ಪ್ರಚಲಿತ

ಮೋದಿ,ಶಾ,ಯಡಿಯೂರಪ್ಪನವರನ್ನು ಹೊಗಳಿದ ಕನ್ನಡ ಸಿನಿ ದಿಗ್ಗಜ. ರಾಹುಲ್, ರಮ್ಯಾಗೆ ನೋ ಕಾಮೆಂಟ್ ಅಂದಿದ್ಯಾಕೆ..? ಅನಂತ್ ನಾಗ್ ಮನದಾಳದಲ್ಲಿ ರಾಜಕಾರಣಿಗಳು..!

ಅವರು ಕನ್ನಡ ಸಿನಿಮಾ ರಂಗದಲ್ಲಿ ವಿಶೇಷವಾದ ಛಾಪನ್ನು ಮೂಡಿಸಿದವರು.ಅಂದಿನಿಂದ ಇಂದಿನವರೆಗೂ ಕನ್ನಡ ಸಿನಿಮವೇ ತನ್ನ ಜೀವನ ಎಂದು ಅದರಲ್ಲೇ ನೇಮೂ ಫೇಮೂ ಸಂಪಾದಿಸಿದವರು. ಇದೀಗ ಅವರಿಗೆ ವಯಸ್ಸಾಗಿದ್ದರೂ ಕೂಡಾ ಕಲೆಗೆ ವಯಸ್ಸಿಲ್ಲ ಎಂಬಂತೆ ಈಗಲೂ ಕಲೆಗೆ ಗೌರವವನ್ನು ನೀಡುತ್ತಲೇ ಬೆಳೆಯುತ್ತಿದ್ದಾರೆ.

ನಾವು ಹೇಳುತ್ತಿರುವುದು ಕನ್ನಡದ ಸಿನಿ ದಿಗ್ಗಜ ಅನಂತ್ ನಾಗ್ ಅವರ ಬಗ್ಗೆ. ಇದೇ ಅನಂತ್ ನಾಗ್ ಅವರು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ ಬಗ್ಗೆ ಹೇಳಿದ ಮಾತು ಇದೀಗ ಸಿನಿ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಹಾಗಂತ ಅನಂತ್ ನಾಗ್ ರಾಜಕೀಯ ಸೇರ್ತಾರೆ ಎಂದಲ್ಲ. ಬೇರೆ ಪಕ್ಷದ ಜೊತೆ ಈ ಹಿಂದೆ ಗುರುತಿಸಿಕೊಂಡಿದ್ದರೂ ಭಾರತೀಯ ಜನತಾ ಪಕ್ಷದ ಓರ್ವ ನಾಯಕನ ಬಗ್ಗೆ ಇದೀಗ ಮೆಚ್ಚುಗೆಯ ಮಾತನಾಡಿದ್ದಾರೆ.

Image result for ananth nag

ಸುವರ್ಣ ನ್ಯೂಸ್ ನಡೆಸಿದ ಕಾರ್ಯಕ್ರಮವೊಂದರಲ್ಲಿ ಕನ್ನಡ ಸಿನಿ ದಿಗ್ಗಜ ಅನಂತ್ ನಾಗ್ ಅವರು ತಮ್ಮ ಮನದಾಳದ ಮಾತುಗಳನ್ನು ಆಡಿದ್ದಾರೆ. ಸುವರ್ಣ ನ್ಯೂಸ್ ವಿಶ್ಲೇಷಕರು ಕೇಳಿದ ಪ್ರಶ್ನೆಗೆ ಅನಂತ್ ನಾಗ್ ಸಕರಾತ್ಮಕವಾಗಿಯೇ ಉತ್ತರಿಸಿದ್ದಾರೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನವರ ಬಗ್ಗೆ ಕೇಳಿದ ಪ್ರಶ್ನೆಗೆ ಅನಂತ್ ನಾಗ್ ನೀಡಿದ ಉತ್ತರ ಯಡಿಯೂರಪ್ಪ ನವರ ಛಲತೆಯನ್ನು ಬಿಂಬಿಸಿತ್ತು.

ಸುದ್ದಿವಾಹಿನಿಯ ಸುದ್ದಿ ವಿಶ್ಲೇಷಕರು ಪ್ರತಿಯೊಬ್ಬ ರಾಜಕಾರಣಿಗಳ ಬಗ್ಗೆಯೂ ಪ್ರಶ್ನೆ ಎತ್ತಿದಾಗ ರೈತ ನಾಯಕ ಯಡಿಯೂರಪ್ಪನವರ ಬಗ್ಗೆಯೂ ಕೇಳಿದ್ದಾರೆ. ನಿಮ್ಮ ಪ್ರಕಾರ ಯಡಿಯೂರಪ್ಪ ನವರು ಹೇಗೆ? ಅವರನ್ನು ಹೇಗೆ ಬಿಂಬಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅನಂತ್ ನಾಗ್ ಅವರೋರ್ವ ಛಲಗಾರ ಎಂದು ಹೇಳಿದ್ದಾರೆ. “ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಓರ್ವ ಛಲಗಾರ. ಅವರ ಹೋರಾಟ ಛಲಬಿಡದ ತ್ರಿವಿಕ್ರಮನಂತೆ. ಹೀಗಾಗಿಯೇ ಅವರು ಅದೆಷ್ಟೋ ಸವಾಲುಗಳನ್ನು ಎದುರಿಸಿ ಈಗಲೂ ಹೋರಾಡುತ್ತಿದ್ದಾರೆ” ಎಂದು ಹೇಳಿದ್ದಾರೆ. ಅನಂತ್ ನಾಗ್ ಅವರೂ ಈ ದೆ ಅನೇಕ ಚುನಾವಣಾ ಪ್ರಚಾರಗಳಿಗೆ ತೆರಳಿದ್ದರಂತೆ. ಹೀಗಾಗಿ ರಾಜಕೀಯದ ಬಗ್ಗೆ ಅವರಿಗೆ ಬಹಳಾನೇ ತಿಳುವಳಿಕೆ ಇದೆ.

Image result for amit shah YEDDYURAPPA TOGETHER

ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಕೇಳಿದಾಗ “ಭ್ರಷ್ಟಾಚಾರ ರಹಿತ ವ್ಯಕ್ತಿ” ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಗ್ಗೆ ಕೇಳಿದಾಗ “ಉತ್ತಮ ರಾಜಕೀಯ ಚತುರ” ಎಂದು ಹೇಳಿದ್ದಾರೆ. ಇನ್ನು ಬಿಜೆಪಿ ಮುಖಂಡ ಸುಭ್ರಹ್ಮಣಿಯನ್ ಸ್ವಾಮಿ ಬಗ್ಗೆನೂ ಗುಡ್ ಮ್ಯಾನ್ ಎಂದಿದ್ದಾರೆ. ಹೀಗೆ ಇನ್ನಿತರ ಗಣ್ಯ ವ್ಯಕ್ತಿಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತಮವಾಗಿಯೇ ಸ್ಪಂಧಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಇಬ್ಬರು ನಾಯಕರ ಬಗ್ಗೆ ಮಾತ್ರ ಅನಂತ್ ನಾಗ್ ವ್ಯತಿರಿಕ್ತವಾಗಿ ಉತ್ತರವನ್ನು ನೀಡಿದ್ದಾರೆ. ಆ ವ್ಯಕ್ತಿಗಳೇ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಾಜಿ ಸಂಸದೆ ಹಾಗೂ ಸಿನಿಮಾ ತಾರೆ ರಮ್ಯಾ.

ಅನಂತ್ ನಾಗ್ ಅವರ ಬಳಿ ರಾಹುಲ್ ಗಾಂಧಿ ಯವರ ಬಗ್ಗೆ ಪ್ರಶ್ನೆ ಕೇಳಿದಾಗ ಜೋರಾಗಿ ನಕ್ಕುಬಿಟ್ಟರು. ನಂತರ ಸಾವದಾನದಿಂದ ಮಾತನಾಡಿದ ಅವರು “ರಾಹುಲ್ ಗಾಂಧಿಯವರಿಗೆ ಸಿಕ್ಕ ಅವಕಾಶ ಬೇರೆ ಯಾರಿಗೂ ಸಿಕ್ಕಿಲ್ಲ. ಅವರಿಗೆ ಮನಮೋಹನ್ ಸಿಂಗ್ ಅವರ ಸಂಪುಟದಲ್ಲೇ ಮಂತ್ರಿಯಾಗಿ ಟ್ರೈನಿಂಗ್ ತೆಗೆದುಕೊಳ್ಳಬಹುದಿತ್ತು. ಆದರೆ ನೇರವಾಗಿ ಪ್ರಧಾನಿ ಆಗ್ತೇನೆ ಎಂದು ಹೋದ್ರೆ ಅದು ಆಗೋ ಕೆಲಸನಾ” ಎಂದು ವ್ಯಂಗ್ಯಭರಿತವಾಗಿ ಉತ್ತರಿಸಿದರು. ಅದೇ ವೇಳೆ ಮಂಡ್ಯದ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಬಗ್ಗೆ ಕೇಳಿದಾಗ ತಟ್ಟನೆ ನೋ ರೆಸ್ಪಾನ್ಸ್ ಎಂದು ಬಿಟ್ಟರು.

Image result for RAMYA POLITS

ಇದಿಷ್ಟೇ ಅಲ್ಲ. ಸೋನಿಯಾ ಗಾಂಧಿ ಬಗ್ಗೆ ಕೇಳಿದಾಗಲೂ ಉತ್ತರಿಸದ ಅನಂತ್ ನಾಗ್ ಅಸಾದುದ್ದೀನ್ ಬಗ್ಗೆ ಕೇಳಿದಾಗ ಕೆಂಡ ಕಾರಿದ್ರು. “ಆತ ಯಾವಾಗ ನೋಡಿದ್ರೂ ವಿಷ ಕಕ್ಕುತ್ತಲೇ ಇರ್ತಾನೆ. ಆತನಿಂದ ಯಾವುದೇ ಪ್ರಯೋಜನವಿಲ್ಲ” ಎಂದುಬಿಟ್ಟರು. ಹೀಗೆ ದೇಶದಲ್ಲಿ ಯಾರು ಉತ್ತಮರು ಹಾಗೂ ಯಾರು ಕೆಲಸಕ್ಕೆ ಬಾರದವರು ಎಂಬುದನ್ನು ಕನ್ನಡ ಚಿತ್ರರಂಗದ ದಿಗ್ಗಜ ಅನಂತ್ ನಾಗ್ ಅವರೇ ಹೇಳಿದ್ದಾರೆ… ನೆನಪಿರಲಿ, ಅವರು ಈ ಹಿಂದೆ ನಿಷ್ಟರಾಗಿದ್ದು ಜನತಾ ದಳ ಪಕ್ಷಕ್ಕೆ… ಆದರೂ ಇಂದು ಕೇಸರಿಯನ್ನು ಅಪ್ಪಿಕೊಂಡಿದ್ದಾರೆ.

Sunil Panapila

Tags

Related Articles

Close