ಪ್ರಚಲಿತ

7 ಸೈನಿಕರನ್ನು ಕಳೆದುಕೊಂಡ ಪಾಕ್ ಈಗ ಮತ್ತೆ ಬೆಚ್ಚಿ ಬಿದ್ದಿದ್ಯಾಕೆ ಗೊತ್ತಾ? ಮೋದಿಯ ಈ ನಿರ್ಧಾರದಿಂದ ವಿರೋಧಿಗಳು ವಿಲವಿಲ..!!!

ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಏರಿದ ನಂತರದಿಂದ ವಿಶ್ವದಲ್ಲೇ ಭಾರತೀಯ ಸೇನೆ ಬಲಿಷ್ಠ ಸೇನೆಯಾಗಿ ಮಿಂಚುತ್ತಿದ್ದು, ರಕ್ಷಣಾ ಪಡೆಗಳ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ 83 ತೇಜಸ್ ವಿಮಾನಗಳ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿರುವ ಬೆನ್ನಲ್ಲೆ ಇದೀಗ ಶತ್ರುಗಳ ಹುಟ್ಟಡಗಿಸಲು ಭಾರತೀಯ ಸೈನಿಕರಿಗಾಗಿ ಹೊಸ ಮಾದರಿಯ ಅಸಲ್ಟ್ ರೈಫಲ್ ಖರೀದಿಸುವ ಪ್ರಸ್ತಾವನೆಗೆ ಇದೀಗ ಗ್ರೀನ್ ಸಿಗ್ನಲ್ ನೀಡಿದೆ!!

ಆದರೆ ಈಗಾಗಲೇ ಮೇಕ್ ಇಂಡಿಯಾ ಯೋಜನೆಯ ಭಾಗವಾಗಿ 50,000 ಬುಲೆಟ್ ಪ್ರೊಫ್ ಜಾಕೆಟ್ ಗಳನ್ನು ಭಾರತದಲ್ಲೇ ಉತ್ಪಾದಿಸಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕ ಸಭೆಗೆ ತಿಳಿಸಿದಲ್ಲದೇ ಲೋಕ ಸಭೆಯಲ್ಲಿ ದೇಶದ ಭದ್ರತೆಯ ಬಗ್ಗೆ ಮಾತನಾಡಿದ ಸಚಿವ ಸುಭಾಷ್ ಭಮ್ರೆ ಸೈನಿಕರ ಕಾರ್ಯಾಚರಣೆಗೆ ನೆರವಾಗಲು ಇನ್ನಷ್ಟು ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಶೀಘ್ರದಲ್ಲಿ ಸಂಗ್ರಹಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದರು.

ಅಲ್ಲದೇ, ಬ್ಲಾಸ್ಟ್ ಪ್ರೂಫ್ ಬಂಕರ್ಗಳಿಗೆ ಸಂಬಂಧಿಸಿದ ಮತ್ತೊಂದು ಪ್ರಶ್ನೆಗೆ ಉತ್ತರಿಸಿ, ಪ್ರಸ್ತುತ, ಉಕ್ಕಿನ, ಕಾಂಕ್ರೀಟ್ ಹಾಲೊ ಬ್ಲಾಕ್ ಗಡಿಯಲ್ಲಿನ ಬ್ಲಾಸ್ಟ್ ಪ್ರೂಫ್ ಬಂಕರ್ ಗಳ ನಿರ್ಮಾಣಕ್ಕೆ ಬಳಸಲಾಗುತ್ತಿದೆ ಎಂದು ಹೇಳಿರುವ ಅವರು ಗಡಿಯಲ್ಲಿ ಸೈನಿಕರ ಆಶ್ರಯಕ್ಕೆ ನೆರವಾಗಳು ಇಂತಹ ಕ್ರಮಗಳು ಅತ್ಯಗತ್ಯವಾಗಿದ್ದು ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕೂಡ ಕೇಂದ್ರ ಸಚಿವ ಸುಭಾಷ್ ಭಮ್ರೆ ವಿಶ್ವಾಸ ನೀಡಿದ್ದರು.

ಆದರೆ ಇದೀಗ ಸೇನೆಯ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ ಶತ್ರುಗಳ ಹುಟ್ಟಡಗಿಸಲು ಭಾರತೀಯ ಸೈನಿಕರಿಗಾಗಿ ಹೊಸ ಮಾದರಿಯ ಅಸಲ್ಟ್ ರೈಫಲ್ ಖರೀದಿಸುವ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ನೀಡಿರುವುದು ಸಂತಸದ ವಿಚಾರವಾಗಿದೆ.

ಇದೇ ಸಂದರ್ಭದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ರಕ್ಷಣಾ ಸಾಮಗ್ರಿ ಖರೀದಿ ಮಂಡಳಿ ಮಂಗಳವಾರ 3547 ಕೋಟಿ ರೂ. ಮೊತ್ತದ ರೈಫಲ್ ಖರೀದಿ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಒಟ್ಟು ಎರಡು ಮಾದರಿಯ ರೈಫಲ್ ಖರೀದಿಗೆ ನಿರ್ಧರಿಸಲಾಗಿದ್ದು, ಈ ಪೈಕಿ 72,400 ಅಸಲ್ಟ್ ರೈಫಲ್ ಗಳು ಮತ್ತು 93,895 ಕಾರ್ಬೈನ್ ರೈಫಲ್ ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಮುಂದಾಗಿರುವುದಾಗಿ ಹೇಳಲಾಗಿದೆ.

ಈಗಾಗಲೇ ಭಾರತೀಯ ವಾಯುಪಡೆ 50,025 ಕೋಟಿ ರೂಪಾಯಿ ವೆಚ್ಚದಲ್ಲಿ ಯುದ್ಧವಿಮಾನಗಳ ಖರೀದಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ಕಂಪನಿಗೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಹಾಗಾಗಿ ವಾಯುಪಡೆ ಈಗಾಗಲೇ ಎಚ್ ಎಎಲ್ ನಿಂದ 40 ತೇಜಸ್ ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆಯಲ್ಲದೇ ಪ್ರಸ್ತುತ ವಾಯುಪಡೆಯ ಬಳಿ 33 ಯುದ್ಧ ವಿಮಾನಗಳ ಸ್ಕ್ವಾಡ್ರನ್ ಗಳಿವೆ.

ಇವುಗಳ ಪೈಕಿ ಮುಂದಿನ 10 ವರ್ಷಗಳಲ್ಲಿ ಮಿಗ್ 21, ಮಿಗ್ 27 ಮತ್ತು ಮಿಗ್ 29 ಯುದ್ಧವಿಮಾನಗಳ 14 ಸ್ಕ್ವಾಡ್ರನ್ ಗಳು ನಿವೃತ್ತಿ ಹೊಂದಲಿವೆ. ಹಾಗಾಗಿ ಅವುಗಳ ಸ್ಥಾನವನ್ನು ತುಂಬಲು ತೇಜಸ್ ವಿಮಾನ ಖರೀದಿಸಲಾಗುತ್ತಿದೆ ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

ಆದರೆ ಇದೀಗ ಶತ್ರುಗಳ ಹುಟ್ಟಡಗಿಸಲು ಭಾರತೀಯ ಸೈನಿಕರಿಗಾಗಿ ಹೊಸ ಮಾದರಿಯ ಅಸಲ್ಟ್ ರೈಫಲ್ ಖರೀದಿಸುವ ಪ್ರಸ್ತಾವನೆಗೆ ಗ್ರೀನ್ ಸಿಗ್ನಲ್ ನೀಡಿರುವ ಕೇಂದ್ರ ಸರ್ಕಾರವು ಈ ರೈಫಲ್ ಗಳನ್ನು ಮೇಕ್ ಇನ್ ಇಂಡಿಯಾದ ಭಾಗವಾಗಿ ಭಾರತದಲ್ಲೇ ಉತ್ಪಾದಿಸಲು ಟೆಂಡರ್ ಪಡೆಯುವ ಕಂಪನಿಗಳಿಗೆ ಅವಕಾಶ ಮಾಡಿಕೊಡಲು ಕೆಲವು ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ.

ಹೊಸ ಮಾದರಿ ರೈಫಲ್ ಗಳ ಖರೀದಿಯಿಂದ ಸೇನೆ ಮತ್ತಷ್ಟು ಶಕ್ತಿಯುತವಾಗಲಿದೆ. ಭಾರತೀಯ ಸೇನೆಗೆ ಇನ್ನೂ ಆರು ಲಕ್ಷ ಅಸಲ್ಟ್ ರೈಫಲ್ ಮತ್ತು 3.25 ಲಕ್ಷ ಕಾರ್ಬೈನ್ ರೈಫಲ್ ಗಳ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಎರಡು ಹಂತಗಳಲ್ಲಿ ರೈಫಲ್ ಗಳನ್ನು ಖರೀದಿಸಲು ರಕ್ಷಣಾ ಇಲಾಖೆ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ನವೆಂಬರ್ 2016 ರಲ್ಲಿ 83 ತೇಜಸ್ ಎಂ.ಕೆ-1ಎ ಯುದ್ದ ವಿಮಾನಗಳ ಸಂಗ್ರಹಕ್ಕಾಗಿ ಕೇಂದ್ರ ರಕ್ಷಣಾ ಸಚಿವಾಲಯ ವಿನಂತಿಯನ್ನು ತೆರವುಗೊಳಿಸಿತ್ತು. ಅಷ್ಟೇ ಅಲ್ಲದೇ ಭಾರತದ ತೇಜಸ್ ಎಂ.ಕೆ-1ಎ ಯುದ್ದ ವಿಮಾನ 2052 ಎ.ಇ.ಎಸ್.ಎ ರೇಡಾರ್ ಅನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ, ಇದಲ್ಲದೆ ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್ ಮತ್ತು ಕೋಬಾಲ್ ಇನ್ ಫ್ಲೈಟ್ ರಿಫ್ಯುಯಲಿಂಗ್ ಪೆÇ್ರೀಬ್ ಹಾಗೂ ಹೊಸ ಏರ್-ಟು-ಏರ್ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವುದು ಭಾರತದ ತಂತ್ರಜ್ಞಾನ ಅಭಿವೃದ್ದಿಗೆ ಪ್ರಮುಖ ಸಾಕ್ಷಿಯಂತಿದೆ..!

ಹಾಗಾಗಿ ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಭಾರತದಲ್ಲೇ ನಿರ್ಮಾಣವಾದ ಶಸ್ತ್ರಾಸ್ತ್ರಗಳಿಗೆ ವ್ಯಾಪಕ ಬೆಂಬಲ ನೀಡಿರುವುದು ಇಂತಹ ಯೋಜನೆಗಳ ಯಶಸ್ವಿಗೆ ಕಾರಣವಾಗಿದೆ. ಈ ಉದ್ದೇಶದಿಂದ ಇಸ್ರೇಲಿ ಕ್ಷಿಪಣಿ ವ್ಯವಹಾರವನ್ನು ಕೂಡ ಮೋದಿ ಸರ್ಕಾರ ಸ್ಥಗಿತ ಗೊಳಿಸುವ ಮುನ್ಸೂಚನೆ ನೀಡಿದ್ದು, ರಕ್ಷಣಾ ವಲಯದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯ ಕಾರಣದಿಂದ ಈಗಾಗಲೇ ಭಾರತಕ್ಕೆ ಬರೋಬ್ಬರಿ ಒಂದು ಲಕ್ಷ ಕೋಟಿ ರೂಪಾಯಿಗಳು ಉಳಿತಾಯವಾಗಿದೆ ಎನ್ನುವುದೇ ಹೆಮ್ಮೆಯ ವಿಚಾರ!!

– ಅಲೋಖಾ

Tags

Related Articles

Close