ಪ್ರಚಲಿತ

ಭಾರತದಲ್ಲಿ ನಡೆಯುವ ಕುಂಭ ಮೇಳಕ್ಕೆ ಇಂಡೋನೇಷಿಯರಿಗೆ ಗಿಫ್ಟ್ ನೀಡಿದ ಮೋದಿ!! ಇಂಡೋನೇಷ್ಯಾ ಜನ ಫುಲ್ ಖುಷ್!!

ಮೂರು ರಾಷ್ಟ್ರಗಳ 5 ದಿನಗಳ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊದಲ ದಿನ ಇಂಡೋನೇಷ್ಯಾ ತಲುಪಿದ್ದು ಅಲ್ಲಿನ ರಾಷ್ಟ್ರಪತಿ ಜೋಕೋ ವಿಡೋಡೋರವರು ರಾಷ್ಟ್ರಪತಿ ಭವನಕ್ಕೆ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ನೀಡಿದ್ದಾರೆ. ಇಬ್ಬರೂ ನಾಯಕರ ನಡುವೆ ಮಂತ್ರಿಮಂಡಲ ಹಂತದ ಮಾತುಕತೆಯೂ ನಡೆದಿದ್ದು ಇನ್ನು ಚರ್ಚೆಯ ನಡುವೆ ಪ್ರಧಾನಿ ಮೋದಿ ಭಾರತ ಹಾಗೂ ಇಂಡೋನೇಷ್ಯಾ ತಮ್ಮ ನಡುವಿನ ಸಂಬಂಧವನ್ನು ವ್ಯಾಪಕ ರಾಜಕೀಯ ಒಪ್ಪಂದದವರೆಗೂ ಕೊಂಡೊಯ್ಯಲಿವೆ ಎಂದು ತಿಳಿಸಿದ್ದಾರೆ. 2025ರೊಳಗೆ ಎರಡೂ ದೇಶಗಳ ನಡುವಿನ ವ್ಯವಹಾರಿಕ ಹೊಂದಾಣಿಕೆಯನ್ನು 50 ಅರಬ್ ಡಾಲರ್‍ರೆಗೆ ತಲುಪಿಸಲು ಪ್ರಯತ್ನಿಸುವುದಾಗಿಯೂ ಪ್ರಧಾನಿ ಮೋದಿ ತಿಳಿಸಿದ್ದಾರೆ. ವಿದೇಶಿ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಪ್ರಜೆಗಳಿಗೆ ಮತ್ತೊಂದು ದೊಡ್ಡ ಗಿಫ್ಟ್ ಅನ್ನು ನೀಡುವ ಮೂಲಕ ಇಡೀ ಇಂಡೋನೇಷ್ಯಾ ಜನರನ್ನು ಫುಲ್ ಖುಷ್ ಆಗುವಂತೆ ಮಾಡಿದ್ದಾರೆ!!

ಇಂಡೋನೇಶ್ಯ ಪ್ರಜೆಗಳಿಗೆ 30 ದಿನಗಳ ಉಚಿತ ವೀಸಾ ನೀಡಿದ ಮೋದಿ!!

ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾ  ಪ್ರಜೆಗಳಿಗೆ 30 ದಿನಗಳ ಉಚಿತ ವೀಸಾ ಕೊಡುಗೆಯನ್ನು ನೀಡಿದ್ದಾರೆ. ಈ ಕೊಡುಗೆಯನ್ನು ಬಳಸಿಕೊಂಡು ಭಾರತೀಯ ಮೂಲದ ಇಂಡೋನೇಶ್ಯ ಪ್ರಜೆಗಳು “ನವ ಭಾರತ’ವನ್ನು ಕಾಣಲು ತಮ್ಮ ಮೂಲ ದೇಶಕ್ಕೆ ಭೇಟಿ ನೀಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಇಂಡೋನೇಷ್ಯಾದ ರಾಜಧಾನಿಯಾಗಿರುವ ಜಕಾರ್ತಾದಲ್ಲಿನ ಕನ್‍ವೆನ್‍ಶನ್ ಸೆಂಟರ್‍ನಲ್ಲಿ ಭಾರತೀಯ ಬಾಹುಳ್ಯವನ್ನು ಉದ್ದೇಶಿಸಿ ಮಾತನಾಡುತ್ತಾ “ನಮ್ಮ ದೇಶಗಳ ಹೆಸರಿನಲ್ಲಿ ಸಾಮ್ಯತೆ ಇರುವುದು ಮಾತ್ರವಲ್ಲದೆ ಉಭಯ ದೇಶಗಳ ಮಿತೃತ್ವ ಕೂಡ ವಿಶಿಷ್ಟವೂ ಅನನ್ಯವೂ ಆಗಿ ಧ್ವನಿಸುತ್ತದೆ’ ಎಂದು ಹೇಳಿದರು.

“ನಿಮ್ಮಲ್ಲಿ ಅನೇಕರು ಇದುವರೆಗೂ ಭಾರತಕ್ಕೆ ಭೇಟಿ ಕೊಟ್ಟಿಲ್ಲ. ಮುಂದಿನ ವರ್ಷ ಪ್ರಯಾಗ್‍ನಲ್ಲಿ ನಡೆಯುವ ಕುಂಭ ಮೇಳಕ್ಕೆ ನೀವೆಲ್ಲರೂ ಬರಬೇಕೆಂದು ನಾನು ಅಹ್ವಾನಿಸುತ್ತಿದ್ದೇನೆ. ಇಂಡೋನೇಶ್ಯದ ಪ್ರಜೆಗಳಿಗಾಗಿ ನಾವು 30 ದಿನಗಳ ಉಚಿತ ವೀಸಾ ಕೊಡುಗೆ ನೀಡುತ್ತಿದ್ದೇವೆ. ಇದನ್ನು ಬಳಸಿಕೊಂಡು ನೀವೆಲ್ಲ ಒಮ್ಮೆ ನಿಮ್ಮ ಮೂಲ ದೇಶವಾಗಿರುವ ಭಾರತಕ್ಕೆ ಭೇಟಿ ಕೊಡಿ’ ಎಂದು ಮೋದಿ ನೆರೆದ ಭಾರತೀಯ ಮೂಲದ ಜನರನ್ನು ಉದ್ದೇಶಿಸಿ ಹೇಳಿದರು. ಈ ಭುವಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರು ಸಂಗಮಿಸುವ ಧಾರ್ಮಿಕ ಉತ್ಸವಗಳಲ್ಲಿ ಪ್ರಯಾಗದ ಕುಂಭ ಮೇಳವೂ ಒಂದೆನಿಸಿದೆ.

15 ಒಪ್ಪಂದಗಳಿಗೆ ಸಹಿ ಹಾಕಿದ ಭಾರತ ಇಂಡೋನೇಶ್ಯ!!

ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದೀಜಿಯವರು ಇಂದು ಇಂಡೋನೇಷ್ಯಾದ ಜಕರ್ತಾ ತಲುಪಿದ್ದು ಅಲ್ಲಿನ ಭಾರತೀಯ ಮೂಲದ ಜನರನ್ನು ಭೇಟಿಯಾಗಿದ್ದಾರೆ!! ಜಕಾರ್ತಾದ ಮೆರ್ಡೇಕಾ ಮ್ಯಾಲೇಸ್‍ನಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೋಡೋ ಜೊತೆಗೆ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳ ಕುರಿತು ಮೋದಿ ಮಾತುಕತೆ ನಡೆಸಿದ್ದಾರೆ!! ರಕ್ಷಣೆ, ವಿಜ್ಞಾನ ಮತ್ತು ತಾಂತ್ರಿಕ ಸಹಕಾರ ರೈಲ್ವೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಭಾರತ ಇಂಡೋನೇಷ್ಯಾ ನಡುವೆ 15 ಒಪ್ಪಂದಗಳಿಗೆ ಸಹಿ ಹಾಕಲಾಯಿತು!! ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತವು ಇಂಡೋನೇಷ್ಯಾ ಜೊತೆ ದೃಢವಾಗಿ ನಿಂತಿವೆ!! ಇಂಡೋನೇಷ್ಯಾದ ಇತ್ತೀಚಿನ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ ಇದರಲ್ಲಿ ಅನೇಕ ಮುಗ್ಧ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮೋದಿ ಹೇಳಿದ್ದಾರೆ!! ಇಂಡೋ- ಫೆಸಿಫಿಕ್ ಪ್ರದೇಶದ ಅಭಿವೃದ್ಧಿಗಾಗಿ ನಾವು ಸಮಾನ ದೃಷ್ಠಿಕೋನವನ್ನು ಹೊಂದಿದ್ದೇವೆ. ಭಾರತ ಅಸಿಯಾನ್ ಸಹಭಾಗಿತ್ವವು ಪ್ರಮುಖ ಶಕ್ತಿಯಾಗಿದ್ದು ಇದು ಇಂಡೋ ಫೆಸಿಫಿಕ್ ಪ್ರದೇಶದಲ್ಲಿ ಶಾಂತಿ ನೆಲೆಸುವ ಭರವಸೆ ಮೂಡಿಸಿದೆ ಎಂದು ಜಾಕಾರ್ತಾದಲ್ಲಿ ಪ್ರಧಾನಿ ಹೇಳಿದ್ದಾರೆ!!

ಅದಲ್ಲದೆ ಪ್ರಧಾನಿ ನರೇಂದ್ರ ಮೋದೀಜೀಯವರು ಇಂಡೋನೇಷ್ಯಾದ ರಾಷ್ಟ್ರಪತಿ ವಿಡೋಡೋರವರೊಂದಿಗೆ ಜಕಾರ್ತಾದಲ್ಲಿ ಆಯೋಜಿಸಲಾಗಿದ್ದ ಗಾಳಿಪಟ ಪ್ರದರ್ಶನದಲ್ಲೂ ಭಾಗಿಯಾಗಿದ್ದರು!!

ಇದಾದ ಬಳಿಕ ಪ್ರಧಾನಿ ನರೇಂದ್ರ ಮೊದೀಜೀಯವರು ವಿಡೋಡರೊಂದಿಗೆ ಜಕರ್ತಾದ ಇಸ್ತಿಕಲಾಲ್ ಮಸೀದಿಗೆ ತೆರಳಿ, ಮುಸ್ಲಿಂ ವಿರೋಧಿ ಎಂದು ಜರಿಯುತ್ತಿದ್ದ ಕೆಲವರಿಗೆ ತಕ್ಕ ಪಾಠ ಕಲಿಸಿದ್ದಾರೆ!! ಇದೇ ಸಂದರ್ಭದಲ್ಲಿ ಮಾತನಾಡಿದ ಮೋದೀಜೀ ಇಂಡೋನೇಷ್ಯಾದಲ್ಲಿ ನಡೆದ ಉಗ್ರದಾಳಿಯನ್ನು ಖಂಡಿಸಿದ್ದು ಭಯೋತ್ಪಾದನೆ ವಿರುದ್ಧ ಭಾರತವು ಇಂಡೋನೇಷ್ಯಾ ಬೆಂಬಲಕ್ಕೆ ನಿಲ್ಲುವುದಾಗಿಯೂ ಭರವಸೆ ನೀಡಿದ್ದಾರೆ!!

source: news 18, udayavani

  • ಪವಿತ್ರ
Tags

Related Articles

Close