ಪ್ರಚಲಿತ

ಬ್ರೇಕಿಂಗ್! ರಾಜ್ಯದಲ್ಲಿ ಮತ್ತೆ ಗೋಹತ್ಯೆ ನಿಷೇಧ.! ಉತ್ತರ ಪ್ರದೇಶವಾಗುವತ್ತ ಕರ್ನಾಟಕ..!

ದೇಶಾದ್ಯಂತ ಹಲವಾರು ವರ್ಷಗಳಿಂದ ಕೇಳಿಬರುತ್ತಿರುವ ಗೋಹತ್ಯಾ ನಿಷೇಧದ ಕೂಗಿಗೆ ಇದೀಗ ಮತ್ತೆ ಜೀವ ಬಂದಂತಿದೆ. ಯಾಕೆಂದರೆ ಧರ್ಮ-ಧರ್ಮಗಳ ಮಧ್ಯೆ ಗೋಹತ್ಯಾ ವಿಚಾರವಾಗಿ ಅದೆಷ್ಟೋ ಕೋಮು ಗಲಭೆಗಳು ಸಂಭವಿಸಿದೆ. ಹಿಂದೂಗಳು ಗೋವನ್ನು ದೇವರಂತೆ ಪೂಜಿಸುವುದರಿಂದ ದೇಶದಲ್ಲಿ ಗೋಹತ್ಯಾ ನಿಷೇಧವಾಗಬೇಕು ಎಂದು ಒಂದು ವರ್ಗ ಹೋರಾಟ ನಡೆಸುತ್ತಿದ್ದರೆ, ಇತ್ತ ಮತ್ತೊಂದು ವರ್ಗ ಗೋವು ತಮ್ಮ ಆಹಾರದ ಹಕ್ಕು ಎಂದು ಹೇಳಿಕೊಂಡು ಗೋಹತ್ಯೆ ಮಾಡುತ್ತಿದ್ದಾರೆ. ಆದರೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರ ಕೆಲವೊಂದು ಷರತ್ತುಗಳನ್ನು ವಿಧಿಸಿ ಗೋಹತ್ಯೆಗೆ ಅವಕಾಶ ನೀಡಿತ್ತು..!

ಕೇಂದ್ರ ಸರಕಾರ ಈ ಆದೇಶ ಹೊರಡಿಸಿದರೂ ಕೂಡ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಅಕ್ರಮವಾಗಿ ನಡೆಯುವ ಗೋಹತ್ಯೆಗೂ ಬೆಂಬಲ ಸೂಚಿಸಿತ್ತು. ಇದರಿಂದಾಗಿ ರಾಜ್ಯದಲ್ಲಿ ರಾಜಾರೋಷವಾಗಿ ಖಸಾಯಿಖಾನೆಗಳು ತಲೆಎತ್ತುತ್ತಲೇ ಇದೆ. ಅಕ್ರಮವಾಗಿ ಗೋಸಾಗಾಟ ನಡೆಯುತ್ತಲೇ ಇದೆ. ಕೃಷಿಕರು ಸಾಕಿರುವಂತಹ ಗೋವುಗಳನ್ನು ಹಟ್ಟಿಯಿಂದಲೇ ಕದ್ದೊಯ್ಯುವ ಘಟನೆಯೂ ಹೆಚ್ಚುತ್ತಿದ್ದು, ರಾಜ್ಯ ಸರಕಾರ ಮಾತ್ರ ಈ ಬಗ್ಗೆ ಉಡಾಫೆ ತೋರುತ್ತಲೇ ಬಂದಿದೆ.!

ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಗೋಹತ್ಯಾ ನಿಷೇಧ..!

ಕೇಂದ್ರದಲ್ಲಿ ಮೋದಿ ಸರಕಾರ ಗೋಹತ್ಯಾ ವಿಚಾರವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದನ್ನು ಅನೇಕ ರಾಜ್ಯಗಳು ಬೆಂಬಲಿಸಿ ತಮ್ಮ ರಾಜ್ಯಗಳಲ್ಲಿ ಸಂಪೂರ್ಣವಾಗಿ ಗೋಹತ್ಯೆಯನ್ನು ನಿಷೇಧಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಮಾತ್ರ ಈ ಬಗ್ಗೆ ಯಾವುದೇ ಆದೇಶ ಹೊರಡಿಸಿರಲಿಲ್ಲ. ಆದರೆ ಇದೀಗ ಇಂದು ಬಿಜೆಪಿಯ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿ.ಎಸ್.ಯಡಿಯೂರಪ್ಪ ನವರು ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಸಂಪೂರ್ಣವಾಗಿ ಗೋಹತ್ಯೆಯನ್ನು ನಿಷೇಧಿಸಲಾಗುವುದು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕೋಮು ಗಲಭೆಗಳು ಹೆಚ್ಚುತ್ತಿದ್ದರೂ ರಾಜ್ಯ ಸರಕಾರ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೇಂದ್ರ ಸರಕಾರವೇ ಗೋಹತ್ಯೆ ನಿಷೇಧ ಆದೇಶ ಹೊರಡಿಸಿದರೂ ಕೂಡ ರಾಜ್ಯ ಸರಕಾರ ಮಾತ್ರ ನಿಷೇಧಿಸಲಿಲ್ಲ. ಇದರಿಂದಾಗಿ ರಾಜ್ಯದಲ್ಲಿ ಹಿಂದೂಗಳನ್ನು ಕಾಂಗ್ರೆಸ್ ಯಾವ ರೀತಿ ನೋಡಿಕೊಳ್ಳುತ್ತಿದೆ ಎಂಬುದು ಅರಿವಾಗುತ್ತದೆ ಎಂದು ಹೇಳಿದ ಯಡಿಯೂರಪ್ಪ ನವರು, ಬಿಜೆಪಿ ಪ್ರಣಾಳಿಕೆಯಲ್ಲಿ ಗೋಹತ್ಯೆ ನಿಷೇಧದ ಬಗ್ಗೆ ಪ್ರಸ್ತಾಪಿಸಿದ್ದಾರೆ.!

ಕೇಂದ್ರದ ಆದೇಶ ಪಾಲಿಸಬೇಕಾದರೆ ಬಿಜೆಪಿ ಅಧಿಕಾರಕ್ಕೆ ತನ್ನಿ..!

ದೇಶದ ಅಭಿವೃದ್ದಿಗಾಗಿ ನರೇಂದ್ರ ಮೋದಿಯವರು ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಾ ಇದ್ದಾರೆ, ಆದರೆ ರಾಜ್ಯ ಸರಕಾರ ಇದ್ಯಾವುದನ್ನೂ ಜನರಿಗೆ ತಲುಪಿಸುತ್ತಿಲ್ಲ. ಕೇಂದ್ರದ ಯಾವುದೇ ಆದೇಶಗಳನ್ನು ಸಿದ್ದರಾಮಯ್ಯನವರು ಪಾಲಿಸುತ್ತಿಲ್ಲ, ತಮ್ಮದೇ ಸರ್ವಾಧಿಕಾರದ ಆಡಳಿತ ನಡೆಸುತ್ತಿದ್ದಾರೆ, ಆದ್ದರಿಂದ ಕೇಂದ್ರದಲ್ಲಿ ನಮ್ಮದೇ ಸರಕಾರ ಇದೆ, ಇನ್ನು ರಾಜ್ಯದಲ್ಲೂ ನಮ್ಮದೇ ಸರಕಾರ ರಚನೆಯಾದರೆ ರಾಜ್ಯದ ಅಭಿವೃದ್ಧಿ ಅತೀ ವೇಗವಾಗಿ ನಡೆಯುತ್ತದೆ ಎಂದ ಯಡಿಯೂರಪ್ಪ ನವರು ಪ್ರಣಾಳಿಕೆ ಬಿಡುಗಡೆ ವೇಳೆ ಮಾತನಾಡಿದರು..!

ಗೋಹತ್ಯಾ ವಿಚಾರವಾಗಿ ಹಲವಾರು ಗಲಭೆಗಳು ನಡೆದಿರುವುದರಿಂದ , ಹಿಂದೂಗಳ ಕೊಲೆಗಳು ಹೆಚ್ಚಾಗುತ್ತಿದೆ. ಆದ್ದರಿಂದ ಸರಕಾರವೇ ಈ ಬಗ್ಗೆ ಕಾನೂನು ರಚಿಸಬೇಕಾಗಿತ್ತು. ಆದರೆ ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಯಿಂದಾಗಿ ಹಿಂದೂಗಳನ್ನು ಕಡೆಗಣಿಸುತ್ತಲೇ ಬರಲಾಗುತ್ತಿದೆ. ಆದ್ದರಿಂದಲೇ ರಾಜ್ಯದಲ್ಲಿ ಗೋಹತ್ಯೆ ನಿಷೇಧಿಸಲಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ರಾಜ್ಯದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ ಎಂದು ಸ್ವತಃ ಯಡಿಯೂರಪ್ಪ ನವರೇ ಹೇಳಿರುವುದರಿಂದ ಈ ಬಗ್ಗೆ ಮತ್ತಷ್ಟು ಚರ್ಚೆಗಳು ನಡೆಯಬಹುದು..!

–ಅರ್ಜುನ್

Tags

Related Articles

Close