ಪ್ರಚಲಿತ

ಜನರಿಂದಲೇ ಸಿದ್ದರಾಮಯ್ಯನವರಿಗೆ ಗೂಸಾ.! ಷಾ ಬೇಟೆಗೆ ಬಲಿಯಾದ ಕಾಂಗ್ರೆಸ್.!

ರಾಜ್ಯದಲ್ಲಿ ಚುನಾವಣ ಅಬ್ಬರ ಜೋರಾಗಿಯೇ ನಡೆಯುತ್ತಿದೆ. ‌ಎಲ್ಲೆಲ್ಲೂ ಚುನಾವಣಾ ರಂಗು ರಂಗೇರುತ್ತಿದ್ದು , ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯವೂ ಭರ್ಜರಿಯಾಗಿ ನಡೆಯುತ್ತಿದೆ. ಕರ್ನಾಟಕ ಎಲ್ಲಾ ರಾಜಕೀಯ ಪಕ್ಷಗಳಿಗೂ ಪ್ರತಿಷ್ಟೆಯ ಕಣವಾಗಿದ್ದು, ಗೆಲುವಿನ ಮಂತ್ರ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿದೆ. ದೇಶಾದ್ಯಂತ ಗೆಲುವಿನ ವಿಜಯೋತ್ಸವ ಆಚರಿಸಿರುವ ಬಿಜೆಪಿ , ಕರ್ನಾಟಕದಲ್ಲೂ ಕೇಸರಿ ಪತಾಕೆ ಹಾರಿಸಲು ತಂತ್ರ ರೂಪಿಸಿದೆ.‌

ಬಿಜೆಪಿ ಚಾಣಕ್ಯ ಅಮಿತ್ ಷಾ ತಂತ್ರಗಾರಿಕೆಗೆ ತತ್ತರಿಸಿರುವ ಕಾಂಗ್ರೆಸ್, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಇತ್ತ ಪದೇ ಪದೇ ಕರ್ನಾಟಕ ಪ್ರವಾಸ ಕೈಗೊಳ್ಳುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ , ಇದೀಗ ಮತ್ತೆ ಕರ್ನಾಟಕಕ್ಕೆ ಬಂದಿಳಿದಿದ್ದಾರೆ. ಈ ಬಾರಿ ಷಾ ಆಗಮನ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಯಾಕೆಂದರೆ ಷಾ ಹೂಡಿರುವ ತಂತ್ರಗಾರಿಕೆಗೆ ಕಾಂಗ್ರೆಸ್ ಧೂಳಿಪಟವಾಗುವುದು ಖಚಿತ.

ಈ ಬಾರಿ ರಾಜ್ಯದ ಜನರಿಂದಲೇ ಸಿದ್ದರಾಮಯ್ಯ ಸರಕಾರಕ್ಕೆ ಛೀಮಾರಿ ಬಿದ್ದಿದ್ದು, ಕಾಂಗ್ರೆಸ್ ಗೆ ಸೋಲಿನ ಭೀತಿ ಮತ್ತಷ್ಟು ಹೆಚ್ಚಿದೆ. ಈಗಾಗಲೇ ಸಿದ್ದರಾಮಯ್ಯನವರು ಹೋದಲ್ಲೆಲ್ಲಾ ಜನರ ಕೆಂಗಣ್ಣಿಗೆ ಗುರಿಯಾಗಿದ್ದು, ಪ್ರತಿಭಟನೆ ಎದುರಿಸುವ ಸನ್ನಿವೇಶವೂ ಎದುರಾಗಿದೆ.

Image result for amit shah with siddaramaiah

ಜನಾಕ್ರೋಶಕ್ಕೆ ಬೆಚ್ಚಿಬಿದ್ದ ಸಿದ್ದರಾಮಯ್ಯ..!

ರಾಜ್ಯ ಪ್ರವಾಸದಲ್ಲಿರುವ ಅಮಿತ್ ಷಾ , ಸದ್ಯ ಚುನಾವಣಾ ತಂತ್ರವನ್ನೇ ಬದಲಿಸಿ ಗೆಲುವಿನ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ. ಈಗಾಗಲೇ ದೇಶಾದ್ಯಂತ ಗೆಲುವಿನ ವಿಜಯೋತ್ಸವ ಆಚರಿಸಿರುವ ಬಿಜೆಪಿ ಕರ್ನಾಟಕದಲ್ಲೂ ತಮ್ಮ ದಂಡಯಾತ್ರೆ ಮುಂದುವರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ಜನರ ಆಕ್ರೋಶಕ್ಕೆ ಹೆದರಿ ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ. ಇದರಿಂದಲೇ ರಾಜ್ಯದ ಕಾಂಗ್ರೆಸ್ ಸ್ಥಿತಿ ಅರಿವಾಗುತ್ತದೆ ಎಂದು ಲೇವಡಿ ಮಾಡಿದ ಷಾ, ಕಾಂಗ್ರೆಸ್ ಸರಕಾರದ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದರು.

ಮುಂಬೈ – ಕರ್ನಾಟಕದಲ್ಲಿ ಪಕ್ಷದ ಪ್ರಚಾರ ಕಾರ್ಯ ಆರಂಭಿಸಿರುವ ಷಾ, ಕಿತ್ತೂರು ರಾಣಿ ಚೆನ್ನಮ್ಮ ನೆಲದಲ್ಲಿ ಕಾಂಗ್ರೆಸ್ ವಿರುದ್ಧ ರಣಕಹಳೆ ಮೊಳಗಿಸಿದರು. ಕರ್ನಾಟಕದಲ್ಲಿ ಅಮಿತ್ ಷಾ ಪಕ್ಷದ ಪ್ರಚಾರ ಮಾಡುತ್ತಿದ್ದಂತೆ ಪ್ರತೀ ಬಾರಿಯೂ ಕಾರ್ಯಕರ್ತರ‌ ಸಂಖ್ಯೆ ಹೆಚ್ಚುತ್ತಿದೆ.‌ ಇದರಿಂದ ಪಕ್ಷದ ನಾಯಕರ ಹುಮ್ಮಸ್ಸು ಮತ್ತಷ್ಟು ಹೆಚ್ಚಿದೆ. ಜಿಲ್ಲೆಯಲ್ಲಿ ಪಕ್ಷದ ಎಲ್ಲಾ ಮುಖಂಡರು ಒಟ್ಟಾಗಿ ಸೇರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಕ್ಷೇತ್ರದಲ್ಲಿ ಬಿಜೆಪಿಗೆ ಈ ಬಾರಿಯ ಗೆಲುವು ಖಚಿತ ಎಂಬ ಮಾತು ಕೇಳಿ ಬರುತ್ತಿದೆ.!

ಅದೇನೇ ಆದರೂ ಕರ್ನಾಟಕವನ್ನು ತಮ್ಮ ತೆಕ್ಕೆಗೆ ಪಡೆದುಕೊಳ್ಳಲು ತಂತ್ರ ರೂಪಿಸಿರುವ ಷಾ, ಮತಬೇಟೆಗೆ ಸಜ್ಜಾಗಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿದ್ದು, ಹೊಸ ಸರಕಾರದ ಆಡಳಿತಕ್ಕೆ ರಾಜ್ಯದ ಜನತೆ ಕಾಯುತ್ತಿರುವುದಂತೂ ಸತ್ಯ..!

–ಅರ್ಜುನ್

Tags

Related Articles

Close