ದು ಮಾಡಿ ಭಾರತದ ಭಗ್ನಕ್ಕೆ ಕಾರಣವಾಗಿ,ಮುಂದೆ ಮತ್ತೊಂದು ಮುಸ್ಲಿಂ ರಾಷ್ರ ನಿರ್ಮಾಣವಾಗಬಾರದು ಎಂಬ ಕಾರಣಕ್ಕೆ ಗಾಂಧೀಜಿಯವರನ್ನು ಗೋಡ್ಸೆಜಿ ಕೊಂದರು.

ಇಂದಿನ ಪಾಕಿಸ್ತಾನದ ಉಪಟಳಕ್ಕೆ,ಗಡಿ ನುಸುಳುವಿಕೆಗೆ,ಬಾಂಗ್ಲಾ ನುಸುಳುಕೋರರ ಉಪಟಳಕಕ್ಕೆ, ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರು ವಿದ್ವಂಸಕ ಕೃತ್ಯಗಳಿಗೆ ಪಿತಾಮಹ ಗಾಂಧೀಜಿ ಗಾಂಧೀಜಿ ಗಾಂಧೀಜಿ. ಕಣ್ಣಪೊರೆ ಕಳಚಿ ಓದಿ ಆಗ ಮಾತ್ರ ನಿಜವಾದ ಮಹಾತ್ಮ ಯಾರೆಂದು ಗೊತ್ತಾಗುತ್ತದೆ.
Source: http://indiansaga.com/whoswho/godse_letter.html

https://scroll.in/article/702110/what- were-godses-reasons-for-killing-gandhi

http://postcard.news/nathuram-godses-last-words- killed-gandhi/

http://www.smileosmile.com/celebrities/why-i-killed-gandhi-nathuram- godses-final-address-to-the-court/

-ಶಿವಾಂಶ

Tags

Related Articles

Close