ಪ್ರಚಲಿತ

ಬಿಗ್ ಬ್ರೇಕಿಂಗ್! ಮೈತ್ರಿ ಗಲಾಟೆಗೆ ಬಜೆಟ್ ಕ್ಯಾನ್ಸಲ್..! ಸರ್ಕಾರ ಪತನಕ್ಕೆ ಕ್ಷಣಗಣನೆ! ಕುಮಾರಸ್ವಾಮಿ ನಿರ್ಧಾರಕ್ಕೆ ನೋ ಎಂದ ಕಾಂಗ್ರೆಸ್ ನಾಯಕರು! ಕೊನೆಗೂ ಮೇಲುಗೈ ಆದ ಸಿದ್ದು ಹಠ?

ಕಾಂಗ್ರೆಸ್-ಜನತಾ ದಳದ ಹಗ್ಗ ಜಗ್ಗಾಟ ಕೊನೆಗಾಣುವ ಲಕ್ಷಣಗಳು ಗೋಚರಿಸುತ್ತಿಲ್ಲ. ಮೈತ್ರಿ ಸರ್ಕಾರ ಆರಂಭವಾದಾಗಿನಿಂದ ಇಂದಿನವರೆಗೂ ಪರಸ್ಪರ ಕಚ್ಚಾಡಿಕೊಳ್ಳುತ್ತಿರುವ ಈ ಉಭಯ ಪಕ್ಷಗಳು ಇದೀಗ ಮತ್ತೆ ಕೆಸರೆರೆಚಾಟಕ್ಕೆ ಬಿದ್ದಿವೆ. ಸಚಿವ ಸ್ಥಾನದ ಕಿಚ್ಚು ಆರಿದ ಬೆನ್ನಲ್ಲೇ ಇದೀಗ ಬಜೆಟ್ ವಿಚಾರ ವಿವಾದ ಭುಗಿಲೆದ್ದಿದ್ದು ಬಜೆಟ್ ಬೇಕಾ ಬೇಡ್ವಾ ಎನ್ನುವ ಚರ್ಚೆಗೆ ಇದೀಗ ಮತ್ತಷ್ಟು ತಿರುವು ಸಿಕ್ಕಿದೆ. 

ಬಜೆಟ್ ಬೇಡವೆಂದ ಜಾರಕಿಹೊಳಿ..!

ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಸರ್ಕಾರದಲ್ಲಿ ಹೊಸ ಬಜೆಟ್ ಬೇಡ ಎಂದು ಹೇಳಿದ್ದರು. ಕಾಂಗ್ರೆಸ್ ಕೈಜೋಡಿಸಿದ್ದರಿಂದ ಹೊಸ ಸರ್ಕಾರ ಬಂದಿದೆ. ಹೀಗಾಗಿ ಹಿಂದಿನ ಕಾಂಗ್ರೆಸ್ ಸರ್ಕಾರದ ಬಜೆಟನ್ನೇ ಮುಂದುವರೆಸುವುದಾಗಿ ನಮ್ಮ ನಿಲುವು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯನವರ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಮಾಜಿ ಮುಖ್ಯಮಂತ್ರಿಯ ಈ ಹೇಳಿಕೆಗೆ ಹಾಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಸಖತ್ ಟಾಂಗ್ ನೀಡಿದ್ದರು. ಯಾರೇ ಬಂದರೂ ನಾವು ಬಜೆಟ್ ಮಂಡನೆ ಮಾಡಿಯೇ ಸಿದ್ದ. ನಾವು ಅಧಿಕಾರವನ್ನು ಭಿಕ್ಷೆ ಬೇಡಿ ಪಡೆದಿಲ್ಲ. ನಾನು ಯಾರ ಹಂಗಿನಲ್ಲೂ ಇಲ್ಲ ಎಂದು ಕುಮಾರ ಸ್ವಾಮಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಗರಂ ಆಗಿದ್ದರು.

ಆದರೆ ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸಿದ್ದರಾಮಯ್ಯನವರು ಹೇಳಿದ್ದು ಕರೆಕ್ಟೂ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಸ್ವತಃ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಸಂಪುಟದ ಸಚಿವ ರಮೇಶ್ ಜಾರಕಿಹೊಳಿ ಬಜೆಟ್ ಬೇಡ ಎಂದು ಹೇಳಿದ್ದಾರೆ. “ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಬೇಡ ಎಂದು ಹೇಳಿದ್ದರೆ ನಮಗೂ ಬೇಡ. ಬಜೆಟ್ ಹೊಸದಾಗಿ ಮಂಡಿಸುವ ಅಗತ್ಯವೂ ಇಲ್ಲ” ಎಂದು ಹೇಳಿದ್ದಾರೆ.

ಇವರು ಮಾತ್ರವಲ್ಲದೆ ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ವೀರಪ್ಪ ಮೂಯ್ಲಿ ಕೂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಧಾರಕ್ಕೆ ಎಸ್ ಎಂದಿದ್ದಾರೆ. “ಹೊಸ ಬಜೆಟ್‍ನ ಅಗತ್ಯ ಇಲ್ಲ. ಪ್ರಮುಖ ನಿರ್ಧಾರಗಳು ಮೈತ್ರಿ ಸರ್ಕಾರ ಹೇಳಿದಂತೆ ನಡೆಯುತ್ತಿಲ್ಲ ಎಂಬ ಸಿದ್ದರಾಮಯ್ಯನವರ ಬೇಸರ ನ್ಯಾಯಯುತವಾಗಿದ್ದು” ಎಂದು ಹೇಳಿದ್ದಾರೆ.

ಇವರ ಹೇಳಿಕೆ ಒಂದು ಕಡೆಯಾಗಿದ್ದರೆ ಮತ್ತೊಂದು ಕಡೆ ಶಾಸಕ ಸುಧಾಕರ್ ಕೂಡ ಸಿದ್ದರಾಮಯ್ಯನವರಿಗೆ ಜೈ ಎಂದಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಹೊಸ ಬಜೆಟ್ ಅನುಮಾನ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಯಾರ ಸಹಕಾರನೂ ಬೇಕಾಗಿಲ್ಲ. ನಾವು ಬಜೆಟ್ ಮಡಿಯೇ ಸಿದ್ದ ಎನ್ನುವ ಕುಮಾರ ಸ್ವಾಮಿ ನಿರ್ಧಾರಕ್ಕೆ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಓಕೆ ಅಂದಿದ್ದರು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜನತಾ ದಳದ ನಾಯಕರು ಹೇಳಿದಂತೆ ಕೇಳುವ ಅನಿವಾರ್ಯ ಸ್ಥಿತಿ ಇದೀಗ ರಾಹುಲ್ ಗಾಂಧಿಗೆ ಬಂದೊದಗಿದೆ.

ಆದರೆ ರಾಜ್ಯ ನಾಯಕರು ಮಾತ್ರ ಕುಮಾರ ಸ್ವಾಮಿಯವರನ್ನು ಅಧಿಕಾದಿಂದ ಕೆಳಗಿಳಿಸಲೇ ಬೇಕು ಎಂದು ಹಠ ಹಿಡಿದ್ದಾರೆ. ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಅಧಿಕಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಗೂ ಇನ್ನಿತರ ಶಾಸಕರಿಗೆ ಇಷ್ಟವಿಲ್ಲ. ಈ ಕಾರಣಕ್ಕಾಗಿಯೇ ದೂರದಿಂದಲೇ ಕುಳಿತು ಎಲ್ಲವನ್ನೂ ವೀಕ್ಷಿಸುತ್ತಿರುವ ಸಿದ್ದರಾಮಯ್ಯ ಸರ್ಕಾರವನ್ನು ಬೀಳಿಸುವ ಸರ್ವ ತಂತ್ರವನ್ನೂ ಹೂಡುತ್ತಿದ್ದಾರೆ.!

-ಏಕಲವ್ಯ

Tags

Related Articles

Close