ಅಂಕಣ

1990 ರ ಒಂದು ಸತ್ಯ ಕಥೆ !! ಗುಜರಾತಿನ ಇಬ್ಬರು ಯುವ ರಾಜಕಾರಣಿಗಳು, ಇಬ್ಬರು ಯುವತಿಯರು ಮತ್ತು ಮರೆಯಲಾಗದ ರೈಲು ಪಯಣ !!

ಅದು 1990 ರ ಬೇಸಿಗೆ ಕಾಲದ ಸಮಯ. ಭಾರತೀಯ ರೈಲ್ವೇ ಇಲಾಖೆಯ ಅಧಿಕಾರಿಗಳು, ನನ್ನ ಸ್ನೇಹಿತ ಹಾಗೂ ನಾನು ದೆಹಲಿಯಿಂದ ಲಕ್ನೋವಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೆವು. ನಾವು ಪ್ರಯಾಣಿಸಿತ್ತಿದ್ದ ಭೋಗಿಯಲ್ಲೇ ಇಬ್ಬರು ಸಚಿವರೂ ಪ್ರಯಾಣಿಸುತ್ತಿದ್ದರು. ಆದರೆ ಇತರೆ 12 ಜನರ ವರ್ತನೆ, ಮೀಸಲಾತಿ ಸೀಟುಗಳಿಲ್ಲದೇ ಅದೇ ಭೋಗಿಯಲ್ಲಿ ಪ್ರಯಾಣಿಸುತ್ತಿದ್ದ ಚಿತ್ರಣ ಮಾತ್ರ ಭಯಾನಕವಾಗಿತ್ತು. ಸೀಟುಗಳನ್ನು ಕಾಯ್ದಿರಿಸಿದ ನಮ್ಮನ್ನೇ ಅವರು ತೆರಳಲು ಆದೇಶಿಸಿದ್ದರು, ಅಷ್ಟೇ ಅಲ್ಲ ಆ ಭೋಗಿಯಲ್ಲಿದ್ದ ಸಾಮಾನುಗಳ ಚೀಲಗಳ ಮೇಲೆ ಕುಳಿತುಕೊಳ್ಳಲು ಹೇಳಿ, ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿ ನಿಂದಿಸುತ್ತಿದ್ದರು.

ನಾವು ಭಯದಿಂದಲೇ ಕಾಲಕಳೆಯುವ ಹಾಗಾಯಿತು, ವಿಪರೀತ ಕೋಪದಿಂದಲೂ ಕೂಡಿದ ನಮ್ಮ ಪರಿಸ್ಥಿತಿ ಹೇಳತೀರದು. ಅಶಿಸ್ತಿನ ವ್ಯಕ್ತಿಗಳೊಂದಿಗೆ ಕಳೆದ ಭಯಾನಕ ರಾತ್ರಿ ಅದಾಗಿತ್ತು. ಗೌರವ ಹಾಗೂ ಅಗೌರವದ ನಡುವಿನ ವ್ಯತ್ಯಾಸವನ್ನು ಅರಿಯುವುದರಲ್ಲಿ ನಾವು ಸೋತೆವು. ಪ್ರಯಾಣದ ಟಿಕೆಟ್ ಪರೀಕ್ಷಕನ ಜತೆಗೆ ಉಳಿದ ಎಲ್ಲಾ ಪ್ರಯಾಣಿಕರೂ ಕಣ್ಮರೆಯಾದಂತೆ ಭಾಸವಾಗುತ್ತಿತ್ತು.

ಗೂಂಡಾಗಳು ನಮ್ಮನ್ನು ದೈಹಿಕವಾಗಿ ಹಾನಿ ಮಾಡದಿದ್ದರೂ ಮರುದಿನ ನಾವು ದೆಹಲಿಗೆ ತಲುಪುವಾಗ ಮನಸ್ಸಿಗಂತೂ ಅಗಾಧ ಘಾಸಿಯಾಗಿತ್ತು. ನನ್ನ ಸ್ನೇಹಿತ ಈ ಘಟನೆಯಿಂದ ಅದೆಷ್ಟು ಆಘಾತಕ್ಕೊಳಗಾದನೆಂದರೆ ಮುಂದಿನ ಅಹಮದಾಬಾದ್ ಪ್ರಯಾಣವನ್ನು ಸ್ಥಗಿತಗೊಳಿಸಿ ದೆಹಲಿಯಲ್ಲೇ ಉಳಿದುಕೊಂಡ. ಆದರೆ ನಾನು ಮಾತ್ರ ನನ್ನ ಪ್ರಯಾಣವನ್ನು ಮುಂದುವರಿಸಲು ಬಯಸಿದ್ದೆ, ನನ್ನ ಇನ್ನೊಬ್ಬ ಸ್ನೇಹಿತ ನನ್ನ ಜತೆ ಕೂಡಿಕೊಳ್ಳುತ್ತಿರುವುದು ಅದಕ್ಕೆ ಒಂದು ಕಾರಣ. ರೈಲ್ವೇ ಇಲಾಖೆಯ ಕಾರ್ಯನಿರ್ವಹಣಾ ನಿರ್ದೇಶಕರಾಗಿದ್ದರು. ಅವಳ ಹೆಸರು ಉಟ್ಪಲಪರ್ಣಾ ಹಜಾರಿಕಾ. ನಾವು ತಡರಾತ್ರಿ ಗುಜರಾತ್ ರಾಜಧಾನಿಯಿಂದ ರೈಲನ್ನು ಹತ್ತಿದೆವು. ಆದರೆ ಒಂದು ಬದಲಾವಣೆಯೊಂದಿಗೆ. ಈ ಬಾರಿ ಯಾವುದೇ ಸೀಟುಗಳನ್ನು ಕಾಯ್ದಿರಿಸಲಿಲ್ಲ, ಬದಲಾಗಿ ಇತರೆ ಪ್ರಯಾಣಿಕರ ರೀತಿಯಲ್ಲೇ ಪ್ರಯಾಣಿಸಲು ನಿರ್ಧರಿಸಿದ್ದೆವು.

ಪ್ರಥಮ ದರ್ಜೆಯಲ್ಲಿ ಪ್ರಯಾಣದ ಟಿಕೆಟ್ ಪರೀಕ್ಷಕನನ್ನು ಭೇಟಿಯಾಗಿ ಅಹಮದಾಬಾದ್ ಗೆ ತೆರಳಬೇಕೆಂದು ಹೇಳಿದೆವು. ಆದರೆ ರೈಲಿನಲ್ಲಿ ಸೀಟುಗಳು ಈಗಾಗಲೇ ಭರ್ತಿಯಾಗಿದ್ದವು. ಆದರೂ ಆತ ವಿನಮ್ರವಾಗಿ ಮಾತನಾಡಿ, ಎಲ್ಲಿಗೋ ಕರೆದುಕೊಂಡು ಹೋದರು. ಅವರ ವರ್ತನೆಯಿಂದ ನಮಗೆ ಒಂದಂತೂ ಸ್ಪಷ್ಟವಾಯಿತು. ಅವರು ನಮಗೆ ಸೀಟು ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಆಗ ಇಬ್ಬರು ಸಂಭಾವ್ಯ ಸಹಪ್ರಯಾಣಿಕರನ್ನು ನೋಡಿದೆ, ಇಬ್ಬರು ರಾಜಕಾರಣಿಗಳು, ಅವರು ತೊಟ್ಟ ಬಿಳಿ ಖಾದಿಯಿಂದ ನನಗೆ ಅದು ಖಾತ್ರಿಯಾಯಿತು. ಆದರೆ ನಾನಂತೂ ಭಯಭೀತನಾದೆ. “ಅವರು ಸರಳ ವ್ಯಕ್ತಿಗಳು, ಈ ಮಾರ್ಗದಲ್ಲಿ ನಿತ್ಯವೂ ಪ್ರಯಾಣ ಮಾಡುತ್ತಿರುವವರು, ಯಾವುದೇ ರೀತಿಯಲ್ಲಿ ಭಯಪಡುವ ಅವಶ್ಯಕತೆಯಿಲ್ಲ” ಎಂದು ಟಿಕೇಟ್ ಪರೀಕ್ಷಕ ಭರವಸೆಯನ್ನು ಕೊಟ್ಟ. ಅವರಲ್ಲಿ ಒಬ್ಬರು ಸುಮಾರು 40 ವರ್ಷ ಪ್ರಾಯದ, ಸಾಮಾನ್ಯ ಹಾಗೂ ಅಕ್ಕರೆಯ ಮುಖವನ್ನು ಹೊಂದಿದ್ದರು, ಇನ್ನೊಬ್ಬರು 30 ವರ್ಷ ಆಸುಪಾಸಿನ ಪ್ರಭಾವ ಬೀರುವ ವ್ಯಕ್ತಿತ್ವವನ್ನು ಹೊಂದಿದ್ದರು. ಅವರೊಂದಿಗೆ ತಮಗೂ ಒಂದು ಜಾಗ ನೀಡಲು ಪ್ರಯತ್ನಿಸುತ್ತಿರುವಂತೆ ನಗು ಮುಖದಿಂದಲೇ ನಮ್ಮನ್ನು ಗಮನಿಸಿದರು.

ಅವರ ಪರಿಚಯವನ್ನು ನಮ್ಮೊಂದಿಗೆ ಹಂಚಿದರು : ಗುಜರಾತಿನ ಈರ್ವರು ಬಿಜೆಪಿ ಪಕ್ಷದ ನಾಯಕರಾಗಿದ್ದರು. ಅವರ ಹೆಸರುಗಳನ್ನೂ ಅವರು ಹೇಳಿದ್ದರು. ಆದರೆ ಸಹಪ್ರಯಾಣಿಕರ ಹೆಸರನ್ನು ಆ ಸಂದರ್ಭದಲ್ಲಿ ನೆನಪಿನಲ್ಲಿಟ್ಟುಕೊಳ್ಳುವ ಪ್ರಮೇಯ ಬಂದಿರಲಿಲ್ಲ. ನಾವೂ ನಮ್ಮ ಪರಿಚಯವನ್ನು ಮಾಡಿಕೊಂಡೆವು, ಇಬ್ಬರು ಅಸ್ಸಾಮಿನ ರೈಲ್ವೇ ಇಲಾಖೆಯಲ್ಲಿ ಸೇವೆ ಮಾಡುವ ಅಧಿಕಾರಿಗಳೆಂದು. ಹಾಗೇ ನಮ್ಮ ಸಂವಾದ ಮುಂದುವರಿದು, ಬೇರೆ ಬೇರೆ ವಿಚಾರದ ಕುರಿತಾಗಿಯೂ ನಡೆದು ಹೋಯಿತು, ಪ್ರಮುಖವಾಗಿ ಇತಿಹಾಸ, ರಾಜಕೀಯವೇ ಆಗಿತ್ತು. ಅತೀ ಬುದ್ಧಿವಂತನಾಗಿದ್ದ ನನ್ನ ಸ್ನೇಹಿತ ದೆಹಲಿ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದ. ಆತ ಚರ್ಚೆಯನ್ನು ಸಾಂಗವಾಗಿ ನಡೆಸುತ್ತಿದ್ದ. ಹಾಗೇ ನಾನೂ ಅದರ ಒಳಹೊಕ್ಕೆ. ಹಿಂದೂ ಮಹಾಸಭಾ ಹಾಗೂ ಮುಸ್ಲಿಮ್ ಲೀಗ್ ನ ಸ್ಥಾಪನೆಯ ಕುರಿತಾಗಿಯೂ ಚರ್ಚೆ ನಡೆಯಿತು.

ಅವರಲ್ಲಿ ಹಿರಿಯರಾಗಿದ್ದವರು ಬಹಳ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಆದರೆ ಕಿರಿಯರು ಸ್ವಲ್ಪ ಮೌನವೆಂದು ಎನಿಸಿದರೂ, ಅವರ ದೇಹದ ಭಾಷೆಯೇ ಎಲ್ಲವನ್ನೂ ವಿವರಿಸುವಂತಿತ್ತು. ಅವರ ಚಿಂತನೆಗಳು ಈ ಚರ್ಚೆಗಳನ್ನೇ ತುಂಬಿಕೊಂಡಿವೆ ಎಂಬುದು ಅವರ ನಡೆಯಿಂದಲೇ ಸ್ಪಷ್ಟವಾಗುತ್ತಿತ್ತು. ಆ ಕ್ಷಣದಲ್ಲಿ ನಾನು ಶ್ರೀಯುತ ಶಾಮ್ ಪ್ರಸಾದ್ ಮುಖರ್ಜಿಯರ ಸಾವಿನ ಕುರಿತಾಗಿ ಚರ್ಚಿಸಿದೆ. ಯಾಕೆ ಅವರ ಸಾವು ನಿಗೂಢವಾಗಿಯೆ ಉಳಿಯಿತೆಂದು ಅನೇಕರು ಹೇಳುತ್ತಾರೆ? ಅವರು ಆಗ ಒಂದು ಪ್ರಶ್ನೆಯನ್ನು ಕೇಳಿದರು,”ನಿಮಗೆ ಶಾಮ್ ಪ್ರಸಾದ್ ಮುಖರ್ಜಿ ಹೇಗೆ ಗೊತ್ತು?”. ” ನನ್ನ ತಂದೆಯವರು ಕಲ್ಲತ್ತಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಯಾಗಿದ್ದಾಗ , ಆ ವಿಶ್ವವಿದ್ಯಾಲಯ ಉಪಕುಲಪತಿಗಳಾಗಿ ಅಸ್ಸಾಮಿನ ಓರ್ವ ಯುವಕನಿಗೆ ವಿದ್ಯಾರ್ಥಿವೇತನ ಸಿಗುವಲ್ಲಿ ಪ್ರಯತ್ನಪಟ್ಟಿದ್ದರು. ನನ್ನ ತಂದೆ ಇದನ್ನು ಸದಾ ನೆನಪಿಸಿಕೊಳ್ಳುತ್ತಿದ್ದರು ಹಾಗೂ ಅವರ ಅಕಾಲಿಕ ಮರಣದ ಕುರಿತಾಗಿ ವಿಷಾದವನ್ನು ವ್ಯಕ್ತಪಡಿಸುತ್ತಿದ್ದರು.

ಕಿರಿಯ ವ್ಯಕ್ತಿ ಆಗ ಆಚೆ ನೋಡಿ ಗಟ್ಟಿ ಧ್ವನಿಯಲ್ಲಿ ಅವನಷ್ಟಕ್ಕೇ ಮಾತನಾಡ ಪ್ರಾರಂಭಿಸಿದರು, “ಇಷ್ಟೊಂದು ವಿಚಾರಗಳನ್ನು ಅವರು ತಿಳಿದಿರುವುದು ಉತ್ತಮ ಸಂಗತಿಯೇ.. ”

ತಕ್ಷಣ ಹಿರಿಯ ವ್ಯಕ್ತಿ ಒಂದು ವಿಚಾರವನ್ನು ಪ್ರಸ್ತಾಪಿಸಿದರು, “ನೀವ್ಯಾಕೆ ಗುಜರಾತಿನಲ್ಲಿ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಬಾರದು?” ನಾವು ಗುಜರಾತಿಗಳಲ್ಲ ಎಂದು ಹೇಳಿ ನಕ್ಕೆವು. ಆಗ ಕಿರಿಯ ವ್ಯಕ್ತಿ ಬಲವಂತವಾಗಿ ವಿರೋಧಿಸುವಂತೆ,” ಆದರೆ ಏನು?ನಮಗೆ ಏನೂ ಅದರಿಂದ ಸಮಸ್ಯೆಯಿಲ್ಲ. ನಮ್ಮ ರಾಜ್ಯದಲ್ಲಿ ನಾವು ಪ್ರತಿಭೆಗಳನ್ನು ಸ್ವಾಗತಿಸುತ್ತೇವೆ.” ಅವರ ಶಾಂತವಾದ ವರ್ತನೆಯಲ್ಲಿಯೂ ನಾನು ಅಗಾಧ ಚಿಂತನೆಯ ಕಿಡಿಯನ್ನು ಕಂಡೆ.

ಆಗ ಆಹಾರವು ಬಂದಿತು. ನಾಲ್ಕು ಸಸ್ಯಾಹಾರಿ ಥಾಲಿ. ಮೌನದಿಂದಲೇ ಅದನ್ನು ಸೇವಿಸಿದೆವು. ನಂತರ ಬಿಲ್ ಪಾವತಿಸುವ ವಿಷಯ ಬಂದಾಗ, ನಮ್ಮ ನಾಲ್ಕೂ ಜನರ ಖರ್ಚನ್ನೂ ಕಿರಿಯ ವ್ಯಕ್ತಿಯೇ ಪಾವತಿಸಿದರು. ನಾನು ಧನ್ಯವಾದ ಎಂಬುದಾಗಿ ನಯವಾಗಿ ಹೇಳಿದೆ,ಆದರೆ ಅದು ಸಾಮಾನ್ಯವಾಗಿಯೇ ಆಡುವ ಮಾತೆಂದು ಅದನ್ನು ಹಾಗೆಯೇ ತಿರಸ್ಕರಿಸಿದರು. ಆತನ ಕಣ್ಣಿನಲ್ಲಿ ಅದೇನೋ ಹೊಳಪು ಗೋಚರಿಸುತ್ತಿತ್ತು, ಯಾವತ್ತೂ ತಪ್ಪಿಸಲಾಗದ ಸನ್ನಿವೇಶವಾಗತ್ತು ಅದು. ಅವರು ಮಾತನಾಡಿದ್ದು ವಿರಳ, ಎಲ್ಲವನ್ನೂ ಆಲಿಸುತ್ತಿದ್ದರಷ್ಟೇ.

ಟಿಕೇಟ್ ಪರೀಕ್ಷಕ ರೈಲಿನಲ್ಲಿ ಒಂದೂ ಸೀಟು ಲಭ್ಯವಿಲ್ಲ ಎಂಬ ಸಂದೇಶವನ್ನು ತಂದರು. ಆಗ ಆ ಈರ್ವರೂ ತಾವು ಕುಳಿತಿದ್ದ ಸೀಡಿನಿಂದ ಎದ್ದು, “ಪರವಾಗಿಲ್ಲ, ನಾವು ಸುಧಾರಿಸುತ್ತೇವೆ” ಎಂದರು. ಕೆಳಗೆ ಚಾಪೆಯನ್ನು ಹಾಸಿ ನಿದ್ರಿಸಲು ಪ್ರಾರಂಭಿಸಿದರು , ಆಗ ನಾವು ಸೀಟನಲ್ಲಿ ಕುಳಿತೆವು.

ಎಂತಹ ಬದಲಾವಣೆಯಲ್ಲವೇ ?? ಹಿಂದಿನ ರಾತ್ರಿ ರೈಲಿನಲ್ಲಿ ಭಯದಿಂದಲೇ ಪ್ರಯಾಣ ಮಾಡಿದೆವು ಅದೂ ರಾಜಕಾರಣಿಗಳಿದ್ದಾಗಲೇ, ಈಗಲೂ ನಾವು ರಾಜಕಾರಣಿಗಳೊಂದಿಗೆ ಪ್ರಯಾಣ ಮಾಡುತ್ತಿದ್ದೇವೆ, ಯಾವದೇ ಭಯವಿಲ್ಲದೇ.

ಮರುದಿನ ಬೆಳಿಗ್ಗೆ ಅಹಮದಾಬಾದಿಗೆ ನಾವೆಲ್ಲಾ ತಲುಪಿದೆವು. ಪಟ್ಟಣದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯ ಕುರಿತಾಗಿ ಮಾತಾದವು. ಆಗ ಹಿರಿಯ ವ್ಯಕ್ತಿಯು ಏನಾದರು ಸಮಸ್ಯೆ ಉದ್ಭವಿಸಿದಲ್ಲಿ ತಮ್ಮ ಮನೆಯ ಬಾಗಿಲು ಸದಾ ತೆರೆದಿರುತ್ತದೆ ಎಂಬುದಾಗಿ ಹೇಳಿದರು. ನಮ್ಮ ಮೇಲೆ ನಿಜವಾಗಿಯೂ ಕಳಕಳಿಯಿತ್ತೆಂಬುದು ಅವರ ಧ್ವನಿಯಲ್ಲಿ ಪ್ರತಿಧ್ವನಿಸುತ್ತಿತ್ತು. ಆದರೆ ಅಲ್ಲೇ ಇದ್ದ ಕಿರಿಯ ವ್ಯಕ್ತಿಯು, “ನಾನೊಬ್ಬ ಅಲೆಮಾರಿ. ನಿಮ್ಮನ್ನು ಆಮಂತ್ರಿಸಲು ಸಮರ್ಪಕವಾದ ಮನೆಯಿಲ್ಲ. ಆದರೆ ಹೊಸ ಜಾಗದಲ್ಲಿ ನಿಮಗೆ ಉಳಿದುಕೊಳ್ಳಲು ಆಶ್ರಯದ ವ್ಯವಸ್ಥೆಯನ್ನು ಮಾಡಬಲ್ಲೆ ” ಎಂದರು.

ಅವರ ಆತ್ಮೀಯ ಆಮಂತ್ರಣಕ್ಕೆ ನಾವು ಕೃತಜ್ಞತೆಯನ್ನು ಸಲ್ಲಿಸಿ, ಉಳಿದುಕೊಳ್ಳಲು ಸೌಕರ್ಯಕ್ಕೆ ಯಾವುದೇ ಸಮಸ್ಯೆ ಆಗದು ಎಂದು ಭರವಸೆ ಕೊಟ್ಟೆವು.

ರೈಲು ನಿಲ್ದಾಣದಲ್ಲಿ ನಿಲ್ಲವ ಮೊದಲು, ನನ್ನ ಡೈರಿಯನ್ನು ತೆಗೆದು, ಅವರ ಹೆಸರನ್ನು ಮತ್ತೊಮ್ಮೆ ಕೇಳಿದೆ. ವಿಶಾಲ ಹೃದಯದ ಆ ಸಹಪ್ರಯಾಣಿಕರ ಹೆಸರನ್ನು ಮರೆಯಲು ನಾನೆಂದೂ ತಯಾರಾಗಿಲ್ಲ. ರಾಜಕಾರಣಿಗಳ ಕುರಿತಾಗಿ ನನ್ನಲ್ಲಿ ಮೂಡಿದ್ದ ಅಭಿಪ್ರಾಯವನ್ನು ಮತ್ತೊಮ್ಮೆ ವಿಮರ್ಶಿಸುವಂತೆ ಮಾಡಿದ ಮೇಧಾವಿಗಳು ಅವರು. ಅವರು ಹೇಳಿದ ತಕ್ಷಣ ನಾನು ಡೈರಿಯಲ್ಲಿ ಬರೆದುಕೊಂಡೆ. ಅವರೀರ್ವರು ಯಾರು ಗೊತ್ತೇ ? ಶಂಕರ್ ಸಿಂಘ್ ವಾಘೆಲ ಮತ್ತು ನರೇಂದ್ರ ಮೋದಿ.

1995 ರಲ್ಲಿ ಈ ಘಟನೆಯನ್ನು ಒಂದು ಅಸ್ಸಾಮೀ ಪತ್ರಿಕೆಯಲ್ಲಿಯೂ ಬರೆದಿದ್ದೆ. ಅಸ್ಸಾಮಿನ ಇಬ್ಬರು ಅಪರಿಚಿತ ವ್ಯಕ್ತಿಗಳ ಪ್ರಯಾಣ ಸುಖಕರವಾಗಲು ತಮ್ಮ ಸುಖವನ್ನು ತ್ಯಾಗ ಮಾಡಿದ ಮಹಾನ್ ರಾಜಕಾರಣಿಗಳು ಅವರು. ಇದನ್ನು ಬರೆಯುವಾಗ ಅವರು ಅಷ್ಟೊಂದು ಉತ್ತುಂಗ ಶಿಖರಕ್ಕೆ ಏರಬಲ್ಲರು ಎಂಬ ಕನಸನ್ನೂ ಕಂಡಿರಲಿಲ್ಲ ನಾನು. ಆದರೆ ನಂತರ ನಾನು ಅವರ ಕುರಿತಾಗಿ ತಿಳಿದಾಗ ಹೆಮ್ಮೆಯಿನಿಸಿತ್ತು. 1996 ರಲ್ಲಿ ವಾಘೇಲ ಗುಜರಾತಿನ ಮುಖ್ಯಮಂತ್ರಿಯಾದಾಗ ಸಂತೋಷಪಟ್ಟೆ. 2001 ರಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಆದಾಗ ಅಂತೂ ಬಹಳ ಉತ್ಸಾಹದಿಂದಿದ್ದೆ. ಆದರೆ ಈಗ ಅವರು ಭವ್ಯ ಭಾರತದ ಪ್ರಧಾನಮಂತ್ರಿ.!!
ಪ್ರತೀಬಾರಿಯೂ ಅವರನ್ನು ಟಿವಿಯಲ್ಲಿ ನೋಡಿದಾಗ, ನಾವು ಸವಿದ ಊಟ, ಅವರ ವ್ಯಕ್ತಿತ್ವ, ಹಿಂದಿನ ರಾತ್ರಿಯಲ್ಲಿ ಆದ ಭಯದ ಭಾವಕ್ಕಿಂತ ಮಿಗಿಲಾಗಿ, ಆರೈಕೆ ಹಾಗೂ ಸುರಕ್ಷತೆಯ ಭಾವದ ನೆನಪುಗಳು ಮರುಕಳಿಸುತ್ತವೆ, ಆಗ ನಾನು ಶಿರವನ್ನೇ ಬಾಗಿಸಿ ಗೌರವವನ್ನು ಸೂಚಿಸುತ್ತೇನೆ.

(ಈ ಅನುಭವವನ್ನು ಹಂಚಿಕೊಂಡವರು ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಯಾಗಿರುವ ಶ್ರೀಮತಿ ಲೀನಾ ಶರ್ಮ. ಅವರನ್ನು leenasarma@rediffmail.com ಮೂಲಕ ಸಂಪರ್ಕಿಸಬಹುದು .)

– ವಸಿಷ್ಠ

Tags

Related Articles

Close