ಪ್ರಚಲಿತ

ಸೈನ್ಯಕ್ಕೆ ಕೇಂದ್ರದಿಂದ ಬಿಗ್ ಶಾಕ್!! ಮಿಲಿಟರಿ ಬಿಟ್ಟು ತೆರಳುವ ವೈದ್ಯರೇ ಹುಷಾರ್!!

ಕೇಂದ್ರ ಅಥವಾ ರಾಜ್ಯ ಸರ್ಕಾರಿ ಉದ್ಯೋಗವನ್ನು ಬಯಸುವ ಪ್ರತಿಯೊಬ್ಬರು ಕೂಡ ಕಡ್ಡಾಯವಾಗಿ ಐದು ವರ್ಷಗಳ ಮಿಲಿಟರಿ ಸೇವೆಯನ್ನು ಮಾಡಬೇಕು ಎಂಬ ನಿಯಮವನ್ನು ಜಾರಿಗೊಳಿಸಲು, ಸಂಸದೀಯ ಸ್ಥಾಯಿ ಸಮಿತಿ ಈಗಾಗಲೇ ಶಿಫಾರಸ್ಸು ಮಾಡಿರುವ ವಿಚಾರ ತಿಳಿದೇ ಇದೆ. ಇದು ಕೇವಲ ಕೇಂದ್ರ ಸರ್ಕಾರದ ಕೆಲಸಕ್ಕೆ ಮಾತ್ರ ಸೀಮಿತವಾಗಿಲ್ಲದೇ ರಾಜ್ಯ ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂದಿರುವ ಸರ್ಕಾರಿ ಉದ್ಯೋಗಿಗಳು ಮಿಲಿಟರಿಯಲ್ಲಿ ಪಳಬೇಕಾಗಿದೆ ಎಂದು ನರೇಂದ್ರ ಮೋದಿ ಸರ್ಕಾರವು ದಿಟ್ಟ ಹೆಜ್ಜೆಯನ್ನಿಟ್ಟಿದ್ದರೆ ಇದೀಗ ಮಿಲಿಟರಿ ಬಿಟ್ಟು ತೆರಳುವ ವೈದ್ಯರಿಗೂ ಬಿಗ್ ಶಾಕ್ ನೀಡಿದೆ.

ರಾಜ್ಯ ಅಥವಾ ಕೇಂದ್ರ ಸರ್ಕಾರಿ ಉದ್ಯೋಗ ಬಯಸುವವರಿಗೆ 5 ವರ್ಷ ಮಿಲಿಟರಿ ಸೇವೆಯನ್ನು ಕಡ್ಡಾಯಗೊಳಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸ್ಸು ಮಾಡಿದ್ದಲ್ಲದೇ ಡಿಪಾರ್ಟ್ಮೆಂಟ್ ಆಫ್ ಪರ್ಸನಲ್ & ಟ್ರೈನಿಂಗ್ ಈ ವಿಚಾರವನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಅಂತಾ ಈಗಾಗಲೇ ಅಭಿಪ್ರಾಯಪಟ್ಟಿದೆ. ಆದರೆ ಇದೀಗ ಹೆಚ್ಚು ಸಂಪಾದನೆಗಾಗಿ ಅಥವ ಇತರ ಕಾರಣಗಳಿಗಾಗಿ ದೇಶ ಸೇವೆ ಬಿಟ್ಟು ತೊರೆಯವ ಮಿಲಿಟರಿ ವೈದ್ಯರಿಗೆ ಸಂಸತ್ತಿನ ಸಮಿತಿಯು ಬಿಸಿ ಮುಟ್ಟಿಸಿದ್ದಂತೂ ಅಕ್ಷರಶಃ ನಿಜ.

ಹೌದು… ಪುಣೆ ಮೂಲದ ಶಸ್ತ್ರಾಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ (ಎ.ಎಫ್.ಎಂ.ಸಿ) ತರಬೇತಿ ಪಡೆದು, ಆ ಬಳಿಕ ಮಿಲಿಟರಿಯನ್ನು ಬಿಟ್ಟು ತೆರಳುವ ವೈದ್ಯರು ಇನ್ನು ಮುಂದೆ ಭರ್ಜರಿ ದಂಡವನ್ನು ಪಾವತಿಸಬೇಕಾಗಿದೆ!! ಸರ್ಕಾರಿ ಕೆಲಸ ಮಾತ್ರವಾಗಿರುವ ಮಿಲಿಟರಿಯಲ್ಲಿ ವೈದ್ಯರು ಯಾವುದೇ ರೀತಿಯ ಬದಲು ಸೇವೆಯನ್ನು ಮಾಡಲಾಗದೆ, ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ಪಡೆದು ಮಿಲಿಟರಿಯಲ್ಲಿ ಕೆಲಸ ಮಾಡಿದರೆ ಹೆಚ್ಚಿನ ಗಿಂಬಳವನ್ನು ಪಡೆಯಲಾಗದೇ ಅದೆಷ್ಟೋ ವೈದ್ಯರುಗಳು ದೇಶ ಸೇವೆಗೆ ಗುಡ್ ಬೈ ಹೇಳಿ ದೇಶ ಸೇವೆಯನ್ನೇ ತ್ಯಜಿಸುತ್ತಿದ್ದರು!! ಆದರೆ ಇದಕ್ಕೆಲ್ಲ ಇನ್ನು ಮುಂದೆ ಬ್ರೇಕ್ ಬೀಳಲಿದ್ದು, ಸೈನ್ಯ ತೊರೆಯುವವರಿಗೆ ಭರ್ಜರಿ ದಂಡವೇ ವಿಧಿಸಲಾಗಿದೆ.

ಪುಣೆಯಲ್ಲಿರುವ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ಪಡೆದು ನಂತರ ವೈದ್ಯರು ಮಿಲಿಟರಿ ತೊರೆಯಲು ಮುಂದಾದರೆ 2 ಕೋಟಿ ರೂಪಾಯಿ ಬಾಂಡ್ ಮೊತ್ತ ಪಾವತಿಸಬೇಕೆಂದು ಸಂಸತ್ತಿನ ಸಮಿತಿ ಹೇಳಿದೆ. ವೈದ್ಯಕೀಯ ಶಿಕ್ಷಣ ಪಡೆದ ಬಳಿಕ ವಿದ್ಯಾರ್ಥಿಗಳು ಮಿಲಿಟರಿಯಲ್ಲಿ ಸೇವೆ ಸಲ್ಲಿಸಲು ಹೆಚ್ಚು ಆಸಕ್ತಿ ತೋರದೇ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ!!

ಪುಣೆ ಮೂಲದ ಶಸ್ತ್ರಾಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ (ಎ.ಎಫ್.ಎಂ.ಸಿ) ತರಬೇತಿ ಪಡೆದು, ಆ ಬಳಿಕ ಮಿಲಿಟರಿಯನ್ನು ಬಿಟ್ಟು ತೆರಳುವ ವೈದ್ಯರು ಇನ್ನು ಮುಂದೆ 2 ಕೋಟಿ ರೂಪಾಯಿ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಪ್ರಸ್ತುತ ಸ್ನಾತಕೋತ್ತರ ಪದವಿ ಪಡೆದು ಮಿಲಿಟರಿ ಸೇವೆ ತೊರೆಯುವ ವೈದ್ಯರು 28 ಲಕ್ಷ ರೂಪಾಯಿ ನೀಡಬೇಕಾಗಿತ್ತು!! ಅಷ್ಟೇ ಅಲ್ಲದೇ ಕೇವಲ ಪದವಿ ಪಡೆದು ತೊರೆಯುವ ವೈದ್ಯರು 25 ಲಕ್ಷ ರೂಪಾಯಿಯನ್ನು ನೀಡಬೇಕಾಗಿತ್ತು!! ಆದರೆ ಇನ್ನು ಮುಂದೆ ಈ ಮೊತ್ತವನ್ನು ಏರಿಕೆ ಮಾಡಲಾಗಿದ್ದು, ಅರ್ಧದಿಂದ ಕೈ ಕೊಡುವ ಮಿಲಿಟರಿ ವೈದ್ಯರಿಗೆ ಭರ್ಜರಿ ಶಾಕ್ ನೀಡಿದೆ.

ಹಾಗಾಗಿ ಸ್ನಾತಕೋತ್ತರ ಪದವಿ ಪಡೆದು ಮಿಲಿಟರಿ ಸೇವೆ ತೊರೆಯುವ ವೈದ್ಯರು ಇನ್ನು ಮುಂದೆ ತೊರೆಯುವ ಸಂದರ್ಭದಲ್ಲಿ 2 ಕೋಟಿ ರೂಪಾಯಿ ಮೊತ್ತವನ್ನು ಪಾವತಿಸ ಬೇಕಾಗಿದೆ. ಅಷ್ಟೇ ಅಲ್ಲದೇ ಕೇವಲ ಪದವಿ ಪಡೆದು ತೊರೆಯುವ ವೈದ್ಯರುಗಳು 1 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ!! ಅಷ್ಟೇ ಅಲ್ಲದೇ, ಮಿಲಿಟರಿ ಕಾಲೇಜಿನಲ್ಲಿ ತರಬೇತಿಯನ್ನು ಪಡೆಯುವವರು ಕನಿಷ್ಠ 14 ವರ್ಷ ಮಿಲಿಟರಿ ವೈದ್ಯರಾಗಿ ಸೇವೆ ಸಲ್ಲಿಸಬೇಕು. ಹಾಗೆಯೇ ಖಾಯಂ ಆಗಿ 20 ವರ್ಷ ಸೇವೆ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ಈಗಾಗಲೇ ಸರ್ಕಾರಿ ಉದ್ಯೋಗ ಬಯಸುವವರಿಗೆ 5 ವರ್ಷ ಮಿಲಿಟರಿ ಸೇವೆಯನ್ನು ಕಡ್ಡಾಯ ಮಾಡಿದಲ್ಲಿ, ಸೇನೆಯಲ್ಲಿ ಸಿಬ್ಬಂದಿಯ ಕೊರತೆ ಸಹ ನೀಗಲಿದೆ ಅಂತಾ ಸಮಿತಿ ಹೇಳಿತ್ತು. ಹಾಗಾಗಿ ಇದನ್ನು ನಿಯಮವಾಗಿ ಬದಲಾಯಿಸುವಂತೆ ಶಿಫಾರಸು ಮಾಡಿರುವ ವಿಚಾರವೂ ತಿಳಿದೇ ಇದೆ. ಭಾರತೀಯ ಸೇನೆಯಲ್ಲಿ 7000 ಅಧಿಕಾರಿಗಳು ಹಾಗೂ 20,000 ಯೋಧರ ಕೊರತೆಯಿದೆ. ಹಾಗಾಗಿ ವಾಯುಸೇನೆಗೆ 150 ಅಧಿಕಾರಿಗಳು ಹಾಗೂ 15,000 ಸಿಬ್ಬಂದಿಯ ಅಗತ್ಯವಿದ್ದರೆ, ಇನ್ನು ನೌಕಾ ಸೇನೆಯಲ್ಲೂ ಇದೇ ಪರಿಸ್ಥಿತಿ.

ಇನ್ನು, ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯಲ್ಲಿ 30 ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತದೆ. ಎಲ್ಲಾ ರಾಜ್ಯಗಳಿಂದ ಸುಮಾರು 2 ಕೋಟಿಗೂ ಅಧಿಕ ಸರ್ಕಾರಿ ನೌಕರರಿದ್ದಾರೆ. ಹಾಗಾಗಿ ಮಿಲಿಟರಿ ಸೇವೆಯನ್ನು ಕಡ್ಡಾಯ ಮಾಡಿದ್ರೆ, ಭಾರತೀಯ ಸೇನೆಯಲ್ಲಿರೋ ಸಿಬ್ಬಂದಿ ಕೊರತೆಯನ್ನು ನೀಗಿಸಬಹುದು ಅನ್ನೋದು ಸಮಿತಿಯ ಲೆಕ್ಕಾಚಾರವಾಗಿತ್ತು!! ಆದರೆ ಇದೀಗ ಮಿಲಿಟರಿ ವೈದ್ಯರಿಗೆ ಬಿಗ್ ಶಾಕ್ ನೀಡಿರುವ ಸಂಸತ್ತಿನ ಸಮಿತಿಯು ಕೋಟಿ ಗಟ್ಟಲೆ ದಂಡ ಪಾವತಿಸಿದರೆ ಮಾತ್ರ ಮಿಲಿಟರಿ ಸೇವೆಯಿಂದ ಹೊರಹೋಗಲು ಸಾಧ್ಯ ಎಂದು ತಿಳಿಸಿದೆ.

ಹೆಚ್ಚು ಸಂಪಾದನೆ ಮತ್ತು ಇತರ ಕಾರಣಗಳಿಗಾಗಿ ವೈದ್ಯರು ಮಿಲಿಟರಿಯನ್ನು ತೊರೆದು ಹೋಗುತ್ತಿದ್ದು, ಶಸ್ತ್ರಾಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ (ಎ.ಎಫ್.ಎಂ.ಸಿ) ತರಬೇತಿ ಪಡೆದು, ಆ ಬಳಿಕ ಮಿಲಿಟರಿಯನ್ನು ಬಿಟ್ಟು ತೆರಳುತ್ತಾರೆ ಎಂದರೆ ಎಂತಹ ವಿಪರ್ಯಾಸ!! ಆದರೆ ಇಂತಹ ವೈದ್ಯರುಗಳಿಗೆ ಕಠಿಣ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರವು ವೈದ್ಯರು ಇನ್ನು ಮುಂದೆ 2 ಕೋಟಿ ರೂಪಾಯಿ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲದೇ ಬಾಂಡ್ ಮೊತ್ತವನ್ನು 2 ಕೋಟಿ ರೂಪಾಯಿಗೆ ಏರಿಕೆ ಮಾಡಿ ಮಿಲಿಟರಿ ವೈದ್ಯರುಗಳು ಸೇನೆಯನ್ನು ತ್ಯಜಿಸದಂತೆ ಕಠಿಣ ಕ್ರಮಕ್ಕೆ ಮುಂದಾಗಿದ್ದಂತೂ ಅಕ್ಷರಶಃ ನಿಜ.

source:

– ಅಲೋಖಾ

Tags

Related Articles

Close