ಪ್ರಚಲಿತ

ವಿಶ್ವ ವೇದಿಕೆಯಲ್ಲಿ ಪಾಕಿಸ್ತಾನದ ಚಳಿ ಬಿಡಿಸಿದ ಭಾರತ

ಭಾರತದ ಆಜನ್ಮ ಶತ್ರು ಎಂದರೆ ಅದು ಪಾಕಿಸ್ತಾನ. ಭಯೋತ್ಪಾದನೆ, ಗಡಿ ತಂಟೆ ಮೊದಲಾದ ತಕರಾರುಗಳನ್ನು ‌ಮಾಡುವ ಮೂಲ ಕಾಲು ಕರೆದುಕೊಂಡು ಭಾರತದ ವಿರುದ್ಧ ಪಿತೂರಿ ಮಾಡುತ್ತಲೇ ಇರುತ್ತದೆ.

ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಬಾಹ್ಯ ಕಲಹಗಳ ಜೊತೆಗೆ ಪಾಕಿಸ್ತಾನ ಭಾರತದ ಆಂತರಿಕ ವಿಷಯಗಳಲ್ಲಿಯೂ ಮೂಗು ತೂರಿಸಿ, ಸದಾ ಕಾಲ ನಮ್ಮ ದೇಶದ ಜೊತೆಗೆ ವಿಶ್ವದ ಹಲವು ರಾಷ್ಟ್ರಗಳ ಕೆಂಗಣ್ಣಿಗೂ ಗುರಿಯಾಗುತ್ತದೆ. ಬಹಳ ಮುಖ್ಯವಾಗಿ ಭಾರತದ ಆಂತರಿಕ ವಿಷಯವಾದ ಕಾಶ್ಮೀರಕ್ಕೆ ಸಂಬಂಧಿಸಿದ ಹಾಗೆ ಅನವಶ್ಯಕವಾಗಿ ಭಾರತದ ಆಂತರಿಕ ಸಂಗತಿಗೆ ತಲೆ ಹಾಕಿ, ಹಲವಾರು ಬಾರಿ ಮಂಗಳಾರತಿ ಮಾಡಿಸಿಕೊಂಡಿದ್ದರೂ, ಇನ್ನೂ ಭಾರತಕ್ಕೆ ಬುದ್ಧಿ ಬಾರದೇ ಇರುವುದು ನಾಚಿಗೇಡಿನ ಸಂಗತಿಯೇ ಸರಿ.

ಜಿನೇವಾದಲ್ಲಿ ಅಂತರ್ ಸಂಸದೀಯ ಒಕ್ಕೂಟ ಸಭೆಯಲ್ಲಿ ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿ ಪಾಕಿಸ್ತಾನ ಮಾತನಾಡಿದ್ದು, ಇದಕ್ಕೆ ಭಾರತ ನರಿ ಬುದ್ಧಿಯ ಪಾಕ್‌ಗೆ ಮತ್ತೆ ಮಂಗಳಾರತಿ ಮಾಡಿದೆ.

ಭಾರತದ ಪ್ರತಿನಿಧಿ, ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಅವರು ಪಾಕಿಸ್ತಾನದ ಚಳಿ ಬಿಡಿಸಿದ್ದು, ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ನಮ್ಮ ಮಾದರಿಯನ್ನು ಹಲವಾರು ರಾಷ್ಟ್ರಗಳು ಹಿಂಬಾಲಿಸಲು ಬಯಸುತ್ತವೆ. ಆದರೆ ಪ್ರಜಾಪ್ರಭುತ್ವದ ಕರಾಳ ಹಿನ್ನೆಲೆ ಹೊಂದಿರುವ ದೇಶ ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡಲು ಹೊರಟಿರುವುದು ಹಾಸ್ಯಾಸ್ಪದ. ಹಾಗೆಯೇ ಇಂತಹ ಒಂದು ಅಂತರಾಷ್ಟ್ರೀಯ ವೇದಿಕೆಯನ್ನು ಸುಳ್ಳು ಹೇಳಲು ಮತ್ತು ಅಸಂಬದ್ಧ ನಡವಳಿಕೆ ಬಳಕೆ ಮಾಡುತ್ತಿರುವ ಪಾಕ್, ಈ ವೇದಿಕೆಯ ಗೌರವವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರ, ಲಡಾಕ್ ಹಿಂದಯೂ ಭಾರತದ ಭೂ ಪ್ರದೇಶಗಳೇ ಆಗಿದ್ದವು. ಇದು ಮುಂದೆಯೂ ಮುಂದುವರಿಯಲಿದೆ. ಪಾಕಿಸ್ತಾನದ ವಾಕ್ ಚಾತುರ್ಯ, ಯಾವುದೇ ಪ್ರಪಗಾಂಡಾ ಈ ವಾಸ್ತವ ಸಂಗತಿಯನ್ನು ಬದಲಾವಣೆ ಮಾಡದು, ಅಳಿಸಿ ಹಾಕಲಾಗದು. ಪಾಕಿಸ್ತಾನ ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸಲು ತೆರೆದಿರುವ ಉಗ್ರ ಫ್ಯಾಕ್ಟರಿಗಳನ್ನು ಮುಚ್ಚುವುದು ಒಳಿತು ಎಂದು ಅವರು ತಿರುಗೇಟು ನೀಡಿದ್ದಾರೆ.

ಪಾಕಿಸ್ತಾನ ಮತ್ತು ಭಯೋತ್ಪಾದನೆಯ ನಂಟಿನ ಬಗ್ಗೆ ವಿಶ್ವದ ಗಮನ ಸೆಳೆದ ಹರಿವಂಶ್, ಜಾಗತಿಕವಾಗಿ ಉಗ್ರವಾದದ ಮುಖವಾಗಿದ್ದ ಒಸಮಾ ಬಿನ್ ಲಾಡೆನ್ ಸಿಕ್ಕಿಬಿದ್ದಿದ್ದು ಪಾಕ್‌ನಲ್ಲಿಯೇ ಎಂಬುದನ್ನು ಜಗತ್ತು ಮರೆತಿಲ್ಲ ಎಂದು ತಿವಿದಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗುರುತು ಮಾಡಿರುವ ಹೆಚ್ಚಿನ ಉಗ್ರರಿಗೆ ಆಶ್ರಯ ನೀಡಿದ್ದು ಸಹ ಪಾಕಿಸ್ತಾನವೇ. ಇನ್ನು ಮುಂದಿನ ದಿನಗಳಲ್ಲಾದರೂ ತನ್ನ ದೇಶದ ಜನರಿಗೆ ಒಳಿತಾಗಲಿ ಎಂದು ಪಾಕ್ ಬದಲಾಗಲಿ ಎಂದು ನಾವು ಬಯಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

Tags

Related Articles

Close