ಪ್ರಚಲಿತ

ಯೋಗಿ ಆದಿತ್ಯನಾಥ್ ಸರಕಾರದಿಂದ ಬಿತ್ತು ಮತ್ತೊಂದು ಭಾರೀ ಹೊಡೆತ!! ಪರೀಕ್ಷಾ ಕೇಂದ್ರಕ್ಕೆ ಸಿಸಿಟಿವಿ ಅಳವಡಿಸುತ್ತಿದ್ದಂತೆ ನಾಪತ್ತೆಯಾದ 45000 ಮದರಸಾ ವಿದ್ಯಾರ್ಥಿಗಳು!!!

ಉತ್ತರ ಪ್ರದೇಶದಲ್ಲಿ ಸದ್ಯಕ್ಕೆ ಟ್ರೆಂಡಾಗುತ್ತಿರುವುದು ರಾಜಕೀಯ ಸಂತ ಯೋಹಗಿ ಆದಿತ್ಯನಾಥ್ ರದ್ದು!! ಅಪ್ಪಟ ಕೇಸರಿ ರಾಮ ರಾಜ್ಯ ಸ್ಥಾಪಿಸಲು ಹೊರಟಾಗಲೆಲ್ಲ ಮೇಲೇಳುವ ತರಂಗಾಂತರದ ಅಲೆಗಳು ಈಗ ಉತ್ತರ ಪ್ರದೇಶದಲ್ಲಿರುವ ಮದರಸಾಗಳಿಗೆ ಚಾಟಿ ಏಟು ಬೀಸುತ್ತಿದೆ! ತಳಮಟ್ಟದ ಕಾರ್ಯಕರ್ತನಿಂದ ಹಿಡಿದು ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳೆಲ್ಲ ಈಗಿರುವುದು ಮುಖ್ಯಮಂತ್ರಿ ಯೋಗಿಯ ಅಡಿಯಲ್ಲಿ! ಅಲ್ಲಿ ಯಾವುದೇ ದೇಶದ್ರೋಹಕ್ಕೂ ಅವಕಾಶವೇ ಇಲ್ಲ ಬಿಡಿ! ಯಾಕೆಂದರೆ, ಮತ್ತದೇ ಭಯ! ಸಿಕ್ಕಿಬಿದ್ದರೆ ಶಿಕ್ದಷೆ ಖಚಿತ ಎನ್ನುವುದು ಉತ್ತರ ಪ್ರದೇಶದ ಪ್ರತಿಯೊಬ್ಬ ಪ್ರಜೆಗೂ ಗೊತ್ತಿದೆ! ಏಷ್ಯಾದ ಅತಿದೊಡ್ಡ ಶೈಕ್ಷಣಿಕ ಬೋರ್ಡ್ ನ ನಂತರದ ದೊಡ್ಡ ಶೈಕ್ಷಣಿಕ ಸಂಸ್ಥೆಯಾಗಿದ್ದ ಉತ್ತರ ಪ್ರದೇಶದ ಶೈಕ್ಷಣಿಕ ಬೋರ್ಡ್ ಗಳಿಗೂ ಈಗ ಯೋಗಿ ಸರಕಾರದ ಬಿಸಿ ತಾಕಿದೆ!

ಹಾ!! ಒಟ್ಟು ೨,೪೧,೦೦೦ ವಿದ್ಯಾರ್ಥಿಗಳಲ್ಲಿ, ಅರ್ಧಕ್ಕರ್ಧ ಹೆಚ್ಚು ಜನ ಈ ಸಲ ಮದರಸಾ ಮಂಡಳಿಯ ಪರೀಕ್ಷೆಗೆ ಗೈರಾಗಿದ್ದಾರೆ! ಅದೂ ಸಹ, ಇದೇ ಮೊದಲ ಬಾರಿ! ಯಾಕೆ ಗೊತ್ತಾ?! ಇತ್ತೀಚೆಗಷ್ಟೇ ಯೋಗಿ ಸರಕಾರವು, “ಶ್ರಮವಹಿಸಿ ಓದಿದವರು ಮಾತ್ರ ಉತ್ತೀರ್ಣರಾಗಬೇಕು!” ಎಂಬ ಕಾರಣಕ್ಕೆ, ಮಂಡಳಿಯ ಪರೀಕ್ಷೆಯನ್ನು ತೀರಾ ಬಿಗಿ ಮಾಡಿದ್ದಲ್ಲದೇ, ಪ್ರತೀ ಪರೀಕ್ಷೆಗಳೂ ಸಹ ಸಿಸಿಟಿವಿ ಯ ಅಡಿಯಲ್ಲಿಯೇ ಪರೀಕ್ಷೆ ನಡೆಸಲು ಚಿಂತನೆ ನಡೆಸಿ, ಉತ್ತರ ಪ್ರದೇಶದಾದ್ಯಂತ ಪ್ರತೀ ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾರಿಗೆ ತಂದಿತ್ತು!

ಅಚ್ಚರಿಯೆಂದರೆ, ೧೭೦೦೦ ಕ್ಕೂ ಹೆಚ್ಚು ಸೆಮಿನರಿಗಳು ಮದರಸಾ ಬೋರ್ಡಿನಡಿಯಲ್ಲಿ ಬರುತ್ತವೆ! ಇದಷ್ಟೂ ಸೆಮಿನರಿಗಳು ಮುಸ್ಲಿಂ ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಮಟ್ಟದವರೆಗೂ ಒಳಪಡುತ್ತದೆ! ಮಾಹಿತಿಯಂತೆ ಒಟ್ಟಾರೆ, ೨,೪೧,೦೦೦ ವಿದ್ಯಾರ್ಥಿಗಳು ಈ ಬಾರಿ ವರ್ಷದ ಮುನ್ಶಿ, ಮೌಲ್ವಿ, ಆಲಿಮ್, ಕಮಿಲ್ ಮತ್ತು ಫಾಜಿಲ್ ಎಂಬಷ್ಟು ಪರೀಕ್ಷೆಗಳನ್ನಯ ಕಟ್ಟಿದ್ದಾರೆ!!

ಆದರೆ, ಮದರಸಾ ಮಂಡಳಿಯ ಪರೀಕ್ಷೆ ಪ್ರಾರಂಭವಾದಾಗ, ಎಂದರೆ ಏಪ್ರಿಲ್ ೧೭ ರಂದು ಈ ಸಂಖ್ಯೆ ೪೫೦೦೦ ರದಷ್ಟಿದ್ದರೆ, ಈಗ ೫೦೦೦೦ ಕ್ಕೆ ಏರಿಕೆಯಾಗಿದೆ!! ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿಯ ಮಾಹಿತಿ ಯನ್ನು ಆಧರಿಸಿ, ರಾಹುಲ್ ಗುಪ್ತಾ, ಸುಮಾರು ೨.೭೩ ಲಕ್ಷ ವಿದ್ಯಾರ್ಥಿಗಳು ಹೆಸರನ್ನೇನೋ ನೋಂದಾಯಿಸಿಕೊಂಡಿದ್ದಾರೆ ಪರೀಕ್ಷೆಗಳಿಗೆ! ಆದರೆ, ಕೇವಲ ೫೨೦೦೦ ದಿಂದ ೫೫೦೦೦ ದಷ್ಟು ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಗುರುವಾರ ಹಾಜರಾಗಿದ್ದಾರೆ! ಇನ್ನೂ, ಗೈರು ಹಾಜರಾದವರ ಸಂಖ್ಯೆಯನ್ನು ನಿಖರವಾಗಿ ತಿಳಿಯಲು ಪ್ರಯತ್ನಿಸುತ್ತಿದ್ದೇವೆ!” ಎಂದಿದ್ದಾರೆ!

ಲಕ್ನೋದಲ್ಲಿ, ದಾಖಲಾದ 5,376 ವಿದ್ಯಾರ್ಥಿಗಳ ಪೈಕಿ, 1,115 ಮತ್ತು 512 ವಿದ್ಯಾರ್ಥಿಗಳು ಕ್ರಮವಾಗಿ ಮೊದಲ ಮತ್ತು ಎರಡನೇ ಪರೀಕ್ಷೆಯ ಶಿಫ್ಟ್ ಸಮಯದಲ್ಲಿ ನಾಪತ್ತೆ!!! ಮೊದಲ ಶಿಫ್ಟ್ ನಲ್ಲಿ, ಮುನ್ಷಿ ಮತ್ತು ಮೌಲ್ವಿ ಅವರ ಪರೀಕ್ಷೆಗಳನ್ನು, ಹಾಗೂ ಎರಡನೇ ಹಂತದಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ, ಅಲಿಮ್, ಕಮಿಲ್ ಮತ್ತು ಫಜಿಲ್ ಶಿಕ್ಷಣದ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮದರಸಾ ಮಂಡಳಿ ಹೇಳಿದೆ! ಹಾಗಾದರೆ, ಪರೀಕ್ಷೆ ಬರೆಯಬೇಕಿದ್ದ ಉಳಿದ ವಿದ್ಯಾರ್ಥಿಗಳು ಎಲ್ಲಿದ್ದಾರೆ ಎಂಬುದೇ ಗೊತ್ತಗಿಲ್ಲ ಯಾರಿಗೂ!

ಯುಪಿ ಮದರಸಾ ಎಜುಕೇಷನ್ ಬೋರ್ಡ್ ಉತ್ತರ ಪ್ರದೇಶದಲ್ಲಿ ಸುಮಾರು 648 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದೆ. ಇದರಲ್ಲಿ 54 ವಿದ್ಯಾರ್ಥಿಗಳು ಸ್ತ್ರೀ ವಿದ್ಯಾರ್ಥಿ ಕೇಂದ್ರಗಳು!!. ಲಕ್ನೋದಲ್ಲಿ, ಮಂಡಳಿಯು 11 ಪರೀಕ್ಷಾ ಕೇಂದ್ರಗಳನ್ನು ಹೊಂದಿದೆ!!

ತಮ್ಮ ಶಿಕ್ಷಣವನ್ನು ಆಧುನೀಕರಿಸುವ ಮತ್ತು ಧಾರ್ಮಿಕ ಪರೀಕ್ಷೆಗಳನ್ನು ಕಟ್ಟುವ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿ ಎಲ್ಲಾ ‘ಮದರಸಾ’ಗಳಿಗೆ ಆನ್ಲೈನ್ ​​ನೋಂದಣಿ ಕಡ್ಡಾಯ ಮಾಡುವಂತೆ ರಾಜ್ಯ ಸರಕಾರ ಆದೇಶವನ್ನು ಹೊರಡಿಸಿತ್ತಷ್ಟೇ!! ಸಂಸ್ಥೆಗಳ ಮೇಲ್ವಿಚಾರಣೆಗೆ ಪ್ರಾರಂಭವಾದ ಆನ್ ಲೈನ್ ಪೋರ್ಟಲ್ ಅನ್ನು ನೋಂದಾಯಿಸಲು ರಾಜ್ಯ ಸರ್ಕಾರವು ಕಳೆದ ವರ್ಷ ಆದೇಶಿಸಿದ ನಂತರ 5,000 ಕ್ಕಿಂತಲೂ ಹೆಚ್ಚು ಮದರಸಾಗಳು ನಾಪತ್ತೆಯಾದವು!! ಯೋಗಿ ಸರಕಾರ ಆನ್ ಲೈನ್ ನೋಂದಣಿ ಎಂದಿದ್ದೇ, ಒಂದಷ್ಟು ಮದರಸಾಗಳು ಆಫ್ ಲೈನಿಗೆ ಹೋದರೆ, ಒಂದಷ್ಟು ವಿದ್ಯಾರ್ಥಿಗಳು ಸಿಸಿಟಿವಿ ಎನ್ನುತ್ತಲೇ ಪರೀಕ್ಷೆಯನ್ನೇ ಕೈ ಬಿಟ್ಟಿದ್ದಾರೆ!!

ಆದಿತ್ಯನಾಥ್ ಆಳ್ವಿಕೆ ಅಡಿಯಲ್ಲಿ ‘ವಂಚನೆ ಎಂಬ ಮಾಫಿಯಾ’ ಒಂದು ಕುಸಿದಿದೆ ಎಂದು ರಾಜ್ಯ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮೊಹ್ಸಿನ್ ರಾಝಾ ಹೇಳಿದ್ದಾರೆ. ಅದಕ್ಕಾಗಿಯೇ ಅನ್ಯಾಯದ ವಿಧಾನವನ್ನು ಬಳಸಿದ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ಕೈಬಿಡಬೇಕಾಯಿತು ಎಂದು ಹೇಳಿದ್ದೇ, ಅಲ್ಲಿಯ ತನಕವೂ ವಿದ್ಯಾರ್ಥಿಗಳ ಗೈರಿನ ಬಗ್ಗೆ ತಲೆ ಕೆಡಿಸಿಕೊಂಡಿದ್ದವರಿಗೆ ಮದರಸಾ ವಿದ್ಯಾರ್ಥಿಗಳ ನಿಜಬಣ್ಣ ಅರಿವಾಗಿದ್ದು ಸತ್ಯವಾದರೂ ಸಹ, ಯೋಗಿ ಆದಿತ್ಯನಾಥ್ ರ ಈ ನಿರ್ಧಾರವನ್ನು ಸ್ವತಃ ಮದರಸಾ ಮಂಡಳಿಯು ಪ್ರಶಂಶಿಸಿದೆ!

ಒಮ್ಮೆ, ರಾಝಾ ಅವರು ವಿಚಾರಣೆ ನೆಪದಲ್ಲಿ ಇದ್ದಕ್ಕಿದ್ದಂತೆ, ಮದರಸಾ ಮಂಡಳಿಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ಕೊಟ್ಟಾಗ, ಒಬ್ಬ ವಿದ್ಯಾರ್ಥಿ ತನ್ನ ಉತ್ತರ ಪತ್ರಿಕೆಯಲ್ಲಿ ತನ್ನ ಹೆಸರನ್ನೊಂದು ಬಿಟ್ಟು ಬೇರೇನೂ ಬರೆದಿರಲಿಲ್ಲ ಎಂಬುದನ್ನು ಗಮನಿಸಿ, ಕೊನೆಗೆ ವಿದ್ಯಾರ್ಥಿಗೆ ಪರೀಕ್ಷೆಗೆ ಸಂಬಂಧಿಸಿದಂತೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದಾಗ, ರಾಝಾ ದಂಗು ಬಡಿದಿದ್ದರು! ಈ ಹಿಂದೆಯೂ ನಡೆದಿದ್ದ ಎಲ್ಲಾ ಪರೀಕ್ಷೆಗಳಲ್ಲಿ ಆತ ಉತ್ತೀರ್ಣನಾಗಿದ್ದನೇನೋ ಸರಿ! ಆದರೆ, ಅವನಿಗೆ ಪಠ್ಯಕ್ಕೆ ಸಂಬಂಧಿಸಿದಂತೆ, ತೀರಾ ಪ್ರಾಥಮಿಕ ಎನ್ನುವ ಜ್ಞಾನವೂ ಇರಲಿಲ್ಲ!!

ಇಂತಹುದೇ ಒಂದಷ್ಟು ಘಟನೆಗಳ ನಂತರ, ಸ್ವತಃ ರಾಝಾ ರವರು, ಇಂತಹ ದ್ರೋಹಗಳಿಗೆ ಕಡಿವಾಣ ಹಾಕುವಂತೆ, ಯೋಗಿ ಸರಕಾರಕ್ಕೆ ಸೂಚಿಸಿದ್ದ ಹಿನ್ನೆಲೆಯಲ್ಲಿ, ಯಾವಾಗ ಸರಕಾರ ಕಟ್ಟು ನಿಟ್ಟಿನ ಶಿಸ್ತು ಕ್ರಮ ಹೊರಡಿಸಿತೋ, ಇತ್ತ ೧.೮ ಲಕ್ಷ ಜನ ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ! ಅಂದರೆ ಅಲ್ಲಿಗೆ ಅರ್ಥವಾಯಿತಲ್ಲವಾ?! ಧಾರ್ಮಿಕ ಶಿಕ್ಷಣ ಹೋಗಲಿ, ಧಾರ್ಮಿಕ ಸಂಸ್ಕಾರದ ಕೊರತೆ ಎಷ್ಟು ಜಿಹಾದಿಗಳನ್ನು ಸೃಷ್ಟಿಸಲು ಸಹಾಯ ಮಾಡಿತ್ತೆಂಬುದು?!

A total of 66,37,018 students were registered to appear in this year’s UP Board exams. Last year, the overall pass percentage for Class 10 was recorded at 81.18 per cent and in Class 12, 82.62 per cent students were declared successful.

More than 60.61 lakh candidates – 3.4 million for Class 10 and 2.6 million for Class 12 – were registered for high school and intermediate exams in 2017. However, due to strict measures, 594,000 candidates left the exams and 1,862 examinees were caught copying.

ಮಾಹಿತಿಯ ಪ್ರಕಾರ, ಈ ವರ್ಷ ಯುಪಿ ಬೋರ್ಡ್ ಪರೀಕ್ಷೆಯಲ್ಲಿ ಒಟ್ಟು 66,37,018 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಳೆದ ವರ್ಷ 10 ನೇ ತರಗತಿಗೆ ಶೇಕಡ 81.18 ರಷ್ಟು ದಾಖಲಾಗಿದ್ದು, 12 ನೇ ತರಗತಿಯಲ್ಲಿ 82.62 ರಷ್ಟು ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ.

60.61 ಲಕ್ಷ ಅಭ್ಯರ್ಥಿಗಳು – ಕ್ಲಾಸ್ 10 ಕ್ಕೆ 3.4 ಮಿಲಿಯನ್ ಮತ್ತು ಕ್ಲಾಸ್ 12 ಕ್ಕೆ 2.6 ಮಿಲಿಯನ್ – 2017 ರಲ್ಲಿ ಹೈಸ್ಕೂಲ್ ಮತ್ತು ಇಂಟರ್ಮೀಡಿಯೇಟ್ ಪರೀಕ್ಷೆಗಳಿಗೆ ನೋಂದಾಯಿಸಲಾಗಿದೆ. ಆದಾಗ್ಯೂ, ಕಟ್ಟುನಿಟ್ಟಾದ ಕ್ರಮಗಳ ಕಾರಣ 594,000 ಅಭ್ಯರ್ಥಿಗಳ ಪರೀಕ್ಷೆ ಮತ್ತು 1,862 ಪರೀಕ್ಷಕರು ನಕಲು ಮಾಡಿದ್ದಾರೆ.

1993 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, ಎಸ್ಪಿ ನಾಯಕ ಮತ್ತು ಅಖಿಲೇಶ್ ಯಾದವ್ ಅವರ ತಂದೆ ಮುಲಾಯಂ ಸಿಂಗ್ ಯಾದವ್ 1992 ರಲ್ಲಿ ಕಲ್ಯಾಣ್ ಸಿಂಗ್ ನೇತೃತ್ವದ ಭಾರತೀಯ ಜನತಾ ಪಾರ್ಟಿ ಸರ್ಕಾರವು ಪರಿಚಯಿಸಿದ ವಿರೋಧಿ ನಕಲು ಕಾಯಿದೆ ರದ್ದುಪಡಿಸಿದರು!! ಮತ್ತು ಶಿಕ್ಷಣ ವ್ಯವಸ್ಥೆಯನ್ನು ಮತ್ತು ಭವಿಷ್ಯದ ಪೀಳಿಗೆಯ ರಾಷ್ಟ್ರವನ್ನು ನಾಶಮಾಡಿದ್ದಲ್ಲದೇ, ಅದನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಂಡಿದ್ದು ಉತ್ತರ ಪ್ರದೇಶ ಜನರ ದುರಂತವಷ್ಟೇ!! ಯಾಕೆ ರದ್ದು ಮಾಡಿದ್ದೀರಿ ಎಂದಾಗ, ಮತ್ತದೇ ಅಪ್ಪ ಮಗ “ಪ್ರತಿಯೊಬ್ಬರೂ ಪರೀಕ್ಷೆಯಲ್ಲಿ ನಕಲು ಮಾಡುತ್ತಾರೆ! ಅದು ಸಾಮಾನ್ಯ ವಿಷಯ! ಇಲ್ಲಿ, ಯಾರೂ ಕೂಡಾ ನಕಲು ಮಾಡುತ್ತಿಲ್ಲ! ” ಎಂದು ಸಮಝಾಯಿಶಿ ಕೊಟ್ಟು ಬೀಗಿದ್ದರಷ್ಟೇ!

ಆದರೆ ಯೋಗಿ ಸರಕಾರ ಮಾತ್ರ ಮತ್ತೆ ನಕಲು ಮಾಡುವುದಕ್ಕೆ ನಿಷೇಧ ಹೇರಿದ್ದಲ್ಲದೇ, ತನ್ನ ಕ್ರಮಗಳ ಮೂಲಕವೇ ಹಿಂದಿದ್ದ ಸರಕಾರದ ಆಡಳಿತ ವ್ಯವಸ್ಥೆಗೆ ತಪರಾಕಿ ಬಾರಿಸತೊಡಗಿದೆ! ಅದಲ್ಲದೇ, ಶಿಕ್ಷಣ ವ್ಯವಸ್ಥೆ ಮತ್ತು ಭವಿಷ್ಯದ ಪೀಳಿಗೆಯೊಂದಿಗೆ ಯಾರಿಗೂ ಸಹ ಆಟವಾಡಲು ಅನುಮತಿ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ… ಆದರೆ ಈ ವಿಷಯದಲ್ಲಿ ಅವರು ತೆಗೆದುಕೊಳ್ಳಬೇಕಾದ ಕಠಿಣ ಕ್ರಮಗಳನ್ನು ಅವರು ತೆಗೆದುಕೊಳ್ಳುತ್ತಾರೆ ಎಂದಿರುವ ಯೋಗಿ ಸರಕಾರ, ಯುಪಿ ಬೋರ್ಡ್ ಮತ್ತು ಮದರಸಾಗಳಲ್ಲಿ, ನಕಲಿ ಮತ್ತು ಶಿಕ್ಷಣ ಮಾಫಿಯಾ ವಿರುದ್ಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಕ್ರಮವನ್ನೇ ಜರುಗಿಸಿದ್ದರ ಪರಿಣಾಮ, ಪರೀಕ್ಷೆಯ ಸಮಯದಲ್ಲಿ ಚಾಲ್ತಿಯಲ್ಲಿರುವ ಮುಕ್ತ ವಂಚನೆಯೊಂದು ಅಂತಿಮವಾಗಲಿದೆ!!


ಪೃಥು ಅಗ್ನಿಹೋತ್ರಿ

Tags

Related Articles

Close