ಪ್ರಚಲಿತ

ನಾಡಪ್ರಭು ಕೆಂಪೇಗೌಡರಿಗೆ ರಾಜ್ಯ ಸರಕಾರದಿಂದ ಘೋರ ಅವಮಾನ!!! ಯಾವ ಸ್ಥಳದಲ್ಲಿ ಅವರ ಪ್ರತಿಮೆ ಅನಾವರಣ ಮಾಡಿದೆ ಗೊತ್ತೇ? ಒಕ್ಕಲಿಗರಿಂದ ಪ್ರತಿಭಟನೆಗೆ ನಿರ್ಧಾರ!!!

ಬೆಂಗಳೂರನ್ನು ನಿರ್ಮಾಣ ಮಾಡಿದ, ನಾಡಪ್ರಭು ಎಂದೇ ಪ್ರಸಿದ್ಧರಾದ ಕೆಂಪೇಗೌಡರಿಗೆ ರಾಜ್ಯ ಸರಕಾರದಿಂದ ಘೋರ ಅವಮಾನವೊಂದು ನಡೆದಿದೆ. ಇದು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ನಾಡಕಟ್ಟಿದ ಕೆಂಪೇಗೌಡರಿಗೆ ಅವಮಾನ ಮಾಡಿರುವುದಕ್ಕೆ ಒಕ್ಕಲಿಗರ ಸಂಘವು ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿದೆ. ಚುನಾವಣೆಯಲ್ಲಿ ಒಕ್ಕಲಿಗರ ಮತವನ್ನು ಸೆಳೆಯಲು ಕಾಂಗ್ರೆಸ್ ಮಾಡಿದ ಈ ಕೆಲಸದಿಂದ ಇದೀಗ ಒಕ್ಕಲಿಗರೇ ಕಾಂಗ್ರೆಸ್‍ಗೆ ಕೈ ಕೊಡುವ ಕಾಲ ಬಂದಂತಾಗಿದೆ.

ಬೆಂಗಳೂರನ್ನು ನಿರ್ಮಾಣ ಮಾಡಿರುವವರು ಕೆಂಪೇಗೌಡರು ಎಂದು ಎಲ್ಲರಿಗೂ ತಿಳಿದಿರುವಂಥದ್ದು. ಅವರಿಗೆ ರಾಜ್ಯವಷ್ಟೇ ಅಲ್ಲ ಇಡೀ ದೇಶವೇ ಗೌರವದಿಂದ ನೋಡುತ್ತಿದೆ. ಕೆಂಪೇಗೌಡರಿಗೆ ಅವಮಾನ ಆದರೆ ಅದು ತನಗಾದ ಅವಮಾನ ಎಂದೇ ರಾಜ್ಯದ ಪ್ರತೀ ಜನತೆ ಭಾವಿಸುತ್ತಾರೆ. ವಿಶ್ವದ ಭೂಪಟದಲ್ಲಿ ಬೆಂಗಳೂರು ರಾರಾಜಿಸಲು ಕಾರಣರಾದವರು ಕೆಂಪೇಗೌಡರು. ತನ್ನ ಕನಸಿಗೆ ಪೂರಕವಾಗುವಂತೆ ಇಡೀ ಬೆಂಗಳೂರನ್ನು ನಿರ್ಮಾಣ ಮಾಡಿದರು. ಅಂದು ಅವರು ಸ್ಥಾಪಿಸಿದ ಕನಸಿನ ಬೆಂಗಳೂರು ಇಂದು ವಿರಾಟ್ ಸ್ವರೂಪ ಪಡೆದು, ಅವರು ಕಂಡ ಕನಸು ನನಸಾಗಿ ವಿಶ್ವಮಾನ್ಯತೆ ಪಡೆದುಕೊಂಡಿದೆ. ಇದರಿಂದ ಕೆಂಪೇಗೌಡರ ಹೆಸರು ಕೂಡಾ ಜಗದ್ವಿಖ್ಯಾತವಾಗಿದೆ.

ಆದರೆ ಇದೇ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಲು ಹೋದ ರಾಜ್ಯ ಸರಕಾರದಿಂದ ಘೋರ ಅವಮಾನವೊಂದು ನಡೆದಂತಾಗಿದೆ.

ಹೌದು ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಹೆಬ್ಬಾಳದ ಬಿಡಿಎಗೆ ಸೇರಿದ ಕತ್ತಲಿನ ಕಾಡಿನಲ್ಲಿ ಇತ್ತೀಚೆಗೆ ನೀತಿಸಂಹಿತೆಯ ಕಾರಣ ತರಾತುರಿಯಿಂದ ನಿರ್ಮಾಣ ಮಾಡಿತ್ತು. ಆದರೆ ಪ್ರತಿಮೆ ಅನಾವರಣ ಮಾಡಿದ ಸ್ಥಳದಲ್ಲಿ ಯಾವ ಪರಿಸ್ಥಿತಿ ಇದೆ ಎಂದರೆ ಕೆಂಪೇಗೌಡರ ಪ್ರತಿಮೆಗೆ ಈ ಸ್ಥಳ ಸೂಕ್ತವೇ ಎಂಬ ಪ್ರಶ್ನೆ ಕೇಳಿಬಂದಿದೆ. ಯಾಕೆಂದರೆ ಪ್ರತಿಮೆ ನಿರ್ಮಿಸಿದ ಪ್ರದೇಶವೊಂದು ಕಾಡು ಪ್ರದೇಶವಾಗಿದ್ದು, ಅಲ್ಲಿಗೆ ಯಾರೂ ಕೂಡಾ ಭೇಟಿ ನೀಡುತ್ತಿಲ್ಲ. ಪಾರ್ಕ್ ಇಲ್ಲದ, ಸ್ವಚ್ಛಂದವಾಗಿ ವಿಹರಿಸಲು ಸಾಧ್ಯವಾಗದ ಸ್ಥಳದಲ್ಲಿ ಕೆಂಪೇಗೌಡರ ಪ್ರತಿಮೆ ಇದೆ.

ಆದರೆ ಇದಕ್ಕಿಂತಲೂ ಗಂಭೀರ ಸ್ಥಿತಿ ಏನೆಂದರೆ ಪ್ರತಿಮೆ ನಿರ್ಮಿಸಿದ ಪ್ರದೇಶದಲ್ಲೇ ಬಿಸಾಡಿರುವ ಕಾಂಡೋಮ್‍ಗಳ ರಾಶಿ ಕಂಡುಬಂದಿದ್ದು, ಅದರ ಸಮೀಪವೇ ಕಾಂಡೋಮ್‍ಗಳ ತೊಟ್ಟಿಯೂ ಕಂಡುಬಂದಿದೆ. ಕಾಂಡೋಮ್ ಇರುವ ತೊಟ್ಟಿ ಸಮೀಪವೇ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಿರುವುದಕ್ಕೆ ರಾಜ್ಯಾದ್ಯಂತ ಭಾರೀ ಆಕ್ರೋಶವಾಗಿದ್ದು, ರಾಜ್ಯ ಸರಕಾರ ಕೆಂಪೇಗೌಡರಿಗೆ ಘೋರ ಅವಮಾನ ಮಾಡಿದೆ ಎಂಬ ಆರೋಪ ವ್ಯಕ್ತವಾಗಿದೆ. ಕೆಂಪೇಗೌಡರ ಪ್ರತಿಮೆ ನಿರ್ಮಿಸುವಾಗ ಈ ಸ್ಥಳವನ್ನು ಸೂಕ್ತರೀತಿಯಲ್ಲಿ ಸ್ವಚ್ಛಗೊಳಿಸಬೇಕಿತ್ತು. ಅಲ್ಲದೆ ನಾಡಪ್ರಭು ಕೆಂಪೇಗೌಡ ಪೂಜ್ಯನೀಯ ವ್ಯಕ್ತಿಯಾಗಿರುವುದರಿಂದ ಅವರ ಪ್ರತಿಮೆ ಇರುವ ಸ್ಥಳ ಪವಿತ್ರ ಕ್ಷೇತ್ರವಾಗಿರಿಸಬೇಕಿತ್ತು. ಅಲ್ಲದೆ ಅವರ ಪ್ರತಿಮೆ ಸ್ಥಾಪಿಸಲು ಬೇರೆ ಜಾಗವೇ ಸಿಕ್ಕಿಲ್ಲವೇ? ಆದರೆ ರಾಜ್ಯ ಸರಕಾರದ ನಿರ್ಲಕ್ಷ್ಯದ ಧೋರಣೆಯಿಂದ ಅವರ ಪ್ರತಿಮೆ ಇರಬಾರದ ಸ್ಥಳದಲ್ಲಿದ್ದು, ಇದನ್ನು ಕಂಡು ರಾಜ್ಯದ ಜನರು ಭಾವುಕರಾಗಿದ್ದಾರೆ.

 

ರಾಜ್ಯ ಸರಕಾರಕ್ಕೆ ಕಾಂಡೋಮ್‍ಗಳು ಬಿದ್ದ ಸ್ಥಳದಲ್ಲಿ ಪ್ರತಿಮೆಯನ್ನು ಅನಾವರಣ ಮಾಡುವ ದರ್ದು ಏನಿತ್ತು ಎಂಬ ಪ್ರಶ್ನೆ ಕೇಳಿಬಂದಿದೆ. ಅಲ್ಲದೆ ಈ ಸ್ಥಳವು ಅನೈತಿಕ ಚಟುವಟಿಕೆಯ ತಾಣವಾಗಿದ್ದು, ಕಾಮಿಗಳ ಅಡ್ಡೆಯಾಗಿದೆ. ಒಕ್ಕಲಿಗರ ಮತವನ್ನು ಸೆಳೆಯುವ ಸಲುವಾಗಿ ರಾಜ್ಯದ ಕೃಷಿ ಸಚಿವರಾಗಿರುವ ಕೃಷ್ಣೇಭೈರೇಗೌಡರು ರಾಜ್ಯದಲ್ಲಿ ನೀತಿಸಂಹಿತೆ ಜಾರಿಯಾಗಿರುವುದರಿಂದ ಈ ಪ್ರತಿಮೆಯನ್ನು ತರಾತುರಿಯಲ್ಲಿ ಅನಾವರಣ ಮಾಡಿದ್ದರು. ಆದರೆ ಇಲ್ಲಿನ ಕಾಮಗಾರಿ ಇನ್ನೂ ಪೂರ್ತಿಯಾಗದೇ ಇದ್ದರೂ ಒಕ್ಕಲಿಗರ ಮತವನ್ನು ಸೆಳೆಯುವ ಸಲುವಾಗಿ ನೀತಿ ಸಂಹಿತೆ ಜಾರಿಯಾಗುವ ಮುನ್ನಾದಿನ ತರಾತುರಿಯಿಂದ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ. ಇದು ಚುನಾವಣೆಯ ಗಿಮಿಕ್ ಎಂಬ ಆರೋಪ ಕೇಳಿಬಂದಿದೆ.

ಒಕ್ಕಲಿಗರಿಂದ ಪ್ರತಿಭಟನೆಗೆ ನಿರ್ಧಾರ!

ನಾಡಪ್ರಭು ಕೆಂಪೇಗೌಡರಿಗೆ ಅವಮಾನ ಮಾಡಲಾಗಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆ ರಾಜ್ಯದ ಪ್ರಭಾವಿ ಸಮುದಾಯವಾಗಿರುವ ಒಕ್ಕಲಿಗರನ್ನು ಕೆರಳಿಸಿದೆ. ರಾಜ್ಯದಿಂದ ಘನಘೋರ ಅವಮಾನ ನಡೆದಿರುವುದಕ್ಕೆ ಒಕ್ಕಲಿಗರು ಖಂಡನೆಯನ್ನು ವ್ಯಕ್ತಪಡಿಸಿದ್ದು, ಈ ಬಗ್ಗೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕಲಿಗರು ಎಚ್ಚರಿಕೆ ನೀಡಿದ್ದಾರೆ.

source: https://m.facebook.com/story.php?story_fbid=588037154913689&id=254816551569086
ಚೇಕಿತಾನ

Tags

Related Articles

Close