ಪ್ರಚಲಿತ

ಕರ್ನಾಟಕಕ್ಕೆ ಬಿಗ್ ಗಿಫ್ಟ್ ಕೊಟ್ಟ ಮೋದಿಜೀ!! ವಿರೋಧಿಗಳನ್ನೂ ತತ್ತರಿಸುವಂತೆ ಮಾಡಿದ ಈ ಯೋಜನೆ ಯಾವುದು ಗೊತ್ತೇ?!

ಮೋದೀಜೀ ಒಂದು ಸ್ವಲ್ಪವೂ ಸಮಯವನ್ನು ಹಾಳು ಮಾಡದೆ ಪ್ರತೀ ವಿಚಾರವನ್ನೂ ತಲೆಯಲ್ಲಿಟ್ಟುಕೊಂಡು ದೇಶದ ಪ್ರಗತಿಯತ್ತ ಯಾವಾಗಲೂ ಚಿಂತಿಸುತ್ತಿರುತ್ತಾರೆ!! ಮೋದೀಜೀ ಅಧಿಕಾರದ ಗದ್ದುಗೆಯನ್ನು ಏರಿದಾಗಿನಿಂದ ದೇಶದ ಅಭಿವೃದ್ಧಿಯ ಪಥ ಸಾಗುತ್ತನೇ ಇದೆ!! ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸಿಗೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುವ ಅದೆಷ್ಟೋ ಬುದ್ದಿಜೀವಿಗಳು ನರೇಂದ್ರ ಮೋದಿ ದೇಶಕ್ಕೋಸ್ಕರ, ದೇಶದ ಜನರ ಸುಭಿಕ್ಷೆಗೋಸ್ಕರ ಅದೇನೇನು ಮಾಡಿದರು ಎಂದು ತಿಳಿದರೆ ಒಳಿತು!! ಆದರೆ ಸಣ್ಣ ಸಣ್ಣ ವಿಚಾರಗಳಲ್ಲೂ ಹುಳುಕನ್ನು ತೆಗೆದು ಅದನ್ನೇ ಬೊಬ್ಬಿಡುವ ಕಾಂಗ್ರೆಸ್ಸಿಗರಿಗೆ ನರೇಂದ್ರ ಮೋದಿ ಸರಕಾರದ ಪ್ರತೀಯೊಂದು ಸಾಧನೆಯು ವಿರೋಧಿಗಳ ಮುಖಕ್ಕೆ ಹೊಡೆದಂತೆ ಆಗಿದೆ!! ಪ್ರಧಾನಿ ನರೇಂದ್ರ ಮೋದೀಜೀಯವರು ಅಧಿಕಾರ ಸ್ವೀಕರಿಸಿ 4 ವರ್ಷಗಳು ಈಗಾಗಲೇ ಸಂಪೂರ್ಣವಾಗಿದ್ದು ವಿರೋಧಿಗಳೂ ಒಮ್ಮೆ ಇವರ ಯಶಸ್ಸಿಗೆ ಮೂಗಿಗೆ ಬೆರಳಿಡುವ ಹಾಗೆ ಆಗಿದೆ!! ಮೋದೀಜೀ ತಂತ್ರಗಳಿಂದ ವಿರೋಧಿಗಳು ಕೂಡಾ ತತ್ತರಿಸುವ ಹಾಗೆ ಮಾಡಿದ್ದಾರೆ!!

Image result for modi

ಮೊನ್ನೆ ತಾನೇ ಕರ್ನಾಟಕ ಚುನಾವಣೆಯಲ್ಲಿ ಗೆಲ್ಲಲು ವಿರೋಧಿಗಳು ಹರಸಾಹಸವನ್ನೇ ಮಾಡಬೇಕಾಯಿತು!! ಕೊನೆಗೆ ಹಾವು ಮುಂಗುಸಿಯಂತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂತು.. ಮೈತ್ರಿ ಏನೋ ಮಾಡಿಕೊಂಡ್ರು… ಆದರೆ ಯಾರಿಗೂ ಸುಖ ಇಲ್ಲ!! ಅವರನ್ನು ಕಂಡರೆ ಇವರಿಗಾಗಲ್ಲ ಇವರನ್ನ್ ಕಂಡರೆ ಅವರಿಗಾಗಲ್ಲ!! ಎಂತಹ ವಿಧಿಯಾಟ ನೋಡಿ.. ಹೀಗಾಗಿ ಮುಖ್ಯಂತ್ರಿ ಸ್ಥಾನ ಗಿಟ್ಟಿಸಿಕೊಂಡವರಿಗೆ ಯಾಕಾದರೂ ಈ ಸ್ಥಾನ ಬೇಕಿತ್ತು ಅಂತ ಈಗಾಗಲೇ ಅನಿಸಿರಬಹುದು!! ಇದೆಲ್ಲಾ ಬಿಜೆಪಿ ಮಾಸ್ಟರ್ ಮೈಂಡ್‍ಗಳ ಪ್ಲಾನ್… ಕೆಲವರು ಅಂದುಕೊಂಡಿರಬಹುದು ಏನೇ ಕಸರತ್ತು ಮಾಡಿದರೂ ಬಿಜೆಪಿ ಜಯಗಳಿಸಿಲ್ಲ ಅಂತ… ಆದರೆ ಒಂದು ತಿಳಿದುಕೊಳ್ಳ ಬೇಕು… ಇಲ್ಲಿ ಜಯಗಳಿಸಿದ್ದು ಬಿಜೆಪಿ ಮಾತ್ರ!! ಅಧಿಕಾರ ಏನೋ ಮೈತ್ರಿ ಮಾಡ್ಕೊಂಡು ಅಧಿಕಾರ ಸ್ವೀಕರಿಸಿದ್ದರೂ ಏನೂ ಮಾಡೋಕಾಗದೆ ಚಪ್ಪೆ ಮೊರೆ ಹಾಕೊಂಡು ಕೂತಿದ್ದಾರೆ… ಸ್ವಲ್ಪವೇ ದಿನದಲ್ಲಿ ಕರ್ನಾಟಕ ರೈತರು ಏನೋ ಮಾಡಬೇಕೋ ಅದನ್ನು ಮಾಡುತ್ತಾರೆ!! ಇದೀಗ ಮೋದೀಜೀ ವಿರೋಧಿಗಳು ತತ್ತರಿಸುವಂತೆ ಕರ್ನಾಟಕಕ್ಕೆ ಮತ್ತೊಂದು ಹೊಸ ಉಡುಗೊರೆಯನ್ನು ನೀಡ ಹೊರಟಿದ್ದಾರೆ ಮೋದೀಜಿ!!

 

ಈಗಿನ ಬರಗಾಲ ಪರಿಸ್ಥಿತಿಯನ್ನು ಗಮನಿಸಿದ ಮೋದಿ ಸರ್ಕಾರ ಜನತೆಗಾಗಿ ಈ ದೇಶದ ಅಂತರ್ಜಲ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಅಟಲ್ ಭೂಜಲ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಉದ್ದೇಶ ಏನಂದರೆ ಈ ದೇಶದಲ್ಲಿ ಬರಗಾಲವನ್ನು ಎದುರಿಸಿ, ನೀರಿಗಾಗಿ ಪರದಾಡುತ್ತಿರುವ ರಾಜ್ಯಗಳನ್ನು ಆರಿಸಿ ಆ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೆರವು ನೀಡುತ್ತದೆ. ಹೌದು ಇದೇ ಯೋಜನೆಯ ಹೆಸರು “ಅಟಲ್ ಭೂಜಲ ಯೋಜನೆ”. ಈ ಯೋಜನೆಗಾಗಿ ಕೇಂದ್ರ ಸರ್ಕಾರ ವಿಶ್ವಬ್ಯಾಂಕಿನ ನೆರವು ಕೋರಿದೆ. ಕೇಂದ್ರ ಸರ್ಕಾರದ ಕೋರಿಕೆಯ ಮೇರೆಗೆ ವಿಶ್ವಬ್ಯಾಂಕ್ ಒಪ್ಪಿಗೆಯೂ ನೀಡಿದೆ. ಈ ಯೋಜನೆ 2018 ರಿಂದ 2023 ರ ಒಳಗೆ ಅನುಷ್ಠಾನಗೊಳ್ಳಲಿದೆ. ಇದರಿಂದ ಬರಗಾಲ ಎದುರಿಸುತ್ತಿರುವ ರಾಜ್ಯಗಳಿಗೆ ನೆರವು ಸಿಗಲಿದೆ.

 

ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳು ಹುಬ್ಬೇರಿಸುವಂತೆ ಮಹತ್ವಾಕಾಂಕ್ಷಿ ‘ಅಟಲ್ ಭೂಜಲ’ ಯೋಜನೆಯಡಿ ಕರ್ನಾಟಕಕ್ಕೆ ಸಿಂಹಪಾಲು ಎಂಬಂತೆ 1,202 ಕೋಟಿ ರೂ. ಅನುದಾನ ಲಭ್ಯವಾಗಿದೆ. ಅಂತರ್ಜಲ ಪುನಶ್ಚೇತನ ಉದ್ದೇಶದ ಈ ಯೋಜನೆಗೆ ಕರ್ನಾಟಕ ಸೇರಿದಂತೆ ಗುಜರಾತ್, ರಾಜಸ್ತಾನ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಹರಿಯಾಣಗಳನ್ನು ಆಯ್ಕೆ ಮಾಡಲಾಗಿದೆ. ಈ ಪೈಕಿ ಕರ್ನಾಟಕ ಹೊರತು ಪಡಿಸಿ ಇತರ 6 ರಾಜ್ಯಗಳಲ್ಲಿ ಬಿಜೆಪಿ ಸರಕಾರವಿದೆ.

ಈ ಯೋಜನೆಗೆ ಒಟ್ಟು 6 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ ರಾಜ್ಯಕ್ಕೆ ಲಭ್ಯವಾಗುತ್ತಿರುವ ಮೊತ್ತವೇ ಅತ್ಯಧಿಕವೆನ್ನಿಸಿದೆ. ಹಾಗಾಗಿ ಈ ಅನುದಾನ ಪಡೆಯುವ ವಿಚಾರದಲ್ಲಿ ಭೌಗೋಳಿಕವಾಗಿ ದೊಡ್ಡದಾಗಿರುವ ಉತ್ತರ ಪ್ರದೇಶ, ಮಹಾರಾಷ್ಟ್ರಗಳನ್ನು ರಾಜ್ಯ ಹಿಂದಿಕ್ಕಿದಂತಾಗಿದೆ.

Related image

ಅಟಲ್ ಭೂಜಲಕ್ಕೆ ವಿಶ್ವಬ್ಯಾಂಕ್ ನೆರವಿನ ಖಾತರಿ ದೊರೆತಿದ್ದು ಈ ಸಂಬಂಧ ಕೇಂದ್ರ ಸರಕಾರವು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ. ಮುಂದಿನ 5 ವರ್ಷಗಳಲ್ಲಿ (2018-19 ರಿಂದ 2022-23) ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಇದಕ್ಕೆ ಕೇಂದ್ರ ವಿತ್ತ ಸಚಿವಾಲಯದ ಆರ್ಥಿಕ ವೆಚ್ಚ ಸಮಿತಿ ಅನುಮೋದನೆ ನೀಡಿದ್ದು ಶೀಘ್ರದಲ್ಲೆ ಸಚಿವ ಸಂಪುಟದಲ್ಲೂ ಒಪ್ಪಿಗೆ ನಿರೀಕ್ಷಿಸಲಾಗಿದೆ.

ಸತತ ಬರಗಾಲಕ್ಕೆ ತುತ್ತಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸಿದ್ದ ಈ 7 ರಾಜ್ಯಗಳನ್ನು ಅಂತರ್ಜಲ ಪುನಶ್ಚೇತನ ಯೋಜನೆಗೆ ಕೇಂದ್ರ ಪರಿಗಣಿಸಿದೆ. ಕೇಂದ್ರ ಜಲ ಆಯೋಗದ ತಜ್ಞರು ನೀಡಿದ ವರದಿಯಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಸೇರಿದಂತೆ ದಕ್ಷಿಣ ಕರ್ನಾಟಕದ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗದಲ್ಲಿ ಅಂತರ್ಜಲವನ್ನು ಮಿತಿ ಮೀರಿ ಬಳಕೆ ಮಾಡಲಾಗಿದೆ. ಈ ವರದಿ ಶಿಫಾರಸು ಆಧರಿಸಿ ಯೋಜನೆಯ ವ್ಯಾಪ್ತಿಯ ಜಿಲ್ಲೆಗಳನ್ನು ಗುರುತಿಸಲಾಗಿದೆ. ಅದರಂತೆ 18 ಜಿಲ್ಲೆಗಳ 41 ತಾಲೂಕುಗಳಲ್ಲಿನ ಅಂತರ್ಜಲ ರೀಚಾರ್ಜ್ ಮಾಡಲು ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಒಟ್ಟಾರೆ ಇದರಡಿ 1,200 ಗ್ರಾಮ ಪಂಚಾಯಿತಿಗಳು ಬರಲಿವೆ.

Related image

ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವುದಷ್ಟೇ ರಾಜ್ಯದ ಹೊಣೆಯಾಗಿದೆ. ಯಾಕೆಂದರೆ ಅಟಲ್ ಭೂಜಲದ ವೆಚ್ಚವನ್ನು ವಿಶ್ವಬ್ಯಾಂಕ್ ಹಾಗೂ ಕೇಂದ್ರ ಸರಕಾರ ಶೇಕಡ 50 ಸಹಭಾಗಿತ್ವದಲ್ಲಿ ಭರಿಸಲಿವೆ. ಹಾಗಾಗಿ ರಾಜ್ಯ ಸರಕಾರಕ್ಕೆ ಹಣ ಹೊಂದಿಸುವ ಒತ್ತಡ ಇರುವುದಿಲ್ಲ. ರಾಜ್ಯದ ಪ್ರಸ್ತಾವನೆಗೆ ಕೇಂದ್ರ ಈಗಾಗಲೇ ಸಮ್ಮತಿಸಿದೆ. ಈ ಹಿಂದೆ ವಿಶ್ವಬ್ಯಾಂಕ್ ಯೋಜನೆ ಅನುಷ್ಠಾನದಲ್ಲಿ ತೋರಿದ ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಔಪಚಾರಿಕ ಅನುಮೋದನೆಗೆ ರಾಜ್ಯದ ಸಚಿವ ಸಂಪುಟಕ್ಕೂ ಈ ಪ್ರಸ್ತಾವವನ್ನು ಕಳುಹಿಸಿ ಕೊಡಲಾಗುತ್ತಿದೆ ಎಂದು ಜಲಸಂಪನ್ಮೂಲ ಇಲಾಖೆ ಉನ್ನತಾಧಿಕಾರಿಗಳು ಖಚಿತ ಪಡಿಸಿದ್ದಾರೆ.!!

ಹೀಗಾಗಿ ಮೋದೀಜೀ ಪ್ರತೀಯೊಂದು ರಾಜ್ಯದ ಉನ್ನತಿಯನ್ನು ಬಯಸುವವರು… ಪ್ರತೀಯೊಂದು ರಾಜ್ಯಕ್ಕೂ ಕಣ್ಣುಹಾಯಿಸಿ ಆಯಾ ರಾಜ್ಯಕ್ಕೇ ಏನು ಬೇಕೋ ಅದನ್ನು ಭರಿಸುವ ಹೊಣೆಯನ್ನು ಹೊತ್ತಿದ್ದಾರೆ!!

source: vijayakarnataka

  • ಪವಿತ್ರ
Tags

Related Articles

Close