ಅಂಕಣ

1500 ಕ್ಕೂ ಮಿಗಿಲಾದ ರೈತರೂ, ಅಧಿಕಾರಿಗಳೂ, ಅಮಾಯಕ ಜನರ ಸಾವು ಕಳೆದ 4 ವರ್ಷಗಳಲ್ಲಿ ನಡೆದುದು ಕಾಣದ ಕಮ್ಮಿನಿಷ್ಠರಿಗೆ ಕಂಡಿದ್ದು ಆ 2 ಸಾವು ಮಾತ್ರ!!! ದುರಂತವಲ್ಲವೇ ಇದು??

ನಿಮ್ಮಲ್ಲಿ ಕೆಲವು ವಿಚಾರಗಳನ್ನು ‌ಹಂಚುವ ಮುಂಚೆ‌ ಒಂದು ತಮಾಷೆಯ‌ ವಿಷಯ ಹೇಳುತ್ತೇನೆ. ಬಹುಶ: ನೀವದನ್ನು ಗಮನಿಸಿರಲೂ ಬಹುದು.

ಅದ್ಯಾವುದೋ ಲಾರಿ ಚಾಲಕನೋರ್ವ ತನ್ನ ಸೆಕ್ಯೂರಿಟಿಗೆ ಸಂಬಂಧಿಸಿದಂತೆ ಟ್ರಕ್ಕಿನ ಹಿಂದೆ ‘ದಾರಿಗಾಗಿ ಶಬ್ದ ಮಾಡಿ’ ಎಂದು
ಬರೆದಿರುತ್ತಾನೆ. ಇನ್ನೊಬ್ಬನ್ಯಾವನೋ ತನ್ನ ನಿಗೂಢ ಪ್ರಿಯತಮೆಗೆ ನೀಡುತ್ತಿರುವ ಸೂಚನೆಯೇನೋಯೆಂಬಂತೆ ‘ಫಿರ್ ಮಿಲೇಂಗೆ’ ಎಂದು ಕೆತ್ತಿಸಿರುತ್ತಾನೆ. ಇಂಥ ನಿರುಪದ್ರವಿ ಅಕ್ಷರಗಳ ನಡುವೆಯೇ ಹಲವು ಬಾರಿ ಪ್ರಾಸಬದ್ಧವಾದ ಕೆಲವು ಯಡವಟ್ಟು ವಾಕ್ಯಗಳೂ ಕೂಡ ನುಸುಳಿ ಬಿಡುತ್ತವೆ. ಉದಾಹರಣೆಗೆ –

“ಅಕ್ಷರ ಕಲಿತ ನಾರಿ – ಮಾವನೊಡನೆ ಪರಾರಿ !”

ಇದರ ನಿಗೂಢಾರ್ಥವನ್ನು ನಾವು ಊಹಿಸಬಹುದು. ಆತ‌‌ ಅದೆಷ್ಟು‌ ಕಲಿತರೆ ಏನು ಪ್ರಯೋಜನ ದೇಶಕ್ಕೆ ಆತ
ಹೊರೆಯಾದರೆ.. ನಿಜವಲ್ಲವೇ.. ಈ ರಾಷ್ಟ್ರ ಬಯಸುವುದು ಪ್ರತೀ ಸಮಸ್ಯೆಗೂ ಜನ ಸ್ಪಂದಿಸಬೇಕೆಂದು. ಆದರೆ ವಿದ್ಯೆ‌ ಕಲಿತ ಕೆಲವು ಬುದ್ಧಿಜೀವಿಗಳಿಂದ ಅದು
ಅಸಾಧ್ಯವಾಗಿ ಹೋಯಿತು. ಕೆಲವರನ್ನು‌ ವಿರೋಧಿಸುವ‌ ನೆಪದಲ್ಲಿ ದೇಶದ್ರೋಹಿಗಳಾದರು..!!

ನಿನ್ನೆ ಕಾಣದ ಕೈಗಳು ಕಲಬುರ್ಗಿಯನ್ನು ಹತ್ಯೆ‌‌ ಮಾಡಿದವು,‌ಇಂದು ಅದೇ ಕೈಗಳು ಗೌರಿಯನ್ನು ಹತ್ಯೆ ಮಾಡಿವೆ. ನಾಳೆಯ ದಿವಸ ನಾವುಗಳೇ ಹತ್ಯೆಯಾಗಬಲ್ಲದು. ಹೀಗೆಂದು ಬೀದಿ ಬೀದಿಯಲ್ಲಿ ಬೊಬ್ಬಿಡುತ್ತಿದ್ದವರು ಲದ್ಧಿಜೀವಿ ಎಡಪಂಥೀಯರು. ಆ ಸರ್ವ ಬುದ್ಧಿಜೀವಿಗಳಿಗೆ ನನ್ನ ಕಡೆಯಿಂದ‌ ಒಂದು ಪ್ರಶ್ನೆಯಿದೆ. ನನಗೆ‌ ಅರಿವಿದೆ, ಆ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕತೆಯನ್ನೂ ಕಳೆದು ಕೂತ ಮಹಾನುಭಾವರು ಅವರೆಂದು. ಆದರೂ ಪ್ರಯತ್ನಿಸಿ ನೋಡೋಣ.!!

2015 ನೆಯ ಇಸವಿಯಲ್ಲಿ‌ 400, 2016ರ ಎಪ್ರಿಲ್ ನಿಂದ 2017ರ ಮಾರ್ಚಿನ ತನಕ 817.. ಇದಾವುದರ ಅಂಕಿ-ಅಂಶವೆಂದು ‌ಯೋಚಿಸುತ್ತಿದ್ದೀರಾ?? ನಮ್ಮ ಕರುನಾಡಿನ ರೈತ ಮಾಡಿದ ಆತ್ಮಹತ್ಯೆ‌ಯ‌ ಕುರಿತಾದ ಲೆಕ್ಕಾಚಾರ ಸ್ವಾಮೀ..!! ಮತ್ತೆ ಅವಕ್ಕೆ ಕಾರಣಗಳು ಬರಗಾಲ.. ಬೆಳೆಗಳ ನಾಶ.. ಇದಕ್ಕೆ ಸರಕಾರ ಕೈಗೊಂಡ‌ ಕ್ರಮವೇನು?? ಶೂನ್ಯ.. ಇಂತಹ ಪರಿಸ್ಥಿಯಲ್ಲಿ ಸರಕಾರ ರೈತರ ಪರವಾಗಿ ನಿಲುವನ್ನು ಕೈಗೊಳ್ಳಲು ನಾವೆಲ್ಲಾ ಒಟ್ಟಾಗಿ ಹೋರಾಡಿ ಮುಖ್ಯಮಂತ್ರಿಯವರ ನಿದ್ದೆಯನ್ನು ಹೋಗಲಾಡಿಸುವ ಪ್ರಯತ್ನವನ್ನು‌ ಮಾಡಬೇಕಿತ್ತು.‌ಆದರೆ ಈ ಹೋರಾಟವನ್ನು ಕೆಲವು ರೈತರ ಪರವಾದ‌ ಸಂಘಟನೆಗಳು ಮಾಡಲು ಪ್ರಾರಂಭಿಸಿದಾಗ‌ ಅವರಿಗೆ ಸಿಕ್ಕ‌‌ ಬಿರುದು ,”ರೈತರ ಸಾವನ್ನು ಇವರು ರಾಜಕೀಯ‌ ತಂತ್ರವಾಗಿ ಬಳಸುತ್ತಿದ್ದಾರೆ..”!! ಎಡಪಂಥೀಯರ ವಾದವೂ ಇದೇ‌ ಆದುದು ದುರಂತ.. ವ್ಹಾ..!! ಮಿತ್ರರೇ.. ಒಂದು ಪ್ರಶ್ನೆಗೆ‌ ಉತ್ತರಿಸಿ. ಪ್ರತೀ ದಿವಸ ನಾವು ಗೋಬಿ ಮಂಚೂರಿಯನ್ನು‌ ಆಸ್ವಾದಿಸುವಾಗ, ಸಮೋಸದ‌ ಸವಿಯನ್ನುಣ್ಣುವಾಗ‌‌ ಆತ‌ ಬೆಳೆದ ಬೆಳೆಯ ಪ್ರತಿಫಲವದೆಂಬ‌‌ ಚಿಂತನೆಯೂ ನಮಗೆ ಬರುವುದಿಲ್ಲ. ಅದೂ ಒಂದು ದುರಂತವೇ.. ಇಡೀಯ ವರ್ಷ ಕಷ್ಟಪಟ್ಟು ದುಡಿಯವ ಆತನ ಸಾವು ಮಾತ್ರ ಕಮ್ಮಿನಿಷ್ಠರಿಗೆ ನಗಣ್ಯವಾಯಿತು.‌ ಅವರ ಸಾವಿನ ಕುರಿತಾಗಿ ಒಂದು ಧ್ವನಿಯೂ ‌ಅವರಿಂದ‌ ಬಂದಿಲ್ಲ. ಭವಿಷ್ಯದಲ್ಲಿ‌ ರೈತನ ಜೀವ ಮಹತ್ವ ಅರಿಯುವ ಸಮಯದಲ್ಲಿ‌ ಕಾಲ ಬಹಳಷ್ಟು ಮುಂದುವರಿದಿರುತ್ತದೆ‌ ಅನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲವಾಗಿ ಹೋಯಿತೇ ಆ ಮಹಾನ್ ದೇಶಭಕ್ತರಿಗೆ(?) ?? ಅನ್ನದ‌ ಬದಲು ಮಣ್ಣು ತಿನ್ನಲು ಈಗಾಗಲೇ ತಯಾರಿಯನ್ನು ಕಮ್ಮಿನಿಷ್ಠರು ಹಾಗೂ ಕಾಂಗಿಗಳು ತಯಾರಿರುವ ಹಾಗಿದೆ..
ಇನ್ನೂ ಕೆಲವು ವಿಚಾರಗಳನ್ನು ನಿಮ್ಮಲ್ಲಿ‌ ಹಂಚಬೇಕು. ಡಿ‌ ಕೆ ರವಿ, ಡಿವೈಯಸ್ಪಿ ಗಣಪತಿ ಇವರುಗಳ ಸಾವುಗಳು ಅನುಮಾಸ್ಪದವಾದರೂ‌ ಅದರ ವಿರುದ್ಧ‌ ಕಮಂಗಿಗಳು ಧ್ವನಿಯೆತ್ತಿಲ್ಲ. ರವಿಯವರ ಸಾವು ಆತ್ಮಹತ್ಯೆಯೆಂಬುದಾಗಿ ತನಿಖೆ‌ ಪ್ರಾರಂಭವಾಗಬೇಕಾದರೇ ತೀರ್ಪಿಟ್ಟರು. ಓರ್ವ ದಕ್ಷ ‌‌ಅಧಿಕಾರಿ ಭ್ರಷ್ಟಾಚಾರಿಗಳಿಗೆ ಸ್ವಪ್ನದಲ್ಲೂ ಕಾಡುತ್ತಿದ್ಧವರು ಆತ್ಮಹತ್ಯೆ‌‌ ಮಾಡುತ್ತಾರೆಂದು ಊಹಿಸಲೂ ಸಾಧ್ಯವಿಲ್ಲ. ಆದರೆ ಕಮಂಗಿ ಬುದ್ಧಿಜೀವಿಗಳಿಗೆ ದಕ್ಷ ಅಧಿಕಾರಿಗಳೂ,‌ಪ್ರಾಮಾಣಿಕರೂ ಬೇಡವಾದರು. ಅವರಿಗೆ ಬೇಕಾದುದು ಅಕ್ಷರಶ: ಹೊಣ್ಣು ಹಾಗೂ‌ ಮಣ್ಣು..!!

ಮೂರನೆಯ ವಿಚಾರ.. ರುದ್ರೇಶನ ಹತ್ಯೆ‌ ಬರ್ಬರವಾಗಿ ಹೋಯಿತು. ಅದೂ ಹಾಡುಹಗಲೇ.. ಆತ‌ ‌ಯಾವುದೇ ಸಂಘಟನೆಗೆ ಸೇರಿರಲಿ. ಆತನದ್ದೂ‌ ಒಂದು ಜೀವಯೆಂಬುದಾಗಿ ಆ ಕ್ಷಣದಲ್ಲಿ‌ ಅವರಿಗೆ ಗೋಚರಿಸಲಿಲ್ಲವೇ?? ಗೌರಿ ಸಾವು ಮಾತ್ರ ಒಂದು ಸಾವು. ಉಳಿದವರ ಸಾವು ಮಾತ್ರ‌ ಏನೂ ಅಲ್ಲವಾ?? ಮಡಿವಾಳ ಹತ್ಯೆಯಾಯಿತು. ಅದರ ಕುರಿತಾಗಿಯೂ ಕಮ್ಮಿನಿಷ್ಠರು ಬಾಯಿ ಬಿಡಲಿಲ್ಲ. ನೆನಪಿರಲಿ ಕಳೆದ 4 ವರ್ಷಗಳಲ್ಲಿ ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಗಳಾಗಿವೆ. ಆದರೂ ದೇಶಭಕ್ತರು ನಾವೆಂದು ಊರಿಡೀ ಡಂಗೂರ ಸಾರಿಕೊಂಡು ತಿರುಗಾಡುತ್ತಿರುವ ಕಮ್ಮಿನಿಷ್ಠರು ಅವುಗಳ ಕುರಿತಾಗಿ ಒಂದು ಮಾತನ್ನೂ‌‌ ಆಡಲಿಲ್ಲ. ಅದರ ನಿಗೂಢತೆಯೇನು ಲದ್ಧಿಜೀವಿಗಳೇ?? ಎಡಬಿಡಂಗಿಗಳೇ??

ಹಾ… ಪ್ರಮುಖ ವಿಚಾರ.. “ನಾನೇ ಗೌರಿ. ನಾವೆಲ್ಲ ಗೌರಿ” ಆಂದೋಲನ. ಮರೆಯಲಾದೀತೇ?? ಛೇ. ಓರ್ವ ವಿಚಾರಧಾರಿಯ ಬರ್ಬರವಾದ‌ ಹತ್ಯೆ ನಡೆದಿದೆ. ಇದಕ್ಕೆ ನಮ್ಮೆಲ್ಲರ ವಿರೋಧವಿದೆ. ಬನ್ನಿ ನಮ್ಮನ್ನೂ ಹತ್ಯೆ‌ ಮಾಡಿ ಮುಂತಾದ‌ ಘೋಷಣಾ ವಾಕ್ಯಗಳು. ಶಹಬ್ಬಾಸ್..!! ಸ್ವಾಮೀ.. ಪತ್ರಕರ್ತೆಯೋರ್ವಳ ಹತ್ಯೆ‌ ಖಂಡಿಸಬೇಕಾದ್ದೇ. ನನ್ನ ಸಹಮತವೂ ಆ ವಿರೋಧಕ್ಕಿದೆ. ಆದರೆ ಆಕೆ‌ ಬರೆಯುತ್ತಿದ್ದ ಪತ್ರಿಕೆಯಲ್ಲಿನ ವಿಚಾರಗಳ ಕುರಿತಾಗಿ‌ ನೀವು ಓದಿದ್ದೀರಾ?? ನನಗೆ‌ ಅರಿವಿದೆ. ಹೋರಾಟ ‌ಮಾಡಿದವರಾರು ಓದಿಲ್ಲ.‌ಓರ್ವ ಪ್ರಧಾನಿ ಹುದ್ದೆಯಲ್ಲಿರುವವರನ್ನು ಸಲಿಂಗಿ‌ ಯೆಂದು ಕರೆಯುವುದು ಪತ್ರಕರ್ತರ ಪಾಲಿನ ಅಭಿವ್ಯಕ್ತಿ ಸ್ವಾತಂತ್ರ್ಯವೇ.. ಅದು ಅಭಿವ್ಯಕ್ತಿ ಹರಣ ವೆಂದೇ ನಾನು ಹೇಳುತ್ತೇನೆ. ಅಂತಹ ವಿಚಾರಧಾರೆಗಳನ್ನು‌ ಸಮಾಜದ ಮುಂದೆ ಪ್ರಸ್ತುತಪಡಿಸಿದ‌ ಗೌರಿಯ ಪರವಾಗಿ ಹೋರಾಡುತ್ತೀರೆಂದರೆ ಮುಗ್ಧ‌ ಅಮಾಯಕ ದೇಶಪ್ರೇಮಿಗಳ ಸಾವಿನ ವಿರುದ್ಧ‌ ಯಾಕಿಲ್ಲ?? ಅವರು ಕಟ್ಟರ್ ದೇಶಪ್ರೇಮಿಗಳೆಂದೇ?? ಹಾಗಾದರೆ ನೀವುಗಳು ಏನು??ಉತ್ತರಿಸಬೇಕಿದೆ.

ಅಂತಿಮ ಮಾತು. :

ಕಮ್ಮಿನಿಷ್ಠರೇ.. ನನಗೆ ಗೊತ್ತಿದೆ. ದೇಶಪ್ರೇಮವನ್ನು ಪಸರಿಸುವ, ದೇಶವಿರೋಧಿಗಳ ಹಗರಣವನ್ನು ಬಯಲು ಮಾಡುವ ಸುದ್ದಿಗಳು ನಿಮಗೆ “ಫೇಕ್” ಆಗಿ ಗೋಚರಿಸಬಹುದು. ಆದರೆ ದೇಶದ‌ ಒಳಿತಿಗೆ ಅದುವೇ ಪೂರಕ. ರೈತರ ಸಾವಿಗೆ ದು:ಖಿಸದ ನಿಮ್ಮ ಮನಸ್ಥಿತಿ, ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಸಾವಿಗೆ ಕರಗದ ನಿಮ್ಮ ಸಿದ್ಧಾಂತ, ದೇಶಪ್ರೇಮಿಗಳ ಸಾವುಗಳಿಗೆ ವಿರೋಧ ವ್ಯಕ್ತಪಡಿಸದ ನಿಮ್ಮ ಅಗತ್ಯತೆ‌ ಈ ದೇಶಕ್ಕೆ ಖಂಡಿತವಾಗಿಯೂ‌ ಅನಗತ್ಯ. ಒಂದು ಮಾತಿದೆಯಲ್ಲಾ.. “ಅಕ್ಷರ ಕಲಿತ‌ ನಾರಿ – ಮಾವನೊಡನೆ ಪರಾರಿ”. ಇದನ್ನು ಯಾರಿಗೆ ಹೇಗೆ ಹೋಲಿಸುತ್ತೀರೆಂಬುದು ನಿಮಗೆ ಬಿಟ್ಟ ವಿಚಾರ..!!

ಒಟ್ಟಿನಲ್ಲಿ ಸಾವಿರಾರು ಸಾವುಗಳು ಕಾಣದ ಕಮ್ಮಿನಿಷ್ಠರಿಗೆ ಕೇವಲ 2 ಸಾವುಗಳು ಕಂಡಿದ್ದು ಮಾತ್ರ‌ ದುರಂತದ ಪರಮಾವಧಿ!!!

– ವಸಿಷ್ಠ

Tags

Related Articles

Close