ಪ್ರಚಲಿತ

ನಾಲಾಯಕ ನಟ ಚೇತನ್ ಪೊಲೀಸ್ ವಶಕ್ಕೆ

ಹಿಂದೂ ಧರ್ಮವನ್ನು ಅವಹೇಳನ ಮಾಡಿ ಅನ್ನ ಹುಟ್ಟಿ ಸಿ ಕೊಲ್ಲುವ ನಾಲಾಯಕುಗಳು ಈ ಸಮಾಜದಲ್ಲಿ ಬೇಕಾದಷ್ಟಿದ್ದಾರೆ. ಕೈಯಲ್ಲಿ ಕೆಲಸವಿಲ್ಲ, ದುಡಿದು ತಿನ್ನುವ ಯೋಗ್ಯತೆ ಕಡಿಮೆ, ಹೀಗಿರುವಾಗ ಅನ್ನ ಹುಟ್ಟಿಸಿಕೊಳ್ಳುವ ಸುಲಭವಾದ ದಾರಿಯಾಗಿ ಹಿಂದೂ ಧರ್ಮವನ್ನು ಅವಹೇಳನ ಮಾಡಿ, ಅದರಿಂದ ಬದುಕು ಸಾಗಿಸುವ ನಾಮರ್ಧರು ನಮ್ಮಲ್ಲಿದ್ದಾರೆ. ಇಂತಹ ಸೋಂಬೇರಿಗಳ ಸಾಲಿಗೆ ಸೇರಿದ ‘ಚೇತನ್ ಅಹಿಂಸಾ’ ರನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ.

ಸಿನಿಮಾ ನಾಯಕನಾಗಿದ್ದು, ನಿಜ ಜೀವನದಲ್ಲಿ ಮಾತ್ರ ನಾಲಾಯಕನಂತೆ ಆಡುವ ಈ ವ್ಯಕ್ತಿಗೆ ಹಿಂದೂ ಧರ್ಮವನ್ನು ಅವಹೇಳನ ಮಾಡುವುದೇ ಸದ್ಯದ ಕಾಯಕ. ಅಷ್ಟಕ್ಕೂ ಈ ಬಾರಿ ಚೇತನ್ ಮಾಡಿದ ಹಿಂದೂ ವಿರೋಧಿ ಕೆಲಸ ಏನೆಂದು ಕೇಳಿದಿರಾ. ಈ ವ್ಯಕ್ತಿ ಹಿಂದೂ ಧರ್ಮದ ವಿರುದ್ಧ ಬರೆದು, ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿ, ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.

‘ಹಿಂದುತ್ವವನ್ನು ಸುಳ್ಳಿನ ಆಧಾರದಲ್ಲಿ ಕಟ್ಟಲಾಗಿದೆ. (ಸಾವರ್ಕರ್ ಹೇಳಿಕೆ) ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು ಎನ್ನುವುದು ಸುಳ್ಳು. ಬಾಬರ್ ಮಸೀದಿ ರಾಮ ಜನ್ಮ ಭೂಮಿ ಎನ್ನುವುದು ಸುಳ್ಳು. ಉರಿಗೌಡರು ಮತ್ತು ನಂಜೇಗೌಡರು ಟಿಪ್ಪು ನನ್ನು ಕೊಂದರು ಎನ್ನುವುದು ಸುಳ್ಳು. ಹಿಂದುತ್ವವನ್ನು ‌ಸತ್ಯದಿಂದ ಸೋಲಿಸಬಹುದು. ಸತ್ಯವೇ ಸಮಾನತೆ’ ಎಂದು ಬರೆದು, ಪುಂಕಾನುಪುಂಕವಾಗಿ ಹಿಂದೂ ಧರ್ಮದ ವಿರುದ್ಧ ತಮ್ಮೊಳಗಿದ್ದ ದ್ವೇಷವನ್ನು, ಸುಳ್ಳುಗಳನ್ನು ಸಾರ್ವಜನಿಕವಾಗಿ ಬಿತ್ತಿ, ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಚೇತನ್ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕಳೆದ ವರ್ಷ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಜಡ್ಜ್ ಒಬ್ಬರ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಚೇತನ್‌ರನ್ನು ಬಂಧಿಸಲಾಗಿತ್ತು. ಇದೀಗ ಹಿಂದುತ್ವ ವಿರೋಧಿ ಬರಹಗಳಿಗಾಗಿ ಚೇತನ್ ಪೊಲೀಸ್ ವಶವಾಗಿದ್ದಾರೆ.

ಒಟ್ಟಿನಲ್ಲಿ ಈ ಗಂಜಿ ಗಿರಾಕಿ ಚೇತನ್ ಅವರಿಗೆ ಕೆಟ್ಟರೂ ಬುದ್ಧಿ ಬಾರದಿರುವುದು ದುರಂತ.

Tags

Related Articles

Close