ಪ್ರಚಲಿತ

ಕಾಂಗ್ರೆಸ್‍ಗೆ ಬಿಗ್ ಶಾಕ್! ಮೈತ್ರಿ ಮುರಿದುಕೊಳ್ಳುತ್ತೇವೆಂದ ಜೆಡಿಎಸ್ ನಾಯಕ..! ಪತನವಾಗುತ್ತಾ ಮೈತ್ರಿ ಸರ್ಕಾರ..?

ತಳಲಾಟದಿಂದಲೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೆ ಮೇಲಿಂದ ಮೇಲೆ ಶಾಕ್ ಎದುರಿಸುತ್ತಿದ್ದಂತೆಯೇ ತಲೆಬೇನೆ ಆರಂಭವಾಗಿತ್ತು. ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದ್ದ ಕಾಂಗ್ರೆಸ್ ಹಾಗೂ ಜನತಾ ದಳ ಇದೀಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು ಉಭಯ ಪಕ್ಷಗಳ ನಾಯಕರಿಗೆ ಟೆನ್ಷನ್ ಮೇಲೆ ಟೆನ್ಷನ್ ಶುರುವಾಗಿದೆ. 

ಈ ಮಧ್ಯೆ ಕಾಂಗ್ರೆಸ್ ಪಕ್ಷಕ್ಕೆ ಜನತಾ ದಳ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ. ಹಣಕಾಸು ಇಲಾಖೆಯ ಖಾತೆ ತಮಗೆ ಬಿಟ್ಟುಕೊಡಬೇಕೆಂದು ಕಾಂಗ್ರೆಸ್ ಪಕ್ಷ ಪಟ್ಟು ಹಿಡಿದಿತ್ತು. ಆದರೆ ಇದು ಜನತಾ ದಳಕ್ಕೆ ಇಷ್ಟವಿರಲಿಲ್ಲ. ಇದನ್ನು ಜನತಾ ದಳ ಬಹಿರಂಗವಾಗಿಯೂ ಹೇಳಿತ್ತು. ಮಾತ್ರವಲ್ಲದೆ ಕಾಂಗ್ರೆಸ್‍ನ ರಾಷ್ಟ್ರೀಯ ನಾಯಕ ಗುಲಾಂ ನಬಿ ಅಜಾದ್ ಅವರ ಬಳಿಯೂ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಹಣಕಾಸು ಇಲಾಖೆ ಯಾಕೆ ಬಿಟ್ಟುಕೊಡಲ್ಲ ಎಂಬುವುದರ ಬಗ್ಗೆ ವಿವರಣೆ ನೀಡಿದ್ದರು.

ಆದರೆ ಕುಮಾರ ಸ್ವಾಮಿಯವರ ಈ ನಿರ್ಧಾರಕ್ಕೆ ಕಾಂಗ್ರೆಸ್ ಒಲ್ಲೆ ಎಂದಿತ್ತು. ಕಾಂಗ್ರೆಸ್‍ನ ಈ ಛಲಕ್ಕೆ ಇದೀಗ ಜನತಾ ದಳ ಅತಿದೊಡ್ಡ ಶಾಕನ್ನೇ ನೀಡಿದೆ. ಹಣಕಾಸು ಇಲಾಖೆಯನ್ನು ತಮಗೆ ಬಿಟ್ಟುಕೊಡದಿದ್ದಲ್ಲಿ ಮೈತ್ರಿಯನ್ನೇ ಮುರಿದುಕೊಳ್ಳುತ್ತೇವೆ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಜನತಾ ದಳದ ಶಾಸಕ ರವೀಂದ್ರ ಶ್ರೀಕಂಠಯ್ಯ, “ಮುಖ್ಯಮಂತ್ರಿ ಆದರವರೇ ಹಣಕಾಸು ಸಚಿವರಾಗೋದು ವಾಡಿಕೆ. ಹೀಗಾಗಿ ಈ ಖಾತೆ ನಮ್ಮ ಬಳಿಯೇ ಇರಬೇಕು. ಆದರೆ ಕಾಂಗ್ರೆಸ್ ನಾಯಕರು ಈ ಬಗ್ಗೆ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದು ಒಳ್ಳೆಯದಲ್ಲ. ಈ ಮೊದಲೇ ಕಾಂಗ್ರೆಸ್ ನಾಯಕರು ಭಿನ್ನ ರಾಗವನ್ನು ಹಾಡುತ್ತಾ ಬಂದಿದ್ದಾರೆ. ಕಾಂಗ್ರೆಸ್ ನಾಯಕರ ಧೋರಣೆ ಈ ರೀತಿಯೇ ಮುಂದುವರೆದರೆ ನಾವು ಮೈತ್ರಿಯನ್ನು ಕಡಿದುಕೊಳ್ಳಬೇಕಾಗುತ್ತದೆ. ನಮ್ಮ ಮುಂದೆ ಬೇರಾವ ಅವಕಾಶಗಳೂ ಇಲ್ಲ” ಎಂದು ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷವನ್ನು ಮಣಿಸಲೆಂದೇ ಜನತಾ ದಳದೊಂದಿಗೆ ಮೈತ್ರಿ ಮಾಡಿಕೊಂಡು ಕುಮಾರ ಸ್ವಾಮಿಯವರನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿತ್ತು ಕರ್ನಾಟಕ ಕಾಂಗ್ರೆಸ್ ಪಕ್ಷ. ಆದರೆ ಇದೀಗ ಜನತಾ ದಳದ ನಾಯಕರೊಂದಿಗೆ ಸಂಪುಟದ ಬಗ್ಗೆ ಗುದ್ದಾಟ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ದ ಮಿತ್ರ ಪಕ್ಷ ಜನತಾ ದಳ ತಿರುಗಿ ಬಿದ್ದಿದ್ದು ಸರ್ಕಾರದ ಪತನವಾಗುತ್ತಾ ಎಂಬ ಅನುಮಾನವೂ ಮೂಡುತ್ತಿದೆ.

-ಏಕಲವ್ಯ

Tags

Related Articles

Close