ಪ್ರಚಲಿತ

ಬಿಗ್ ಬ್ರೇಕಿಂಗ್! ಬಿಜೆಪಿ ಅಬ್ಬರಕ್ಕೆ ಕೊನೆಗೂ ಮಂಡಿಯೂರಿದ ಕುಮಾರ ಸ್ವಾಮಿ ಸರ್ಕಾರ..!ಸಾಲಮನ್ನಾಕ್ಕೆ ನಿರ್ಧಾರ..?

ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಾದ 24 ಗಂಟೆಯ ಒಳಗಾಗಿ ರಾಜ್ಯದ ಎಲ್ಲಾ ರೈತರ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ಕುಮಾರ ಸ್ವಾಮಿ ಹೇಳಿಕೆ ನೀಡಿದ್ದರು. ಮಾತ್ರವಲ್ಲ ಜನತಾ ದಳದ ತನ್ನ ಪ್ರಣಾಳಿಕೆಯಲ್ಲೂ ಈ ಭರವಸೆಯನ್ನು ಉಲ್ಲೇಖಿಸಿದ್ದರು. ಆದರೆ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದ ನಂತರ ತಮ್ಮ ವರಸೆಯೇ ಬದಲಾಗಿ ಹೋಗಿತ್ತು. ತನಗೆ ರಾಜ್ಯದ ಜನತೆ ಬಹುಮತ ನೀಡಿಲ್ಲ. ಹೀಗಾಗಿ ನಾನು ಸಾಲ ಮನ್ನಾ ಮಾಡುಲು ಸಾಧ್ಯವಾಗುತ್ತಿಲ್ಲ ಎಂದು ಉಡಾಫೆ ಉತ್ತರಗಳನ್ನು ನೀಡುತ್ತಿದ್ದರು. 

ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಈ ರೀತಿಯ ಉದ್ಧಟತನದ ಹೇಳಿಕೆಗಳಿಂದ ಆಕ್ರೋಶಗೊಂಡ ಭಾರತೀಯ ಜನತಾ ಪಕ್ಷ ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿತ್ತು. ವಿಧಾನ ಸಭೆಯಲ್ಲಿ ಮಾತನಾಡಿದ್ದ ವಿಧಾನ ಸಭಾ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಕಾಂಗ್ರೆಸ್ ಜನತಾ ದಳದ ಮೈತ್ರಿ ಸರ್ಕಾರದ ವಿರುದ್ಧ ತನ್ನ ವಾಕ್ಪ್ರಹಾರವನ್ನೇ ನಡೆಸಿದ್ದರು. ಅಬ್ಬರದ ಭಾಷಣ ನಡೆಸಿದ್ದ ಬಿಎಸ್‍ವೈ ಕೊನೆಗೆ 24 ಗಂಟೆಯ ಒಳಗಾಗಿ ಸಾಲಮನ್ನಾ ಮಾಡದಿದ್ದಲ್ಲಿ ಕರ್ನಾಟಕ ಬಂದ್‍ಗೆ ಕರೆ ನೀಡುವುದಾಗಿ ಘೋಷಿಸಿದ್ದರು.

ಅಂತೆಯೇ ಸೋಮವಾರ ಕರ್ನಾಟಕ ಬಂದ್ ಯಶಸ್ವಿಯಾಗಿ ನಡೆದಿತ್ತು. ಇದು ನೂತನ ಮುಖ್ಯಮಂತ್ರಿ ಕುಮಾರ ಸ್ವಾಮಿ ನೇತೃತ್ವದ ಕಾಂಗ್ರೆಸ್ ಜನತಾ ದಳದ ಮೈತ್ರಿ ಸರ್ಕಾರಕ್ಕೆ ಭಾರೀ ಹೊಡೆತವನ್ನು ನೀಡಿತ್ತು. ಈ ಬಗ್ಗೆ ವಿವಾದಾಸ್ಪದ ಹೇಳಿಕೆಗಳನ್ನು ನೀಡಿದ್ದ ಕುಮಾರ ಸ್ವಾಮಿ “ನಾನು 6 ಕೋಟಿ ಜನತೆಯ ಮುಲಾಜಿನಲ್ಲಿಲ್ಲ, ನಾನು ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ” ಎಂದು ಹೇಳಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಆದರೆ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಸಹಿತ ಅನೇಕರು ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಈ ನಡೆಯನ್ನು ಕಟು ಶಬ್ಧಗಳಿಂದ ಟೀಕಿಸಿದ್ದರು. ಜನತಾ ದಳದ ಶಾಸಕರೂ ಮುಖ್ಯಮಂತ್ರಿ ಕುಮಾರ ಸ್ವಾಮಿಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದರು.

ಭಾರತೀಯ ಜನತಾ ಪಕ್ಷದ ಪ್ರತಿಭಟನೆ ಬಿಸಿಯೇರುತ್ತಿದ್ದಂತೆಯೇ ಕುಮಾರ ಸ್ವಾಮಿ ಇದೀಗ ಮಂಡಿಯೂರಿದ್ದಾರೆ. ರಾಜ್ಯದ ಸಾಲ ಮನ್ನಾ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಆರ್ಥಿಕ ಅಧಿಕಾರಿಗಳ ಸಭೆ ಕರೆದು ಸಮಾಲೋಚನೆ ನಡೆಸಿದ್ದಾರೆ. ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ಖಜಾನೆಯನ್ನು ಗುಡಿಸಿ ಗುಂಡಾಂತರ ಮಾಡಿದ್ದು ಅದರಲ್ಲಿ ಹಣ ಇಲ್ಲದಂತಾಗಿದೆ. ಅನೇಕ ಕಡೆಗಳಲ್ಲಿ ಇನ್ನೂ ಸಾಲದ ಹೊರೆ ಇದೆ. ಹೀಗಾಗಿ ಧಿಢೀರ್ ನಿರ್ಧಾರ ಕೈಗೊಳ್ಳುವುದು ಕಷ್ಟಕರವಾಗಿದೆ

Related image.

ಆದರೆ ತಿಪ್ಪರಲಾಗ ಹಾಕಿಯಾದರೂ ಸಾಲಮನ್ನಾ ಮಾಡಲೇಬೇಕು. ಈ ಮೂಲಕ ಭಾರತೀಯ ಜನತಾ ಪಕ್ಷದವರು ಬೀಸುತ್ತಿರುವ ದೊಣ್ಣೆಯಿಂದ ತಾತ್ಕಾಲಿಕವಾಗಿ ತಪ್ಪಿಸಿಕೊಳ್ಳಬೇಕೆಂಬ ಮುಖ್ಯಮಂತ್ರಿ ಕುಮಾರ ಸ್ವಾಮಿ ಬಂದಿದ್ದಾರೆ ಎನ್ನಲಾಗಿದೆ.

-ಏಕಲವ್ಯ

Tags

Related Articles

Close