ಪ್ರಚಲಿತ

ತನಿಖೆಗಳಿಂದ ಬಯಲಾಗುತ್ತಿದೆ ಮಾವೋ-ಗಾಂಧಿ ಪರಿವಾರದ ಜಿಗರಿ ದೋಸ್ತಿ: ಮಾವೋವಾದಿಗಳಿಗೆ ಸಹಾಯ ಹಸ್ತ ನೀಡುತ್ತಿದ್ದರಂತೆ ಗಾಂಧಿ ಪರಿವಾರಕ್ಕೆ “ಅತ್ಯಂತ ನಿಕಟರಾಗಿದ್ದ” ಯುಪಿಎ ಮಂತ್ರಿ!!

ಪ್ರಧಾನಮಂತ್ರಿ ಮೋದಿಯವರ ಹತ್ಯೆಯ ಸಂಚಿನ ರಹಸ್ಯದ ತನಿಖೆ ಆಳವಾಗುತ್ತಾ ಹೋಗುತ್ತಿದ್ದಂತೆ ಒಂದೊಂದೆ ಸತ್ಯ ಬಯಲಾಗುತ್ತಿದೆ. ಗುಜರಾತಿನ ಮುಖ್ಯ ಮಂತ್ರಿ ಆಗಿದ್ದಾಗಿಂದಲೇ ಕಾಂಗ್ರೆಸ್ ನ ನಿಶಾನೆಯಲ್ಲಿದ್ದ ಮೋದಿಯನ್ನು ಕೊಲ್ಲಿಸುವ ಹಲವಾರು ಪ್ರಯತ್ನಗಳಾಗುತ್ತಲೆ ಬಂದಿವೆ. ಇಶ್ರತ್ ಜಹಾಂ ಎನ್ನುವ ಸುಪಾರಿ ಕೊಲೆಗಡುಕಿಯ ಎನ್ ಕೌಂಟರ್ ಅನ್ನು ನಕಲಿ ಎಂದು ಮುಚ್ಚಿ ಹಾಕಲು ನೋಡಿದ ಕಾಂಗ್ರೆಸಿಗರ ಹಣೆಬರಹ ಈಗ ಮಾವೋವಾದಿಗಳು ಬಿಚ್ಚಿಡುತ್ತಿದ್ದಾರೆ. ದೇಶದ್ರೋಹವೆ ಮೂಲ ಮಂತ್ರವಾಗಿರುವ ಗಾಂಧಿ ಪರಿವಾರ ಅಧಿಕಾರದಲ್ಲಿರಲು ಎಂತಹ ನೀಚ ಕೆಲಸ ಮಾಡಲೂ ಹೇಸುವುದಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.

ಇದೀಗ ಮೋದಿಯವರ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಾನೆನ್ನಲಾದ ಮಹೇಶ್ ರಾವುತ್ ನನ್ನು ಮಹಾರಾಷ್ಟ್ರ ಪೋಲಿಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಗಾಂಧಿ ಪರಿವಾರಕ್ಕೆ “ಅತ್ಯಂತ ನಿಕಟರಾಗಿದ್ದ” ಯೂಪಿಎ ಕಾಲದ ಕ್ಯಾಬಿನೆಟ್ ಮಂತ್ರಿಯೊಬ್ಬರ ಜೊತೆ ಮಾವೋವಾದಿಗಳು ಸಂಪರ್ಕ ಹೊಂದಿದ್ದರೆನ್ನುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ವರದಿಯಲ್ಲಿ ಆ ಮಂತ್ರಿಯ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಆದರೆ ಇದುವರೆಗೂ ನಡೆದ ಘಟನಾವಳಿಗಳನ್ನು ನೋಡುತ್ತಾ ಹೋದರೆ ಆ ವ್ಯಕ್ತಿ ಯಾರಾಗಿರಬಹುದು ಎಂದು ಊಹೆ ಮಾಡಬಹುದು. ಇಶ್ರತ್ ಜಹಾಂ ಎನ್ಕೌಂಟರ್ ಅನ್ನು ನಕಲಿ ಎಂದದ್ದು, ಭಗವಾ ಆತಂಕವಾದ, ಹಿಂದೂಗಳ ಮೇಲೆ ಸುಳ್ಳು ಕೇಸು ಹಾಕಿ ಅವರಿಗೆ ಚಿತ್ರಹಿಂಸೆ ನೀಡುತ್ತಿದ್ದ ಕಾಲದಲ್ಲಿ ಯಾರು ಕೇಂದ್ರದ ಗೃಹ ಸಚಿವರಾಗಿದ್ದರು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಅಲ್ಲದೆ ಗಾಂಧಿ ಪರಿವಾರದ ಕೃಪಾ ಕಟಾಕ್ಷದಿಂದ ಈ ವ್ಯಕ್ತಿ ಮಿಲಿಯಗಟ್ಟಲೆ ರುಪಾಯಿ ಗುಡ್ಡೆ ಹಾಕಿದ್ದೂ ತನಿಖೆಗಳಿಂದ ಹೊರ ಬರುತ್ತಿದೆ.

ಈ ತನಿಖೆಯಿಂದ ಹಲವಾರು ಸತ್ಯ ಬೆಳಕಿಗೆ ಬರಲಿದೆ ಎನ್ನುವುದಂತೂ ನಿಶ್ಚಿತ. ಇದುವರೆಗೂ ಗಾಂಧಿ ಪರಿವಾರ ತೆರೆಯ ಮರೆಯಲ್ಲೆ ನಿಂತು ಕೆಲಸ ನಿರ್ವಹಿಸುತ್ತಿದೆ. ಚದುರಂಗದಾಟದಲ್ಲಿ ಸೈನಿಕರು ತಮ್ಮ ರಾಣಿಯನ್ನು ಸುರಕ್ಷಿತವಾಗಿಡುವಂತೆ ಕಾಂಗ್ರೆಸ್ಸಿನ ಸೈನಿಕರು ತಮ್ಮ ಮೇಡಮ್ ಜಿ ಯನ್ನು ಸುರಕ್ಷಿತವಾಗಿಡಲು ಹರಸಾಹಸ ಪಡುತ್ತಿದ್ದಾರೆ. ಆದರೆ ಈಗ ಈ ಸೈನಿಕರೆಲ್ಲರೂ ಒಬ್ಬೊಬ್ಬರಾಗಿ ಜೈಲು ಸೇರುವ ದಿನಗಳು ಹತ್ತಿರವಾಗುತ್ತಿವೆ. ವರದಿಯ ಪ್ರಕಾರ ರಾವುತ್ ನಕ್ಸಲರಿಂದ ಹಣ ಸಂಗ್ರಹಿಸಿ ಅದನ್ನು ಅಡ್ವೋಕೇಟ್ ಸುರೇಂದ್ರ ಗಾಡ್ಲಿಂಗ್ ಎನ್ನುವವರಿಗೆ ತಲುಪಿಸುತ್ತಿದ್ದ. ಭೀಮಾ-ಕೊರೆಗಾಂವ್ ದಂಗೆಯಲ್ಲಿ ಗಾಡ್ಲಿಂಗ್ ಕೂಡಾ ಆರೋಪಿ. ರಾವುತ್, ಯೂಪಿಎ ಕಾಲದಲ್ಲಿ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜಾರಿಗೊಳಿಸಲಾದ ಭಾರತದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಒಂದು ಉಪಕ್ರಮವಾದ ಗ್ರಾಮೀಣಾಭಿವೃದ್ಧಿ ಯೋಜನೆಯ ಸಹವರ್ತಿಯಾಗಿದ್ದ. ಇದೆ ಸಮಯದಲ್ಲಿ ಆತ ಕಾಡಿನೊಳಗೆ ಪ್ರವೇಶಿಸಿ ನಕ್ಸಲರ ಜೊತೆ ಸಂಬಂಧ ಏರ್ಪಡಿಸಿದ್ದ.

ಕಾಡಿನೊಳಗಿನ ನಕ್ಸಲರು ಮತ್ತು ನಾಡಿನೊಳಗಿನ ನಕ್ಸಲರ ಜೊತೆ ಕೊರಿಯರ್ ಸೇವೆ ಮಾಡುತ್ತಿದ್ದ ರಾವುತ್ ನನ್ನು 2012 ರಲ್ಲೆ ಬಂಧಿಸಲು ಪೋಲಿಸರು ಮುಂದಾಗಿದ್ದರು. ಆದರೆ ಯೂಪಿಎಯ “ಉನ್ನತ ವ್ಯಕ್ತಿ”ಯು ಕರೆ ಮಾಡಿ ಆತನನ್ನು ಬಂಧಿಸಬಾರದಾಗಿ ತಾಕೀತು ಮಾಡಿದ್ದರು. ಆ ಉನ್ನತ ವ್ಯಕ್ತಿ ಯಾರೆಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ ಈ ಅವಧಿಯಲ್ಲಿ ಕೇಂದ್ರದಲ್ಲಿ ಪಿ.ಚಿದಂಬರಂ ತದನಂತರ ಸುಶೀಲ್ ಕುಮಾರ್ ಶಿಂದೆ ಗೃಹ ಸಚಿವರಾಗಿದ್ದರು ಎನ್ನುವುದನ್ನು ಗಮನಿಸಬೇಕಾಗುತ್ತದೆ. ಗಾಂಧಿ ಪರಿವಾರಕ್ಕೆ ನಿಕಟರಾಗಿದ್ದ ಕ್ಯಾಬಿನೆಟ್ ಮಂತ್ರಿಯೊಬ್ಬರು ಮಾವೋವಾದಿ-ನಕ್ಸಲರಿಗೆ ಅಭಯ ಹಸ್ತವಿತ್ತಿದ್ದರೆಂದರೆ ಹಣಕ್ಕಾಗಿ ಇವರು ದೇಶ ಒಡೆಯುವ ಕೆಲಸ ಕೂಡಾ ಮಾಡುತ್ತಾರೆನ್ನುವ ವಾದಕ್ಕೆ ಪುಷ್ಟಿ ದೊರೆತಂತಾಯ್ತು. ದೇಶದಲ್ಲಿ ನಕ್ಸಲ್ ಮತ್ತು ಉಗ್ರರನ್ನು ಪೋಷಿಸುತ್ತಿರುವುದೆ ಕಾಂಗ್ರೆಸ್ ಎನ್ನುವ ಕೂಗಿಗೆ ಈ ತನಿಖೆಯಿಂದ ಬಲ ಬರುತ್ತಿದೆ.

ಇನ್ನಾದರೂ ನಾಗರಿಕರು ದೇಶದ ಬಗ್ಗೆ ಚಿಂತಿಸುವರೆ? ಮತ್ತೆ ದೇಶದ್ರೋಹಿಗಳ ಕೈಯಲ್ಲಿ ಅಧಿಕಾರ ಕೊಟ್ಟು ಉಗ್ರರಿಗೆ ಮತ್ತು ನಕ್ಸಲರಿಗೆ ದೇಶವನ್ನು ಒಡೆಯುವ ಅವಕಾಶ ಮಾಡಿ ಕೊಡುವರೆ? ದೇಶ ಒಡೆಯಲು ಮೋದಿ ಬಿಡುವುದಿಲ್ಲ ಎಂದು ಗೊತ್ತಾದ ಕೂಡಲೆ ಮೋದಿಯನ್ನೆ ಮುಗಿಸಲು ಮುಂದಾದ ದೇಶದ್ರೋಹಿಗಳನ್ನು ಸೋಲಿಸಿ. 2019 ಪ್ರಚಂಡ ಬಹುಮತದಿಂದ ಮೋದಿಯವರನ್ನು ಗೆಲ್ಲಿಸಿ. ದೇಶದ್ರೋಹಿಗಳನ್ನು ಜೈಲಿಗೆ ತಳ್ಳುವ ಅವರ ಕಾರ್ಯದಲ್ಲಿ ಕೈಜೋಡಿಸಿ..

-ಶಾರ್ವರಿ

Tags

Related Articles

Close